Tag: Tears

  • ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಅಮ್ಮ ಮಗನ ಮಾತುಕತೆ ಕಂಡು ಕಣ್ಣೀರಿಟ್ಟ ಸಲ್ಮಾನ್ ಖಾನ್

    ಲ್ಮಾನ್ ಖಾನ್ (Salman Khan) ತಮ್ಮ ವ್ಯಕ್ತಿತ್ವದಲ್ಲಿ ತುಂಬಾ ಖಡಕ್, ಗಟ್ಟಿಮನಸ್ಸುಳ್ಳವರು ಎಂದೆಲ್ಲಾ ವರ್ಣಿಸಿಕೊಳ್ಳುತ್ತಾರೆ. ಆದರೆ ಚಿಕ್ಕದೊಂದು ಭಾವುಕ ಕ್ಷಣವನ್ನೂ ಕಣ್ಣಾರೆ ಕಂಡು ಸಹಿಸಲಾಗದ ಮೃದು ಜೀವಿ ಅನ್ನೋ ವಿಚಾರ ಈ ವಾರದ ಹಿಂದಿಯ ಬಿಗ್‌ಬಾಸ್ ಸೀಸನ್ 19ರ (Bigg Boss 19) ವೀಕೆಂಡ್ ವಾರ್‌ನಲ್ಲಿ ಬಹಿರಂಗವಾಗಿದೆ. ಸ್ಪರ್ಧಿಯೊಬ್ಬರು ಅತ್ತಿದ್ದಕ್ಕೆ ಸಲ್ಮಾನ್ ಖಾನ್ ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಬ್ಯಾಡ್‌ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ವೇದಿಕೆಯಲ್ಲಿ ಕಣ್ಣೀರು ಹಾಕುವುದಕ್ಕೆ ಕಾರಣ ಸ್ಪರ್ಧಿ ಕುನಿಕಾ ಸದಾನಂದ್. ಇವರು ಬಿಗ್‌ಬಾಸ್ ಸೀಸನ್ 19ರ ಓರ್ವ ಸ್ಪರ್ಧಿ. ಸ್ಪರ್ಧಿಗಳ ಜೊತೆ ಸಲ್ಮಾನ್ ಖಾನ್ ಅವರ ವೀಕೆಂಡ್ ಮಾತುಕತೆ ತಮಾಷೆಯಿಂದಲೇ ನಡೆಯುತ್ತಿತ್ತು. ಆದರೆ ಕುನಿಕಾ ಸದಾನಂದ್ ಪುತ್ರ ಅಯಾನ್ ಲಾಲ್ ಮಾತನಾಡುತ್ತಾ ಮನೆಯೊಳಗೆ ದಿಢೀರ್ ಪ್ರವೇಶ ಪಡೆದೊಡನೆ ಅಲ್ಲಿನ ಚಿತ್ರಣವೇ ಬದಲಾಯ್ತು. ನಗುತ್ತಲೇ ಇದ್ದ ಸಲ್ಮಾನ್ ಖಾನ್ ಕೂಡ ದಂಗು ಬಡಿದವರಂತೆ ನೋಡುತ್ತಾ ನಿಂತರು.

    ಬಿಗ್‌ಬಾಸ್ ಮನೆಯಲ್ಲಿ ತಾಯಿ ಕುನಿಕಾ ಕುರಿತು ಹೃದಯಸ್ಪರ್ಶಿ ಮಾತನಾಡುತ್ತಿದ್ದ ಮಗನ ಧ್ವನಿ ಕೇಳಿಸಿಕೊಂಡ ತಾಯಿ ಕುನಿಕಾ ಸದಾನಂದ್ ಬಿಕ್ಕಿ ಬಿಕ್ಕಿ ಅತ್ತರು. `ಅಮ್ಮಾ ನೀನು ನಮ್ಮನ್ನೆಲ್ಲ ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ, ನಿಮ್ಮನ್ನು ಇಡೀ ದೇಶ ನೋಡುತ್ತಿದೆ. ನಿನ್ನ ಮೊಮ್ಮಗ ನಾನು ಹಾಗೂ ನಿಮ್ಮ ಸೊಸೆ, ಹಾಗೂ ನೀವು ಸಹಾಯ ಮಾಡಿರುವ ಕಿನ್ನರ ಸಮಾಜ ಎಲ್ಲರೂ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ’ ಎಂದು ಅಮ್ಮನಿಗೆ ಸಂದೇಶ ಕೊಡುತ್ತಾರೆ. ಬಳಿಕ ಸಪ್ರೈಸ್ ಎಂಟ್ರಿಯನ್ನೂ ಕೊಡುತ್ತಾರೆ. ಹೀಗೆ ಅಮ್ಮ ಮಗನ ಭಾವುಕ ಸಂದರ್ಭವನ್ನ ನೋಡುತ್ತಿದ್ದ ಸಲ್ಮಾನ್ ಖಾನ್ ಹೃದಯ ಮಿಡಿದಿದೆ. ತುಂಬು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡುವ ಸಲ್ಮಾನ್ ಖಾನ್ ಹೃದಯಸ್ಪರ್ಶಿ ಘಟನೆ ಕಂಡು ಕಣ್ಣೀರು ಹಾಕಿದ್ದಾರೆ. ಅಲ್ಲಿಗೆ ಸಲ್ಮಾನ್ ಖಾನ್ ಮುಗ್ಧತೆಯ ದರ್ಶನವಾಗಿದೆ.

  • ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು

    ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು

    ಬೆಳಗಾವಿ: ಮಗ ಸೌರಭ್ ಛೋಪ್ರಾಗೆ (Saurabh Chopra) ಸವದತ್ತಿಯಲ್ಲಿ (Savadatti) ಕಾಂಗ್ರೆಸ್ (Congress) ಟಿಕೆಟ್ ಕೈ ತಪ್ಪಿದ್ದಕ್ಕಾಗಿ ತಾಯಿ ಕಾಂತಾದೇವಿ ಛೋಪ್ರಾ (Kantadevi Chopra) ಬೆಂಬಲಿಗರ ಮುಂದೆಯೇ ವೇದಿಕೆ ಮೇಲೆ ಮಂಡಿಯೂರಿ ಕಣ್ಣೀರು ಹಾಕಿದ್ದಾರೆ.

    ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸೌರಭ್ ಛೋಪ್ರಾ ಹಾಗೂ ತಾಯಿ ಕಾಂತಾದೇವಿ ಛೋಪ್ರಾ ಕಣ್ಣೀರು ಹಾಕಿದ್ದಾರೆ. 2013-2018ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದ ಆನಂದ ಚೋಪ್ರಾ (Anand Chopra) ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕಳೆದ ಚುನಾವಣೆಯಲ್ಲೂ (Election) ಆನಂದ ಮಾಮನಿಗೆ ತೀವ್ರ ಪೈಪೋಟಿಯನ್ನು ಛೋಪ್ರಾ ನೀಡಿದ್ದರು. ಆನಂದ ಚೋಪ್ರಾ ಸಾವಿನ ನಂತರ ‘ಕೈ’ ಟಿಕೆಟ್ ಆಕಾಂಕ್ಷಿಯಾಗಿದ್ದ ಸೌರಭ್ ಛೋಪ್ರಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ನಿನ್ನೆ ಸವದತ್ತಿಯಲ್ಲಿ ಬೆಂಬಲಿಗರ ಸಭೆ ನಡೆಸಲಾಗಿತ್ತು. ಇದನ್ನೂ ಓದಿ: ಹಾಲಾಡಿ ಶ್ರೀನಿವಾಸ ಶೆಟ್ಟಿ ಒಂದು ಸಾವಿರ ಅಂತರದಿಂದ ಕೊನೆಗೆ ಲಕ್ಷ ಮತ ಪಡೆದ ರೋಚಕ ಕಥೆ! 

    ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ. ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ. ನೀವೇನು ಮಾಡುತ್ತೀರಿ ನಿಮಗೆ ಬಿಟ್ಟದ್ದು ಎಂದು ಸಭೆಯಲ್ಲಿ ಕಾಂತಾದೇವಿ ಕಣ್ಣೀರು (Tears) ಹಾಕಿದ್ದಾರೆ. ಸವದತ್ತಿಯಲ್ಲಿ ಬಂಡಾಯದ ಕಹಳೆ ಊದಿದ ಸೌರಭ್ ಛೋಪ್ರಾ ಬಳಿಕ ಕಾಂತಾದೇವಿ ಮಗನಿಗಾಗಿ ಮಂಡಿಯೂರಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಸವದತ್ತಿ ಕ್ಷೇತ್ರದಲ್ಲಿ ಮತ್ತೆ ಬಂಡಾಯದ ಬೆಂಕಿ ಹೊತ್ತಿಸಿದ ಸೌರಭ್ ಚೋಪ್ರಾ

  • ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ಬಿಗ್ ಬಾಸ್ (Bigg Boss Season 9) ಮನೆಯೊಳಗೆ ಯಾರೆಲ್ಲ ಪ್ರವೇಶ ಮಾಡ್ತಾರೆ ಎಂದು ಪಟ್ಟಿ ಬಿಡುಗಡೆ ಆದಾಗ ಅಚ್ಚರಿ ಮೂಡಿಸಿದ ಹೆಸರು ನಟಿ ಮಯೂರಿ (Mayuri) ಅವರದ್ದು. ಮದುವೆ ನಂತರ ಸಿನಿಮಾ ರಂಗದಿಂದಲೇ ದೂರವಿದ್ದ, ಪುಟಾಣಿ ಮಗುವಿನ ಜೊತೆ ಆಟವಾಡ್ಕೊಂಡಿರೊ ಈ ನಟಿ, ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೂ, ಬಿಗ್ ಬಾಸ್ ಮನೆಗೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ ಮಯೂರಿ.

    ಸಿನಿಮಾ ರಂಗದಲ್ಲೂ ಅಷ್ಟೇ, ಕ್ಲೀನ್ ಇಮೇಜ್. ಕಾಂಟ್ರವರ್ಸಿ ಮಾಡ್ಕೊಂಡಿಲ್ಲ. ರಿಲೇಷನ್ ಶಿಪ್ ಇಟ್ಕೊಂಡಿಲ್ಲ, ತಡರಾತ್ರಿ ಪಾರ್ಟಿಯಿಂದಾನೂ ದೂರ ದೂರ. ಇಂತಿಪ್ಪ ಈ ನಟಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದೇ ವಿಚಿತ್ರ, ವಿಶೇಷ. ಹೀಗಾಗಿಯೇ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಕಣ್ಣೀರಿಟ್ಟಿದ್ದಾರೆ. ನಾನು ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಈ ಮನೆಗೆ ಬಂದಿಲ್ಲ ಎಂದು ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಬಿಗ್ ಬಾಸ್ ಮನೇಲಿ ಪರಸ್ಪರ ಇಷ್ಟ ಪಡೋದು, ರಿಲೇಶನ್ ಶಿಪ್ (Relationship) ಮೆಂಟೇನ್ ಮಾಡೋದು, ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲೂ ಅದನ್ನ ಕಂಟಿನ್ಯೂ ಮಾಡೋದು ಕಾಮನ್. ಕೆಲ ಜೋಡಿಗಳು ಮದುವೆ ಕೂಡ ಆಗಿವೆ. ಆದರೆ, ಮಯೂರಿ ಮದುವೆ ಆಗಿದ್ದಾರೆ, ಒಂದ್ ಮಗು ಕೂಡ ಇದೆ. ಬಿಗ್ ಬಾಸ್ ಮನೆಗೆ ಇದೆಲ್ಲವನ್ನೂ ಅವರು ಬಿಟ್ಟು ಬಂದಿದ್ದು, ಕೇವಲ ಆಟ ಆಡುವುದಕ್ಕಾಗಿ ಮಾತ್ರವಂತೆ. ಅದರ ಹೊರತಾಗಿ ಬೇರೆ ಯೋಚಿಸಲ್ಲ ಅಂತಾರೆ ಮಯೂರಿ.

    ಊಟದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಯೂರಿ ಅತ್ತಿದ್ದಾರೆ. (Tears) ಮಗುವನ್ನು ನೆನಪಿಸಿಕೊಂಡಿದ್ದಾರೆ. ನೇಹಾ ಗೌಡ ಆಡಿದ ಮಾತಿಗೆ ನೊಂದುಕೊಂಡಿದ್ದಾರೆ. ಇದೆಲ್ಲದರ ಪರಿಣಾಮಾನೇ ‘ನಾನು ಈ ಮನೆಗೆ ಬಂದಿದ್ದು ಆಟ ಆಡೋಕೆ, ರಿಲೇಶನ್ ಶಿಪ್ ಇಟ್ಜೊಳ್ಳೋಕೆ ಅಲ್ಲ’ ಎನ್ನುವ ಮಾತುಗಳನ್ನು ಅವರಿಂದ ಆಡಿಸಿದೆ. ಈ ವಿಚಾರವಾಗಿ ನೇಹಾ ಗೌಡ (Neha Gowda) ಕ್ಷಮೆ ಕೂಡ ಕೇಳಿದ್ದಾರೆ.  ಮಯೂರಿ ಮಾತ್ರ ತಮಗಾದ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಆದಷ್ಟು ಬೇಗ ಎಲ್ಲವನ್ನೂ ಮರೆತು, ಮತ್ತೆ ಮಯೂರಿ ಆಟವಾಡಲಿ ಎನ್ನೊದೇ ಅಭಿಮಾನಿಗಳ ಆಸೆ.

    Live Tv
    [brid partner=56869869 player=32851 video=960834 autoplay=true]

  • ಡಾನ್ಸ್ ಶೋನಲ್ಲಿ ಸುದೀಪ್ ಭಾವುಕ, ಶಿವರಾಜ್ ಕುಮಾರ್ ಕಣ್ಣೀರು

    ಡಾನ್ಸ್ ಶೋನಲ್ಲಿ ಸುದೀಪ್ ಭಾವುಕ, ಶಿವರಾಜ್ ಕುಮಾರ್ ಕಣ್ಣೀರು

    ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್  ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾವುಕರಾದ ಮತ್ತು ಶಿವರಾಜ್ ಕುಮಾರ್ ಕಣ್ಣೀರು ಹಾಕಿದ ಘಟನೆ ನಡೆಯಿತು. ಕಾರ್ಯಕ್ರಮದ ಮಧ್ಯ  ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದ ಒಂದು ವಿಡಿಯೋ ತುಣಕನ್ನು ಪ್ರದರ್ಶನ ಮಾಡಲಾಯಿತು. ವಿಡಿಯೋ ನೋಡಿ ಸುದೀಪ್ ಭಾವುಕರಾಗಿ, ಏನು ಹೇಳಬೇಕು  ಎಂದು ತೋಚದೇ ಮೌನಕ್ಕೆ ಜಾರಿದರು. ಪ್ರದರ್ಶನವಾದ ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಇದ್ದರು.

    ನಂತರ ಮಾತನಾಡಿದ ಸುದೀಪ್, “ಏರಿಯಾಗಳಲ್ಲಿ ಸೈಟ್ ಮಾಡಿ, ಮನೆ ಮಾಡಿಕೊಳ್ಳುವುದಕ್ಕಿಂತ ಹೃದಯಗಳಲ್ಲಿ ಒಂದು ಚಿಕ್ಕ ಸೈಟಲ್ಲಿ ಮನೆ ಮಾಡಿಕೊಂಡು ಸದಾ ಬದುಕಿರ್ತಾರಲ್ಲ, ಅವರಿಗೆ ನಾವು ಅಮರ ಅಂತೀವಿ. ಕನ್ನಡ ಚಿತ್ರರಂಗ ಮಾತ್ರವಲ್ಲ, ಯಾವ ಕಲಾವಿದನ ಅಭಿಮಾನಿಗಳೇ ಆಗಿರಬಹುದು, ದ್ವೇಷಿಸದೇ ಇರುವಂತ ಒಬ್ಬ ನಟ, ಬೇರೆಯವರ ಅಭಿಮಾನಿಗಳು ದ್ವೇಷ ಮಾಡದೇ ಇರುವಂತ ಒಬ್ಬ ನಟ, ಯಾರದ್ದೇ ಅಭಿಮಾನಿಯಿದ್ರೂ ಸದಾ ಪ್ರೀತಿಸುತ್ತಾ ಇದ್ದ ಒಬ್ಬ ನಟ ಪುನೀತ್ ರಾಜ್ ಕುಮಾರ್. ನನಗೆ ಹಳೆಯ ವಿಡಿಯೋಗಳನ್ನು ನೋಡಿದಾದಾಗ ಅನಿಸೋದು ಅವರು ಎಲ್ಲಾ ಕಡೆ ಇದ್ದಾರೆ’ ಅನಿಸುತ್ತದೆ ಅಂದರು. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಮುಂದುವರೆದು ಮಾತನಾಡಿದ ಕಿಚ್ಚ  “ನನಗೆ ಖುಷಿಯಾಗಿದ್ದು ಏನೆಂದರೆ ಚಿಕ್ಕ ವಯಸ್ಸಿನಲ್ಲಿ ನಾನು, ಪುನೀತ್ ತುಂಬಾ ಚೆನ್ನಾಗಿ ಪಳಗಿದ್ದು. ನಾವು ಕಲಾವಿದರಾಗಿ ಬೆಳೆದ ಮೇಲೆ, ಬೆಳವಣಿಗೆಯಲ್ಲಿ ಒಂದು ಅಂತರ ಬರೋದು ಸಹಜ. ಆ ಅಂತರ ಬೆಳೆಯುತ್ತಲೇ ಇರುತ್ತೆ. ಒಂದು ಹಂತಕ್ಕೆ ಬಂದಮೇಲೆ ಆ ಅಂತರ ಕಡಿಮೆ ಆಗೋಕೆ ಶುರುವಾಗುತ್ತೆ. ಪೈಲ್ವಾನ್ ವೇದಿಕೆಗೆ ಬಂದಾಗ ಆ ಹಂತದಲ್ಲಿ ಇದ್ವಿ ನಾವಿಬ್ಬರು. ಒಬ್ಬರ ಮೇಲೆ ಒಬ್ಬರಿಗೆ ಗೌರವ ಇತ್ತು, ಅಭಿಮಾನ ಇತ್ತು. ಪ್ರತಿ ಶುಕ್ರವಾರ, ಗುರುವಾರ ನಮ್ಮದೇ ಆಗಿರಬೇಕು ಎಂದು ಆರಂಭದಲ್ಲಿ ಅನಿಸುತ್ತೆ. ಹೋಗ್ತಾ ಹೋಗ್ತಾ ಅನಿಸುತ್ತೆ ವರ್ಷದಲ್ಲಿ ಎಷ್ಟು ಗುರುವಾರ, ಶುಕ್ರವಾರಗಳು ಇರುತ್ತವೆ, ಯಾಕೆ ನಾವು ಕಿತ್ತಾಡುತ್ತೇವೆ’ ಎಂದರು.

    ಪುನೀತ್ ಸಿಕ್ಕಿದ್ದು ಒಂದು ಒಳ್ಳೆಯ ಕ್ಷಣ ಎಂದು ಕೊಂಡಾಡಿದ ಸುದೀಪ್,  “ಪೈಲ್ವಾನ್ ಸಮಯದಲ್ಲಿ ಒಳ್ಳೆಯ ಮನಸ್ಸಿನಿಂದ ಒಬ್ಬ ದೊಡ್ಡ ಕಲಾವಿದರು ಇನ್ನೊಬ್ಬ ಕಲಾವಿದನ ಸೆಟ್‌ಗೆ ಬರ್ತಾರೆ, ಶುಭ ಕೋರುತ್ತಾರೆ, ಅದ್ಭುತವಾದ ಕ್ಷಣಗಳನ್ನು ಸೆರೆಹಿಡಿಯಲು ಅವಕಾಶ ಕೊಟ್ಟು ಪುನೀತ್ ಹೊರಟು ಹೋಗುತ್ತಾರೆ. ಪುನೀತ್ ಜೊತೆ ಇರುವ ಚಿಕ್ಕವಯಸ್ಸಿನ ಫೋಟೋ ನನಗೆ ಮಿಲಿಯನ್ ಡಾಲರ್ ಫೋಟೋ’ ಎಂದು ಸುದೀಪ್ ಭಾವುಕರಾದರು. ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಎಂದು ಸುದೀಪ್ ಹಾಡುತ್ತಿದ್ದಂತೆ ಶಿವಣ್ಣ ಕಣ್ಣೀರು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್

    ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್

    ಬೀದರ್: ಆರೋಗ್ಯ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳಿ ಎಂದ್ರೆ, ಮಹಿಳೆಯೊಬ್ಬಳು ಕಣ್ಣೀರು ಹಾಕುತ್ತಾ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೀದರ್ ನಗರದ ಶಿವಾಜಿ ವೃತ್ತದಲ್ಲಿ ಇಂದು ನಡೆದಿದೆ.

    ಇಂದು ಲಸಿಕಾ ಮಹಾಮೇಳ ನಡೆಯುತ್ತಿರುವಾಗ ಆಟೋದಲ್ಲಿ ಬಂದ ಮೂವರು ಮಹಿಳೆಯರನ್ನು ನಿಲ್ಲಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿಗಳು ಹೇಳಿದ್ದಾರೆ. ಈ ವೇಳೆ ಓರ್ವ ಮಹಿಳೆ ಕಣ್ಣೀರು ಹಾಕುತ್ತಾ ಸ್ಥಳದಿಂದ ಕಾಲ್ಕಿತ್ತಿದರೆ ಉಳಿದ ಇಬ್ಬರು ಮಹಿಳೆಯರು ಲಸಿಕೆ ತೆಗೆದುಕೊಳ್ಳದೆ ಸ್ಥಳದಿಂದ ಪಲಾಯನವಾಗಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಯಾಕೆ ಕಣ್ಣೀರು ಹಾಕುತ್ತಿದ್ದಿಯಾ ಎಂದು ಆರೋಗ್ಯ ಸಿಬ್ಬಂದಿಗಳು ಕೇಳಿದರೆ ಯಾವುದೇ ಉತ್ತರ ನೀಡದೆ ಮಹಿಳೆ ಸ್ಥಳದಿಂದ ಕಾಲ್ಕಿತ್ತುವ ಮೂಲಕ ಹೈಡ್ರಾಮಾ ಮಾಡಿದ್ದಾರೆ. ಈಗಾಗಲೇ ಶೇ. 96ರಷ್ಟು ಮೋದಲ ಡೋಸ್ ಲಸಿಕಾಕರಣ ಮಾಡಿರುವ ಜಿಲ್ಲಾಡಳಿತಕ್ಕೆ ಉಳಿದ ಶೇ.4 ರಷ್ಟು ಲಸಿಕೆ ನೀಡೋದೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

  • ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಮಂಡ್ಯ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನೆಲೆ ಅವರ ಹುಟ್ಟೂರಾದ ಜಿಲ್ಲೆಯ ಬೂಕನಕೆರೆಯಲ್ಲಿ ಅಭಿಮಾನಿ ಕಣ್ಣೀರು ಹಾಕಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಮಧುಸೂದನ್ ಅವರು ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಅವರು ನಮ್ಮೂರಿನ ಮಗ ಎಂಬುವ ಹೆಮ್ಮೆ ನಮಗೆ ಇದೆ. ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದವರು ಯಡಿಯೂರಪ್ಪನವರು. ಅವರನ್ನು ಸಂಪೂರ್ಣ ಅವಧಿಯಲ್ಲಿ ಸಿಎಂ ಆಗಿ ನೋಡಬೇಕು ಎನ್ನುವ ಆಸೆ ನಮಗೆ ಇತ್ತು. ಇದೀಗ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿರುವುದು ಬೇಸರತಂದಿದೆ ಎಂದಿದ್ದಾರೆ.

    ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರದವರು ಒತ್ತಡ ಹಾಕಿ ರಾಜೀನಾಮೆ ತೆಗೆದುಕೊಂಡಿರುವುದು ಸರಿಯಲ್ಲ. ಬಿಜೆಪಿ ಹೆಸರು ಗೊತ್ತಿಲ್ಲ ಎನ್ನುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಅನ್ಯಾಯವಾಗಿರುವುದು ಖಂಡನೀಯ. ನಮ್ಮ ಮನೆ ದೇವರ ಮೇಲೆ ಆಣೆ ಯಡಿಯೂರಪ್ಪ ಅವರು ಇಲ್ಲ ಎಂದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗುತ್ತದೆ. ಬಿಜೆಪಿಯವರು ಯಡಿಯೂರಪ್ಪ ಅವರ ಋಣ ತೀರಿಸಲು ಅವರ ಮಗನಿಗಾದರು ಸಿಎಂ ಸ್ಥಾನ ನೀಡಬೇಕು ಎಂದರು.

  • ಯುವಕನ ಕಣ್ಣೀರು ಕಂಡು ಕಿತ್ತುಕೊಂಡಿದ್ದನ್ನು ವಾಪಸ್ ಕೊಟ್ಟು ತಬ್ಬಿಕೊಂಡ ದರೋಡೆಕೋರರು

    ಯುವಕನ ಕಣ್ಣೀರು ಕಂಡು ಕಿತ್ತುಕೊಂಡಿದ್ದನ್ನು ವಾಪಸ್ ಕೊಟ್ಟು ತಬ್ಬಿಕೊಂಡ ದರೋಡೆಕೋರರು

    – ವಿಡಿಯೋ ನೋಡಿ ಮಾನವೀಯತೆ ಬದುಕಿದೆಯೆಂದ ನೆಟ್ಟಿಗರು

    ಇಸ್ಲಾಮಾಬಾದ್: ಯುವಕನ ಕಣ್ಣೀರು ಕಂಡು ಮರುಗಿದ ದರೋಡೆಕೋರರು ಕಿತ್ತುಕೊಂಡ ವಸ್ತುಗಳನ್ನು ಮರಳಿ ವಾಪಸ್ ನೀಡಿರುವ ಮಾನವೀಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಷ್ಟ ಕಂಡರೇ ಕಟುಕನು ಮರುಗುತ್ತಾನೆ ಎಂಬ ಮಾತಿದೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತದೆ. ಈ ಸಿಸಿಟಿವಿ ವಿಡಿಯೋ ಪಾಕಿಸ್ತಾನದ ಕರಾಚಿಯಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ದರೋಡೆಕೋರರಿಬ್ಬರು ಬೈಕಿನಲ್ಲಿ ಬಂದು ಓರ್ವ ಯುವಕನ ಬಳಿ ದರೋಡೆ ಮಾಡುವ ದೃಶ್ಯ ಸೆರೆಯಾಗಿದೆ.

    ಕೇವಲ 59 ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಒಂದು ಮನಮಿಡಿಯುವ ಸ್ಟೋರಿ ಇದೆ. ಮೊದಲಿಗೆ ಫುಡ್ ಡೆಲಿವರಿ ಯುವಕನೊಬ್ಬ ಅಂಗಡಿಯಿಂದ ತನ್ನ ಬೈಕ್ ಬಳಿ ಬರುತ್ತಾನೆ. ಈ ವೇಳೆ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು ದರೋಡೆಕೋರರು. ಆತನ ಬಳಿ ಬಂದು ಹೆದರಿಸಿ ಅವನ ಜೇಬಿನಲ್ಲಿದ್ದ ಹಣ ಮತ್ತು ವಸ್ತುಗಳನ್ನು ಕಿತ್ತುಕೊಳ್ಳುತ್ತಾರೆ. ಈ ವೇಳೆ ಕಷ್ಟಪಟ್ಟು ದುಡಿದ ಹಣ ಹೀಗೆ ಕಿತ್ತುಕೊಂಡರಲ್ಲ ಎಂದು ಯುವಕ ಕಣ್ಣೀರು ಹಾಕುತ್ತಾನೆ.

    ಯುವಕ ಕಣ್ಣೀರು ಹಾಕಿದ ಕೂಡಲೇ ಇದನ್ನು ಕಂಡ ದರೋಡೆಕೋರರು ಮನಸ್ಸನ್ನು ಚೇಂಜ್ ಮಾಡಿಕೊಳ್ಳುತ್ತಾರೆ. ಯುವಕ ಕಣ್ಣೀರು ನೋಡಿ ಕರಗಿದ ಕಳ್ಳರು ಕಿತ್ತುಕೊಂಡ ಹಣ ಮತ್ತು ವಸ್ತುಗಳನ್ನು ವಾಪಸ್ ನೀಡುತ್ತಾರೆ. ಜೊತೆಗೆ ಅವನಿಗೆ ಶೇಕ್ ಹ್ಯಾಂಡ್ ನೀಡಿ ತಬ್ಬಿಕೊಂಡು ಸಮಾಧಾನ ಮಾಡುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

    ಈಗ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದು, ದರೋಡೆಕೋರರ ಒಳ್ಳೆಯ ತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿದ ನಂತರ ಮಾನವೀಯತೆ ಎಂಬುದು ಇನ್ನೂ ಬದುಕಿದೆ ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನನ್ನ ಕಣ್ಣಿನಲ್ಲಿ ನೀರು ತರಿಸತು. ಈ ವಿಡಿಯೋ ಕರುಣೆ ಮತ್ತು ಮಾನವೀಯತೆಯ ಬಗ್ಗೆ ತುಂಬಾ ಹೇಳುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

  • ನನ್ನ ಪುಟಾಣಿ ಮಕ್ಕಳ ಬಳಿ ಹೋಗಲು ಆಗ್ತಿಲ್ಲ: ಮಹಿಳಾ ಪಿಡಿಒ ಕಣ್ಣೀರು

    ನನ್ನ ಪುಟಾಣಿ ಮಕ್ಕಳ ಬಳಿ ಹೋಗಲು ಆಗ್ತಿಲ್ಲ: ಮಹಿಳಾ ಪಿಡಿಒ ಕಣ್ಣೀರು

    ನೆಲಮಂಗಲ: ಮಾರಾಣಾಂತಿಕ ಕೋವಿಡ್-19 ನಲ್ಲಿ ದಿನನಿತ್ಯ ಪಾಲ್ಗೊಳ್ಳುವ ಕೊರೊನಾ ವಾರಿಯರ್ಸ್ ರದ್ದು ಹಲವಾರು ಮಾನಸಿಕ ಮುಖಗಳು ಅನಾವರಣಗೊಳ್ಳುತ್ತಿದೆ. ಮತ್ತೊಂದು ಕೊರೊನಾ ವಾರಿಯರ್ಸ್ ಕಥೆ ವ್ಯಥೆ ಇದೀಗ ಅಭಿನಂದನಾ ಸಮಾರಂಭದಲ್ಲಿ ಕಂಡು ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಖಾಸಗಿ ಸಂಭಾಗಣದಲ್ಲಿ, ಕೊರೊನಾ ವಾರಿಯರ್ಸ್ ಗಳಿಗೆ ಅಭಿನಂದನಾ ಮತ್ತು ಪುಷ್ಪವೃಷ್ಟಿ ಹಾಕುವ ಕಾರ್ಯಕ್ರಮವನ್ನು ಸ್ಥಳೀಯ ಜಿಲ್ಲಾ ಪಂಚಾಯತಿ ಸದಸ್ಯ ನಂಜುಂಡಯ್ಯ ಆಯೋಜಿಸಿದ್ದರು. ಈ ವೇಳೆಯಲ್ಲಿ ಅಭಿನಂದನಾ ಸಮಾರಂಭದಲ್ಲಿ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ಪಿಡಿಒ ಶೀಲಾ ಗದ್ಗದಿತರಾಗಿದ್ದಾರೆ.

    ವೇದಿಕೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನರಸೀಪುರ ಗ್ರಾಮ ಪಂಚಾಯತಿ ಪಿಡಿಒ, ಪುಟಾಣಿ ನನ್ನ ಮಕ್ಕಳ ಬಳಿ ಹೋಗಲು ಆಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ಮಾರಣಾಂತಿಕ ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಇನ್ನೀತರ ಇಲಾಖೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ವೈದ್ಯರು ರೋಗಿಯ ಬಳಿಯೇ ಇರುತ್ತಾರೆ. ಕೊರೊನಾ ಆತಂಕವಿದ್ದರೂ ವ್ಯಕ್ತಪಡಿಸಲಾಗದ ಸನ್ನಿವೇಶದಲ್ಲಿದ್ದೇವೆ. ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ ಎಂದು ಕೊರೊನಾ ರೋಗಿಗಳಿಗೆ ತಮ್ಮ ನೋವನ್ನು ಪರೋಕ್ಷವಾಗಿ ತಿಳಿಸಿದರು. ಮಹಿಳಾ ಪಿಡಿಒ ಕಣ್ಣೀರಿನೊಂದಿಗೆ ಸಮಾರಂಭದಲ್ಲಿ ಮಾತನಾಡಿದ ರೀತಿ ಹಲವರಿಗೆ ಸ್ಫೂರ್ತಿಯಾಗಿತ್ತು.

  • ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ಅಭಿಮಾನಿಗಳಂತೆ ಮೈದಾನದಲ್ಲಿ ಕಣ್ಣೀರಿಟ್ಟ ಸ್ಟಾರ್ ಕ್ರಿಕೆಟ್ ಆಟಗಾರರು

    ನವದೆಹಲಿ: ಕ್ರಿಕೆಟ್ ಆಟವನ್ನು ಕೆಲ ಅಭಿಮಾನಿಗಳು ಜೀವನದ ಒಂದು ಭಾಗದಂತೆ ನೋಡುತ್ತಾರೆ. ನೆಚ್ಚಿನ ತಂಡ ಸೋತರೇ ಕಣ್ಣೀರು ಹಾಕುತ್ತಾರೆ. ಗೆಲ್ಲಲಿ ಎಂದು ದೇವರ ಮೊರೆ ಹೋಗುತ್ತಾರೆ. ಅಂತೆಯೇ ಸ್ಟಾರ್ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿರುವ ಪ್ರಸಂಗಗಳು ನಡೆದಿವೆ.

    ಕ್ರಿಕೆಟ್ ಆಟದಲ್ಲಿ ಒಂದು ಪಂದ್ಯ ಎಂದರೆ ಸೋಲು ಗೆಲವು ಕಾಮನ್ ಇದನ್ನೂ ಆಟಗಾರರೂ ಕ್ರೀಡಾಮನೋಭಾವದಿಂದ ನೋಡಿ ಸುಮ್ಮನಗುತ್ತಾರೆ. ಆದರೆ ಕೆಲ ಆಟಗಾರರು ಪಂದ್ಯಗಳನ್ನು ಸೋತಾಗ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಸಚಿನ್, ಯುವರಾಜ್ ಸಿಂಗ್ ಹೀಗೆ ಕ್ರಿಕೆಟ್ ದಿಗ್ಗಜರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.

    ಇದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುವರಾಜ್ ಸಿಂಗ್ ಅವರು, 2011ರಲ್ಲಿ 28 ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದು ಬೀಗಿತ್ತು. ಈ ಟೂರ್ನಿಯಲ್ಲಿ ಕ್ಯಾನ್ಸರ್ ಇದ್ದರೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವಿ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊನೆಗೆ ಫೈನಲ್‍ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಾಗ ಮೈದಾನದಲ್ಲಿ ಇದ್ದ ಯುವರಾಜ್ ಕಣ್ಣೀರು ಹಾಕಿದ್ದರು.

    ಇದಾದ ನಂತರ 2015ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಕಣ್ಣೀರು ಹಾಕಿದ್ದರು. 2015ರ ವಿಶ್ವಕಪ್‍ನಲ್ಲಿ ಎಬಿಡಿ ನೇತೃತ್ವದ ತಂಡ ಬಹಳ ಚೆನ್ನಾಗಿ ಆಡಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಈ ಸಮಯದಲ್ಲಿ ತಂಡದ ನಾಯಕ ಡಿವಿಲಿಯರ್ಸ್ ಮೈದಾನದಲ್ಲೇ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಂದು ಸೌತ್ ಆಫ್ರಿಕಾದ ಹಲವು ಆಟಗಾರರು ಮೈದಾನದಲ್ಲೇ ಕುಳಿತುಕೊಂಡು ಅತ್ತಿದ್ದರು.

    ಮೈದಾನದಲ್ಲಿ ಅಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. 2012ರ ಟಿ-20 ವಿಶ್ವಕಪ್ ವೇಳೆ ಭಾರತ ಬಹಳ ಚೆನ್ನಾಗಿ ಆಡಿತ್ತು. ಅಂದು ಉತ್ತಮ ಲಯದಲ್ಲಿ ಇದ್ದ ಕೊಹ್ಲಿ ಟೂರ್ನಿಯುದ್ದಕ್ಕೂ ಸಖತ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ಸೆಮಿಫೈನಲ್ ತಲುಪುವಲ್ಲಿ ಭಾರತ ಎಡವಿತ್ತು. ಈ ಸಮಯದಲ್ಲಿ ಕೊಹ್ಲಿ ಅವರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದರು.

    ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಕ್ರಿಕೆಟ್ ದೇವರು ಸಚಿನ್ ಅವರು ಕೂಡ ಮೈದಾನಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ವೃತ್ತಿ ಜೀವನದ 100ನೇ ಶತಕದ ಸನಿಹದಲ್ಲಿ ಇದ್ದ ಸಚಿನ್ 2011ರ ವಿಶ್ವಕಪ್ ವೇಳೆ 100ನೇ ಶತಕವನ್ನು ಗಳಿಸಲು ವಿಫಲರಾಗಿದ್ದರು. ಆದರೆ 2012ರಲ್ಲಿ ನಡೆದ ಏಷ್ಯಾ ಕಪ್‍ನ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತನ್ನ ನೂರನೇ ಶತಕ ಸಿಡಿಸಿ ಅಂದು ಮೈದಾನದಲ್ಲಿ ಭಾವುಕರಾಗಿದ್ದರು.

    ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕಿಬ್-ಅಲ್-ಹಸನ್ ಕೂಡ ಮೈದಾನದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 2012 ಏಷ್ಯಾ ಕಪ್‍ನಲ್ಲಿ ಉತ್ತಮವಾಗಿ ಆಡಿದ್ದ ಬಾಂಗ್ಲಾ ದೇಶ ಫೈನಲ್ ತಲುಪಿತ್ತು. ಶ್ರೀಲಂಕಾ ಮತ್ತು ಇಂಡಿಯಾದಂತಹ ಪ್ರಬಲ ತಂಡಗಳಿಗೆ ಸೋಲುಣಿಸಿ ಫೈನಲ್‍ಗೇರಿದ್ದ ಬಾಂಗ್ಲಾ, ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವನ್ನು ಸೋತಿತ್ತು. ಈ ವೇಳೆ ಟೂರ್ನಿಯುದ್ದಕ್ಕೂ ಸೂಪರ್ ಆಗಿ ಆಡಿದ್ದ ಶಕಿಬ್ ಮೈದಾನದಲ್ಲಿ ಅತ್ತಿದ್ದರು. ಜೊತೆಗೆ ಬಾಂಗ್ಲಾದ ಇತರ ಆಟಗಾರರು ಕೂಡ ತಬ್ಬಿಕೊಂಡು ದುಃಖ ಪಟ್ಟಿದ್ದರು.

  • ಮಗುವಿನ ಕಣ್ಣೀರಿಗೆ ಕರಗಿದ ಸಿಎಂ – ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಬಿಎಸ್‍ವೈ

    ಮಗುವಿನ ಕಣ್ಣೀರಿಗೆ ಕರಗಿದ ಸಿಎಂ – ನರ್ಸ್‍ಗೆ ಕರೆ ಮಾಡಿ ಧೈರ್ಯ ತುಂಬಿದ ಬಿಎಸ್‍ವೈ

    – ನಿಮ್ಮ ಸೇವೆಗೆ ಸರ್ಕಾರ ಗೌರವಕೊಡುತ್ತದೆ

    ಬೆಂಗಳೂರು: ಬೆಳಗಾವಿ ನರ್ಸ್ ಮತ್ತು ಮಗುವಿನ ಕಣ್ಣೀರಿಗೆ ಕರಗಿದ ಸಿಎಂ ಯಡಿಯೂರಪ್ಪ ಸ್ವತಃ ತಾವೇ ನರ್ಸ್‍ಗೆ ಕರೆಮಾಡಿ ಮಾತನಾಡಿದ್ದಾರೆ. ಜೊತೆಗೆ ನಿಮ್ಮ ಜೊತೆ ನಾವೀದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

    ಇಂದು ನರ್ಸ್ ಸುನಂದಾ ಅವರಿಗೆ ಕರೆ ಮಾಡಿ ಮಾತನಾಡಿರುವ ಬಿಎಸ್‍ವೈ, ನಿನ್ನ ಜೊತೆ ನಾವಿದ್ದೇವೆ. ಸರ್ಕಾರವಿದೆ, ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಗೌರವ ಕೊಡುತ್ತದೆ ಎಂದು ಅಭಯ ನೀಡಿದ್ದಾರೆ.

    ಬೆಳಗಾವಿ ಭೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಸುನಂದಾ ಅವರು ಮನೆಗೆ ಹೋಗದೇ 15 ದಿನ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಬಂದಿದ್ದ ಅವರ ಮೂರು ವರ್ಷದ ಮಗಳು ಐಶ್ವರ್ಯ ಆಸ್ಪತ್ರೆಯೇ ಮುಂದೆಯೇ ಅಮ್ಮ ಬೇಕು ಎಂದು ಕಣ್ಣೀರು ಹಾಕಿದ್ದಳು. ಮಗಳು ಮತ್ತು ಅಮ್ಮನ ಕಣ್ಣೀರಿನ ದೃಶ್ಯವನ್ನು ನೋಡಿ ಜನರ ಕಣ್ಣಿಂಚಿನಲ್ಲಿ ನೀರು ತರಿಸಿತ್ತು.

    ಬೆಳಗಾವಿಯಲ್ಲಿ ಸದ್ಯ 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಆದ್ದರಿಂದ ಅವರಿಗೇ ಚಿಕಿತ್ಸೆ ನೀಡಲು ಅಲ್ಲಿನ ನರ್ಸ್ ಮತ್ತು ವೈದ್ಯರು ಮನೆಗೆ ಹೋಗದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸುನಂದಾ ಅವರು ಕೂಡ ಮನೆಗೆ ಹೋಗಿರಲಿಲ್ಲ. ಆದರೆ ರಾತ್ರಿಯಾದ್ರೆ ಅಮ್ಮನಿಗಾಗಿ ಊಟ ಬಿಟ್ಟು ಐಶ್ವರ್ಯ ಅಳುತ್ತಿರುತ್ತಾಳೆ. ಹೀಗಾಗಿ ಮಗಳ ಅಳಲನ್ನು ನೋಡಲಾಗದೇ ಮಂಗಳವಾರ ತಂದೆ ಸಂತೋಷ್ ಅವರು ಪತ್ನಿ ಮುಖ ತೋರಿಸಲು ಐಶ್ವರ್ಯಳನ್ನು ಸುನಂದಾ ಅವರಿದ್ದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

    ದೂರದಿಂದಲೇ ತಾಯಿಯನ್ನು ಐಶ್ವರ್ಯಗೆ ತೋರಿಸಿದ್ದರು. ಈ ವೇಳೆ ಬೈಕ್ ಮೇಲೆ ಇದ್ದ ಐಶ್ವರ್ಯ ರಸ್ತೆಯಲ್ಲಿಯೇ ಅಮ್ಮನಿಗಾಗಿ ಕಣ್ಣೀರು ಹಾಕಿದ್ದಳು. ಬಾ ಅಮ್ಮ ಮನೆಗೆ ಹೋಗೋಣ ಎಂದು ಗೋಳಾಡಿದ್ದಳು. ಇತ್ತ ಸುನಂದಾ ಅವರು ಮಗಳ ಬಳಿ ಹೋಗಲಾಗದೇ, ಮಗಳ ಕಣ್ಣೀರು ಒರೆಸಲಾಗದೇ ನೊಂದಿದ್ದರು. ಈ ದೃಶ್ಯ ನೋಡಿ ರಾಜ್ಯದ ಜನರು ಮಮ್ಮಲ ಮರುಗಿದ್ದರು.