Tag: teacher

  • ಪೆನ್ನು ಕೇಳಿದ್ದಕ್ಕೆ 4ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕಿ

    ಪೆನ್ನು ಕೇಳಿದ್ದಕ್ಕೆ 4ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕಿ

    ಮಡಿಕೇರಿ: 4ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ಟೀಚರ್ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಉದ್ಘಮ್ ಶಾಲೆಯಲ್ಲಿ ನಡೆದಿದೆ.

    ಕುಶಾಲನಗರದ ನಿವಾಸಿ ಜನಿಪೊಳ್ ಎಂಬವರ ಮಗಳು ಕ್ಲಾಸಿನಲ್ಲಿ ತನ್ನ ಗೆಳೆಯರೊಂದಿಗೆ ಪೆನ್ನು ಕೇಳಿದ ಕಾರಣಕ್ಕೆ ಶಿಕ್ಷಕಿ ಮನಬಂದಂತೆ ಥಳಿಸಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ಸದ್ಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಶಿಕ್ಷಕಿಯ ಥಳಿತದಿಂದ ವಿದ್ಯಾರ್ಥಿನಿಯ ಕಾಲು ಊದಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮೊದಲು ವಿದ್ಯಾರ್ಥಿನಿಗೆ ಮೂರು ಬಾರಿ ಶಿಕ್ಷಕಿ ಥಳಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪೋಷಕರಿಗೆ ಶಾಲಾ ಸಿಬ್ಬಂದಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

    ತುಮಕೂರು: ಶಿಕ್ಷಕನೊಬ್ಬ ವಿಶೇಷ ತರಗತಿ ನೆಪದಲ್ಲಿ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿಕೊಂಡು ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ ಕೊಡುತ್ತಿದ್ದ ಪ್ರಕರಣವೊಂದು ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಕನ್ನಡ ಶಿಕ್ಷಕ. ಜಿಲ್ಲೆಯ ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಸುವರ್ಣ ಮುಖಿ ಪ್ರೌಢಶಾಲೆಯ ಕನ್ನಡ ಶಿಕ್ಷಕನಾಗಿರುವ ಚಂದ್ರಶೇಖರನ ಕಾಮಚೇಷ್ಟೆ ಬೆಳಕಿಗೆ ಬಂದಿದೆ.

    ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಲ್ಲದೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮಾಟ ಮಂತ್ರ ಮಾಡಿ ನಿಮ್ಮ ತಂದೆ-ತಾಯಿಯರನ್ನು ಸಾಯಿಸುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ.

    ವಿಶೇಷ ತರಗತಿಗೆಂದು ನಮ್ಮನ್ನು ಕರೆಸಿಕೊಂಡು ಕಿಸ್ ಕೊಡು ಎಂದು ಬಲವಂತ ಮಾಡುತ್ತಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಂದ್ರಶೇಖರ್ ಕೆಲ ವಿದ್ಯಾರ್ಥಿನಿಯರನ್ನು ಡಾರ್ಲಿಂಗ್ ಅಂತಾನೂ ಕರಿಯುತ್ತಾನೆ ಎಂಬುದು ತಿಳಿದು ಬಂದಿದೆ.

    ಸದ್ಯ ಈ ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಕಾಮುಚೇಷ್ಟೆ ಬಟಾಬಯಲಾಗುತ್ತಿದ್ದಂತೆ ಕನ್ನಡ ಶಿಕ್ಷಕ ಪರಾರಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    -ಪೋಷಕರು ಶಾಲೆಗೆ ಬರುತ್ತಿದ್ದಂತೆ ಪರಾರಿಯಾದ ಶಿಕ್ಷಕ

    ಬಾಗಲಕೋಟೆ: ಶಿಕ್ಷಕನೊರ್ವ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಜೊತೆಗೆ ಅಸಭ್ಯವಾಗಿ ಮೆಸೇಜ್ ಮಾಡಿ ಪರಾರಿ ಆಗಿರುವ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕ ಮಲ್ಲಪ್ಪ ಬಸವರಾಜ್ ಡಂಗಿ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ. ಶಾಲೆಯ ಹತ್ತನೆ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಲ್ಲದೇ ವಿದ್ಯಾರ್ಥಿನಿ ಮೊಬೈಲ್‍ಗೆ ಐ ಲವ್ ಯು, ಕಾಲ್ ಮಿ, ಅಪ್ಪು ಪ್ಲೀಜ್ ಹಾಗೂ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.

    ಶಿಕ್ಷಕ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ತಿಳಿದ ತಕ್ಷಣ ಪೋಷಕರು ಶಾಲೆಯಲ್ಲಿ ಸಾರ್ವಜನಿಕರ ಮುಂದೆಯೇ ಥಳಿಸಬೇಕು ಎಂದು ದೌಡಾಯಿಸಿದ್ದಾರೆ. ಆದರೆ ಪೋಷಕರು ಶಾಲೆಯತ್ತ ಬರುತ್ತಿರುವ ವಿಚಾರ ತಿಳಿಯುತ್ತಲೆ ಶಿಕ್ಷಕ ಮಲ್ಲಪ್ಪ ಪರಾರಿಯಾಗಿದ್ದಾನೆ. ಈ ಬಗ್ಗೆ ಪೋಷಕರು ಹಾಗೂ ಸ್ಥಳೀಯರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಶಾಲಾ ಮುಖ್ಯೋಪಾಧ್ಯಾಯರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಭರವಸೆಯ ನಂತರ ಪೋಷಕರು ಹಾಗೂ ಸ್ಥಳೀಯರು ಶಾಂತರಾಗಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 25 ವಿದ್ಯಾರ್ಥಿನಿಯರನ್ನ ಪ್ರೀತಿಯ ಬಲೆಗೆ ಬೀಳಿಸಿ ಶಿಕ್ಷಕನಿಂದ ಅಶ್ಲೀಲ ವಿಡಿಯೋ ರೆಕಾರ್ಡ್

    25 ವಿದ್ಯಾರ್ಥಿನಿಯರನ್ನ ಪ್ರೀತಿಯ ಬಲೆಗೆ ಬೀಳಿಸಿ ಶಿಕ್ಷಕನಿಂದ ಅಶ್ಲೀಲ ವಿಡಿಯೋ ರೆಕಾರ್ಡ್

    ಲಕ್ನೋ: ಶಿಕ್ಷಕನೊಬ್ಬ ಸುಮಾರು 25 ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಅವರನ್ನು ಬ್ಯ್ಲಾಕ್ ಮೇಲ್ ಮಾಡಿರುವಂತಹ ಘಟನೆ ಉತ್ತರ ಪ್ರದೇಶದ ಅಜಮ್ಗಡ ಜಿಲ್ಲೆಯಲ್ಲಿ ನಡೆದಿದೆ.

    ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಶಿಕ್ಷಕ. ಈತ ತನ್ನ ಕೋಚಿಂಗ್ ಸೆಂಟರ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರಲ್ಲಿ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ, ನಂತರ ಅವರ ಅಶ್ಲೀಲ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಚಂದ್ರಶೇಖರ್ ಯಾದವ್ ಸಾರೈ ಪಟ್ಟಣದಲ್ಲಿರುವ ರಾಣಿ ನಿವಾಸಿಯಾಗಿದ್ದು, ಈಗ ರಹಮತ್ ಇಂಟರ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಶಿಕ್ಷಕನಾಗಿದ್ದಾನೆ. ಕಾಲೇಜಿನ ಹೊರಗೆ ಒಂದು ರೂಮನ್ನು ಬಾಡಿಗೆಗೆ ಪಡೆದುಕೊಂಡು, ಅಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡುತ್ತಿದ್ದನು.

    ಆರೋಪಿ ಸಂಜೆ ಐದು ಗಂಟೆಗೆ ಕೋಚಿಂಗ್ ಸೆಂಟರ್ ಬಾಗಿಲು ಮುಚ್ಚುತ್ತಿದ್ದನು. ನಂತರ ಎರಡು-ಮೂರು ವಿದ್ಯಾರ್ಥಿನಿಯರನ್ನು ಸ್ಪೇಷಲ್ ಕ್ಲಾಸ್ ಹೆಸರಿನಲ್ಲಿ ಒಳಗಿಟ್ಟುಕೊಂಡು, ಮೊದಲು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವರಿಗೆ ಲೈಂಗಿಕ ಕಿರುಕುಳ, ನೀಡುತ್ತಿದ್ದನು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ವಿದ್ಯಾರ್ಥಿನಿಯರಿಗೆ ಆ ವಿಡಿಯೋ ತೋರಿಸಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದನು.

    ಆರೋಪಿ ಶಿಕ್ಷಕ ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ಇಟ್ಟುಕೊಂಡು ಬ್ಯ್ಲಾಕ್ ಮಾಡುತ್ತಿರುವ ಬಗ್ಗೆ ಕೆಲ ವಿದ್ಯಾರ್ಥಿಗಳಿಗೆ ತಿಳಿದಿದೆ. ನಂತರ ವಿದ್ಯಾರ್ಥಿಗಳು ಶಿಕ್ಷಕನ ವಿಡಿಯೋ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಗಮನಿಸಿದ ಸಾರಾಯಿ ರಾಣಿ ಪೊಲೀಸರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದುವರಿಸಿದ್ದಾರೆ. ಆದರೆ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈಗ ತಪ್ಪಿಸಿಕೊಂಡಿರುವ ಆರೋಪಿ ಶಿಕ್ಷಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮಿ ಶಿಕ್ಷಕನಿಗೆ ಸ್ಥಳೀಯರಿಂದ ಥಳಿತ!

    ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮಿ ಶಿಕ್ಷಕನಿಗೆ ಸ್ಥಳೀಯರಿಂದ ಥಳಿತ!

    ಬಾಗಲಕೋಟೆ: ವಿದ್ಯಾರ್ಥಿನಿಯರ ದೇಹವನ್ನು ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾದಾಮಿ ತಾಲೂಕಿನ ಖಬಂದಕೇರಿ ಗ್ರಾಮದಲ್ಲಿ ನಡೆದಿದೆ.

    ಬದಾಮಿ ತಾಲೂಕಿನ ಹಾನಾಪುರ ತಾಂಡಾ ನಿವಾಸಿ ರಾಮಚಂದ್ರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಶಿಕ್ಷಕ. ರಾಮಚಂದ್ರ ಖಬಂದಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾನೆ.

    ರಾಮಚಂದ್ರ ಆರು ಹಾಗೂ ಏಳನೇ ತರಗತಿಯ ವಿದ್ಯಾರ್ಥಿನಿಯರನ್ನು ತನ್ನ ಬಳಿಗೆ ಕರೆದು, ಅವರ ಅಂಗಾಂಗ ಸ್ಪರ್ಶಿಸಿ, ಚಿವುಟುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಶಿಕ್ಷಕರ ವರ್ತನೆಯಿಂದ ಬೇಸತ್ತ ಕೆಲ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ್ದಾರೆ. ತಕ್ಷಣವೇ ಶಾಲೆಗೆ ಬಂದ ಪೋಷಕರು ಹಾಗೂ ಕೆಲ ಸ್ಥಳೀಯರು ರಾಮಚಂದ್ರನನ್ನು ಹಿಡಿದು ಥಳಿಸಿ ಕೂಡಿ ಹಾಕಿದ್ದರು.

    ಮಾಹಿತಿ ತಿಳಿಯುತ್ತಿದ್ದಂತೆ ಬದಾಮಿ ಬಿಇಓ ಅವರು ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ಬಿಇಓ ವಿಚಾರಿಸಿದಾಗ, ನಮ್ಮನ್ನು ಅನಾವಶ್ಯಕವಾಗಿ ಸ್ಪರ್ಶಿಸುತ್ತಾರೆ. ಕರೆದು ಬೆನ್ನು ತಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದರು.

    ಈ ಹಿಂದೆಯೂ ನಮ್ಮ ಮಕ್ಕಳು ಹೇಳಿದ್ದರಿಂದ ಶಾಲೆಗೆ ಬಂದು ಎಚ್ಚರಿಗೆ ನೀಡಿದ್ದೇವು. ಆದರೆ ಈಗ ರಾಮಚಂದ್ರ ಅವರ ವರ್ತನೆಯಿಂದ ಮತ್ತಷ್ಟು ಮಕ್ಕಳಿಗೆ ತೊಂದರೆ ಆಗುತ್ತಿದೆ. ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಮೂಡಿದ ಗಣಪ

    ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಮೂಡಿದ ಗಣಪ

    ಕೊಪ್ಪಳ: ಪಿಒಪಿ ಗಣೇಶ ಮೂರ್ತಿಯಿಂದ ಪರಿಸರಕ್ಕೆ ಹಾನಿ ಅಂತಾ ಎಲ್ಲರಿಗೂ ಗೊತ್ತು. ಆದರೂ ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಆದರೆ ಇಲ್ಲೊಬ್ಬ ಶಿಕ್ಷಕರು ವಿಶೇಷವಾದ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬನ್ನಿಕೊಪ್ಪ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ತೊಂಟದಾರ್ಯ ಯುವಕ ಹಾಗೂ ಮಾರುತಿ ಯುವಕ ಮಂಡಳಿಗಳ ಸಹಕಾರದಿಂದ ಶಾಂತವೀರಸ್ವಾಮಿ ಶಿಕ್ಷಕ ಸಾರ್ವಜನಿಕ ಪರಿಸರ ಸ್ನೇಹಿ ಗಣೇಶನನ್ನು ನಿರ್ಮಿಸಿ ಪರಿಸರ ಕಾಳಜಿ ಮೆರೆದಿದ್ದಾರೆ.

    ಇವರು ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದು, ಈ ಬಾರಿ ಒಂದು ಸಾವಿರದ ಒಂದು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಬಳಸಿ ಗಣೇಶನನ್ನು ನಿರ್ಮಿಸಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಮುಂದಾಗಿದ್ದಾರೆ. ಕೇವಲ ನಾಲ್ಕು ಗಂಟೆಯಲ್ಲಿ ಈ ಗಣೇಶನನ್ನು ನಿರ್ಮಿಸಿದ್ದಾರೆ.

    ಈ ಪ್ಲಾಸ್ಟಿಕ್ ಬಾಟಲಿ ಬಳಸಿ ಗಣೇಶನನ್ನು ನಿರ್ಮಿಸಲು ಗ್ರಾಮದ ಯುವಕರು ಸಹಕರಿಸಿದ್ದಾರೆ. ಇತ್ತೀಚೆಗೆ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ಜಾಸ್ತಿ ಆಗಿದ್ದು, ಅದನ್ನೇ ಬಳಸಿ ಗಣೇಶನನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮತ್ತೆ ಗಣೇಶನ ವಿಸರ್ಜನೆ ಮಾಡುವ ಸಮಯದಲ್ಲಿ ಈ ಎಲ್ಲಾ ಬಾಟಲಿಗಳನ್ನು ಮರು ಬಳಕೆಗೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಅದೇ ಪಿಒಪಿ ಗಣೇಶನ ಬಳಕೆಯಿಂದಾಗಿ ಪರಿಸರ ಮಾಲಿನ್ಯದ ಜೊತೆಗೆ ಕೆರೆಗಳು ಹೂಳು ತುಂಬುತ್ತವೆ. ಅದರಿಂದ ನಮಗೆ ಹಾನಿ ಆಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ಗಣೇಶನಿಗೆ ಮಾರು ಹೋಗಿದ್ದೇವೆ ಎಂದು ಸ್ಥಳೀಯ ನಿವಾಸಿ ಕಿರಣ್ ಹೇಳಿದ್ದಾರೆ.

    ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಪಿಒಪಿ ಗಣೇಶನ ಅಬ್ಬರದ ಮಧ್ಯೆಯೇ ಹೀಗೆ ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆ ಮಾಡುತ್ತಾ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಶಿಕ್ಷಕ ಶಾಂತವೀರಸ್ವಾಮಿ ಅವರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್-ಟೆಂಪೋ ಡಿಕ್ಕಿ ಸ್ಥಳದಲ್ಲೇ ಶಿಕ್ಷಕ ಸಾವು

    ಬೈಕ್-ಟೆಂಪೋ ಡಿಕ್ಕಿ ಸ್ಥಳದಲ್ಲೇ ಶಿಕ್ಷಕ ಸಾವು

    – ಪತ್ನಿಗೆ ಉದ್ಯೋಗ ಭದ್ರತೆ ಭರವಸೆ

    ಚಾಮರಾಜನಗರ: ಬೈಕ್ ಹಾಗೂ ಟೆಂಪೋ ಡಿಕ್ಕಿ ಹೊಡೆದು ಪ್ರೌಢಶಾಲಾ ಶಿಕ್ಷಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಸೋಮವಾರಪೇಟೆ ಬಳಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

    ಬಿಸಿಲವಾಡಿ ಸರ್ಕಾರಿ ಪ್ರೌಢಶಾಲೆಯ ಭೀಮೇಶ್ ಮೃತಪಟ್ಟ ಶಿಕ್ಷಕ. ಇಂದು ಬೆಳಗ್ಗೆ ಬೈಕ್‍ನಲ್ಲಿ ಶಾಲೆಗೆ ತೆರಳುತ್ತಿದ್ದರು. ಆಗ ಬೈಕಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಭೀಮೇಶ್ ಮೃತಪಟ್ಟಿದ್ದರು. ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿದ್ದರು.

    ಅಪಘಾತಕ್ಕೆ ಕಾರಣವಾದ ಟೆಂಪೋ ಮಾಲೀಕನಿಂದ ಮೃತ ಶಿಕ್ಷಕರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಸಲು ಕ್ರಮ ಕೈಗೊಳ್ಳಲಾಗುತ್ತದೆ. ಅನುಕಂಪ ಆಧಾರದ ಮೇಲೆ ಮೃತ ಶಿಕ್ಷಕರ ಪತ್ನಿಗೆ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಹಾಗೂ ಸೂಕ್ತ ಪರಿಹಾರ ನೀಡುವುದಾಗಿ ಸಚಿವ ಎನ್.ಮಹೇಶ್ ಭರವಸೆ ನೀಡಿದ್ದಾರೆ.

    ಚಾಮರಾಜನಗರದ ವಿವಿಧೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೆಕು ಎಂದು ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನಕ್ಕೆ ಐಐಟಿ ಹೆಂಗೆ ತರಬೇಕು ಅಂತ ನಂಗೊತ್ತು: ರೇವಣ್ಣ

    ಹಾಸನ: ಸ್ವಕ್ಷೇತ್ರಕ್ಕೆ ಬೆಳಗಾವಿಯಿಂದ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್) ಕಚೇರಿಯನ್ನು ಸ್ಥಳಾಂತರ ಮಾಡಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‍ಡಿ ರೇವಣ್ಣ ಈಗ ಹಾಸನಕ್ಕೆ ಐಐಟಿ ಹೇಗೆ ತರಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

    ನಗರದ ಕಲಾಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019ರ ವೇಳೆಗೆ ಜಿಲ್ಲೆಯಲ್ಲಿ ಐಐಟಿ ಕಾಲೇಜು ಆರಂಭವಾಗುವುದು ನಿಶ್ಚಿತ. ಐಐಟಿಯನ್ನು ಹಾಸನ ಜಿಲ್ಲೆಗೆ ಹೇಗೆ ತರಬೇಕೆಂದು ನನಗೆ ಗೊತ್ತಿದೆ. ಈಗಾಗಲೇ ಅದರ ಬಗ್ಗೆ ಪ್ರಯತ್ನವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: `ಮೇಡಂ ಎಣ್ಣೆಕಾಟ ತಪ್ಪಿಸಿ’-ಡಿಸಿ ರೋಹಿಣಿ ಸಿಂಧೂರಿಗೆ ರೇವಣ್ಣ ಮನವಿ+

    ಹಾಸನ ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ ಹೊಳೆನರಸೀಪುರ ಕ್ಷೇತ್ರದಲ್ಲಿ ಒಟ್ಟು ಏಳು ಪದವಿ ಕಾಲೇಜುಗಳನ್ನು ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವೆಂದು ಹೆಸರುಗಳಿಸಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ:ರೇವಣ್ಣ ಸ್ವಕ್ಷೇತ್ರಕ್ಕೆ ಕೆಶಿಪ್ ಕಚೇರಿ ಸ್ಥಳಾಂತರ

    ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿನ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಇದರ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಇದೇ ರೀತಿ ಮುಂದುವರಿದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೇ ಸರ್ಕಾರದಿಂದಲೇ ಇಂಗ್ಲೀಷ್ ಶಾಲೆಗಳನ್ನು ತೆರೆಯುವ ಉದ್ದೇಶ ಹೊಂದಿದ್ದೇವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದು ಹಾಸನದ ಕಸಾಪ ಅಧ್ಯಕ್ಷ ಮಂಜೇಗೌಡರ ಸಮ್ಮುಖದಲ್ಲೇ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲ್ಮಾನ್ ಖಾನ್ ಬಾಲ್ಯ ಜೀವನದ ರಹಸ್ಯ ರಿವೀಲ್ ಮಾಡಿದ್ರು ಟೀಚರ್

    ಸಲ್ಮಾನ್ ಖಾನ್ ಬಾಲ್ಯ ಜೀವನದ ರಹಸ್ಯ ರಿವೀಲ್ ಮಾಡಿದ್ರು ಟೀಚರ್

    ಮುಂಬೈ: ಬಾಲಿವುಡ್ ಭಾಯಿಜಾನ್, ಹುಡುಗಿಯರ ಹಾಟ್ ಫೇವರೇಟ್ ಸಲ್ಮಾನ್ ಖಾನ್ ಬಾಲ್ಯ ಜೀವನ ಹೇಗಿತ್ತು ಎಂಬುದರ ಬಗ್ಗೆ ಅವರ ಟೀಚರ್ ರಿವೀಲ್ ಮಾಡಿದ್ದಾರೆ.

    ಸಲ್ಮಾನ್ ಶಾಲೆಯ ಒಳ್ಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಮೃದು ಸ್ವಭಾವದ ಹುಡುಗನಾಗಿದ್ದರಿಂದ ಶಾಲೆಯ ಎಲ್ಲ ಶಿಕ್ಷಕರ ಮೆಚ್ಚುಗೆಯ ವಿದ್ಯಾರ್ಥಿ ಆಗಿದ್ದರು. ಸಲ್ಮಾನ್ ಎಲ್ಲರೊಂದಿಗೆ ಅತ್ಯಂತ ಸ್ನೇಹದಿಂದ ಇರುತ್ತಿದ್ದರು ಅಂತಾ ಹೇಳಿದ್ದಾರೆ.

    ಸಲ್ಮಾನ್ ಮೊದಲಿನಿಂದಲೂ ಓರ್ವ ಎನರ್ಜಿಟಿಕ್ ಮತ್ತು ಹ್ಯಾಂಡ್‍ಸಮ್ ಹುಡುಗ. ಶಾಲೆಯ ಬಹುಪಾಲು ವಿದ್ಯಾರ್ಥಿನಿಯರು ಆತನನ್ನ ಇಷ್ಟಪಡುತ್ತಿದ್ದರು. ಆದ್ರೆ ಸಲ್ಮಾನ್ ಯಾವ ಹುಡುಗಿಯನ್ನ ಕಣ್ಣೆತ್ತಿಯೂ ನೋಡುರುತ್ತಿರಲಿಲ್ಲ. ಸಲ್ಮಾನ್ ಬರುವ ಮಾರ್ಗದಲ್ಲಿಯೇ ಲೇಡಿಸ್ ಹಾಸ್ಟೆಲ್ ಇದ್ರೂ, ಆ ಕಡೆ ಒಮ್ಮೆಯೂ ಕಣ್ಣೆತ್ತಿ ನೋಡಿಲ್ಲ ಎಂದು ಸಲ್ಮಾನ್ ಟೀಚರ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

    ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಶಾ ಪಟನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಮತ್ತು ಟಬೂ ಸಹ ಅಭಿನಯಿಸುತ್ತಿದ್ದಾರೆ. ಚಿತ್ರ ದಕ್ಷಿಣ ಕೊರಿಯಾದ ಒಡೇ ಟು ಮೈ ಫಾದರ್ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ 1940 ರಲ್ಲಿ ಭಾರತ ವಿಭಜನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು, 70ರ ದಶಕದ ಶೈಲಿಯಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಅಥರಗಾ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೊಂದರಲ್ಲಿ ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

    ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಾಗಿರುವ ಇದು 106 ವರ್ಷದ ಹಳೆಯದಾಗಿದ್ದು, ಅಲ್ಲಿ ಈ ಶಾಲೆಯ ಶಿಕ್ಷಕ ರೇವಣಸಿದ್ದ ಎಂಬವರ ದೇವಾಲಯವನ್ನು ಕಟ್ಟಿಸಿದ್ದಾರೆ. ರೇವಣಸಿದ್ದ ಶಿಕ್ಷಕರು ವಿಜಯಪುರದ ಮನಗೂಳಿ ಗ್ರಾಮದಲ್ಲಿ 1925 ಜನಿಸಿ ನಂತರ ಶಿಕ್ಷಕರಾಗಿ ಅಥರಗಾ ಗ್ರಾಮದಲ್ಲಿ 30 ವರ್ಷ ಸೇವೆಸಲ್ಲಿದ್ದರು. ಅನಕ್ಷರತೆ, ಬಡತನ ಸೇರಿದಂತೆ ಶಾಲೆ ಬಿಟ್ಟ ಮಕ್ಕಳು ಹೆಚ್ಚಿಗಿದ್ದರು. ಆಗ ರೇವಣಸಿದ್ದ ಶಿಕ್ಷಕರು ದೊಡ್ಡವರಿಂದ ಹಿಡಿದು ಎಲ್ಲ ಮಕ್ಕಳಿಗೂ ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿದ್ದರು.

    ಅದಕ್ಕಾಗಿ ಅವರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಅವರು ತೀರಿ ಹೋದ ಮೇಲೆ ಶಾಲೆಯಲ್ಲಿ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿ ದೇವಾಲಯವನ್ನೆ ಕಟ್ಟಿಸಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಅವರಿಗೆ ಪೂಜೆ ಪುನಸ್ಕಾರ ನೆರವೇರುಸುತ್ತಾ ಬಂದಿದ್ದು, ಅವರನ್ನು ದೇವರ ಸಮಾನರಾಗಿ ಕಾಣುತ್ತಾರೆ.

    ಗುರು ಬ್ರಹ್ಮ ಗುರು ವಿಷ್ಣು ಗುರುದೇವೊ ಮಹೇಶ್ವರ ಎಂಬಂತೆ ಇಲ್ಲಿ ರೇವಣಸಿದ್ದ ಶಿಕ್ಷಕರನ್ನು ದೇವರ ಸಮಾನರಾಗಿ ಕಾಣುವುದರ ಜೊತೆಗೆ ಅವರನ್ನು ದೇವರಂತೆ ಪೂಜಿಸುತ್ತಿರುವುದು ಶಿಕ್ಷಕ ವೃತ್ತಿಗೆ ಸಂದ ಅಭೂತ ಪೂರ್ವ ಗೌರವವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv