Tag: teacher

  • ಬಾಸುಂಡೆ ಬರುವಂತೆ 6ನೇ ತರಗತಿ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ

    ಬಾಸುಂಡೆ ಬರುವಂತೆ 6ನೇ ತರಗತಿ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ

    ನೆಲಮಂಗಲ: ಹುಷಾರಿಲ್ಲದ್ದಕ್ಕೆ ಶಾಲೆಯ ಕೊಠಡಿಯಲ್ಲಿ ಮಲಗಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕ ವಿದ್ಯಾರ್ಥಿಯ ಮೈಯಲ್ಲಿ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮಾದರಿ ಸಕಾ9ರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನರಸಾಪುರ ಗ್ರಾಮದ ಜಗದೀಶ್ ಹಾಗೂ ಸರಸ್ವತಿ ಎಂಬವರ ಮಗ ಕುಮಾರ್ ಗೆ ಶಿಕ್ಷಕ ರೇವಣ್ಣಸಿದ್ದಯ್ಯ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

    ಕಳೆದ ನಾಲ್ಕು ದಿನದಿಂದ ಕುಮಾರ್ ಜ್ವರದಿಂದ ಬಳಲುತಿದ್ದು, ಶಿಕ್ಷಕ ಪಾಠ ಮಾಡುವಾಗ ಶಾಲೆಯ ಕೊಠಡಿಯಲ್ಲಿ ಮಲಗಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರೇವಣ್ಣಸಿದ್ದಯ್ಯ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಹಾಗೂ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.

     

    ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಾಗಿರೋ ವೀರೇಂದ್ರ ಪಾಟೀಲರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸಂಗೀತದ ಮೂಲಕ ಮಕ್ಕಳಿಗೆ ಬೇಗ ಅರ್ಥವಾಗುತ್ತೆ ಅನ್ನೋದನ್ನ ಮನಗಂಡ ಪಾಟೀಲ್ ಮೇಷ್ಟ್ರು ತಮ್ಮ ವಿಜ್ಞಾನ ಪಠ್ಯವನ್ನ ಹಾಡಿನ ಮೂಲಕ ಪ್ರಸ್ತುತಿ ಪಡಿಸ್ತಿದ್ದಾರೆ.

    ವೈಜ್ಞಾನಿಕ ಪದಗಳನ್ನ ಸುಲಭವಾಗಿ ಅರ್ಥ ಮಾಡಿಸುವುದರ ಜೊತೆಗೆ ಪರಿಸರ ಕಾಳಜಿಯನ್ನೂ ಮೂಡಿಸುತ್ತಿದ್ದಾರೆ. ಸಾಹಿತ್ಯ ರಚಿಸಿ, ನಿರ್ದೇಶನದ ಜೊತೆ ತಾವೇ ಹಾಡಿದ್ದಾರೆ. ಒಟ್ಟು 7 ಹಾಡುಗಳ ಸಿಡಿಯನ್ನ ಬಿಡುಗಡೆ ಮಾಡಿದ್ದು 350ಕ್ಕೂ ಹೆಚ್ಚು ಪ್ರತಿಗಳನ್ನ ಉಚಿತವಾಗಿ ವಿವಿಧ ಶಾಲೆಗೂ ಹಂಚಲಾಗಿದೆ.

    ಈ ರೀತಿಯ ಹಾಡುಗಳಿಂದ ವಿಜ್ಞಾನ ವಿಷಯದಲ್ಲಿ ಪಾಸಾಗೋದು ಸುಲಭವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಪಾಟೀಲ್ ಮೇಷ್ಟ್ರ ಈ ಕಾರ್ಯಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ, ವಾಸವಿ ಸೇವಾ ಸಂಘ ಸೇರಿ ಕೆಲ ಸಂಸ್ಥೆಗಳು ಸಹಕಾರ ನೀಡಿವೆ.

    https://www.youtube.com/watch?v=dC0yCkgiDTc

     

  • ಶಿಕ್ಷಕಿ, ಸಿಆರ್‍ಪಿ ಆತ್ಮಹತ್ಯೆ- ಸಹೋದ್ಯೋಗಿಗಳಿಂದ ಕಿರುಕುಳ ಆರೋಪ

    ಶಿಕ್ಷಕಿ, ಸಿಆರ್‍ಪಿ ಆತ್ಮಹತ್ಯೆ- ಸಹೋದ್ಯೋಗಿಗಳಿಂದ ಕಿರುಕುಳ ಆರೋಪ

    ತುಮಕೂರು: ಸಹೋದ್ಯೋಗಿಗಳ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ(ಸಿಆರ್‍ಪಿ)ಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ದುಗುಡಿಹಳ್ಳಿಯ ತನ್ನ ಮನೆಯಲ್ಲಿ ಶಿಕ್ಷಕಿ ಮಮತಾ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಘಟ್ಟ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಮತಾಗೆ ಕೆಲ ಶಿಕ್ಷಕರು ಹಾಗೂ ನೌಕರರ ಸಂಘದ ಅಧ್ಯಕ್ಷರು ಕಿರುಕುಳ ನೀಡುತಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಮತಾ ತಾಯಿ ಯಶೋಧಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಿಕಾಂತ, ಬರಗೂರು ಕ್ಲಸ್ಟರ್ ಸಿಆರ್ ಪಿ ಪ್ರಸನ್ನ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಮಮತಾಗೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಶಾಲಾ ದಾಖಲಾತಿ, ಕಾಮಗಾರಿ ತನಿಖೆ ಸಂದರ್ಭದಲ್ಲಿ ಈ ಮೂವರು ತನಗೆ ಕಿರುಕುಳ ನೀಡುತಿದ್ದರು ಎಂದು ಮಮತಾ ಮನೆಯವರಲ್ಲಿ ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಮೂವರ ವಿರುದ್ದ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

  • ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಶುಲ್ಕ ನೀಡದ್ದಕ್ಕೆ ಬಾಲಕಿಯರ ಯೂನಿಫಾರ್ಮ್ ಬಿಚ್ಚಿ ಮನೆಗೆ ಕಳುಹಿಸಿದ ಶಿಕ್ಷಕಿ!

    ಪಾಟ್ನಾ: ಶಾಲಾ ಯೂನಿಫಾರ್ಮ್ ಶುಲ್ಕ ಪಾವತಿಸದ್ದಕ್ಕೆ ಶಿಕ್ಷಕಿಯೊಬ್ಬರು ಇಬ್ಬರು ಬಾಲಕಿಯರನ್ನ ಅರೆಬೆತ್ತಲೆಯಾಗಿ ಮನೆಗೆ ಕಳುಹಿಸಿದ ಘಟನೆ ಬಿಹಾರದ ಬೆಗುಸರಾಯ್‍ನ ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಒಂದು ಮತ್ತು 2ನೇ ತರಗತಿಯ ಓದುವ ವಿದ್ಯಾರ್ಥಿನಿಯರನ್ನು ಶಿಕ್ಷಕಿ ಎಲ್ಲರ ಮುಂದೆ ಯೂನಿಫಾರ್ಮ್ ಬಟ್ಟೆ ಬಿಚ್ಚಿಸಿ ಮನೆಗೆ ಕಳುಹಿಸಿದ್ದಾಳೆ.

    ನಾವು ಬಡವರಾಗಿದ್ದೇವೆ. ಶುಲ್ಕ ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಬಾಲಕಿಯರ ತಂದೆ ಮನವಿ ಮಾಡಿದ್ದರೂ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಅವಮಾನ ಮಾಡಿದ್ದಾಳೆ.

    ಬಾಲಕಿಯರ ತಂದೆ ದೂರು ನೀಡಿದ್ದು, ಈಗ ಶಾಲೆಯ ಶಿಕ್ಷಕಿಯಾದ ಅಂಜನಾ ಕುಮಾರಿ ಮತ್ತು ಶಾಲಾ ಪ್ರಾಂಶುಪಾಲರಾದ ಎನ್.ಕೆ.ಝಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಂಜಿತ್ ಮಿಶ್ರಾ ತಿಳಿಸಿದ್ದಾರೆ.

    ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆರೋಪಿಗಳು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಅಶೋಕ್ ಚೌಧರಿ ತಿಳಿಸಿದ್ದಾರೆ.

     

  • 20 ವರ್ಷಗಳಿಂದ ಪರಿಸರ ರಕ್ಷಣೆ- ಸಸಿ ನೆಡೋದ್ರಲ್ಲೇ ಹಬ್ಬ, ಹುಟ್ಟುಹಬ್ಬದ ಖುಷಿ ಕಾಣುವ ಆನಂದ್ ಮೇಷ್ಟ್ರು

    20 ವರ್ಷಗಳಿಂದ ಪರಿಸರ ರಕ್ಷಣೆ- ಸಸಿ ನೆಡೋದ್ರಲ್ಲೇ ಹಬ್ಬ, ಹುಟ್ಟುಹಬ್ಬದ ಖುಷಿ ಕಾಣುವ ಆನಂದ್ ಮೇಷ್ಟ್ರು

    ಚಿಕ್ಕಬಳ್ಳಾಪುರ: ಮೇಷ್ಟ್ರುಗಳಿಗೆ ಶನಿವಾರ ಮತ್ತು ಭಾನುವಾರ ಬಂದ್ರೆ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗ್ತಾರೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮಾತ್ರ ಶನಿವಾರ ಮತ್ತು ಭಾನುವಾರ ಎರಡು ದಿನ ಬರೀ ಸಸಿ ನೆಡೋದ್ರಲ್ಲೇ ಖುಷಿ ಕಾಣ್ತಾರೆ.

    ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಅನುದಾನಿತ ಪಂಚಗಿರಿ ಬೋಧನಾ ಪ್ರೌಢ ಶಾಲೆಯ ಶಿಕ್ಷಕ ಆನಂದ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಪರಿಸರದ ಬಗ್ಗೆ ತುಂಬಾ ಕಾಳಜಿ ಇರೋ ಆನಂದ್ ಮೇಷ್ಟ್ರು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಗಿಡ ನೆಡಬೇಕು ಅಂದ್ರು ರೆಡಿ. ಯಾವುದೇ ಹಬ್ಬ ಹರಿದಿನ ಇರಲಿ, ಹುಟ್ಟುಹಬ್ಬವೇ ಇರಲಿ, ಕೊನೆಗೆ ಯಾರಾದ್ರೂ ಆಪ್ತರು ಸತ್ತರೂ ಅವರ ಸಮಾಧಿ ಬಳಿ ನೆನಪಿಗಾಗಿ ಒಂದು ಗಿಡ ನೆಡ್ತಾರೆ.

    ಶನಿವಾರ-ಭಾನುವಾರ ಹಾಗೂ ರಜಾ ದಿನ ಬಂದ್ರೆ ಬರೀ ಗಿಡ ನೆಡೋದೇ ಇವರ ಕೆಲಸ. ಕಳೆದ 20 ವರ್ಷಗಳಲ್ಲಿ ಆನಂದ್ ಮೇಷ್ಟ್ರು ಸಾವಿರಾರು ಗಿಡ ನೆಟ್ಟು ಬೆಳೆಸಿದ್ದಾರೆ. ಗುಡಿಬಂಡೆಯಲ್ಲಿ ವಾಸವಿರೋ ಇವರು ಪಟ್ಟಣದ ಮೂರು ಪಾರ್ಕ್‍ಗಳಲ್ಲಿ ಮಾವು, ನೇರಳೆ, ಹಲಸು, ಸೀಬೆ, ದಾಳಿಂಬೆ ಹಾಗೂ ಹೂವಿನ ಗಿಡಗಳನ್ನ ನೆಟ್ಟಿದ್ದಾರೆ.

    ಆನಂದ್ ಮೇಷ್ಟ್ರ ಸಮಾಜಮುಖಿ ಕಾರ್ಯಕ್ಕೆ ರಾಜ್ಯ ಪರಿಸರ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇವರ ಪರಿಸರ ಕಾಳಜಿ ಸಾವಿರಾರು ಮಂದಿಗೆ ಸ್ಫೂರ್ತಿಯಾಗಲಿ.

    https://www.youtube.com/watch?v=Ou05SU38O8M

  • ಕೈ ಮೇಲೆ ಟೀಚರ್ ಹೆಸರು ಬರೆದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

    ಕೈ ಮೇಲೆ ಟೀಚರ್ ಹೆಸರು ಬರೆದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಡ್ಯ: ಟೀಚರ್ ಆಗಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿನಿ ತನ್ನ ಸಾವಿಗೆ ಟೀಚರ್ ಕಾರಣವೆಂದು ಎಡಗೈಯಲ್ಲಿ ಬರೆದುಕೊಂಡು ನೇಣಿಗೆ ಶರಣಾದ ಘಟನೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

    13 ವರ್ಷದ ಭವಾನಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಭವಾನಿ ಸಾರೆನೇಗಿಲುಕೊಪ್ಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಈಕೆ ಸಾಯುವ ಮುನ್ನ ಎಡಗೈ ಹಸ್ತದ ಮೇಲೆ ತನ್ನ ಸಾವಿಗೆ ಪ್ರಾಥಮಿಕ ಶಾಲೆಯ ಯಶೋಧಮ್ಮ ಟೀಚರ್ ಕಾರಣ ಅಂತಾ ಬರೆದುಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಭವಾನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ತಾಯಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಯಶೋಧ ಟೀಚರ್ ಚೆನ್ನಾಗಿ ಪಾಠ ಮಾಡ್ತಿದ್ರು. ಒಮ್ಮೊಮ್ಮೆ ಬೈತಾಯಿದ್ರು. ಭವಾನಿ ಮುಂದೆ ಟೀಚರ್ ಆಗುವ ಕನಸು ಕಂಡಿದ್ದಳು. ಬೇರೇನೂ ನಮಗೆ ಗೊತ್ತಿಲ್ಲ ಎಂದು ಭವಾನಿ ತಾಯಿ ನಾಗಮ್ಮ ಹೇಳಿದ್ದಾರೆ.

    ಯಶೋಧ ಟೀಚರ್ ಕೆಟ್ಟದಾಗಿ ಕಳ್ಳಿ, ಸುಳ್ಳಿ ಎಂದೆಲ್ಲ ನಿಂದಿಸುತ್ತಿದ್ರು. ಹೀಗಾಗಿ ನನ್ನ ಗೆಳತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಭವಾನಿಯ ಗೆಳತಿ ಹೇಳಿದ್ದಾಳೆ.

    ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

     

  • ಪಾಠ ಮಾಡೋ ಬದ್ಲು ವಿದ್ಯಾರ್ಥಿಗಳಿಗೆ ಸೆಕ್ಸ್ ಫೋಟೋ ತೋರಿಸ್ತಾನೆ ಈ ಶಿಕ್ಷಕ!

    ಪಾಠ ಮಾಡೋ ಬದ್ಲು ವಿದ್ಯಾರ್ಥಿಗಳಿಗೆ ಸೆಕ್ಸ್ ಫೋಟೋ ತೋರಿಸ್ತಾನೆ ಈ ಶಿಕ್ಷಕ!

