Tag: teacher

  • ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗದಗ: ಸಂಗೀತದ ಕಲೆ ಕಂಡಕಂಡವರ ಸ್ವತ್ತಲ್ಲ, ಅದು ಬಲ್ಲವರ ಮುತ್ತು. ಈ ಮಾತು ಆ ಬಾಲ ಕಲಾರಾಧಕನಿಗೆ ಹೇಳಿ ಮಾಡಿಸಿರುವಂತಹದ್ದು. ಸಂಗೀತದಲ್ಲಿ ಏನನ್ನಾದ್ರು ಸಾಧಿಸಬೇಕು ಅನ್ನೋದು ಆ ಬಾಲಕನ ಹಂಬಲ. ಆದ್ರೆ ಕಡು ಬಡತನ ಆ ಕಲಾಪ್ರತಿಭೆಯ ಕೈ ಕಟ್ಟಿಹಾಕಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕೆನ್ನುವ ಛಲದಂಕಮಲ್ಲ ಇದೀಗ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಆಶ್ರಯಿಸಿ ಬಂದಿದ್ದಾನೆ.

    ಜನರನ್ನ ಆಕರ್ಷಿಸೋ ಕಂಠಸಿರಿ, ಸಂಗೀತ ಪ್ರತಿಭೆಯ ಮೂಲಕ ಎಂಥವರನ್ನು ತನ್ನತ್ತ ಸೆಳೆದುಕೊಳ್ಳೋ ಬಾಲಕ. ಇದು ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಬೆಳೆಯುತ್ತಿರೋ ಬಾಲ ಪ್ರತಿಭೆಯ ಕಲೆಯ ಅನಾವರಣ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ 14 ವರ್ಷದ ಚನ್ನಪ್ಪ ಎಲಿ ಚೆಂದನೆಯ ಹಾಡುಗಾರ. ತನ್ನ ಕಂಠಸಿರಿಯಿಂದಲೇ ಎಂಥವರನ್ನು ಮೋಡಿ ಮಾಡೋ ಮೊಡಿಗಾರ ಬಾಲಕ. ತಂದೆ ಈರಪ್ಪ ಎಲಿ ತೀರಿಕೊಂಡಾಗಿನಿಂದ ತಾಯಿ ಆಶ್ರಯದಲ್ಲೆ ಬೆಳೆಯುತ್ತಿರೋ ಚನ್ನಪ್ಪ ಸದ್ಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ತೀರಿಕೊಂಡು ಎರಡು ವರ್ಷವಾಗಿದೆ. ತಂದೆ ತೀರಿಕೊಂಡಾಗಿನಿಂದ ಈ ಕುಟುಂಬಕ್ಕೆ ಬಡತನ ಕಿತ್ತು ತಿನ್ನುತ್ತಿದೆ. ತಾಯಿ ಕಸ್ತೂರೆವ್ವ ಹಾಗೂ ಮಗ ಚನ್ನಪ್ಪ ಇವರಿಬ್ಬರು ಬಡತನದ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.

    ಚನ್ನಪ್ಪನಿಗೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಛಲವಿದೆ. ಆದ್ರೆ ಈ ಬಾಲ ಪ್ರತಿಭೆಗೆ ಕುಡುಬಡತನ ಕೈಕಟ್ಟಿ ಕುರಿಸಿದಂತಾಗಿದೆ. ಸಂಗೀತದಲ್ಲಿ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತ ಅಂದ್ರೆ ಈತನಿಗೆ ಅಚ್ಚು ಮೆಚ್ಚು. ಆದ್ರೆ ಸಂಗೀತ ತರಬೇತಿ ಹಾಗೂ ಕಲಾಪರಿಕರಗಳನ್ನು ಕೊಳ್ಳುವುದು ಈತನಿಗೆ ಕನಸಿನ ಮಾತಾಗಿದೆ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಂಗೀತ ಶಿಕ್ಷಣ ಹಾಗೂ ಪರಿಕರಗಳನ್ನ ನೀಡಿ ಬಾಳಿಗೆ ಬೆಳಕಾಗಬೇಕು ಎಂಬುದು ಇವರ ಆಸೆಯ.

