Tag: teachers

  • ಆಹಾರ ಪದಾರ್ಥದಲ್ಲಿ ಹುಳ ಪ್ರಕರಣ – ಶಿಕ್ಷಕರಿಗೆ ಬೆದರಿಸಿದ ಅಕ್ಷರ ದಾಸೋಹದ ನಿರ್ದೇಶಕ

    ಆಹಾರ ಪದಾರ್ಥದಲ್ಲಿ ಹುಳ ಪ್ರಕರಣ – ಶಿಕ್ಷಕರಿಗೆ ಬೆದರಿಸಿದ ಅಕ್ಷರ ದಾಸೋಹದ ನಿರ್ದೇಶಕ

    ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ಸರ್ಕಾರಿ ಶಾಲೆಗಳಿಗೆ ಬಿಸಿಯೂಟದ ಯೋಜನೆಗೆ ವಿತರಿಸಿದ ಆಹಾರ ಪದಾರ್ಥಗಳಲ್ಲಿ ಹುಳು ಪತ್ತೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

    ಎಚ್.ಡಿ.ಕೋಟೆ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜುರಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಆಹಾರ ಪದಾರ್ಥಗಳಲ್ಲಿ ಹುಳ ಇರುವ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬಂದ ನಂತರ ಶಾಲೆಗಳಿಗೆ ಭೇಟಿ ನೀಡಿದ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜು, ಶಾಲೆಯ ಶಿಕ್ಷಕರಿಗೆ ಬೆದರಿಸಿ ಇದು ಹಳೆಯ ದಾಸ್ತಾನು ಎಂದು ಸುಳ್ಳು ಹೇಳುವಂತೆ ಸೂಚಿಸಿದ್ದಾರೆ.

    ನಾನು ನಿಮ್ಮ ಮೇಲಾಧಿಕಾರಿ ನಾನು ಹೇಳಿದಂತೆ ಕೇಳಿ ಎಂದು ತಾಕೀತು ಮಾಡಿ ಹುಳು ಇರುವುದು ನವೆಂಬರ್ ತಿಂಗಳ ಬೇಳೆ ಎಂದು ಬರೆದುಕೊಡುವಂತೆ ಒತ್ತಾಯಿಸಿ ಶಿಕ್ಷಕನಿಗೆ ಬೆದರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ನಂತರ ಇದು ಹಳೆಯ ದಾಸ್ತಾನು ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

    ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿದ್ಯಾಂತಹ ಸುಮಾರು 304 ಶಾಲೆಯ ವಿದ್ಯಾರ್ಥಿಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಈ ಶಾಲೆಗಳಿಗೆ ಉತ್ತಮವಾದ ಆಹಾರ ಪದಾರ್ಥಗಳ ಪೂರೈಕೆ ಆಗುತ್ತಿಲ್ಲ. ಕಳೆದು ಎರಡು ತಿಂಗಳಿಂದ ಶಾಲೆಗಳಿಗೆ ಪೂರೈಕೆಯಾಗಿರುವ ತೊಗರಿಬೇಳೆ ಹಾಗೂ ಅಕ್ಕಿಯಲ್ಲಿ ಓಟ್ಟೆಹುಳುಗಳು ತುಂಬಿತ್ತು. ಬಿಸಿಯೂಟದ ಸಿಬ್ಬಂದಿ ಇವುಗಳನ್ನು ಎಷ್ಟೇ ಶುಚಿ ಮಾಡಿದ್ರೂ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಪೋಷಕಾಂಶ ಸಿಗದ ಈ ಆಹಾರವನ್ನು ಮಕ್ಕಳು ತಿನ್ನಲು ಸಾಧ್ಯವಾಗದೇ ಎಸೆಯುತ್ತಿದ್ದರು.

    ಈ ವಿಚಾರವನ್ನು ಅಕ್ಷರ ದಾಸೋಹದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು, ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಹಾರವೇ ಇದಾಗಿದ್ದು ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಇತ್ತ ಸಿಬ್ಬಂದಿ ಬೇರೆ ದಾರಿಯಿಲ್ಲ ಎಂಬಂತೆ ಇದೇ ಆಹಾರವನ್ನು ಮಧ್ಯಾಹ್ನ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿದ್ದರು. ಹಸಿದು ಬಂದ ಬಡ ಮಕ್ಕಳು ಕೂಡ ತಟ್ಟೆಯಲ್ಲಿ ಹುಳ ಕಂಡರೂ ಕಣ್ಮುಚ್ಚಿಕೊಂಡು ತಿನ್ನುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಕೆಲಸ ಮಾಡಿಸ್ತಿದ್ದಾರೆ ಶಿಕ್ಷಕರು

    ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಕೆಲಸ ಮಾಡಿಸ್ತಿದ್ದಾರೆ ಶಿಕ್ಷಕರು

    ಕೊಪ್ಪಳ: ಶಾಲೆಗೆ ಓದಲು ಬರುವ ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕರು ನೀರು ತರುವ ಕೆಲಸ ಮಾಡಿಸುತ್ತಿರೋ ಘಟನೆ ಜಿಲ್ಲೆಯ ಮಾದಿನೂರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಮಕ್ಕಳಿಗೆ ಪಾಠ ಮಾಡುವ ಬದಲಾಗಿ ಅವರ ಕೈಯಲ್ಲಿ ಶಿಕ್ಷಕರು ಕೆಲಸ ಮಾಡಿಸುತ್ತಿದ್ದಾರೆ. ಇದನ್ನು ನೋಡಿ ಸ್ಥಳೀಯರು ಶಾಲೆಯ ಸಿಬ್ಬಂದಿಗಳ ಮೇಲೆ ಸಿಡಿದೆದ್ದಿದ್ದಾರೆ. ಹೌದು, ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತ ಶಾಲೆಗೆ ಕಳುಹಿಸುತ್ತಾರೆ. ಆದ್ರೆ ಪಾಠ ಕಲಿಯಬೇಕಾದ ಮಕ್ಕಳ ಕೈಯಲ್ಲಿ ನೀರು ತರುವ ಕೆಲಸವನ್ನು ಶಿಕ್ಷಕರು ಮಾಡಿಸುತ್ತಿದ್ದಾರೆ. ಶಾಲೆಯಲ್ಲಿ ನೀರಿನ ಅಭಾವವಿದ್ದು, ಪರ್ಯಾಯ ವ್ಯವಸ್ಥೆ ಮಾಡದೆ ಮಕ್ಕಳ ಕೈಯಲ್ಲೇ ಕುಡಿಯುವ ನೀರನ್ನು ತರಲು ಬಳಸಿಕೊಂಡಿದ್ದಾರೆ.

    ಒತ್ತು ಗಾಡಿಯ ಮೂಲಕ ವಿದ್ಯಾರ್ಥಿಗಳು ನೀರು ತರುತ್ತಿದ್ದಾರೆ. ಶಾಲೆಗೆ ಬಂದ ಮಕ್ಕಳಿಂದ ನಿತ್ಯ ಹೀಗೆ ಶಿಕ್ಷಕರು ನೀರು ತರೋ ಕೆಲಸ ಮಾಡಿಸುತ್ತಿದ್ದು, ಸರತಿ ಪ್ರಕಾರವಾಗಿ ಕುಡಿಯುವ ನೀರು ತರಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಶಿಕ್ಷಕರ ಈ ವರ್ತನೆಯನ್ನು ಪೋಷಕರು ಹಾಗೂ ಸ್ಥಳೀಯರು ವಿರೋಧಿಸುತ್ತಿದ್ದು, ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಗಮನ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಹೂತಿಟ್ಟ ಶಿಕ್ಷಕರು!

    ಮಕ್ಕಳಿಗೆ ನೀಡಬೇಕಿದ್ದ ಹಾಲಿನ ಪುಡಿಯನ್ನು ಹೂತಿಟ್ಟ ಶಿಕ್ಷಕರು!

    ರಾಯಚೂರು: ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರು ಹೂತಿಟ್ಟ ಘಟನೆ ಜಿಲ್ಲೆಯ ಲಿಂಗಸುಗೂರಿನ ಯರಡೋಣಾ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸರ್ಕಾರದಿಂದ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನ ಯರಡೋಣಾ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ಗುಂಡಿ ತೆಗೆದು ಅಲ್ಲಿನ ಶಿಕ್ಷಕರು ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಸರ್ಕಾರದಿಂದ ಶಾಲಾ ಮಕ್ಕಳಿಗೆ ಬರುವ ದಾಸ್ತಾನುಗಳ ಚೀಲದಲ್ಲೆ ಹಾಲಿನ ಪುಡಿಯನ್ನ ತುಂಬಿ ಹೂತಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ನೀಡುವ ಇನ್ನಿತರ ದಾಸ್ತಾನುಗಳನ್ನೂ ಕೂಡ ಶಿಕ್ಷಕರು ನೆಲದಲ್ಲಿ ಹೂತಿಟ್ಟಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಯರಡೋಣಾ ಪ್ರೌಢ ಶಾಲೆಯಲ್ಲಿ ಒಟ್ಟು 290 ವಿದ್ಯಾರ್ಥಿಗಳು ಇದ್ದಾರೆ. ಆದರೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ನೀಡಬೇಕಾದ ಹಾಲಿನ ಪುಡಿಯನ್ನು ಮಣ್ಣಿಗೆ ಹಾಕಿ ಹಾಳು ಮಾಡಿದ್ದಾರೆ. ಕೆಲವು ದಿನಗಳಿಂದ ಶಾಲಾ ಆವರಣದಲ್ಲಿ ದುರ್ನಾತ ಬರುತ್ತಿತ್ತು. ಆದ್ದರಿಂದ ಗ್ರಾಮಸ್ಥರು ಶಾಲಾ ಶಿಕ್ಷಕರಿಗೆ ತಿಳಿಸಿದದ್ರೂ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೆ ದುರ್ವಾಸನೆ ತಾಳಲಾರದೆ ಗ್ರಾಮಸ್ಥರೇ ಶಾಲಾ ಆವರಣದಲ್ಲಿ ಗುಂಡಿ ಅಗೆದು ನೋಡಿದಾಗ ಹಾಲಿನ ಪುಡಿಯನ್ನು ಹೂತಿಟ್ಟ ಸತ್ಯಾಂಶ ಬಯಲಿಗೆ ಬಂದಿದೆ.

    ಇದನ್ನು ಕಂಡು ಗ್ರಾಮಸ್ಥರ ಕೋಪ ನೆತ್ತಿಗೇರಿದೆ. ಸರ್ಕಾರ ಮಕ್ಕಳಿಗೆ ಕೊಟ್ಟ ಪದಾರ್ಥವನ್ನು ಶಿಕ್ಷಕರು ಮೂರ್ಖರಂತೆ ಹೂತಿಟ್ಟಿದ್ದಾರೆ. ಈ ಮೂಲಕ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಹೀಗೆ ತಪ್ಪು ಮಾಡಿರುವ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶಿಕ್ಷಕರು ಯಾಕೆ ಹೀಗೆ ಮಾಡಿದ್ದಾರೆ ಅಂತ ಯಾರಿಗೂ ತಿಳಿದಿಲ್ಲ. ಆದ್ರೆ ಪಾಠ ಕಲಿಸಬೇಕಾದ ಶಿಕ್ಷಕರೇ ಈ ರೀತಿ ಮಾಡಿದರೆ ಮಕ್ಕಳಿಗೆ ಇನ್ನೇನು ಕಲಿಸುತ್ತಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಯ್ಲೆಟ್ ನಲ್ಲಿ ಸ್ಯಾನಿಟರಿ ಪ್ಯಾಡ್ ಹಾಕಿದ್ರೆಂದು ವಿದ್ಯಾರ್ಥಿನಿಯರ ಬಟ್ಟೆ ಕಳಚಿದ್ರು!

    ಟಾಯ್ಲೆಟ್ ನಲ್ಲಿ ಸ್ಯಾನಿಟರಿ ಪ್ಯಾಡ್ ಹಾಕಿದ್ರೆಂದು ವಿದ್ಯಾರ್ಥಿನಿಯರ ಬಟ್ಟೆ ಕಳಚಿದ್ರು!

    – ಶಿಕ್ಷಕರ ಎತ್ತಂಗಡಿಗೆ ಸಿಎಂ ಆದೇಶ

    ಚಂಢಿಗಡ್: ಶಾಲೆಯ ಶೌಚಾಲಯದೊಳಗೆ ಸ್ಯಾನಿಟರಿ ಪ್ಯಾಡ್ ಹಾಕಿದ್ದ ಮಕ್ಕಳ ಬಟ್ಟೆಯನ್ನ ಕಳಚಿದ್ದ ಶಿಕ್ಷಕರನ್ನ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎತ್ತಗಂಡಿ ಮಾಡಲು ಆದೇಶ ನೀಡಿದ್ದಾರೆ.

    ಶಾಲೆಯ ಟಾಯ್ಲೆಟ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಯಾನಿಟರಿ ಪ್ಯಾಡ್ ಹಾಕಿದ್ದ ಕಾರಣ ಅಲ್ಲಿನ ಶಿಕ್ಷಕರು ಶಾಲಾ ಆವರಣದಲ್ಲಿಯೇ ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಕಳಚಿದ ಘಟನೆ ಫಝಿಲ್ಕಾ ಜಿಲ್ಲೆಯ ಕುಂದಾಲ್ ಹಳ್ಳಿಯ ಶಾಲೆಯಲ್ಲಿ ಗುರುವಾರ ನಡೆದಿತ್ತು.

    ಈ ಘಟನೆ ಪಂಜಾಬ್ ಮುಖ್ಯಮಂತ್ರಿಯ ಗಮನಕ್ಕೆ ಬಂದಿದ್ದು, ಸೋಮವಾರದಂದು ಈ ವಿಷಯದ ಸಂಪೂರ್ಣ ತನಿಖೆ ನಡೆಸಿ ಹಾಗೂ ಸೂಕ್ತ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂದು ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕ್ರಿಶನ್ ಕುಮಾರ್ ಅವರಿಗೆ ಆದೇಶ ನೀಡಿದ್ದಾರೆ.

    ಶಾಲೆಯ ಟಾಯ್ಲೆಟ್ ನಲ್ಲಿ ಯಾರು ಸ್ಯಾನಿಟರಿ ಪ್ಯಾಡ್ ಹಾಕಿದ್ದಾರೆ ಎಂಬುದನ್ನ ಕಂಡು ಹಿಡಿಯಲು ಆ ಶಾಲೆಯ ವಿದ್ಯಾರ್ಥಿನಿಯರನ್ನ ಎಲ್ಲರ ಮುಂದೆ ಬಟ್ಟೆ ಕಳಚಿರುವ ವಿಡಿಯೋ ದೊರಕಿದ್ದು, ಈ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿನಿಯರು ನಮ್ಮನ್ನ ಶಾಲೆಯ ಆವರಣದಲ್ಲಿ ನಿಲ್ಲಿಸಿ ಬಟ್ಟೆಯನ್ನ ಕಳಚಿದ್ದಾರೆ ಎಂದು ಜೋರಾಗಿ ಅಳುತ್ತಿದ್ದರು. ಶಿಕ್ಷಕರು ಸ್ಯಾನಿಟರಿ ಪ್ಯಾಡ್ ಸರಿಯಾಗಿ ವಿಲೇವಾರಿ ಮಾಡುವುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಬದಲು ಈ ರೀತಿ ಬಟ್ಟೆ ಕಳಚಿರುವುದು ಅಮಾನವೀಯವಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.

    ಈ ಸಂಬಂಧ ತನಿಖಾ ವರದಿ ಬಂದ ನಂತರ ಆ ಶಿಕ್ಷಕರ ವಿರುದ್ಧ ಕಠಿಣ ಶಿಸ್ತಿನ ಕ್ರಮವನ್ನ ತೆಗೆದುಕೊಳ್ಳುವುದಾಗಿ ಪಂಜಾಬ್ ಸರ್ಕಾರ ತಿಳಿಸಿದ್ದು, ಅಂತಿಮ ವಿಚಾರಣೆಯ ವರದಿಯನ್ನ ವೈಯಕ್ತಿಕವಾಗಿ ತಿಳಿಸಲು ಕ್ರಿಶನ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಗೆ ಬೀಗ ಜಡಿದು ಬೀದಿಗಳಿದ ವಿದ್ಯಾರ್ಥಿಗಳು!

    ಶಾಲೆಗೆ ಬೀಗ ಜಡಿದು ಬೀದಿಗಳಿದ ವಿದ್ಯಾರ್ಥಿಗಳು!

    ಬಾಗಲಕೋಟೆ: ಶಿಕ್ಷಕರ ಕೊರತೆ ಹಿನ್ನೆಲೆಯಿಂದ ಬೇಸತ್ತು ಇಂದು ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು, ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಡಿಗುಡಿ ಗ್ರಾಮದಲ್ಲಿ ನಡೆದಿದೆ.

    ಅಡಿಹುಡಿ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಳೆದ ಆರು ತಿಂಗಳಿಂದ ಗಣಿತ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೂ ಮನವಿಗೆ ಸ್ಪಂದಿಸಿಲ್ಲ.

    ಇಲಾಖೆಯ ಆದಿಕಾರಿಳ ಸ್ಪಂದನೆ ದೊರೆಯದಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು ತಾವು ಕಲಿಯುತ್ತಿರುವ ಸರಕಾರಿ ಪ್ರೌಢಶಾಲೆಗೆ ತಾವೆ ಬೀಗ ಜಡಿದರು. ಜೊತೆಗೆ ಗ್ರಾಮದ ರಸ್ತೆ ತಡೆದು ಧರಣಿ ನಡೆಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

    ಶಿಕ್ಷಕರ ಕೊರತೆ ಹಿನ್ನೆಲೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಕೂಡಲೆ ಶಿಕ್ಷಕರನ್ನು ನೇಮಿಸುವಂತೆ ಪ್ರತಿಔಟನೆಯ ವೇಳೆ ಆಗ್ರಹಿಸಿದ್ರು.

  • ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಮಡಿಕೇರಿ: ಪ್ರಕೃತಿಯ ಮುನಿಸಿಗೆ ನಲುಗಿಹೋಗಿರುವ ಕೊಡಗಿನಲ್ಲಿ ಇಂದು ಶಾಲೆಗಳು ಪುನಾರಂಭವಗೊಂಡಿವೆ. ಪ್ರವಾಹ ಪೀಡಿತ ಪ್ರದೇಶ ಬಿಟ್ಟು ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ.

    12 ದಿನಗಳಿಂದ ಪಾಠವಿಲ್ಲದೇ ಮಕ್ಕಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಆದ್ರೆ ಇಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಂಡು ಕಣ್ಣೀರು ಹಾಕಿದ್ದಾರೆ.

    ಮಳೆ ಬಂದ ಕಾರಣ 12 ದಿನ ರಜೆ ಇತ್ತು. ಗೆಳೆಯರಿಲ್ಲದೇ ಬೇಜಾರಾಗುತ್ತಿತ್ತು. ಶಾಲೆಗ ಹೋಗಬೇಕನ್ನಿಸುತ್ತಿತ್ತು. ಆದ್ರೆ ಇಂದು ಶಾಲೆಗೆ ಬಂದು ತುಂಬಾ ಖುಷಿಯಾಗುತ್ತಿದೆ ಅಂತ ಬೋಯಕೇರಿ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.

    ಮಕ್ಕಳು ಕರೆ ಮಾಡಿ ಯಾವ ಶಾಲೆ ಆರಂಭವಾಗುತ್ತದೆ ಅಂತ ಕೇಳುತ್ತಾನೇ ಇದ್ರು. ಯಾಕಂದ್ರೆ ಅವರ ಮನಸ್ಥಿತಿ ಕೂಡ ಹಾಗೆಯೇ ಇತ್ತು. ಮಕ್ಕಳಿಗೂ ಕೂಡ ಹೆತ್ತವರನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿತ್ತು. ಆದ್ರೆ ಇಂದು ಶಾಲೆ ಆರಂಭವಾಗಿದೆ. ಇದೀಗ ಮಕ್ಕಳಿಗಿಂತ ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮ ಶಾಲೆಯ ಮಕ್ಕಳು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆವು ಅಂತ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯಿಂದಾಗಿ ಶಾಲೆಯೂ ಕೂಡ ಮುಚ್ಚಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಲ್ಲಿ ಏನಾಗಿದೆ ಅಂತ ನಾವು ಕರೆ ಮಾಡಿ ತಿಳಿದುಕೊಂಡಿದ್ವಿ. ಯಾವತ್ತೂ ಶಾಲಾ ಆವರಣಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮಕ್ಕಳು ಓಡಿಕೊಂಡು ಬರುತ್ತಿದ್ದರು. ಆದ್ರೆ ಇಂದು ಮಕ್ಕಳ ಸಂಖ್ಯೆ ಕಡಿಮೆ ಇದ್ದುದನ್ನು ಕಂಡು ಕಣ್ಣಲ್ಲಿ ನೀರು ಬಂತು. ನಾವು ಬರುತ್ತಿರುವುದನ್ನು ಕಂಡು ಕೆಲ ಮಕ್ಕಳು ಅರ್ಧ ದಾರಿಗೆ ಓಡಿ ಬರುತ್ತಿದ್ದರು. ಇಂದು ಆ ಮಕ್ಕಳನ್ನು ನೆನೆದು ನಿಜವಾಗಲೂ ದುಃಖವಾಯ್ತು ಅಂತ ಮತ್ತೊಬ್ಬ ಶಿಕ್ಷಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಕಾಡ್ತಿದೆ ಪ್ರಾಣ ಭಯ!

    ಕಲಬುರಗಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಕಾಡ್ತಿದೆ ಪ್ರಾಣ ಭಯ!

    ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿರುವ ಈ ಸರ್ಕಾರಿ ಶಾಲೆಯಲ್ಲಿ ಇನ್ನೂರಕ್ಕೂ ಅಧಿಕ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಪಾಠ ಕೇಳುತ್ತಿದ್ದಾರೆ. ಶಾಲೆಯ ಎಲ್ಲಾ ಕೋಣೆಗಳ ಮೇಲ್ಚಾವಣಿ ಶಿಥಿಲಗೊಂಡಿದ್ದು, ಅಲ್ಲದೇ ಗೋಡೆಗಳು ಸಹ ಬಿರುಕು ಬಿಟ್ಟು ಕುಸಿದು ಬೀಳುವ ಅಪಾಯ ಎದುರಾಗಿದೆ. ಮಳೆ ಬಂದರೆ ಸಾಕು ಬಿರುಕುಬಿಟ್ಟ ಮೇಲ್ಚಾವಣಿ ಮೂಲಕ ಮಳೆ ನೀರೆಲ್ಲಾ ತರಗತಿ ಕೋಣೆಗಳ ತುಂಬೆಲ್ಲಾ ಆಗುತ್ತವೆ.

    ಮೈಸೂರು ಸರ್ಕಾರವಿದ್ದಾಗ ಈ ಸರ್ಕಾರಿ ಶಾಲೆ ಆರಂಭವಾಗಿದ್ದು 5 ದಶಕಗಳಷ್ಟು ಹಳೆಯದಾದ ಈ ಶಾಲೆ ಇದುವರೆಗೆ ದುರಸ್ತಿ ಕಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬಂದರೂ ಸಹ, ಶಿಕ್ಷಣ ಇಲಾಖೆ ಮಾತ್ರ ಈ ಶಾಲೆಯತ್ತ ಗಮನ ಹರಿಸದೇ ಇರೋದು ಆಕ್ರೋಶಕ್ಕೆ ಕಾರಣವಾಗಿದೆ.

    ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸಿ ಎಂದು ಬಿಇಓ, ಡಿಡಿಪಿಐ ಹಾಗೂ ಜಿಲ್ಲಾ ಪಂಚಾಯತ್‍ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದು, ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಮಳೆಗಾಲ ಬೇರೆ ಆರಂಭವಾಗಿದ್ದರಿಂದ ಶಾಲೆಯ ಎಲ್ಲಾ ಕೋಣೆಗಳು ಸೋರುತ್ತಿದ್ದು, ಮೇಲ್ಚಾವಣಿ ಕುಸಿಯುವ ಅಪಾಯ ಎದುರಾಗಿದೆ. ಶಿಕ್ಷಣಕ್ಕೆ ಅನೂಕುಲವಾದಂತಹ ಯಾವೊಂದು ವಾತಾವರಣ ಈ ಶಾಲೆಯಲ್ಲಿಲ್ಲ. ಒಂದರಿಂದ ಏಳನೇ ತರಗತಿವರೆಗೆ ಇರುವ ಈ ಶಾಲೆ ಅರ್ಧ ಶತಮಾನದಷ್ಟು ಹಳೆಯದಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ನಾದರು ಸಂಬಂಧಪಟ್ಟ ಶಿಕ್ಷಣ ಇಲಾಖೆ ದುರಸ್ತಿ ಭಾಗ್ಯ ಕರುಣಿಸುತ್ತದೆಯೇ ಎಂಬುದನ್ನು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೆಚ್ಚಿನ ಶಿಕ್ಷಕರನ್ನು ಅಮಾನತು ಮಾಡಿದ್ದಕ್ಕೆ, ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ನೆಚ್ಚಿನ ಶಿಕ್ಷಕರನ್ನು ಅಮಾನತು ಮಾಡಿದ್ದಕ್ಕೆ, ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕೊಪ್ಪಳ: ನೆಚ್ಚಿನ ಶಾಲಾ ಶಿಕ್ಷಕನನ್ನು ಅಮಾನತು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ಜಾಪಾಳ ಅಮಾತುಗೊಂಡ ಶಿಕ್ಷಕರಾಗಿದ್ದಾರೆ. ಇವರು ವಿದ್ಯಾರ್ಥಿಗಳಿಂದ ಮನೆ ಕೆಲಸವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಂದ್ರಶೇಖರ್ ರವರನ್ನು ಅಮಾನತು ಮಾಡಿದ್ದರು. ಆದರೆ ಇದರಿಂದ ಆಕ್ರೋಶಗೊಂಡ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು, ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಶಾಲೆಯ ಮುಂದಿರುವ ತಿಪ್ಪೆಯನ್ನು ತೆಗೆಯುವ ವಿಚಾರಕ್ಕೆ ಕೆಲವರು ಒತ್ತಡ ಬಳಸಿ, ಸುಳ್ಳು ಆರೋಪ ಮಾಡಿ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಕೂಡಲೇ ನಮ್ಮ ಶಿಕ್ಷಕರು ಮರಳಿ ನಮ್ಮ ಶಾಲೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

    ಶಿಕ್ಷಕರನ್ನು ಮರು ನೇಮಕಾತಿ ಮಾಡದಿದ್ದರೆ ಆಗಸ್ಟ್ 15 ರಂದು ನಡೆಯುವ ಧ್ವಜರೋಹಣವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿಗಳು ಬಿಸಿ ಮುಟ್ಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬ್ಯಾಗ್‍ನಲ್ಲಿದ್ದ 500 ರೂ. ಕಾಣಿಸದಕ್ಕೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಶಿಕ್ಷಕರು!

    ಬ್ಯಾಗ್‍ನಲ್ಲಿದ್ದ 500 ರೂ. ಕಾಣಿಸದಕ್ಕೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಶಿಕ್ಷಕರು!

    ಬಾಗಲಕೋಟೆ: ಬ್ಯಾಗ್‍ನಲ್ಲಿದ್ದ 500 ರೂ. ಕಾಣದ ಹಿನ್ನೆಲೆ ವಿಧ್ಯಾರ್ಥಿಗಳನ್ನು ಶಿಕ್ಷಕ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ರಾಘಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಶ್ವಿನಿ ಅಂಗಡಿ ಮತ್ತು ಶಿಕ್ಷಕ ಚಂದ್ರು ದಾಸರ ಐದನೇ ತರಗತಿಯ 10ಕ್ಕೂ ಹೆಚ್ಚು ವಿಧ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಬೆನ್ನು, ತೊಡೆ, ಸೊಂಟದ ಭಾಗದಲ್ಲಿ ಬಾಸುಂಡೆಗಳು ಕಾಣಿಸಿಕೊಂಡಿವೆ.

    ವಿದ್ಯಾರ್ಥಿಗಳು ಹಣ ಕದ್ದಿದ್ದಾರೆ ಎಂದ ಆರೋಪಿಸಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಪೋಷಕರು ಶಿಕ್ಷಕ ಚಂದ್ರು ದಾಸರ ಮತ್ತು ಶಿಕ್ಷಕಿ ಅಶ್ವಿನಿ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶನಿವಾರ ಈ ಘಟನೆ ನಡೆದಿದ್ದು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ವಿಷಯ ಮುಂದುವರೆಸದೆ ಮುಚ್ಚಿ ಹಾಕಲಾಗಿದೆ. ಇಬ್ಬರೂ ಶಿಕ್ಷಕ ಶಿಕ್ಷಕಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

  • ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಿಕ್ಷಕರಿಂದ ಕಿರುಕುಳ!

    ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಿಕ್ಷಕರಿಂದ ಕಿರುಕುಳ!

    ಕೊಪ್ಪಳ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಿಕ್ಷಕರು ವಿನಾಃಕಾರಣ ಕಿರುಕುಳ ನೀಡ್ತಿರೋ ಆರೋಪವೊಂದು ಕೇಳಿಬಂದಿದೆ.

    ಯಲಬುರ್ಗಾ ಹಿರೇವಂಕಲಕುಂಟಾ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸವಿತಾ(ಹೆಸರು ಬದಲಾಯಿಸಲಾಗಿದೆ) ಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಅವೈಜ್ಞಾನಿಕವಾಗಿ ಮಾಡಲು ಸಾಧ್ಯವಾಗದಷ್ಟು ಹೋಮ್ ವರ್ಕ್ ಕೊಡಲಾಗುತ್ತದೆ. ಮಾಡದಿದ್ದರೆ ಶಿಕ್ಷಕರು ಹೊಡೆಯುತ್ತಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

    ಒಂದೇ ದಿನಕ್ಕೆ ಮೂರ್ನಾಲ್ಕು ನೋಟ್ ಬುಕ್ ಬರೆಯಬೇಕೆಂದು ಹಿಂಸೆ ನೀಡುತ್ತಾರೆ. ಹೋಮ್ ವರ್ಕ್ ಮಾಡದೆ ಇದ್ದರೆ ಟಿ.ಸಿ ತಗೆದುಕೊಂಡು ಹೋಗಿ ಎಂದು ಶಿಕ್ಷಕರು ಅವಾಜ್ ಹಾಕ್ತಿದ್ದಾರೆ. ಮೆರಿಟ್ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೀಗೆ ಕಿರುಕುಳ ಕೊಟ್ಟು, ಶಾಲೆಯಿಂದ ಬಿಡುವಂತೆ ಮಾಡಬೇಕು. ನಂತರ ಆ ಸ್ಥಾನಕ್ಕೆ ಹಣ ಪಡೆದು ಬೇರೆ ವಿದ್ಯಾರ್ಥಿಗೆ ಪ್ರವೇಶ ನೀಡಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗ್ತಿದೆ ಎಂದು ವಿದ್ಯಾರ್ಥಿನಿ ಪಾಲಕರು ಕೂಡ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews