Tag: teaser

  • ಸಲಾರ್ ಟೀಸರ್: 100 ಮಿಲಿಯನ್ ವೀವ್ಸ್, ಆಗಸ್ಟ್‌ನಲ್ಲಿ ಟ್ರೈಲರ್ ರಿಲೀಸ್

    ಸಲಾರ್ ಟೀಸರ್: 100 ಮಿಲಿಯನ್ ವೀವ್ಸ್, ಆಗಸ್ಟ್‌ನಲ್ಲಿ ಟ್ರೈಲರ್ ರಿಲೀಸ್

    ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ (Salaar)  ಟೀಸರ್ ಮೊನ್ನೆ  ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ 12 ಮಿಲಿಯನ್ ವೀಕ್ಷಣೆಯಾಗಿತ್ತು. ಇದೀಗ ನೂರು ಮಿಲಿಯನ್ ವೀವ್ಸ್ ಆಗಿದ್ದು, ಆಗಸ್ಟ್ ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ.

    ‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ನಿರ್ದೇಶಿಸಿರುವ ‘ಸಲಾರ್’ ಚಿತ್ರವು ಆರಂಭದಿಂದಲೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಪವರ್ ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ, ಹೊಸ ದಾಖಲೆಯನ್ನು ಬರೆಯುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.

    ‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.  ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್‌ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ.

    ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ  ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.

    ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.

    ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ.  ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ (Kiran Raj) ಈಗ ಹಿರಿತೆರೆಯಲ್ಲೂ ಬೇಡಿಕೆ ನಟ. ಪ್ರಸ್ತುತ ಕಿರಣ್ ರಾಜ್ ಅಭಿನಯದ ರಾನಿ (Rani) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕಿರಣ್ ರಾಜ್ ಹುಟ್ಟುಹಬ್ಬದಂದು (Birthday) ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ವೀಕ್ಷಣೆಯಾಗಿ, ನೋಡುಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮಾಗಡಿ ರಸ್ತೆಯ ವಿಕ್ಟರಿ ಸಿನಿಮಾದಲ್ಲಿ ಅದ್ದೂರಿಯಾಗಿ ಟೀಸರ್ (Teaser) ಬಿಡುಗಡೆ ಸಮಾರಂಭ ಹಾಗೂ ಕಿರಣ್ ರಾಜ್ ಹುಟ್ಟುಹಬ್ಬ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು.

    ಅಭಿಮಾನಿಗಳ ಪ್ರೀತಿಗೆ ಮನ ತುಂಬಿ ಬಂದಿದೆ ಎಂದು ಮಾತು ಪ್ರಾರಂಭಿಸಿದ ಕಿರಣ್ ರಾಜ್, ‘ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರ ಋಣಿ. ರಾನಿ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಗುರುತೇಜ್ ಶೆಟ್ಟಿ (Gurutej Shetty) ವಿಭಿನ್ನ ಕಥೆ ಮಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ’ ಎಂದರು.

    ನಾನು ಚಿತ್ರರಂಗದಿಂದ ದೂರ ಉಳಿದಿದ್ದ ಸಮಯದಲ್ಲಿ ಮಿತ್ರ ಗಿರೀಶ್ ಹೆಗಡೆ, ನಿರ್ಮಾಪಕ ಉಮೇಶ್ ಹೆಗಡೆ ಅವರನ್ನು ಪರಿಚಯಿಸಿದರು. ಉಮೇಶ್ ಹೆಗಡೆ ಹಾಗೂ ಚಂದ್ರಕಾಂತ್ ಪೂಜಾರಿ ಅವರು ಈ ಚಿತ್ರದ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ನಾಯಕ ಕಿರಣ್ ರಾಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ನಟನೆಗಷ್ಟೇ ಸೀಮಿತವಾಗದೆ, ನನ್ನ ಜೊತೆ ಪ್ರತಿಯೊಂದು ಕೆಲಸದಲ್ಲೂ ಭಾಗಿಯಾಗಿದ್ದಾರೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿರುವುದಷ್ಟೇ ಅಲ್ಲದೇ, ಟೀಸರ್ ಗೆ ಧ್ವನಿ ಸಹ ನೀಡಿದ್ದಾರೆ. ರಾಘವೇಂದ್ರ ಬಿ ಕೋಲಾರ್ ಛಾಯಾಗ್ರಹಣ, ಸತೀಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ‌. ಚಿತ್ರೀಕರಣ ಮುಕ್ತಾಯವಾಗಿದೆ.

