Tag: teacher

  • ವಿದ್ಯಾರ್ಥಿನಿ ಮೇಲೆ ಆಸಿಡ್ – ಮುಖ್ಯಶಿಕ್ಷಕ ಅಮಾನತು

    ವಿದ್ಯಾರ್ಥಿನಿ ಮೇಲೆ ಆಸಿಡ್ – ಮುಖ್ಯಶಿಕ್ಷಕ ಅಮಾನತು

    ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಶಾಲೆಯ (School) ಮುಖ್ಯಶಿಕ್ಷಕನ್ನು (Teacher) ಡಿಡಿಪಿಐ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಪ್ರಾಥಾಮಿಕ ಶಾಲೆಯಲ್ಲಿ ಅ.25 ರಂದು ಶಾಲಾ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದರು. ಈ ವೇಳೆ 2ನೇ ತರಗತಿ ವಿದ್ಯಾರ್ಥಿನಿ ಒಬ್ಬಳ ಮೇಲೆ ಮುಖ್ಯಶಿಕ್ಷಕ ರಂಗಸ್ವಾಮಿ ಆಸಿಡ್ ಎರಚಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ಬಾಲಕಿಯ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಇದನ್ನೂ ಓದಿ: 3 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    ಈ ಸಂಬಂಧ ಪೋಷಕರು ಹಾಗೂ ಗ್ರಾಮಸ್ಥರು ಮುಖ್ಯ ಶಿಕ್ಷಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಡಿಡಿಪಿಐ ರವಿಶಂಕರ್ ರೆಡ್ಡಿಯವರು ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ.

    ಈ ಸಂಬಂಧ ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇದನ್ನೂ ಓದಿ: ಪೋಕ್ಸೋ ಪ್ರಕರಣ – ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದರಸಾದಲ್ಲಿ 10 ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ – ಶಿಕ್ಷಕ ಅರೆಸ್ಟ್

    ಮದರಸಾದಲ್ಲಿ 10 ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ – ಶಿಕ್ಷಕ ಅರೆಸ್ಟ್

    ಗಾಂಧಿನಗರ: 10ಕ್ಕೂ ಹೆಚ್ಚು ಅಪ್ರಾಪ್ತ ವಿದ್ಯಾಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಗುಜರಾತ್‍ನ (Gujarat) ಜುನಾಗಢದ ಮದರಸಾವೊಂದರ (Madrasa) ಶಿಕ್ಷಕನನ್ನು (Teacher) ಪೊಲೀಸರು (Police) ಬಂಧಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ದೂರುಗಳ ಬಗ್ಗೆ ಕ್ರಮ ಕೈಗೊಳ್ಳದ ಮದರಸಾ ಟ್ರಸ್ಟಿಯನ್ನೂ ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರ್ಥಿನಿ, ಶಿಕ್ಷಕನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುವಾಗ ಗಮನಿಸಿದ್ದ ತಾಯಿ ಸಂಶಯದಿಂದ ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಬಾಲಕಿಯ ತಾಯಿ ದೂರು ದಾಖಲಿಸಿದ್ದಾಳೆ. ಶಿಕ್ಷಕನ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆಮಾಡಿ ಬಂಧಿಸಿದ್ದಾರೆ. ಇದನ್ನೂ ಓದಿ: ವರ್ತೂರ್ ಸಂತೋಷ್ ವಿಚಾರಣಾಧೀನ ಕೈದಿ ನಂ.10935

    ಈ ಸಂಬಂಧ ಪೊಲೀಸರು ಶಾಲೆಗೆ ತೆರಳಿ ವಿದ್ಯಾರ್ಥಿಗಳ ವಿಚಾರಿಸಿದ ಬಳಿಕ 10 ವಿದ್ಯಾರ್ಥಿಗಳು ಬಂದು ದೌರ್ಜನ್ಯದ ವಿಚಾರವನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಟ್ರಸ್ಟಿಗೆ ತಿಳಿಸಲಾಗಿದೆ. ಆದರೆ ಅವರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ), 323 (ಹಲ್ಲೆ), 506-2 (ಬೆದರಿಕೆ) ಹಾಗೂ ಪೋಕ್ಸೊ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಅಂಬುಲೆನ್ಸ್‌ಗೆ ಲಾರಿ ಡಿಕ್ಕಿ- ರೋಗಿ ಸ್ಥಳದಲ್ಲೇ ಸಾವು

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೋಕಾಲಿಯಾಡ್ತಿದ್ದ ಶಿಕ್ಷಕಿ ಎರಡನೇ ಮಹಡಿಯಿಂದ ಬಿದ್ದು ಸಾವು

    ಜೋಕಾಲಿಯಾಡ್ತಿದ್ದ ಶಿಕ್ಷಕಿ ಎರಡನೇ ಮಹಡಿಯಿಂದ ಬಿದ್ದು ಸಾವು

    ಚಾಮರಾಜನಗರ: ಜೋಕಾಲಿ ಆಡುತ್ತಿದ್ದ ಶಿಕ್ಷಕಿಯೊಬ್ಬರು (Teacher) ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲದಲ್ಲಿ (Kollegala) ನಡೆದಿದೆ.

    ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ಪುಟ್ಟಿ ಮೃತಪಟ್ಟ ಶಿಕ್ಷಕಿಯಾಗಿದ್ದಾರೆ. ಜೋಕಾಲಿಯಿಂದ ಬಿದ್ದು ಗಾಯಗೊಂಡಿದ್ದ ಅವರನ್ನು ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಎರಡು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ

    ಅವರು ಯಳಂದೂರು ತಾಲೂಕಿನ ಮಾಂಬಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಕೊಳ್ಳೇಗಾಲ ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್‌; ಮತಾಂತರಕ್ಕೂ ಒತ್ತಾಯ – ಕೇಸ್‌ ದಾಖಲು

    10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್‌; ಮತಾಂತರಕ್ಕೂ ಒತ್ತಾಯ – ಕೇಸ್‌ ದಾಖಲು

    ಲಕ್ನೋ: ಇತ್ತೀಚಿನ ದಿನಗಳಲ್ಲಿ ಕಾಮಕ್ಕೆ ಕಣ್ಣಿಲ್ಲ ಅನ್ನೋದು ಅನೇಕ ಪ್ರಕರಣಗಳಲ್ಲಿ ಸಾಬೀತಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಶಿಕ್ಷಕಿಯೊಬ್ಬಳು (Teacher) ತನ್ನದೇ ಶಾಲೆಯ ವಿದ್ಯಾರ್ಥಿಯನ್ನು (Student) ಸೆಕ್ಸ್‌ಗಾಗಿ ಪೀಡಿಸುತ್ತಿದ್ದ ಪ್ರಕರಣವೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು.. ಪಾಠ ಕಲಿಸಬೇಕಿದ್ದ ಶಿಕ್ಷಕಿಯೇ ವಿದ್ಯಾರ್ಥಿಗೆ ಪ್ರೇಮಪಾಠ ಹೇಳಿಕೊಡಲು ಶುರು ಮಾಡಿದ್ದಾಳೆ. ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಾ, ಮತಾಂತರಕ್ಕೂ ಒತ್ತಡ ಹೇರುತ್ತಿದ್ದ ಶಿಕ್ಷಕಿ ಇದೀಗ ಪೊಲೀಸರಿಗೆ (UP Police) ಸಿಕ್ಕಿಬಿದ್ದಿದ್ದಾಳೆ. ನನ್ನ ಮಗನನ್ನು ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದಳು, ಅಶ್ಲೀಲ ವಾಟ್ಸಪ್‌ ಮೆಸೇಜ್‌ಗಳನ್ನು ಕಳುಹಿಸುವ ಮೂಲಕ ಆತನನ್ನ ಸೆಕ್ಸ್‌ಗೆ ಪ್ರಚೋದಿಸುತ್ತಿದ್ದಳು. ಅಷ್ಟೇ ಅಲ್ಲದೇ ಮತಾಂತರಕ್ಕೂ ಒತ್ತಾಯಿಸುತ್ತಿದ್ದಳು ಎಂದು ಮಹಿಳಾ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ದಾರೆ.

    ಮ್ಯಾಟರ್ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉನ್ನಾವೋ ನಿವಾಸಿ ಕ್ಯಾಂಟ್ ಪ್ರದೇಶದ ಹೆಚ್ಚುವರಿ ಎಸ್ಪಿ ಬ್ರಿಜ್ ನಾರಾಯಣ ಸಿಂಗ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಬಳಿಕ ಅವರು ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

    ಆ ಟೀಚರ್‌ ಮಾಡಿದ ಕೆಲಸವಾದರೂ ಏನು?
    ಇಲ್ಲಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗೆ ಅದೇ ಕಾಲೇಜಿನ ಮಹಿಳಾ ಶಿಕ್ಷಕಿಯೊಬ್ಬಳು (Female Teacher) ಲೈಂಗಿಕತೆಗೆ ಪ್ರಚೋದಿಸಿದ್ದಾರೆ. ಮೊದಲು ರಾತ್ರಿಯಿಡಿ ಫೋನ್‌ನಲ್ಲಿ ಹರಟೆ ಕೊಚ್ಚುತ್ತಿದ್ದ ಶಿಕ್ಷಕಿ, ಬಳಿಕ ವಿದ್ಯಾರ್ಥಿಯನ್ನ ಲೈಗಿಂಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾಳೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಯನ್ನ ಮತಾಂತರಕ್ಕೂ ಒತ್ತಾಯಿಸಿದ್ದಾಳೆ. ಶಿಕ್ಷಕಿಯ ಪತಿ ಮತ್ತು ಸಹೋದರ ಅದೇ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವರೂ ಸಹ ವಿದ್ಯಾರ್ಥಿಯ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೇ ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ನಡೆಸಿದ ಚಾಟಿಂಗ್‌ ಸ್ಕ್ರೀನ್‌ಶಾಟ್‌ಗಳನ್ನ ಪೊಲೀಸರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮತಾಂತರಕ್ಕೆ ಒತ್ತಡ ಹೇರಿರುವ ಬಗ್ಗೆಯೂ ಸಾಕ್ಷಿಗಳನ್ನ ನೀಡುವಂತೆ ಪೊಲೀಸರು ಕೇಳಿದ್ದಾರೆ. ಆದ್ರೆ ಈ ವಿಷಯ ಪ್ರಸ್ತಾಪದ ಚಾಟಿಂಗ್‌ಗಳನ್ನ ವಿದ್ಯಾರ್ಥಿ ಡಿಲೀಟ್‌ ಮಾಡಿರುವುದರಿಂದ ಲೈಂಗಿಕತೆಗೆ ಒತ್ತಾಯಿಸುತ್ತಿದ್ದರು ಎನ್ನುವ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.

    ವಿದ್ಯಾರ್ಥಿ ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಡಿಮೆ ಅಂಕ ಕೊಟ್ಟಿದ್ದಕ್ಕೆ ಸಿಟ್ಟು- ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

    ಕಡಿಮೆ ಅಂಕ ಕೊಟ್ಟಿದ್ದಕ್ಕೆ ಸಿಟ್ಟು- ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

    ಮಂಗಳೂರು: ಉತ್ತರ ಪತ್ರಿಕೆಯಲ್ಲಿ ಕಡಿಮೆ ಅಂಕ ಸಿಕ್ಕರೆ ಹೆಚ್ಚಂದ್ರೆ 2 ದಿನ ಬೇಜಾರಾಗಬಹುದು ಅಷ್ಟೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ಇದೇ ಸಿಟ್ಟಿನಿಂದ ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆ ಹಾಕಿದ ಪ್ರಸಂಗವೊಂದು ಮಂಗಳೂರಿನಲ್ಲಿ‌ (Mangaluru) ನಡೆದಿದೆ.

