Tag: teachers

  • ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಚಂಢೀಗಡ: ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಪಂಜಾಬ್‍ನ ಹೋಶಿಯಾಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶಾಲೆಯ ಪ್ರಿನ್ಸಿಪಾಲ್‍ನ ಈ ವರ್ತನೆ ಕಂಡು ಸಿಬ್ಬಂದಿ ಬೇಸತ್ತು ಹೋಗಿದ್ದರು. ಅಲ್ಲದೆ ಆತನ ಕೃತ್ಯ ಎಲ್ಲರ ಮುಂದೆ ಬಯಲು ಮಾಡಲು ಆಫೀಸ್ ರೂಮಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಎರಡು ವಿಡಿಯೋದಲ್ಲಿ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ಆರೋಪಗಳನ್ನು ಒಪ್ಪಿಕೊಳ್ಳಲು ಶಾಲೆಯ ಪ್ರಿನ್ಸಿಪಾಲ್ ನಿರಾಕರಿಸುತ್ತಿದ್ದಾನೆ. ನನ್ನ ಹೆಸರಿಗೆ ಕಳಂಕ ತರಲು ಯಾರೋ ಈ ರೀತಿಯ ಹುಡುಗಾಟ ಆಡಿದ್ದಾರೆ ಎಂದು ಹೇಳುತ್ತಿದ್ದಾನೆ.

    ಈ ಘಟನೆ ಬಗ್ಗೆ ಸರಪಂಚ್ ಶಾಲೆಯ ಕಮಿಟಿ ಜೊತೆ ಚರ್ಚೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಪ್ರಕರಣ ಈಗ ಕ್ಲೋಸ್ ಆಗಿದ್ದು, ಪ್ರಿನ್ಸಿಪಾಲ್ ಅಸಭ್ಯವಾಗಿ ವರ್ತಿಸಿದ್ದಕ್ಕೆ ಶಾಲೆಯ ಸಿಬ್ಬಂದಿ ಹಾಗೂ ಪಂಚಾಯ್ತಿಯಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.

  • ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಹುಬ್ಬಳ್ಳಿ: ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕಳುಹಿಸಿ ಎಂದು ಪೋಷಕರ ಬಳಿ ವಿನಂತಿ ಮಾಡಿದ ಶಿಕ್ಷಕಿಯರಿಗೆ ತಾಯಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೇಶದ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಮಾಡಿದೆ. ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ತಕ್ಕಂತೆ ಶಿಕ್ಷಕರು ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹೀಗೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕರೆಯಲು ಹೋದ ಶಿಕ್ಷಕಿಯರಿಗೆ ಕಹಿ ಅನುಭವವಾಗಿದೆ.

    ಪಾಲಕರ ನಿಷ್ಕಾಳಜಿಯಿಂದಾಗಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಘಟನೆಯ ವಿಡಿಯೋ ಆಗಿದ್ದು, ನಡೆದಿದ್ದು ಎಲ್ಲಿ? ಯಾವ ಜಿಲ್ಲೆ ಎನ್ನುವ ಖಚಿತ ಮಾಹಿತಿ ದೊರಕಿಲ್ಲ. ಆದ್ರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ತಾಯಿಯೊಬ್ಬರು ಮಗಳನ್ನು ಶಾಲೆಗೆ ಕರೆದೊಯ್ಯಲು ಬಂದಿದ್ದ ಶಿಕ್ಷಕಿಯರಿಗೆ ಹಿಗ್ಗಾಮುಗ್ಗಾ ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿದ್ದಾರೆ. ಅಲ್ಲದೆ ಸುಮ್ಮನೆ ಹೋಗಿ, ಶಾಲೆ ಕಲಿಯದಿದ್ದರೆ ಏನಾಗುತ್ತೆ? ನನ್ನ ಮಗಳನ್ನು ನಾನು ಶಾಲೆಗೆ ಕಳುಹಿಸಲ್ಲ. ಏನು ಜೈಲಿಗೆ ಹಾಕ್ಕುತ್ತೀರಾ ಎಂದು ಪ್ರಶ್ನಿಸಿ, ಶಿಕ್ಷಕರಿಗೆ ಹೊಡೆಯುವುದಾಗಿ ಅವಾಜ್ ಹಾಕಿದ್ದಾರೆ.

    ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂಬ ಸದುದ್ದೇಶದಿಂದ ಶಿಕ್ಷಕಿಯರು ಪರಿಪರಿಯಾಗಿ ತಾಯಿಯನ್ನು ಅಂಗಲಾಚಿದರೂ ಕೂಡ ಆ ತಾಯಿ ಯಾವುದೇ ಕಾರಣಕ್ಕೂ ನನ್ನ ಮಗಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಶಿಕ್ಷಕರಿಗೆ ಬಾಯಿಗೆ ಬಂದ ಹಾಗೆ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  • ದೈಹಿಕ ಶಿಕ್ಷಕರು ಬೇಕು – ಕಣ್ಣೀರು ಹಾಕಿ, ಸಂಘಟನಾಕಾರರ ಕಾಲಿಗೆ ಬಿದ್ದ ವಿದ್ಯಾರ್ಥಿಗಳು

    ದೈಹಿಕ ಶಿಕ್ಷಕರು ಬೇಕು – ಕಣ್ಣೀರು ಹಾಕಿ, ಸಂಘಟನಾಕಾರರ ಕಾಲಿಗೆ ಬಿದ್ದ ವಿದ್ಯಾರ್ಥಿಗಳು

    ಯಾದಗಿರಿ: ದೈಹಿಕ ಶಿಕ್ಷಕರನ್ನು ವರ್ಗಾಯಿಸಿದ್ದರಿಂದ ವಿದ್ಯಾರ್ಥಿಗಳು ತೀವ್ರ ಬೇಸರಗೊಂಡಿದ್ದು, ಕಣ್ಣೀರು ಹಾಕಿ, ಗೋಗರೆದು, ಸಂಘಟನಾಕಾರರ ಕಾಲಿಗೆ ಬಿದ್ದಿದ್ದಾರೆ. ಹೇಗಾದರೂ ಮಾಡಿ ದೈಹಿಕ ಶಿಕ್ಷಕರು ಮರಳಿ ಬರುವಂತೆ ಮಾಡಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಶಿರವಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತಮಗೆ ದೈಹಿಕ ಶಿಕ್ಷಕರು ಬೇಕು ಎಂದು ವಿವಿಧ ಸಂಘಟನಕಾರರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಕರನ್ನು ವರ್ಗಾಯಿಸಿರುವುದನ್ನು ತಡೆಯುವಂತೆ ವಿವಿಧ ಸಂಘಟನೆಕಾರರ ಬಳಿ ಬಿಕ್ಕಿ, ಬಿಕ್ಕಿ ಅತ್ತು ಕೇಳಿಕೊಳ್ಳುತ್ತಿದ್ದಾರೆ. ತರಗತಿ ಬಹಿಷ್ಕರಿಸಿ ಶಾಲೆಯ ಬಳಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ.  ಇದನ್ನು ಓದಿ: ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ತಾವಷ್ಟೇ ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ ಎಂಬುದನ್ನು ಅರಿತ ವಿದ್ಯಾರ್ಥಿಗಳು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ, ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾತ್ರವಲ್ಲದೆ, ತರಗತಿಗೆ ತೆರಳದೆ, ಬೋರ್ಡ್ ಹಿಡಿದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ದೈಹಿಕ ಶಿಕ್ಷಕರು ಬೇಕು, ಹೇಗಾದರೂ ಮಾಡಿ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಮರಳಿ ಕರೆಸಿ ಎಂದು ಗೋಳಿಡುತ್ತಿದ್ದಾರೆ.

    ವಿದ್ಯಾರ್ಥಿಗಳ ಮೊರೆಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಹೇಗಾದರೂ ಮಾಡಿ ವರ್ಗಾವಣೆಯನ್ನು ತಡೆಯುತ್ತೇವೆ. ನಿಮ್ಮ ದೈಹಿಕ ಶಿಕ್ಷಕರನ್ನು ಕರೆ ತರುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೂ ಸುಮ್ಮನಾಗದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

    -ಮಕ್ಕಳಿಗೆ ಗ್ರಾಮಸ್ಥರು, ಶಿಕ್ಷಕರು ಸಾಥ್

    ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ ಕೆಸರುಮಯವಾಗಿತ್ತು. ಹೀಗಾಗಿ ನೀರು ತಗ್ಗಿರುವ ಕಾರಣಕ್ಕೆ ಈ ಶಾಲೆಯ ವಿದ್ಯಾರ್ಥಿಗಳೇ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

    ಕಲಿಕೆಯಲ್ಲಿ ಆಸಕ್ತಿ ಇರುವ ಕಾರಣಕ್ಕೆ ತಮ್ಮ ಶಾಲೆಯನ್ನು ತಾವಾಗೆ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ನಿರ್ಧರಿಸಿ, ಸ್ನೇಹಿತರೊಟ್ಟಿಗೆ ಸೇರಿಕೊಂಡು ಉತ್ಸಾಹದಿಂದ ಶಾಲೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚಿದ ಶಿಕ್ಷಕರ ವರ್ಗ ಹಾಗೂ ಎಸ್‍ಡಿಎಂಸಿ ಸದಸ್ಯರು ಕೂಡ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.

    ಶಾಲಾ ಕೊಠಡಿಗಳಿಗೆ ಹಾಗೂ ಆವರಣಕ್ಕೆ ಪುಟಾಣಿ ಮಕ್ಕಳು ಪೈಪ್‍ಗಳ ಮೂಲಕ ನೀರು ಹಾಕುತ್ತಿದ್ದರೆ, ಇತರೆ ವಿದ್ಯಾರ್ಥಿಗಳು ಪೊರಕೆಯಿಂದ ಗುಡಿಸಿ ಕಸವನ್ನು, ಕೆಸರನ್ನು ಹೊರಗಡೆ ಎಸೆಯುತ್ತಿದ್ದಾರೆ. ಅಲ್ಲದೆ ಮಳೆಗೆ ಶಾಲೆಯ ಕೆಲ ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದನ್ನು ಕೂಡ ಮಕ್ಕಳೇ ಸ್ವಚ್ಛಗೊಳಿಸುತ್ತಿದ್ದಾರೆ.

  • ಕ್ಲಾಸ್‍ರೂಮಿನಲ್ಲೇ ಶಿಕ್ಷಕರಿಂದ ರೇಪ್ ಡೆಮೋ – ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

    ಕ್ಲಾಸ್‍ರೂಮಿನಲ್ಲೇ ಶಿಕ್ಷಕರಿಂದ ರೇಪ್ ಡೆಮೋ – ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

    ಹೈದರಾಬಾದ್: ಆಂಧ್ರ ಪ್ರದೇಶ ಪಶ್ಚಿಮ ಗೋದಾವರಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಯಲ್ಲೇ ರೇಪ್ ಡೆಮೋ ತೋರಿಸುವ ಆರೋಪವೊಂದು ಇಬ್ಬರು ಶಿಕ್ಷಕರ ವಿರುದ್ಧ ಕೇಳಿ ಬಂದಿದೆ. ಗ್ರಾಮಸ್ಥರು ಆರೋಪ ಎದುರಿಸುತ್ತಿರುವ ಶಿಕ್ಷಕರನ್ನು ಹಿಡಿದು ಥಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣ ಅಧಿಕಾರಿ, ನಾವು ಚಿಂತಲಪುಡಿ ಮಂಡಲದಲ್ಲಿ ನಡೆದ ಘಟನೆ ಬಗ್ಗೆ ಪರಿಶೀಲಿಸಲು ಪ್ರಯತ್ನಿಸುತ್ತಿದ್ದೆವು. ಈ ವೇಳೆ ಈ ವಿಷಯ ತಿಳಿದು ಗ್ರಾಮಸ್ಥರು ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ.

    ಶನಿವಾರ ಶಾಲೆಗೆ ಭೇಟಿ ನೀಡಿ ಮತ್ತು ಘಟನೆಯ ಮಾಹಿತಿ ಪಡೆಯುತ್ತೇನೆ. ಅಲ್ಲದೆ ತರಗತಿಯಲ್ಲಿ ನಿಜವಾಗಿಯೂ ಏನಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ. ನನಗೆ ನೀಡಿದ ವರದಿಯಲ್ಲಿ ಮಂಡಲ ಶಿಕ್ಷಣದ ಅಧಿಕಾರಿ ಈ ರೀತಿಯ ಘಟನೆ ನಡೆದಿಲ್ಲ ಎಂದು ಬರೆದಿದ್ದಾರೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಸಿ.ವಿ ರೇಣುಕಾ ತಿಳಿಸಿದ್ದಾರೆ.

    ಶಾಲೆ ನೀಡಿದ ವರದಿಯಲ್ಲಿ ಮೂರನೇ ತರಗತಿಯ ಇಬ್ಬರು ಹುಡುಗರು ಹಾಗೂ ಹುಡುಗಿಯರು ನಡುವೆ ಜಗಳ ನಡೆದಿತ್ತು. ಈ ಜಗಳದಲ್ಲಿ ಹುಡುಗಿ ಗಾಯಗೊಂಡಿದ್ದಳು. ರೇಪ್ ಡೆಮೋ ತೋರಿಸುವ ಸಂದರ್ಭದಲ್ಲಿ ಬಾಲಕಿಯನ್ನು ಸ್ವಯಂಸೇವಕರಾಗಿ ಬಳಸಲಾಗಿದೆ ಎಂಬ ಸಾಕ್ಷಿ ದೊರೆತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಶಿಕ್ಷಕರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಚಿಂತಲಪುಡಿ ಪೊಲೀಸರು ಹೇಳಿದ್ದಾರೆ.

  • ಸಾಮಾನ್ಯ ಜ್ಞಾನ ಇಲ್ಲದ ಸರ್ಕಾರಿ ಶಿಕ್ಷಕರಿಗೆ ನೋಟಿಸ್

    ಸಾಮಾನ್ಯ ಜ್ಞಾನ ಇಲ್ಲದ ಸರ್ಕಾರಿ ಶಿಕ್ಷಕರಿಗೆ ನೋಟಿಸ್

    ಧಾರವಾಡ/ಹುಬ್ಬಳ್ಳಿ: ಕನ್ನಡ ವಿಷಯ ಬೋಧನೆ ಮಾಡುವ ಶಿಕ್ಷಕರಿಗೆ ಕನ್ನಡದ ಸಂಧಿಗಳ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ಹುಬ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರಾದ ವಿ.ಎಫ್.ಚಳಕಿ ಹಾಗೂ ಎಸ್.ಆರ್.ಹೂಲಿ ಶಿಕ್ಷಕರು ಸಂಧಿಗಳನ್ನು ತಪ್ಪಾಗಿ ಹೇಳಿದ್ದಾರೆ. ಮತ್ತೊಬ್ಬ ಶಿಕ್ಷಕ ಗಾಂಧೀಜಿ ಅವರ ಜನ್ಮ ದಿನವನ್ನು ಇಲಾಖೆ ಅಧಿಕಾರಿಗಳ ಮಂದೆ ತಪ್ಪಾಗಿ ಹೇಳಿದ್ದರಿಂದ ನೋಟಿಸ್ ನೀಡಿದ್ದಾರೆ.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗಯ್ಯ ಹಿರೇಮಠ್ ನೋಟಿಸ್ ಜಾರಿ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳ ವಿರುದ್ಧ ಶಾಲಾ ಸಮಯದಲ್ಲೇ ದೂರು ನೀಡಲು ಈ ಇಬ್ಬರು ಶಿಕ್ಷಕರು ಕಚೇರಿಗೆ ಬಂದಿದ್ದಾರೆ. ಈ ವೇಳೆ ಸಿದ್ದಲಿಂಗಯ್ಯ ಹಿರೇಮಠ್ ಅವರು ಪ್ರಶ್ನೆ ಕೇಳಿದ್ದಾರೆ. ಗಾಂಧೀಜಿ ಜನಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಶಿಕ್ಷಕ ವಿ.ಎಫ್.ಚಳಕಿ 1857ರ ಅಕ್ಟೋಬರ್ 5 ಎಂದು ತಪ್ಪಾಗಿ ಉತ್ತರಿಸಿದ್ದಾರೆ.

    ಸಂಧಿ ಎಂದರೇನು? ಪ್ರಕಾರಗಳೆಷ್ಟು? ಎಂದು ಮತ್ತೊಬ್ಬ ಶಿಕ್ಷಕ ಎಸ್.ಆರ್.ಹೂಲಿ ಅವರನ್ನು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದ್ದಾರೆ. ಮಕ್ಕಳಿಗೆ ತಾವು ಬೋಧಿಸುವ ವಿಷಯದ ಬಗ್ಗೆ ಜ್ಞಾನವೇ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಈ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

  • ಸಿಎಂ ಮುಂದೆ ಕಣ್ಣೀರಿಟ್ಟು ಶಾಲಾ ಸಮಸ್ಯೆ ಹೇಳಿದ ವಿದ್ಯಾರ್ಥಿನಿ

    ಸಿಎಂ ಮುಂದೆ ಕಣ್ಣೀರಿಟ್ಟು ಶಾಲಾ ಸಮಸ್ಯೆ ಹೇಳಿದ ವಿದ್ಯಾರ್ಥಿನಿ

    ರಾಯಚೂರು: ಮಾನ್ವಿಯ ಕರೇಗುಡ್ಡ ಗ್ರಾಮಕ್ಕೆ ಬಸ್‍ನಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಕಣ್ಣಿರಿಟ್ಟು ಶಾಲಾ ಸಮಸ್ಯೆಗಳನ್ನ ಹೇಳಿಕೊಂಡಿದ್ದಳು. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇನೆ ಎಂದು ಸಿಎಂ ವಿದ್ಯಾರ್ಥಿನಿಗೆ ಭರವಸೆ ನೀಡಿದ್ದಾರೆ.

    ಜೂನ್ 26 ರಂದು ಕರೇಗುಡ್ಡ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಲು ಸಿಎಂ ಬರುತ್ತಿದ್ದಾಗ ತನ್ನ ಶಾಲೆಯ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ವಿದ್ಯಾರ್ಥಿ ಕಣ್ಣೀರಿಟ್ಟು ಕೇಳಿಕೊಂಡಿದ್ದಳು. ವಿದ್ಯಾರ್ಥಿನಿಯ ಮನವಿಗೆ ಸ್ಪಂದಿಸಿದ ಸಿಎಂ ಕೂಡಲೇ ಪರಿಹಾರ ಒದಗಿಸುವುದಾಗಿ ಭರವಸೆಯನ್ನು ನೀಡಿದ್ದರು.

    ಸಮಸ್ಯೆ ಏನು?
    ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 6 ರಿಂದ 10ನೇ ತರಗತಿವರೆಗೆ ಇರುವ ಸರ್ಕಾರದ ವಿಶೇಷ ಸವಲತ್ತುಗಳ ಶಾಲೆಯಾಗಿದ್ದರೂ, ವಿದ್ಯಾರ್ಥಿಗಳಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ. ಈ ಶಾಲೆಯಲ್ಲಿ 18 ಶಿಕ್ಷಕರ ಬದಲಾಗಿ ಕೇವಲ 7 ಮಂದಿ ಶಿಕ್ಷಕರು ಮಾತ್ರ ಇದ್ದಾರೆ. ಅದರಲ್ಲೂ ಗಣಿತ, ಇಂಗ್ಲಿಷ್ ವಿಷಯಕ್ಕೆ ಶಿಕ್ಷಕರು ಇಲ್ಲದಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವಾಗಿದೆ.

    ಶಿಕ್ಷಕರ ಕೊರೆತೆಯಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಶಾಲಾ ಶಿಕ್ಷಕರು ಅನೇಕ ಬಾರಿ ಶಿಕ್ಷಕರ ಕೊರತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಮಾನ್ವಿ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಓದುತ್ತಿರುವುದರಿಂದ ವಸತಿ ನಿಲಯದ ಅವಶ್ಯಕತೆಯೂ ಇದೆ.

    ಸಾಕಷ್ಟು ಬಾರಿ ಸಮಸ್ಯೆಗಳ ಬಗ್ಗೆ ದೂರು ಹೇಳಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೇ ಸರಿಯಾದ ಸಮಯ ಎಂದು ಭಾವಿಸಿ ಎಸ್‍ಡಿಎಂಸಿ ಸದಸ್ಯರು, ಪಾಲಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸಿಎಂ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದಾಗ ಬಸ್ ನಿಲ್ಲಿಸಿ ತಮ್ಮ ಅಹವಾಲು ಸಲ್ಲಿಸಿದ್ದರು.

    ವಿದ್ಯಾರ್ಥಿನಿಯ ಕಣ್ಣೀರಿಗೆ ಕರಗಿ ಸಿಎಂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿ ಹೋಗಿದ್ದಾರೆ. ಸಿಎಂ ನೀಡಿದ ಭರವಸೆ ಈಡೇರಿಕೆ ಆಗುತ್ತಾ? ಇಲ್ಲವೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಕನ್ನಡ ಮೀಡಿಯಂ ಶಿಕ್ಷಕರು – ಇಂಗ್ಲೀಷ್ ಮೀಡಿಯಂ ಮೌಲ್ಯಮಾಪನ!

    ಕನ್ನಡ ಮೀಡಿಯಂ ಶಿಕ್ಷಕರು – ಇಂಗ್ಲೀಷ್ ಮೀಡಿಯಂ ಮೌಲ್ಯಮಾಪನ!

    ಶಿವಮೊಗ್ಗ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕನ್ನಡ ಮಾಧ್ಯಮ ಶಿಕ್ಷಕರಿಂದ ಮಾಡಿಸುತ್ತಿರುವ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆಯುತ್ತಿದೆ.

    ಶಿವಮೊಗ್ಗ ನಗರದ ಏಳು ಕೇಂದ್ರಗಳಲ್ಲಿ ವಿವಿಧ ವಿಷಯಗಳ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದೆ. ಎನ್‍ಇಎಸ್ ಕೇಂದ್ರದಲ್ಲಿ ಸಮಾಜ ವಿಜ್ಞಾನ ಮೌಲ್ಯಮಾಪನ ನಡೆಯುತ್ತಿದೆ. ಈ ಕೇಂದ್ರಕ್ಕೆ 24 ಸಾವಿರ ಉತ್ತರ ಪತ್ರಿಕೆಗಳು ಬಂದಿದ್ದು, ಇದರಲ್ಲಿ 4 ಸಾವಿರ ಮಾತ್ರ ಕನ್ನಡ ಮಾಧ್ಯಮದಲ್ಲಿವೆ. ಉಳಿದ 20 ಸಾವಿರ ಪತ್ರಿಕೆಗಳು ಇಂಗ್ಲೀಷ್ ಮಾಧ್ಯಮದಲ್ಲಿವೆ.

    ಈ ಕೇಂದ್ರದಲ್ಲಿ ಮೌಲ್ಯಮಾಪನದಲ್ಲಿ ತೊಡಗಿರುವ 400 ಶಿಕ್ಷಕರಲ್ಲಿ 300ಕ್ಕೂ ಹೆಚ್ಚು ಜನ ಕನ್ನಡ ಮಾಧ್ಯಮದಲ್ಲೇ ಬೋಧನೆ ಮಾಡಿದವರು. ಇವರಿಗೆ ಇಂಗ್ಲೀಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಸರಾಗವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತಿಲ್ಲ.

    ಹತ್ತಾರು ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲೇ ಪಾಠ ಮಾಡಿದವರಿಗೆ ಸಮಾಜ ವಿಜ್ಞಾನದಂತ ಉತ್ತರ ಇರುವ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಕಷ್ಟವಾಗುತ್ತಿದೆ. ಕೀ ಉತ್ತರಗಳು ಇದ್ದರೂ ಸಹ ಗಣಿತ, ವಿಜ್ಞಾನದಷ್ಟು ಸಲೀಸಾಗಿ ಸಮಾಜ ವಿಜ್ಞಾನ ಪತ್ರಿಕೆ ಮೌಲ್ಯ ಮಾಪನ ಮಾಡುವುದು ಕಷ್ಟವಾಗುತ್ತಿದೆ. ಆದರೂ ಮೌಲ್ಯ ಮಾಪನ ಮಾಡಲು ನಿರಾಕರಿಸುವ ಕನ್ನಡ ಮಾಧ್ಯಮ ಶಿಕ್ಷಕರನ್ನು ಬೆದರಿಸಿ, ಬಲವಂತದಿಂದ ಮೌಲ್ಯ ಮಾಪನ ಮಾಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಪ್ರೌಢ ಶಿಕ್ಷಣ ಮಂಡಳಿ ಈ ಬಗ್ಗೆ ಸ್ಪಷ್ಟ ಸುತ್ತೋಲೆ ಹೊರಡಿಸಿದ್ದರೂ ಶಿವಮೊಗ್ಗದಲ್ಲಿ ಅದಕ್ಕೆ ಬೆಲೆ ಇಲ್ಲದಂತಾಗಿದೆ. ಇಂಗ್ಲೀಷ್ ಮಾಧ್ಯಮದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇಂಗ್ಲೀಷ್ ಮಾಧ್ಯಮದ ಶಿಕ್ಷಕರನ್ನೇ ನೇಮಿಸುವಲ್ಲಿ ಮಂಡಳಿ ವಿಫಲವಾಗಿದೆ. ಇತ್ತ ಕನ್ನಡ ಮಾಧ್ಯಮದ ಶಿಕ್ಷಕರಿಂದ ಬಲವಂತವಾಗಿ ಮೌಲ್ಯಮಾಪನ ಮಾಡಿಸಿ, ಇಚ್ಛೆ ಇದ್ದವರು ಮಾತ್ರ ಮಾಡಬಹುದು ಎಂಬ ಹೇಳಿಕೆ ನೀಡಿದೆ. ಈ ರೀತಿಯ ಮೌಲ್ಯಮಾಪನದಿಂದ ವಿದ್ಯಾರ್ಥಿಗಳ ಉತ್ತರಕ್ಕೆ ಸರಿಯಾದ ಅಂಕಗಳು ಸಿಗದೇ ಅವರ ಭವಿಷ್ಯಕ್ಕೆ ಕುತ್ತಾಗುವ ಸಾಧ್ಯತೆ ಇದೆ.

  • SSLC ಪರೀಕ್ಷೆ ವೇಳೆ ನಕಲಿಗೆ ಸಹಕರಿಸುತ್ತಿದ್ದ ಪ್ರಾಚಾರ್ಯ ಸೇರಿ ನಾಲ್ವರು ಅರೆಸ್ಟ್

    SSLC ಪರೀಕ್ಷೆ ವೇಳೆ ನಕಲಿಗೆ ಸಹಕರಿಸುತ್ತಿದ್ದ ಪ್ರಾಚಾರ್ಯ ಸೇರಿ ನಾಲ್ವರು ಅರೆಸ್ಟ್

    ಬೆಳಗಾವಿ: ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ್ದ ನಾಲ್ವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ನಡೆದಿದೆ.

    ಹಾರೂಗೇರಿ ವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಮಗದುಮ್, ಸಹಶಿಕ್ಷಕರಾದ ಡಿ.ಪಿ.ದೇಸಾಯಿ, ಎ.ಬಿ.ಪಾಟೀಲ, ಅಲಕನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪಿ.ಬಿ.ಪಾಲಯಾ ಬಂಧಿತರು. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಆಗಿದ್ದೇನು?:
    ಮವಾರ ಗಣಿತ ಪರೀಕ್ಷೆ ನಡೆದಿತ್ತು. ಹಾರೂಗೇರಿ ವಿದ್ಯಾಲಯದ ಶಿಕ್ಷಕರು ಕೆಲ ವಿದ್ಯಾರ್ಥಿಗಳಿಂದ ಪಶ್ನೆ ಪತ್ರಿಕೆ ಪಡೆದು ಕೊಠಡಿಯಲ್ಲಿ ಕುಳಿತು ಉತ್ತರ ಸಿದ್ಧಪಡಿಸಿದ್ದಾರೆ. ಬಳಿಕ ಪ್ರತಿಯೊಂದು ಪರೀಕ್ಷಾ ಕೊಠಡಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಉತ್ತರವನ್ನು ಹೇಳಲು ಮುಂದಾಗಿದ್ದರು. ಕೊಠಡಿಯಲ್ಲಿ ಶಿಕ್ಷಕರು ಪ್ರಶ್ನೆ ಪತ್ರಿಕೆ ಹಿಡಿದು ಉತ್ತರ ಬರೆಯುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ರಾಯಬಾಗ ಬಿಇಒ ಎಚ್.ಎ.ಭಜಂತ್ರಿ ಅವರಿಗೆ ನೀಡಿದ್ದರು.

    ವಿಡಿಯೋ ನೋಡಿದ ಬಿಇಒ ಎಚ್.ಎ.ಭಜಂತ್ರಿ ಅವರು ಹಾರೂಗೇರಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶಿಕ್ಷಕರನ್ನು ಮಂಗಳವಾರ ಸಂಜೆ 4 ಗಂಟೆಗೆ ಬಂಧಿಸಿದ್ದಾರೆ.

  • ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಅವರ ಶಿಕ್ಷಕರು ಸಂತಾಪ ಸೂಚಿಸುವ ವೇಳೆ ಭಾವುಕರಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಗುರುವಾರ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರು ಓದಿದ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. ಈ ವೇಳೆ ಗುರು ಅವರಿಗೆ ಪಾಠ ಮಾಡಿದ ಶಿಕ್ಷಕರು ಭಾವುಕರಾದರು.

    ಶಿಕ್ಷಕಿ ಲತಾ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಗುರು ಶಾಲೆಯಲ್ಲಿ ತುಂಬಾ ಒಳ್ಳೆ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲದೇ ಇತರ ಚಟುವಟಿಕೆಯಲ್ಲಿ ತುಂಬಾ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ನಿಮ್ಮ ಭವಿಷ್ಯ ಏನು ಎಂದು ಕೇಳುತ್ತಿದ್ದಾಗ ಗುರು ಹಾಗೂ ಅವರ ಸ್ನೇಹಿತರು ನಾವು ಸೈನಿಕರಾಗುತ್ತೇವೆ ಎಂದು ಉತ್ತರಿಸಿದ್ದರು” ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಗುರು ನಮ್ಮ ಶಾಲೆಯಲ್ಲಿ ಓದಿದ್ದಾರೆ ಎಂಬ ಹೆಮ್ಮೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ದೇಶ ಪ್ರೇಮ ಇಟ್ಟುಕೊಂಡು ದೇಶ ಸೇವೆ ಮಾಡಬೇಕು ಎಂದು ಸೈನ್ಯ ಸೇರಿದ ಗುರು ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಗುರು ಅವರ ಮದುವೆ ಆಗಿ ಕೇವಲ 8 ತಿಂಗಳು ಎಂಬ ವಿಷಯ ತಿಳಿಯಿತು. ಗುರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ಸಿಗಲಿ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಲತಾ ಹೇಳಿದರು.

    https://www.youtube.com/watch?v=P8Y_QHDFbO4&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv