Tag: Team india

  • ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

    ಬೆಂಗಳೂರು: ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 21 ರನ್ ಗಳಿಂದ ಸೋಲಿಸಿತು. ಈ ಮೂಲಕ ಸತತ 10 ಗೆಲುವಿನ ಸವಿಯ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಕನಸು ಕನಸಾಗಿಯೇ ಉಳಿಯಿತು.

    50 ಓವರ್ ಗಳಲ್ಲಿ ಗೆಲ್ಲಲು 335 ಟಾರ್ಗೆಟ್ ಬೆನ್ನತ್ತಿದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮಹೇಂದ್ರ ಸಿಂಗ್ ಧೋನಿ ಔಟಾಗುವವರೆಗೆ ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿತ್ತು.

    ಅಜಿಂಕ್ಯಾ ರಹಾನೆ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನೀಡಿದರು. ಮಧ್ಯದಲ್ಲಿ ಬಂದ ಹಾರ್ದಿಕ್ ಪಾಂಡ್ಯ 3 ಸಿಕ್ಸರ್ ಗಳನ್ನು ಸಿಡಿಸಿದರೂ ಭಾರತದ ಗೆಲುವಿಗೆ ಇದು ಸಾಕಾಗಲಿಲ್ಲ. ರಹಾನೆ 53, ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 21, ಪಾಂಡ್ಯ 41, ಕೇದಾರ್ ಜಾಧವ್ 67, ಮನೀಷ್ ಪಾಂಡೆ 33, ಧೋನಿ 13, ಅಕ್ಷರ್ ಪಟೇಲ್ 5, ಮೊಹಮ್ಮದ್ ಶಮಿ 6 ಹಾಗೂ ಉಮೇಶ್ ಯಾದವ್ 2 ರನ್ ಗಳಿಸಿದರು.

    ಆಸ್ಟ್ರೇಲಿಯಾ ಪರವಾಗಿ ರಿಚಡ್ರ್ಸನ್ 3, ಕಾಲ್ಟರ್‍ನೈಲ್2, ಕಮಿನ್ಸ್ ಹಾಗೂ ಝಂಪಾ ತಲಾ 1 ವಿಕೆಟ್ ಗಳಿಸಿದರು.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿಯಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಬಾರಿಸಿದರು. 119 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 124 ರನ್ ಗಳಿಸಿದರು. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟ ಎಷ್ಟಿತ್ತೆಂದರೆ ತಂಡದ ಮೊದಲ ವಿಕೆಟ್ ಪತನವಾಗಿದ್ದತ 35ನೇ ಓವರ್ ನಲ್ಲಿ. 35ನೇ ಓವರ್ ನ ಕೊನೆಯ ಎಸೆತದಲ್ಲಿ ತಂಡದ ಮೊತ್ತ 231 ರನ್ ಆಗಿದ್ದಾಗ ಡೇವಿಡ್ ವಾರ್ನರ್ ಔಟಾದರು. ವಾರ್ನರ್ ಗೆ ಫಿಂಚ್ ಉತ್ತಮ ಜೊತೆಯಾಟ ನೀಡಿದರೂ ಶತಕ ವಂಚಿತರಾದರು. 96 ಎಸೆತಗಳಲ್ಲಿ ಫಿಂಚ್ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 94 ರನ್ ಗಳಿಸಿ ಔಟಾದರು. ಹೆಡ್ 29, ಸ್ಮಿತ್ 3, ಹ್ಯಾಂಡ್ಸ್ ಕಾಂಬ್ 43, ಸ್ಟಾಯ್ನಿಸ್ 15, ವೇಡ್ 3 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್ 4 ಹಾಗೂ ಕೇದಾರ್ ಜಾಧವ್ 1 ವಿಕೆಟ್ ಪಡೆದರು. ನಿಗದಿತ 50 ಓವರ್ ಗಳು ಮುಗಿದಾಗ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತ್ತು.

    https://twitter.com/BCCI_Tv/status/913429402817613824

  • ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಟೀಂ ಇಂಡಿಯಾ ದಾಖಲೆ ಮಾಡುತ್ತಾ..? ಅಥವಾ ಮಳೆರಾಯ ಭಾರತದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕ್ತಾನಾ..?

    ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿ ಪಡೆ ಸತತ 4 ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಹಿಂದೆ ಭಾರತ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನು ಗೆದ್ದಿತ್ತು. 1986ರಲ್ಲಿ 6 ಪಂದ್ಯಗಳ ಸರಣಿಯನ್ನು 3-2 ಹಾಗೂ 2013ರಲ್ಲಿ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು.

    ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯವನ್ನು ಭಾರತ ಗೆದ್ದರೆ ಸತತ 10ನೇ ಜಯ ಗಳಿಸಿದರೆ ಮತ್ತೊಂದು ದಾಖಲೆಯೂ ಭಾರತ ತಂಡಕ್ಕೆ ಸಿಗಲಿದೆ. ಟೀಂ ಇಂಡಿಯಾ ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸತತ 9 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ 2008ರ ನವೆಂಬರ್ ನಿಂದ 2009ರ ಫೆಬ್ರವರಿವರೆಗೆ ನಡೆದ 9 ಪಂದ್ಯಗಳನ್ನು ಸತತವಾಗಿ ಭಾರತ ಗೆದ್ದಿತ್ತು. ಇದೇ ಜುಲೈ 24ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಹಳೆಯ ದಾಖಲೆಯನ್ನು ಸರಿಗಟ್ಟಿದೆ.

    ಈ ವರ್ಷ ಜುಲೈನಲ್ಲಿ ಆಂಟಿಗಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 11 ರನ್ ಗಳಿಗೆ ಸೋತ ಬಳಿಕ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆದರೆ ಆಸ್ಟ್ರೇಲಿಯಾ ಜನವರಿ 26ರಂದು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಂತರ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ 5 ಹಾಗೂ ಆಸ್ಟ್ರೇಲಿಯಾ 6 ಬಾರಿ ಸತತ 10 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. ಸತತ 10 ಏಕದಿನ ಪಂದ್ಯವನ್ನು ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಎರಡೆರಡು ಬಾರಿ ಗೆದ್ದ ದಾಖಲೆ ಮಾಡಿದ್ದರೆ ನ್ಯೂಜಿಲೆಂಡ್ 1 ಬಾರಿ 10 ಪಂದ್ಯವನ್ನು ನಿರಂತರವಾಗಿ ಗೆದ್ದಿದೆ.

     

    ಬೆಂಗಳೂರಿನಲ್ಲಿ ಇಂದಿ ಬೆಳಗ್ಗಿನಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಂಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಾ ಎನ್ನುವುದು ಸದ್ಯದ ಕುತೂಹಲಕಾರಿ ಪ್ರಶ್ನೆ.

     

  • 39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಇಂದೋರ್ ನಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದರೆ ಅತ್ತ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಕೂಡಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆರಂಭದ 39 ಎಸೆತಗಳಲ್ಲಿ 39 ರನ್ ಗಳಿಸಿದ್ದ ಮೊಯೀನ್ ಅಲಿ ನಂತರದ 14 ಎಸೆತಗಳಲ್ಲಿ 61 ರನ್ ಗಳಿಸಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 7ನೇ ಕ್ರಮಾಂಕದಲ್ಲಿ ಬಂದು 57 ಎಸೆತಗಳಲ್ಲಿ ಒಟ್ಟು 102 ರನ್ ಗಳಿಸಿದರು. ಈ ಮೊದಲು ಈ ದಾಖಲೆ ಜೇಮ್ಸ್ ಫೌಲ್ಕನರ್ ಹೆಸರಿನಲ್ಲಿತ್ತು.

