Tag: teaser

  • ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

    ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

    ಬೆಂಗಳೂರು: ನೀವು ನೀಡಿದ ಅಗಾಧ  ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ.

    ಯಶ್ ಅಭಿಮಾನಿಗಳಿಗೆ ಈ ವಿಶೇಷ ಧನ್ಯವಾದ ಹೇಳಲು ಕಾರಣವಿದೆ. 6 ತಿಂಗಳ ಹಿಂದೆ ಜನವರಿ 7 ರಂದು ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿತ್ತು. ಈಗ ಈ ಟೀಸರ್ ಒಟ್ಟು 20 ಕೋಟಿ ವೀಕ್ಷಣೆ ಕಂಡಿದೆ. ಹೀಗಾಗಿ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    20 ಕೋಟಿ ವೀಕ್ಷಣೆ ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ 22 ಸೆಕೆಂಡಿನ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ 22 ಸೆಕೆಂಡ್ ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.  ಇದನ್ನೂ ಓದಿ: ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2

    https://twitter.com/prashanth_neel/status/1416012561867182081

    ಒಟ್ಟು 2 ನಿಮಿಷ 16 ಸೆಕೆಂಡ್ ಇರುವ ಕೆಜಿಎಫ್ ಟೀಸರ್ ಗೆ  84 ಲಕ್ಷ ಲೈಕ್ ಸಿಕ್ಕಿದರೆ, 98 ಸಾವಿರ ಕಮೆಂಟ್ ಬಂದಿದೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.

    ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ಚಿತ್ರ ತಂಡ ಯಾವಾಗ ಚಿತ್ರ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸಿಲ್ಲ.

    ಟೀಸರ್ ನಲ್ಲಿ ರಾಕಿ ಬಾಯ್ ಯಶ್, ಅಧೀರ ಸಂಜಯ್ ದತ್, ರಮೀಕಾ ಸೇನ್ ರವೀನಾ ಟಂಡನ್, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್ ಮಷಿನ್ ಗನ್‍ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್‍ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

  • ಮರಗಳನ್ನು ರಕ್ಷಿಸಲು ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

    ಮರಗಳನ್ನು ರಕ್ಷಿಸಲು ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

    ಬೆಂಗಳೂರು: ಅಪಘಾತದಿಂದ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧನರಾಗಿದ್ದು, ಚಂದನವನಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಈ ಹೊತ್ತಿನಲ್ಲಿ ಸಂಚಾರಿ ವಿಜಯ್ ಅಭಿನಯಿಸಿರುವ ತಲೆದಂಡ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

    ನಾನು ಅವನಲ್ಲ ಅವಳು, ಹರಿವು ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಪ್ರೀತಿ ಗಳಿಸುವುದರ ಜೊತೆಗೆ ಪ್ರಶಂಸೆ ಪಡೆದಿದ್ದ ನಟ ಸಂಚಾರಿ ವಿಜಯ್, ತಲೆದಂಡ ಸಿನಿಮಾದ ಟೀಸರ್‌ನಲ್ಲಿ ಕೂಡ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾದಲ್ಲಿ ಸಂಚಾರಿ ವಿಜಯ್ ಬುದ್ಧಿ ಮಾಂದ್ಯನ ಪಾತ್ರದಲ್ಲಿ ಅಭಿನಯಿಸಿದ್ದು, ಬುದ್ಧಿವಂತರೂ ಮಾಡುವ ಅನ್ಯಾಯದ ವಿರುದ್ಧ ಬುದ್ಧಿಮಾಂದ್ಯನು ಹೋರಾಡುತ್ತಿರುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಟೀಸರ್‌ನಲ್ಲಿ ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂದು ವಿಜಯ್ ಮರಗಳಿಗೆ ಅಡ್ಡಲಾಗಿ ನಿಂತಿರುವುದನ್ನು ನೋಡಬಹುದಾಗಿದೆ. ಟೀಸರ್‌ನಲ್ಲಿ ವಿಜಯ್ ಮುಗ್ಧ ಅಭಿನಯ ನೋಡಿದರೆ ನಿಜಕ್ಕೂ ಎಲ್ಲರ ಮನಕಲಕುವಂತಿದೆ. ಇದನ್ನೂ ಓದಿ: ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

    ಈಗಾಗಲೇ ನಾನು ಅವನಲ್ಲ ಅವಳು ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್ ತಲೆದಂಡ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿ ಎಲ್ಲರ ಮನ ಗೆಲ್ಲುತ್ತಾರೆ ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

    ತಲೆದಂಡ ಮಾತ್ರವಲ್ಲದೇ ಅವಸ್ಥಾಂತರ, ಲಂಕೆ, ಮೋಲೊಬ್ಬ ಮಾಯಾವಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದರು. ಇನ್ನೂ ಘೋಷಿಸದೇ ಇರುವ ಹಲವಾರು ಪ್ರಾಜೆಕ್ಟ್‍ಗಳು ವಿಜಯ್ ಕೈನಲ್ಲಿದ್ದವು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

  • ಶುರುವಾಯ್ತೊಂದು ಹೊಸ ಹಾದಿ – ಪಪ್ಪಿ ತೋರಿಸಿದ ರಕ್ಷಿತ್ ಶೆಟ್ಟಿ

    ಶುರುವಾಯ್ತೊಂದು ಹೊಸ ಹಾದಿ – ಪಪ್ಪಿ ತೋರಿಸಿದ ರಕ್ಷಿತ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಅಭಿಮಾನಿಗಳಿಗಾಗಿ 777 ಚಾರ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

    ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಒಂದು ಎಮೋಷನಲ್ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಈ ಸಿನಿಮಾದ ಮೊದಲ ಟೀಸರ್ ರೀಲಿಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

    ಅಭಿಮಾನಿಗಳು ಏನನ್ನು ಊಹಿಸುತ್ತಾರೋ ಅದಕ್ಕಿಂತಲೂ ಭಿನ್ನವಾಗಿಯೇ ರಕ್ಷಿತ್ ಶೆಟ್ಟಿ ಅವರು ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಇವರು ನಟಿಸಿರು ಈ ಹಿಂದಿನ ಹಲವು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಬೇರೆಯದ್ದೇ ರೀತಿಯಲ್ಲಿ ಕಮಾಲ್ ಮಾಡಲಿದ್ದಾರೆ ಎನ್ನುವುದ ಟೀಸರ್ ನೀಡಿದವರಿ ಏನ್ನಿಸುತ್ತದೆ. ಶ್ವಾನ ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವುದರಿಂದ ಟೀಸರ್‍ನಲ್ಲಿ ಪೂರ್ತಿಯಾಗಿ ಮುದ್ದಾದ ಶ್ವಾನವೇ ಕಾಣಿಸಿಕೊಂಡಿದೆ.

    ಶ್ವಾನವು ಮಾಡುವ ತಂಟೆ, ತರ್ಲೆ, ತುಂಟಾ, ಕಷ್ಟ, ನೋವು, ಮುಗ್ದತೆ ಅದರ ಜೀವನ ಶೈಲಿ ಹೇಳಿರುತ್ತದೆ ಎಂಬುದನ್ನು ನಾವು ಟೀಸರ್‍ನಲ್ಲಿ ನೋಡಬಹುದಾಗಿದೆ. ಟೀಸರ್ ಕೊನೆಯಲ್ಲಿ ರಕ್ಷಿತ್ ಶೆಟ್ಟಿಯವರು ಕಾಣಿಸಿಕೊಳ್ಳುತ್ತಾರೆ ಅವರ ಕೈಯಲ್ಲಿ ನಾವು ಶ್ವಾನ ಇರುವುದನ್ನು ಗಮನಿಸ ಬಹುದಾಗಿದೆ. ಟೀಸರ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಟೀಸರ್ ನೋಡಿರುವವರಿಗೆ ಒಂದು ಕ್ಯೂರ್ಯಾಸಿಟಿ ಹುಟ್ಟುವುದಂತು ಖಂಡಿತಾ ಹೌದು. ಯಾಕೆ ಎಂದರೆ ಶ್ವಾನವನ್ನು ಇಟ್ಟುಕೊಂಡು ರಕ್ಷಿತ್ ಶೆಟ್ಟಿವರು ಏನು ಹೇಳಲು ಹೊರಟ್ಟಿದ್ದಾರೆ ಎನ್ನುವುನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿರುವುದು ಖಂಡಿತಾ ಹೌದು.

    ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ 777 ಚಾರ್ಲಿ ಟೀಸರ್ ರಿಲೀಸ್ ಮಾಡಿದ್ದಾರೆ. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮಲೆಯಾಳಂನಲ್ಲಿ ಪೃಥ್ವಿರಾಜ್ ಟೀಸರ್ ರಿಲೀಸ್ ಮಾಡಿದ್ದಾರೆ. ಹಿಂದಿ ಮತ್ತು ಕನ್ನಡ ಟೀಸರ್‍ಗಳು ಪರಮ್‍ವಾ ಸ್ಟುಡಿಯೋ ಮೂಲಕ ರಿಲೀಸ್ ಆಗಿದೆ.

    777 ಚಾರ್ಲಿ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಟ್ ಮೊದಲಾದವರು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಟೀಸರ್ ನೋಡಿದ ಹಲವು ಸ್ಟಾರ್‍ಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸುಂದರವಾಗಿದೆ ಹೃದಯಸ್ಪರ್ಶಿ ಪ್ರಯತ್ನ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

    ಸಿಂಪಲ್ ಸ್ಟಾರ್ ಆಗಿದ್ದರೂ ಕೂಡ ಸಿನಿಮಾ ಆಯ್ಕೆಗಳ ವಿಚಾರದಲ್ಲಿ ತಾವು ಸ್ಪೆಷಲ್ ಎಂಬುದನ್ನು ರಕ್ಷಿತ್ ಶೆಟ್ಟಿ ಸಾಬೀತು ಮಾಡುತ್ತಲೇ ಬಂದಿದ್ದಾರೆ. ಇಂದು ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ.

  • ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಲೈಫ್ ಆಫ್ ಚಾರ್ಲಿ ಟೀಸರ್

    ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಲೈಫ್ ಆಫ್ ಚಾರ್ಲಿ ಟೀಸರ್

    ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ’ ಸಿನಿಮಾ ಕುರಿತು ದೊಡ್ಡ ಅಪ್‍ಡೇಟ್ ಸಿಕ್ಕಿದ್ದು, ಟೀಸರ್ ಬಿಡುಗಡೆ ಕುರಿತು ಸ್ವತಃ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

    ಚಿತ್ರದ ಅಫೀಷಿಯಲ್ ಟೀಸರ್ ಬಿಡುಗಡೆ ಬಗ್ಗೆ ಚಿತ್ರ ತಂಡ ತಿಳಿಸಿದೆ. ಈ ಕುರಿತು ಫೆಸ್ಬುಕ್‍ನಲ್ಲಿ ಐದು ಭಾಷೆಗಳ ಪೋಸ್ಟರ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ನಮ್ಮ ಚಿತ್ರದ ಅಫೀಷಿಯಲ್ ಟೀಸರ್ ‘ಲೈಫ್ ಆಫ್ ಚಾರ್ಲಿ’ ಜೂನ್ 6ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ಜೂ.6ರಂದು ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದ ಹಿನ್ನೆಲೆ ಈ ಟೀಸರ್ ಬಿಡುಗಡೆ ಮಾಡಲಾಗುತ್ತಿದ್ದು, ಈ ಮೂಲಕ ಅಭಿಮಾನಿಗಳಿಗೆ ಸರ್ಪೈಸ್ ನೀಡಲಾಗುತ್ತಿದೆ. ಶೂಟಿಂಗ್ ಸೇರಿದಂತೆ ಶ್ವಾನದ ಕುರಿತ ವಿವಿಧ ಕಾರ್ಯಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿದ್ದ ‘777 ಚಾರ್ಲಿ’ ಚಿತ್ರ ತಂಡ ಇದೀಗ ಟೀಸರ್ ಬಿಡುಗಡೆ ಮಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ತೋಟದಲ್ಲಿ ಕೆಲಸ ಮಾಡ್ತಿರೋ ಆಶಿಕಾ ರಂಗನಾಥ್ ಫೋಟೋಗೆ ಭಾರೀ ಮೆಚ್ಚುಗೆ

    ಕಿರಣ್ ರಾಜ್ ನಿರ್ದೇಶನದ ‘777 ಚಾರ್ಲಿ’ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಚಿತ್ರತಂಡ ಫುಲ್ ಬ್ಯುಸಿಯಾಗಿದೆ. ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ಇದೇ ವರ್ಷ ‘777 ಚಾರ್ಲಿ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಚಿತ್ರ ತಂಡ ಶೂಟಿಂಗ್ ನಡೆಸಿದೆ. ನಾಯಿಯ ಸೆಂಟಿಮೆಂಟ್ ಇರುವುದರಿಂದ ಪ್ರೇಕ್ಷಕರಲ್ಲಿ ಸಹ ಕುತೂಹಲ ಮೂಡಿದ್ದು, ಯಾವ ರೀತಿ ಕಥೆ ಹೆಣೆಯಲಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಚಿತ್ರ ಬಿಡುಗಡೆ ನಂತರವೇ ಇದಕ್ಕೆ ಉತ್ತರ ಸಿಗಲಿದೆ.

  • ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಯ್ತು ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್

    ವ್ಲಿ ಸ್ಟಾರ್ ಪ್ರೇಮ್ ಲವರ್ ಬಾಯ್ ಪಾತ್ರದಲ್ಲಿ ಅಭಿನಯಿಸಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ ಟೀಸರ್ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆಯಾಗಿದೆ. ಪ್ರೀತಿ ಮಾತು ತುಂಬಿರೋ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ‘ಪ್ರೇಮಂ ಪೂಜ್ಯಂ’ ಟೀಸರ್.

    ಲೈಫ್ ಜೊತೆ ಒನ್ ಸೆಲ್ಫಿ ಸಿನಿಮಾ ನಂತರ ನೆನಪಿರಲಿ ಪ್ರೇಮ್ ಅಭಿನಯಿಸುತ್ತಿರುವ ಚಿತ್ರ ‘ಪ್ರೇಮಂ ಪೂಜ್ಯಂ’. ಇದು ಲವ್ಲಿ ಸ್ಟಾರ್ ಸಿನಿಮಾ ಕೆರಿಯರ್ ನ ವಿಶೇಷ ಸಿನಿಮಾ ಕೂಡ ಹೌದು. ಕಾರಣ ಇದು ಪ್ರೇಮ್ ಸಿನಿ ಬದುಕಿನ 25ನೇ ಚಿತ್ರ. ಪ್ರೇಮ್ ಕೂಡ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಇನ್ನೊಂದು ಸ್ಪೆಷಾಲಿಟಿ ಲವ್ಲಿ ಸ್ಟಾರ್ ಲುಕ್. ಪ್ರತಿ ಸಿನಿಮಾದಲ್ಲೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಪ್ರೇಮ್ ಈ ಸಿನಿಮಾದಲ್ಲೂ ಹೊಸ ಲುಕ್ ನಲ್ಲಿ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ ಒಂಭತ್ತು ಲುಕ್ ನಲ್ಲಿ ಪ್ರೇಮ್ ಸಿನಿಮಾದಲ್ಲಿ ಕಾಣಸಿಗಲಿದ್ದಾರೆ.

    ‘ಪ್ರೇಮಂ ಪೂಜ್ಯಂ’ ಸಿನಿಮಾ ಟೈಟಲ್ ಹೇಳುವಂತೆ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ಹಾಗಂತ ರೆಗ್ಯೂಲರ್ ಪ್ರೇಮಕಥೆ ಇಲ್ಲಿಲ್ಲ. ಹೊಸತನ, ಹೊಸ ಪ್ರಯತ್ನ ಎಲ್ಲವೂ ಪ್ರೇಮಂ ಪೂಜ್ಯಂ ಚಿತ್ರದಲ್ಲಿದೆ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲಿ ಸ್ಟಾರ್ ಪ್ರೇಮ್ ಬಣ್ಣ ಹಚ್ಚಿದ್ರೆ, ನಾಯಕ ನಟಿಯಾಗಿ ಬ್ರಿಂದ ಆಚಾರ್ಯ ಅಭಿನಯಿಸಿದ್ದಾರೆ. ರಾಘವೇಂದ್ರ.ಬಿ.ಎಸ್ ಸಿನಿಮಾ ನಿರ್ದೇಶಕ. ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರಿಗೆ ಸಿನಿಮಾ ಮೇಲೆ ಅಪಾರ ಒಲವು. ಆ ಒಲವಿನಿಂದಲೇ ಇಂದು `ಪ್ರೇಮಂ ಪೂಜ್ಯಂ’ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಿತರಾಗಿದ್ದಾರೆ.

    ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ ಕೃಷಿ ಕೂಡ ನಿರ್ದೇಶಕ ರಾಘವೇಂದ್ರ ಬಿ.ಎಸ್ ಅವರದ್ದೇ. ಕೆಡಂಬಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ರಕ್ಷಿತ್ ಕೆಡಂಬಡಿ, ಡಾ.ರಾಜ್ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಲಿದೆ.

  • ದಾಖಲೆಗಳ ಧೂಳೆಬ್ಬಿಸಿದ ಕೆಜಿಎಫ್-2 – ‘ರಣಬೇಟೇಗಾರ’ನ ಅಬ್ಬರಕ್ಕೆ ಯೂಟ್ಯೂಬ್ ದಾಖಲೆಗಳೆಲ್ಲ ಉಡೀಸ್

    ದಾಖಲೆಗಳ ಧೂಳೆಬ್ಬಿಸಿದ ಕೆಜಿಎಫ್-2 – ‘ರಣಬೇಟೇಗಾರ’ನ ಅಬ್ಬರಕ್ಕೆ ಯೂಟ್ಯೂಬ್ ದಾಖಲೆಗಳೆಲ್ಲ ಉಡೀಸ್

    – ಅಭಿಮಾನಿಗಳಿಗೆ ರಾಕಿ ಬಾಯ್ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಕ್ ಸ್ಟಾರ್ ಯಶ್ ಅಭಿನಯದ ಕೆಜೆಎಫ್-2 ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ಚಿತ್ರದ ಟೀಸರ್ ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗೈದಿದೆ.

    ಚಿತ್ರದ ಟೀಸರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೂವರೆಗೂ ಸುಮಾರು 9 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 10 ಕೋಟಿಯತ್ತ ದಾಂಗುಡಿ ಇಡುತ್ತಿದೆ. ಈ ಸಂಬಂಧ ನಟ ಯಶ್ ಕೂಡ ಸಂತಸ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್- 2 ಫೋಟೋ ಹಾಕಿ ಬರೆದುಕೊಂಡಿರುವ ರಾಕಿಂಗ್ ಸ್ಟಾರ್, ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಈ ನಿಮ್ಮ ಪ್ರೀತಿ ಇಂದು ನನ್ನ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

    ನಿನ್ನೆ ರಾಕಿಬಾಯ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಟೀಸರ್ ರಿಲೀಸ್ ಮಾಡುವ ಸಿದ್ಧತೆಯಲ್ಲಿತ್ತು. ಆದರೆ ಗುರುವಾರ ಸಂಜೆಯೇ ಟೀಸರ್ ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ 9.29ಕ್ಕೆ ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು. ಕೆಜಿಎಫ್-2 ರ ಟೀಸರ್ ಬಿಡುಗಡೆಯಾದ ನಂತರ ಯಶ್ ಅವರ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಆ ಮೂಲಕ ಕನ್ನಡದ ಸೂಪರ್ ಸ್ಟಾರ್ ಈಗ ದೇಶದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್-2 ರ ಟೀಸರ್ ನಲ್ಲಿ ಮಾಸ್ ಹೀರೋ ಆಗಿ ಗಮನ ಸೆಳೆದಿದ್ದಾರೆ. ಇನ್ನೊಂದೆಡೆಗೆ ಅವರ ಪ್ರತಿಸ್ಪರ್ಧಿ ಅಧೀರಾ ಪಾತ್ರದಲ್ಲಿ ಸಂಜಯ್ ದತ್ ಲುಕ್ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿ ಬಂದಿದೆ. ಇನ್ನೊಂದೆಡೆಗೆ ರಾಜಕಾರಣಿ ಪಾತ್ರದಲ್ಲಿ ರವೀನಾ ಟಂಡನ್ ಕೂಡ ರಫ್ ಅಂಡ್ ಟಫ್ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Yash (@thenameisyash)

  • ಏನ್ ಸಂತೋಷ ಸಿಗುತ್ತೋ ಗೊತ್ತಿಲ್ಲ, ಅವರಿಗೆ ದೇವರು ಒಳ್ಳೆಯದು ಮಾಡಲಿ- ಯಶ್

    ಏನ್ ಸಂತೋಷ ಸಿಗುತ್ತೋ ಗೊತ್ತಿಲ್ಲ, ಅವರಿಗೆ ದೇವರು ಒಳ್ಳೆಯದು ಮಾಡಲಿ- ಯಶ್

    ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ಟೀಸರ್ ಲೀಕ್ ಆಗಿದ್ದಕ್ಕೆ ನಟ ಯಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನಿಗಳು ನಿರಾಶರಾಗದಂತೆ ಮನವಿ ಮಾಡಿದ್ದಾರೆ.

    ಈ ಕುರಿತು ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ಮಾತನಾಡಿರುವ ಯಶ್, ನಾಳೆ ಬೆಳಗ್ಗೆ ರಿಲೀಸ್ ಆಗಬೇಕಿದ್ದ ಟೀಸರ್‍ನ್ನು ಯಾರೋ ಪುಣ್ಯಾತ್ಮರು ಲೀಕ್ ಮಾಡಿದ್ದಾರೆ. ಅವರಿಗೆ ಏನ್ ಸಂತೋಷ ಸಿಗುತ್ತೋ ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅಭಿಮಾನಿಗಳು ತುಂಬಾ ಆಸೆಗಳನ್ನು ಇಟ್ಟುಕೊಂಡು ಸಂಭ್ರಮಿಸಲು ಕಾಯುತ್ತಿದ್ದಿರಿ. ಇದೀಗ ಹೊಂಬಾಳೆ ಯೂಟ್ಯೂಬ್ ಚಾನಲ್‍ನಲ್ಲಿ ರಾತ್ರಿ 9.29ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಟೀಸರ್ ನೋಡಿ, ಸಿನಿಮಾ ಇನ್ನೂ ಬಾಕಿ ಇದೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Yash (@thenameisyash)

    ಶುಕ್ರವಾರ ಬೆಳಗ್ಗೆ 10:18ಕ್ಕೆ ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದು ರಾತ್ರಿ 9:29ಕ್ಕೆ ಬಿಡುಗಡೆಯಾಗಿದೆ. ಒಟ್ಟು 2 ನಿಮಿಷ 16 ಸೆಕೆಂಡ್ ವಿಡಿಯೋ ಇದ್ದು ಇದರರಲ್ಲಿ ರಾಕಿ ಬಾಯ್ ಯಶ್, ಅಧೀರ ಸಂಜಯ್ ದತ್, ರಮೀಕಾ ಸೇನ್ ರವೀನಾ ಟಂಡನ್, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್ ಮಿಷನ್ ಗನ್‍ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು, ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್‍ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

    ಶುಕ್ರವಾರ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ನೀಡಲು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇಂದು ರಾತ್ರಿ ದಿಢೀರ್ ಆಗಿ ಕೆಜಿಎಫ್ ಸಿನಿಮಾ ಟೀಸರ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಟ್ರೆಂಡಿಂಗ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ ರಾತ್ರಿ 9:02ಕ್ಕೆ ಟ್ವೀಟ್ ಮಾಡಿ ರಾತ್ರಿ 9:29ಕ್ಕೆ ರಿಲೀಸ್ ಮಾಡುತ್ತೇವೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.

    ವಿಶೇಷ ಏನೆಂದರೆ ಟೀಸರ್ ರಿಲೀಸ್ ಮಾಡುವ ವಿಚಾರ ತಿಳಿದು ಮೊದಲೇ ಅಭಿಮಾನಿಗಳು ಹೊಂಬಾಳೆ ಫಿಲ್ಮ್ ಯೂ ಟ್ಯೂಬ್ ಖಾತೆಗೆ ಬಂದಿದ್ದರು. ಒಟ್ಟು 74 ಸಾವಿರ ಜನ ರಾತ್ರಿ 9:29ಕ್ಕೆ ಹೊಂಬಾಳೆ ಫಿಲ್ಮ್ ಖಾತೆಯಲ್ಲಿ ಟೀಸರ್ ನೋಡಲು ಆಗಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈಗ ಕೆಜಿಎಫ್ ಚಾಪ್ಟರ್ 2 ನಂಬರ್ ಒನ್ ಟ್ರೆಂಡಿಂಗ್‍ನಲ್ಲಿದೆ.

  • ಕೆಂಪಾದ ಗನ್‌ನಿಂದ ಸಿಗರೇಟ್‌ ಹೊತ್ತಿಸಿಕೊಂಡ ರಾಕಿ ಬಾಯ್‌‌ – ಕೆಜಿಎಫ್‌ 2 ಟೀಸರ್‌ ಬಿಡುಗಡೆ

    ಕೆಂಪಾದ ಗನ್‌ನಿಂದ ಸಿಗರೇಟ್‌ ಹೊತ್ತಿಸಿಕೊಂಡ ರಾಕಿ ಬಾಯ್‌‌ – ಕೆಜಿಎಫ್‌ 2 ಟೀಸರ್‌ ಬಿಡುಗಡೆ

    ಬೆಂಗಳೂರು: ಶುಕ್ರವಾರ ಬೆಳಗ್ಗೆ 10:18ಕ್ಕೆ ಬಿಡುಗಡೆಯಾಗಬೇಕಿದ್ದ ಕೆಜಿಎಫ್‌ ಚಾಪ್ಟರ್‌ 2 ಟೀಸರ್‌ ಇಂದು ರಾತ್ರಿ 9:29ಕ್ಕೆ ಬಿಡುಗಡೆಯಾಗಿದೆ.

    ಒಟ್ಟು 2 ನಿಮಿಷ 16 ಸೆಕೆಂಡ್‌ ವಿಡಿಯೋ ಇದ್ದು ಇದರರಲ್ಲಿ ರಾಕಿ ಬಾಯ್‌ ಯಶ್‌, ಅಧೀರ ಸಂಜಯ್‌ ದತ್‌, ರಮೀಕಾ ಸೇನ್‌ ರವೀನಾ ಟಂಡನ್‌, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್‌ ಮಿಷನ್‌ ಗನ್‌ನಿಂದ ಜೀಪುಗಳ ಮೇಲೆ ಫೈರ್‌ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್‌ ಮಾಡಿದ ಕೆಂಪಾದ ಗನ್‌ನಿಂದ ರಾಕಿ‌ ಸಿಗರೇಟ್‌ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

    ಶುಕ್ರವಾರ ಯಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್‌ ನೀಡಲು ಟೀಸರ್‌ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇಂದು ರಾತ್ರಿ ದಿಢೀರ್‌ ಆಗಿ ಕೆಜಿಎಫ್‌ ಸಿನಿಮಾ ಟೀಸರ್‌ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿ ಟ್ರೆಂಡಿಂಗ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಗುರುವಾರ ರಾತ್ರಿ 9:02ಕ್ಕೆ ಟ್ವೀಟ್‌ ಮಾಡಿ ರಾತ್ರಿ 9:29ಕ್ಕೆ ರಿಲೀಸ್‌ ಮಾಡುತ್ತೇವೆ ಎಂದು ಟ್ವೀಟ್‌ ಮಾಡಿ ತಿಳಿಸಿದ್ದರು.

    https://twitter.com/prashanth_neel/status/1347204512159727616

    ವಿಶೇಷ ಏನೆಂದರೆ ಟೀಸರ್‌ ರಿಲೀಸ್‌ ಮಾಡುವ ವಿಚಾರ ತಿಳಿದು ಮೊದಲೇ ಅಭಿಮಾನಿಗಳು ಹೊಂಬಾಳೆ ಫಿಲ್ಮ್‌ ಯೂ ಟ್ಯೂಬ್‌ ಖಾತೆಗೆ ಬಂದಿದ್ದರು. ಒಟ್ಟು 74 ಸಾವಿರ ಜನ ರಾತ್ರಿ 9:29ಕ್ಕೆ ಹೊಂಬಾಳೆ ಫಿಲ್ಮ್‌ ಖಾತೆಯಲ್ಲಿ ಟೀಸರ್‌ ನೋಡಲು ಆಗಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈಗ ಕೆಜಿಎಫ್‌ ಚಾಪ್ಟರ್‌ 2 ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿದೆ.

  • ಕೆಜಿಎಫ್ ಚಾಪ್ಟರ್-2 ಟೀಸರ್ ಬಿಡುಗಡೆ ಪ್ರಶ್ನೆಗೆ ಸಿಕ್ತು ಉತ್ತರ

    ಕೆಜಿಎಫ್ ಚಾಪ್ಟರ್-2 ಟೀಸರ್ ಬಿಡುಗಡೆ ಪ್ರಶ್ನೆಗೆ ಸಿಕ್ತು ಉತ್ತರ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಚಿತ್ರೀಕರಣ ಅಂತಿಮ ಹಂತ ತಲುಪುತ್ತಿರುವ ಬೆನ್ನಲ್ಲೇ ಇದೀಗ ಬಿಗ್ ಅನೌನ್ಸ್ ಮೆಂಟ್ ಹೊರ ಬಿದ್ದಂತಾಗಿದ್ದು, ರಾಖಿ ಭಾಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುವ ಕುರಿತು ಸುಳಿವು ಸಿಕ್ಕಿದೆ.

    ಚಿತ್ರ ತಂಡ ಹೈದರಾಬಾದ್‍ನಲ್ಲಿ ಅಂತಿಮ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಭರ್ಜರಿ ಸುಳಿವು ನೀಡಿರುವುದು ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಮೂರು ವರ್ಷ ಆಯಿತು ಗುರು ಬಾಸ್ ಮೂವಿ ಟೀಸರ್ ನೋಡಿ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿ ಬೇಸರ ಹೊರ ಹಾಕಿದ್ದ. ಇದಕ್ಕೆ ಉತ್ತರಿಸಿರುವ ಕಾರ್ತಿಕ್ ಗೌಡ, ಬರ್ತ್ ಡೇಗೆ ನೋಡ್ತಿಯಾ…ಬೇರೆ ರೇಂಜಲ್ಲೇ ಇರುತ್ತೇ ಎಂದು ಉತ್ತರಿಸಿದ್ದಾರೆ. ಈ ಮೂಲಕ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್ ಬಿಡುಗಡೆಯಾಗುವ ಸುಳಿವು ನಿಡಿದ್ದಾರೆ. ಅದರಲ್ಲೂ ಭರ್ಜರಿಯಾಗೇ ಇರುತ್ತೆ ಎಂದು ಹೇಳಿರುವುದರಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾದಿಂದ ಲಾಕ್‍ಡೌನ್‍ನಿಂದ ಇಡೀ ಸಿನಿಮಾ ರಂಗ ಸ್ಥಗಿತವಾಯಿತು. ಹೀಗಾಗಿ ಕೊನೇ ಹಂತದ ಚಿತ್ರೀಕರಣ ಬಾಕಿ ಉಳಿಯಿತು. ಇದೀಗ ಕೊನೇ ಹಂತದ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದ್ದು, ಇದರ ಮಧ್ಯೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ತಯಾರಿ ನಡೆಸಿದೆ.

    ಪ್ರಸ್ತುತ ಹೈದರಾಬಾದ್‍ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರ ಅಧೀರನ ಪಾತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣ ಪೂರ್ಣಗೊಂಡ ಬಳಿಕ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿಂದೆ ‘ವೀ ನೀಡ್ ಕೆಜಿಎಫ್-2 ಟೀಸರ್’ ಹ್ಯಾಷ್ ಟ್ಯಾಗ್‍ನೊಂದಿಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ರಾಖಿ ಭಾಯ್ ಹುಟ್ಟುಹಬ್ಬಕ್ಕೆ ಟೀಸರ್ ಕಣ್ತುಂಬಿಕೊಳ್ಳಬಹುದಾಗಿದೆ.

  • ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ಕ್ಷತ್ರಿಯ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಅಭಿಮಾನಿಗಳಿಗೆ ಎರಡು ಸರ್ಪ್ರೈಸ್ ವಿಚಾರಗಳಿವೆ.

    ಅನಿಲ್ ಮಂಡ್ಯ ನಿರ್ದೇಶನದ ಮತ್ತು ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯದ ಟೀಸರ್ ಅನ್ನು ಚಿರು ಹುಟ್ಟುಹಬ್ಬವಾದ ಇಂದು ಬಿಡುಗಡೆ ಮಾಡಲಾಗಿದೆ. ಈ ಟೀಸರಿನಲ್ಲಿ ಚಿರು ಹುಟ್ಟುಹಬ್ಬ ಆಚರಿಸಿಕೊಂಡಿರುವ, ಮತ್ತು ಮಗುವನ್ನು ಅಪ್ಪಿ ಮುದ್ದಾಡುವ ಎರಡು ಮನಕಲಕುವ ದೃಶ್ಯಗಳನ್ನು ನಾವು ಕಾಣಬಹುದು. ಇದನ್ನು ಓದಿ: ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ – ಮೇಘನಾ ವೀಡಿಯೋ

    ರೀಯಲ್ ಲೈಫ್‍ನಲ್ಲಿ ಅನುಭವಿಸಲಾಗದ್ದನ್ನು ಚಿರು ತಮ್ಮ ಅಭಿನಯದ ಕೊನೆಯ ಸಿನಿಮಾದಲ್ಲಿ ರೀಲ್‍ನಲ್ಲಿ ಅನುಭವಿಸಿದ್ದಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಲು ಅವರು ಇಲ್ಲ. ಆದರೆ ಸಿನಿಮಾದಲ್ಲಿ ಚಿರು ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿ ಸಂಭ್ರಮಿಸಿದ್ದಾರೆ. ಚಿರು ಪತ್ನಿ ಮೇಘನಾ ತುಂಬು ಗರ್ಭಿಣಿ ಮಗುವನ್ನು ಹೆತ್ತಿ ಆಡಸಬೇಕಾದ ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಸಿನಿಮಾದ ದೃಶ್ಯದಲ್ಲಿ ಅವರು ಮಗುವನ್ನು ಹೆತ್ತಿ ಆಡಿಸಿದ್ದಾರೆ. ಈ ಎರಡು ದೃಶ್ಯಗಳು ನೋಡುಗರಿಗೆ ಕಣ್ಣೀರು ತರಿಸುತ್ತವೆ. ಇದನ್ನು ಓದಿ: ಹಳೆಯ ಫೋಟೋ ಹಂಚಿಕೊಂಡು ಅಣ್ಣನಿಗೆ ಧ್ರುವ ವಿಶ್

    ಈ ಬಾರಿ ಚಿರುವಿಲ್ಲದೇ ಅವರ ಅಭಿಮಾನಿಗಳು ಮೊದಲ ವರ್ಷದ ಹುಟ್ಟಹಬ್ಬ ಆಚರಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ (39) ಅವರು ಜೂನ್ 7ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಜೂನ್ 6ರ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಜೂನ್ 7ರಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ: ಅವಳಿ ಮಕ್ಕಳು ಆದ್ರೂ ಆಗ್ಬೋದು: ನಸುನಕ್ಕ ಮೇಘನಾ

    ಇಂದು ಬೆಳಗ್ಗೆ ಧ್ರುವ ಹಾಗೂ ಮೇಘನಾ ಸಹ ಫೋಟೋ ಹಾಕಿ ಚಿರು ಹಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.