    ನಿರ್ಮಾಣದ ಬಗ್ಗೆ ಚಂದ್ರಕಾಂತ್ ಪೂಜಾರಿ – ಉಮೇಶ್ ಹೆಗಡೆ, ಹಾಡುಗಳ ಬಗ್ಗೆ ಮಣಿಕಾಂತ್ ಕದ್ರಿ ಹಾಗೂ ತಮ್ಮ ಪಾತ್ರದ ಬಗ್ಗೆ ನಾಯಕಿಯರಾದ ಸಮೀಕ್ಷ, ಅಪೂರ್ವ, ರಾಧ್ಯ ಮಾತನಾಡಿದರು. ಛಾಯಾಗ್ರಾಹಕ ರಾಘವೇಂದ್ರ ಬಿ ಕೋಲಾರ್ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಲಾರ್’ ಟೀಸರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ 12 ಮಿಲಿಯನ್ ವೀಕ್ಷಣೆ

    ‘ಸಲಾರ್’ ಟೀಸರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ 12 ಮಿಲಿಯನ್ ವೀಕ್ಷಣೆ

    ಹೊಂಬಾಳೆ ಫಿಲಂಸ್ ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ, ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವಂತಹ ಪ್ಯಾನ್ ಚಿತ್ರವಾದ ‘ಸಲಾರ್ ಪಾರ್ಟ್ 1: ಸೀಸ್ ಫೈರ್ (Salaar)  ಟೀಸರ್ ಇಂದು ಮುಂಜಾನೆ  ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ 12 ಮಿಲಿಯನ್ ವೀಕ್ಷಣೆಯಾಗಿದೆ. ಈ ಮೂಲಕ ಟೀಸರ್ ಟ್ರೆಂಡಿಂಗ್ ನಲ್ಲಿದೆ.

    ‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದಲ್ಲಿ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ನಿರ್ದೇಶಿಸಿರುವ ‘ಸಲಾರ್’ ಚಿತ್ರವು ಆರಂಭದಿಂದಲೂ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಕ್ಷನ್ ದೃಶ್ಯಗಳು ಮತ್ತು ಪವರ್ ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ, ಹೊಸ ದಾಖಲೆಯನ್ನು ಬರೆಯುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.

    ‘ಕೆಜಿಎಫ್’ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ ‘ಸಲಾರ್’ ಮೂಲಕ ಇನ್ನೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.  ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಕಂಡುಕೇಳರಿಯದ ಪ್ರಮಾಣದಲ್ಲಿ ಈ ಚಿತ್ರವು ನಿರ್ಮಾಣವಾಗುತ್ತಿದ್ದು, ಹೈದರಾಬಾದ್‌ ನ ರಾಮೋಜಿ ಫಿಲಂ ಸಿಟಿ ಬಳಿ 14 ಅದ್ಭುತ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವಿಜಯ್ ಕಿರಗಂದೂರು, ‘ಈ ಚಿತ್ರ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲ ಕಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ  ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ. ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಇವತ್ತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 28ಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ.

    ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಸಲಾರ್’ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲೊಂದು.

    ದೊಡ್ಡ ಕ್ಯಾನ್ವಾಸ್ ಅಷ್ಟೇ ಅಲ್ಲ, ದೊಡ್ಡ ತಾರಾಗಣವೂ ಇರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದು, ಮಿಕ್ಕಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ.  ‘ಕೆಜಿಎಫ್’ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಸಲಾರ್ ಪಾರ್ಟ್ 1: ಸೀಸ್ ಫೈರ್ ಚಿತ್ರವು ಸೆಪ್ಟೆಂಬರ್ 28ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ಅಭಿಮಾನಿಗಳ ನಿದ್ದೆಗೆಡಿಸಿದ ಪ್ರಶಾಂತ್ ನೀಲ್: ನಾಳೆ ಟೀಸರ್ ರಿಲೀಸ್

