Tag: Team India captain

  • ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್

    ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್

    ಸಿನಿಮಾರಂಗದಲ್ಲಿ ಅಷ್ಟೇ ಸುದೀಪ್ ಆಕ್ಟೀವ್ ಆಗಿರೋದಲ್ಲ. ಕ್ರಿಕೆಟ್ ಅನ್ನು ಅಷ್ಟೇ ಪ್ರೀತಿಸುವ ಕಿಚ್ಚ ಸುದೀಪ್, ಕ್ರಿಕೆಟ್‌ನೊಂದಿಗೆ ಉತ್ತಮ ನಂಟು ಹೊಂದಿದ್ದಾರೆ. ಸದ್ಯ `ವಿಕ್ರಾಂತ್ ರೋಣ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಿಚ್ಚನಿಗೆ ಬಿಗ್ ಗಿಫ್ಟ್ವೊಂದು ಲಭ್ಯವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಕಡೆಯಿಂದ ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ.

    ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ `ವಿಕ್ರಾಂತ್ ರೋಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸುದೀಪ್‌ಗೆ ಅತ್ಯಂತ ಸ್ಮರಣೀಯ ಬ್ಯಾಟ್‌ಅನ್ನು ಉಡುಗೊರೆಯಾಗಿ ಕಪಿಲ್‌ದೇವ್ ನೀಡಿದ್ದಾರೆ. 1983ರಲ್ಲಿ ವಿಶ್ವ ಕಪ್ ಪಂದ್ಯದಲ್ಲಿ 175 ಸೆಂಚುರಿ ಬಾರಿಸಿದ್ದ ಕಪಿಲ್, ಆ ಬ್ಯಾಟ್ ಅನ್ನೇ ವಿಶೇಷವಾಗಿ ಉಡುಗೊತೆ ನೀಡಿದ್ದಾರೆ. ಬ್ಯಾಟ್ ಮೇಲೆ ಕಪಿಲ್ ದೇವ್ ಜತೆ ಎಲ್ಲಾ ಆಟಗಾರರ ಸಹಿ ಇರೋದು ವಿಶೇಷ. ಇದನ್ನು ಓದಿ:ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

    ಕ್ರಿಕೆಟ್ ಮೇಲೆ ಅಷ್ಟೇ ಕಿಚ್ಚನಿಗೆ ಒಲವು ಇರೋದಲ್ಲ, ಕ್ರಿಕೆಟ್ ಕ್ಷೇತ್ರದ ಆಟಗಾರರ ಜತೆಯೂ ಉತ್ತಮ ಬಾಂದವ್ಯ ಹೊಂದಿದ್ದಾರೆ ಎಂಬುದಕ್ಕೆ ಇದೇ ತಾಜಾ ಉದಾಹರಣೆ. ಸದ್ಯ ಟ್ರೇಲರ್‌ನಿಂದ ಸದ್ದು ಮಾಡುತ್ತಿರುವ `ವಿಕ್ರಾಂತ್ ರೋಣ’ ಇದೇ ಜುಲೈ 28ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv

  • ‘ವಿರಾಟ್ ಬ್ಯಾಟಿಂಗ್‍ಗೆ ಇಳಿದ್ರೆ ಎದುರಾಳಿ ತಂಡದ ಗುರಿ ಉಡೀಸ್’

    ‘ವಿರಾಟ್ ಬ್ಯಾಟಿಂಗ್‍ಗೆ ಇಳಿದ್ರೆ ಎದುರಾಳಿ ತಂಡದ ಗುರಿ ಉಡೀಸ್’

    – ಕೊಹ್ಲಿಯನ್ನ ರೋಜರ್ ಫೆಡರರ್‌ಗೆ ಹೋಲಿಸಿದ ಎಬಿ ಡಿವಿಲಿಯರ್ಸ್

    ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಆಟಗಾರ ಸ್ವಿಟ್ಜರ್ಲೆಂಡ್‍ನ ರೋಜರ್ ಫೆಡರರ್ ಅವರಿಗೆ ಹೋಲಿಸಿದ್ದಾರೆ.

    ಇನ್‍ಸ್ಟಾಗ್ರಾಮ್ ಲೈವ್ ಚಾಟಿಂಗ್‍ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್ ಸ್ಟೀವ್ ಸ್ಮಿತ್ ಅವರನ್ನು ಸ್ಪ್ಯಾನಿಷ್ ಟೆನಿಸ್ ತಾರೆ ರಾಫೆಲ್ ನಡಾಲ್ ಎಂದು ಡಿವಿಲಿಯರ್ಸ್ ಬಣ್ಣಿಸಿದ್ದಾರೆ. ವಿರಾಟ್ ಕೊಹ್ಲಿ ವಿವಿಧ ದೇಶಗಳ ಕ್ರಿಕೆಟ್ ಮೈದಾನದಲ್ಲಿ ರನ್ ಮಳೆ ಹರಿಸಿದ್ದಾರೆ. ಆದರೆ ಸ್ಮಿತ್ ಮಾನಸಿಕವಾಗಿ ಬಲಶಾಲಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

    ಎಬಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 9 ವರ್ಷಗಳಿಂದ ಆಡುತ್ತಿದ್ದಾರೆ. ಕೊಹ್ಲಿ ಆರ್‍ಸಿಬಿಯ ಕ್ಯಾಪ್ಟನ್ ಕೂಡ ಹೌದು. ಈ ಜೋಡಿ ಮೈದಾನದಲ್ಲಿ ಉತ್ತಮ ಬ್ಯಾಟಿಂಗ್ ಪ್ರರ್ದಶನ ನೀಡಿದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದು ಉಂಟು.

    ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಟೆನಿಸ್ ಆಟಗಾರರಾದ ಫೆಡರರ್ 20 ಮತ್ತು ನಡಾಲ್ 19 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಡಿವಿಲಿಯರ್ಸ್ 2018ರಲ್ಲಿ ಕ್ರಿಕೆಟ್‍ನಿಂದ ನಿವೃತ್ತಿ ಪಡೆದಿದ್ದಾರೆ.

    ಲೈವ್ ಚಾಟಿಂಗ್‍ನಲ್ಲಿ ಮಾತನಾಡಿದ ಡಿವಿಲಿಯರ್ಸ್, “ಕೊಹ್ಲಿ ನಿಖರವಾಗಿ ಬಾಲ್ ಬೀಟ್ ಮಾಡ್ತಾರೆ. ಹೀಗಾಗಿ ಅವರು ಫೆಡರರ್ ಇದ್ದಂತೆ. ಸ್ಮಿತ್ ಮಾನಸಿಕವಾಗಿ ಬಲಶಾಲಿಯಾಗಿದ್ದು, ರನ್ ಗಳಿಸುವುದು ಹೇಗೆ ಎಂದು ಅವರು ಲೆಕ್ಕಾಚಾರ ಹಾಕುತ್ತಾರೆ. ಅವರ ಆಟವು ನೈಸರ್ಗಿಕವಾಗಿ ಕಾಣುತ್ತಿಲ್ಲ. ಆದರೆ ಅವರು ದಾಖಲೆಗಳನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.

    “ಸಚಿನ್ ತೆಂಡೂಲ್ಕರ್ ಅವರು ಕೊಹ್ಲಿ ಹಾಗೂ ನನಗೆ ಆದರ್ಶ ಕ್ರಿಕೆಟರ್. ಅವರ ಸಾಧನೆಗಳು ನಮಗೆ ಮತ್ತು ಪ್ರತಿಯೊಬ್ಬ ಯುವಕರಿಗೆ ಉದಾಹರಣೆಗಳಾಗಿವೆ. ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟರ್ ಎಂದು ಬಣ್ಣಿಸಿದ್ದಾರೆ. ನನ್ನ ನಂಬಿಕೆ, ಅಭಿಪ್ರಾಯದ ಪ್ರಕಾರ ಕೊಹ್ಲಿ ಅತ್ಯಂತ ಅದ್ಭುತ ಚೇಸಿಂಗ್ ಗುರಿ ಹೊಂದಿದ್ದಾರೆ. ಪ್ರತಿಯೊಂದು ಮಾದರಿ ಕ್ರಿಕೆಟ್‍ನಲ್ಲೂ ಸಚಿನ್ ಅತ್ಯುತ್ತಮ ಪ್ರದರ್ಶ ನೀಡಿದ್ದಾರೆ. ಆದರೆ ಗುರಿಯನ್ನು ಬೆನ್ನಟ್ಟುವ ವಿಚಾರದಲ್ಲಿ ಕೊಹ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ವಿರಾಟ್ ಬ್ಯಾಟಿಂಗ್‍ಗೆ ಇಳಿದರೆ ಯಾವುದೇ ಎದುರಾಳಿ ತಂಡ ನೀಡಿದ ಗುರಿ ಸುರಕ್ಷಿತವಾಗಿರಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಿದ್ದಾರೆ.

  • ಧೋನಿಯಲ್ಲ ಕೊಹ್ಲಿ ಹೆಸರಿನಲ್ಲಿವೆ ಪ್ರಮುಖ ದಾಖಲೆಗಳು

    ಧೋನಿಯಲ್ಲ ಕೊಹ್ಲಿ ಹೆಸರಿನಲ್ಲಿವೆ ಪ್ರಮುಖ ದಾಖಲೆಗಳು

    ನವದೆಹಲಿ: ರನ್ ಮೆಷಿನ್ ಖ್ಯಾತಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೈಯಕ್ತಿಯ ದಾಖಲೆ ಅಷ್ಟೇ ಅಲ್ಲದೆ ತಂಡವನ್ನು ಸಮರ್ಥವಾಗಿ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಪ್ರಮುಖ ಮೈಲಿಗಲ್ಲುಗಳನ್ನು ತಮ್ಮ ಖಾತೆಗಳಿಗೆ ಸೇರಿಸಿಕೊಂಡಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ ಭಾರತವನ್ನು ಮುನ್ನಡೆಸಿದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 2007ರ ಟಿ20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಮೂಲಕ ಇತಿಹಾಸ ಬರೆದಿದ್ದರು. ಅದಾದ 4 ವರ್ಷಗಳ ನಂತರ ಭಾರತ ತಂಡವು ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತು. 2013ರಲ್ಲಿ ಧೋನಿ ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಏಕೈಕ ನಾಯಕನಾಗಿ ಹೊರಹೊಮ್ಮಿದರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಮಟ್ಟಕ್ಕೆ ತಲುಪಿತ್ತು. ಆದರೆ ಇನ್ನೂ ಅವರು ಕೆಲವು ದಾಖಲೆಗಳನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ.

    ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಧೋನಿ ನಂತರ ಬಂದ ವಿರಾಟ್ ಕೊಹ್ಲಿ ಅವರು ಈವರೆಗೂ ಐಸಿಸಿ ನಡೆಸುವ ಟೂರ್ನಿಯಲ್ಲಿ ಯಾವುದೇ ಟ್ರೋಫಿ ಗೆದ್ದಿಲ್ಲ. ಆದರೂ ಇಲ್ಲಿಯವರೆಗೆ ಸಾಕಷ್ಟು ಸಾಧನೆ ಮಾಡಿದ್ದಾರೆ.

    ಆಸೀಸ್ ನೆಲದಲ್ಲಿ ಕೊಹ್ಲಿ ಕಮಾಲ್:
    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 2019ರಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸದ ಪುಟಗಳಲ್ಲಿ ಕೊಹ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಬೇರೆ ಯಾವುದೇ ಭಾರತೀಯ ಅಥವಾ ಏಷ್ಯಾದ ನಾಯಕ ಯಶಸ್ವಿಯಾಗಲಿಲ್ಲ. ಆದರೆ ಟೀಂ ಇಂಡಿಯಾ ನಾಯಕ ಕೊಹ್ಲಿ ಈ ಸಾಧನೆಯನ್ನು ಮೊದಲ ಪ್ರಯತ್ನದಲ್ಲಿ ಮಾಡಿದ್ದಾರೆ.

    ಅಡಿಲೇಡ್‍ನಲ್ಲಿ ಭಾರತ 31 ರನ್‍ಗಳ ಜಯದೊಂದಿಗೆ ಟೆಸ್ಟ್ ಸರಣಿಯನ್ನು ಪ್ರಾರಂಭಿಸಿತ್ತು. ಆದರೆ ಆಸೀಸ್ ತಂಡವು ಮತ್ತೆ ಪುಟಿದೇಳುವ ಮೂಲಕ ಎರಡನೇ ಪಂದ್ಯವನ್ನು 146 ರನ್‍ಗಳಿಂದ ಗೆದ್ದುಕೊಂಡಿತ್ತು. ಟೀಂ ಇಂಡಿಯಾ ಮೂರನೇ ಟೆಸ್ಟ್ ನಲ್ಲಿ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿತ್ತು. ಸಿಡ್ನಿಯಲ್ಲಿ ನಿರಂತರ ಮಳೆಯಿಂದಾಗಿ ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು.

    ಟಿ20ಯಲ್ಲಿ ಕಿವೀಸ್ ವಿರುದ್ಧ ವಿರಾಟ್ ದಾಖಲೆ:
    ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿಯನ್ನು ಗೆಲ್ಲಲು ಭಾರತಕ್ಕೆ 10 ವರ್ಷಗಳಿಗಿಂತ ಹೆಚ್ಚು ಕಾಲವೇ ಬೇಕಾಯಿತು. ಕಿವೀಸ್ ವಿರುದ್ಧ ಮೊದಲ ಟಿ20 ಸರಣಿ ಗೆಲುವು ಕೊಹ್ಲಿಯ ನೇತೃತ್ವದಲ್ಲಿ 2017ರ ನವೆಂಬರ್ ನಲ್ಲಿ ಬಂದಿತ್ತು. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಕೊಹ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ವಿಶೇಷವೆಂದರೆ ಕೊಹ್ಲಿ ಅವರು ತಮ್ಮ ತವರು ಮೈದಾನ ದೆಹಲಿಯಲ್ಲೇ ಈ ಸಾಧನೆ ಮಾಡಿದ್ದರು. ಇದು ಅನುಭವಿ ವೇಗಿ ಆಶಿಶ್ ನೆಹ್ರಾ ಅವರ ವಿದಾಯ ಪಂದ್ಯವಾಗಿತ್ತು.

    2017ರಲ್ಲಿ ನಡೆದ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು 53 ರನ್‍ಗಳಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ 40 ರನ್‍ಗಳಿಂದ ಭಾರತ ಸೋತಿತ್ತು. ಬಳಿಕ ತಿರುವನಂತಪುರಂನಲ್ಲಿ ಭರ್ಜರಿ ಗೆಲುವಿನ ಮೂಲಕ ಭಾರತ ಸರಣಿಯನ್ನ 2-1 ಅಂತರದ ತನ್ನದಾಗಿಸಿಕೊಂಡಿತ್ತು.

    ಈ ವರ್ಷವೂ ಕಿವೀಸ್ ವಿರುದ್ಧ ಟಿ20 ಸರಣಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ 5-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಕೊಹ್ಲಿ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು.

    ಟೆಸ್ಟ್ ನಾಯಕನಾಗಿ ಹೆಚ್ಚಿನ ರನ್:
    ಭಾರತೀಯ ಟೆಸ್ಟ್ ತಂಡದ ನಾಯಕನಾಗಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಾಯಕನಾಗಿ 55 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 61.21 ಸರಾಸರಿಯಲ್ಲಿ 5,142 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ವಿರಾಟ್ ಟೆಸ್ಟ್ ಮಾದರಿಯಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹೇಳುವುದಾದರೆ 109 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ 8,659 ರನ್ ಗಳಿಸಿದ ಗ್ರೇಮ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಲನ್ ಬಾರ್ಡರ್ 6,623 ರನ್, ರಿಕಿ ಪಾಂಟಿಂಗ್ 6,542 ರನ್, ಕ್ಲೈವ್ ಲಾಯ್ಡ್ 5,233 ರನ್ ಮತ್ತು ಸ್ಟೀಫನ್ ಫ್ಲೆಮಿಂಗ್ 5,156 ರನ್ ಇದ್ದಾರೆ.

  • ಇದು ನಮಗೆ ತಿಳಿದಿರಲಿಲ್ಲ: ಇಶಾಂತ್ ಕಾಲೆಳೆದ ವಿರಾಟ್

    ಇದು ನಮಗೆ ತಿಳಿದಿರಲಿಲ್ಲ: ಇಶಾಂತ್ ಕಾಲೆಳೆದ ವಿರಾಟ್

    ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರು. ಕೊಹ್ಲಿ ಮೈದಾನದಲ್ಲಿ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಟೀಂ ಇಂಡಿಯಾ ಆಟಗಾರರೊಂದಿಗೆ ತಮಾಷೆಯ ಮಾಡುತ್ತಾರೆ. ಟೀಂ ಇಂಡಿಯಾ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಇನ್‍ಸ್ಟಾಗ್ರಾಮ್ ಪೋಸ್ಟ್‍ಗೆ ತಮಾಷೆಯಾಗಿ ಕೊಹ್ಲಿ ಕಮೆಂಟ್ ಮಾಡಿದ್ದಾರೆ.

    ಇಶಾಂತ್ ಶರ್ಮಾ ಅವರು ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ‘ನೀವು ಒಮ್ಮೆ ಮಾತ್ರ ಬದುಕುತ್ತೀರಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಕ್ಷಣವೇ ಕಮೆಂಟ್ ಮಾಡಿರುವ ಕೊಹ್ಲಿ, ‘ಇದು ನಮಗೆ ತಿಳಿದಿರಲಿಲ್ಲ’ ಎಂದು ಕಾಲೆಳೆದಿದ್ದಾರೆ. ಆಗ ಪ್ರತಿಕ್ರಿಯೆ ನೀಡಿರುವ ಇಶಾಂತ್ ಶರ್ಮಾ, ‘ತಮಾಷೆ ಮಾಡಬೇಡಿ’ ಎಂದು ಕಣ್ಣು ಹೊಡೆಯುವ ಎಮೋಜಿ ಹಾಕಿದ್ದಾರೆ.

    https://www.instagram.com/p/B7Lpm2oAubn/?utm_source=ig_embed

    ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೊನೆಯ ಬಾರಿಗೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಶರ್ಮಾ ಅವರು ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು.

    ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ದಾಖಲಿಸಿತ್ತು. ಇಶಾಂತ್ ಸರಣಿಯಲ್ಲಿ ಒಟ್ಟು 12 ವಿಕೆಟ್ ಗಳಿಸಿದ್ದರು. ಭಾರತವು ನ್ಯೂಜಿಲೆಂಡ್‍ಗೆ ಆರು ವಾರಗಳ ಸುದೀರ್ಘ ಪ್ರವಾಸ ಕೈಗೊಳ್ಳುತ್ತಿದ್ದು, ಇಶಾಂತ್ ಶರ್ಮಾ ಕೂಡ ತಂಡ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಇಶಾಂತ್ ಶರ್ಮಾ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ – ಸರಣಿ ಜಯದೊಂದಿಗೆ ಭಾರತಕ್ಕೆ 360 ಅಂಕ

  • ತೆರೆ ಮೇಲೆ ಬರಲಿದೆ ಮಿಥಾಲಿರಾಜ್‍ರ ಜೀವನಾಧಾರಿತ ಚಿತ್ರ

    ತೆರೆ ಮೇಲೆ ಬರಲಿದೆ ಮಿಥಾಲಿರಾಜ್‍ರ ಜೀವನಾಧಾರಿತ ಚಿತ್ರ

    ಮುಂಬೈ: ಇತ್ತಿಚೆಗೆ ಬಾಲಿವುಡ್‍ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರನ್ನು ತೆರೆ ಮೆಲೆ ತರುತ್ತಿರುವುದು ಹೆಚ್ಚಾಗಿದೆ. ಈ ಸಾಲಿಗೆ ಈಗ ಮಹಿಳಾ ಕ್ರಿಕೆಟ್ ತಂಡ ನಾಯಕಿ ಮಿಥಾಲಿ ರಾಜ್ ಸೆರಿಕೊಳ್ಳಲಿದ್ದಾರೆ ಎಂದು ವೈಕಾಮ್ 18 ಮೋಷನ್ ಚಿತ್ರ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

    ಮುಂಬೈನಲ್ಲಿ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಕಾಮ್ 18 ಮೋಷನ್ ಚಿತ್ರ ನಿರ್ಮಾಣ ಸಂಸ್ಥೆ ಈ ಬಗ್ಗೆ ಹೇಳಿಕೊಂಡಿದ್ದು, ಧೋನಿ, ಮೇರಿಕೋಂ, ಸಚಿನ್, ಮಿಲ್ಕಾ ಸಿಂಗ್‍ರಂತಹ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರು ಈಗಾಗಲೇ ತೆರೆ ಮೇಲೆ ಬಂದು ಹೋಗಿದ್ದಾರೆ. ಈ ಪಟ್ಟಿಯಲ್ಲಿ ಮಿಥಾಲಿ ರಾಜ್‍ರನ್ನು ಸೇರಿಸಲು ವೈಕಾಮ್ ಮೋಷನ್ ಚಿತ್ರ ಸಂಸ್ಥೆ ಮುಂದೆ ಬಂದಿದೆ ಎಂದು ಸಂಸ್ಥೆಯ ಸಿಒಒ ಅಜಿತ್ ಅಂಧರೆ ಹೇಳಿದ್ದಾರೆ.

    ಈ ಬಗ್ಗೆ ಮಿಥಾಲಿ ರಾಜ್ ಮಾತನಾಡಿ, ನನ್ನ ಜೀವನವನ್ನು ತೆರೆ ಮೇಲೆ ನೋಡಲು ನಾನು ಕಾತುರಳಾಗಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ನಿಜಕ್ಕೂ ಈ ಚಿತ್ರ ಯುವತಿಯರ ಮೇಲೆ ಉತ್ತಮ ಪರಿಣಾಮ ಬೀರಲಿದೆ. ದೇಶದಲ್ಲಿ ಅನೇಕ ಯುವತಿಯರಲ್ಲಿ ಪ್ರತಿಭೆ ಇದ್ದರೂ ಸಹ ಹೊರ ಹಾಕಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾವನ್ನು ನೋಡಿದ ಪೋಷಕರು ಯುವತಿಯರಿಗೆ ಬೆಂಬಲ ನೀಡಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

    ಈ ಹಿಂದೆ ಬಾಲಿವುಡ್‍ನಲ್ಲಿ ಭಾಗ್ ಮಿಲ್ಕಾ ಭಾಗ್, ಕ್ವೀನ್, ದ ಮೌಂಟೆನ್ ಮ್ಯಾನ್, ದೃಶ್ಯಂ, ಮೇರಿ ಕೋಮ್, ಟಾಯ್ಲೆಟ್ ಎಕ್ ಪ್ರೇಮ್ ಕಥಾ ಚಿತ್ರದಂತಹ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿದೆ. ನಮ್ಮ ಸಂಸ್ಥೆ ಯಾವಾಗಲೂ ಸಾಧನೆ ಮಾಡಿದ ಮಹಿಳೆಯರನ್ನ ಉದಾಹರಣೆಯಾಗಿರಿಸಿ ದೇಶದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಚಿತ್ರಗಳನ್ನು ಮಾಡುತ್ತೇವೆ. ಉದಾಹರಣೆಗೆ ಕಹಾನಿ, ಕ್ವೀನ್ ಚಿತ್ರಗಳೇ ಇದಕ್ಕೆ ಸಾಕ್ಷಿ ಎಂದರು.

    ದೇಶದಲ್ಲಿ ಅನೇಕ ಮಹಿಳೆಯರಿಗೆ ಮಿಥಾಲಿ ರಾಜ್ ಸ್ಪೂರ್ತಿಯಾಗಿದ್ದಾರೆ. ಇವರ ಜೀವನ ಆಧಾರಿತ ಚಿತ್ರ ತೆರೆ ಮೇಲೆ ಬರುತ್ತಿರುವುದರಿಂದ ಅವರ ಕಷ್ಟ ನೋವುಗಳೆನು? ಅವರ ಸಾಧನೆ ಏನು ಎನ್ನುವುದು ತಿಳಿಯುತ್ತದೆ ಎಂದು ನಿರ್ದೇಶಕ ವರುಣ್ ಚೋಪ್ರಾ ಹೇಳಿದ್ದಾರೆ.

    ಮಿಥಾಲಿ ರಾಜ್ ಅಂತಾರಾಷ್ಟ್ರೀಯಾ ಮಹಿಳಾ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. 6000 ರನ್ ಹೊಡೆದಿರುವ ಮಿಥಾಲಿ 2005 ಮತ್ತು 2017 ವಿಶ್ವಕಪ್‍ನಲ್ಲಿ ಫೈನಲ್‍ಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೇ ಮಿಥಾಲಿಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.