    ನಗರದ ಉಳ್ಳಾಲದ ಶಾಲೆಯೊಂದರಲ್ಲಿ (Ullala School) ಈ ಘಟನೆ ನಡೆದಿದೆ. ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಗಣಿತ ವಿಷಯದಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಒಂದು ಅಂಕ ಕಡಿಮೆ ಕೊಟ್ಟಿದ್ದರು. ಇದರಿಂದ ವಿದ್ಯಾರ್ಥಿನಿ ಕುಪಿತಗೊಂಡಿದ್ದಳು.

    ಟೀಚರ್ ಸರಿ ಉತ್ತರಕ್ಕೆ ಮಾರ್ಕ್ಸ್ ನೀಡಿಲ್ಲ ಎಂದು ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಕೋಪದಲ್ಲಿದ್ದಳು. ಇದೇ ಸಿಟ್ಟಿನಿಂದ ಶಿಕ್ಷಕಿಗೆ ಏನಾದರೂ ಒಮದು ಮಾಡಬೇಕು ಎಂದು ಯೋಚಿಸಿದ್ದಳು. ಅಂತೆಯೇ ಇನ್ನೊಬ್ಬ ವಿದ್ಯಾರ್ಥಿನಿಯ ಜೊತೆ ಸೇರಿ ಶಿಕ್ಷಕಿಯ ನೀರಿನ ಬಾಟ್ಲಿಗೆ ಅವಧಿ ಮುಗಿದ ಮಾತ್ರೆಗಳನ್ನು ಹಾಕಿದ್ದಾರೆ.

    ಇತ್ತ ಇದನ್ನು ಅರಿಯದ ಗಣಿತ ಶಿಕ್ಷಕಿ ಹಾಗೂ ಸಹ ಶಿಕ್ಷಕಿ ನೀರು ಸೇವನೆ ಮಾಡಿದ್ದಾರೆ. ನೀರು ಕುಡಿದ ಕೆಲ ಹೊತ್ತಿನ ಬಳಿಕ ಓರ್ವ ಶಿಕ್ಷಕಿಯ ಮುಖ ಊದಿಸಿಕೊಳ್ಳಲು ಪ್ರಾರಂಭವಾದರೆ, ಇನ್ನೋರ್ವ ಶಿಕ್ಷಕಿ ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಶಸ್ತ್ರಾಸ್ತ್ರದ ಮೂಲಕವೇ ಪ್ರತಿಕ್ರಿಯೆ ನೀಡಲು ಹಿಂದೂ ಸಮಾಜ ಸಿದ್ಧ: ಅರುಣ್‌ಕುಮಾರ್ ಪುತ್ತಿಲ ಗುಡುಗು

    ಸದ್ಯ 6 ನೇ ತರಗತಿ ವಿದ್ಯಾರ್ಥಿನಿಯರ ಈ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿನಿಯರ ವಿರುದ್ಧ ಕ್ರಮಕೊಳ್ಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೈವ್ ಕ್ಲಾಸ್ ವೇಳೆ ಚಪ್ಪಲಿಯಿಂದ ಶಿಕ್ಷಕನಿಗೆ ಮನಬಂದಂತೆ ಹಲ್ಲೆಗೈದ ವಿದ್ಯಾರ್ಥಿ!

    ಲೈವ್ ಕ್ಲಾಸ್ ವೇಳೆ ಚಪ್ಪಲಿಯಿಂದ ಶಿಕ್ಷಕನಿಗೆ ಮನಬಂದಂತೆ ಹಲ್ಲೆಗೈದ ವಿದ್ಯಾರ್ಥಿ!

    ನವದೆಹಲಿ: ಲೈವ್ ಕ್ಲಾಸ್ ನಡೆಸುತ್ತಿದ್ದ ಸಂದರ್ಭದಲಿ ವಿದ್ಯಾರ್ಥಿಯೊಬ್ಬ ಏಕಾಏಕಿ ಬಂದು ಶಿಕ್ಷಕನ (Teacher) ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಈ ವಿಕ್ಷಣಕರಿ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹೋರಿಯ ಹುಟ್ಟುಹಬ್ಬಕ್ಕೆ 50ಕ್ಕೂ ಹೆಚ್ಚು ಅಭಿಮಾನಿಗಳಿಂದ ರಕ್ತದಾನ

    ವೀಡಿಯೋದಲ್ಲಿ ಏನಿದೆ..?: ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಈ ವೇಳೆ ಏಕಾಏಕಿ ಶಿಕ್ಷಕರ ಬಳಿ ಬಂದ ವಿದ್ಯಾರ್ಥಿ ಚಪ್ಪಲಿ ಹಿಡಿದುಕೊಂಡು ಹೊಡೆಯಲು ಶುರು ಮಾಡುತ್ತಾನೆ. ಆಗ ಶಿಕ್ಷಕರು ಆತನನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೂ ವಿದ್ಯಾರ್ಥಿ ಹಲ್ಲೆ ಮುಂದುವರಿಸುತ್ತಾನೆ. ಬಳಿಕ ಅಲ್ಲಿಂದ ಶಿಕ್ಷಕ ತೆರಳುತ್ತಾರೆ.

    ವಿದ್ಯಾರ್ಥಿ ಯಾವ ಕಾರಣಕ್ಕೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬುದು ತಿಳಿದುಬಂದಿಲ್ಲ. ಆದರೆ ಹಲ್ಲೆಯ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಮಂದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    5ನೇ ತರಗತಿ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಆರೋಪ

    ಗದಗ: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿರುವ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ (Naragunda Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಸರ್ಕಾರಿ ಉರ್ದು ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಅಲ್ಲಿಯ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಶಾಲಾ ಅವಧಿ ಮುಗಿದ ನಂತರ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯನ್ನು ತನ್ನ ಕಚೇರಿಗೆ ಕರೆಸಿಕೊಳ್ಳುತ್ತಿದ್ದ. ಶನಿವಾರ ಸಹ ಮನೆಗೆ ತಡವಾಗಿ ಹೋಗುವಂತೆ ಹೇಳಿ ತನ್ನ ಆಫೀಸ್‌ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ. ಈ ವಿಷಯ ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದ ಎಂದು ಆರೋಪಿಸಲಾಗಿದೆ.

    ಇದಾದ ಬಳಿಕ ಬಾಲಕಿ ಇನ್ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಮನೆಯವರ ಬಳಿ ಅಳುತ್ತಾ ಹೇಳಿದ್ದಾಳೆ. ಈ ಬಗ್ಗೆ ಪೋಷಕರು ಯಾಕೆ, ಏನು ಎಂದು ವಿಚಾರಿಸಿದಾಗ ಮುಖ್ಯ ಶಿಕ್ಷಕನ ಕಾಮ ಪುರಾಣವನ್ನು ಬಾಲಕಿ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ನಂತರ ಬಾಲಕಿಯ ಕುಟುಂಬಸ್ಥರು ಸಹಾಯವಾಣಿ ಮೂಲಕ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ- ಕಡಲತೀರದಲ್ಲಿ ರಾಶಿ ರಾಶಿ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಕಲಬುರಗಿ: ವಿದ್ಯಾರ್ಥಿನಿಯರು (Students) ಮತ್ತು ಅತಿಥಿ ಶಿಕ್ಷಕಿಗೆ (Teacher) ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ (Headmaster In Charge) ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಮೈ ಮುಟ್ಟುವುದು ಮಾಡುತ್ತಿದ್ದ. ನಾನು ನಿಮ್ಮ ಸೋದರ ಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳುತ್ತಿದ್ದ. ಅತಿಥಿ ಶಿಕ್ಷಕಿಗೂ ಆತ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಮರ್ಡರ್ – ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳ ಬಂಧನ