    ಪ್ರಭಾಸ್ ಅಭಿಮಾನಿಗಳ ನಿದ್ದೆಗೆಡಿಸಿದ ಪ್ರಶಾಂತ್ ನೀಲ್: ನಾಳೆ ಟೀಸರ್ ರಿಲೀಸ್

    ನಾಳೆ ಬೆಳಗ್ಗೆ 5.12ಕ್ಕೆ ಪ್ರಭಾಸ್ ನಟನೆಯ ‘ಸಲಾರ್’ (Salaar)  ಸಿನಿಮಾದ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ನಾಳೆ ಈ ಸಮಯವನ್ನು ಯಾಕೆ ನಿಗದಿ ಮಾಡಿದರೋ ಗೊತ್ತಿಲ್ಲ. ಆದರೆ, ಪ್ರಭಾಸ್ ಅಭಿಮಾನಿಗಳ ಮಾತ್ರ ನಿದ್ದೆ ಬಿಟ್ಟು ಟೀಸರ್ (Teaser) ಗಾಗಿ ಕಾಯುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದು ಟೀಸರ್ ನೋಡುವುದಕ್ಕಾಗಿ ಅಭಿಮಾನಿಗಳು ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ.

    ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಲು ಸಾಮಾನ್ಯವಾಗಿ ಸಾಯಂಕಾಲದ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಥವಾ ಬೆಳಗ್ಗೆ ಹತ್ತು ಗಂಟೆಯ ನಂತರ ಫಿಕ್ಸ್ ಮಾಡುತ್ತಾರೆ. ಆದರೆ, ಸಲಾರ್ ಟೀಮ್ ಕೋಳಿ ಕೂಗುವ ಮುನ್ನ ವೇಳೆ ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಅದು ತಿಳಿಸಿಲ್ಲ. ಹಾಗಾಗಿ ಪ್ರಭಾಸ್ (Prabhas) ಅಭಿಮಾನಿಗಳು ವೇಳೆಯ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ.

    ಸಲಾರ್ ಚಿತ್ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಆ ಎಲ್ಲಾ ಕುತೂಹಲಗಳಿಗೆ ಜುಲೈ 6ರ ಗುರುವಾರ ತೆರೆಬೀಳಲಿದೆ.

    ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films), ‘ಸಲಾರ್’ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.  ‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ‘ಗಣ’ ಟೀಸರ್ ರಿಲೀಸ್

    ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ‘ಗಣ’ ಟೀಸರ್ ರಿಲೀಸ್

    ಟ ಪ್ರಜ್ವಲ್ ದೇವರಾಜ್ (Prajwal Devaraj) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಕ್ಷಣದಲ್ಲಿ ಪ್ರಜ್ವಲ್ ನಾಯಕರಾಗಿ ನಟಿಸಿರುವ ‘ಗಣ’ (Gana) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಟ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟೀಸರ್ (Teaser) ಬಿಡುಗಡೆ ನಿಮಿತ್ತ ಆಯೋಜಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆಯಾಯಿತು. ಹಾಗಾಗಿ ಗಣ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ಪಾರ್ಥು (, Parthu),  ಸೋಶಿಯಲ್ ಮೀಡಿಯಾದಲ್ಲಿ ನಾನು ಪ್ರಜ್ವಲ್ ಅವರನ್ನು ಫಾಲೋ ಮಾಡುತ್ತಿದ್ದೆ‌. ಅದರಲ್ಲಿ ಪ್ರಜ್ವಲ್ ಅವರ ಅಭಿಮಾನಿಗಳು ಯಾವ ರೀತಿ ಚಿತ್ರ ನಿರೀಕ್ಷಿಸುತ್ತಿದ್ದರೊ, ಅದೇ ತರಹದ ಚಿತ್ರ ಮಾಡಿದ್ದೇವೆ. ಪ್ರಜ್ವಲ್ ದೇವರಾಜ್ ಅವರು ಈವರೆಗೂ ಮಾಡಿರದ ಪಾತ್ರ ಎನ್ನಬಹುದು. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದೆ. ಹರಿಪ್ರಾಸಾದ್ ಜಕ್ಕ (Hariprasad Jakka) ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ ಎಂದರು. ಇದನ್ನೂ ಓದಿ:ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಕೆಲಸ ಸಿನಿಮಾ ಮಾಡಬೇಕೆಂದು ಬಂದ ಪಾರ್ಥು ಅವರಿಗೆ ಅಭಿನಂದನೆ ತಿಳಿಸಿ ಗಣ ಚಿತ್ರದ ಬಗ್ಗೆ ಮಾತು ಆರಂಭಿಸಿದ ಪ್ರಜ್ವಲ್ ದೇವರಾಜ್, ಗಣ ನಾನು ಈವರೆಗೂ ಮಾಡಿರುವ ಚಿತ್ರಗಳಲ್ಲೇ ಬೇಗ ಮುಗಿದಿರುವ ಚಿತ್ರ ಹಾಗೂ ಡಿಫರೆಂಟ್ ಜಾನರ್ ನ ಚಿತ್ರ ಕೂಡ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಚಿತ್ರ ಎನ್ನಬಹುದು. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

    ಚಿತ್ರದಲ್ಲಿ ನಟಿಸಿರುವ ವೇದಿಕ, ಕೃಷಿ ತಾಪಂಡ, ಶಿವರಾಜ್ ಕೆ.ಆರ್ ಪೇಟೆ, ಮಾಸ್ಟರ್ ರಘುನಂದನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಹಕ ಜೈ ಆನಂದ್, ಕಲಾ ನಿರ್ದೇಶಕ ಸತೀಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ಗೋಪಿ ಅವರು ಗಣದ ಬಗ್ಗೆ ಮಾತನಾಡಿದರು. ಶ್ರೀನಿವಾಸ್ ಚಿಕ್ಕಬಳ್ಳಾಪುರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಲಾರ್’ ಚಿತ್ರದ ಟೀಸರ್ ರಿಲೀಸ್ ಬೆಳಗ್ಗೆ 5.12ಕ್ಕೆ ಏಕೆ?: ಪ್ರಭಾಸ್ ಫ್ಯಾನ್ಸ್ ಪ್ರಶ್ನೆ

    ‘ಸಲಾರ್’ ಚಿತ್ರದ ಟೀಸರ್ ರಿಲೀಸ್ ಬೆಳಗ್ಗೆ 5.12ಕ್ಕೆ ಏಕೆ?: ಪ್ರಭಾಸ್ ಫ್ಯಾನ್ಸ್ ಪ್ರಶ್ನೆ

    ತೀ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’ (Salaar) ದ ಟೀಸರ್ ರಿಲೀಸ್ ದಿನಾಂಕ ಮತ್ತು ವೇಳೆ ಫಿಕ್ಸ್ ಆಗಿದೆ. ಪ್ರಭಾಸ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ (Teaser) ಜುಲೈ 6 ರಂದು ಬಿಡುಗಡೆಯಾಗುತ್ತಿದೆ. ಅಂದು ಬೆಳಗ್ಗೆ 5.12ಕ್ಕೆ ಸಮಯ ನಿಗದಿಯಾಗಿದ್ದು, ಅಷ್ಟು ಬೆಳಗ್ಗೆ ರಿಲೀಸ್ ಏಕೆ ಎಂಬ ಪ್ರಶ್ನೆಯನ್ನು ಪ್ರಭಾಸ್ (Prabhas) ಅಭಿಮಾನಿಗಳು ಮಾಡುತ್ತಿದ್ದಾರೆ.

    ಟೀಸರ್ ಸೋಷಿಯಲ್ ಮೀಟಿಯಾದಲ್ಲಿ ಟ್ರೆಂಡಿಂಗ್ ಆಗಲು ಸಾಮಾನ್ಯವಾಗಿ ಸಾಯಂಕಾಲದ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಥವಾ ಬೆಳಗ್ಗೆ ಹತ್ತು ಗಂಟೆಯ ನಂತರ ಫಿಕ್ಸ್ ಮಾಡುತ್ತಾರೆ. ಆದರೆ, ಸಲಾರ್ ಟೀಮ್ ಕೋಳಿ ಕೂಗುವ ಮುನ್ನ ವೇಳೆ ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಅದು ತಿಳಿಸಿಲ್ಲ. ಹಾಗಾಗಿ ಪ್ರಭಾಸ್ ಅಭಿಮಾನಿಗಳು ವೇಳೆಯ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ.

    ಸಲಾರ್ ಚಿತ್ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಆ ಎಲ್ಲಾ ಕುತೂಹಲಗಳಿಗೆ ಜುಲೈ 6ರ ಗುರುವಾರ ತೆರೆಬೀಳಲಿದೆ. ಇದನ್ನೂ ಓದಿ:18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ

    ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films), ‘ಸಲಾರ್’ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್ ನಂತರ ಪ್ರಶಾಂತ್ ನೀಲ್ (Prashant Neel) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.  ‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸದ್ಯದಲ್ಲೇ ‘ಎವಿಡೆನ್ಸ್’ ಚಿತ್ರದ ಟೀಸರ್ : ರೋಬೊ ಖ್ಯಾತಿಯ ಗಣೇಶನ್ ನಾಯಕ

    ಸದ್ಯದಲ್ಲೇ ‘ಎವಿಡೆನ್ಸ್’ ಚಿತ್ರದ ಟೀಸರ್ : ರೋಬೊ ಖ್ಯಾತಿಯ ಗಣೇಶನ್ ನಾಯಕ

    ಶ್ರೀಧೃತಿ ಪ್ರೊಡಕ್ಷನ್ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್‌ಪ್ರಭು, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್ (ಚನ್ನಸಂದ್ರ) ಸೇರಿ ನಿರ್ಮಿಸುತ್ತಿರುವ ‘ಎವಿಡೆನ್ಸ್’ (Evidence) ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ  (Praveen Ramakrishna) ಆಕ್ಷನ್‌ ಕಟ್ ಹೇಳಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಚಿತ್ರದ ಟೀಸರ್ (Teaser) ಬಿಡುಗಡೆ ಮಾಡುವ  ಯೋಜನೆ ಚಿತ್ರತಂಡಕ್ಕಿದೆ. ಅಲ್ಲದೆ ಚಿತ್ರವನ್ನು ಆಗಸ್ಟ್ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ.

    ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.  ಸದ್ಯದಲ್ಲೇ ಸೆನ್ಸಾರ್ ಮನೆಗೆ ಹೋಗಲು ಅಣಿಯಾಗುತ್ತಿರುವ ‌ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು  ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ  ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕ್ಷಣ ಕ್ಷಣಕ್ಕೈ ಕುತೂಹಲ ಕೆರಳಿಸುವಂಥ, ಕೊನೆಯವರೆಗೂ ಸಸ್ಲೆನ್ಸ್ ಓಪನ್ ಆಗದಂಥ ಗಟ್ಟಿ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

    ಜೋಶ್ ಖ್ಯಾತಿಯ ರೋಬೊ ಗಣೇಶನ್ (Robo Ganeshan)ಚಿತ್ರದ ನಾಯಕನಾಗಿ ನಟಿಸಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ (Manasa Joshi) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಗಳಲ್ಲಿ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಪವನ್‌ಸುರೇಶ್, ಶಶಿಧರಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ, ಆರಾಧ್ಯ ಶಿವಕುಮಾರ್ ಮುಂತಾದವರು ನಟಿಸಿದ್ದಾರೆ.

    ಇನ್ನು  ಚಿತ್ರದಲ್ಲಿ 4 ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ್‌ ರಾಮಕೃಷ್ಣ ಹಾಗೂ ಕಾರ್ತೀಕ್  ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮಲ್ ನಟನೆಯ ‘ನಮೋ ಭೂತಾತ್ಮ 2’ ಚಿತ್ರದ ಟೀಸರ್ ರಿಲೀಸ್

    ಕೋಮಲ್ ನಟನೆಯ ‘ನಮೋ ಭೂತಾತ್ಮ 2’ ಚಿತ್ರದ ಟೀಸರ್ ರಿಲೀಸ್

    ಹಜ ಅಭಿನಯದ ಮೂಲಕ ಜನರ ಮನ ಗೆದ್ದಿರುವ ನಟ ಕೋಮಲ್ (Komal) ಕುಮಾರ್ ನಾಯಕರಾಗಿ ನಟಿಸಿರುವ ‘ನಮೋ ಭೂತಾತ್ಮ 2’ (Namo Bhutatma 2)  ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟ ಧ್ರುವ ಸರ್ಜಾ ಟೀಸರ್ (Teaser) ಬಿಡುಗಡೆ ಮಾಡಿದರು.

    ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ (Dhruva Sarja), ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಬಿಡುಗಡೆಗೂ ಕಾಯುತ್ತಿದ್ದೇನೆ. ಮುರಳಿ (Muruli) ಮಾಸ್ಟರ್ ಸಹ ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ನಮೋ ಭೂತಾತ್ಮ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು. ಇದನ್ನೂ ಓದಿ:ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್

    ನಾನು ನಿರ್ಮಿಸಿ, ನಟಿಸಿದ್ದ, ಮುರಳಿ ಮಾಸ್ಟರ್ ನಿರ್ದೇಶಿಸಿದ್ದ ನಮೋ ಭೂತಾತ್ಮ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ ಈ ನಮೋ  ಭೂತಾತ್ಮ 2 ಚಿತ್ರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿದೆ‌. ಮೊದಲಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು.

    2014ರಲ್ಲಿ ನನಗೆ ಕೋಮಲ್ ಅವರು ನಮೋ ಭೂತಾತ್ಮ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ ನಮೋ ಭೂತಾತ್ಮ 2 ಚಿತ್ರದಲ್ಲಿ ಅವರ ಜೊತೆ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೋನ ಸಮಯದಲ್ಲೇ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡಿದ್ದೆ. ಆನಂತರ ಕೋಮಲ್ ಅವರಿಗೆ ನಾನು ಹಾಗೂ ಸಂತೋಷ್ ಹೋಗಿ ಈ ಚಿತ್ರದ ಕಥೆ ಹೇಳಿದ್ದೆವು. ಕೋಮಲ್ ಅವರು ನಟಿಸಲು ಒಪ್ಪಿದರು. ಚಿತ್ರಕ್ಕೆ ನಮೋ ಭೂತಾತ್ಮ 2 ಎಂದು ಹೆಸರಿಟ್ಟೆವು. ನನ್ನ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಮುರಳಿ. ನಾಯಕಿ ಲೇಖಾ ಚಂದ್ರ, ಚಿತ್ರದಲ್ಲಿ ನಟಿಸಿರುವ ಜಿ.ಜಿ, ಮೋನಿಕಾ, ವರುಣ್ ರಾಜ್ ಹಾಗೂ ಚಿತ್ರದ ನಿರ್ಮಾಪಕ ಸಂತೋಷ್ ಶೇಖರ್ ಚಿತ್ರದ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮಾಂಕ್ ದಿ ಯಂಗ್’ ಚಿತ್ರದ ಟೀಸರ್ ರಿಲೀಸ್

    ‘ಮಾಂಕ್ ದಿ ಯಂಗ್’ ಚಿತ್ರದ ಟೀಸರ್ ರಿಲೀಸ್

    ನ್ನಡ ಚಿತ್ರರಂಗದಲ್ಲೀಗ ಹೊಸಬರ ಹೊಸಪ್ರಯತ್ನಕ್ಕೆ ನೋಡುಗರ ಬೆಂಬಲ ಸಿಗುತ್ತಿದೆ.  ‘ಮಾಂಕ್ ದಿ ಯಂಗ್’ (Monk The Young) ಚಿತ್ರ ಕೂಡ ಹೊಸ ಕಥೆಯೊಂದಿಗೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ (Teaser) ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ನಟ ಪ್ರಥಮ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು‌. ಚಿತ್ರದಲ್ಲಿ ನಟಿಸಿರುವ ಪ್ರಣಯಮೂರ್ತಿ (Pranayamurthy) ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಮಾಂಕ್ ದಿ ಯಂಗ್ ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತಿಮ ಹಂತದಲ್ಲಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನನ್ನ ಧನ್ಯವಾದ. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದಂತಹ ಚಿತ್ರ ಮಾಡಿದ್ದೇವೆ.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ. ಇದನ್ನೂ ಓದಿ:ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ

    ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ (Maschit Surya), ನನ್ನನ್ನು ಈ ಚಿತ್ರದಲ್ಲಿ ಅಭಿನಯಿಸಲು ಕಥೆ ಹೇಳುವುದಕ್ಕೆ ಕರೆದಿದ್ದರು. ಕಥೆ ಚೆನ್ನಾಗಿತ್ತು. ನಟನೆಗೆ ಹೋದ ನಾನು ನಿರ್ಮಾಪಕನಾದೆ. ನನ್ನೊಂದಿಗೆ ನನ್ನ ಸ್ನೇಹಿತರು ನಿರ್ಮಾಣಕ್ಕೆ ಜೊತೆಯಾದರು. ಇಂದು ಟೀಸರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಾನು ಸೇರಿದಂತೆ ಐದು ಜನ ನಿರ್ಮಾಪಕರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ನಿರ್ಮಾಪಕರಲ್ಲೊಬ್ಬರಾದ  ರಾಜೇಂದ್ರನ್ ಹೇಳಿದರು. ನಿರ್ಮಾಪಕರಾದ ವಿನಯ್ ಬಾಬು ರೆಡ್ಡಿ, ಗೋಪಿಚಂದ್, ಲಾಲ್ ಚಂದ್ ಸಹ ಚಿತ್ರದ ಕುರಿತು ಮಾತನಾಡಿದರು.

    ನಾವು ಸೀಮಿತವಾದ ಜೀವನ ನಡೆಸುತ್ತಿರುತ್ತೇವೆ. ಆದರೆ ಅದರ ಆಚೆ ಬಂದು ನೋಡಿದಾಗ ಬೇರೆ ಜೀವನ ಇದೆ. ಹಾಗೆ ನಮ್ಮ ಚಿತ್ರ ಕೂಡ. ಮಾಮೂಲಿ ಜಾನರ್‌ ಗಿಂತ ಸ್ವಲ್ಪ ಭಿನ್ನವಾದ ಚಿತ್ರ ಎನ್ನಬಹುದು. ‌ನಾನು ಹಾಗೂ ಮಾಸ್ಚಿತ್ ಸೂರ್ಯ ಮೊದಲು ಸಣ್ಣದಾಗಿ ಈ ಚಿತ್ರ ಆರಂಭ ಮಾಡಿದ್ದೆವು. ಆನಂತರ ನಾಲ್ಕು ಜನ ನಿರ್ಮಾಪಕರು ಜೊತೆಯಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ಹಾಗೆ ನಾಯಕ ಕೂಡ. ನೋಡುಗರು ನಮ್ಮ ಚಿತ್ರವನ್ನು ಮೆಚ್ಚಿಕೊಳ್ಳುವ ಭರವಸೆಯಿದೆ ಎಂದು ಸರೋವರ್ ತಿಳಿಸಿದರು.  ನಾಯಕಿ ಸೌಂದರ್ಯ ಗೌಡ, ಸಂಕಲನಕಾರ ಧನುಷ್ ಎಲ್ ಬೇದ್ರೆ, ಹಿನ್ನೆಲೆ ಸಂಗೀತ ನೀಡಿರುವ  ಸ್ವಾಮಿನಾಥನ್ ಹಾಗೂ ವಿ ಎಫ್ ಎಕ್ಸ್ ಮಾಡಿರುವ ಜಯೇಂದ್ರ ವಾಕ್ವಾಡಿ ಚಿತ್ರದ ಕುರಿತು ಮಾತನಾಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಇಂದು ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ನಟನೆಯ ಟೀಸರ್ ರಿಲೀಸ್

    ಇಂದು ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ನಟನೆಯ ಟೀಸರ್ ರಿಲೀಸ್

    ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಅವರ ಸಹೋದರಿಯ ಪುತ್ರ ಸಂಚಿತ್ (Sanchit Sanjeev) ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾದ ಟೀಸರ್ (Teaser) ಇಂದು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತಿದೆ. ಈ ವರ್ಣರಂಜಿತ ಸಮಾರಂಭಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ 7ಕ್ಕೆ ಟೀಸರ್ ಬಿಡುಗಡೆ ಆಗಲಿದೆ.

    ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ರೀಕಾಂತ್ ಮಾಹಿತಿ ನೀಡಿದ್ದರು. ಸಂಚಿತ್ ಸಿನಿಮಾ ಬಗ್ಗೆ ಅಧಿಕೃತವಾಗಿ ಜೂನ್ 14ರಂದು ಘೋಷಣೆ ಮಾಡಿದ್ದರು.

    ತಮ್ಮ ಮೊದಲ ಸಿನಿಮಾದಲ್ಲೇ ನಟನೆಯ ಜೊತೆ ನಿರ್ದೇಶನ (Direction) ಕೂಡ ಸಂಚಿತ್ ಮಾಡ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಯುವನಟ ಸಂಚಿತ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೊಂದು ಕ್ರೈಂ ಡ್ರಾಮಾ ಆಧರಿಸಿದ ಸಿನಿಮಾವಾಗಿದ್ದು, ತಂದೆ-ಮಗನ ಬಾಂಧವ್ಯವನ್ನು ಸಾರುವ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಲಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್‌ನ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯ ‘ಯುಐ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಮರುಜೀವ ಕೊಟ್ಟಿದ್ದಾರೆ. ನಂತರ ಸಂಚಿತ್ ನಟನೆಯ ಚಿತ್ರಕ್ಕೆ ಈ ಜೋಡಿ ಬಂಡವಾಳ ಹೂಡಿದೆ.

    ಸಂಚಿತ್ ಸಂಜೀವ್ ನಿರ್ದೇಶನ ಹಾಗೂ ನಾಯಕನಾದ ಜಿಮ್ಮಿ (Jimmy) ಚಿತ್ರದ ಟೀಸರ್ ಇಂದು ಅನಾವರಣವಾಗಲಿದೆ. ಇದಾದ ಎರಡು ದಿನಕ್ಕೆ ಕಿಚ್ಚ 46 ಧಗಧಗಿಸಲಿದೆ. ಆ ದಿನವೇ ಕಿಚ್ಚನ ಹೊಸ ಸಿನಿಮಾದ ವಿವರಗಳು ಹೊರ ಬೀಳಲಿವೆ. ಟೈಟಲ್ ಹೇಳ್ತಾರಾ? ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ? ಟೀಸರ್ ಬಿಡ್ತಾರಾ? ಯಾವುದೂ ಗೊತ್ತಿಲ್ಲ. ಏನಾದರಾಗಲಿ. ಕೊನೆಗೂ ಸುದೀಪ್ ಮತ್ತೆ ಅಖಾಡಕ್ಕೆ ಇಳಿದರಲ್ಲ ಅಷ್ಟು ಸಾಕು ಅಂತಿದ್ದಾರೆ ಅಭಿಮಾನಿ ಬಳಗ.

    ಸುದೀಪ್ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ನಲವತ್ತಾರನೇ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡಲು ಒಂದು ದಿನಾಂಕ ಫೀಕ್ಸ್ ಮಾಡಿದ್ದಾರೆ. ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವ ಕಿಚ್ಚ ಮೊದಲಿಗೆ ಇದಕ್ಕೆ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ. ಯಾವುದು ಸಿನಿಮಾ ? ರಿಲೀಸ್ ಯಾವಾಗ ? ಟೈಟಲ್ ಏನು ? ಕಿಚ್ಚನ ಮೆರವಣಿಗೆ ಇಲ್ಲಿದೆ..

    ವಿಕ್ರಾಂತ್ ರೋಣ. ಅದೇ ಕೊನೆ. ಮತ್ತೆ ಬಣ್ಣ ಹಚ್ಚಿಲ್ಲ ಸುದೀಪ್. ಅದು ಬಿಟ್ಟು ಇದು ಬಿಟ್ಟು ಮತ್ಯಾವುದು? ಫ್ಯಾನ್ಸ್ ಪ್ರಶ್ನೆ ಕೇಳುತ್ತಿದ್ದರು. ಸುದೀಪ್ ಮಾತ್ರ ಮೌನಂ ಶರಣ ಗಚ್ಚಾಮಿ. ಕೆಲವು ದಿನಗಳ ಹಿಂದೆ ಕೊನೆಗೂ ಸಿನಿಮಾ ವಿಷಯ ಹರವಿಟ್ಟಿದ್ದರು. ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಮೊದಲಿಗೆ ನಟಿಸುವ ಸಿನಿಮಾದ ವಿವರ ಹೇಳುತ್ತೇನೆ ಎಂದಿದ್ದರು. ಅದಕ್ಕೀಗ ಡೇಟ್ ಫಿಕ್ಸ್ ಮಾಡಿದ್ದಾರೆ. ಇದೇ 27ರಂದು ಟ್ವೀಟರ್‌ನಲ್ಲಿ ಸಕಲ ಮಾಹಿತಿ ಕೊಡಲಿದ್ದಾರೆ.