    ಸುತ್ತು ಹಳ್ಳಿಗಳಲ್ಲಿ ಯಾವಗಲ್ ಚೆನ್ನಪ್ಪನ ಹಾಡೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಭಜನೆ ಪದ, ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಡೊಳ್ಳಿನ ಪದ, ಚಿತ್ರಗೀತೆಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾನೆ. ಚನ್ನಪ್ಪನಿಗೆ ಸಂಗೀತದಲ್ಲಿ ಮಹೊನ್ನತಿ ಹೊಂದುವ ಆಸೆ. ಆದ್ರೆ ಬಡತನ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಾಗ್ತಿಲ್ಲ. ಬಾಲಕ ಹಾಡು ಹಾಡುತ್ತಿದ್ರೆ ಜನ ನಿಬ್ಬೆರಗಾಗಿ ಕೇಳ್ತಾರೆ. ಚನ್ನಪ್ಪನಲ್ಲಿ ಅದ್ಭುತ ಸಂಗೀತ ಕಲೆ, ಮಧುರ ಕಂಠವಿದೆ. ಆದ್ರೆ ಬಡತನ ಹಾಸು ಹೊಕ್ಕಾಗಿರುವುದರಿಂದ ಕಲೆಗೆ ಬೆಲೆ ಸಿಗದಂತಾಗಿದೆ. ಗಾನ ಕೋಗಿಲೆಗೆ ನೆಲೆ ಬೇಕಾಗಿದೆ. ಬಾಲ್ಯದಿಂದಲೇ ಆರಂಭವಾದ ಈತನ ಗಾನಯಾನ ಉತ್ತುಂಗಕ್ಕೇರಿದಾಗ ಮಾತ್ರ ಇಂತಹ ಗ್ರಾಮೀಣ ಪ್ರತಿಭೆಗೊಂದು ಮನ್ನಣೆ ದೊರೆಯಲು ಸಾಧ್ಯ. ಈತನಿಗೆ ಗುರಿ ಇದೆ, ಆದ್ರೆ ಗುರು ಇಲ್ಲ. ಬಡ ಸಂಗೀತ ಕಲಾವಿನ ಪಾಲಿಗೆ ಬೆಳಕು ಕಾರ್ಯಕ್ರಮ ಸಂಗೀತ ವಿದ್ಯಾಭ್ಯಾಸ ಕೊಡಿಸಿ ದಾರಿ ದೀಪವಾಗಬೇಕು ಅಂತಿದ್ದಾರೆ ಸ್ಥಳಿಯರು.

    ಯಾರೋ ದಾರಿ ದೀಪಗಳು ಅವರವರ ಪಾಲಿಗೆ ಅಂತಾರೆ. ಇಂತಹ ಬಾಲ ಕಲಾಸಕ್ತನಿಗೆ ಪ್ರೋತ್ಸಾಹ ದೊರೆತದ್ದೇ ಆದ್ರೆ ಈ ನಾಡಿನಲ್ಲಿ ಚೆನ್ನಪ್ಪ ಸಂಗೀತ ಕ್ಷೇತ್ರದ ಚಿನ್ನಪ್ಪನಾಗೋದ್ರಲ್ಲಿ ಸಂದೇಹವಿಲ್ಲ.

    https://www.youtube.com/watch?v=QMEWBdErnLE

  • ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    ಇಂಟರ್ನಲ್ ಮಾರ್ಕ್ಸ್ ಕೇಳಿದ್ರೆ ಸರಸಕ್ಕೆ ಕರೀತಾನೆ ಶಿಕ್ಷಕ!

    – ಕಾಲೇಜು ಬಿಟ್ಟು ವಿದ್ಯಾರ್ಥಿನಿಯರ ಪ್ರತಿಭಟನೆ

    ಕಲಬುರಗಿ: ಇಂಟರ್‍ನಲ್ ಮಾರ್ಕ್ಸ್ ಕೊಡಲು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ, ಕಲಬುರಗಿ ನಗರದ ಎಚ್‍ಕೆಇ ಸಂಸ್ಥೆಯ ಮಲಕರೆಡ್ಡಿ ಹೋಮಿಯೊಪತಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಕಾಲೇಜಿನ ಫಿಜಿಯಾಲಾಜಿ ಉಪನ್ಯಾಸಕ ಸಿದ್ದಲಿಂಗ ಮಾಲಿಪಾಟೀಲ್ ಇಂತಹ ಹೀನ ಕೆಲಸ ಮಾಡಿದ್ದಾನೆ. ಇದರಿಂದ ನೊಂದ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದಾರೆ.

    ನಿತ್ಯ ಮದ್ಯಪಾನ ಮಾಡಿ ಬರುವ ಈ ಕಾಮಿ ಶಿಕ್ಷಕ ಪ್ರತಿ ವಿದ್ಯಾರ್ಥಿನಿಯನ್ನೂ ಸಹ ಕಾಮದ ದೃಷ್ಟಿಯಿಂದ ನೋಡುತ್ತಾನಂತೆ. ಉಪನ್ಯಾಸಕನ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿಗಳು ಮೂರು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದ ಶಿಕ್ಷಣ ಸಂಸ್ಥೆ ಕಾಮುಕ ಉಪನ್ಯಾಕನ ವಿರುದ್ಧ ಕ್ರಮ ಜರುಗಿಸಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

  • ಶನಿವಾರ ಬಂತಂದ್ರೆ ಶೌಚಾಲಯದ ಅರಿವಿನ ದಿನ-ಇಡೀ ಊರಿಗೆ ಸ್ವಚ್ಚತೆಯ ಹರಿಕಾರ

    ಶನಿವಾರ ಬಂತಂದ್ರೆ ಶೌಚಾಲಯದ ಅರಿವಿನ ದಿನ-ಇಡೀ ಊರಿಗೆ ಸ್ವಚ್ಚತೆಯ ಹರಿಕಾರ

    ಹಾವೇರಿ: ಮೇಷ್ಟ್ರು ಅಂದ್ರೆ ಬರೀ ಪಾಠ ಮಾಡಿ ಮನೆಗೆ ಹೋಗ್ತಾರೆ ಅಂತಾ ಜನಗಳು ತಿಳಿದಿರುತ್ತಾರೆ. ಆದರೆ ಇದರ ಹೊರತಾಗಿಯೂ ಕೆಲ ಮೇಷ್ಟ್ರು ಒಂದಿಷ್ಟು ಒಳ್ಳೆ ಕೆಲಸ ಮಾಡ್ತಾರೆ. ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಾರೆ. ಅವರ ಶ್ರಮಕ್ಕೆ ಫಲ ಕೂಡಾ ಸಿಕ್ಕಿದೆ.

    ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದ ಶಿಕ್ಷಕ ಶಿವಬಸಯ್ಯ ಚಿಲ್ಲೂರುಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಾವೇರಿ ಜಿಲ್ಲೆ ಕಳೆದ ಎರಡು ವರ್ಷಗಳಿಂದ ಶಾಲೆಯ 15 ವಿದ್ಯಾರ್ಥಿಗಳ ಕ್ಲಬ್ ಮಾಡಿಕೊಂಡು ಸಮಾಜಸೇವೆ ಮಾಡ್ತಿದ್ದಾರೆ. ಪ್ರತಿ ಶನಿವಾರ ಶೌಚಾಲಯವಿಲ್ಲದ ಮನೆಗಳಿಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಇವರ ಮಾತು ಕೇಳಿ ಈಗಾಗಲೇ ಸುಮಾರು 70 ರಿಂದ 80 ಮನೆಯವರು ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ.

    ಈ ಊರಿನ 447 ಕುಟುಂಬಗಳಲ್ಲಿ ಇನ್ನು ಕೇವಲ 149 ಮನೆಗಳಲ್ಲಿ ಶೌಚಾಲಯ ಇಲ್ಲ. ಆದಷ್ಟು ಬೇಗ ಇಡೀ ಊರನ್ನೇ ಬಯಲುಮುಕ್ತ ಶೌಚಾಲಯ ಮಾಡುವ ಗುರಿ ಹೊಂದಿದ್ದಾರೆ. ಇವರ ಕೆಲಸಕ್ಕೆ ಊರಿನ ಜನ ಹಾಗೂ ಪಂಚಾಯ್ತಿಯವರು ಕೈಜೋಡಿಸಿದ್ದಾರೆ.

    ಶಾಲೆಯ ಸಹಶಿಕ್ಷಕ ಮತ್ತು ಮಕ್ಕಳ ಹಕ್ಕು ಕ್ಲಬ್‍ನ ಸದಸ್ಯರು ಜಾಗೃತಿ ಮೂಡಿಸಿ ಶೌಚಾಲಯವನ್ನ ಕಟ್ಟಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಗ್ರಾಮಪಂಚಾಯ್ತಿ ಸದಸ್ಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕವೃಂದ ಸಹ ಸಾಥ್ ನೀಡಿದ್ದಾರೆ.

    https://www.youtube.com/watch?v=r6hMYhEmmug

     

  • ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಕಲಬುರಗಿ: ಜನಪ್ರತಿನಿಧಿಗಳಾಗಿದ್ದವರು ನಾವೇನ್ ಮಾಡ್ತಿದ್ದೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಅಧಿಕಾರದ ಮದ ಅವರ ಬಾಯಿಂದ ಏನ್ ಬೇಕಾದ್ರೂ ಮಾತಾಡಿಸಿ ಬಿಡುತ್ತೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ತಮ್ಮ ಮಾಜಿ ಆಪ್ತ ಸಹಾಯಕ ದೇವೇಂದ್ರ ಬಿರಾದಾರ್ ಕಾಮದಾಟದ ವರದಿ ಪ್ರಸಾರ ಮಾಡಿದ್ದಕ್ಕೆ ಆಳಂದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಕೆಂಡದಂತಾ ಕೋಪ ಮಾಡಿಕೊಂಡು ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿಗೆ ಕರೆ ಮಾಡಿ ಸಿಕ್ಕಾಪಟ್ಟೆ ರೇಗಾಡಿದ್ದಾರೆ.

    ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ನಿಂದಿಸಿದ್ರು. ನಿಮ್ಮ ಟಿವಿಯಲ್ಲಿ ಏನ್ ಸುದ್ದಿ ಹಾಕಿದ್ದೀರಾ. ನಿಮ್ಮ ಆಫೀಸಿಗೆ ಬರ್ತೀನಿ ಇರಿ ಅಂತಾ ಬೆದರಿಸಿದ್ರು. ಶಾಸಕರ ಈ ಧಮ್ಕಿ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ನಂತರ ಫೋನ್‍ಗೆ ಬಂದ ಸನ್ಮಾನ್ಯ ಪಾಟೀಲ್ರು ಸಂಜೆ 6 ಗಂಟೆಗೆ ನಾನೇ ಕಲಬುರಗಿಯ ನಿಮ್ಮ ಕಚೇರಿಗೆ ಬರ್ತೇನೆ ಅಂದ್ರು.

    ಕೊನೆಗೆ 1 ಗಂಟೆ ತಡವಾಗಿ ಕಚೇರಿಗೆ ಬಂದ ಶಾಸಕರು ಯಥಾ ಪ್ರಕಾರ ತಮ್ಮ ನಿಂದನಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ನಾನು ಮನುಷ್ಯ ನಾನು ಉಪ್ಪು ತಿನ್ತೇನೆ. ನನ್ನ ಮಾನನಷ್ಟ ಮಾಡಿ ಟಿಆರ್‍ಪಿಗಾಗಿ ಹೀಗೆಲ್ಲಾ ಮಾಡ್ತೀರಾ ಅಂತ ಹೇಳಿ 10 ನಿಮಿಷವೂ ನಿಲ್ಲದೆ ಅಲ್ಲಿಂದ ನಡೆದೇ ಬಿಟ್ಟರು.

    ಆದ್ರೆ, ನಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹಾಗಾಗಿ, ನಮ್ಮ ಪ್ರತಿನಿಧಿ ಅವರ ಬೆನ್ನತ್ತಿ ಹೋದರೂ ಸಹ ಪಾಟೀಲರು ಕ್ಷಮೆಯನ್ನೂ ಕೇಳಲಿಲ್ಲ. ಬದಲಿಗೆ ತಮ್ಮ ನಿಲುವಿಗೆ ಅಂಟಿಕೊಂಡ್ರು.

    ನಮ್ಮ ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ಜೊತೆ ಫೋನಿನಲ್ಲಿ ಮಾತನಾಡುವಾಗ,”ನಾನೇನು ನಿಮ್ಮ ಹೆಂಡ್ತಿ ಹಾಗೂ ಅವರ ಹೆಂಡ್ತಿಯನ್ನು ಗುತ್ತಿಗೆ ತೊಗೊಂಡಿದ್ದೀನಾ? ಬೆಳಗ್ಗೆ ಏನು ನ್ಯೂಸ್ ಮಾಡಿದಿಯಾ? ಒಂದು ಗಂಟೆಯಲ್ಲಿ ನಾನು ಆಫೀಸಿಗೆ ಬರ್ತಿನಿ. ನೀನಿರಬೇಕು ಬಂದು ನೋಡ್ತಿನಿ” ಎಂದು ಅವಾಜ್ ಹಾಕಿದ್ದರು.

    ಈ ವೇಳೆ ನಮ್ಮ ಪ್ರತಿನಿಧಿ ನನ್ನ ಹತ್ತಿರ ನೀವು ಶಿಫಾರಸ್ಸು ಮಾಡಿರುವ ಲೆಟರ್ ಇದೆ. ಬೇಕಾದರೆ ನಾನು ನಿಮಗೆ ಬೇಕಾದ್ರೆ ವಾಟ್ಸಪ್ ಮಾಡುತ್ತೇನೆ ಎಂದು ಹೇಳಿದ್ದಕೆ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ತಮ್ಮ ನೈತಿಕ ಮಟ್ಟವನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ.

    ನಮ್ಮ ಕಚೇರಿಗೆ ಬಂದ ಶಾಸಕ ಬಿ.ಆರ್.ಪಾಟೀಲ್ ಏನು ಸಮರ್ಥನೆ ನೀಡಿದ್ರು? ಅದಕ್ಕೂ ಮೊದಲು ವರದಿಗಾರನಿಗೆ ಹೇಗೆ ಬೆದರಿಕೆ ಹಾಕಿದ್ರು ಎನ್ನುವುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದ್ದು, ನೀವು ವೀಕ್ಷಿಸಬಹುದು.

    ಇದನ್ನೂ ಓದಿ:  ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!

  • ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!

    ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!

    ಕಲಬುರಗಿ: ಹಾಲಿ ಶಾಸಕರ ಮಾಜಿ ಆಪ್ತ ಸಹಾಯಕ ಶಾಲಾ ಕಟ್ಟಡದಲ್ಲಿಯೇ ಶಿಕ್ಷಕಿಯ ಜೊತೆ ಕಾಮದಾಟ ನಡೆಸಿದ್ದಾರೆ. ಕಲಬುರಗಿ ನಗರದ ಪ್ರ್ಯಾಕ್ಟಿಸಿಂಗ್ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿಯೇ ತನ್ನ ಪ್ರಿಯಕರನನ್ನು ಶಾಲೆಯ ಕೋಣೆಗೆ ಕರೆಸಿ ಸರಸ-ಸಲ್ಲಾಪವಾಡಿದ್ದಾರೆ.

    ಸುನಿತಾ ಮಡ್ಡೆ ಎಂಬ ಶಿಕ್ಷಕಿ ಗಂಡನನ್ನು ಬಿಟ್ಟು ಆಳಂದ್ ಶಾಸಕರಾದ ಬಿ.ಆರ್.ಪಾಟೀಲ್‍ರ ಮಾಜಿ ಪಿಎ ದೇವೆಂದ್ರ ಬಿರಾದಾರ ಎಂಬವರ ಜೊತೆ ಅನೈತಿಕ ಸಂಬಂಧ ಬೆಳೆಸಿ ಈಗ ಸುದ್ದಿಯಾಗಿದ್ದಾರೆ. ದೇವೆಂದ್ರ ಬಿರಾದಾರ ಅವರಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ಕೈ ಕೊಟ್ಟು ಈಗ ಶಿಕ್ಷಕಿಯ ಹಿಂದೆ ಬಿದ್ದಿದ್ದಾರೆ.

    ಸುನಿತಾ ಮತ್ತು ದೇವೆಂದ್ರ ಇಬ್ಬರ ಅನೈತಿಕ ಸಂಬಂಧ ಇಲಾಖೆಗೂ ತಿಳಿದಿತ್ತು. ಹಿಂದಿನ ಜಿಲ್ಲಾ ಪಂಚಾಯತ್ ಸಿಇಒ ಅನಿರುದ್ಧ್ ಬೇರೆ ಕಡೆಗೆ ವರ್ಗಾವಣೆ ಮಾಡಿ ಅಂತ ಡಿಡಿಪಿಐ(ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ) ರಿಗೆ ಆದೇಶಿಸಿದ್ರು. ಆದ್ರೆ ದೇವೆಂದ್ರ ಬಿರಾದಾರ್ ಅವರು ಶಾಸಕ ಬಿ.ಆರ್.ಪಾಟೀಲ್‍ರಿಂದ ಪತ್ರ ತಂದು ಸುನಿತಾಳನ್ನು ವರ್ಗಾವಣೆ ಮಾಡದಂತೆ ಒತ್ತಡ ಹಾಕಿಸಿದ್ದಾರೆ.

    ಆದರೆ ದೇವೆಂದ್ರ ಮಾತ್ರ ಅಂಥದ್ದೇನು ಕಥೆ ಇಲ್ಲಾ ಎಂದು ಹೇಳುತ್ತಿದ್ದಾರೆ. ದೇವೇಂದ್ರರ ಕೃಷ್ಣಲೀಲೆ ತಿಳಿದ ಶಾಸಕ ಬಿ.ಆರ್.ಪಾಟೀಲ್ ಅವರು ಕಿಕ್ ಔಟ್ ನೀಡಿದ್ದಾರೆ.

     

  • 40ರ ಟೀಚರ್ ಜೊತೆ 16ರ ಹುಡುಗನ ಲವ್- ಮನೆಯವರ ವಿರೋಧಕ್ಕೆ ಮೇಡಂ ಜೊತೆ ಪರಾರಿ

    40ರ ಟೀಚರ್ ಜೊತೆ 16ರ ಹುಡುಗನ ಲವ್- ಮನೆಯವರ ವಿರೋಧಕ್ಕೆ ಮೇಡಂ ಜೊತೆ ಪರಾರಿ

    ಕಲಬುರಗಿ: ಆಕೆ 40ರ ಆಂಟಿ, ಆದ್ರೆ ಆ ಶಿಕ್ಷಕಿಗೆ ತನ್ನ ಕಾಮದಾಹ ತಿರಿಸಿಕೊಳ್ಳಲು ಬೇಕು 16ರ ನಾಟಿ ಬಾಯ್. ಇಂತಹದೊಂದು ವಿಚಿತ್ರವಾದ ಪ್ರಕರಣ ಬಿಸಿಲನಾಡು ಕಲಬುರಗಿಯಲ್ಲಿ ನಡೆದಿದೆ. ಶಿಕ್ಷಕಿಯ ಪ್ರೀತಿಗೆ ಬಲೆಗೆ ಬಿದ್ದ ಬಾಲಕ ಇದೀಗ ಮನೆ ಬಿಟ್ಟು ಪರಾರಿಯಾಗಿದ್ದು ಬಾಲಕನಿಗಾಗಿ ಪೋಷಕಕರು ಕಣ್ಣಿರಿಡುತ್ತಿದ್ದಾರೆ.

    ಕಲಬುರಗಿ ನಗರದ ಶೇಕ್ ರೋಜಾ ಬಡಾವಣೆ ನಿವಾಸಿಗಳಾದ ಅತಿಕ್ ಹಾಗೂ ಭಾನು ಬೇಗಂ ದಂಪತಿಗೆ 16 ವರ್ಷದ ಒಬ್ಬನೇ ಮಗನಿದ್ದು, 2 ವರ್ಷದ ಹಿಂದೆ ತನ್ನ ಶಿಕ್ಷಕಿ ಬಿಲ್ಕಿಸ್ ಪ್ರೀತಿಯ ಬಲೆಗೆ ಬಿದ್ದಿದ್ದ. ಯಾವಾಗ ಪೋಷಕರಿಗೆ ವಿಚಾರ ತಿಳಿದು ವಿರೋಧ ವ್ಯಕ್ತಪಡಿಸಿದ್ರೋ ಕಳೆದ ವರ್ಷ ನವೆಂಬರ್‍ನಲ್ಲಿ ಶಿಕ್ಷಕಿ ಜೊತೆ ಪರಾರಿಯಾಗಿದ್ದಾನೆ.

    ಬಾಲಕನ ಪೋಷಕರು

    ಮಗನ ನಾಪತ್ತೆ ಕುರಿತು ಪೋಷಕರು ಹಲವು ಬಾರಿ ದೂರು ಕೊಟ್ರು ಪೊಲೀಸರು ಕ್ಯಾರೆ ಅನ್ಲಿಲ್ಲ. ಮಕ್ಕಳ ಸಹಾಯವಾಣಿ ಸದಸ್ಯರ ನೆರವು ಪಡೆದಾಗ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಬಾಲಕನ ಮಿಸ್ಸಿಂಗ್ ಕೇಸ್ ದಾಖಲಾಗಿದೆ.

    ಶಿಕ್ಷಕಿ ಬಿಲ್ಕಿಸ್‍ಗೆ ಮದುವೆಯಾಗಿ 2 ಮಕ್ಕಳು ಇದ್ರು ಗಂಡನಿಗೆ ವಿಚ್ಛೇಧನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

     

  • ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

    ಮಡಿಕೇರಿ: ನಮ್ಮ ಅಕ್ಕಪಕ್ಕದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಜನತೆಗೆ ಪರಿಚಯಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅದರಲ್ಲೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಪಾಲು ದೊಡ್ಡದಾಗಿರಬೇಕು. ಆದರೆ ಜನನಾಯಕರು ಹಾಗೂ ಸರ್ಕಾರಿ ಬಾಬುಗಳೇ ಮರೆತಾಗ ಪ್ರತಿಭೆಗಳನ್ನೇ ಅರಳುವ ಮುನ್ನ ಚಿವುಟಿದಂತಾಗುತ್ತದೆ. ಆದರೆ ಇಂಥ ಪ್ರತಿಭೆಗಳನ್ನು ಗುರುತಿಸಿ ದೇಶದ ಮಟ್ಟದಲ್ಲಿ ಫುಟ್ಬಾಲ್‍ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ಈ ಪಿ ಟಿ ಮೇಷ್ಟ್ರು ಸಜ್ಜಾಗಿದ್ದಾರೆ.

    ದಶಕಗಳಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಂದ ಅವರು ಎಲ್ಲರಿಗಿಂತ ಭಿನ್ನ. ಈ ಶಾಲೆಗೆ ಸೇರುವ ಮಕ್ಕಳಲ್ಲಿ ಆಡಗಿರುವ ಸೂಕ್ತ ಪ್ರತಿಭೆಗಳನ್ನು ಗುರುತಿಸುತ್ತಾ ಅವರಿಗೆ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳನ್ನು ತಿದ್ದಿತೀಡಿ ಅವರ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಕಷ್ಟು ಪ್ರಯತ್ನಿಸಿ ಅವರು ಸಫಲರಾಗಿದ್ದಾರೆ.

    ಆಟವಾಡಲು ಶೂ ಇಲ್ಲದೆ ಬರಿಗಾಲಿನಲ್ಲಿ ಆಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅಷ್ಟು ಸುಲಭದ ಕೆಲಸವಲ್ಲ. ಫುಟ್ಬಾಲ್ ನಲ್ಲಿ ಭಾಗವಹಿಸುವ ಬಾಲಕರಿಗೆ ಬೆಳಿಗ್ಗೆ ಸಾಯಕಾಲ ವಿಶೇಷ ತರಬೇತಿಯನ್ನು ನೀಡಿ ಇವರು ಮಾರ್ಗದರ್ಶನ ನೀಡುತ್ತಾರೆ.

    ಈ ಶಾಲೆಯಲ್ಲಿ ಓದುತ್ತಿರುವ ಪೈಕಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಡ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಠಿಕ ಆಹಾರವನ್ನು ನೀಡಬೇಕಾಗುತ್ತದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ಯಾವುದೇ ಅನುದಾನ ನೀಡುವುದಿಲ್ಲ.

    ಆಟಗಾರರಿಗೆ ಜರ್ಸಿ(ಸಮವಸ್ತ್ರ) ಕಾಲಿಗೆ ಶೂ ಅಗತ್ಯವಿದೆ. ಇದಕ್ಕಾಗಿ ಅಂದಾಜು 60 ಸಾವಿರ ಖರ್ಚಾಗುತ್ತದೆ. ಈ ಹಣಕ್ಕಾಗಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ದಾನಿಗಳ ಬಳಿ ಹೋಗಿ ಬಡ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಂಡು ಬರುತ್ತಾರೆ, ಬಂದ ಹಣದಲ್ಲಿ ಬಡ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಾರೆ.

    ಒಟ್ಟಿನಲ್ಲಿ ತಮಗೆ ಸಂಬಳ, ಸವಲತ್ತು ಹೆಚ್ಚು ಬೇಕು ಎನ್ನುವವರೇ ಮಧ್ಯೆ ಇವರು ವಿಭಿನ್ನವಾಗಿ ಗುರುತಿಸಿಕೊಂಡು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

    https://www.youtube.com/watch?v=inJg34TyDj8