Tag: team inda

  • ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ನವದೆಹಲಿ: ಕೌಟುಂಬಿಕ ಕಾರಣಗಳನ್ನು ಎದುರಿಟ್ಟು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದ ರೋಹಿತ್ ಶರ್ಮಾ (Rohit Sharma) ನಡೆಗೆ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಗರಂ ಆಗಿದ್ದಾರೆ.

    ಪ್ರತಿ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಆಡಬೇಕು. ವಯಕ್ತಿಕ ವಿಷಯಗಳನ್ನು ಬಿಟ್ಟು ತಂಡವನ್ನು ಸದೃಢಗೊಳಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲು – ನಂ.1 ಪಟ್ಟ ಕಳೆದುಕೊಂಡ ಭಾರತ

    ವಿಶ್ವಕಪ್ ಪಂದ್ಯ (World Cup) ನಡೆಯಲಿರುವ ಈ ವರ್ಷ ಆಟಗಾರರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಕೌಟುಂಬಿಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.

    ರೋಹಿತ್ ಗೈರಿನಲ್ಲಿ ಮೊದಲ ಪಂದ್ಯದ ಹಾರ್ದಿಕ್ ಪಾಂಡ್ಯಾ ( Hardik Pandya) ನಾಯಕತ್ವದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ 1-0 ಮುನ್ನಡೆ ಪಡೆದಿತ್ತು.

    ನಂತರದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿ ತಂಡ ಸೋಲು ಅನುಭವಿಸಿತ್ತು. ಈ ಮೂಲಕ 1-2 ಅಂತರದಲ್ಲಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಇದನ್ನೂ ಓದಿ: 3 ಪಂದ್ಯ, ಫಸ್ಟ್ ಬಾಲಿಗೆ ಔಟ್ – ಕೆಟ್ಟ ದಾಖಲೆ ಬರೆದ ಸೂರ್ಯ

  • ಬ್ಯಾಟರ್ ಆಗುವುದಕ್ಕಿಂತಲೂ ಆಲ್‌ರೌಂಡರ್ ಆಗಿ ಆಡಲು ಬಯಸುತ್ತೇನೆ: ಹಾರ್ದಿಕ್ ಪಾಂಡ್ಯ

    ಬ್ಯಾಟರ್ ಆಗುವುದಕ್ಕಿಂತಲೂ ಆಲ್‌ರೌಂಡರ್ ಆಗಿ ಆಡಲು ಬಯಸುತ್ತೇನೆ: ಹಾರ್ದಿಕ್ ಪಾಂಡ್ಯ

    ನವದೆಹಲಿ: ಮುಂದಿನ ಐಪಿಎಲ್‍ನಲ್ಲಿ ನಾನು ಬೌಲಿಂಗ್ ಮಾಡುವ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ ಇದರ ಬಗ್ಗೆ ನಮ್ಮ ತಂಡಕ್ಕೆ ಸರಿಯಾದ ಮಾಹಿತಿಯಿದೆ ಎಂದು ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದರು.

    ಕೇವಲ ಬ್ಯಾಟರ್ ಆಗುವುದಕ್ಕಿಂತಲೂ ಆಲ್‌ರೌಂಡರ್ ಆಗಿ ಆಡಲು ನಾನು ಬಯಸುತ್ತೇನೆ. ನಾನು ಯಾವಾಗಲೂ ಬ್ಯಾಟ್, ಬಾಲ್ ಮತ್ತು ಮೈದಾನದಲ್ಲಿ ಕೊಡುಗೆ ನೀಡುವ ವ್ಯಕ್ತಿಯಾಗಿದ್ದೇನೆ. ಇದು ಸಾಧ್ಯವಾಗದಿದ್ದರೆ ಮಾತ್ರ ಬ್ಯಾಟರ್ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದರು.

    ನಾನು ಯಾವಾಗಲೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುವ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ. ನಾಯಕನಾಗಿ, ಎಲ್ಲಾ ಆಟಗಾರರು ನನ್ನಿಂದ ಸಾಕಷ್ಟು ಸಮಯವನ್ನು ಹೊಂದಲು ನಾನು ಬಯಸುತ್ತೇನೆ. ಅದನ್ನೇ ನಾನು ಕಲಿತಿದ್ದೇನೆ ಮತ್ತು ನಾನು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

    ಪಾಂಡ್ಯ ಅವರನ್ನು ಐಪಿಎಲ್‍ನ ಅಹಮದಾಬಾದ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪಾಂಡ್ಯ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆರೋಗ್ಯ ಸುಧಾರಣೆಯಾದ ಬಳಿಕ ಅವರು ಬೌಲ್ ಮಾಡಬಹುದಾದ ಓವರ್ ಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿಕೊಂಡರು. ಇದನ್ನೂ ಓದಿ: UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು