Tag: teacher

  • ಸರ್ಕಾರಿ ಶಾಲೆಗಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ರು

    ಸರ್ಕಾರಿ ಶಾಲೆಗಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ರು

    ಕೊಪ್ಪಳ: ನಾವು ಎಷ್ಟೋ ಜನ ಮೇಷ್ಟ್ರನ್ನ ಪಬ್ಲಿಕ್ ಹೀರೋ ಆಗಿ ತೋರಿಸಿದ್ದೇವೆ. ಆದರೆ ಇವತ್ತಿನ ಟೀಚರ್ ಫುಲ್ ಡಿಜಿಟಲ್. ಈ ಸರ್ಕಾರಿ ಮೇಷ್ಟ್ರು ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

    ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಶಾಲೆಗೇ ಬರಲ್ಲ, ಬಂದರು ಚೆನ್ನಾಗಿ ಪಾಠ ಮಾಡಲ್ಲ. ಒಳ್ಳೇ ರಿಸಲ್ಟ್ ಕೊಡಲ್ಲ ಮತ್ತು ಸುಮ್ಮನೆ ಟೈಂ ಪಾಸ್ ಮಾಡುತ್ತಾರೆ. ಮಕ್ಕಳಿಗೆ ಪಾಠ ಬಿಟ್ಟು ಬೇರೇ ಯಾವುದೇ ಚಟುವಟಿಕೆಗಳನ್ನು ಮಾಡಿಸಲ್ಲ. ಹೀಗೆ ಸರ್ಕಾರಿ ಶಾಲೆಗಳ ಬಗ್ಗೆ ಸಾಕಷ್ಟು ಆರೋಪಗಳಿವೆ. ಆದರೆ ನಮ್ಮ ಪಬ್ಲಿಕ್ ಹೀರೋ ತುಂಬಾನೇ ಡಿಫರೆಂಟ್. ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡುತ್ತಿದ್ದಾರೆ.

    ಅಂದಹಾಗೇ ಮೇಷ್ಟ್ರ ಹೆಸರು ಮೊಹಮ್ಮದ್ ಅಬಿದ ಹುಸೇನ್ ಅತ್ತಾರ. ಕೊಪ್ಪಳದ ಹೃದಯ ಭಾಗದಲ್ಲಿರೋ ಸರ್ಕಾರಿ ಕೇಂದ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ತಮ್ಮ ಸಂಬಳದ ಒಂದಿಷ್ಟು ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೆ.

    ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಚೆನ್ನಾಗಿ ಗಣಿತವನ್ನು ಅರ್ಥ ಮಾಡಿಸುತ್ತಾರೆ. ಮಕ್ಕಳು ಕೂಡಾ ಈ ಮೇಷ್ಟ್ರನ್ನ ಕಂಡರೆ ಅಷ್ಟೇ ಇಷ್ಟ ಪಡುತ್ತಾರೆ. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ಬಡ ವಿದ್ಯಾರ್ಥಿಗಳಿಗೂ ಗುಣಾತ್ಮಕ ಶಿಕ್ಷಣ ನೀಡುತ್ತಿರೋ ಅತ್ತಾರ ಮೇಷ್ಟ್ರಿಗೆ ನಮ್ಮದೊಂದು ಸಲಾಂ.

  • ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳಿಂದಲೇ ಶಿಕ್ಷಕರ ನಿಯೋಜನೆ!

    ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳಿಂದಲೇ ಶಿಕ್ಷಕರ ನಿಯೋಜನೆ!

    ಯಾದಗಿರಿ: ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯನ್ನು ಸರ್ಕಾರ ನಿಲ್ಲಿಸಿದೆ. ಆದ್ರೆ ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳು, ಶಿಕ್ಷಕರ ಹಂತದಲ್ಲಿ ಶಿಕ್ಷಕರ ನಿಯೋಜನೆ ಪದ್ದತಿಯು ಈಗ ಹುಟ್ಟಿದೆ.

    ಯಾದಗಿರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗರಿ-ಗರಿ ನೋಟು ಕೋಟ್ರೆ ಎಲ್ಲಿಬೇಕಾದ್ರು ಶಿಕ್ಷಕರನ್ನ ನಿಯೋಜನೆ ಮಾಡ್ತಾರೆ. ಇದಕ್ಕೆ ಸಾಕ್ಷಿ ನೋಡಿ ಮಲ್ಕಪನಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ರಾಘವೇಂದ್ರ.

    ಯಾದಗಿರಿ ತಾಲೂಕಿನ ಆನೂರ(ಕೆ) ಇಂದ ಮಲ್ಕಪನಳ್ಳಿ ಶಾಲೆಗೆ 12/08/2016ರಲ್ಲಿ ಹೆಚ್ಚುವರಿ ವಿಜ್ಞಾನ ಶಿಕ್ಷಕರಾಗಿ ಬಿಇಓ ನೇಮಕವಾಗಿದ್ದರು. ಆದ್ರೆ, ಕರ್ತವ್ಯಕ್ಕೆ ಬಂದು ಮೂರ್ನಾಲ್ಕು ದಿನಗಳಲ್ಲೇ ರಾಘವೇಂದ್ರ ರಜೆ ಮೇಲೆ ತೆರಳಿದ್ದಾರೆ. ಎರಡು ವರ್ಷದಿಂದ ಯಾವ ಶಾಲೆಗೂ ಹೋಗದ ರಾಘವೇಂದ್ರ, ಅಧಿಕಾರಿಗಳಿಗೆ ಬೆಣ್ಣೆ ಹಚ್ಚಿ ಸಂಬಳವನ್ನ ಮಾತ್ರ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾನೆ.

    ಯಾದಗಿರಿ ನೂತನ ಬಿಇಓ ರುದ್ರಗೌಡ ಬಂದ ಮೇಲೆ ರಾಘವೇಂದ್ರ ಮೂಲ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಿದ್ದಾರೆ. ಆದ್ರೆ ರಾಘವೇಂದ್ರನಿಗೆ ರಾಜಕಿಯ ಬೆಂಬಲವಿದೆ ಅಂತ ಆದೇಶ ಪತ್ರಕ್ಕೆ ಕ್ಯಾರೆ ಎಂದಿಲ್ಲ ಅನ್ನೋ ಆರೋಪ ವ್ಯಕ್ತವಾಗಿದೆ.

  • ಚುನಾವಣೆಗೆ ನಿಂತ್ರೆ ಕೊಲೆಯಾಗ್ತಿ- ಟೀಚರ್‍ಗೆ ನೆಲಮಂಗಲ ಎಂಎಲ್‍ಎ ಅವಾಜ್

    ಚುನಾವಣೆಗೆ ನಿಂತ್ರೆ ಕೊಲೆಯಾಗ್ತಿ- ಟೀಚರ್‍ಗೆ ನೆಲಮಂಗಲ ಎಂಎಲ್‍ಎ ಅವಾಜ್

    ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‍ ಬುಕ್‍ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಅಪ್ಲೋಡ್ ಮಾಡಿ ಭ್ರಷ್ಟಾಚಾರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದ ನೆಲಮಂಗಲದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ.

    ಇದಕ್ಕೆ ಕಾರಣ ನೆಲಮಂಗಲದ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ. ಜನಪ್ರತಿನಿಧಿಗಳ ಕಾರ್ಯವೈಖರಿಯ ಕುರಿತು ಸ್ಟೇಟಸ್ ಹಾಕುತ್ತಿದ್ದ ಕಾರಣಕ್ಕೆ ಶಿಕ್ಷಕಿ ಶಿವಕುಮಾರಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ.

    ಶಾಸಕ ಶ್ರೀನಿವಾಸಮೂರ್ತಿ, ಶಿವಕುಮಾರಿ ಅಣ್ಣ ರಾಜು ಜೊತೆ ಮಾತನಾಡಿದ್ದು, ಈಕೆ ಚುನಾವಣೆಗೆ ಸ್ಪರ್ಧಿಸಿದರೆ ಕೆಲಸ ಕಳೆದುಕೊಳ್ತಾಳೆ. ಜೊತೆಗೆ, ನೆಲಮಂಗಲದಲ್ಲಿ ಕೊಲೆಯಾಗಿ ಹೋಗ್ತಾಳೆ. ಸುಮ್ನೆ ಇದನ್ನೆಲ್ಲಾ ಬಿಟ್ಟು ಸೈಲೆಂಟಾಗಿ ಇರೋಕೆ ಹೇಳು ಅಂತಾ ಬೆದರಿಸಿದ್ದಾರೆ ಅಂತ ಹೇಳಿದ್ದಾರೆ.

    ಶಾಸಕರ ದರ್ಪ ಸಂಬಂಧ ಎಲ್ಲಾ ದಾಖಲೆ ಇವೆ. ರಿಲೀಸ್ ಮಾಡ್ತಿನಿ ಎಂದಿದ್ದಾರೆ. ಅಲ್ಲದೇ ಈ ಬಾರಿ ನೆಲಮಂಗಲ ಮೀಸಲು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಅಂತ ಶಿಕ್ಷಕಿ ಸವಾಲ್ ಹಾಕಿದ್ದಾರೆ.

  • 30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    30 ವರ್ಷಗಳಿಂದ ಶಿಕ್ಷಕರಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡ್ತಿರೋ ಧಾರವಾಡದ ಅಜ್ಜಿ

    ಧಾರವಾಡ: 86 ವರ್ಷದ ಅಜ್ಜಿ ಸಾವಮ್ಮ ಕಳೆದ 30 ವರ್ಷಗಳಿಂದ ಉಚಿತವಾಗಿ ತಮ್ಮೂರು ಜಿರ್ಗವಾಡದ ಶಾಲೆಯ ಶಿಕ್ಷಕರಿಗೆ ಪ್ರತಿದಿನ ಉಚಿತವಾಗಿ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕಬೆಳ್ಳಿಕಟ್ಟಿಯವರಾದ ಸಾವಮ್ಮ ಮದುವೆಯಾದ ಮೇಲೆ ಧಾರವಾಡ ತಾಲೂಕಿನ ಜಿರ್ಗವಾಡ ಗ್ರಾಮಕ್ಕೆ ಬಂದಿದ್ದಾರೆ. ಸದ್ಯ 86 ವರ್ಷ ವಯಸ್ಸಾದರೂ ಉತ್ಸಾಹ ಕಡಿಮೆಯಾಗಿಲ್ಲ. ಶಿಕ್ಷಕರು ಅಂದರೆ ಬಹುವಾಗಿ ಗೌರವಿಸುವ ಸಾವಮ್ಮಜ್ಜಿ ಮೊದಲಿಗೆ ಈ ಶಾಲೆಯ ಶಿಕ್ಷಕರಿಗೆ ಊಟ ಕಳಿಸಿಯೇ ಮುಂದಿನ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ತಾವೇ ಶಾಲೆಗೆ ಹೋಗಿ ಶಿಕ್ಷಕರಿಗೆ ಊಟ ಬಡಿಸಿ ಬರುತ್ತಾರೆ.

    ಶಿಕ್ಷಕರು ಎಂದರೆ ಮಕ್ಕಳು ಎನ್ನುವ ಅಜ್ಜಿ, ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಮೊದಲ ಬೆಳೆಯನ್ನ ಶಿಕ್ಷಕರಿಗೆ ನೀಡುತ್ತಾರೆ. ಅಜ್ಜಿ ಬಗ್ಗೆ ಶಾಲೆಯ ಶಿಕ್ಷಕರಿಗೂ ಅಷ್ಟೇ ಗೌರವ. ಮನೆಯಿಂದ ಊಟ ತಂದರೂ ಅಜ್ಜಿಯ ಕೈತುತ್ತು ತಿಂದರೆ ಸಮಾಧಾನ. ಅಜ್ಜಿ ನಿಜಕ್ಕೂ ಅನ್ನಪೂರ್ಣೇಶ್ವರಿ ಅಂತ ಶಾಲೆಯ ಶಿಕ್ಷಕರು ಹೊಗಳುತ್ತಾರೆ.

    ಅಜ್ಜಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ನಿಧನರಾಗಿದ್ದಾರೆ. ಮತ್ತೊಬ್ಬ ಮಗ ಕೃಷಿಕರಾಗಿದ್ದಾರೆ. ಮನೆಯಲ್ಲಿ ಪ್ರತಿ ದಿನ ಶಿಕ್ಷಕರಿಗೆ ಅಡುಗೆ ಮಾಡುವ ಸೊಸೆಯಂದಿರೂ ಕೂಡಾ ಯಾವತ್ತೂ ಊಟ ಕಳಿಸೋಕೆ ಬೇಸರ ಮಾಡಿಕೊಂಡಿಲ್ಲ.

     

  • ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

    ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

    ತುಮಕೂರು: ಗಾಂಧಿ ಜಯಂತಿ ಆಚರಣೆಗೆಂದು ಶಾಲೆಗೆ ಹೊರಟ ಶಿಕ್ಷಕ ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಭೂಪುರ ಸರ್ಕಾರಿ ಶಾಲೆಯ ಶಿಕ್ಷಕ ರಾಮಾಂಜಿಪ್ಪ ಕುಡಿದು ತೂರಾಡಿದ ಶಿಕ್ಷಕ. ಬೆಳಗಿನ ಜಾವ ಎದ್ದ ಶಿಕ್ಷಕ ರಾಮಾಂಜಿನಪ್ಪ ಶಾಲೆಗೆ ಗಾಂಧಿಜಯಂತಿ ಆಚರಣೆ ಮಾಡಲು ಹೊರಟಿದ್ದ. ದಾರಿ ಮಧ್ಯೆ ಮದ್ಯ ಸೇವಿಸಿ ನಡೆದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿದ್ದಾನೆ. ಬಸ್ ಹತ್ತಲೂ ಆಗದೇ ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.

    ಬಳಿಕ ಸಾರ್ವಜನಿಕರು ನಶೆ ಏರಿದ ಶಿಕ್ಷಕನ ಮುಖದ ಮೇಲೆ ನೀರು ಸಿಂಪಡಿಸಿ ಎಚ್ಚರಿಸಿದ್ದಾರೆ. ಎಚ್ಚರವಾಗುತಿದ್ದಂತೆ ಕುಡುಕ ಶಿಕ್ಷಕ ಶಾಲೆಗೆ ಹೊರಡದೆ ಮನೆಯತ್ತ ಕಾಲ್ಕಿತಿದ್ದಾನೆ. ಗಾಂಧಿ ಜಯಂತಿಯಂದು ಮಕ್ಕಳಿಗೆ ನೀತಿ ಪಾಠ ಹೇಳಬೇಕಿದ್ದ ಶಿಕ್ಷಕನೇ ಈ ರೀತಿ ಕುಡಿದು ರಸ್ತೆ ಬದಿ ಬಿದ್ದಿದನ್ನು ಕಂಡು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಶಿಕ್ಷಕರೂ ಇವರೇ.. ಡ್ರೈವರೂ ಇವರೇ-ವೇತನದ ಶೇ.25ರಷ್ಟು ಬಡ ಮಕ್ಕಳಿಗೆ ಮೀಸಲು

    ಬೆಂಗಳೂರು: ಕೆಲ ಬಡ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರೋದು ಹಾಗೂ ವಾಪಾಸ್ ಕರೆದುಕೊಂಡು ಹೋಗೋದೇ ದೊಡ್ಡ ಸಮಸ್ಯೆ. ಕಾರಣ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಾಗಿರುತ್ತದೆ. ಇಂತಹ ಬಡವರ ಮಕ್ಕಳನ್ನು ತಾವೇ ಪೋಷಕರಂತೆ ಶಾಲೆಗೆ ಕೆರೆದುಕೊಂಡು ಬಂದು ಪುನಃ ವಾಪಸ್ ಕರೆದುಕೊಂಡು ಬಿಡುತ್ತಾರೆ. ನೆಲಮಂಗಲದ ಅಪರೂಪದ ಮೇಷ್ಟ್ರು ನಮ್ಮ ಇವತ್ತಿನ ಪಬ್ಲಿಕ್ ಹೀರೋ.

    ಮೂಲತಃ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದ ಮರುಳ ಸಿದ್ದಯ್ಯ ಅವರು ಕಳೆದ 19 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 5 ವರ್ಷಗಳಿಂದ ನೆಲಮಂಗಲ ತಾಲೂಕಿನ ಪಾಪಬೋವಿಪಾಳ್ಯದ ಶಾಲೆಯಲ್ಲಿ ಮರುಳ ಸಿದ್ದಯ್ಯ ಕೆಲಸ ಮಾಡಿಕೊಂಡಿದ್ದಾರೆ.

    ತಮ್ಮ ಶಾಲೆಗೆ ಬರೋ ಬಡವರ ಮಕ್ಕಳನ್ನು ಇವರೇ ತಮ್ಮ ಬೈಕ್ ಅಥವಾ ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ. ಸಂಜೆ ಶಾಲೆ ಮುಗಿದ ಬಳಿಕ ಮತ್ತೆ ತಾವೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ.

    ಕಲ್ಲುಕ್ವಾರಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳನ್ನೆಲ್ಲಾ ಮರಳಿ ಶಾಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಬಳದಲ್ಲಿಯೇ ಬಡಮಕ್ಕಳಿಗೆ ಶೇ.25 ರಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರ ಸೇವೆಗೆ ಕುಟುಂಬ ಕೂಡಾ ಸಾಥ್ ನೀಡಿದೆ.

  • ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ರಾಯಚೂರು: ಸೆಪ್ಟಂಬರ್ ತಿಂಗಳು ಅಂದ್ರೆ ಅದು ಶಿಕ್ಷಕರಿಗೆ ಮೀಸಲು. ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಉತ್ತಮ ಶಿಕ್ಷಕರನ್ನ ಗುರುತಿಸಿ ಇಡೀ ತಿಂಗಳು ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕ ಕಂ ಮುಖ್ಯೋಪಾಧ್ಯಾಯನೊಬ್ಬ ಶಾಲೆಗೆ ಬರದೇ ಕಂಠಪೂರ್ತಿ ಮದ್ಯ ಕುಡಿದು ಊರ ತುಂಬೆಲ್ಲಾ ತೂರಾಡುತ್ತಿರುತ್ತಾನೆ.

    ಸಿಂಧನೂರು ತಾಲೂಕಿನ ಮೀರಾಪುರ ಕ್ಯಾಂಪ್‍ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ರಾಠೋಡ್‍ನನ್ನ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಿತ್ಯ ಕುಡಿದು ಟೈಟಾಗಿ ಶಾಲೆ, ರಸ್ತೆ ಎಲ್ಲೆಂದರಲ್ಲಿ ಮಲಗಿರುತ್ತಾನೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ನಿರ್ಮಿಸುವ ಜವಾಬ್ದಾರಿ ಹೊತ್ತಿರೋ ಶಿಕ್ಷಕ ಇವನು. ಶಾಲೆಯ ಮುಖ್ಯೋಪಾಧ್ಯಾಯ ಆಗಿರುವುದರಿಂದ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕುಡಿದು ಊರೆಲ್ಲಾ ತೂರಾಡಿಕೊಂಡಿರುತ್ತಾನೆ.

    ಮೇಷ್ಟ್ರು ಪಾಠ ಹೇಳ್ತಾರೆ ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯವೂ ನಿರಾಸೆ. ಈ ಕುಡುಕ ಮೇಷ್ಟ್ರಿಗೆ ಟೈಮ್ ಟೇಬಲ್ ಇಲ್ಲ. ಹೀಗಾಗಿ ಶಾಲೆಯ ಎಲ್ಲಾ ಕೋಣೆಗಳಿಗೂ ಯಾವಾಗಲೂ ಬೀಗ ಜಡಿದಿರುತ್ತೆ. ಮಾರುತಿ ರಾಠೋಡ್ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಇವನ ದುರ್ವರ್ತನೆಯಿಂದ ಸಂಬಳ ತಡೆ ಹಿಡಿದರೆ ಕುಡಿದ ಅಮಲಿನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಜಗಳ ಆಡುತ್ತಾನೆ.

    ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಈಗ ಕ್ರಮಕ್ಕೆ ಮುಂದಾಗಿರುವ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಹೊತ್ತಲ್ಲಿ ಇಂತಹ ಶಿಕ್ಷಕರು ಇನ್ನಷ್ಟು ಬೇಸರ ಮೂಡಿಸುತ್ತಿದ್ದಾರೆ.

  • ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ನಿವೃತ್ತರಾಗಿರೋ ಪ್ರಾಧ್ಯಾಪಕರಿಗೆ ಗುಡ್‍ನ್ಯೂಸ್, ನೀವು ಮತ್ತೆ ಪಾಠ ಮಾಡಬಹದು!

    ಆಗ್ರಾ: ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದುಕೊಂಡು 75 ವರ್ಷ ಮೀರದ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್. ನೀವು ಬಯಸಿದ್ದಲ್ಲಿ ಮತ್ತೊಮ್ಮೆ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಬಹುದು.

    ಹೌದು. ಕೇಂದ್ರ ಸರ್ಕಾರ ಈಗಾಗಲೇ ನಿವೃತ್ತರಾಗಿರುವ ಪ್ರಾಧ್ಯಾಪಕರಿಗೆ ಮತ್ತೊಮ್ಮೆ ಬೋಧನೆ ಮಾಡುವ ಅವಕಾಶ ನೀಡಲು ಮುಂದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ವಿಚಾರವನ್ನು ತಿಳಿಸಿದ್ದು, 75 ವರ್ಷ ಮೀರದ ಹಾಗೂ ಉತ್ತಮ ಸೇವಾ ದಾಖಲೆಯನ್ನು ಹೊಂದಿರುವ ನಿವೃತ್ತ ಪ್ರಾಧ್ಯಾಪಕರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

    42 ವಿಶ್ವವಿದ್ಯಾಲಯ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ವೇಳೆ ವಿವಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಪ್ರಾಧ್ಯಾಪಕರನ್ನು ಮರಳಿ ಕರೆತರುವ ಬಗ್ಗೆ ಚರ್ಚೆ ಸಚಿವರು ನಡೆಸಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದೆ. ಹೀಗಾಗಿ ಉತ್ತಮ ಸೇವಾ ದಾಖಲೆ ಹೊಂದಿರುವ ಪ್ರಾಧ್ಯಾಪಕರಿಗೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

    ವಿವಿಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ವಿದೇಶದಲ್ಲಿರುವ ಪ್ರಸಿದ್ಧ ವಿವಿಗಳಲ್ಲಿರುವ ಸಂಶೋಧಕರಿಗೂ ಅವಕಾಶ ನೀಡಲಾಗುವುದು. ವೈದ್ಯಕೀಯವಾಗಿ ಯಾರು ಆರೋಗ್ಯವಾಗಿರುತ್ತಾರೋ ಅಂತಹವರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

    ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.53.28 ಮತ್ತು ನ್ಯಾಷನಲ್ ಇನ್ಸ್ ಟ್ಯೂಟ್ ಟೆಕ್ನಾಲಜಿ(ಎನ್‍ಐಟಿ) ಗಳಲ್ಲಿ ಶೇ.47% ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿದೆ.