    44ನೇ ಓವರ್ ಮುಗಿಯುವವರೆಗೆ ಶಾಂತವಾಗಿ ಆಡುತ್ತಿದ್ದ ಅಲಿ 45ನೇ ಓವರ್ ನಲ್ಲಿ ಆಕ್ರಮಣಕಾರಿ ಆಟಕ್ಕಿಳಿದರು. ಈ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ ಅಲಿ 8 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. ಅಲಿ ಆಟದಿಂದಾಗಿ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿತು.

    ಕೊನೆಯ 8 ಎಸೆತಗಳಲ್ಲಿ ಮೊಯೀನ್ 42 ರನ್ ಗಳಿಸಿದರು. ಈ 8 ಎಸೆತಗಳಲ್ಲಿ ಅವರು ಕ್ರಮವಾಗಿ 6-6-2-4-6-6-6-6 ರನ್ ಗಳಿಸಿದರು.

    ಮೊಯೀನ್ ದಾಖಲಿಸಿದ ಶತಕ ಇಂಗ್ಲೆಂಡ್ ಪರ 2ನೇ ಆತಿ ವೇಗದ ಶತಕ ಎಂಬ ದಾಖಲೆಗೆ ಪಾತ್ರವಾಯಿತು. ಇಂಗ್ಲೆಂಡ್ ನ ಜೋಸ್ ಬಟ್ಲರ್ 2005ರ ನವೆಂಬರ್ ನಲ್ಲಿ 46 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.

  • ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ದುಬೈ: ಇಂದೋರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳೊಂದಿಗೆ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ.

    ಸೆಪ್ಟೆಂಬರ್ 24ಕ್ಕೆ ಅಂತ್ಯಗೊಂಡ ಹೊಸ ಶ್ರೇಯಾಂಕ ಪಟ್ಟಿಯ ಪ್ರಕಾರ ಒಟ್ಟು 48 ಪಂದ್ಯಗಳಿಂದ 5,764 ಅಂಕಗಳೊಂದಿಗೆ 120 ರೇಟಿಂಗ್ ಸಂಪಾದಿಸಿದ ಭಾರತ ಮೊದಲ ಸ್ಥಾನವನ್ನು ಪಡೆದಿದೆ.

    50 ಪಂದ್ಯಗಳಿಂದ 5,957 ಅಂಗಳೊಂದಿಗೆ ದಕ್ಷಿಣ ಆಫ್ರಿಕಾ 119 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, 50 ಪಂದ್ಯಗಳಿಂದ ಆಸ್ಟ್ರೇಲಿಯಾ 5,709 ಅಂಕ, 114 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

    ಟೆಸ್ಟ್ ನಲ್ಲಿ 36 ಪಂದ್ಯಗಳಿಂದ 4,493 ಅಂಕಗಳೊಂದಿಗೆ 125 ರೇಟಿಂಗ್ ಸಂಪಾದಿಸಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಟಿ20ಯಲ್ಲಿ 13 ಪಂದ್ಯಗಳನ್ನು ಆಡಿರುವ ಭಾರತ 2,328 ಅಂಕಗಳೊಂದಿಗೆ 116 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ.

     

     

  • ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ.

    ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿತ್ತು. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗಿದು. ಇದು ಕೂಡಾ ಭಾರತದ ಪಾಲಿಗೆ ದಾಖಲೆ.

    ಈ ಹಿಂದೆ  ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಒಂದೊಂದು ಗೆಲುವು ಒಲಿದಿತ್ತು. ಈಗ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ಗೆಲ್ಲುವ ಮೂಲಕ ತನ್ನ ಅಜೇಯ ಗೆಲುವಿನ ಸರಣಿಯನ್ನು ಟೀಂ ಇಂಡಿಯಾ ಮುಂದುವರಿಸಿದೆ.

    2006ರಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯ ಸಾಧಿಸಿದ್ದರೆ, 2008ರಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ 54 ರನ್ ಗಳ ಜಯವನ್ನು ಸಾಧಿಸಿತ್ತು. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 153 ರನ್ ಗಳಿಂದ ಗೆದ್ದಿದ್ದರೆ, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 22 ರನ್ ಗಳಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

    ಜಸ್‍ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಚಹಲ್ ಮತ್ತು ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

  • ಆಸೀಸ್‍ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಟೀಂ ಇಂಡಿಯಾ

    ಆಸೀಸ್‍ಗೆ ಮತ್ತೆ ಮುಖಭಂಗ: ಸರಣಿ ಗೆದ್ದ ಟೀಂ ಇಂಡಿಯಾ

    ಇಂದೋರ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 294 ರನ್ ಗಳ ಸವಾಲು ಸ್ವೀಕರಿಸಿದ ಭಾರತ 5 ವಿಕೆಟ್ ಗಳನ್ನು ಕಳೆದುಕೊಂಡು 47.5 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತು. ಈ ಮೂಲಕ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.

    ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.4 ಓವರ್ ಗಳಲ್ಲಿ 139 ರನ್ ಗಳ ಜೊತೆಯಾಟ ಹಾಕುವ ಮೂಲಕ ಭದ್ರ ಬುನಾದಿ ಹಾಕಿದರು. ರೋಹಿತ್ ಶರ್ಮಾ 71 ರನ್(62 ಎಸೆತ, 6 ಬೌಂಡರಿ, 4 ಸಿಕ್ಸರ್), ಅಜಿಂಕ್ಯಾ ರಹಾನೆ 70 ರನ್(76 ಎಸೆತ, 9 ಬೌಂಡರಿ) ಹೊಡೆದರೆ ಕೊಹ್ಲಿ 28 ರನ್(35 ಎಸೆತ, 2 ಬೌಂಡರಿ) ಹೊಡೆದು ಔಟಾದರು.

    ಕೇದಾರ್ ಜಾದವ್ 2 ರನ್ ಹೊಡೆದರೆ, ಕೊನೆಯಲ್ಲಿ 5ನೇ ವಿಕೆಟ್ ಗೆ ಹಾರ್ದಿಕ್ ಪಾಂಡ್ಯ ಮತ್ತು ಮನೀಷ್ ಪಾಂಡೆ 78 ರನ್ ಗಳ ಜೊತೆಯಾಟವಾಡಿದರು. ಗೆಲುವಿನ 10 ರನ್ ಬೇಕಿದ್ದಾಗ ಪಾಂಡ್ಯ 78 ರನ್(72 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಹೊರನಡೆದರು. ಮನೀಷ್ ಪಾಂಡೆ ಔಟಾಗದೇ 36 ರನ್(32 ಎಸೆತ, 6 ಬೌಂಡರಿ), ಧೋನಿ ಔಟಾಗದೇ 3 ರನ್ ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರನ್ ಫಿಂಚ್ 124 ರನ್(125 ಎಸೆತ, 12 ಬೌಂಡರಿ, 5 ಸಿಕ್ಸರ್) ನಾಯಕ ಸ್ಮಿತ್ 63 ರನ್( 71 ಎಸೆತ, 5 ಬೌಂಡರಿ) ಡೇವಿಡ್ ವಾರ್ನರ್ 42 ರನ್(44 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ 6 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು.

    37.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಆಸ್ಟ್ರೇಲಿಯಾ 260 ರನ್ ಗಳಿಸಿದ್ದಾಗ 6 ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲಿ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದ ಭಾರತೀಯ ಬೌಲರ್ ಗಳು ಕೊನೆಯ 12 ಓವರ್ ಗಳು 69 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್‍ಗೆ ಕಡಿವಾಣ ಹಾಕಿದ್ದು ಸರಣಿ ಗೆಲ್ಲಲು ಸಹಕಾರಿ ಆಯ್ತು. 1 ವಿಕೆಟ್ ಕಿತ್ತು 78 ರನ್ ಹೊಡೆದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

     

  • ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾನುವಾರ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲ್ ಮಾಡಿದರು.

    ಈಗಾಗಲೇ ಕಳೆದ ಎರಡು ಪಂದ್ಯಗಳಲ್ಲಿ ಆಸೀಸ್ ತಂಡ ಭಾರತದ ಸ್ಪಿನ್ನರ್ ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿತ್ತು. ಆದರಲ್ಲೂ 2ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

    ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಚಾಹಲ್ ಜೊತೆ ಧೋನಿ ಕೂಡಾ ಸ್ಪಿನ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ದಾಳಿ ನಡೆಸಿ ಧೋನಿ ಎಂಜಾಯ್ ಮಾಡಿದ್ದಾರೆ.

    ಇದರ ವೀಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಪಿನ್ ದಾಳಿಗೆ ಸೇರ್ಪಡೆಯಾಗಿದ್ದು ಯಾರೆಂದು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದೆ. ಜೊತೆಗೆ ಇನ್ನೊಂದು ಟ್ವೀಟ್ ನಲ್ಲಿ ಧೋನಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಧೋನಿ ಸ್ಮೈಲ್ ಫೋಟೋ ಹಾಕಲಾಗಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಭಾರತ 5 ಮ್ಯಾಚ್ ಗಳ ಸರಣಿಯನ್ನು ಗೆದ್ದಂತಾಗುತ್ತದೆ. ಆದರೆ ಇಂದಿನ ಪಂದ್ಯದಲ್ಲಾದರೂ ಆಸೀಸ್ ತಂಡ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸುತ್ತಾ ಎನ್ನುವುದೇ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ ಈ ಪಂದ್ಯವನ್ನೂ ಸೋತರೆ ಆಸೀಸ್ ಸರಣಿಯನ್ನು ಗೆಲ್ಲುವ ಆಸೆಯನ್ನು ಕೈ ಬಿಡಬೇಕಾಗುತ್ತದೆ.

  • ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯವನ್ನು ಟೀಂ ಇಂಡಿಯಾ ಭಾನುವಾರ ಗೆದ್ದರೆ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ. ನಾಳೆಯ ಪಂದ್ಯ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇಲ್ಲಿ ಇದುವರೆಗೆ ಆಡಿದ 4 ಪಂದ್ಯವನ್ನೂ ಭಾರತವೇ ಗೆದ್ದಿದೆ. ಆಸೀಸ್ ವಿರುದ್ಧದ ಪಂದ್ಯವನ್ನೂ ಗೆದ್ದರೆ ಭಾರತ ಈ ಕ್ರೀಡಾಂಗಣದಲ್ಲಿ 5ನೇ ಪಂದ್ಯವನ್ನು ಗೆದ್ದಂತಾಗುತ್ತದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಲಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿದೆ. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗುತ್ತದೆ. ಇದು ಕೂಡಾ ಭಾರತದ ಪಾಲಿಗೆ ದಾಖಲೆ ಎನಿಸಲಿದೆ.

    ರನ್ ಮೆಷಿನ್: ಇಂದೋರ್ ಕ್ರೀಡಾಂಗಣ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಇಲ್ಲಿ ರನ್ ಮಳೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಕೆಲ ದಿನಗಳಿಂದ ಇಲ್ಲಿ ಮಳೆಯಾಗುತ್ತಿದ್ದು ಭಾನುವಾರವೂ ಮಳೆ ಬಂದರೆ ರನ್ ಮಳೆಯಾಗಲ್ಲ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.

    ಟೀಂ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಉತ್ತಮ ಆಟವಾಡುತ್ತಿದೆ. 5 ಏಕದಿನ ಪಂದ್ಯಗಳಲ್ಲಿ ಭಾರತ 2-0 ಮುನ್ನಡೆಯಲ್ಲಿದೆ. ಭಾನುವಾರದ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಪಡಿಸಿಕೊಳ್ಳಲಿದೆ.

  • ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟ – ಅದೃಷ್ಟವಶಾತ್ ರೈನಾ ಪಾರು

    ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟ – ಅದೃಷ್ಟವಶಾತ್ ರೈನಾ ಪಾರು

    ಕಾನ್ಪುರ್: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಂಚರಿಸುತ್ತಿದ್ದ ರೇಂಜ್ ರೋವರ್ ಕಾರಿನ ಟೈರ್ ಸಿಡಿದಿದ್ದು, ಅದೃಷ್ಟವಶಾತ್ ರೈನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸುರೇಶ್ ರೈನಾ ಅವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲು ಘಾಜಿಯಾಬಾದ್ ನಿಂದ ಕಾನ್ಪುರ್‍ಗೆ ರೇಂಜ್ ರೋವರ್ ಕಾರಲ್ಲಿ ತೆರಳುತ್ತಿದ್ದರು. ಈ ವೇಳೆ ಇಟಾವಾ ಬಳಿ ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಡೆದ ಬಳಿಕ ಸ್ಥಳೀಯ ಪೊಲೀಸರು ರೈನಾಗೆ ಮತ್ತೊಂದು ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ. ಘಟನೆಯಲ್ಲಿ ರೈನಾ ಅವರಿಗೆ ಯಾವುದೇ ತರಹದ ಗಾಯಗಳಾಗಿಲ್ಲ ಎಂದು ಡಿಎಸ್‍ಪಿ ರಾಜೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಇಟಾವಾದ ಫ್ರೆಂಡ್ಸ್ ಕಾಲೋನಿ ಬಳಿ ಅಪಘಾತ ನಡೆದಿದೆ. ಕಾರಿನ ಹಿಂಬದಿ ಟೈರ್ ಸ್ಫೋಟಗೊಂಡಿದೆ. ಆದರೆ ಕಾರಿನಲ್ಲಿ ಸ್ಟೆಪ್ನಿ ಇಲ್ಲದ ಕಾರಣ ರೈನಾಗೆ ಬದಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

    https://www.instagram.com/p/BY396ZuATWg/?taken-by=sureshraina3

    https://www.instagram.com/p/BYwqf1yAa9w/?taken-by=sureshraina3

  • ಆಸೀಸ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಯಾರು ಔಟ್?

    ಆಸೀಸ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಯಾರು ಔಟ್?

    ಮುಂಬೈ: ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ.

    ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಗೆ ಪ್ರಕಟಿಸಿದ 16 ಮಂದಿಯ ತಂಡದಲ್ಲಿ ಉಮೇಶ್ ಯಾದವ್, ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.

    ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್ ಸ್ಥಾನ ಸಿಕ್ಕಿದೆ.

    ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲಾಗಿದ್ದು, ಅವರ ಜಾಗದಲ್ಲಿ ಉಮೇಶ್ ಯಾದವ್‍ಗೆ ಸ್ಥಾನ ಸಿಕ್ಕಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 3ರವರೆಗೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಪದ್ಯದಲ್ಲಿ ಭಾರತ ಎ ತಂಡದಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ಸಿಕ್ಕಿದೆ.

    ಸೆಪ್ಟೆಂಬರ್ 17 ರಂದು ಚೆನ್ನೈನಲ್ಲಿ ಮೊದಲ ಏಕದಿನ ಪಂದ್ಯ ನಡೆದರೆ ಅಕ್ಟೋಬರ್ 1ರಂದು ಐದನೇ ಏಕದಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ.

    ಟೀ ಇಂಡಿಯಾ ಪಟ್ಟಿ:
    ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಮನೀಷ್ ಪಾಂಡೆ, ಕೇದಾರ್ ಜಾದವ್, ಅಂಜಿಕ್ಯಾ ರೆಹಾನೆ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚಹಲ್, ಜಸ್‍ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.