Tag: tear

  • ‘ಆ ದಿನಗಳ’ ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತ ಹೆಗ್ಡೆ

    ‘ಆ ದಿನಗಳ’ ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತ ಹೆಗ್ಡೆ

    ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಬೋಲ್ಡ್ ಫೋಟೋಗಳನ್ನು ಹಾಕುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದ ನಟಿ ಸಂಯುಕ್ತ ಹೆಗ್ಡೆ (Samyuktha Hegde), ಇದೇ ಮೊದಲ ಬಾರಿಗೆ ಕಣ್ಣೀರು ಹಾಕುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಗಂಭೀರವಾಗಿ ಪೆಟ್ಟು ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ದಿನಗಳು ನರಕವನ್ನು ತೋರಿಸಿಬಿಟ್ಟವು ಅಂದಿದ್ದಾರೆ.

    ಕಳೆದ ವರ್ಷ ‘ಕ್ರೀಮ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಕಾಲಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿತ್ತು. ಆ ಸಮಯದಲ್ಲಿ ತುಂಬಾ ನೋವನ್ನು ಅನುಭವಿಸಿದರಂತೆ ನಟಿ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಶೂಟಿಂಗ್ ವೇಳೆ ಕಾಲಿಗೆ ಗಂಭೀರವಾಗಿಯೇ ಪೆಟ್ಟು ಬಿದ್ದಿತ್ತು. ಹಾಗಾಗಿ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಯಿತು. ಸರ್ಜರಿ ಯಶಸ್ವಿಯಾಗಿ ನಡೆದು ಎಂಟು ವಾರಗಳ ಕಾಲ ರೆಸ್ಟ್ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದರು. ಅಲ್ಲದೇ, ಫಿಸಿಯೋಥೆರಪಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದರು.

     

    ಕ್ರೀಮ್ ಸಿನಿಮಾದ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಡ್ಯೂಪ್ ಬಳಸುವಂತೆ ಹೇಳಿದರೂ, ಸಂಯುಕ್ತ ಹೆಗ್ಡೆ ಅತ್ಯುತ್ಸಾಹದಿಂದ ಡ್ಯೂಪ್ ಇಲ್ಲದೇ ತಾವೇ ಪಾಲ್ಗೊಂಡಿದ್ದರು, ಆಗ ಕಾಲು ಟ್ವಿಸ್ಟ್ ಆಗಿತ್ತು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆಯನ್ನೂ ನೀಡಲಾಯಿತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದುಕೊಂಡು ಟ್ರೀಟ್ಮೆಂಟ್ ಪಡೆದರು. ಆದರೂ, ನೋವು ಕಡಿಮೆ ಆಗಿರಲಿಲ್ಲ. ಕೊನೆಗೂ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ತುಮಕೂರು: ಹೇಮಾವತಿ ನೀರಿಗಾಗಿ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

    ಜಯರಾಂ ಅವರು ತನ್ನ ಕ್ಷೇತ್ರದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ತುರುವೇಕೆರೆ ತಾಲೂಕಿನ ಅಡವನಹಳ್ಳಿ ಹೇಮಾವತಿ ನಾಲೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಡಿಸಿಎಂ ಡಾ ಜಿ.ಪರಮೇಶ್ವರ್ ಹೇಮಾವತಿ ನೀರು ಹರಿಸಲು ತಾರತಮ್ಯ ಮಾಡಿದ್ದು, ತನ್ನ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು.

    ಒಂಭತ್ತು ಕ್ಷೇತ್ರವನ್ನು ಬರಗಾಲ ಎಂದು ಘೋಷಿಸಿದ್ದಾರೆ. ಆದರೆ ನಮ್ಮ ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ತಾನು ಬಿಜೆಪಿ ಶಾಸಕ ಎಂದು ತನ್ನ ಕ್ಷೇತ್ರ ಕಡೆಗಣಿಸಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸಮುದ್ರದ ಪಕ್ಕದಲ್ಲಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಅಂತಹ ಪರಿಸ್ಥಿತಿ ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ತುರುವೇಕೆರೆ ತಾಲೂಕಿನ ಮೂಲಕ ಅನೇಕ ತಾಲೂಕಿಗೆ ನೀರು ಹರಿಯುತ್ತಿದೆ. ಆದರೆ ನನ್ನ ತಾಲೂಕಿಗೆ ನೀರು ಬರುತ್ತಿಲ್ಲ. ಇಂದು ಇಲ್ಲಿಗೆ ಬಂದಿರುವ ಜನರು ಊಟ ಮಾಡದೇ ಬಂದಿದ್ದಾರೆ. ಅವರ ಕಷ್ಟ ನಮಗೆ ಗೊತ್ತು ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿ ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಶಾಸಕರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿರುವ ಆರೋಗ್ಯಮಾತೆಯು ಕಣ್ಣೀರು ಸುರಿಸಿದ್ದು, ಈ ವಿಸ್ಮಯವನ್ನು ನೋಡಲು ನೂರಾರು ಸಾರ್ವಜನಿಕರು ಚರ್ಚ್ ಗೆ ಆಗಮಿಸಿದ್ದರು.

    ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ದೇವರ ವಿಗ್ರಹದಲ್ಲಿ ಕಣ್ಣಿರು ಬರುತ್ತಿದ್ದು. ಹಲವು ಕುತೂಹಲಕ್ಕೆ ಕಾರಣವಾಗಿದೆ. ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚಿನ ಆರೋಗ್ಯಮಾತೆ ವಿಗ್ರಹದಿಂದ ಕಣ್ಣೀರು ಬರುತ್ತಿರುವ ಸುದ್ದಿ ಹರಡುತ್ತಲೇ, ನೂರಾರು ಭಕ್ತರು ಬಂದು ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ಮಾತೆಗೆ ಕಣ್ಣೀರ ಬರಲು ಕಾರಣವೇನು ಎನ್ನುವ ಕುತೂಹಲ ಭಕ್ತರಲ್ಲಿ ಸೃಷ್ಟಿಯಾಗಿದೆ.

    ಹರಿಹರದ ಆರೋಗ್ಯ ಮಾತಾ ಚರ್ಚ್ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬಂದು ಮರೀಯಾ ದೇವಿಯ ದರ್ಶನ ಪಡೆದು ಹೋಗುತ್ತಾರೆ. ಆದರೆ ಬುಧವಾರ ಏಕಾಏಕಿ ಮರೀಯಾ ವಿಗ್ರಹದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿದ್ದು, ಭಕ್ತರ ಮನದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಬುಧವಾರ ಬೆಳಗ್ಗೆ 11.30ಕ್ಕೆ ಸೇಲೀನ್  ಎಂಬವರು  ಪ್ರಾರ್ಥನೆ ಸಲ್ಲಿಸಲು ಚರ್ಚಿಗೆ ಬಂದಿದ್ದಾರೆ. ಈ ವೇಳೆ ಮರೀಯಾ ವಿಗ್ರಹದಿಂದ ಕಣ್ಣೀರು ಬರುತ್ತಿರುವುದನ್ನು ಕಂಡು, ಚರ್ಚಿನ ಫಾದರ್ ಆಂತೋನಿ ಪೀಟರ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಫಾದರ್ ಅದನ್ನು ಪರೀಕ್ಷಿಸಿ ನೋಡಿದಾಗ ವಿಗ್ರಹದ ಎಡ ಭಾಗದ ಕಣ್ಣಿನಿಂದ ಕಣ್ಣೀರಿನ ಹಾಗೆ ನೀರು ತೊಟ್ಟಿಕ್ಕುತ್ತಿದೆ. ಏನಾದರೂ ಬಿದ್ದರಬಹುದೆಂದು ಫಾದರ್ ಅದನ್ನು ಒಂದು ಬಟ್ಟೆಯಿಂದ ಒರೆಸಿದ್ದಾರೆ. ಬಳಿಕ ಕೆಲ ಸಮಯದಲ್ಲಿ ಮತ್ತೆ ಅದೇ ಭಾಗದಲ್ಲಿ ನೀರು ಹರಿಯಲಾರಂಭಿಸಿದೆ ಎಂದು ಚರ್ಚ್ ಫಾದರ್ ತಿಳಿಸಿದ್ದಾರೆ.

    ಮರೀಯಾ ಮಾತೆಯ ಕಣ್ಣಿನಲ್ಲಿ ನೀರು ಬರುತ್ತಿರುದನ್ನು ತಿಳಿದ ಭಕ್ತರು ಮಾತೆಯ ದರ್ಶನ ಪಡೆಯಲು ಮುಗಿದಿದ್ದಾರೆ. ಅಲ್ಲದೇ ಏನಾದರೂ ತಪ್ಪಾಗಿದೆಯೋ, ಇಲ್ಲಾ ತಾಯಿಗೆ ನೋವಾಗುವ ಹಾಗೆ ಯಾರಾದರೂ ನಡೆದುಕೊಂಡಿದ್ದಾರೆಯೋ, ಒಂದು ವೇಳೇ ಆಗೇನಾದರೂ ನಡೆದುಕೊಂಡಿದ್ದರೆ, ಅವರನ್ನು ಕ್ಷಮಿಸು ಎಂದು ಭಕ್ತರು ಪ್ರತಿಮೆಯ ಮುಂಭಾಗ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಚರ್ಚಿನ ಆಡಳಿತ ಮಂಡಳಿಯವರಾದ ಫ್ರಾನ್ಸಿಸ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆಣಸಿನಕಾಯಿ ಬಜ್ಜಿ ತಿಂದು ರೇವಣ್ಣ ಕಣ್ಣೀರು! – ವಿಡಿಯೋ ನೋಡಿ

    ಮೆಣಸಿನಕಾಯಿ ಬಜ್ಜಿ ತಿಂದು ರೇವಣ್ಣ ಕಣ್ಣೀರು! – ವಿಡಿಯೋ ನೋಡಿ

    ಹಾಸನ: ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಭಾರೀ ಟೀಕೆಗೆ ಗುರಿಯಾಗಿದ್ದ ಲೋಕೋಪಯೋಗಿ ಸಚಿವ ಎಚ್‍.ಡಿ.ರೇವಣ್ಣ ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮೆಣಸಿನಕಾಯಿ ಬಜ್ಜಿಯನ್ನು ತಿಂದು ಕಣ್ಣೀರು ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರೇವಣ್ಣ, ಹೋಟೆಲ್‍ ನವರು ನೀಡಿದ್ದ ಮೆಣಸಿನಕಾಯಿ ಬಜ್ಜಿಯನ್ನು ತಿಂದಿದ್ದಾರೆ. ತಿಂದ ಬಳಿಕ ಮೆಣಸಿನಕಾಯಿ ಖಾರದ ರಭಸಕ್ಕೆ ಕಣ್ಣೀರು ಗಳಗಳನೆ ಬರತೊಡಗಿದೆ. ಇದನ್ನು ಮರೆಮಾಚಲು ತಮ್ಮ ಬಳಿಯಿದ್ದ ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡಿದ್ದಾರೆ.

    ಅಲ್ಲದೇ ಹೋಟೆಲ್ ಸಿಬ್ಬಂದಿಗೆ “ಏನ್ರಪ್ಪ ಜೈಲಿನಲ್ಲಿ ಕೊಡುವ ರೀತಿ ಖಾರದ ಬಜ್ಜಿ ಕೊಡ್ತಿರಲ್ಲಪ್ಪ” ಎಂದು ತಮಾಷೆ ಮಾಡಿ, ನನಗೆ ಮೆಣಸಿನಕಾಯಿ ಬಜ್ಜಿ ಬೇಡ, ಬೇಕಾದರೇ ಆಲೂಗಡ್ಡೆ ಅಥವಾ ಹೀರೇಕಾಯಿ ಬಜ್ಜಿ ಇದ್ದರೇ ಕೊಡಿ ಎಂದು ಹೋಟೆಲ್ ಸಿಬ್ಬಂದಿ ಜೊತೆ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಕಣ್ಣೀರ ವಿಚಾರಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಹೇಳಿಕೆ ನೀಡಿದ್ದ ಇಬ್ಬರು ಕೈ ನಾಯಕರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ.

    ರಾಮನಗರದಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದರ ಕುರಿತು ಪ್ರತಿಕ್ರಿಯಿಸಿದ್ದ ಕೈ ನಾಯಕರುಗಳಾದ ಮಾಜಿ ಸ್ಪೀಕರ್ ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣನವರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆ ಕಣ್ಣೀರಿಗೆ ಕಾಂಗ್ರೆಸ್ಸಿಗರೇ ಕಾರಣ: ಮಾಜಿ ಸ್ಪೀಕರ್ ಕೋಳಿವಾಡ

    ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಮೈತ್ರಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ನಡೆಸಿದ್ದರು. ಅಲ್ಲದೇ ಮಾಜಿ ಸ್ಪೀಕರ್ ಕೋಳಿವಾಡ ಸಹ ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬುದಾಗಿ ಹೇಳಿಕೆ ನೀಡಿದ್ದರು. ಇವರ ಈ ಹೇಳಿಕೆಯಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು. ಇದನ್ನೂ ಓದಿ: ಸಂಪುಟ ರಚನೆಯಾದ ಒಂದು ವಾರದಲ್ಲೇ ಸಮ್ಮಿಶ್ರ ಸರ್ಕಾರ ಪತನ : ಕೈ ಮಾಜಿ ಶಾಸಕ ರಾಜಣ್ಣ ಭವಿಷ್ಯ

    ಈ ಹಿನ್ನೆಲೆಯಲ್ಲಿ ಕೆಪಿಸಿಸಿಯು ಇಬ್ಬರೂ ನಾಯಕರುಗಳಿಗೆ ನೀವು ಪಕ್ಷಕ್ಕೆ ಮುಜುಗರ ತರುವಂತೆ ಹೇಳಿಕೆ ನೀಡುತ್ತಿದ್ದು, ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು ಯಾಕೆ ಎಂದು ಕಾರಣ ಕೇಳಿ ನೋಟಿಸ್ ನೀಡಿದೆ. ಅಲ್ಲದೇ ಈ ನೋಟಿಸ್ ಗೆ ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.