Tag: teacher

  • ಮುಖ್ಯ ಶಿಕ್ಷಕಿ ವರ್ಗಾವಣೆ ರದ್ದು ಖಂಡಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಮುಖ್ಯ ಶಿಕ್ಷಕಿ ವರ್ಗಾವಣೆ ರದ್ದು ಖಂಡಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಮೈಸೂರು: ಮುಖ್ಯ ಶಿಕ್ಷಕಿಯ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ್ದಾರೆ.

    ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಹಲವಾರು ವರ್ಷದಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿ ಸ್ನೇಹಿ ಶಿಕ್ಷಕಿಯಾಗಿದ್ದರು. ಆದರೆ ಈಗ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದೆ. ಇದನ್ನು ಖಂಡಿಸಿ ಶಾಲೆಯ ಕೊಠಡಿಗಳಿಗೆ ಬೆಳಗ್ಗೆಯಿಂದಲೇ ಬೀಗ ಹಾಕಿದ್ದಾರೆ.

    ಕ್ಷೇತ್ರ ಶಿಕ್ಷಣಾಧಿಕಾರಿ ಬಂದು ವರ್ಗಾವಣೆ ರದ್ದು ಮಾಡುವವರೆಗೂ ಶಾಲೆಗೆ ಹೋಗಲ್ಲ ಎಂದು ಪಟ್ಟು ಹಿಡಿದು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಶಿಧರ ಹಾಗೂ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ತಿರುಪತಿ ನಾಯಕ ಮುಖ್ಯ ಶಿಕ್ಷಕಿ ಅವರನ್ನು ವೈಯಕ್ತಿಕ ದ್ವೇಷದಿಂದ ವರ್ಗಾವಣೆ ಮಾಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ.

    ಮೇಡಂ ಈ ಶಾಲೆಗೆ ಬಂದು 12 ವರ್ಷಗಳಾಗಿದೆ. ಇಲ್ಲಿಯವರೆಗೂ ಈ ಶಾಲೆಯಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಈ ಮೇಡಂ ಮಕ್ಕಳಿಗೆ ಒಳ್ಳೆಯ ಪಾಠ, ನಡವಳಿಕೆ ಮತ್ತು ನಲಿಕಲಿಯನ್ನು ಕಲಿಸಿಕೊಂಡು ಬಂದಿದ್ದಾರೆ. ಈಗ ಏಕಾಏಕಿ ಮೇಡಂ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಳಗ್ಗೆ 8.30 ಕ್ಕೆ ಬಂದು ಸಂಜೆ 5 ಗಂಟೆಯವರೆಗೂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಇಂತಹ ಶಿಕ್ಷಕಿ ಮತ್ತೆ ಸಿಗುವುದಿಲ್ಲ, ಆದ್ದರಿಂದ ಈ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ಆಗ್ರಹಿಸಿ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿಗಳ ಜೊತೆ ಸೆಕ್ಸ್ ನಡೆಸಿದ್ದ 32ರ ಶಿಕ್ಷಕಿ ಅರೆಸ್ಟ್

    ವಿದ್ಯಾರ್ಥಿಗಳ ಜೊತೆ ಸೆಕ್ಸ್ ನಡೆಸಿದ್ದ 32ರ ಶಿಕ್ಷಕಿ ಅರೆಸ್ಟ್

    ಟೆಕ್ಸಾಸ್: 16 ಮತ್ತು 18ರ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ನಡೆಸಿದ್ದ 32 ವರ್ಷದ ಅಮೆರಿಕದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಲಿನ್ ಬುರ್ಜ್ ಬಂಧಿತ ಶಿಕ್ಷಕಿ. ಮ್ಯುನ್ಸ್ಟರ್ ನಗರದ ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು.

    ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಿದ್ದ ಲಿನ್ ಅವರನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮನೆಗೆ ಕರೆಸಿಕೊಳ್ಳುವ ಮುನ್ನ ವಿದ್ಯಾರ್ಥಿಗಳಿಗೆ ತನ್ನ 5 ನಗ್ನ ಫೋಟೋಗಳನ್ನು ಕಳುಹಿಸಿ, ಸೆಕ್ಸ್ ಗೆ ಪ್ರಚೋದಿಸುವ ಮೂಲಕ ಮನೆಗೆ ಬರಮಾಡಿಕೊಂಡಿದ್ದಾಳೆ. ಶಿಕ್ಷಕಿಯ ಫೋಟೋ ನೋಡಿದ ವಿದ್ಯಾರ್ಥಿಗಳು ಆಕೆ ಮನೆಗೆ ತೆರಳಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿಗಳೊಂದಿಗೆ ಬಲವಂತವಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದಾಳೆ.

    ವಿದ್ಯಾರ್ಥಿಗಳಿಗೆ ತನ್ನ ವಿವಿಧ ಭಂಗಿ ನಗ್ನ ಫೋಟೋಗಳನ್ನು ಕಳುಹಿಸುವ ಮೂಲಕ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುತ್ತಿದ್ದಳು. ಲಿನ್ ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಳು ಎಂದು ಬಾಲಕರು ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾರೆ.

    ಮನೆಗೆ ಬರುವ ವಿದ್ಯಾರ್ಥಿಗಳಿಗೆ ಮದ್ಯಪಾನ ಮಾಡಿಸಿ ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಆಕೆ ಭಾಗಿಯಾಗುತ್ತಿದ್ದಳು. ಸೆಪ್ಟೆಂಬರ್ ನಲ್ಲಿ ಆಕೆ ಸೋದರಿಯ ಹುಟ್ಟು ಹಬ್ಬದ ದಿನದಂದು ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿ ಸೆಕ್ಸ್ ನಲ್ಲಿ ಭಾಗಿಯಾಗಿದ್ದಳು ಎಂಬುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲಿನ್ ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿಗಳು ಆರೋಪಿ ಶಿಕ್ಷಕಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಲಿನ್ ಮೇಲಿರುವ ಆರೋಪ ಸಾಬೀತಾದಲ್ಲಿ ಆಕೆಗೆ 50 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ!

    ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ!

    ಲಕ್ನೋ: ಶಿಕ್ಷಕನೊಬ್ಬನ ಕ್ರೌರ್ಯಕ್ಕೆ 8 ವರ್ಷದ ವಿದ್ಯಾರ್ಥಿ ಬಲಿಯಾದ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

    ಅರ್ಬಾಜ್ (8) ಮೃತ ದುರ್ದೈವಿ. ಸಾದಿಮಾದಾನ್‍ಪುತ್ ಗ್ರಾಮದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿದ ಶಿಕ್ಷಕ ಜೈರಾಜ್ ವಿರುದ್ಧ ಮೃತ ವಿದ್ಯಾರ್ಥಿ ಪೋಷಕರು ದೂರು ನೀಡಿದ್ದಾರೆ.

    ಆಗಿದ್ದೇನು?: ಶಿಕ್ಷಕ ಜೈರಾಜ್ ಗುರುವಾರ ಅರ್ಬಾಜ್ ಮೇಲೆ ಹಲ್ಲೆ ಮಾಡಿದ್ದ. ಪರಿಣಾಮ ಅರ್ಬಾಜ್ ಅಸ್ವಸ್ಥಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಬಾಜ್ ಶುಕ್ರವಾರ ಮೃತಪಟ್ಟಿದ್ದಾನೆ. ಬಳಿಕ ಅರ್ಬಾಜ್ ಪೋಷಕರು ಶಿಕ್ಷಕ ಜೈರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಲ್. ಬಿ.ಕುಮಾರ್ ಪಾಲ್ ತಿಳಿಸಿದ್ದಾರೆ.

    ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿನಿಯರ ಎದುರೇ ಶಾಲಾ ಮುಖ್ಯೋಪಾಧ್ಯಾಯಿನಿ ಮೇಲೆ ಹಿಂದಿ ಶಿಕ್ಷಕನಿಂದ ಹಲ್ಲೆ

    ವಿದ್ಯಾರ್ಥಿನಿಯರ ಎದುರೇ ಶಾಲಾ ಮುಖ್ಯೋಪಾಧ್ಯಾಯಿನಿ ಮೇಲೆ ಹಿಂದಿ ಶಿಕ್ಷಕನಿಂದ ಹಲ್ಲೆ

    ಮಂಗಳೂರು: ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕನೊಬ್ಬ ಶಾಲಾ ಮುಖ್ಯೋಪಾಧ್ಯಾಯಿನಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

    ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದೆ. ತರಗತಿ ನಡೆಯುತ್ತಿದ್ದಾಗಲೇ ಕ್ಲಾಸಿಗೆ ಬಂದ ಮುಖ್ಯೋಪಾಧ್ಯಾಯಿನಿಗೆ ಹೊಡೆಯಲು ಮುಂದಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಹಿಂದಿ ಶಿಕ್ಷಕ ರವೀಂದ್ರ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಎದುರು ತಗಾದೆ ತೆಗೆದಿದ್ದಾರೆ ಎನ್ನಲಾಗುತ್ತಿದ್ದು, ಮಾತಿಗೆ ಮಾತು ಬೆಳೆದಿದೆ.

    ಈ ಸಂಧರ್ಭದಲ್ಲಿ ಶಿಕ್ಷಕಿ ಮೇಲೆ ಹಲ್ಲೆಗೈಯುವುದಕ್ಕಾಗಿ ದೂಡಿಕೊಂಡು ಹೋಗಿದ್ದಾರೆ. ತರಗತಿ ಕೊಠಡಿಯಲ್ಲಿಯೇ ಶಿಕ್ಷಕರು ಜಗಳ ಮಾಡಿಕೊಂಡಿದ್ದು ವಿದ್ಯಾರ್ಥಿನಿಯರನ್ನು ಬೆಚ್ಚಿ ಬೀಳಿಸಿದೆ. ಜಗಳ ತಡೆಯಲು ಬಂದ ಇತರ ಶಿಕ್ಷಕರಿಗೂ ಶಿಕ್ಷಕ ರವೀಂದ್ರ ಹಲ್ಲೆಗೆ ಮುಂದಾಗಿದ್ದಾರೆ. ಶಾಲಾ ಕೊಠಡಿಯಲ್ಲಿ ನಡೆದಿರೋ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

    ಸದ್ಯ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    ಪಾಟ್ನಾ: ಕರಾಟೆ ಹೇಳಿಕೊಡಬೇಕಾದ ಶಿಕ್ಷಕನೇ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಸಂಜೆ 4.30ರ ವೇಳೆಗೆ ನಡೆದಿದೆ. ಮುಖೇಶ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ. ಈ ಪ್ರಕರಣ ಬೆಳಕಿಗೆ ಬಂದ ಪೊಲೀಸರು ತನಿಖೆಯನ್ನು ನಡೆಸಿ ಒಂದು ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    3 ವರ್ಷದ ಬಾಲಕಿ ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮರಳಿ ಬರುತ್ತಿರುವಾಗ ಮುಖೇಶ್ ಕರಾಟೆ ಹೇಳಿಕೊಡುವುದಾಗಿ ಬಾಲಕಿಯನ್ನು ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ಕೃತ್ಯವನ್ನು ಎಸಗಿ ಅಲ್ಲಿಂದ ಪರಾರಿಯಾಗಿದ್ದ. ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ಶಿಕ್ಷಕನ ಮನೆಯಲ್ಲಿ ಬಾಲಕಿ ಪ್ರಜ್ಞಾ ತಪ್ಪಿ ಬಿದ್ದಿರುವುದನ್ನು ಗಮನಿಸಿದ್ದಾರೆ.

    ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯನ್ನು ದಾನಪುರದ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪ್ರಜ್ಞೆ ಬಂದ ಮೇಲೆ ಏನಾಯ್ತು ಎಂದು ಬಾಲಕಿಯನ್ನು ಪ್ರಶ್ನಿಸಿದಾಗ ಕರಾಟೆ ಶಿಕ್ಷಕನ ಅಸಲಿ ಮುಖ ಬಯಲಾಗಿದೆ.

    ಈ ಘಟನೆಗೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರಾಟೆ ಶಿಕ್ಷಕ ಪಾಟ್ನಾದ ಅನೇಕ ಕಡೆ ಕರಾಟೆ ತರಬೇತಿ ನೀಡುತ್ತಿದ್ದ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿದ ಶಿಕ್ಷಕ

    ವಿದ್ಯಾರ್ಥಿಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿದ ಶಿಕ್ಷಕ

    ರಾಯಚೂರು: ತುಂಟತನ ಮಾಡುತ್ತಿದ್ದ ವಿದ್ಯಾರ್ಥಿ ಎಲ್ಲೂ ಹೋಗದಂತೆ ಶಿಕ್ಷಕನೋರ್ವ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಬಂಧಿಸಿಟ್ಟಿದ್ದ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

    ಜಿಲ್ಲೆಯ ಬಡಿಬೇಸ್ ಪ್ರದೇಶದಲ್ಲಿರುವ ಮದರಸಾ ಏ ಅರಬ್ಬಿಯಾ ದಾರೂಲ್ ಉಲೂಮ್ ಮೊಹಮ್ಮದಿಯಾ ಮದರಸಾದ ಶಿಕ್ಷಕ ಆಸೀಫ್, 10 ವರ್ಷದ ಖದೀರ್ ಎನ್ನುವ ವಿದ್ಯಾರ್ಥಿ ಕಾಲಿಗೆ ಸರಪಳಿ ಹಾಕಿ ಮದರಸಾದಲ್ಲೆ ಬಂಧಿಸಿಟ್ಟಿದ್ದ. ಆದರೆ ಖದೀರ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಸರಪಳಿ ಸಹಿತ ಹೊರಗಡೆ ಬಂದಿದ್ದ.

    ರಸ್ತೆಯಲ್ಲಿ ಖದೀರ್ ನನ್ನು ನೋಡಿದ ಮುಸ್ಲಿಂ ಮುಖಂಡರು ವಿದ್ಯಾರ್ಥಿಯನ್ನು ಅಮಾನವೀಯವಾಗಿ ನೋಡಿಕೊಳ್ಳುತ್ತಿದ್ದಿರಾ ಎಂದು ಗಲಾಟೆ ಮಾಡಿ ಮದರಸಾ ಮುಖ್ಯಸ್ಥ ಹುಸೇನ್ ಬಾಷಾನನ್ನು ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಹುಸೇನ್ ಬಾಷಾ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಹಲ್ಲೆ ಆರೋಪದಲ್ಲಿ ಸೈಯದ್ ರಬ್ಬಾನಿ, ಸೈಯದ್ ಸಲೀಂ ಸೇರಿ 6 ಜನರ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಖದೀರ್ ಪೊಷಕರು ತಮ್ಮ ಮಗ ತುಂಬಾ ಕಿಟಲೇ ಮಾಡುತ್ತಿದ್ದರಿಂದ ಅವನನ್ನು ಸರಿ ಮಾಡುವಂತೆ ಶಿಕ್ಷಕರಿಗೆ ನಾವೇ ಹೇಳಿದ್ದೇವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಾಂಶುಪಾಲನ ಟಾರ್ಚರ್ ಗೆ ಸ್ಕೂಲ್ ಬಿಟ್ಟ ಶಿಕ್ಷಕಿ- ಸೀನಿಯರ್ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಿಗ್ಬಂಧನ

    ಪ್ರಾಂಶುಪಾಲನ ಟಾರ್ಚರ್ ಗೆ ಸ್ಕೂಲ್ ಬಿಟ್ಟ ಶಿಕ್ಷಕಿ- ಸೀನಿಯರ್ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಿಗ್ಬಂಧನ

    ಬೆಂಗಳೂರು: ಶಿಕ್ಷಕಿಯೊಬ್ಬರು ಪ್ರಾಂಶುಪಾಲನ ಟಾರ್ಚರ್ ನಿಂದಾಗಿ ಶಾಲೆ ಬಿಟ್ಟು, ಶಾಲೆಯ ಮುಂದೆ ಪುಟ್ಟದಾದ ಅಂಗಡಿ ಹಾಕಿಕೊಂಡು ಬದುಕು ಶುರು ಮಾಡಿದ್ದರು. ಆದರೆ ಶಿಕ್ಷಕಿಯ ಪ್ರೀತಿಯ ವಿದ್ಯಾರ್ಥಿಗಳನ್ನು ಉಪಯೋಗಿಸಿಯೇ ಪ್ರಾಂಶುಪಾಲ ಆಕೆಯ ಬದುಕಿಗೆ ಕೊಳ್ಳಿ ಇಡಲು ರೆಡಿಯಾಗಿದ್ದಾನೆ.

    ಹೊಗಸಂದ್ರದ ಆಕ್ಸ್ ಫರ್ಡ್ ಸ್ಕೂಲ್ ನ ಪ್ರಾಂಶುಪಾಲ ಸೋಮಶೇಖರ್ ಶಿಕ್ಷಕಿಗೆ ಟಾರ್ಚರ್ ಕೊಡುತ್ತಿದ್ದಾನೆ. ಈ ಶಾಲೆಯಲ್ಲಿ ಐದು ವರ್ಷದಿಂದ ವಿಜಯ ಶಿಕ್ಷಕಿಯಾಗಿದ್ದರು. ಎಲ್ಲ ಮಕ್ಕಳ ಪ್ರೀತಿಯ ಟೀಚರ್ ಕೂಡ ಆಗಿದ್ದರು. ಆದರೆ ಪ್ರಾಂಶುಪಾಲರ ಕಿರಿಕ್ ಮತ್ತು ಸಂಬಳ ಕೊಡದೆ ಸತಾಯಿಸುತ್ತಿದ್ದರಿಂದ ಶಿಕ್ಷಕ ವೃತ್ತಿ ಬಿಟ್ಟು ಸ್ಕೂಲ್ ಮುಂದೆ ಅಂಗಡಿ ಹಾಕಿಕೊಂಡಿದ್ದರು.

    ಪತಿ ನಿಧನವಾಗಿದ್ದರಿಂದ ನನ್ನ ಮಗುವನ್ನು ಸಾಕುವ ಜವಾಬ್ದಾರಿ ಇತ್ತು. ಆದರೆ ಈ ಶಾಲೆಯ ಪ್ರಾಂಶುಪಾಲ ಮತ್ತೆ ಕಾಡಲು ಶುರುಮಾಡಿದ್ದಾನೆ. ಮಧ್ಯಾಹ್ನ, ಸಂಜೆ ಶಾಲೆ ಬಿಡುವ ಸಮಯದಲ್ಲಿ ಈ ಅಂಗಡಿಯ ಮುಂದೆ ಹತ್ತು ವಿದ್ಯಾರ್ಥಿಗಳನ್ನು ಸಾಲಾಗಿ ಕಾವಲಿಗೆ ನಿಲ್ಲಿಸಿ ಅಂಗಡಿಗೆ ಯಾವ ಮಕ್ಕಳು ಬಾರದಂತೆ ತಡೆಯುವ ಕೆಲಸ ಮಾಡುತ್ತಿದ್ದಾನೆ ಎಂದು ಶಿಕ್ಷಕಿ ವಿಜಯ ಅವರು ತಿಳಿಸಿದ್ದಾರೆ.

    ನಮಗೆ ಈ ಮಿಸ್ ಕಂಡರೆ ತುಂಬಾ ಇಷ್ಟ. ಶಾಲೆ ಬಿಟ್ಟ ಮೇಲೆ ಈ ಅಂಗಡಿ ಹಾಕಿದ್ದಾರೆ. ಅದಕ್ಕೆ ಮಿಸ್ ನ ಮಾತಾನಾಡಿಸಲು ಬಂದೆ ಅಷ್ಟೆ. ಆದರೆ ಐದಾರು ಜನ ಬಂದು ನನ್ನ ಕೈ-ಕಾಲು ಹಿಡ್ಕೊಂಡು ದರ ದರನೇ ಎಳೆದುಕೊಂಡು ಹೋದರು ಎಂದು 5ನೇ ತರಗತಿಯ ಬಾಲಕಿಯೊಬ್ಬಳು ಪಬ್ಲಿಕ್ ಟಿವಿ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾಳೆ.

    ಈ ಬಗ್ಗೆ ವರದಿ ಮಾಡುವುದಕ್ಕೆ ಹೋಗಿದ್ದ ಮಾಧ್ಯಮದವರ ಕ್ಯಾಮೆರಾ ಕಿತ್ತುಕೊಳ್ಳಲು ಪ್ರಾಂಶುಪಾಲ ಮುಂದಾಗಿದ್ದಾನೆ. ಓದುವ ಮಕ್ಕಳನ್ನು ತನ್ನ ವೈಯಕ್ತಿಕ ದ್ವೇಷಕ್ಕಾಗಿ ಅಂಗಡಿ ಮುಂದೆ ಗಂಟೆಗಟ್ಟಲೆ ಕಾವಲು ನಿಲ್ಲಿಸುವ ಈ ಪ್ರಾಂಶುಪಾಲನ ವಿರುದ್ಧ ಸೂಕ್ತ ಕ್ರಮವನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೈಹಿಕ ಶಿಕ್ಷಣ ಶಿಕ್ಷಕನಿಂದ ಕಾಮ ಪಾಠ- ಅನಾಥ ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್!

    ದೈಹಿಕ ಶಿಕ್ಷಣ ಶಿಕ್ಷಕನಿಂದ ಕಾಮ ಪಾಠ- ಅನಾಥ ವಿದ್ಯಾರ್ಥಿನಿಯರೇ ಈತನ ಟಾರ್ಗೆಟ್!

    ಕಲಬುರಗಿ: ವಿದ್ಯೆ ಕೊಟ್ಟು ಪಾಠ ಕಲಿಸುವ ಶಿಕ್ಷಕನೊಬ್ಬ ಅನಾಥ ವಿದ್ಯಾರ್ಥಿನಿಯರಿಗೆ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.

    ಬಸವರಾಜ್ ಕಲಬುರಗಿಯ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಅನಾಥ ಮಕ್ಕಳೇ ಈತನ ಟಾರ್ಗೆಟ್ ಆಗಿದ್ದು, ವಿದ್ಯಾರ್ಥಿನಿಯರನ್ನು ತನ್ನ ಕೊಠಡಿಗೆ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಈತನ ಕಾಮದಾಟದಿಂದ ಬೇಸತ್ತ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಅನಾಥ ಮಕ್ಕಳು ಅಂದರೆ ಅವರಿಗೆ ಹಿಂದೆ-ಮುಂದೆ ಯಾರೂ ಇರಲ್ಲ ಎಂದುಕೊಂಡು ಕಾಮಿ ಶಿಕ್ಷಕ, ಈ ಹಿಂದೆಯೂ ಕೂಡ ಸಾಕಷ್ಟು ಅನಾಥ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಸದ್ಯ ಕಾಮುಕ ಶಿಕ್ಷಕ ಬಸವರಾಜ್ ಕಲಬುರಗಿ ಪೊಲೀಸರ ಅತಿಥಿಯಾಗಿದ್ದಾನೆ.

    ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ, ತಿದ್ದಿ ತೀಡುವ ಗುರುವಿಗೆ ಅತ್ಯುನ್ನತ ಸ್ಥಾನ ಇದೆ. ಆದರೆ ಈ ಶಿಕ್ಷಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಬಿಟ್ಟು ಕಾಮದಾಟ ಆಡುತ್ತಾ ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನದಲ್ಲಿಯೇ ಅಪ್ರಾಪ್ತನೊಂದಿಗೆ 29ರ ಶಿಕ್ಷಕಿ ಸೆಕ್ಸ್!

    ವಿಮಾನದಲ್ಲಿಯೇ ಅಪ್ರಾಪ್ತನೊಂದಿಗೆ 29ರ ಶಿಕ್ಷಕಿ ಸೆಕ್ಸ್!

    ಲಂಡನ್: 29ರ ಶಿಕ್ಷಕಿಯೊಬ್ಬಳು ಅಪ್ರಾಪ್ತ ವಿದ್ಯಾರ್ಥಿ ಜೊತೆ ವಿಮಾನದಲ್ಲಿ ಸೆಕ್ಸ್ ಮಾಡಿದ ಆರೋಪವೊಂದು ಇಂಗ್ಲೆಡ್‍ನ ಬ್ರಿಸ್ಟಲ್ ನಲ್ಲಿ ಕೇಳಿಬಂದಿದೆ.

    ಎಲೆನೋರ್ ವಿಲ್ಸನ್(29) ಅಪ್ರಾಪ್ತನೊಂದಿಗೆ ಸೆಕ್ಸ್ ಮಾಡಿದ ಶಿಕ್ಷಕಿ. ನೈತಿಕತೆ ಹೇಳಿಕೊಡುವ ಶಿಕ್ಷಕಿಯೇ ಅಪ್ರಾಪ್ತನೊಂದಿಗೆ ವಿಮಾನದಲ್ಲಿ ಸೆಕ್ಸ್ ಮಾಡಿರುವ ಸುದ್ದಿ ಕೇಳಿ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ವಿಲ್ಸನ್ ಹಾಗೂ ಅಪ್ರಾಪ್ತ ವಿದ್ಯಾರ್ಥಿ ಸ್ಕೂಲ್ ಟ್ರಿಪ್ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಿಪ್‍ಗೆ ಹೋಗಿದ್ದ ವೇಳೆ ಶಿಕ್ಷಕಿ ಹಾಗೂ ಅಪ್ರಾಪ್ತ ಒಟ್ಟಿಗೆ ಹೆಚ್ಚಿನ ಸಮಯ ಕಳೆದಿದ್ದರು. ಅಲ್ಲದೇ ವಾಪಸ್ ಆಗುತ್ತಿದ್ದ ವೇಳೆ ಇಬ್ಬರು ಮದ್ಯ ಸೇವಿಸಿದ್ದರು ಎಂದು ವರದಿಯಾಗಿದೆ.

    ವಿಲ್ಸನ್ ಮದ್ಯದ ನಶೆಯಲ್ಲಿದ್ದಾಗ ವಿದ್ಯಾರ್ಥಿಯನ್ನು ಸನ್ನೆ ಮೂಲಕ ತನ್ನ ಬಳಿ ಕರೆಸಿಕೊಂಡಳು. ಮೊದಲು ವಿಮಾನದ ಸೀಟ್‍ನಲ್ಲೇ ಇಬ್ಬರು ಹತ್ತಿರವಾದರು. ನಂತರ ಇಬ್ಬರು ವಿಮಾನದ ಶೌಚಾಲಯಕ್ಕೆ ಹೋಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದಾರೆ. ದೈಹಿಕ ಸಂಪರ್ಕ ಬೆಳೆಸಿದ ನಂತರ ಇಬ್ಬರು ಯಾರಿಗೂ ಅನುಮಾನ ಬರದಂತೆ ತಮ್ಮ ಸೀಟ್‍ನಲ್ಲಿ ಕುಳಿತುಕೊಂಡಿದ್ದಾರೆ ಎಂದು ಸುದ್ದಿ ಪ್ರಕಟವಾಗಿದೆ.

    ಟ್ರಿಪ್‍ನಿಂದ ಹಿಂತಿರುಗಿದ ನಂತರ ಇಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇಬ್ಬರು ಒಟ್ಟಿಗೆ ತಿರುಗಾಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಈ ಬಗ್ಗೆ ಶಾಲೆಯಲ್ಲಿ ದೂರು ನೀಡಿದ್ದಾರೆ. ಆದರೆ ವಿಲ್ಸನ್ ನಾನು ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿ ಕೆಲವೇ ದಿನದಲ್ಲಿ ತನ್ನ ರಾಜೀನಾಮೆ ನೀಡಿದ್ದಾಳೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ-ಶಿಕ್ಷಣ ಇಲಾಖೆಯಿಂದ ನ್ಯೂ ರೂಲ್ಸ್

    ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ-ಶಿಕ್ಷಣ ಇಲಾಖೆಯಿಂದ ನ್ಯೂ ರೂಲ್ಸ್

    ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಇನ್ಮುಂದೆ ಖಾಸಗಿ ಶಾಲೆಗಳಂತೆ ಹೈಟೆಕ್ ಸ್ಪರ್ಶ ಸಿಗಲಿದೆ. ಪ್ರೈವೇಟ್ ಶಾಲೆಗಳಂತೆ ಹೊಸ ಹೊಸ ರೂಲ್ಸ್ ತರೋದಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಮೊದಲ ಹೆಜ್ಜೆ ಇರಿಸಿದೆ.

    ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿ ಅನೇಕ ಹೊಸ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಡೈರಿಯನ್ನ ಸರ್ಕಾರಿ ಶಾಲೆಗಳಲ್ಲೂ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಡೈರಿಯಲ್ಲಿ ಮಕ್ಕಳ ಹೋಮ್ ವರ್ಕ್, ವಿದ್ಯಾರ್ಥಿ ಸಂಬಂಧಿಸಿದ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನ ಪೋಷಕರಿಗೆ ನೀಡಲಾಗುತ್ತದೆ.

    ಡೈರಿ ನೀಡುವದರಿಂದ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಪೋಷಕರಿಗೆ ಲಭ್ಯವಾಗುತ್ತದೆ. ಶಾಲೆಯ ಚಟುವಟಿಕೆಗಳ ಜೊತೆ ಮಕ್ಕಳ ಸುಧಾರಣೆಗೂ ಪೋಷಕರಿಗೆ ಸಲಹೆ ನೀಡಲು ಸಹಾಯವಾಗುತ್ತದೆ. ಖಾಸಗಿ ಶಾಲೆಗಳ ಡೈರಿಗಿಂತ ಸರ್ಕಾರಿ ಶಾಲೆಗಳ ಡೈರಿ ಕೊಂಚ ವಿಶಿಷ್ಠವಾಗಿರಲಿದೆ. ಪ್ರಮುಖ ಹಬ್ಬಗಳು, ಪ್ರಖ್ಯಾತ ವ್ಯಕ್ತಿಗಳ ಮಾಹಿತಿ, ರಜಾದಿನಗಳ ಮಾಹಿತಿ ಸೇರಿದಂತೆ ಇನ್ನಿತರ ಶೈಕ್ಷಣಿಕ ಮಾಹಿತಿಗಳು ಡೈರಿಯಲ್ಲಿ ಲಭ್ಯವಾಗಲಿದೆ.

    ಈಗಾಗಲೇ ಡೈರಿ ನೀಡುವ ಸಂಬಂಧ ಸರ್ಕಾರದ ಒಪ್ಪಿಗೆಗೆ ಕಡತವನ್ನ ಇಲಾಖೆ ಕಳಿಸಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲಾ ಮಕ್ಕಳಿಗೆ ಡೈರಿ ಭಾಗ್ಯ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv