Tag: Team india

  • 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

    1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

    ದುಬೈ: ಏಷ್ಯಾ ಕಪ್‌ (Asia Cup) ಫೈನಲ್‌ ಗೆದ್ದ ಬಳಿಕ ಸುಮಾರು 1 ಗಂಟೆಗಳ ಕಾಲ ದುಬೈ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಅಂತಿಮವಾಗಿ ಭಾರತ (Team India) ತಂಡಕ್ಕೆ ಟ್ರೋಫಿ ನೀಡದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಮುಜುಗರ ಅನುಭವಿಸಿದರು.

    ಮಧ್ಯ ರಾತ್ರಿ ಏನಾಯ್ತು?
    ಮಧ್ಯರಾತ್ರಿ 12 ಗಂಟೆಯ ವೇಳೆಗೆ ಪಾಕ್‌ ತಂಡವನ್ನು ಸೋಲಿಸಿ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಜಯಗಳಿಸಿದ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಪೋಡಿಯಂನಲ್ಲಿ ಪ್ರಶಸ್ತಿಯನ್ನು ಸೂರ್ಯಕುಮಾರ್‌ ಸ್ವೀಕರಿಸುವುದಿಲ್ಲ ಬಿಸಿಸಿಐ ಎಸಿಸಿಗೆ ಹೇಳಿತು. ವೇದಿಕೆಯ ಮೇಲಿದ್ದ ಬೇರೆ ಗಣ್ಯರಿಂದ ಪ್ರಶಸ್ತಿಯನ್ನು ವಿತರಿಸುವಂತೆ ಮನವಿ ಮಾಡಿತು.

    ಈ ವಿಚಾರವನ್ನು ಎಸಿಸಿ ನಖ್ವಿ ಬಳಿ ಹೇಳಿದಾಗ, ಪ್ರಶಸ್ತಿಯನ್ನು ನೀಡುವುದಾದರೆ ನಾನೇ ನೀಡುತ್ತೇನೆ. ಬೇರೆಯವರು ಪ್ರಶಸ್ತಿ ನೀಡಲು ನಾನು ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಿದರು. ಈ ವಿಚಾರದ ಬಗ್ಗೆ ಎಸಿಸಿ ಮತ್ತು ಪಿಸಿಬಿ ಮಧ್ಯೆ ದೊಡ್ಡ ಚರ್ಚೆ ನಡೆಯುತ್ತಲೇ ಇತ್ತು.

    ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಕಾರಣ ಸಹ ಇದೆ. ಮೊದಲಿನಿಂದಲೂ ಭಾರತವನ್ನು ಕಟು ಪದಗಳಿಂದ ಟೀಕಿಸುತ್ತಿದ್ದ ನಖ್ವಿ ಏಷ್ಯಕಪ್‌ನಲ್ಲೂ ಟೀಂ ಇಂಡಿಯಾದ ವಿರುದ್ಧ ಕಿಡಿಕಾರಿದ್ದರು. ಈ ಕಾರಣಕ್ಕೆ ಭಾರತ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತ್ತು.

    ಇನ್ನೊಂದು ಕಡೆ ಸೋತ ಬಳಿಕ ಡ್ರೆಸ್ಸಿಂಗ್‌ ರೂಂ ಒಳಗಡೆ ಹೋದ ಪಾಕ್‌ ಆಟಗಾರರು ಹೊರಗೆ ಬರಲೇ ಇಲ್ಲ. ಇದರಿಂದಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ತಡವಾಯಿತು. ಪಂದ್ಯ ಮುಗಿದರೂ ಪ್ರಶಸ್ತಿ ವಿತರಣೆಯಾಗದ್ದಕ್ಕೆ ಕಮೆಂಟ್ರಿ ಹೇಳುತ್ತಿದ್ದ ರವಿಶಾಸ್ತ್ರಿ, ಪಂದ್ಯ ಮುಗಿದು 45 ನಿಮಿಷವಾಯಿತು. ಮೈದಾನದಿಂದ ಅಭಿಮಾನಿಗಳು ಹೊರ ಹೋಗುತ್ತಿದ್ದು, ಆಟಗಾರರು ಕಾಯುತ್ತಿದ್ದಾರೆ. ಏನು ನಡೆಯುತ್ತಿದೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.  ಇದನ್ನೂ ಓದಿ:  Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    ಅಂತಿಮವಾಗಿ ಸುಮಾರು 1 ಗಂಟೆಯ ನಂತರ ಪಾಕ್‌ ಆಟಗಾರರು ಮೈದಾನಕ್ಕೆ ಆಗಮಿಸಿದ ಬಳಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆರಂಭವಾಯಿತು. ಕುಲದೀಪ್‌ ಯಾದವ್‌, ತಿಲಕ್‌ ವರ್ಮಾ, ಅಭಿಷೇಕ್‌ ಶರ್ಮಾ ಪ್ರಶಸ್ತಿಗಳನ್ನು ಸ್ವೀಕರಿಸಿದ ಬಳಿಕ ಪಾಕ್‌ ತಂಡಕ್ಕೆ ರನ್ನರ್‌ ಅಪ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂತರ ಎರಡೂ ಕಡೆಯ ನಾಯಕರನ್ನು ಸೈಮನ್ ಡೌಲ್ ಕರೆಸಿ ಮಾತನಾಡಿದರು. ಕೊನೆಗೆ “ಭಾರತೀಯ ಕ್ರಿಕೆಟ್ ತಂಡವು ಇಂದು ರಾತ್ರಿ ತಮ್ಮ ಪ್ರಶಸ್ತಿಗಳನ್ನು ಪಡೆಯುವುದಿಲ್ಲ ಎಂದು ಎಸಿಸಿಯಿಂದ ನನಗೆ ತಿಳಿಸಲಾಗಿದೆ. ಹೀಗಾಗಿ ಇಲ್ಲಿಗೆ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮುಕ್ತಾಯವಾಗಲಿದೆ” ಎಂದು ಹೇಳಿದರು. ಬೆನ್ನಲ್ಲೇ ವೇದಿಕೆಯಲ್ಲಿದ್ದ ಗಣ್ಯರು ಮೈದಾನವನ್ನು ತೊರೆದರು. ನಖ್ವಿ ತೊರೆಯುತ್ತಿದ್ದಂತೆ ಎಸಿಸಿ ಅಧಿಕಾರಿಯೊಬ್ಬರು ಟ್ರೋಫಿಯನ್ನು ಎತ್ತಿಕೊಂಡು ಮೈದಾನದಿಂದ ಹೊರಹೋದರು. ಇದನ್ನೂ ಓದಿ:  ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

    ಭಾರತೀಯ ತಂಡವು ಟ್ರೋಫಿಗಾಗಿ ಬಹಳ ತಾಳ್ಮೆಯಿಂದ ಕಾಯುತ್ತಿತ್ತು. ʼಚಾಂಪಿಯನ್ಸ್ʼ ಎಂದು ಬರೆದ ಫಲಕವನ್ನು ಮೈದಾನದ ಸಿಬ್ಬಂದಿ ಎರಡು ಬಾರಿ ತಂದು ನಂತರ ಹಿಂದಕ್ಕೆ ತೆಗೆದುಕೊಂಡು ಹೋದರು. ಕಾರ್ಯಕ್ರಮ ಮುಗಿದ ಬಳಿಕ ಟ್ರೋಫಿ ಎತ್ತಿಕೊಂಡು ಹೋದರೂ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಇದ್ದು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಅಭಿಮಾನಿಗಳ ಬಳಿ ಹೋಗಿ ಕೈ ಎತ್ತಿ ವಿಜಯದ ನಗೆ ಬೀರುತ್ತಿದ್ದರು.

    ಈ ಸಂದರ್ಭದಲ್ಲಿ ಹಾರ್ದಿಕ್‌ ಪಾಂಡ್ಯ ಪೋಡಿಯಂ ಹತ್ತಿ ಸೆಲ್ಫಿ ತೆಗೆಯತೊಡಗಿದರು. ನಂತರ ಉಳಿದ ಆಟಗಾರರು ಪೋಡಿಯಂ ಮೇಲೆ ಹತ್ತಿದರು. ಎಲ್ಲರೂ ಪೋಡಿಯಂನಲ್ಲಿ ಇರುವಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ರೋಹಿತ್ ಶರ್ಮಾ ಅವರ ಐಕಾನಿಕ್ ಟಿ20 ವಿಶ್ವಕಪ್ 2024 ರ ನಡಿಗೆಯನ್ನು ಅನುಕರಿಸುತ್ತಾ ಕಾಲ್ಪನಿಕ ಟ್ರೋಫಿಯನ್ನು ಹಿಡಿದುಕೊಂಡು ತಂಡದ ಬಳಿ ಬಂದು ಕೈಯನ್ನು ಎತ್ತಿ ಟ್ರೋಫಿ ಎತ್ತಿದ್ದಂತೆ ಸಂಭ್ರಮಿಸಿದರು. ಈ ಸಂಭ್ರಮಾಚರಣೆಗೆ ಉಳಿದ ಆಟಗಾರರು ಜೊತೆಗೂಡಿದರು.

    ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿಯನ್ನು ನೀಡದ್ದಕ್ಕೆ ಸೂರ್ಯಕುಮಾರ್‌ ಯಾದವ್‌ ಎಸಿಸಿಯನ್ನು ಟೀಕಿಸಿದರು. ನಾನು ಎಲ್ಲಿಯೂ ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸುವುದನ್ನು ನೋಡಿಲ್ಲ. ನಾವು ಬಹಳ ಕಷ್ಟಪಟ್ಟು ಚಾಂಪಿಯನ್‌ ಆಗಿದ್ದೇವೆ ಎಂದು ಹೇಳಿದರು. ಇದಕ್ಕೆ ಅಭಿಷೇಕ್‌ ಶರ್ಮಾ, ನಮಗೆ ಒಂದು ಟ್ರೋಫಿ ಸಿಕ್ಕಿದೆ. ಸೂರ್ಯ ತಂದು ಕೊಟ್ಟಿದ್ದು ನಾವು ಸಂಭ್ರಮಿಸಿದ್ದೇವೆ. ಆ ಟ್ರೋಫಿಯ ತೂಕದ ಮಹತ್ವ ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ನಖ್ವಿಗೆ ಟಾಂಗ್‌ ನೀಡಿದರು.

    ಭಾರತದ ಬಿಸಿಸಿಐ ಪ್ರತಿನಿಧಿಗಳು ಫೈನಲ್‌ ಪಂದ್ಯ ವೀಕ್ಷಿಸಲು ದುಬೈಗೆ ಮೈದಾನಕ್ಕೆ ಬಂದಿರಲಿಲ್ಲ. ಭಾನುವಾರ ಬಿಸಿಸಿಐ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮಿಥುನ್‌ ಮನ್ಹಾಸ್ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಫೈನಲ್‌ ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ವೇದಿಕೆಯಲ್ಲಿ ಬಿಸಿಸಿಐ ಪ್ರತಿನಿಧಿ ಇರಬೇಕಿತ್ತು. ಆದರೆ ಚುನಾವಣೆ ನೆಪದಲ್ಲಿ ಬಿಸಿಸಿಐ ಪ್ರತಿನಿಧಿಗಳು ನಿನ್ನೆ ದುಬೈ ಮೈದಾನದಲ್ಲಿ ಕಾಣಿಸದೇ ಫೈನಲ್‌ ಪಂದ್ಯದಿಂದ ಅಂತರವನ್ನು ಕಾಯ್ದುಕೊಂಡಿದ್ದರು.

  • ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    – RSS ಎಂದಿಗೂ ಹಿಂದುಳಿದ ಜನರನ್ನ ಗೌರವದಿಂದ ನೋಡಿಲ್ಲ ಎಂದ ಕೈ ನಾಯಕ

    ನವದೆಹಲಿ: ಕ್ರಿಕೆಟ್‌ನಿಂದ (Cricket) ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ. ಕ್ರಿಕೆಟ್‌ ಗೆದ್ದರೆ ಯುದ್ಧವನ್ನೇ ಗೆದ್ದಂತಾಗಿಬಿಡ್ತಾ? ಅಂತ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪಾಕ್‌ ವಿರುದ್ಧ ಭಾರತ ಏಷ್ಯಾಕಪ್‌ ಗೆದ್ದ ಬಗ್ಗೆ ದೆಹಲಿಯಲ್ಲಿ (Delhi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ ಘಟನೆ ಜನರ ಮನಸ್ಸಿನಿಂದ ಇನ್ನೂ ಅಳಿಸಿಲ್ಲ, ನೋವು ಹಾಗೇ ಇದೆ. ಈ ಸಂದರ್ಭದಲ್ಲಿ ಪಾಕ್ ಜೊತೆಗೆ ಕ್ರಿಕೆಟ್ ಆಡೋದು ಬೇಕಿತ್ತಾ? ನಿಜವಾದ ದೇಶಭಕ್ತಿ ಇದ್ರೆ ಕ್ರಿಕೆಟ್ ಅಲ್ಲ ಯಾವುದೇ ಸಂಬಂಧ ಇಟ್ಕೊಬಾರ್ದು ಎಂದು ತಿವಿದರು.

    ಈ ಆಟದಲ್ಲಿ ಸಾವಿರಾರು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಅಮಿತ್ ಶಾ (Amit Shah) ಮಗಾ ಜಯ್ ಶಾ ಬ್ಯುಸಿನೆಸ್ ಮಾಡೋಕೆ ಪಂದ್ಯ ಆಯೋಜಿಸ್ತಿದ್ದಾರೆ. ಇವರಿಗೆ ಕಾಂಗ್ರೆಸ್ ದೇಶಭಕ್ತಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಕ್ರಿಕೆಟ್ ಗೆದ್ದರೇ ಯುದ್ಧ ಗೆದ್ದಂತಾಗಿಬಿಡ್ತಾ ಅಂತ ಲೇವಡಿ ಮಾಡಿದ್ದಾರೆ.

    RSS ಹಿಂದುಳಿದ ಜನರ ಗೌರವದಿಂದ ನೋಡಿಲ್ಲ
    ಇನ್ನೂ ಜಾತಿ ಜನಗಣತಿಗೆ ಮಾಹಿತಿ ನೀಡಬೇಡಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇಂದ್ರ ಸಚಿವರ, ಸಂಸದರ ಹೇಳಿಕೆ ಅನಾರೋಗ್ಯ ಮನಸ್ಥಿತಿಯ ಹೇಳಿಕೆಯಾಗಿದೆ. ಇವರ ಪಿತೃಪಕ್ಷ ಆರ್‌ಎಸ್‌ಎಸ್, ಆರ್‌ಎಸ್‌ಎಸ್ ಎಂದಿಗೂ ಹಿಂದುಳಿದ ಜನರು, ಶೂಧ್ರರನ್ನು, ಪಂಚಮರನ್ನ ಗೌರವದಿಂದ ನೋಡಿಲ್ಲ. ಅವರನ್ನು ಕಾಲಾಳುಗಳಾಗಿ ಬಳಸಿಕೊಂಡಿದೆ. ಓಬಿಸಿಗಳಿಗೆ ಅವಕಾಶಗಳು ಸಿಕ್ಕರೇ ಅವರು ಸಮಾಜದಲ್ಲಿ ಮೇಲೆ ಬರುತ್ತಾರೆ ಎಂಬ ದುರುದ್ದೇಶದಿಂದ ಈ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಆರ್‌ಎಸ್‌ಎಸ್ ಉದ್ದೇಶವನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಜಾನಗಣತಿ ಗಣತಿ ಮಾಡುತ್ತದೆ. ನಾವು ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುತ್ತಿದ್ದೇವೆ. ಸಮಾಜದಲ್ಲಿ ತುಳಿತಕ್ಕೊಳಾದ ಜನರ ಅಭಿವೃದ್ಧಿಗೆ ಮಾಡುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಸಭೆ ಮಾಡಿದ್ದಾರೆ. ಬಿಜೆಪಿ ನಾಯಕರು ಪ್ರಚೋಧನೆ ನೀಡಿ ಸರ್ಕಾರಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

    ಇನ್ನೂ ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾವ ಜಾತಿಯನ್ನು ಎಲ್ಲಿ ಸೇರಿಸಬೇಕು ಎಂದು ಕೇಳುವ ಹಕ್ಕಿದೆ. ಇದನ್ನು ಎಸ್ಟಿ-ಎಸ್ಟಿ ಕಮಿಷನ್ ನಿರ್ಧಾರ ಮಾಡುತ್ತೆ, ಬಳಿಕ ಸಂಸತ್‌ನಲ್ಲಿನ ಇದು ನಿರ್ಧಾರವಾಗುತ್ತದೆ ಎಂದು ಹೇಳಿದರು.

  • ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!

    ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!

    ದುಬೈ: ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ (Asia cup 2025) ಫೈನಲ್‌ನಲ್ಲಿ ಪಾಕಿಸ್ತಾನವನ್ನು (Pakistan) 5 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ (Team India) ಪಹಲ್ಗಾಮ್ ದಾಳಿಗೆ ಪಿಚ್‌ನಲ್ಲೂ ಪ್ರತೀಕಾರ ತೀರಿಸಿಕೊಂಡಿದೆ. ಆ ಬಳಿಕ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಪಾಕಿಸ್ತಾನದ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಖ್ವಿಯಿಂದ ಕಪ್‌ ಸ್ವೀಕಾರಕ್ಕೆ ಭಾರತ ನಿರಾಕರಿಸಿದೆ. ಕಪ್‌ ಇಲ್ಲದೆಯೂ ಪಿಚ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದಾರೆ.

    ಚೆಕ್‌ ಹರಿದು ಎಸೆದ ಸಲ್ಮಾನ್‌
    ಪಂದ್ಯ ಮುಗಿದ ಒಂದು ಗಂಟೆ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನ ಆಟಗಾರರಿಗೆ ರನ್ನರ್ ಆಪ್ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ, ಪಾಕ್‌ನ ಪ್ರತಿ ಆಟಗಾರರು ವೇದಿಕೆ ಮೇಲೆ ಬಂದಾಗಲೂ ‘ಮೋದಿ… ಮೋದಿ, ಇಂಡಿಯಾʼ ಎಂದು ಪ್ರೇಕ್ಷಕರು ಘೋಷಣೆ ಕೂಗಿದ್ದಾರೆ. ಇದರಿಂದ ಪಾಕ್ ಆಟಗಾರರು ತೀವ್ರ ಮುಜುಗರಕ್ಕೊಳಗಾದರು. ರನ್ನರ್ ಅಪ್ ಬಹುಮಾನಕ್ಕೆ ಬಂದ ಪಾಕ್ ಕ್ಯಾಪ್ಟನ್ ಸಲ್ಮಾನ್ ಬಾಂಗ್ಲಾ ಕ್ರಿಕೆಟ್‌ ಮುಖ್ಯಸ್ಥರಿಂದ ಚೆಕ್‌ನ್ನು ಪಡೆದು ವೇದಿಕೆ ಮೇಲೆಯೇ ಹರಿದು ಎಸೆದಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

    ಭಾರತದ ಆಟಗಾರರಿಗೆ ಕಪ್‌ ನೀಡಲು ನಖ್ವಿ ವೇದಿಕೆಗೆ ಬಂದಾಗ ಟೀಂ ಇಂಡಿಯಾ ಆಟಗಾರರು ವೇದಿಕೆಯಿಂದ 10-15 ಅಡಿ ದೂರ ನಿಂತು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ರೋಫಿ ಸ್ವೀಕರಿಸದೇ ಮೈದಾನದಲ್ಲಿ ಸಂಭ್ರಮಿಸಿದ್ದಾರೆ. ಪಂದ್ಯ ಶ್ರೇಷ್ಠ ಸೇರಿದಂತೆ ಇನ್ನಿತರ ಪ್ರಶಸ್ತಿಯನ್ನು ಉಳಿದ ಗಣ್ಯರಿಂದ ಭಾರತದ ಆಟಗಾರರು ಪಡೆದಿದ್ದಾರೆ. ಬಳಿಕ ನಿರೂಪಕ ಸೈಮನ್‌ ಡೋಲ್‌ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಎಸಿಸಿ ಮಾಹಿತಿ ನೀಡಿದೆ ಎಂದು ಕಾರ್ಯಕ್ರಮವನ್ನು ಕೊನೆಗೊಳಿಸಿದ್ದಾರೆ.

    ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಉದ್ವಿಗ್ನತೆಯನ್ನು ಪ್ರತಿಬಿಂಬಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಈ ವರ್ಷದ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಇದು ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಅಲ್ಲಿಂದ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಇದನ್ನೂ ಓದಿ: Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

  • Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    Asia Cup 2025 | ಚಾಂಪಿಯನ್‌ ಭಾರತ ತಂಡಕ್ಕೆ ಬಿಸಿಸಿಐನಿಂದ 21 ಕೋಟಿ ಗಿಫ್ಟ್‌

    ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ (Asia Cup) ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ (BCCI) ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ.

    ಇದಲ್ಲದೇ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನಿಂದ (ACC) ಚಾಂಪಿಯನ್‌ ತಂಡಕ್ಕೆ 2.6 ಕೋಟಿ ರೂ. ಟೂರ್ನಿಯ ಬಹುಮಾನ ಸಿಕ್ಕಿದೆ. ರನ್ನರ್‌ ಅಪ್‌ ಪಾಕಿಸ್ತಾನ ತಂಡ ಕೇವಲ 1.3 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ. ಇದನ್ನೂ ಓದಿ: ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

    ಮೈದಾನದಲ್ಲಿ ಭಾರೀ ಹೈಡ್ರಾಮಾ
    ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ (Pakistan) ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್‌ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು.

    ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯ ಆಚರಿಸಬೇಕಾಯಿತು. ಇದನ್ನೂ ಓದಿ: ಪಾಕ್‌ ವಿರುದ್ಧ ಗೆದ್ದ ಭಾರತಕ್ಕೆ ಏಷ್ಯಾ ಕಪ್‌ – ಸಿದ್ದರಾಮಯ್ಯ, ಹೆಚ್‌ಡಿಕೆ ಅಭಿನಂದನೆ

    ಭಾನುವಾರ ನಡೆದ ಹೈವೋಲ್ಟೇಜ್‌ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಳಂಬ
    ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಗಿ ನಡೆಯಿತು. ನಖ್ವಿ ವೇದಿಕೆಯ ಮೇಲೆ ಬಂದು ನಿಂತಾಗ, ಭಾರತೀಯ ಆಟಗಾರರು ಸುಮಾರು 15 ಗಜಗಳಷ್ಟು ದೂರದಲ್ಲಿಯೇ ನಿಂತು, ಮುಂದೆ ಬರಲು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ, ಇನ್ನೂ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು. ಇದನ್ನೂ ಓದಿ: ಪಾಕ್‌ ಸಚಿವನಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ

  • ಪಾಕ್‌ ಸಚಿವನಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ

    ಪಾಕ್‌ ಸಚಿವನಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ

    ದುಬೈ: ಪಾಕಿಸ್ತಾನ ಸಚಿವ ಹಾಗೂ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್‌ ನಖ್ವಿಯಿಂದ ಏಷ್ಯಾ ಕಪ್‌ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದ ಪ್ರಸಂಗ ನಡೆಯಿತು.

    2025 ರ ಏಷ್ಯಾಕಪ್‌ನ ಉದ್ವಿಗ್ನ ಮತ್ತು ರಾಜಕೀಯವಾಗಿ ತುಂಬಿದ ಪರಾಕಾಷ್ಠೆಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನದ ಆಂತರಿಕ ಸಚಿವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ವಿಜೇತರ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಟ್ರೋಫಿ ಸ್ವೀಕಾರ ಸಮಾರಂಭದಲ್ಲಿ ವಿಳಂಬವಾಯಿತು.

    ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಕ್ರೀಡಾ ಉದ್ವಿಗ್ನತೆಯನ್ನು ಪ್ರತಿಬಿಂಬಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಈ ವರ್ಷದ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಇದು ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಅಲ್ಲಿಂದ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.

    ಇದು ಕ್ರಿಕೆಟ್‌ ತಂಡದ ಮೇಲೆಯೂ ಪರಿಣಾಮ ಬೀರಿತ್ತು. ಭಾರಿ ವಿರೋಧದ ನಡುವೆಯೂ ಟೀಂ ಇಂಡಿಯಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಿತು. ಆದರೆ, ಪಾಕ್‌ ವಿರುದ್ಧದ ಪಂದ್ಯದಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿತು. ಪಾಕ್‌ ಆಟಗಾರರಿಗೆ ಹ್ಯಾಂಡ್‌ಶೇಕ್‌ ಮಾಡಲಿಲ್ಲ. ಹೀಗೆ, ಎರಡೂ ದೇಶಗಳ ನಡುವಿನ ಪಂದ್ಯದಲ್ಲಿ ಕ್ರಿಕೆಟ್‌ ನಿಯಮ ಉಲ್ಲಂಘನೆಯಂತಹ ಪ್ರಸಂಗಗಳು ನಡೆದವು.

  • ಕ್ರೀಡಾ ಮೈದಾನದಲ್ಲಿ `ಆಪರೇಷನ್‌ ಸಿಂಧೂರ’ – ಫಲಿತಾಂಶ ಒಂದೇ, ಭಾರತಕ್ಕೆ ಜಯ: ಮೋದಿ ಬಣ್ಣನೆ

    ಕ್ರೀಡಾ ಮೈದಾನದಲ್ಲಿ `ಆಪರೇಷನ್‌ ಸಿಂಧೂರ’ – ಫಲಿತಾಂಶ ಒಂದೇ, ಭಾರತಕ್ಕೆ ಜಯ: ಮೋದಿ ಬಣ್ಣನೆ

    ನವದೆಹಲಿ: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಆಪರೇಷನ್‌ ಸಿಂಧೂರಕ್ಕೆ ಹೋಲಿಸಿ ಭಾರತ ತಂಡವನ್ನು ಅಭಿನಂದಿಸಿದ್ದಾರೆ.

    “ಕ್ರೀಡಾ ಮೈದಾನದಲ್ಲಿ ಆಪರೇಷನ್‌ ಸಿಂಧೂರ – ಫಲಿತಾಂಶ ಒಂದೇ, ಭಾರತಕ್ಕೆ ಜಯ” ಎಂದು ಬರೆದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

    ಪಹಲ್ಗಾಮ್‌ ದಾಳಿಯ ನಂತರ ಭಾರತ ನಡೆಸಿದ ಕಾರ್ಯಾಚರಣೆಗೆ `ಆಪರೇಷನ್‌ ಸಿಂಧೂರ’ ಹೆಸರನ್ನು ಇಟ್ಟಿತ್ತು. ಈಗ ತಿಲಕ್‌ ವರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ 5 ವಿಕೆಟ್‌ಗಳ ಜಯ ಸಾಧಿಸಿ 9ನೇ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

    ವಿಶೇಷ ಏನೆಂದರೆ ಸಿಂಧೂರಕ್ಕೆ ಹೆಸರು ʼತಿಲಕʼ ಎಂಬ ಇನ್ನೊಂದು ಸಮನಾರ್ಥಕ ಪದವಿದೆ. ಹೀಗಾಗಿ ಈಗ ನೆಟ್ಟಿಗರು ಭಾರತ ಸೇನೆ ಪಾಕಿಸ್ತಾನದ ವಿರುದ್ಧ ಆಪರೇಷನ್‌ ಸಿಂಧೂರ ಮಾಡಿದರೆ ಭಾರತೀಯ ಕ್ರಿಕೆಟ್‌ ತಂಡ ಆಪರೇಷನ್‌ ತಿಲಕ್‌ ಮಾಡಿ ಹೊಡೆದು ಹಾಕಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

    ಈ ಬಾರಿಯ ಏಷ್ಯಾಕಪ್‌ನಲ್ಲಿ ಭಾರತ ತಂಡ ಮೂರು ಬಾರಿ ಪಾಕ್‌ ತಂಡವನ್ನು ಎದುರಿಸಿತ್ತು. ಲೀಗ್‌, ಸೂಪರ್‌ 4, ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡೆದಿದ್ದು ಮಾತ್ರವಲ್ಲ ಅಜೇಯವಾಗಿ ಈ ಟೂರ್ನಿ ಮುಗಿಸಿದ್ದು ವಿಶೇಷ.ಇದನ್ನೂ ಓದಿ: ಹ್ಯಾರಿಸ್‌ ರೌಫ್‌ ವಿಕೆಟ್‌ ಉಡೀಸ್‌ ಮಾಡಿ ‘ಪ್ಲೇನ್‌ ಕ್ರ್ಯಾಶ್’‌ ಸನ್ನೆ ಮೂಲಕವೇ ಬುಮ್ರಾ ಟಕ್ಕರ್‌

  • ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್‌ ಕ್ರ್ಯಾಶ್‌ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ

    – ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಬಿಗ್‌ ವಾರ್ನಿಂಗ್‌

    ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ (Asia Cup 2025) ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಹಾಗೂ ಪಾಕ್‌ ವೇಗಿ ಹ್ಯಾರಿಸ್‌ ರೌಫ್‌ಗೆ ಪಂದ್ಯ ಶುಲ್ಕದ ತಲಾ 30% ದಂಡ ವಿಧಿಸಲಾಗಿದೆ.

    ಶುಕ್ರವಾರ ವಿಚಾರಣೆ ಮುಗಿದ ಬಳಿಕ ಮ್ಯಾಚ್‌ ರೆಫರಿ ರಿಚಿ ರಿಚರ್ಡ್‌ಸನ್‌ ಇಬ್ಬರೂ ಆಟಗಾರರಿಗೆ ಪಂದ್ಯ ಶುಲ್ಕದ 30% ದಂಡ ವಿಧಿಸಿದ್ದಾರೆ. ಆದ್ರೆ ಗನ್‌ ಸೆಲೆಬ್ರೇಷನ್‌ ಮಾಡಿದ್ದ ಸಾಹಿಬ್‌ಜಾದಾ ಫರ್ಹಾನ್‌ಗೆ (Sahibzada Farhan) ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಮ್‌ – ಏಷ್ಯಾ ಕಪ್‌ ಇತಿಹಾಸದಲ್ಲಿ ಇಂಡೋ- ಪಾಕ್ ಫೈನಲ್

    ಸೂರ್ಯನಿಗೇಕೆ ದಂಡ?
    ‌ಏಷ್ಯಾಕಪ್‌ ಟೂರ್ನಿಯ ಗುಂಪುಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಗೆದ್ದಾಗ ನಾಯಕ ಸೂರ್ಯಕುಮಾರ್‌ ಯಾದವ್‌ ಪಂದ್ಯದ ಗೆಲುವು ಪಹಲ್ಗಾಮ್‌ ಸಂತ್ರಸ್ತರು ಹಾಗೂ ಭಾರತೀಯ ಸೇನೆಗೆ ಅರ್ಪಣೆ ಎಂದಿದ್ದರು. ಈ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ಸೂರ್ಯರನ್ನ ವಿಚಾರಣೆ ನಡೆಸಿದಾಗ ತನ್ನದೇನು ತಪ್ಪಿಲ್ಲವೆಂದು ಒಪ್ಪಿಕೊಂಡರು. ಬಳಿಕ ಐಸಿಸಿ 30% ದಂಡ ವಿಧಿಸಿ ಆದೇಶಿಸಿತು. ಏಷ್ಯಾ ಕಪ್ ಮುಗಿದ ನಂತರವೇ ಐಸಿಸಿಯಿಂದ ಅಧಿಕೃತ ದೃಢೀಕರಣ ಸಿಗಲಿದೆ ಎಂದು ರಿಚರ್ಡ್‌ಸನ್‌ ತಿಳಿಸಿದ್ದಾರೆ.

    ಮತ್ತೊಂದು ಕಡೆ ಪ್ಲೇನ್‌ ಕ್ರ್ಯಾಶ್‌ ರೀತಿ ಸಂಭ್ರಮಿಸಿದ್ದಕ್ಕೆ ರೌಫ್‌ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿತ್ತು. ವಿಚಾರಣೆ ಬಳಿಕ ಐಸಿಸಿ ರೌಫ್‌ಗೂ ದಂಡ ವಿಧಿಸಿತು. ಇನ್ನೂ ಸೂಪರ್‌ ಫೋರ್‌ನ ಮೊದಲ ಪಂದ್ಯದಲ್ಲಿ ಫಿಫ್ಟಿ ಬಾರಿಸಿ ಗನ್‌ ಸೆಲೆಬ್ರೇಷನ್‌ ಮಾಡಿದ ಫರ್ಹಾನ್‌ಗೆ ಎಚ್ಚರಿಕೆ ನೀಡಿತು. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು 3ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಏಷ್ಯಾಕಪ್‌ನ 41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.

  • ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

    ದುಬೈ: ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ವಿರುದ್ಧ ಐಸಿಸಿ ಶಿಸ್ತು ಕ್ರಮಕೈಗೊಂಡಿದೆ.

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಿದೆ.

    ವಿಚಾರಣೆ ಸಂದರ್ಭದಲ್ಲಿ ಸೂರ್ಯ ತನ್ನ ಮೇಲೆ ಬಂದ ಆರೋಪಕ್ಕೆ ತಪ್ಪೊಪ್ಪಿಕೊಂಡಿಲ್ಲ. ಮುಂದೆ ನಡೆಯವ ಫೈನಲ್‌ ಪಂದ್ಯದಲ್ಲಿ ರಾಜಕೀಯ ಎಂದು ಅರ್ಥೈಸಬಹುದಾದ ಯಾವುದೇ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ:  ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್‌ ಯಾದವ್‌ ಅವರ ವಿಚಾರಣೆ ನಡೆಸಿತ್ತು. ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್‌ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್‌ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದರು. ಇದನ್ನೂ ಓದಿ:  ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸೂರ್ಯ ಹೇಳಿದ್ದೇನು?
    ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು‌ ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.

  • ಫಸ್ಟ್‌ ಟೈಮ್‌ – ಏಷ್ಯಾ ಕಪ್‌ ಇತಿಹಾಸದಲ್ಲಿ ಇಂಡೋ- ಪಾಕ್ ಫೈನಲ್

    ಫಸ್ಟ್‌ ಟೈಮ್‌ – ಏಷ್ಯಾ ಕಪ್‌ ಇತಿಹಾಸದಲ್ಲಿ ಇಂಡೋ- ಪಾಕ್ ಫೈನಲ್

    – ಸೂಪರ್‌ ಸಂಡೇ ಮತ್ತೊಮ್ಮೆ ರಣರೋಚಕ ಕದನ

    ದುಬೈ: ನಿರ್ಣಾಯಕ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 11 ರನ್‌ಗಳ ಸೋಲುಣಿಸಿದ ಪಾಕಿಸ್ತಾನ ತಂಡ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಹೀಗಾಗಿ ಇದೇ ಮೊದಲಬಾರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

    1984ರಲ್ಲಿ ಏಷ್ಯಾ ಕಪ್ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು 16 ಬಾರಿ ಉಭಯ ತಂಡಗಳ ನಡುವೆ ಪಂದ್ಯಾವಳಿ ಜರುಗಿದೆ. ಆದ್ರೆ ಈವರೆಗೂ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಫೈನಲ್ ತಲುಪಿದ್ದಿಲ್ಲ. ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಅಕ್ಷರಶಃ ಹೈವೋಲ್ಟೇಜ್ ಪಂದ್ಯವಾಗಲಿದೆ. ಇದನ್ನೂ ಓದಿ: ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ಐಸಿಸಿ ವಾರ್ನಿಂಗ್‌

    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಾಕಿಸ್ತಾನದ ಬ್ಯಾಟರ್ ಗಳು ಕೈಕೊಟ್ಟರೂ ಬೌಲರ್ ಗಳ ಸಾಹಸದಿಂದಾಗಿ ಪಂದ್ಯ ರೋಮಾಂಚಕ ಅಂತ್ಯ ಕಾಣುವಂತಾಯಿತು.

    ಬಾಂಗ್ಲಾದೇಶ ತಂಡದ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್ ಶಾ ಅಫ್ರಿದಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದನ್ನೂ ಓದಿ: ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಸಂಕ್ಷಿಪ್ತ ಸ್ಕೋರ್
    ಪಾಕಿಸ್ತಾನ 20 ಓವರ್ ಗಳಲ್ಲಿ 135/8
    ಮೊಹಮ್ಮದ್ ಹ್ಯಾರಿಸ್ 31 (23), ಮೊಹಮ್ಮದ್ ನವಾಝ್ 25(15), ಶಾಹಿನ್ ಶಾ ಅಫ್ರಿದಿ 19(13), ಟಸ್ಕಿನ್ ಅಹ್ಮದ್ 28ಕ್ಕೆ 3, ಮಹೆದಿ ಹಸನ್ 28ಕ್ಕೆ 2, ರಿಶಾದ್ ಹುಸೈನ್ 18ಕ್ಕೆ 2

    ಬಾಂಗ್ಲಾದೇಶ 20 ಓವರ್ ಗಳಲ್ಲಿ 124/9,
    ಶಮಿಮ್ ಹುಸೇನ್ 30(25), ರಿಶಾದ್ ಹುಸೇನ್ 16(11), ಶಹೀನ್ ಶಾ ಅಫ್ರಿದಿ 17ಕ್ಕೆ 3, ಹ್ಯಾರಿಸ ರೌಫ್ 33ಕ್ಕೆ 3.

  • ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    – ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ್ದಕ್ಕೆ ಸೂರ್ಯ ವಿರುದ್ಧ ಪಿಸಿಬಿ ಕಂಪ್ಲೆಂಟ್‌

    ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ (Ind vs Pak) ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

    ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿಗೆ ಬಿಸಿಸಿಐ (BCCI) ದೂರು ನೀಡಿದೆ. ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

    Abhishek Sharma 3

    ವಿವಾದ ಆಗಿದ್ದೇನು?
    ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

    ಸೂರ್ಯ ವಿರುದ್ಧ ದೂರು
    ಇನ್ನೂ ಲೀಗ್‌ ಸುತ್ತಿನಲ್ಲಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav), ಪಂದ್ಯದ ಗೆಲುವುನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರಪಡೆಗಳಿಗೆ ಅರ್ಪಿಸಿದ್ದರು. ಇದಕ್ಕಾಗಿ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಐಸಿಸಿಗೆ ದೂರು ನೀಡಿದೆ.

    ಸೂರ್ಯಕುಮಾರ್‌ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಕ್ರೀಡಾ ಪ್ರತಿಷ್ಠೆಗೆ ಹಾನಿಯಾಗಿದೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಸೂರ್ಯ ಈ ಆರೋಪಗಳನ್ನು ನಿರಾಕರಿಸಿದ್ರೆ, ಅಧಿಕೃತ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಬೇಕಾಗುತ್ತೆ ಎಂದು ತಿಳಿದುಬಂದಿದೆ.