Tag: teaser

  • ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಪುತ್ರನ ಸಾಹಸವಿದು

    ಮಾಜಿ ಮಂತ್ರಿ ಜನಾರ್ದನ್ ರೆಡ್ಡಿ ಪಾತ್ರ ಕಿರೀಟಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇನ್ನಷ್ಟೇ ಅವರ ಚೊಚ್ಚಲು ನಟನೆಯ ಸಿನಿಮಾದ ಶೂಟಿಂಗ್ ಶುರುವಾಗಬೇಕು ಅದಕ್ಕೂ ಮುನ್ನ ಮೊದಲ ಸಿನಿಮಾದ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಿದ್ದಾರೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆಕ್ಷನ್ ಸೀನ್ಸ್ ಕಂಡು ಚಿತ್ರರಸಿಕರು ಹುಬ್ಬೇರಿಸಿದ್ದರು. ಸ್ವತಃ ಚಿತ್ರಬ್ರಹ್ಮ ರಾಜಮೌಳಿಯೇ ಕಿರೀಟಿ ಆಕ್ಟಿಂಗ್ , ಸ್ಟಂಟ್ಸ್ ಗೆ ಬಹುಪರಾಕ್ ಅಂತಾ ಬೆನ್ನುತಟ್ಟಿದ್ದರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರುವ ಕಿರೀಟಿ ಸಾಹಸದ ಹಿಂದೆ ನೋವು, ಕಷ್ಟದ ಪರಿಶ್ರಮ ಅಡಗಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಇಂಟ್ರೂಡಕ್ಷನ್  ಬಿಟಿಎಸ್ ಅಂದ್ರೆ ಟೀಸರ್ ಹಿಂದಿನ ಪರಿಶ್ರಮ ಸಣ್ಣದೊಂದು ಝಲಕ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.  ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡರು ಛಲ ಬಿಡದೇ ಕಿರೀಟಿ ಸ್ಟಂಟ್ಸ್ ಗಳನ್ನು ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಮೈ ಜುಮ್ ಎನಿಸುತ್ತವೆ.  ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ಅಂದಹಾಗೇ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15 ಸಿನಿಮಾ ಇದಾಗಿದ್ದು, ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಓಂಕಾರ ಹಾಕಿರುವ, ಬಾಹುಬಲಿ ಛಾಯಾಗ್ರಾಹಕ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀಪ್ರಸಾದ್ ಮ್ಯೂಸಿಕ್ ಪುಳಕ ಹಾಗೂ ರವೀಂದರ್ ಕಲಾ ನಿರ್ದೇಶನ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕನಾಗಿ ನಟಿಸಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

  • ಕಿಚ್ಚನ ‘ವಿಕ್ರಾಂತ್ ರೋಣ’ ಹಿಂದಿ ಟೀಸರ್ ರಿಲೀಸ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಕಿಚ್ಚನ ‘ವಿಕ್ರಾಂತ್ ರೋಣ’ ಹಿಂದಿ ಟೀಸರ್ ರಿಲೀಸ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಕಿಚ್ಚ ಸುದೀಪ್ ಅವರನ್ನು ತಮ್ಮ ಸಹೋದರ ಎಂದೇ ಕರೆಯುವ ಬಾಲಿವುಡ್ ನಟ ಸಲ್ಮಾನ್ ಖಾನ್ ಕಿಚ್ಚನ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ.  ಮೆಗಾ ಪ್ಯಾನ್ ಇಂಡಿಯಾ ಈ ಚಿತ್ರ ದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಬಿಡುಗಡೆ ಆಗುತ್ತಿದ್ದು, ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಹಲವು ಭಾಷೆಗಳಲ್ಲಿ ಈ ಟೀಸರ್ ಬಿಡುಗಡೆ ಆಗಲಿದೆ. ಆಯಾ ಭಾಷೆಗಳ ಹೆಸರಾಂತ ನಟರು ಈ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ಅದಕ್ಕೂ ಮುನ್ನ ಟೀಸರ್ , ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಪ್ರಿ ರಿಲೀಸ್ ಇವೆಂಟ್ ಕೂಡ ಆಯೋಜನೆ ಮಾಡುವ ಉದ್ದೇಶವೂ ಇದೆ. ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

    ಏ.2 ರಂದು ರಿಲೀಸ್ ಆಗಲಿರುವ ಟೀಸರ್ ಅನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಮೋಹನ್ ಲಾಲ್ ಕಿಚ್ಚ ಸುದೀಪ್ ಅವರ ಜತೆ ನಟಿಸದೇ ಇದ್ದರೂ, ಸುದೀಪ್ ಅವರ ಮೇಲೆ ಅವರಿಗೆ ಅಪಾರ ಗೌರವ. ಅಲ್ಲದೇ ಕನ್ನಡದಲ್ಲಿ ಅವರು ಪುನೀತ್ ಅವರ ಜತೆ ನಟಿಸಿದ್ದಾರೆ. ಕಿಚ್ಚನಿಗೂ ಮತ್ತು ಪುನೀತ್ ಅವರಿಗೂ ಇದ್ದ ಬಾಂಧವ್ಯದ ಅರಿವು ಅವರಿಗಿದೆ. ಹೀಗಾಗಿ ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಮಲಯಾಳಂನಲ್ಲಿ ಮೋಹನ್ ಲಾಲ್ ಬಿಡುಗಡೆ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಅನ್ನು ರಿಲೀಸ್ ಮಾಡು‍ತ್ತಿದ್ದಾರೆ. ಚಿರಂಜೀವಿ ಜತೆ ಕಿಚ್ಚನಿಗೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೇ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ತೆಲುಗಿನಲ್ಲಿ ಕಿಚ್ಚನಿಗೆ ಉತ್ತಮ ಕಾಂಟ್ಯಾಕ್ಟ್ ಕೂಡ ಇದೆ. ಅಲ್ಲಿ ಕಿಚ್ಚನ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.

  • ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಕಿಚ್ಚ ಸುದೀಪ್ ಅಭಿನಯದ ಕನ್ನಡದ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಚಿತ್ರ ‘ವಿಕ್ರಾಂತ್ ರೋಣ’ದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಬಿಡುಗಡೆ ಆಗುತ್ತಿದೆ. ಏಪ್ರಿಲ್ 2 ರಂದು ಬೆಳಗ್ಗೆ 9.55ಕ್ಕೆ ಹಲವು ಭಾಷೆಗಳಲ್ಲಿ ಈ ಟೀಸರ್ ಬಿಡುಗಡೆ ಆಗುತ್ತಿದ್ದು, ಆಯಾ ಭಾಷೆಗಳ ಹೆಸರಾಂತ ನಟರು ಈ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ನಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ಅದಕ್ಕೂ ಮುನ್ನ ಟೀಸರ್ , ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಪ್ರಿ ರಿಲೀಸ್ ಇವೆಂಟ್ ಕೂಡ ಆಯೋಜನೆ ಮಾಡುವ ಉದ್ದೇಶವೂ ಇದೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಏ.2 ರಂದು ರಿಲೀಸ್ ಆಗಲಿರುವ ಟೀಸರ್ ಅನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ. ಮೋಹನ್ ಲಾಲ್ ಕಿಚ್ಚ ಸುದೀಪ್ ಅವರ ಜತೆ ನಟಿಸದೇ ಇದ್ದರೂ, ಸುದೀಪ್ ಅವರ ಮೇಲೆ ಅವರಿಗೆ ಅಪಾರ ಗೌರವ. ಅಲ್ಲದೇ ಕನ್ನಡದಲ್ಲಿ ಅವರು ಪುನೀತ್ ಅವರ ಜತೆ ನಟಿಸಿದ್ದಾರೆ. ಕಿಚ್ಚನಿಗೂ ಮತ್ತು ಪುನೀತ್ ಅವರಿಗೂ ಇದ್ದ ಬಾಂಧವ್ಯದ ಅರಿವು ಅವರಿಗಿದೆ. ಹೀಗಾಗಿ ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಮಲಯಾಳಂನಲ್ಲಿ ಮೋಹನ್ ಲಾಲ್ ಬಿಡುಗಡೆ ಮಾಡುತ್ತಿದ್ದರೆ, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಅನ್ನು ರಿಲೀಸ್ ಮಾಡು‍ತ್ತಿದ್ದಾರೆ. ಚಿರಂಜೀವಿ ಜತೆ ಕಿಚ್ಚನಿಗೆ ಒಳ್ಳೆಯ ಬಾಂಧವ್ಯವಿದೆ. ಅಲ್ಲದೇ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ತೆಲುಗಿನಲ್ಲಿ ಕಿಚ್ಚನಿಗೆ ಉತ್ತಮ ಕಾಂಟ್ಯಾಕ್ಟ್ ಕೂಡ ಇದೆ. ಅಲ್ಲಿ ಕಿಚ್ಚನ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಉಳಿದಂತೆ ತಮಿಳು ಮತ್ತು ಹಿಂದಿಯ ಟೀಸರ್ ಅನ್ನು ಅಲ್ಲಿನ ಹೆಸರಾಂತ ಕಲಾವಿದರೇ ಬಿಡುಗಡೆ ಮಾಡುತ್ತಿದ್ದು, ಗಂಟೆಗೊಂದು ಈ ವಿಷಯವನ್ನು ಅಪ್ ಡೇಟ್ ಮಾಡುತ್ತಿದ್ದಾರೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ.

  • ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ದೇಶಾದ್ಯಂತ ಇದೀಗ ಕೆಜಿಎಫ್ 2 ಹವಾ ಕ್ರಿಯೇಟ್ ಆಗಿದೆ. ನೆನ್ನೆಯಷ್ಟೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರು ಟ್ರೈಲರ್ ಮೆಚ್ಚಿಕೊಂಡು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಂತೂ ಹಬ್ಬದ ರೀತಿಯಲ್ಲೇ ಸಂಭ್ರಮಿಸುತ್ತಿದ್ದಾರೆ. ಈಗ ಕನ್ನಡದ ಚಿತ್ರವೊಂದು ಬಾಲಿವುಡ್ ದಾಟಿಕೊಂಡು ಹಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಹಲವು ದಾಖಲೆಗಳನ್ನು ಬರೆದಿರುವ ಮತ್ತು ತಾನೇ ಬರೆದ ದಾಖಲೆಯನ್ನು ಮುರಿದಿರುವ ‘ಕೆಜಿಎಫ್’ ಸಿನಿಮಾ ಶುರುವಾಗಿದ್ದು 2015ರಂದು. ನಟ ಯಶ್ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸಿನಿಮಾದ ಗೆಲುವಿನಲ್ಲಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ‘ಉ್ರಗಂ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿದ್ದರು. ಪುನೀತ್ ರಾಜ್ ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ ಬ್ಯಾನರ್ ಸಿನಿಮಾ ರಂಗ ಪ್ರವೇಶ ಮಾಡಿತ್ತು. ಈ ಮೂವರು ಸೇರಿ ಮೊದಲು ‘ಕೆಜಿಎಫ್’ ಕನಸು ಕಂಡವರು. ಇದನ್ನೂ ಓದಿ: ಹೊಸ ದಾಖಲೆ ಬರೆದ ಕೆಜಿಎಫ್ 2 ಟ್ರೈಲರ್ – ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಲಕ್ಷಾಂತರ ವ್ಯೂ

    21 ಡಿಸೆಂಬರ್ 2018ರಲ್ಲಿ ತೆರೆಕಂಡ ‘ಕೆಜಿಎಫ್’ ಸಿನಿಮಾ ಐತಿಹಾಸಿಕ ದಾಖಲೆ ಮಾಡಿತು. ಪ್ಯಾನ್ ಇಂಡಿಯಾ ಪರಿಕಲ್ಪನೆಯ ಪಕ್ಕಾ ಸಿನಿಮಾ ಎನಿಸಿತು. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಿತು. ಯಶ್ ಎಂಬ ಕನ್ನಡದ ಹುಡುಗ ಪ್ಯಾನ್ ಇಂಡಿಯಾ ನಾಯಕನಾಗಿ ಹೊರಹೊಮ್ಮಿದರು. ಭಾರತೀಯ ಸಿನಿಮಾ ರಂಗವೇ ಈ ಸಿನಿಮಾವನ್ನು ಬೆರಗಿನಿಂದ ನೋಡಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಸಿನಿಮಾದಿಂದ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಲಿಲ್ಲ. ತೆಲುಗಿಗೂ ಹಾರಿದರು. ಇಷ್ಟೆಲ್ಲ ಗೆಲುವಿಗೆ ಇಂಬು ಕೊಟ್ಟಿದ್ದು ‘ಕೆಜಿಎಫ್ 2’ ಚಿತ್ರ.  ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    2018ರಲ್ಲೇ ‘ಕೆಜಿಎಫ್ 2’ ಸಿನಿಮಾದ ಕೆಲಸ ಶುರುವಾದವು. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಿನಿಮಾ ಕೂಡ ಭಾರತದ ಸಹಿತ 70 ದೇಶಗಳಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ. ಬರೋಬ್ಬರಿ ಎಂಟು ವರ್ಷಗಳ ಕಾಲ ಯಶ್, ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

    ಎಂಟು ವರ್ಷಗಳ ಕಾಲ ಯಶ್ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ‘ಕೆಜಿಎಫ್’ನಲ್ಲೇ ಮುಳುಗಿದ್ದಾರೆ. ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಿನಿಮಾ ಮಾಡುತ್ತಿದ್ದರೂ, ಕೆಜಿಎಫ್ 2 ಸಿನಿಮಾದ ಕೆಲಸ ಮುಗಿದ ನಂತರವೇ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ಹೊಂಬಾಳೆ ಫಿಲ್ಮ್ ಬೇರೆ ಬೇರೆ ಚಿತ್ರಗಳನ್ನೂ ಮಾಡಿದರೂ, ಕೆಜಿಎಫ್ ಟೆನ್ಷನ್ ಮಾತ್ರ ಹಾಗೆಯೇ ಇತ್ತು. ಇವರೆಲ್ಲ ಇಷ್ಟೊಂದು ನಿರಾಳತೆಯಿಂದ ಕೆಲಸ ಮಾಡಲು ಕಾರಣ ಅವರ ಪತ್ನಿಯರು ಎನ್ನುವುದು ವಿಶೇಷ. ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ ಅವರೇ ಈ ಮಾತನ್ನು ಹೇಳಿದ್ದಾರೆ.

    “ಪ್ರಶಾಂತ್ ನೀಲ್ ಪತ್ನಿ ಲಿಖಿತ, ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತು ನನ್ನ (ವಿಜಯ ಕಿರಗಂದೂರ) ಪತ್ನಿ ಸಹಕಾರದಿಂದಾಗಿ ಎಂಟು ವರ್ಷಗಳ ಕಾಲ ಒಂದೇ ಸಿನಿಮಾದ ಬಗ್ಗೆ ಅಷ್ಟೂ ಶಕ್ತಿಯನ್ನು ವ್ಯಹಿಸಿದ್ದೇವೆ. ನಾವು ಕೂಲ್ ಆಗಿ ಕೆಲಸ ಮಾಡಿದ್ದೇವೆ ಎಂದರೆ, ಅದರ ಅಷ್ಟೂ ಕ್ರೆಡಿಟ್ಸ್ ಅವರಿಗೆ ಸಲ್ಲಬೇಕು’ ಎಂದಿದ್ದಾರೆ ವಿಜಯ್ ಕಿರಗಂದೂರ.

  • ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

    ಪುನೀತ್ ಅಭಿನಯದ ಕೊನೆಯ ಸಿನಿಮಾ ಇದಗಿದ್ದು, ಈ ಸಿನಿಮಾ ನೋಡಲು ಕರುನಾಡಿನ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಜೇಮ್ಸ್ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಈ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಮೂಗುತಿ ಸುಂದರಿ ಸುಷ್ಮಿತಾ ಗೌಡ

    ಟೀಸರ್‍ನಲ್ಲಿ ಮೊದಲಿಗೆ ಅಂಡರ್ ವರ್ಲ್ಡ್, ಮಾಫಿಯಾ ದೃಶ್ಯಗಳು ಮೂಡಿಬಂದಿದ್ದು, ನಂತರ ಬೈಕ್ ಮೇಲೆ ಎಂಟ್ರಿ ಕೊಡುವ ಪುನೀತ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಪುನೀತ್ ಕಾರಿನಿಂದ ಇಳಿಯುವ ದೃಶ್ಯ, ಗನ್ ಹಿಡಿಯುವ ಸ್ಟೈಲ್, ಪುನೀತ್ ಸ್ಟಂಟ್ಸ್ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಇನ್ನೂ ಟೀಸರ್‌ನ ಕೊನೆಯಲ್ಲಿ ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂಬ ಶಿವಣ್ಣನ ವಾಯ್ಸ್ ಟೀಸರ್ ಮತ್ತಷ್ಟು ರಿಚ್ ಗೊಳಿಸಿದೆ. ಒಟ್ಟಾರೆ ಜೇಮ್ಸ್ ಟೀಸರ್ ಒಂದು ರೀತಿ ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಫೆ.11ಕ್ಕೆ ಬಿಡುಗಡೆಯಾಗಲಿದೆ ಜೇಮ್ಸ್ ಸಿನಿಮಾದ ಟೀಸರ್

    ಇಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ `ಜೇಮ್ಸ್’ ಟೀಸರ್ ಪಿಆರ್‌ಕೆ ಆಡಿಯೋ ಸಂಸ್ಥೆಯಡಿ ಅನಾವರಣಗೊಳಿಸಿರುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿರುವ ಚಿತ್ರತಂಡ ಜೇಮ್ಸ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ. ಇನ್ನೂ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪುನೀತ್ ಅವರನ್ನು ಬಿಗ್‍ಸ್ಕ್ರೀನ್ ಮೇಲೆ ಬರಮಾಡಿಕೊಳ್ಳಲು ಅಪ್ಪು ಅಭಿಮಾನಿಗಳು ಕಾತುರರಾಗಿದ್ದಾರೆ. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

    ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಅವರೇ ಜೇಮ್ಸ್ ಚಿತ್ರದಲ್ಲಿ ಅಪ್ಪುಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್, ಮುಖೇಶ್ ರಿಷಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

  • ‘ಇಂಗ್ಲಿಷ್ ಮಂಜ’ನಿಗೆ ಸುಕ್ಕಾ ಸೂರಿಯ ಆರ್ಶೀವಾದ- ಟೀಸರ್ ಮೆಚ್ಚಿದ ಸಿನಿರಸಿಕರು

    ‘ಇಂಗ್ಲಿಷ್ ಮಂಜ’ನಿಗೆ ಸುಕ್ಕಾ ಸೂರಿಯ ಆರ್ಶೀವಾದ- ಟೀಸರ್ ಮೆಚ್ಚಿದ ಸಿನಿರಸಿಕರು

    ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾವಂತ ನಟ ಪ್ರಮೋದ್. ಇತ್ತೀಚೆಗೆ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಗೊಂಡ ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಆಗಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ನಟನೆ, ಡಾನ್ಸ್, ಆಕ್ಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಪ್ರಮೋದ್ ಲಾಂಗ್ ಹಿಡಿದು ಮಾಸ್ ಅವತಾರ ಎತ್ತಿರುವ ಸಿನಿಮಾ ‘ಇಂಗ್ಲಿಷ್ ಮಂಜ’. ಇವರ ಮಾಸ್ ಅವತಾರಕ್ಕೆ ಸಾಥ್ ಸಿಕ್ಕಿರುವುದು ಸ್ಯಾಂಡಲ್‍ವುಡ್ ಸ್ಟಾರ್ ಡೈರೆಕ್ಟರ್ ಸುಕ್ಕಾ ಸೂರಿಯಿಂದ ಎನ್ನುವುದು ವಿಶೇಷ ಸಂಗತಿ.

    English Manja

    ‘ಇಂಗ್ಲಿಷ್ ಮಂಜ’ ಪಕ್ಕಾ ರೌಡಿಸಂ ಹಿನ್ನೆಲೆಯುಳ್ಳ ಸಿನಿಮಾ. 2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇಂದು ಚಿತ್ರದ ನಾಯಕ ನಟ ಪ್ರಮೋದ್ ಹುಟ್ಟುಹಬ್ಬ. ಆದರಿಂದ ಚಿತ್ರತಂಡ ಚಿತ್ರದ ಟೀಸರ್ ಇಂದು ಬಿಡುಗಡೆ ಮಾಡಿದೆ. ಟೈಟಲ್ ಮೂಲಕವೇ ಒಂದು ಹಂತದ ಕ್ಯೂರಿಯಾಸಿಟಿಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದ ಚಿತ್ರ ಟೀಸರ್ ಬಿಡುಗಡೆಯಾದ ಮೇಲೆ ಆ ಕ್ಯೂರಿಯಾಸಿಟಿ ಲೆವೆಲ್ ಇನ್ನಷ್ಟು ಹೆಚ್ಚಿಸಿದೆ. ಮಾಸ್ ಟೀಸರ್ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ರೌಡಿಸಂ ಹಿನ್ನೆಲೆಯ ಸಿನಿಮಾ ನಿರ್ದೇಶನಕ್ಕೆ ಬ್ರ್ಯಾಂಡ್ ಅಂದರೆ ಅದು ಸ್ಟಾರ್ ಡೈರೆಕ್ಟರ್ ಸೂರಿ. ಆದರಿಂದಲೇ ಚಿತ್ರತಂಡ ಇಂಗ್ಲಿಷ್ ಮಂಜ ಟೀಸರ್ ಬಿಡುಗಡೆಯನ್ನು ಅವರಿಂದಲೇ ಮಾಡಿಸಿದೆ. ಟೀಸರ್ ಝಲಕ್ ಹಾಗೂ ಟೈಟಲ್ ನೋಡಿ ಸಖತ್ ಇಂಪ್ರೆಸ್ ಆಗಿರುವ ಸೂರಿ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಕೋಲಾರ ಸಿನಿಮಾ ನಿರ್ದೇಶಿಸಿದ್ದ ಆರ್ಯ ಎಂ.ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದು. ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ ಸಿನಿಮಾದಲ್ಲಿದ್ದು ಅದರೊಂದಿಗೆ ಸುಂದರ ಪ್ರೇಮ್ ಕಹಾನಿಯೂ ಚಿತ್ರದಲ್ಲಿದೆ. ಚಿತ್ರದಲ್ಲಿ ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸುನೀಲ್ ಪುರಾಣಿಕ್, ವಿ.ನಾಗೇಂದ್ರ ಪ್ರಸಾದ್, ವಿಕ್ಟರಿ ವಾಸು, ನಾಗೇಂದ್ರ ಅರಸ್ ಒಳಗೊಂಡ ಅನುಭವಿ ಕಲಾವಿದರ ಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

    English Manja

    2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಅಂಚಿಗೆ ಬಂದು ನಿಂತಿದ್ದು, ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಆರಂಭ ನೀಡಿದೆ ಚಿತ್ರತಂಡ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದು, ಬಿ.ಆರ್.ಹೇಮಂತ್ ಸಂಗೀತ ಸಂಯೋಜನೆ, ರಂಗಸ್ವಾಮಿ ಕ್ಯಾಮೆರಾ ವರ್ಕ್, ಕೆ.ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.

  • ಲಿಖಿತ್ ಸೂರ್ಯ ‘ರೂಮ್ ಬಾಯ್’ ಟೀಸರ್ ಮೆಚ್ಚಿದ ಡಾಲಿ ಧನಂಜಯ್

    ಲಿಖಿತ್ ಸೂರ್ಯ ‘ರೂಮ್ ಬಾಯ್’ ಟೀಸರ್ ಮೆಚ್ಚಿದ ಡಾಲಿ ಧನಂಜಯ್

    ಪ್ರಯತ್ನಗಳು ನಿರಂತರವಾದುದು, ಎಲ್ಲಾ ಪ್ರಯತ್ನಗಳು ಗೆಲ್ಲುತ್ತೆ ಎಂದೇನಿಲ್ಲ. ಆದರೆ ಕನಸಿನ ಹಾದಿಯೆಡೆಗೆ ಪ್ರಯತ್ನಗಳು ನಿರಂತರವಾಗಿರಬೇಕು. ಅಂತೆಯೇ ಇಲ್ಲೊಂದು ಹೊಸ ಚಿತ್ರತಂಡ ಪರಿಶ್ರಮದ ಜೊತೆಗೆ ಫ್ಯಾಶನ್‌ನಿಂದ ಸಿನಿಮಾ ಮಾಡಿ ಚಿತ್ರಪ್ರೇಮಿಗಳ ಆಶೀರ್ವಾದಕ್ಕಾಗಿ ಕಾಯುತ್ತಿದೆ. ಆ ಚಿತ್ರವೇ ‘ರೂಮ್ ಬಾಯ್’.

    ಸದ್ಯಕ್ಕಂತೂ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರ ಸಾಥ್ ಸಿಕ್ಕಿರೋದು ಯುವ ಪ್ರತಿಭೆಗಳಿಗೆ ಸಂತಸ ತಂದಿದೆ. ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ರವಿ ನಾಗಡದಿನ್ನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾವಾಗಿದೆ.

    ಹತ್ತು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗದಲ್ಲಿ ದುಡಿದ ಅನುಭವ ಇವರಿಗಿದ್ದು, ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ, ಸಿನಿಮಾ ನಿರ್ದೇಶನದ ಕಲೆಗಳನ್ನು ಒಂದಷ್ಟು ಕರಗತ ಮಾಡಿಕೊಂಡಿದ್ದಾರೆ. ಇದೀಗ ಮೊದಲ ಬಾರಿ ನಿರ್ದೇಶಕನ ಮೊಗ ಹೊತ್ತಿರುವ ಇವರು ಚೊಚ್ಚಲ ಚಿತ್ರಕ್ಕೆ ಇಂಟ್ರಸ್ಟಿಂಗ್ ಆಗಿರೋ ಕಥೆ ರೆಡಿ ಮಾಡಿಕೊಂಡು ಆಕ್ಷನ್ ಕಟ್ ಹೇಳಿದ್ದಾರೆ.

    ಸೈಕಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಒಳಗೊಂಡ ಈ ಚಿತ್ರ ಪ್ರೇಕ್ಷಕರ ಮನರಂಜಿಸಲು ಸಜ್ಜಾಗಿದೆ. ಚಿತ್ರದ ಭರವಸೆ ಮೂಡಿಸುವ ಟೀಸರ್ ಬಿಡುಗಡೆಯಾಗಿದ್ದು, ಡಾಲಿ ಧನಂಜಯ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆಪರೇಷನ್ ನಕ್ಷತ್ರ, ಲೈಫ್ ಸೂಪರ್, ಗ್ರಾಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿತ್ ಸೂರ್ಯ ಹೊಸ ಅವತಾರದೊಂದಿಗೆ ಕಾಣಸಿಗುತ್ತಿರುವ ಚಿತ್ರ ಇದಾಗಿದೆ. ನಾಯಕ ನಟನಾಗಿ ಮಾತ್ರವಲ್ಲದೆ ರೂಮ್ ಬಾಯ್ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಲಿಖಿತ್ ಸೂರ್ಯಗೆ ನಾಯಕಿಯಾಗಿ ನಟಿ ರಕ್ಷಾ ತೆರೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

    ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ಪದ್ಮಿನಿ ರಾಹುಲ್, ರೋಷನ್, ರಜನಿ, ವಿಕ್ಕಿ, ಯಶಾ ಒಳಗೊಂಡ ಕಲರ್ ಫುಲ್ ತಾರಾಬಳಗ ಚಿತ್ರದಲ್ಲಿದೆ. ಐಕಾನ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಧನಪಾಲ್ ನಾಯಕ್ ಕ್ಯಾಮೆರಾ ವರ್ಕ್ ಮಾಡಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾವನ್ನು ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

     

  • ಅಪ್ಪು ಅಮೋಘವಾದ ಕನಸಿನ ಪಯಣ ಹಂಚಿಕೊಂಡ ಪತ್ನಿ ಅಶ್ವಿನಿ

    ಅಪ್ಪು ಅಮೋಘವಾದ ಕನಸಿನ ಪಯಣ ಹಂಚಿಕೊಂಡ ಪತ್ನಿ ಅಶ್ವಿನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಡ್ರೀಮ್ ಪಾಜೆಕ್ಟ್ ಸಂಬಂಧಿಸಿದಂತೆ ಪೋಸ್ಟರ್‌ವೊಂದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಶೇರ್ ಮಾಡಿಕೊಂಡಿದ್ದಾರೆ.

    ಪುನೀತ್ ಸಾವಿಗೂ ಮುನ್ನ ಅವರು ಅಭಿನಯಿಸಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಫಿಲ್ಮ್ ಅನ್ನು ದೊಡ್ಡದಾಗಿ ಅಭಿಮಾನಿಗಳ ಮುಂದೆ ಸ್ಕ್ರೀನ್ ಮೇಲೆ ತರುವ ಆಸೆ ಹೊಂದಿದ್ದರು. ಆದರೆ ದುರದೃಷ್ಟವಶಾತ್ ಪುನೀತ್ ಇಂದು ನಮ್ಮೊಂದಿಗೆ ಇಲ್ಲ. ಆದರೂ ಪುನೀತ್ ಆಸೆಯಂತೆ ಗಂಧದ ಗುಡಿ ಡಾಕ್ಯುಮೆಂಟರಿ ತೆರೆಕಾಣಲಿದೆ. ಇನ್ನೂ ಇದರ ಟೀಸರ್ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ

    ಈ ಕುರಿತಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‍ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪೋಸ್ಟರ್‌ನಲ್ಲಿ ದಟ್ಟ ಕಾಡಿನ ಮಧ್ಯೆ ಪುನೀತ್ ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

    ಪೋಸ್ಟರ್ ಜೊತೆಗೆ ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ ಎಂದು ಅಶ್ವಿನಿ ಪುನೀತ್ ಅವರು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಡಿಸೆಂಬರ್ 1ರಂದು ಪುನೀತ್ ರಾಜ್‍ಕುಮಾರ್ ಮತ್ತು ಅಶ್ವಿನಿ ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ, ದುರ್ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪುನೀತ್ ರಾಜ್‍ಕುಮಾರ್ ದಿಢೀರನೆ ತೆರಳಿಬಿಟ್ಟರು.

  • ನಟ ಕಮಲ್‌ ಹಾಸನ್‌ 67ನೇ ಬರ್ತ್‌ ಡೇ- ವಿಕ್ರಮ್‌ ಸಿನಿಮಾ ಟೀಸರ್‌ ರಿಲೀಸ್‌

    ನಟ ಕಮಲ್‌ ಹಾಸನ್‌ 67ನೇ ಬರ್ತ್‌ ಡೇ- ವಿಕ್ರಮ್‌ ಸಿನಿಮಾ ಟೀಸರ್‌ ರಿಲೀಸ್‌

    ಚೆನ್ನೈ: ಕಾಲಿವುಡ್‌ ಸೂಪರ್‌ಸ್ಟಾರ್‌ ನಟ ಕಮಲ್‌ ಹಾಸನ್‌ ಅವರು ಬರ್ತ್‌ ಡೇ ದಿನ (ನ.7) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಮಲ್‌ ಹಾಸನ್‌ ಅಭಿನಯದ ಬಹು ನಿರೀಕ್ಷಿತ “ವಿಕ್ರಮ್”‌ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಲಾಗಿದೆ.

    ನಟ ಕಮಲ್‌ ಹಾಸನ್‌ 67ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿನಯದ “ವಿಕ್ರಮ್‌” ಚಿತ್ರದ ಟೀಸರ್‌ ಫಸ್ಟ್‌ ಲುಕ್‌ ಅನ್ನು ನಿರ್ದೇಶಕ ಲೋಕೇಶ್‌ ಕನಗರಾಜ್‌ ಹಾಗೂ ಚಿತ್ರ ತಂಡ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?

    ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ವಿಕ್ರಮ್‌ ಚಿತ್ರದ ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಜೈಲಿನಲ್ಲಿ ಪೊಲೀಸರಿಂದ ಎದುರಾಗುವ ಗುಂಡಿನ ಸುರಿಮಳೆಯನ್ನು ಕಬ್ಬಿಣದ ಶೀಲ್ಡ್‌ನಿಂದ ಕಮಲ್‌ ಹಾಸನ್‌ ತಡೆಯುವ ದೃಶ್ಯಾವಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಒಂದೇ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಂದಿ ನೇತ್ರದಾನ

    ಈ ಸಿನಿಮಾಗೆ ಅನಿರುದ್ಧ್‌ ಮತ್ತು ಗಿರೀಶ್‌ ಗಂಗಾಧರನ್‌ ಛಾಯಾಗ್ರಹಣ, ಫಿಲೋಮಿನ್‌ ರಾಜ್‌ ಸಂಕಲನ ಮಾಡಿದ್ದಾರೆ.

  • ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್

    ವಿಕ್ರಾಂತ್ ರೋಣ ‘ಡೆಡ್ ಮ್ಯಾನ್ ಆಂಥೆಮ್’ ಔಟ್- ಸ್ಟೈಲಿಶ್ ಲುಕ್‍ನಲ್ಲಿ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ ಅಭಿಮಾನಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ಇದನ್ನೂ ಓದಿ: ಅಭಿನಯ ಚಕ್ರವರ್ತಿಗೆ 50ನೇ ಹುಟ್ಟುಹಬ್ಬದ ಸಂಭ್ರಮ

    sudeep

    ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರತಂಡ ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಾಂತ್ ರೋಣ ಸಿನಿಮಾದ ಡೆಡ್ ಮ್ಯಾನ್ ಆಂಥೆಮ್ ಎಂಬ ಟೀಸರ್‌ನನ್ನು ಬಿಡುಗಡೆಗೊಳಿಸಿ ಅಭಿಮಾನಿಗಳ ಕೂತುಹಲವನ್ನು ಮತ್ತಷ್ಟು ಕೆರಳಿಸಿದೆ.

    sudeep

    ಈ ಟೀಸರ್‌ನನ್ನು ನಿರ್ದೇಶಕ ನಿರೂಪ್ ಭಂಡಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟೀಸರ್‍ನಲ್ಲಿ ಸುದೀಪ್ ಬ್ಲಾಕ್ ಕಲರ್ ಲಾಂಗ್ ಜಾಕೆಟ್ ಹಾಗೂ ಕ್ಯಾಪ್ ತೊಟ್ಟು ಮಳೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಕಿಚ್ಚ ಆ್ಯಕ್ಷನ್ ದೃಶ್ಯವಳಿಯಲ್ಲಿ ಕಾಣಿಸಿಕೊಂಡಿದ್ದು, ಟೀಸರ್ ನೋಡಲು ಸಖತ್ ಥ್ರಿಲಿಂಗ್ ಆಗಿದೆ. ಇದನ್ನೂ ಓದಿ: ಚಂದನವನದಲ್ಲಿ ಸುದೀಪ್ ಸಿನಿ ಜರ್ನಿ

    ವಿಶೇಷವೆಂದರೆ ಈ ಟೀಸರ್‍ನನ್ನು ಚಿತ್ರತಂಡ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಇಂದೇ ಬಿಡುಗಡೆಗೊಳಿಸಿದೆ. ಒಟ್ಟಾರೆ ವಿಕ್ರಾಂತ್ ರೋಣ ಟೀಸರ್ ಸಖತ್ ರಿಚ್ ಆಗಿ ಮೂಡಿಬಂದಿದ್ದು, ಸಿನಿಮಾ ಹೇಗಿರಲಿದೆ ಎಂದು ಮುಂದೆ ಕಾದು ನೋಡಬೇಕಾಗಿದೆ.