    ಈ ಬಗ್ಗೆ ವಿದ್ಯಾರ್ಥಿನಿಯರು ಬಿಇಒಗೆ ದೂರು ನೀಡಿದ್ದರು. ಚಿತ್ತಾಪುರ ಬಿಇಒ ರಿಂದ ವಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಆರೋಪಿ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹುಡುಗಿಯರ ಕಡೆ ನೋಡಲ್ಲ, ಆಂಟಿಯರು ಸಿಕ್ರೆ ಬಿಡಲ್ಲ – ಬೆಂಗ್ಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲಾ ಕೊಠಡಿಯಲ್ಲಿ ದಲಿತ ವಿದ್ಯಾರ್ಥಿ ನೇಣಿಗೆ ಶರಣು – ಇಬ್ಬರು ಶಿಕ್ಷಕರ ಅಮಾನತು

    ಶಾಲಾ ಕೊಠಡಿಯಲ್ಲಿ ದಲಿತ ವಿದ್ಯಾರ್ಥಿ ನೇಣಿಗೆ ಶರಣು – ಇಬ್ಬರು ಶಿಕ್ಷಕರ ಅಮಾನತು

    ಜೈಪುರ: ರಾಜಸ್ಥಾನದ (Rajasthan) ಕೊಟ್‌ಪುಟ್ಲಿಯ ಸರ್ಕಾರಿ ಶಾಲೆಯಲ್ಲಿ 15 ವರ್ಷದ ದಲಿತ ವಿದ್ಯಾರ್ಥಿಯೊಬ್ಬ(Dalit Student) ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರನ್ನು (Teachers) ಅಮಾನತುಗೊಳಿಸಲಾಗಿದೆ.

    ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಶಾಲಾ ಹಾಸ್ಟೆಲ್‌ನಲ್ಲಿ ವಾಸವಿದ್ದು, ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಗೆ ಶಿಕ್ಷಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಠಾಣೆಗೆ ಮುತ್ತಿಗೆ ಹಾಕಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಈ ಹಿನ್ನೆಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಶಿಕ್ಷಕರು ತನಗೆ ಕಿರುಕುಳ ನೀಡುತ್ತಿರುವುದಾಗಿ ವಿದ್ಯಾರ್ಥಿ ತನ್ನ ತಂದೆಗೆ ತಿಳಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಇದನ್ನೂ ಓದಿ: ಸೊಸೆಯನ್ನು ರಕ್ಷಿಸಲು ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ ಸರ್ಕಾರಿ ಶಿಕ್ಷಕ ಅಮಾನತು

    ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ ಸರ್ಕಾರಿ ಶಿಕ್ಷಕ ಅಮಾನತು

    ಬೀದರ್: ಅಪ್ರಾಪ್ತ ವಿದ್ಯಾರ್ಥಿನಿಯನ್ನು (Minor Student) ಪುಸಲಾಯಿಸಿ ಗೌಪ್ಯವಾಗಿ ವಿವಾಹ (Marriage) ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲಾ ಶಿಕ್ಷಕನನ್ನು (Teacher) ಅಮಾನತು (Suspend) ಮಾಡಲಾಗಿದೆ.

    ಶಿಕ್ಷಕ ಸಂದೀಪ್ ಕುಮಾರ್ ಅಜೂರೆ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಡಿಡಿಪಿಐ ಸಲೀಂ ಪಾಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಯಾರಿಗೂ ತಿಳಿಯದಂತೆ ಶಿಕ್ಷಕ ಗೌಪ್ಯವಾಗಿ ಮದುವೆಯಾಗಿದ್ದ. ಇದನ್ನೂ ಓದಿ: Shivamogga: ಈದ್ ಮಿಲಾದ್ ಹಬ್ಬದ ಸಭೆಯಲ್ಲಿ ಗಲಾಟೆ – ಓರ್ವನ ಕೊಲೆಯಲ್ಲಿ ಅಂತ್ಯ

    ಈಗಾಗಲೇ ಆತನಿಗೆ ಮದುವೆಯಾಗಿ ಮಗುವಿದ್ದರೂ ಸಹಿತ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಬಾಳುವಾಲೆ ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮೇಹಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್‌ – ಪತಿ, ಪತ್ನಿ ಅರೆಸ್ಟ್‌