    ತುಮಕೂರು: ಶಿಕ್ಷಕರು ಎಂದರೆ ದೇವರು ಸಮಾನ ಎಂದು ಎಲ್ಲರೂ ಭಾವಿಸ್ತಾರೆ. ಆದರೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಲಂಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದಾನೆ. ಶಾಲೆಯಲ್ಲಿ ಓದುವ ಹೆಣ್ಣು ಮಕ್ಕಳಿಗೆ ಮೊಬೈಲ್‍ನಲ್ಲಿ ಸೆಕ್ಸ್ ಫೋಟೋ ತೋರಿಸೋ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

    ದೇವರಾಜು ಎಂಬಾತನ ವಿರುದ್ಧವೇ ಆರೋಪಗಳು ಕೇಳಿ ಬಂದಿವೆ. ದೇವರಾಜು ಶಾಲೆಗೆ ತನಗೆ ಬೇಕಾದ ಸಮಯಕ್ಕೆ ಬಂದು ಪಾಠ ಮಾಡದೇ ಮೊಬೈಲ್ ಹಿಡಿದುಕೊಂಡು ಕೂರ್ತಾರೆ. ಮೊಬೈಲ್‍ನಲ್ಲಿ ಬೇಸರವಾದಾಗ ಶಾಲೆಯಲ್ಲೇ ನಿದ್ದೆಗೆ ಜಾರುತ್ತಾನೆ. ಈ ಕುರಿತು ಯಾರಾದ್ರೂ ಶಿಕ್ಷಕರು ಅಥವಾ ಪೋಷಕರು ಪ್ರಶ್ನೆ ಮಾಡಿದ್ರೆ ಅವರ ಮೇಲೆಯೇ ಗೂಂಡಾ ವರ್ತನೆ ತೋರಿಸುತ್ತಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಈ ದೇವರಾಜು ಹೆಸ್ರಲ್ಲಿ ಈಗಾಗಲೇ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತುಮಕೂರು ನಗರ ಡಿವೈಎಸ್ಪಿ ಶಿಕ್ಷಕ ದೇವರಾಜುನನ್ನ ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಹ ಶಿಕ್ಷಣ ಇಲಾಖೆ ಇತನನ್ನು ಶಿಕ್ಷಕನಾಗಿ ಮುಂದುವರೆಸುತ್ತಿರುವುದು ಈತನ ಪ್ರಭಾವವನ್ನು ತೋರಿಸುತ್ತದೆ. ಶಿಕ್ಷಕ ದೇವರಾಜು ಕಾಟಕ್ಕೆ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈತನನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

     

  • ದಿನಕ್ಕೆ 17 ಗಂಟೆ ಪಾಠ ಮಾಡೋ ಮೇಷ್ಟ್ರು- 50 ವರ್ಷಗಳಿಂದ ಟ್ಯೂಷನ್ ಉಚಿತ

    ದಿನಕ್ಕೆ 17 ಗಂಟೆ ಪಾಠ ಮಾಡೋ ಮೇಷ್ಟ್ರು- 50 ವರ್ಷಗಳಿಂದ ಟ್ಯೂಷನ್ ಉಚಿತ

    ಬೆಂಗಳೂರು: ಇಂದಿನ ದಿನಗಳಲ್ಲಿ ಟ್ಯೂಷನ್ ಹೆಸರಿನಲ್ಲಿ ಟುಟೋರಿಯಲ್‍ಗಳು ಶಿಕ್ಷಣವನ್ನು ಒಂದು ಉದ್ಯಮ ಮಾಡಿಕೊಂಡಿವೆ. ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣವನ್ನು ಪೀಕ್ತಿವೆ. ಅದ್ರೆ ಇಲ್ಲೊಬ್ರು ಮೇಷ್ಟ್ರು ಮಾತ್ರ ಫ್ರೀಯಾಗಿಯೇ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಇವರೇ ಇಂದಿನ ನಮ್ಮ ಪಬ್ಲಿಕ್ ಹಿರೋ.

    ಹೌದು. ಬೆಂಗಳೂರಿನ ಸಂಜಯ್ ನಗರದ ನಿವಾಸಿ 73 ವರ್ಷದ ರಾಜಶೇಖರಯ್ಯ ಮೇಷ್ಟ್ರು ಹೆಚ್‍ಎಎಲ್‍ನ ನಿವೃತ್ತ ನೌಕರರು. ಕಳೆದ 50 ವರ್ಷಗಳಿಂದ ಮನೆಯಲ್ಲಿ `ರಶ್ಮಿ’ ಹೆಸರಿನಲ್ಲಿ ಟುಟೋರಿಯಲ್ ನಡೆಸುತ್ತಿದ್ದು, ಪಿಯುಸಿ, ಬಿಕಾಂ, ಬಿಬಿಎಂ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಫ್ರೀಯಾಗಿ ಟ್ಯೂಷನ್ ಹೇಳಿಕೊಡ್ತಾ ಇದ್ದಾರೆ.

    ರಾಜಶೇಖರಯ್ಯ ಅವರು ವಿದ್ಯಾರ್ಥಿಯಾಗಿದ್ದಾಗ ಗುರುಗಳಾದ ಟಿ ಆರ್ ಶಾಮಣ್ಣನವರು, `ನಿನ್ನ ಜ್ಞಾನವನ್ನು ಜೀವನ ಪೂರ್ತಿ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕೆಂದು’ ಭಾಷೆ ಪಡೆದಿದ್ರಂತೆ. ಅಂದಿನಿಂದ ಇವತ್ತಿನವರೆಗೂ ಕೊಟ್ಟ ಭಾಷೆಯಂತೆ ನಡೆದುಕೊಳ್ಳುತ್ತಿದ್ದಾರೆ. ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಬಳಿ ಟ್ಯೂಷನ್ ಪಡೆದಿದ್ದು, ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಟ್ಯೂಷನ್ ಶುರುಮಾಡಿದ್ರೆ ರಾತ್ರಿ 10 ಗಂಟೆವರೆಗೂ ಟ್ಯೂಷನ್ ಹೇಳಿಕೊಡ್ತಾರೆ.

    https://www.youtube.com/watch?v=LEN-VJ3XoPQ&spfreload=5

     

  • ನಾಲ್ಕನೇ ಕ್ಲಾಸ್‍ಗೆ ಶಾಲೆ ಬಿಟ್ರೂ ಓದು ನಿಲ್ಲಲಿಲ್ಲ – ಟಿವಿ ಬೆಳಕಲ್ಲೇ ಓದಿ ಸಾಧನೆಗೈದ ಛಲಗಾತಿ ನಮ್ಮ ಪಬ್ಲಿಕ್ ಹೀರೋ

    ನಾಲ್ಕನೇ ಕ್ಲಾಸ್‍ಗೆ ಶಾಲೆ ಬಿಟ್ರೂ ಓದು ನಿಲ್ಲಲಿಲ್ಲ – ಟಿವಿ ಬೆಳಕಲ್ಲೇ ಓದಿ ಸಾಧನೆಗೈದ ಛಲಗಾತಿ ನಮ್ಮ ಪಬ್ಲಿಕ್ ಹೀರೋ

    ಹಾಸನ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಾಲೆಗೆ ಹೋಗಿದ್ದು 4ನೇ ಕ್ಲಾಸ್ ವರೆಗೆ ಮಾತ್ರ. ಆ ಬಳಿಕ ಬಡತನದಿಂದಾಗಿ ಶಾಲೆ ಮೆಟ್ಟಿಲನ್ನೇ ಏರಲಿಲ್ಲ. ಮನೆಯಲ್ಲೇ ಕಷ್ಟಪಟ್ಟು ಓದಿ ಬಿಎಡ್ ಮಾಡಿ, ಈಗ ಮೊರಾರ್ಜಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇವರ ಒಂದೊಂದು ಹೆಜ್ಜೆಯೂ ಖಂಡಿತಾ ನಿಮಗೆಲ್ಲಾ ಸ್ಫೂರ್ತಿ ಆಗುತ್ತದೆ.

    ಮೂಲತಃ ಅರಸೀಕೆರೆ ತಾಲೂಕಿನ ಕಾಮೇನಹಳ್ಳಿ ಗ್ರಾಮದವರಾದ ವಿಜಯಕುಮಾರಿ ಡಿ.ಎಸ್ ನಮ್ಮ ಪಬ್ಲಿಕ್ ಹೀರೋ. ಕಾಳಿಬಾಯಿ ಶಂಕರ್‍ನಾಯ್ಕ್ ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಇವರೇ ಕೊನೆಯವರು. ನಾಲ್ಕನೇ ಕ್ಲಾಸ್ ಬಳಿಕ ಶಾಲೆಗೆ ಹೋಗಲು ಆಗಲಿಲ್ಲ. ಮನೆಯಲ್ಲೇ ಅಪ್ಪ-ಅಮ್ಮನಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಿಕೊಂಡಿದ್ದರು. ಆದರೂ ಓದುವ ಆಸೆ ಬೆಟ್ಟದಷ್ಟಿತ್ತು. ಮನೆಯಲ್ಲೇ ಯಾರಿಗೂ ಗೊತ್ತಾಗದಂತೆ ಸಹೋದರಿಯ ಪುಸ್ತಕಗಳನ್ನು ಓದುತ್ತಿದ್ದರು.

    ಒಮ್ಮೆ ಹಕ್ಕಿಪಿಕ್ಕಿ ಜನಾಂಗದ ಯುವತಿ ಮನೆಯಲ್ಲಿಯೇ ಓದಿಕೊಂಡು ಪಿಹೆಚ್‍ಡಿ ಪದವಿ ಪಡೆದ ವಿಚಾರ ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಮೇಲೆ 10 ವರ್ಷಗಳ ನಂತರ 2005ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಟ್ಟಿ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ರು. ನಂತರ ಕಾಲೇಜಿಗೆ ಹೋಗೋಣ ಅಂದರೆ ಅಕ್ಕನ ಬಾಣಂತನದಿಂದ ಹೋಗಲು ಆಗಲಿಲ್ಲ. ದೊಡ್ಡಪ್ಪನ ಮನೆಯಲ್ಲಿ ಎಲ್ಲರೂ ಟಿವಿ ನೋಡಲು ಲೈಟ್ ಆಫ್ ಮಾಡಿದ್ರೆ ವಿಜಯಕುಮಾರಿ ಮಾತ್ರ ಆ ಟಿವಿ ಬೆಳಕಲ್ಲೇ ಓದಿದ್ದಾರೆ.

    ಛಲ ಬಿಡದೇ ಮನೆಯಲ್ಲೇ ಓದಿ ಮತ್ತೆ ಪಿಯುಸಿ ಪಾಸ್ ಮಾಡಿದ್ರು. ಆಮೇಲೆ ಹಿಂದಿ ಬಿಎಡ್‍ನಲ್ಲಿ ಫಸ್ಟ್ ಕ್ಲಾಸ್‍ನಲ್ಲಿ ಪಾಸ್ ಆದ್ರು. ಇವರ ಯಶೋಗಾಥೆ ನಿಲ್ಲೋದಿಲ್ಲ ನಂತರ ನಡೆದ ಸಿಇಟಿಯಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನ ಪಡೆದು ಈಗ ಚನ್ನರಾಯಪಟ್ಟಣದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದಾರೆ. ಇವರ ಈ ಸಾಧನೆ ಹಿಂದೆ ಗಂಡನ ಶ್ರಮ ದೊಡ್ಡದಿದೆ.

    ಹಿಂದಿ ಶಿಕ್ಷಕಿಯಾಗಿರೋ ಇವರು ಶಾಲಾಮಕ್ಕಳಿಗೂ ಅಚ್ಚುಮೆಚ್ಚು. ಕಂಪ್ಯೂಟರ್ ಕಲಿತಿದ್ದಾರೆ. ಡಿಟಪಿ ಮಾಡ್ತಾರೆ. ಸಿಇಟಿ ಪರೀಕ್ಷೆ ತೆಗೆದುಕೊಂಡವರಿಗೆ ಕೋಚಿಂಗ್ ಕೊಡ್ತಾರೆ. ತಾವು ಹೋದಲೆಲ್ಲಾ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೇಳಿಕೊಳ್ಳುತ್ತಾರೆ. ಶಾಲೆ ಬಿಟ್ಟು 12 ವರ್ಷಗಳ ನಂತರವೂ ತನ್ನ ಗುರಿ ಸಾಧಿಸಿದ ಇವರು ನಿಜಕ್ಕೂ ನಮ್ಮ ಪಬ್ಲಿಕ್ ಹೀರೋ ಅನ್ನೋದಕ್ಕೆ ಹೆಮ್ಮೆ ಆಗುತ್ತೆ. ಶಾಲೆ ಬಿಟ್ಟ ಹೆಣ್ಣು ಮಕ್ಕಳು ಈ ಹೀರೋ ನೋಡಿ ಒಂದಿಷ್ಟು ಸಾಧನೆ ಮಾಡಿದರೆ ಅದಕ್ಕಿಂತ ಹೆಮ್ಮೆ ಮತ್ತೊಂದಿಲ್ಲ.

    https://youtu.be/sQJ7Xz4BJeA

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಕಲಬುರಗಿ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ ಮೂರು ದಿನಗಳು ಕಳೆದಿವೆ. ಆದರೆ ಜಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ ಗ್ರಾಮದ ಶಾಲೆಯಲ್ಲಿ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ.

    ಈ ಶಾಲೆಯ ಶಿಕ್ಷಕರಿಬ್ಬರೂ ಹೆಡ್‍ಮಾಸ್ಟರ್ ನಾನಲ್ಲ ಅಂತ ಕಚ್ಚಾಡಿಕೊಂಡು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡ್ತಿದ್ದಾರೆ. ಕಷ್ಟಪಟ್ಟು ಓದಿರೋ ಮಕ್ಕಳು ಕೆಲವೇ ಅಂಕಗಳಲ್ಲಿ ಫೇಲಾಗಿದ್ದಾರಂತೆ. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಪರದಾಡುತ್ತಿದ್ದಾರೆ.

    ಈ ಶಾಲೆಗೆ ಹಿಂದೆ ರಾಜಕುಮಾರ ಎಂಬವರು ಮುಖ್ಯೋಪಾಧ್ಯಾಯರಾಗಿದ್ದರು. 4 ತಿಂಗಳು ಹಿಂದೆ ವರ್ಗಾವಣೆಯಾಗಿ ಬೇರೊಂದು ಶಾಲೆಗೆ ಹೋಗಿದ್ದಾರೆ. ಅಂದಿನಿಂದ ಏಪ್ರಿಲ್ 10ರವರೆಗೆ ಶಿಕ್ಷಣ ಇಲಾಖೆ ಪ್ರಭಾರಿ ಮುಖ್ಯಗುರುಗಳಾಗಿ ಲಿಂಗಣ್ಣ ಅವರನ್ನು ನೇಮಕ ಮಾಡಿದೆ. ಆದ್ರೆ ಅವರು ಸಹ ನೇಮಕವಾದ ದಿನದಿಂದ ಶಾಲೆಯತ್ತ ಮುಖ ಮಾಡಿಲ್ಲ.

    ಇಲ್ಲಿನ ಶಿಕ್ಷಕರಿಗೂ ಸಹ 4 ತಿಂಗಳಿನಿಂದ ಸಂಬಳವಾಗಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ದೂರು ನೀಡಿದ್ದರೂ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.