    ಮಾನವ ಸಂಪನ್ಮೂಲ ಸಚಿವಾಲಯದ ದಾಖಲೆಗಳ ಪ್ರಕಾರ ಹರ್ಯಾಣ ಕೇಂದ್ರೀಯ ವಿವಿಯಲ್ಲಿ ಏಪ್ರಿಲ್ 1,2017 ರ ಅವಧಿ ವರೆಗೆ ಶೇ.75.11 ಹುದ್ದೆಗಳು ಖಾಲಿ ಇದ್ದರೆ, ದೆಹಲಿಯ ವಿವಿಯಲ್ಲಿ ಶೇ.54.75% ಹುದ್ದೆಗಳು ಖಾಲಿಯಿವೆ.

  • ಕಂಠಪೂರ್ತಿ ಮದ್ಯ ಕುಡಿದ ಶಿಕ್ಷಕರಿಂದ ರಂಪಾಟ- ವಿಡಿಯೋ ನೋಡಿ

    ಕಂಠಪೂರ್ತಿ ಮದ್ಯ ಕುಡಿದ ಶಿಕ್ಷಕರಿಂದ ರಂಪಾಟ- ವಿಡಿಯೋ ನೋಡಿ

    ಮೈಸೂರು: ಪಾಠ ಹೇಳುವ ಶಿಕ್ಷಕರೇ ತಮ್ಮ ಕಡೆಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಬೇಕೆಂದು ಆಗ್ರಹಿಸಿ ಕುಡಿದು ರಂಪಾಟ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

    ನಂಜನಗೂಡು ಪಟ್ಟಣದ ಜೆಎಸ್‍ಎಸ್ ಮಂಗಳ ಮಂಟಪದ ಮುಂಭಾಗ ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಕಡೆಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಹೆಮ್ಮರಗಾಲದ ಅಂಕಶೆಟ್ಟಿ, ಹೊನ್ನಬಿಡಿನ ಚೆಲುವಮೂರ್ತಿ ಎಂಬ ಇಬ್ಬರು ಶಿಕ್ಷಕರು ಕುಡಿದು ರಂಪಾಟ ಮಾಡಿದ್ದಾರೆ.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಆರ್‍ಸಿ ಅಧಿಕಾರಿಯಾಗಿರುವ ಕೆ.ಜೆ.ಮಹೇಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾವು ಹೇಳಿದವರಿಗೆ ಪ್ರಶಸ್ತಿ ನೀಡಬೇಕು. ಇಲ್ಲದಿದ್ದರೆ ಚೆನ್ನಾಗಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ.

    ಸೆ. 5 ರಂದು ಇದೇ ಜೆಎಸ್‍ಎಸ್ ಮಂಗಳ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ಹಿನ್ನೆಲೆಯಲ್ಲಿ ಅದೇ ಸ್ಥಳಕ್ಕೆ ಗದ್ದಲ ನಡೆಸಿದ್ದಾರೆ. ಶಿಕ್ಷಕರ ರಂಪಾಟದ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ತಡವಾಗಿ ಕೆ.ಜೆ.ಮಹೇಶ್ ಅವರಿಗೆ ಈ ವಿಡಿಯೋ ಸಿಕ್ಕಿದೆ. ವಿಡಿಯೋ ಆಧಾರದ ಮೇಲೆ ಅವರು ಬಿಇಓಗೆ ಶಿಕ್ಷಕರ ವಿರುದ್ಧ ದೂರು ನೀಡಿದ್ದಾರೆ.

    https://youtu.be/YCzY9L21V0I

  • ಸಿಗೋ ಒಂದಿಷ್ಟು ಸಂಬಳದಲ್ಲೂ ಶಾಲೆಗೆ ಮೀಸಲಿಡುತ್ತಾರೆ ಮಡಿಕೇರಿಯ ಸತೀಶ್ ಮೇಷ್ಟ್ರು

    ಸಿಗೋ ಒಂದಿಷ್ಟು ಸಂಬಳದಲ್ಲೂ ಶಾಲೆಗೆ ಮೀಸಲಿಡುತ್ತಾರೆ ಮಡಿಕೇರಿಯ ಸತೀಶ್ ಮೇಷ್ಟ್ರು

    ಮಡಿಕೇರಿ: ಮೇಷ್ಟ್ರ ಸಂಬಳ ಎಣ್ಣೆಗಾದ್ರೆ ಉಪ್ಪಿಗಾಗಲ್ಲ. ಉಪ್ಪಿಗಾದ್ರೆ ಎಣ್ಣೆಗಾಗಲ್ಲ ಅಂತಾ ಕೆಲವರು ಮಾತಾಡ್ತಾರೆ. ಹಾಗೇ ಬಡ ಮೇಷ್ಟ್ರ ಖರ್ಚು ವೆಚ್ಚದ ಲೆಕ್ಕಾಚಾರ ಹೇಗಿರುತ್ತೆ ಅಂತಾ ನಿಮಗೆಲ್ಲಾ ಗೊತ್ತು. ಆದರೆ ಇದೇ ಸಂಬಳದಲ್ಲಿ ಒಬ್ಬ ಪ್ರೈಮರಿ ಸ್ಕೂಲ್ ಮೇಷ್ಟ್ರು, ಶಾಲಾ ಪ್ರಗತಿಗೆ ಸಂಬಳದ ಒಂದಿಷ್ಟು ದುಡ್ಡನ್ನ ಖರ್ಚು ಮಾಡ್ತಿದ್ದಾರೆ.

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಸಿ.ಎಸ್ ಸತೀಶ್ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಇವರು ಇಡೀ ಶಾಲಾ ಪರಿಸರವನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಿದ್ದಾರೆ. ಪರಿಸರದೊಂದಿಗೆ, ಕಲಿಕೆ, ನಾಟಕ ಪ್ರಯೋಗದೊಂದಿಗೆ ವಿನೂತನ ಶೈಲಿಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಬೋಧನೆ ಮಾಡುತ್ತಾರೆ. ಇದಕ್ಕಾಗಿಯೇ ತಮ್ಮ ಸಂಬಳದ ಸ್ಪಲ್ಪ ಭಾಗವನ್ನು ಎತ್ತಿಡುತ್ತಾರೆ. ನಲಿ-ಕಲಿ ಕೊಠಡಿಯಲ್ಲಿ ವಿವಿಧ ಕೀಟಗಳ, ಪಕ್ಷಿಗಳ ಗೂಡುಗಳನ್ನು ಸಂಗ್ರಹಿಸಲಾಗಿದೆ. ಕವಿಗಳ, ರಾಜ ಮಹಾರಾಜ ಚಿತ್ರಪಟಗಳು ಶಾಲೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಸಲುವಾಗಿ ನಿತ್ಯವೂ ಒಂದೊಂದು ಸರಳ ಪ್ರಯೋಗ ಮಾಡಲಾಗ್ತಿದೆ.

    ಶಾಲೆಯ ಹೂದೋಟಗಳ ನಡುವೆ ಪುಟ್ಟ ಮೃಗಾಲಯದ ಮಾದರಿ ನಿರ್ಮಿಸಿದ್ದಾರೆ. ತಂತಿ, ಬೆಂಡು, ಕಾಗದದ ರಟ್ಟಿನ ಸಹಾಯದಿಂದ ಪ್ರಾಣಿಗಳ ಪ್ರತಿರೂಪ ರಾರಾಜಿಸುತ್ತಿವೆ. ಇಡೀ ಖಗೋಳವನ್ನೇ ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುತ್ತಿದ್ದಾರೆ. ಪೋಷಕರೆಲ್ಲಾ ಖಾಸಗಿ ಶಾಲೆ ಬಿಟ್ಟು, ಈ ಹೈಟೆಕ್ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

    ಒಟ್ಟಿನಲ್ಲಿ ಇತಿಹಾಸ, ಪರಿಸರ ವಿಜ್ಞಾನ, ಖಗೋಳ, ಗಣಿತ, ಇಂಗ್ಲೀಷ್ ಹೀಗೆ ಎಲ್ಲಾ ವಿಷಯಗಳನ್ನು ತುಂಬಾ ಸರಳವಾಗಿ ಮಾದರಿಗಳ ಮೂಲಕ ಕಲಿಸೋ ಶಿಕ್ಷಕರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=wmfs_9xsXUE