Tag: Tears

  • ಮಹಿಳೆಯ ಕಣ್ಣೀರು ಒರೆಸಿದ್ರು ನಿಖಿಲ್ ಕುಮಾರಸ್ವಾಮಿ!

    ಮಹಿಳೆಯ ಕಣ್ಣೀರು ಒರೆಸಿದ್ರು ನಿಖಿಲ್ ಕುಮಾರಸ್ವಾಮಿ!

    ಮಂಡ್ಯ: ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ನಿಖಿಲ್, ಮಹಿಳೆಯೊಬ್ಬರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ, ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದ್ದಾರೆ. ಆತಗೂರು ಗ್ರಾಮದಲ್ಲಿ ಪದ್ಮಮ್ಮ ಎಂಬವರು, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ನಿಖಿಲ್ ಮುಂದೆ ಕಣ್ಣೀರು ಹಾಕಿದ್ದಾರೆ. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದಾರೆ.

    ನಾನು ನಿಮ್ಮ ಋಣ ತೀರಿಸಲು ಈ ರೀತಿ ಮಾಡುತ್ತಿದ್ದೇನೆ. ಲೋಕಸಭಾ ಸದಸ್ಯನಾಗಿ ಮೆರೆಸುವುದಕ್ಕೆ ನನ್ನ ತಂದೆ ಮಾಡುತ್ತಿಲ್ಲ. ನನ್ನ ಸ್ವಾರ್ಥಕ್ಕೆ ನಾನು ಬರುತ್ತಿಲ್ಲ. ನನಗೆ ಒಂದು ಅವಕಾಶ ಕೊಡಿ. ನೀವು ಮತದಾನ ಪ್ರಭುಗಳು. ನೀವು ಏನೂ ಬೇಕಾದರೂ ಕೇಳುವ ಹಕ್ಕು ನಿಮಗಿದೆ. ನಾನು ನಿಮ್ಮ ಮನೆ ಮಗ. ಕುಮಾರಸ್ವಾಮಿ ಹಾಗೂ ದೇವೇಗೌಡರು ನಿಮ್ಮ ಪರವಾಗಿ ನಿಂತಿದ್ದಾರಾ ಅಥವಾ ಬೇರೆ ವ್ಯಾಮೋಹಕ್ಕೆ ಒಳಗಾಗಿದ್ದಾರಾಂತ ನೀವೇ ಯೋಚಿಸಿ ಎಂದು ಹೇಳಿದ್ದಾರೆ.

    ನಿಖಿಲ್ ಇಂದು ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು, ತೊರೆಶೆಟ್ಟಹಳ್ಳಿ, ಕೆಸ್ತೂರು, ದುಂಡನಹಳ್ಳಿ, ದೊಡ್ಡ ಅಂಕನಹಳ್ಳಿಯಲ್ಲಿ ಅಬ್ಬರದ ಪ್ರಚಾರ ಹಾಗೂ ರೋಡ್‍ಶೋ ನಡೆಸುತ್ತಿದ್ದಾರೆ. ಈ ವೇಳೆ ನಿಖಿಲ್‍ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿ ಸ್ಥಳೀಯ ಜೆಡಿಎಸ್ ನಾಯಕರು ಸಾಥ್ ನೀಡಿದ್ದಾರೆ.

  • ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಮಂಡ್ಯ: ಹುತಾತ್ಮ ಗುರು ಅವರ ಮನೆಗೆ ರಾಜಕಾರಣಿಗಳು, ಅಧಿಕಾರಿಗಳು, ಸೇನೆ ಅವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈಗ ‘ಬೆಲ್ ಬಾಟಮ್’ ಚಿತ್ರ ತಂಡ ಗುರು ಅವರ ಮನೆಗೆ ಹೋಗಿ ಸಹಾಯ ಧನ ನೀಡಿ ಅವರ ತಾಯಿ, ಪತ್ನಿಗೆ ಸಾಂತ್ವನ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಹರಿಪ್ರಿಯಾ, ಸಿನಿಮಾ ಮಾಡುವಾಗ ಗಡಿಯನ್ನು ನೋಡಿದ್ದೇನೆ. ನಮ್ಮನ್ನು ಕಾಯುವವರು ಅಗಲಿದಾಗ ನೋವಾಗುತ್ತದೆ. ನಾವು ಉಗ್ರರಿಗೆ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿಯನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಕಾಶ್ಮೀರ ಭಾಗದಲ್ಲಿ ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯ ಪಟ್ಟಿದ್ದರು. ಇನ್ನೂ ದೇಶ ಕಾಯುವ ಯೋಧರ ತಾಯಿಯರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದರು.

    ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆಪಿಸಿಕೊಂಡು ಹರಿಪ್ರಿಯಾ ಕಣ್ಣೀರು ಹಾಕಿದ್ದಾರೆ. ಒಂದು ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರು ನೋವಾಗುತ್ತದೆ. ಆ ನೋವು ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದೆ. ಆದರೆ ಯೋಧ ಗುರು ಅವರ ಪತ್ನಿ, ತಾಯಿ ನೋಡಿದರೆ ತುಂಬಾ ನೋವಾಗುತ್ತದೆ. ಇಡೀ ಭಾರತ, ಇಂತಹ ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್. ನಾವೆಲ್ಲ ಅವರ ಮಕ್ಕಳು ಎಂಬಂತೆ ಹುತಾತ್ಮ ಯೋಧನ ಕುಟುಂಬದ ಜೊತೆ ಇರಬೇಕು. ಆದರೂ ನಮ್ಮಿಂದ ಅವರ ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಧೈರ್ಯ ಇದ್ದಿದ್ದರೆ ಉಗ್ರರು ನೇರವಾಗಿ ಬಂದು ಹೊಡೆದಾಡಬೇಕಿತ್ತು. ಈ ರೀತಿ ಹೇಡಿಗಳಾಗಿ ಬಂದು ಕೊಲ್ಲುವುದು ಸರಿಯಲ್ಲ. ಇದಕ್ಕೆ ಆದಷ್ಟು ಬೇಗ ಉತ್ತರ ಕೊಟ್ಟರೆ ದೇಶ ಜನ ಖುಷಿಯಾಗುತ್ತಾರೆ. ದೇಶ ಸೇವೆಯಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯರಿಗೆ ಖುಷಿ ಆಗುತ್ತದೆ. ಕೊನೆಯ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರ ಆತ್ಮಕ್ಕೆ ಒಂದು ಸಮಾಧಾನ ಸಿಗುತ್ತದೆ. ನಮ್ಮ ದೇಶದ ಅನ್ನ ತಿಂದು, ನಮ್ಮ ನೆಲದಲ್ಲಿ ಇದ್ದುಕೊಂಡು, ಬೇರೆ ಅವರಿಗೆ ಸಹಾಯ ಮಾಡುತ್ತಾರೆ. ಅಂತಹವರು ಯಾಕಿಲ್ಲಿರಬೇಕು? ಇಲ್ಲಿ ಇರುವುದಕ್ಕೆ ಅವರು ಅರ್ಹರೇ ಅಲ್ಲ. ಮೊದಲು ಅವರನ್ನು ದೇಶದಿಂದ ಹೊರ ಹಾಕಬೇಕು ಎಂದು ಉಗ್ರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ನಿರ್ದೆಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಸೇರಿದಂತೆ ಸಿನಿಮಾದ ಕಲಾವಿದರು ಗುರು ಅವರ ಮನೆಗೆ ಹೋಗಿದ್ದರು. ಯೋಧ ಗುರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ವಿತರಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ತುಮಕೂರು: ಕೋಟಿ ಕೋಟಿ ಭಕ್ತರನ್ನು ಹೊಂದಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಇಂದು ಶಿವೈಕ್ಯರಾಗಿದ್ದಾರೆ. ಇದೀಗ ನಡೆದಾಡುವ ದೇವರ ಅಗಲಿಕೆಯನ್ನು ಸಹಿಸಿಕೊಳ್ಳಲಾಗದೇ ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದಾರೆ.

    ಇಂದು ಬೆಳಗ್ಗೆ 11.44ರ ಸುಮಾರಿಗೆ ಶ್ರೀಗಳು ಶಿವೈಕ್ಯವಾಗಿದ್ದರು. ಆದರೆ ಅವರು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು.

    ಹೀಗಾಗಿ ಇಂದು ಶ್ರೀಗಳು ಬೆಳಗ್ಗೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದಾರೆ. ಆದರೆ ಇಷ್ಟು ದಿನ ತಂದೆ, ತಾಯಿ, ಗುರು ಮತ್ತು ದೇವರಾಗಿದ್ದ ಶ್ರೀಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

    ಇತ್ತ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದು, ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡು ಕಣ್ಣೀರಿಡುತ್ತಿದ್ದಾರೆ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

    ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

    ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಪಾರ್ಥಿವ ಶರೀರ ಇಟ್ಟಿದ್ದ ಜಾಗದಲ್ಲಿ ಅಭಿಮಾನಿಯ ಗೋಳಾಟ

    ಅಂಬಿ ಪಾರ್ಥಿವ ಶರೀರ ಇಟ್ಟಿದ್ದ ಜಾಗದಲ್ಲಿ ಅಭಿಮಾನಿಯ ಗೋಳಾಟ

    ಮಂಡ್ಯ: ಅಭಿಮಾನಿಯೊಬ್ಬರು ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರ ಇದ್ದ ಸ್ಥಳದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುವ ಮೂಲಕ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾರೆ.

    ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆಯವರೆಗೆ ಅಂಬಿ ಪಾರ್ಥಿವ ಶರೀರವನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಇಂದು ಬೆಳಗ್ಗೆ 10.53ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್‍ಎಎಲ್‍ಗೆ ತಂದು ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಅಂಬುಲೆನ್ಸ್ ಮೂಲಕ ತರಲಾಗಿದೆ.

    ಅಂಬರೀಶ್ ಪಾರ್ಥಿವ ಶರೀರ ಮಂಡ್ಯದಿಂದ ನಿರ್ಗಮಿಸಿದ ಬಳಿಕ ಅಭಿಮಾನಿಯೊಬ್ಬರು ಪಾರ್ಥಿವ ಶರೀರ ಇಟ್ಟಿದ್ದ ಸ್ಥಳದಲ್ಲಿ ಕುಳಿತು ಗೋಳಾಡಿದ್ದಾರೆ.

    ಅಂಬಿ ಪಾರ್ಥಿವ ಶರೀರ ಇಟ್ಟ ಜಾಗದಲ್ಲಿ ಕುಳಿತು, ಇಲ್ಲಿಂದ ನಾನು ಹೋಗಲ್ಲ. ನೀವಿಲ್ಲದೇ ನಾವಿರಲು ಸಾಧ್ಯವಿಲ್ಲ. ನಾನು ನಿಮ್ಮೊಂದಿಗೆ ಬರುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಅಭಿಮಾನಿಯ ಮನವೊಲಿಸಿ ಕರೆದುಕೊಂಡು ಹೋಗಲು ಹರಸಾಹಸ ಪಟ್ಟಿದ್ದಾರೆ.

    ಭಾನುವಾರ ಸಂಜೆಯಿಂದ ಮಂಡ್ಯ ಜಿಲ್ಲೆಯ ಲಕ್ಷಾಂತರ ಮಂದಿ ಅಂಬರೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವ ವೇಳೆ ಮಂಡ್ಯ ಜನತೆ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸಿದ್ದಾರೆ. ಸತತ 18 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಮಯದಲ್ಲಿ ಒಂದು ಅಹಿತಕರ ಘಟನೆಯೂ ನಡೆಯದೇ ಸೂಸುತ್ರವಾಗಿ ಕಾರ್ಯ ನಡೆದಿದೆ.

    https://www.youtube.com/watch?v=EdRmEJPlhQ8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿ ಜಯಶ್ರೀ, ಸೋನು ಕಣ್ಣೀರು

    ಬಿಗ್ ಮನೆಯಲ್ಲಿ ಜಯಶ್ರೀ, ಸೋನು ಕಣ್ಣೀರು

    ಬೆಂಗಳೂರು: ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಆಂಡ್ರ್ಯೂ ಅಲಿಯಾಸ್ ಆ್ಯಂಡಿ ವಿನಾಕಾರಣ ಇಬ್ಬರ ತಲೆ ಮೇಲೆ ಮೊಟ್ಟೆ ಹೊಡೆದಿದ್ದು, ಪರಿಣಾಮ ಸ್ಪರ್ಧಿಗಳಾದ ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ.

    ಬಿಗ್ ಬಾಸ್ ಶುರುವಾದಗಿಂದಲೂ ಒಂದಲ್ಲ ಒಂದು ರೀತಿ ಆ್ಯಂಡಿ ಎಲ್ಲರಿಗೂ ಕಿತಾಪತಿ ಮಾಡುತ್ತಿದ್ದಾರೆ. ಜಯಶ್ರೀ ಮತ್ತು ಸೋನು ಪಾಟೀಲ್ ಸಸ್ಯಹಾರಿಗಳು. ಈ ಬಗ್ಗೆ ಆ್ಯಂಡಿಗೆ ತಿಳಿದಿದ್ದರೂ ಅವರನ್ನೇ ಟಾರ್ಗೆಟ್ ಮಾಡಿ ಮೊಟ್ಟೆ ಹೊಡೆದಿದ್ದಾರೆ. ಇದರಿಂದ ಜಯಶ್ರೀ ಮತ್ತು ಸೋನು ಅವರಿಗೆ ಬೇಸರವಾಗಿದ್ದು, ಗಳಗಳನೇ ಅತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯಂಡಿ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ‘ಮಗು ಆಗೋಣ ಬಾ’ ಟಾಸ್ಕ್
    ಬಿಗ್ ಬಾಸ್ ಮನೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳಿಗೆ ‘ಮಗು ಆಗೋಣ ಬಾ’ ಟಾಸ್ಕ್ ಕೊಟ್ಟಿತ್ತು. ಅಂದರೆ ಮತ್ತೆ ಮಕ್ಕಳಾಗುವ ಅವಕಾಶವನ್ನ ಕೊಟ್ಟಿತ್ತು. ಇದರ ಪ್ರಕಾರ ಪ್ರತಿ ಬಾರಿ ಟಿವಿ ಪರದೆ ಮೇಲೆ ಯಾರ ಭಾವಚಿತ್ರ ಬರುತ್ತದೋ, ಅವರು ಮಗುವಿನ ಹಾಗೆ ವರ್ತಿಸಬೇಕು. ಉಳಿದ ಸ್ಪರ್ಧಿಗಳು ಮಗುವಿನ ಲಾಲನೆ-ಪಾಲನೆ ಮಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಆಂಡ್ರ್ಯೂ ಮತ್ತು ಆಡಮ್ ಪಾಶಾ ಅವಳ-ಜವಳಿ ಮಕ್ಕಳ ಪಾತ್ರ ನಿಭಾಯಿಸಬೇಕಿತ್ತು.

    ಈ ವೇಳೆ ಆ್ಯಂಡಿ ನಾನು ಜೀವನದಲ್ಲಿ ತರ್ಲೆ ಮಾಡಲ್ಲ. ನನಗೆ ಇಬ್ಬರೂ ತುಂಬಾ ಇಷ್ಟ ಎಂದು ಹೇಳುತ್ತಾ ತನ್ನ ಜೇಬಿನಲ್ಲಿ ಇದ್ದ ಮೊಟ್ಟೆಗಳನ್ನ ತೆಗೆದುಕೊಂಡು ಸೋನು ಪಾಟೀಲ್ ಮತ್ತು ಜಯಶ್ರೀ ತಲೆ ಮೇಲೆ ಹೊಡೆದಿದ್ದಾರೆ. ಆದರೆ ಜಯಶ್ರೀ ಮತ್ತು ಸೋನು ಪಾಟೀಲ್ ಮೊಟ್ಟೆ ತಿನ್ನಲ್ಲ ಅಂತ ಆಂಡ್ರ್ಯೂಗೆ ಮೊದಲೇ ತಿಳಿದಿತ್ತು. ಆದರೂ ಅವರಿಗೆ ಮೊಟ್ಟೆ ಹೊಡೆದಿದ್ದಾರೆ.

    ಮೊಟ್ಟೆ ಹೊಡೆದಿದ್ದರಿಂದ ತಮ್ಮ ಭಾವನೆಗಳಿಗೆ ಧಕ್ಕೆ ಆದ ಪರಿಣಾಮ, ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ. ತಮ್ಮ ತಾಯಿ ಜೊತೆಗೂ ಆಂಡ್ರ್ಯೂ ಇದೇ ರೀತಿ ನಡೆದುಕೊಳ್ಳುತ್ತಾರಾ ಅಂತ ಜಯಶ್ರೀ ಅಳುತ್ತಾ ಪ್ರಶ್ನಿಸಿದ್ದಾರೆ.

    ಟಾಸ್ಕ್ ನಲ್ಲಿ ಮೊಟ್ಟೆ ಹೊಡೆಯಲು ಬಿಗ್ ಬಾಸ್ ಮೊನ್ನೆ ಹೇಳಿದ್ದರು. ಅದು ಅವಮಾನನಾ? ಸಸ್ಯಹಾರಿಗೆ ಮೊಟ್ಟೆ ಹೊಡೆಯಬೇಕಿತ್ತು ಅಂತ ನೀವೆಲ್ಲ ಹೇಳಿದ್ದೀರಿ. ಅದಕ್ಕೆ ಮಾಡಿದೆ, ಆದರೆ ಈಗ ಫನ್ ಆಗಿ ಮಾಡಿದ್ದನ್ನ, ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಆಂಡ್ರ್ಯೂ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಬಳಿಕ ಸೋನು ಪಾಟೀಲ್ ಮತ್ತು ಜಯಶ್ರೀಗೆ ನೇರವಾಗಿ ಕ್ಷಮೆ ಕೇಳುವ ಬದಲು ಲಿಖಿತ ರೂಪದಲ್ಲಿ ಬರೆದು ಕ್ಷಮೆ ಕೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು.

    ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ್ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು.

    ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.

    ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ತಿಂದಿದ್ದಾರೆ. ಹನುಮಂತ ಯಾವುದೇ ಸಂಗೀತ ತರಬೇತಿಗೂ ಹೋಗದೆ, ಕುರಿ ಕಾಯುತ್ತಾ, ಫೋನಿನಲ್ಲಿ ಹಾಡು ಕೇಳುತ್ತಾ ಬೆಳೆದಿದ್ದರು. ಇಂದು ಸರಿಗಮಪ ಕಾರ್ಯಕ್ರಮದ ಮೂಲಕ ಜನತೆಯ ಮೆಚ್ಚುಗೆಯನ್ನು ಪಡೆದು ಕುರಿಗಾಯಿ ಹನುಮಂತ ಎಂದು ಖ್ಯಾತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾರ್ವಜನಿಕ ಸಮಾರಂಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಐಶ್!

    ಸಾರ್ವಜನಿಕ ಸಮಾರಂಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಐಶ್!

    ಮುಂಬೈ: ಬಾಲಿವುಡ್ ಬ್ಯೂಟಿ ಕ್ವೀನ್ ಐಶ್ವರ್ಯ ರೈ ಸಾರ್ವಜನಿಕ ಸಮಾರಂಭದಲ್ಲಿ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ.

    ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗಿತ್ತು. ಸಹಜವಾಗಿ ಐಶ್ವರ್ಯ ಸೇರಿದಂತೆ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಈ ವೇಳೆ ರಾಷ್ಟ್ರಗೀತೆ ಕೇಳುತ್ತಾ ಭಾವುಕರಾದ ಐಶ್ ಕಣ್ಣಂಚಲಿ ಕಂಬನಿ ಜಿನುಗಿದೆ. ಐಶ್ವರ್ಯರ ಅಭಿಮಾನಿಗಳು ಈ ವಿಡಿಯೋವನ್ನು ತಮ್ಮ ಫೇಸ್‍ಬುಕ್, ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ಸೆಪ್ಟೆಂಬರ್ 5ರಂದು ನಡೆದ ಕಾರ್ಯಕ್ರಮದಲ್ಲಿ ಐಶ್ವರ್ಯರ ತಾಯಿ ವೃಂದಾ ರೈ, ಗಾಯಕ ಸೋನು ನಿಗಮ್, ಪೂನಂ ಮಹಾಜನ್, ರೊನಿತ್ ರಾಯ್, ಸಂಗೀತಾ ಜಿಂದಾಲ್, ಕೋಕಿಲಾಬೆನ್ ಅಂಬಾಮಿ, ರೆಶ್ಮಿ ಠಾಕ್ರೆ ಸೇರಿದಂತೆ ಹಲವು ಗಣ್ಯಾತೀಗಣ್ಯರು ಸಹ ಭಾಗಿಯಾಗಿದ್ದರು.

    ಅನಿಲ್ ಕಪೂರ್ ಜೊತೆಯಾಗಿ ನಟಿಸಿದ್ದ ‘ಫೆನ್ನೆ ಖಾನ್’ ಬಿಡುಗಡೆಯಾಗಿತ್ತು. ಬಿಡುಗಡೆ ಮುನ್ನ ಕುತೂಹಲ ಹುಟ್ಟಿಸಿದ್ದ ಫೆನ್ನೆ ಖಾನ್ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವದರಲ್ಲಿ ವಿಫಲವಾಗಿದೆ. ಸದ್ಯ ಐಶ್ವರ್ಯ ಪತಿ ಅಭಿಷೇಕ್ ಜೊತೆಯಾಗಿ ‘ಗುಲಾಮ್ ಜಾಮೂನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರ ಡಿಕೆಶಿ ಬ್ಯಾಟಿಂಗ್

    ಮತ್ತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರ ಡಿಕೆಶಿ ಬ್ಯಾಟಿಂಗ್

    ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಮತ್ತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ. ಇದನ್ನು ಮಾಧ್ಯಮಗಳ ಮುಂದೆ ಯಾರು ಬಹಿರಂಗ ಪಡಿಸಬಾರದು. ಕೆಲವರು ಏನೇನು ಹೇಳಬೇಕೋ ಎಲ್ಲವನ್ನು ಹೇಳಿದ್ದಾರೆ. ಮುಖ್ಯಮಂತ್ರಿ ಕೆಲಸ ಮಾಡಲು ಅವಕಾಶ ಮಾಡಿಕೊಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನ್ನ ಭಾಗ್ಯ ಅಕ್ಕಿ ಕಡಿತ: ಮಾಜಿ ಸಿಎಂಗೆ ಡಿಕೆಶಿ ಟಾಂಗ್

    ಸಿಎಂ ಕುಮಾರಸ್ವಾಮಿ ಅವರನ್ನು ನಾವು ಚಿಕ್ಕವರಿಂದಲೂ ಗಮನಿಸಿದ್ದೇವೆ. ಅವರು ಭಾವನಾತ್ಮಕವಾಗಿದ್ದಾರೆ ಇದು ಹೊಸದೇನಲ್ಲ. ಯಾರೇ ನೊಂದವರು ಮತ್ತು ಬೆಂದವರನ್ನು ಕಂಡರೆ ಕೂಡಲೇ ಅವರಿಗೆ ಕಣ್ಣೀರು ಬರುತ್ತದೆ. ಅವರ ಪ್ರೀತಿಯ ಕಾರ್ಯಕರ್ತರು, ಅಧಿಕಾರಕ್ಕೆ ತಂದವರು ಅವರನ್ನು ನೋಡಿ ಸ್ವಲ್ಪ ಉದ್ವೇಗಕ್ಕೆ ಒಳಗೊಂಡಿದ್ದಾರೆ. ಅದು ಸ್ವಭಾವಿಕ ಮನುಷ್ಯನ ಕೆಲವು ಗುಣಗಳು ಇರುತ್ತವೆ.

    ಕೆಲವು ಸಂದರ್ಭದಲ್ಲಿ ಅಂದರೆ ವಿಕಲಚೇತನರನ್ನು ನೋಡಿ ಹಾಗೂ ಚುನಾವಣೆ ವೇಳೆಯೂ ಅತ್ತಿದ್ದನ್ನು ನಾವು ನೋಡಿದ್ದೇವೆ. ಒಬ್ಬರ ಗುಣ ಒಂದೊಂದು ರೀತಿ ಇರುತ್ತದೆ. ಅದನ್ನು ನಾವು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪರಮೇಶ್ವರ್ ಹೇಳಿದಂತೆ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.

  • ಗಳಗಳನೆ ಕಣ್ಣೀರಿಟ್ಟು ಮಂಡಿಯೂರಿ ನಮಸ್ಕರಿಸಿದ ಅಭ್ಯರ್ಥಿ!

    ಗಳಗಳನೆ ಕಣ್ಣೀರಿಟ್ಟು ಮಂಡಿಯೂರಿ ನಮಸ್ಕರಿಸಿದ ಅಭ್ಯರ್ಥಿ!

    ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೋಳೋ ಅಂತಾ ಕಣ್ಣೀರಿಟ್ಟಿದ್ದಾರೆ.

    ನನಗೆ ಈಗ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ ಅಂತ ಅನ್ನಿಸುತ್ತಿದೆ. ನಾನು ಮೂರನೇ ಬಾರಿಗೆ ಈ ಚುನಾವಣೆಯಲ್ಲಿ ಸೋತಿದ್ದೇನೆ. ಕಳೆದ 10 ವರ್ಷಗಳಿಂದ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಇದು ನೀವು ಕೊಟ್ಟ ಬಹುಮಾನವಾ ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.

    ಚುನಾವಣೆಯಿಂದ ನನ್ನ ಮನೆ ಬೀದಿಗೆ ಬಂದಿದೆ. ನನ್ನ ನೆರವಿಗೆ ಪಕ್ಷ ಬರಲೇ ಇಲ್ಲ. ಚುನಾವಣೆಯಲ್ಲಿ ನಾನು ನನ್ನ ಆಸ್ತಿ, ಮನೆಯಲ್ಲಿನ ಬಂಗಾರ ಕಳೆದು ಕೊಂಡಿದ್ದೇನೆ. ಕಾಂಗ್ರೆಸ್ ನ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಮೂರೂವರೆ ಲಕ್ಷ ರೂಪಾಯಿ ಕೊಟ್ಟರು. ಮಾಜಿ ಶಾಸಕ ವೆಂಕಟೇಶ್ 2 ಲಕ್ಷ ಕೊಟ್ಟರು. ಇಷ್ಟು ಬಿಟ್ಟರೆ ಇನ್ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ದುಃಖದಿಂದ ಹೇಳಿದ್ದಾರೆ.

    ನನ್ನ ಕುಟುಂಬ ಹೇಗೆ ನಿರ್ವಹಣೆ ಮಾಡಬೇಕು ಎಂಬ ಚಿಂತೆ ನನ್ನ ಮುಂದಿದೆ. ಚುನಾವಣೆಯಿಂದ ನಾನು ಬೀದಿಗೆ ಬಂದಿದ್ದೇನೆ. ನಾನು ಸಹಾಯ ಮಾಡಿದವರೇ ನನ್ನ ವಿರುದ್ಧ ಪ್ರಚಾರ ಮಾಡಿ ನನ್ನನ್ನು ಸೋಲಿಸಿದರು ಎಂದು ಗೋಳಿಟ್ಟರು. ಇನ್ನೂ ಯಾವತ್ತೂ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಕಣ್ಣೀರಿಡುತ್ತಲೆ ಮಂಡಿಯೂರಿ ತಮಗೆ ಮತ ಹಾಕಿದವರಿಗೆ ಹಾಗೂ ಹಾಕದವರಿಗೆ ನಮಸ್ಕಾರ ಹಾಕಿದ್ದಾರೆ.