Tag: teachers

  • ಶಿಕ್ಷಕರ ವರ್ಗಾವಣೆಯಿಂದ ಖಾಲಿಯಾದ ಸ್ಥಾನಗಳು- ರಾಯಚೂರಿನಲ್ಲಿ 160 ಶಾಲೆಗೆ ಒಬ್ಬರೂ ಶಿಕ್ಷಕರಿಲ್ಲ

    ಶಿಕ್ಷಕರ ವರ್ಗಾವಣೆಯಿಂದ ಖಾಲಿಯಾದ ಸ್ಥಾನಗಳು- ರಾಯಚೂರಿನಲ್ಲಿ 160 ಶಾಲೆಗೆ ಒಬ್ಬರೂ ಶಿಕ್ಷಕರಿಲ್ಲ

    ರಾಯಚೂರು: ಇತ್ತೀಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ (Teachers) ವರ್ಗಾವಣೆಯಿಂದ (Transfer) ಜಿಲ್ಲೆಯ ಬಹುತೇಕ ಶಾಲೆಗಳಿಗೆ ಶಿಕ್ಷಕರ ಕೊರತೆ ಎದುರಾಗಿದೆ. ಶಾಲೆಗಳಲ್ಲಿ (Schools) ವಿದ್ಯಾರ್ಥಿಗಳಿಗೆ (Students) ಪಾಠ ಮಾಡುವವರೇ ಇಲ್ಲದಂತಾಗಿದೆ. ಅದೇ ರೀತಿ ರಾಯಚೂರು (Raichur) ಜಿಲ್ಲೆಯ 160 ಶಾಲೆಗಳಿಗೆ ಒಬ್ಬರೇ ಒಬ್ಬರೂ ಶಿಕ್ಷಕರಿಲ್ಲದಂತಾಗಿದೆ. ಇನ್ನೊಂದೆಡೆ ಶಿಕ್ಷಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಪ್ರತಿವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳು ಬಂದಾಗ ರಾಯಚೂರು ಜಿಲ್ಲೆ ಕಡೆಯ ಸ್ಥಾನಗಳಲ್ಲೇ ಇರುತ್ತದೆ. ಇದರಿಂದ ಈ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಎಷ್ಟರಮಟ್ಟಿಗಿದೆ ಎನ್ನುವುದು ಜಗಜ್ಜಾಹೀರಾಗುತ್ತಿದೆ. ಆದರೂ ಸಹ ಇದ್ಯಾವುದನ್ನೂ ಯೋಚಿಸದೆ, ಮುನ್ನೆಚ್ಚರಿಕಾ ಪೂರ್ವ ಸಿದ್ಧತೆಯಿಲ್ಲದೇ ಶಿಕ್ಷಣ ಇಲಾಖೆ ಶಿಕ್ಷಕರ ವರ್ಗಾವಣೆಯನ್ನು ಮಾಡಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರೇ ಇಲ್ಲದಂತೆ ಮಾಡಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?

    ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 52%ರಷ್ಟು ಹುದ್ದೆಗಳು ಖಾಲಿಯಾದರೆ, ಪ್ರೌಢಶಾಲೆಗಳಲ್ಲಿ 37%ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ. ಈ ಜಿಲ್ಲೆಯ 160 ಶಾಲೆಗಳಿಗೆ ಒಬ್ಬರೇ ಒಬ್ಬರೂ ಶಿಕ್ಷಕರಿಲ್ಲ. ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 82 ಶಾಲೆ, ಲಿಂಗಸುಗೂರಿನಲ್ಲಿ 29, ಮಾನ್ವಿಯಲ್ಲಿ 26, ರಾಯಚೂರಿನಲ್ಲಿ 9, ಸಿಂಧನೂರು ತಾಲೂಕಿನಲ್ಲಿ 14 ಶಾಲೆಗಳಿಗೆ ಒಬ್ಬ ಶಿಕ್ಷಕರು ಸಹಾ ಇಲ್ಲಾ. ಅಕ್ಕಪಕ್ಕದ ಶಾಲೆಗಳ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಆಡಳಿತ ಹಾಗೂ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ. ಆದರೆ ಮಕ್ಕಳ ಬೋಧನೆಗೆ ತೀರಾ ತೊಂದರೆಯಾಗಬಾರದು ಎಂದು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿರುವ ಶಿಕ್ಷಕರಿಗೆ ವರ್ಗಾವಣೆ ಆದೇಶ ನೀಡದೆ ತಡೆ ಹಿಡಿಯಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:  ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

    15-20 ವರ್ಷಗಳಿಂದ ವರ್ಗಾವಣೆಯಿಲ್ಲದೆ ದುಡಿದ ಅನ್ಯ ಜಿಲ್ಲೆಯ ಶಿಕ್ಷಕರು ವರ್ಗಾವಣೆಯಾದರೂ ಬಿಡುಗಡೆ ಭಾಗ್ಯ ಹೊಂದಿಲ್ಲ. ಅತಿಥಿ ಶಿಕ್ಷಕರ ನೇಮಕಾತಿಗೆ ಈಗ ಆದೇಶ ಮಾಡಿದ್ದರೂ ಶಿಕ್ಷಕರ ಕೊರತೆ ಬಹಳಷ್ಟಿದೆ. ಶೈಕ್ಷಣಿಕ ಗುಣಮಟ್ಟ ಹಾಳಾಗದ ಹಾಗೆ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ, ಅತಿಥಿ ಶಿಕ್ಷಕರ ನೇಮಕಾತಿಗೆ ಈ ಮೊದಲೇ ಸರ್ಕಾರ ಆದೇಶ ಮಾಡಬೇಕಾಗಿತ್ತು ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್‌ ಖಾಲಿಯಾಗುತ್ತೆ: ಪ್ರಿಯಾಂಕ್‌ ಖರ್ಗೆ

    ರಾಯಚೂರು ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿ ಈಗ ಇನ್ನಷ್ಟು ಹದಗೆಡುವ ಲಕ್ಷಣಗಳು ಕಾಣುತ್ತಿವೆ. ಶಿಕ್ಷಕರೇ ಇಲ್ಲದೇ ನೂರಾರು ಶಾಲೆಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಕನಿಷ್ಠ ಸರ್ಕಾರ ಈಗಲಾದರೂ ಎಚ್ಚೆತ್ತು ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪೋಷಕರು ಹಾಗೂ ಶಿಕ್ಷಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿನ ಬಳಿಕ ದಳಪತಿಗೆ ಶಾಕ್ – ಪುಟ್ಟರಾಜುಗೆ ‘ಕೈ’ ನಾಯಕರಿಂದ ಗಾಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜೀನಾಮೆ, ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

    ರಾಜೀನಾಮೆ, ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

    ಬೆಂಗಳೂರು: ರಾಜೀನಾಮೆ (Resignation) ಮತ್ತು ನಿವೃತ್ತಿಯಿಂದ (Retirement) ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವೀಧರ (Graduate) ಮತ್ತು ಶಿಕ್ಷಕರ (Teachers) ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ (Election Commission) ಸೂಚಿಸಿದೆ.

    ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್ ಅವರ ರಾಜೀನಾಮೆಯಿಂದಾಗಿ 19-4-2023 ತಾರೀಖಿನಿಂದ ಸ್ಥಾನ ತೆರವಾಗಿದ್ದು, ಈ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 21-06-2024ರವರೆಗೆ ಇದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ಅವರ ರಾಜೀನಾಮೆಯಿಂದಾಗಿ 16-03-2023 ತಾರೀಖಿನಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 11-11-2026ರವರೆಗೆ ಇದೆ. ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಟಿಎಂಸಿ ರಕ್ತದೊಂದಿಗೆ ಆಟವಾಡಿದೆ: ಮೋದಿ ವಾಗ್ದಾಳಿ

    21-06-2024ಕ್ಕೆ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ ಬಿ. ಪಾಟೀಲ್, 21-06-2024ಕ್ಕೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡ, 21-06-2024ಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ.ವೈ.ಎ.ನಾರಾಯಣ ಸ್ವಾಮಿ, 21-06-2024ಕ್ಕೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೆಗೌಡ, 21-06-2024ಕ್ಕೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಿವೃತ್ತಿಯಾಗುತ್ತಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ 4 ಮಸೂದೆಗಳಿಗೆ ರಾಷ್ಟ್ರಪತಿ ಸಹಿ

    ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟಿಸ್ ಅನ್ನು ಸೆ.30 ರಂದು ಪ್ರಕಟಣೆ ಮಾಡಬೇಕಾಗಿದೆ. ಫಾರಂ 18 ಅಥವಾ 19ರಲ್ಲಿ ಅರ್ಜಿ ಸ್ವೀಕರಿಸಲು ನ.06 ಕೊನೆಯ ದಿನವಾಗಿದೆ. ಮತದಾರರ ಕರಡು ಪ್ರತಿ ಪ್ರಕಟಿಸುವ ದಿನ ನ.23, ಮತದಾರರ ಪಟ್ಟಿ ಪ್ರಕಟಣೆ ದಿನ ನ.23, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ನ.23 ರಿಂದ ಡಿ.09 ರವರೆಗೆ ಅವಕಾಶವಿದೆ. ಇದನ್ನೂ ಓದಿ: ಇಳಕಲ್‌ ಸೀರೆಯಲ್ಲಿ ಅರಳಿತು ರಾಷ್ಟ್ರಧ್ವಜ, ಚಂದ್ರಯಾನ -3

    ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನಿವಾರಿಸಿ ಪೂರಕ ಪ್ರತಿಗಳನ್ನು ಸಿದ್ಧಪಡಿಸಿ ಪ್ರಕಟಿಸಲು ಡಿ.25 ಹಾಗೂ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ ಡಿ.30 ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಸಮಗ್ರ ನಿರ್ದೇಶನಗಳ ಅನ್ವಯ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಕಾಲಮಿತಿಯೊಳಗೆ ಜನನ-ಮರಣ ಪ್ರಮಾಣ ಪತ್ರ ವಿತರಿಸಿ – ಡಿಸಿ ಖಡಕ್‌ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

    ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

    ಪಾಟ್ನಾ: ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿ (Teacher Fight) ಶಾಲೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಬಿಹಾರದ ಪಾಟ್ನಾ (Patna) ಜಿಲ್ಲೆಯಲ್ಲಿ ನಡೆದಿದೆ.

    ಕೌರಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶಾಲಾ ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ನಡುವೆ ಈ ಗಲಾಟೆ ನಡೆದಿದೆ. ಸದ್ಯ ಜಗಳದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲೇನಿದೆ..?: ಶಾಲೆಯ ಇಬ್ಬರು ಶಿಕ್ಷಕಿಯರು ಪರಸ್ಪರ ಜಗಳವಾಡುತ್ತಿದ್ದರೆ, ಶಾಲಾ ಮಕ್ಕಳು ಮೂಕಪ್ರೇಕ್ಷಕರಂತೆ ಜಗಳ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಾಲೆಯ ಒಳಗೆ ಆರಂಭವಾದ ಗಲಾಟೆ ಹೊರಗಿನ ಮೈದಾನದವರೆಗೂ ತಲುಪಿದೆ. ಕೆಳಗೆ ಬಿದ್ದುಕೊಂಡು ಮಣ್ಣಿನಲ್ಲೇ ಇಬ್ಬರು ಒದ್ದಾಡುತ್ತಾ ಗುದ್ದಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    ತರಗತಿಯಿಂದ ಒಬ್ಬರು ಹೊರಗೆ ಹೋಗುತ್ತಿರುವಾಗ ಮತ್ತೊಬ್ಬರು ಚಪ್ಪಲಿ ಹಿಡಿದುಕೊಂಡು ಓಡಿ ಬಂದು ಹೊಡೆದಾಗ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಮತ್ತೊಬ್ಬ ಮಹಿಳೆಯು ಕೂಡ ಹೊಡೆದಿದ್ದಾರೆ.

    ಈ ಘಟನೆಯ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಂಗಾಮಿ ಮುಖ್ಯಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

    ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರೂ ಶಿಕ್ಷಕರಿಗೆ ವಿವರಣೆ ನೀಡಲು ಸಮನ್ಸ್ ನೀಡಲಾಗಿದೆ. ಅಧಿಕೃತ ಸೂಚನೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಶಾಲೆಯ ಬಳಿ ಗ್ಯಾಸ್ ಲೀಕ್ – ಹಲವು ಮಕ್ಕಳು ಅಸ್ವಸ್ಥ

    ಶಾಲೆಯ ಬಳಿ ಗ್ಯಾಸ್ ಲೀಕ್ – ಹಲವು ಮಕ್ಕಳು ಅಸ್ವಸ್ಥ

    ಚಂಡೀಗಢ: ಶಾಲೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ (Gas leak) ಹಲವಾರು ವಿದ್ಯಾರ್ಥಿಗಳು (Students) ಮತ್ತು ಶಿಕ್ಷಕರು (Teachers) ಪ್ರಜ್ಞಾಹೀನರಾದ (Unconscious) ಘಟನೆ ಪಂಜಾಬ್‍ನಲ್ಲಿ (Punjab) ಗುರುವಾರ ನಡೆದಿದೆ.

    ಅಸ್ವಸ್ಥಗೊಂಡ ಮಕ್ಕಳು ಹಾಗೂ ಶಿಕ್ಷಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯನ್ನು ಮುಚ್ಚಲಾಗಿದ್ದು, ಉಳಿದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಪೊಲೀಸರು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಘಟನೆಗೆ ಕಾರಣವೇನೆಂದು ಪರಿಶೀಲನೆ ನಡೆಸಲಾಗುತ್ತಿದೆ. ಶಾಲೆಯ ಸಮೀಪದಲ್ಲಿರುವ ಎರಡು ದೊಡ್ಡ ಕೈಗಾರಿಕಾ ಘಟಕಗಳು ಅನಿಲ ಸೋರಿಕೆಯ ಮೂಲಗಳೆಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ

    ಸ್ಥಳದಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಅಂಬುಲೆನ್ಸ್‌ಗಳನ್ನು ಘಟನಾ ಸ್ಥಳದಲ್ಲಿ ಇರಿಸಲಾಗಿದೆ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಪಂಜಾಬ್‍ನ ಲುಧಿಯಾನಾದ (Ludhiana) ಗಿಯಾಸ್‍ಪುರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

  • ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಇಂದೋರ್: ಕಾಲೇಜಿನಲ್ಲಿ ಲವ್ ಜಿಹಾದ್ (Love Jihad), ಮಾಂಸಾಹಾರಕ್ಕೆ ಉತ್ತೇಜನ, ಸರ್ಕಾರ ಹಾಗೂ ಸೇನೆಯ (Army) ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಉತ್ತೇಜಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇಂದೋರ್ ಸರ್ಕಾರಿ ಕಾನೂನು ಕಾಲೇಜಿನ (Indore law College) 6 ಮಂದಿ ಶಿಕ್ಷಕರ (Teachers) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ನಾಲ್ವರು ಮುಸ್ಲಿಂ (Muslims) ಹಾಗೂ ಇಬ್ಬರು ಹಿಂದೂ ಶಿಕ್ಷಕರು ಸೇರಿದಂತೆ 6 ಶಿಕ್ಷಕರನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಇವರು ಮುಂದಿನ 5 ದಿನಗಳ ಕಾಲ ತರಗತಿಯಲ್ಲಿ ಪಾಠ ಮಾಡದಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಶೂಟ್‌ ಮಾಡಿ ಅತ್ಯಾಚಾರವೆಸಗಿ ಕೊಂದ – ಮೃತದೇಹ ಪೀಸ್‌ ಮಾಡಿ ತಿಂದಿದ್ದ ವ್ಯಕ್ತಿ ನಿಧನ

    ಏನಿದು ಘಟನೆ?
    ಬಿಜೆಪಿಯ (BJP) ವಿದ್ಯಾರ್ಥಿಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರು ನಾಲ್ವರು ಮುಸ್ಲಿಂ ಹಾಗೂ ಇಬ್ಬರು ಹಿಂದೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ಗದ್ದಲ ನಡೆಸಿದ್ದರು. ಈ ವೇಳೆ ಎಬಿವಿಪಿ ಘಟಕದ ಮುಖ್ಯಸ್ಥ ದೀಪೇಂದ್ರ ಠಾಕೂರ್ ಅವರು ಶಿಕ್ಷಕರ ವಿರುದ್ಧ ಪ್ರಾಂಶುಪಾಲ ಡಾ. ಇನಾಮೂರ್ ರೆಹಮಾನ್ ಅವರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

    ಸಾಂದರ್ಭಿಕ ಚಿತ್ರ

    ಕೆಲವು ಶಿಕ್ಷಕರು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ಮೂಲಭೂತವಾದ, ಸರ್ಕಾರ ಹಾಗೂ ಭಾರತೀಯ ಸೇನೆಯ ಬಗ್ಗೆ ನಕಾರಾತ್ಮಕ ಚಿಂತನೆಗಳನ್ನ ಉತ್ತೇಜಿಸುತ್ತಿದ್ದಾರೆ. ಅಲ್ಲದೇ ಶುಕ್ರವಾರ ದಿನಗಳಂದು ಮುಸ್ಲಿಂ ಶಿಕ್ಷಕರು (Muslim Teachers) ಹಾಗೂ ವಿದ್ಯಾರ್ಥಿಗಳು ನಮಾಜ್ ಮಾಡುತ್ತಾರೆ. ಆ ಸಂರ್ಭಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಅಲ್ಲದೇ ಕ್ಯಾಂಪಸ್‌ಗಳಲ್ಲಿ ಲವ್ ಜಿಹಾದ್ ಹಾಗೂ ಮಾಂಸಾಹಾರವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದರು.

    ದೂರಿನ ಅನ್ವಯ ಪ್ರಾಂಶುಪಾಲರಿಗೆ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಲು ನಿರ್ಧರಿಸಿದ್ದು, ವಿಚಾರಣೆಯನ್ನು ಪ್ರಾಂಶುಪಾಲರು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ.

    ಕಾಲೇಜಿನಲ್ಲಿ ಅಂತಹ ವಾತಾವರಣ ಇಲ್ಲ. ಆದಾಗ್ಯೋ ಅವರನ್ನು ತಾತ್ಕಾಲಿಕವಾಗಿ ಮನೆಗೆ ಕಳುಹಿಸಲಾಗಿದೆ. ತನಿಖೆ ನಡೆಯುವ ಮುಂದಿನ ಐದು ದಿನಗಳವರೆಗೆ ಅವರು ತರಗತಿಯಲ್ಲಿ ಪಾಠ ಮಾಡುವುದಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ಓರ್ವ ಮಹಿಳೆ ಸಾವು

    ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ಓರ್ವ ಮಹಿಳೆ ಸಾವು

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಬನವಾಸಿ (Banavasi) ಮತ್ತು ಯಲ್ಲಾಪುರ (Yallapura) ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ಅಜಾಗರೂಕತೆಯಿಂದ ಶಾಲಾ ವಾಹನ ಅಪಘಾತಕ್ಕೀಡಾಗಿದ್ದು, ವೃದ್ಧೆಯೊಬ್ಬರು ಸಾವಪ್ಪಿದ್ದಾರೆ.

    ಬನವಾಸಿ ಹೆದ್ದಾರಿಯಲ್ಲಿ ಶಾಲಾ ಬಸ್ ಪಲ್ಟಿ – ಮಹಿಳೆ ಸಾವು
    ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು 7 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಬುಗುಡಿಕೊಪ್ಪದ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766E ರಲ್ಲಿ ಈ ಘಟನೆ ನಡೆದಿದೆ.

    ದುರಂತದಲ್ಲಿ ಕಸ್ತೂರಮ್ಮ (60) ಅವರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಬನವಾಸಿಯ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಗೆ ರವಾನೆ ಮಾಡಲಾಗಿದೆ. ರಾಣಿ ಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರದ ಶಾಲೆಯವರು, ರಾಣಿ ಬೆನ್ನೂರಿನ ಸಿದ್ಧಾರೂಢ ನಗರದಿಂದ ಶಿರಸಿಯತ್ತ ಮಕ್ಕಳನ್ನು ಪ್ರವಾಸಕ್ಕೆ ಕರೆತರುತ್ತಿದ್ದರು. ಈ ವೇಳೆ ಚಾಲಕನ ಅತಿವೇಗದ ಚಾಲನೆಯಿಂದಲೇ ಘಟನೆ ಸಂಭವಿಸಿದ್ದು, ಇದೀಗ ಈ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ

    ಮತ್ತೊಂದೆಡೆ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಕೆಟ್ಟು ನಿಂತಿದ್ದ ಟ್ಯಾಂಕರ್‍ಗೆ ಶಾಲಾ ವಾಹ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಟಿಕೆಟ್ ನಿರಾಕರಿಸಿದ್ದಕ್ಕೆ ಆಪ್ ಸೇರಿದ ಶಾಸಕ

    ಹುಬ್ಬಳ್ಳಿಯ ಸೈಂಟ್ ಅಂಥೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹುಬ್ಬಳಿಯಿಂದ ಅಂಕೋಲಾ ಮಾರ್ಗವಾಗಿ ಸುಂಕಸಾಳದತ್ತ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಘಟ್ಟದಲ್ಲಿ ಓವರ್ ಟೇಕ್ ಮಾಡಲು ಹೋಗಿ ಕೆಟ್ಟು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿಹೊಡೆದಿದೆ. ಇದರ ಪರಿಣಾಮ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!

    ಶಾಲಾ ಪ್ರಾರ್ಥನೆ ವೇಳೆ ಕುಸಿದು ಬಿದ್ದು ಬಾಲಕಿ ಸಾವು!

    ಭುವನೇಶ್ವರ: ಶಾಲಾ ಪ್ರಾರ್ಥನೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ನಡೆದಿದೆ.

    ಧಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸಾರ್‍ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಬೆಳಗಿನ ಪ್ರಾರ್ಥನೆ ವೇಳೆ ಆಕೆ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞಾಹೀನಳಾಗಿದ್ದಳು ಎಂದು ಆಕೆಯ ಸಹಪಾಠಿಗಳು ಹೇಳಿದ್ದಾರೆ.  ಇದನ್ನೂ ಓದಿ: 5 ವರ್ಷದ ಬಳಿಕ ಮತ್ತೆ ದಾಖಲೆಯತ್ತ ಬೆಂಗಳೂರು ಮಹಾಮಳೆ!

    ಬಾಲಕಿಯನ್ನು ತಕ್ಷಣ ತರಗತಿಯೊಳಗೆ ಕರೆದೊಯ್ದು ಆಕೆಯನ್ನು ಎಚ್ಚರಗೊಳಿಸಲು ಶಿಕ್ಷಕರು ಸಾಕಷ್ಟು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಮೊದಲಿಗೆ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು, ಬಳಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿಯ ಸಾವಿಗೆ ಕಾರಣ ಏನು ಅಂತ ತಿಳಿಯಲಿದೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯ ಸಂತೋಷ್ ಜೆನಾ ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಲಕ್ನೋ: ಮಕ್ಕಳಿಗೆ ಪಾಠ ಮಾಡಿ, ತಿದ್ದಿ-ಬುದ್ದಿ ಹೇಳಬೇಕಾದ ಶಿಕ್ಷಕಿಯರೇ, ಮಕ್ಕಳ ಮುಂದೆ ಕಿತ್ತಾಡಿರುವ ವೀಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು, ಉತ್ತರ ಪ್ರದೇಶದ (Uttar Pradesh) ಹಮೀರ್‍ಪುರ (Hamirpur) ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಹಿಳಾ ಶಿಕ್ಷಕಿರ ನಡುವೆ ಮಾರಾಮಾರಿ ನಡೆದಿದೆ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ (Gandhi Jayanti celebrations) ವೇಳೆ ಈ ಘಟನೆ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೆಹಲಿಯಲಿದ್ದ 500 ರೂ. ಮಾಸ್ಕ್ ಫೈನ್ ವಾಪಸ್ – 6 ತಿಂಗಳ ಬಳಿಕ ರಿಲೀಫ್

    ಕ್ಲಾಸ್ ತುಂಬ ಮಕ್ಕಳಿರುವಾಗ ಅವರ ಮುಂದೆಯೇ ಶಿಕ್ಷಕಿಯರು ಪರಸ್ಪರ ನಿಂದಿಸುತ್ತಾ, ಹೊಡೆದಾಡಿಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ನೋಡುತ್ತಿದ್ದರೂ ಕೊಂಚ ಕೂಡ ಮುಜುಗರ ಹೊಂದದೆ ಸುಮಾರು 45 ನಿಮಿಷಗಳ ಕಾಲ ಜಗಳ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಹ ಇಬ್ಬರು ಶಿಕ್ಷಕಿಯ ಜಗಳ ಬಿಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಈ ವೀಡಿಯೋ ವೈರಲ್ ಬಳಿಕ ಜಗಳವಾಡಿದ ಮೂವರು ಶಿಕ್ಷಕಿಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ನಿಗಮ್, ಸಹಾಯಕ ಶಿಕ್ಷಕಿ ನಹಿದ್ ಹಶ್ಮಿ ಮತ್ತು ಮಹಿಳಾ ಸಹಾಯಕಿ ಪುಷ್ಪಲತಾ ಪಾಂಡೆ ಅಮಾನತುಗೊಂಡವರಾಗಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟೂ ಬ್ಯಾಕ್ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ಮಧ್ಯೆ ಮಾರಾಮಾರಿ – ಕಿವಿಯೊಳಗಿನ ಪರದೆ ಹರಿಯುವಂತೆ ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ

    ಶಿಕ್ಷಕರ ಮಧ್ಯೆ ಮಾರಾಮಾರಿ – ಕಿವಿಯೊಳಗಿನ ಪರದೆ ಹರಿಯುವಂತೆ ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ

    ಚಿತ್ರದುರ್ಗ: ವಿದ್ಯಾರ್ಥಿಗಳ ಶುಲ್ಕ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೌಢಶಾಲೆ ಶಿಕ್ಷಕರ (Teachers) ಮಧ್ಯೆ ಮಾರಾಮಾರಿ ನಡೆದು ಕಿವಿಯೊಳಗಿನ ಪರದೆ ಹರಿಯುವಂತೆ ಸಹ ಶಿಕ್ಷಕನಿಗೆ ಮುಖ್ಯ ಶಿಕ್ಷಕ  (Headmaster) ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಕಲ್ಪತರು ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಘಟನೆ ನಡೆದಿದ್ದು, ಮುಖ್ಯ ಶಿಕ್ಷಕ ಶಿವಾನಂದ  ಗಣಿತ ಶಿಕ್ಷಕ ಸುರೇಶ್‍ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಶಿವಾನಂದ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಸುರೇಶ್ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಇದನ್ನೂ ಓದಿ: ನೆಚ್ಚಿನ ಫುಟ್‌ಬಾಲ್‌ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು

    ಆ ಬಳಿಕ ಮಾರಣಾಂತಿಕ ಹಲ್ಲೆಯಾದರೂ ಶಿವಾನಂದ ಜೊತೆ ರಾಜಿಯಾಗುವಂತೆ ಸುರೇಶ್‍ಗೆ ಒತ್ತಡ ಹಾಕಿರುವ ಪ್ರಸಂಗ ನಡೆದಿದೆ. ಹೊಸದುರ್ಗ ಬಿಇಓ ಜಯ್ಯಪ್ಪ ನೇತೃತ್ವದಲ್ಲಿ ರಾಜಿ ಸಂಧಾನಕ್ಕೆ ಯತ್ನ ನಡೆದಿದೆ. ಶಿವಾನಂದ ಜೊತೆ ರಾಜಿಯಾಗುವಂತೆ ಸುರೇಶ್‍ಗೆ ಒತ್ತಡ ಹಾಕುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯ ಶಿಕ್ಷಕರ ತಪ್ಪೊಪ್ಪಿಗೆ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋದ ಪ್ರಕರಣ – ಇಬ್ಬರ ಮೃತದೇಹ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ – ನಾಳೆಯಿಂದ 2 ದಿನ ವಿಶ್ವವಿದ್ಯಾಲಯ ಬಂದ್

    ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ – ನಾಳೆಯಿಂದ 2 ದಿನ ವಿಶ್ವವಿದ್ಯಾಲಯ ಬಂದ್

    ಚಂಡೀಗಢ: ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ (Chandigarh University) ಖಾಸಗಿ ವೀಡಿಯೋ (Private Video) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದ ಪ್ರತಿಭಟನೆಯಿಂದಾಗಿ (Protest) ನಾಳೆಯಿಂದ ಎರಡು ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಲಾಗಿದೆ.

    ಸೆಪ್ಟೆಂಬರ್ 19, 20 ರಂದು ರಜೆ ಘೋಷಿಸಲಾಗಿದ್ದು, ಪಾಠ-ಪ್ರವಚನಗಳನ್ನು ನಡೆಸದಂತೆ ಸೂಚಿಸಲಾಗಿದೆ. ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಘಟನೆಗೆ ನಿಖರ ಕಾರಣವನ್ನು ವರದಿ ಮಾಡುವಂತೆ ವಿಶ್ವವಿದ್ಯಾಲಯವು (University) ಸೂಚಿಸಿದೆ. ಉಳಿದಂತೆ ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ವಿವಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ತನ್ನ ಖಾಸಗಿ ವೀಡಿಯೋ ಮಾತ್ರ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ಲು – ವಿವಿ ಸ್ಪಷ್ಟನೆ

    ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿನಿಂದ (College Girls Students) ಹೊರಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪೊಲೀಸರಿಂದಲೂ (Police) ವಿದ್ಯಾರ್ಥಿಗಳ ಮೇಲೆ ಲಾಟಿ ಚಾರ್ಜ್ ನಡೆದಿದೆ. ಆದರೆ ಕಾಲೇಜಿಗೆ ರಜೆ ಘೋಷಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ವಿವರಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ವಿವಿಯ ವಿದ್ಯಾರ್ಥಿ ಕಲ್ಯಾಣ ಸಮಿತಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದು, ವಿದ್ಯಾರ್ಥಿಗಳನ್ನು ಮಾತುಕತೆಗೆ ಆಹ್ವಾನಿಸಿದೆ. ಆದರೆ, ಉಪಕುಲಪತಿಗಳು ಬಹಿರಂಗವಾಗಿ ಚರ್ಚೆ ನಡೆಸುವುದಾಗಿದ್ದರೆ ಮಾತ್ರವೇ ಚರ್ಚೆಗೆ ನಾವು ಬರುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಜೊತೆಗಿದ್ದವಳಿಂದಲೇ 60 ವಿದ್ಯಾರ್ಥಿನಿಯರು ಸ್ನಾನ ಮಾಡ್ತಿರೋ ಖಾಸಗಿ ವೀಡಿಯೋ ಲೀಕ್ – ವಿವಿಯಲ್ಲಿ ಭುಗಿಲೆದ್ದ ಪ್ರತಿಭಟನೆ

    ಏನಿದು ಘಟನೆ?
    ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವೀಡಿಯೋವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಸೆರೆಹಿಡಿದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವೀಡಿಯೋವನ್ನು ಹರಿಬಿಟ್ಟ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ಸೋರಿಕೆಯಾದ ಬೆನ್ನಲ್ಲೇ ಭಾರೀ ಪ್ರತಿಭಟನೆ ಬುಗಿಲೆದ್ದಿದ್ದು, ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]