Tag: teacher

  • 12 ವರ್ಷಗಳಿಂದ ವಾರದಲ್ಲಿ 2 ದಿನ ಶಿಕ್ಷಕನಿಂದ ಶಾಲೆಯ ಶೌಚಾಲಯ ಶುಚಿ

    12 ವರ್ಷಗಳಿಂದ ವಾರದಲ್ಲಿ 2 ದಿನ ಶಿಕ್ಷಕನಿಂದ ಶಾಲೆಯ ಶೌಚಾಲಯ ಶುಚಿ

    ಕೊಪ್ಪಳ: ವಾರದಲ್ಲಿ ಎರಡು ದಿನ ಶಾಲೆಯ ಶೌಚಾಲಯ ಶುಚಿಗೊಳಿಸುವ ಶಿಕ್ಷಕರೊಬ್ಬರು ಕೊಪ್ಪಳದಲ್ಲಿದ್ದಾರೆ.

    ಕುಕನೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಎರಡು ದಿನ ಶಾಲೆಯ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮನೆಯ ಶೌಚಾಲಯವನ್ನೇ ಶುಚಿಗೊಳಿಸಲು ಮೂಗು ಮುರಿಯೋ ಇಂದಿನ ದಿನದಲ್ಲಿ ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವ ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಮಾದರಿಯಾಗಿದ್ದಾರೆ.

    ಪ್ರತಿವಾರದಲ್ಲಿ ಎರಡು ದಿನ ತಮ್ಮ ಶಾಲೆಯ ಶೌಚಾಲಯವನನ್ನ ಖುದ್ದು ಮುಖ್ಯ ಶಿಕ್ಷಕ ವೆಂಕಪ್ಪ ಅರಕಲ್ ಶುಚಿಗೊಳಿಸುತ್ತಾರೆ. ಇದು ನಿನ್ನೆ ಮೊನ್ನೆದಲ್ಲ ಕಳೆದ 12 ವರ್ಷಗಳಿಂದ ವೆಂಕಪ್ಪ ಈ ಕಾಯಕದಲ್ಲಿ ತೊಡಗಿದ್ದಾರೆ. ಸ್ವಚ್ಛತೆ ಬಗ್ಗೆ ಭಾಷಣ ಮಾಡುವವರ ಮಧ್ಯೆ ವೆಂಕಪ್ಪ ಅರಕಲ್ ಅವರ ಈ ಮಹಾನ್ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

    ಶಾಲೆಯ ಶೌಚಾಲಯವನ್ನ ಶುಚಿಗೊಳಿಸುವುದು ನನಗೆ ಹೆಮ್ಮೆ ಹಾಗೂ ಸಂತೋಷ. ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಪಾಠ ಮಾಡಿದರೇನು ಪ್ರಯೋಜನ ನಾವು ಅದನ್ನ ಕಾರ್ಯರೂಪಕ್ಕೆ ತರಬೇಕು ಅನ್ನೋ ಉದ್ದೇಶದಿಂದ ಈ ಕಾಯಕ ಮಾಡಲಾಗುತ್ತಿದೆ ಎಂದು ಶಿಕ್ಷಕ ವೆಂಕಪ್ಪ ಅರಕಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇಂಗ್ಲಿಷ್ ಪದ್ಯ ಹೇಳಿಲ್ಲವೆಂದು 1ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ

    ಇಂಗ್ಲಿಷ್ ಪದ್ಯ ಹೇಳಿಲ್ಲವೆಂದು 1ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ

                                                                  ಸಾಂದರ್ಭಿಕ ಚಿತ್ರ

    ತುಮಕೂರು: ಇಂಗ್ಲಿಷ್ ಪದ್ಯ ಹೇಳದ ವಿದ್ಯಾರ್ಥಿಗೆ ಶಿಕ್ಷಕಿಯೋರ್ವಳು ಬೆತ್ತದಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬ್ಯಾಲ್ಯದ ಸರ್ಕಾರಿ ಶಾಲೆಯ ಶಿಕ್ಷಕಿ ಸೌಮ್ಯ ಈ ರಾಕ್ಷಸಿ ಪ್ರವೃತ್ತಿ ತೋರಿದ್ದಾಳೆ. ಒಂದನೇ ತರಗತಿ ವಿದ್ಯಾರ್ಥಿ ಇಂಗ್ಲಿಷ್ ಪದ್ಯ ಹೇಳಲು ಹಾಗೂ ಇಂಗ್ಲಿಷ್ ಅಕ್ಷರ ಬರೆಯಲು ತಡವರಿಸಿದ್ದಾನೆ.

    ಇದರಿಂದ ಕೋಪಗೊಂಡ ಶಿಕ್ಷಕಿ ಬಾಲಕಿಗೆ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಪರಿಣಾಮ ಬಾಲಕನ ಮೈಯಲ್ಲಿ ವಿಪರೀತ ಬಾಸುಂಡೆ ಎದ್ದಿದೆ. ಶಾಲೆಯಿಂದ ಮನೆಗೆ ವಾಪಸ್ ಬಂದ ನಂತರ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಆಗ ಶಿಕ್ಷಕಿ ಸೌಮ್ಯಾಳ ಕೃತ್ಯವನ್ನು ಪೋಷಕರು ಖಂಡಿಸಿದ್ದಾರೆ.

    ಸದ್ಯ ಗಾಯಗೊಂಡ ಬಾಲಕನಿಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಜಕೀಯಕ್ಕೆ ಪ್ರವೇಶಿಸಿದ್ದಾಗ ಶಿಷ್ಯ ಅನಂತ್‍ಗೆ ಒಂದು ಸಂದೇಶ ಕಳುಹಿಸಿದ್ದೆ- ಶಿಕ್ಷಕಿ ಸುಜ್ಞಾನಮ್ಮ

    ರಾಜಕೀಯಕ್ಕೆ ಪ್ರವೇಶಿಸಿದ್ದಾಗ ಶಿಷ್ಯ ಅನಂತ್‍ಗೆ ಒಂದು ಸಂದೇಶ ಕಳುಹಿಸಿದ್ದೆ- ಶಿಕ್ಷಕಿ ಸುಜ್ಞಾನಮ್ಮ

    ಬೆಂಗಳೂರು: ಅನಂತ ಕುಮಾರ್ ರಾಜಕೀಯಕ್ಕೆ ಪ್ರವೇಶಿಸಿದ್ದಾಗ ನಾನು ಆತನಿಗೆ ಒಂದು ಸಂದೇಶ ಕಳುಹಿಸಿದೆ ಎಂದು ಅವರ ಶಿಕ್ಷಕರಾದ ಸುಜ್ಞಾನಮ್ಮ ಅವರು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

    ಶಿಕ್ಷಕಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು ಹೀಗೆ
    ಅನಂತ ಅವರಿಗೆ ನಾನು 4ನೇ ತರಗತಿಯಿಂದ 7ನೇ ತರಗತಿವರೆಗೂ ಶಿಕ್ಷಕಿಯಾಗಿದ್ದೆ. ಆದರೆ 4ನೇ ತರಗತಿಯಲ್ಲಿ ನಾನು ಕ್ಲಾಸ್ ಟೀಚರ್ ಆಗಿದ್ದೆ. 7ನೇ ತರಗತಿವರೆಗೂ ಭಾಷಾ ವಿಷಯವನ್ನು ಹೇಳಿಕೊಡುತ್ತಿದ್ದೆ.

    ಅನಂತ ತುಂಟ ಬಾಲಕನಾಗಿದ್ದ. ಪ್ರತಿಭಾವಂತನಾಗಿದ್ದ ಅನಂತ್ ಉತ್ತಮ ವಾಕ್ ಚಾತುರ್ಯವನ್ನು ಸಹ ಹೊಂದಿದ್ದ. ಅಲ್ಲದೇ ಎಲ್ಲ ವಿಷಯದಲ್ಲೂ ಜವಾಬ್ದಾರಿಯಿಂದ ಮುಂದುವರಿಯಬೇಕೆಂಬ ಭಾವನೆ ಅವನಿಗೆ ಇತ್ತು.

    7ನೇ ತರಗತಿ ನಂತರ ಅನಂತ ನಮ್ಮ ಸಂಪರ್ಕಕ್ಕೆ ಇದ್ದನು. ಅನಂತ್‍ಗೆ ಶಿಕ್ಷಕರೆಂದರೆ ಬಹಳ ಭಕ್ತಿ. ಅಲ್ಲದೇ ನಾನು ಕಾಲೇಜಿಗೆ ಹೋಗುತ್ತಿದ್ದೇನೆ. ಈ ವಿಷಯ ತೆಗೆದುಕೊಂಡಿದ್ದೀನಿ ಎಂದು ನನ್ನ ಹತ್ತಿರ ಬಂದು ಹೇಳುತ್ತಿದ್ದನು. ಅನಂತ ತನ್ನ ಮಗಳ ಮದುವೆಯ ಆಮಂತ್ರಣ ಕಳುಹಿಸಿ ವಿದ್ಯಾರ್ಥಿಯಾದ ನನಗೆ ನನ್ನ ಶಿಕ್ಷಕರನ್ನು ಕರೆತರುವುದು ನನ್ನ ಜವಾಬ್ದಾರಿ ಎಂದಿದ್ದ. ಆಗ ನಾನು ಅಷ್ಟು ದೂರ ಬರುವುದಿಲ್ಲ. ನಾನು ಇಲ್ಲಿಂದನೇ ಅವರಿಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದೆ. ಪಬ್ಲಿಕ್ ಮೀಟಿಂಗ್‍ನಲ್ಲಿ ಗೆಳೆಯರನ್ನು ಭೇಟಿಯಾದಾಗ ಸುಜ್ಞಾನಮ್ಮ ಟೀಚರ್ ಹೇಗಿದ್ದಾರೆ ಎಂದು ಕೇಳುತ್ತಿದ್ದನು.

    ಅನಂತ ಸಾವಿನ ದುಃಖವನ್ನು ಯಾರೂ ತಂದುಕೊಡುತ್ತಾರೆ. ಅನಂತನನ್ನು ಯಾರೂ ತಂದುಕೊಡುತ್ತಾರೆ. ಆ ದುಃಖಗಿಂತ ಬೇರೆ ಯಾವ ದುಃಖನೂ ಇಲ್ಲ. ಒಂದು ಪಕ್ಷದ ಶಕ್ತಿ, ಹೆತ್ತವರು, ಶಿಕ್ಷಕರು ಹೆಮ್ಮೆ ಪಡುವಂತಹ ವ್ಯಕ್ತಿ ಇಂದು ಕಣ್ಮರೆಯಾದನು. ಈಗೀಗ ನಾನು ಆತನ ಭಾಷಣವನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದೇನೆ. ನಾನು ಯಾವಾಗಲೂ ಆಫೀಸ್ ಒಳಗಡೆ ಸೈನ್ ಮಾಡಿ ಬರುವರೆಗೆ ಎಲ್ಲ ಹುಡುಗರನ್ನು ಮೌನವಾಗಿ ಕುಳಿತಿಕೊಳ್ಳುವಂತೆ ನೋಡುತ್ತಿದ್ದ.

    ಆಟದಲ್ಲಿ ಬಹಳ ತುಂಟನಾಗಿದ್ದ. ಆಟದಲ್ಲಿ ಸೋತರೂ ಗೆದ್ದಿದ್ದೇನೆ ಎಂದು ಹೇಳುತ್ತಿದ್ದ. ಮತ್ತೆ ಆಡಿಸಿ ಎಂದು ಹೇಳುತ್ತಿದ್ದ.

    ನಾನು ಅವನ ಮಗಳ ಮದುವೆಗೆ ಹೋಗಿರಲಿಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಕೊನೆಯದಾಗಿ ಅವನನ್ನು ಭೇಟಿ ಮಾಡಿದ್ದೆ. ನನಗೆ ಅವನ ರಾಜಕೀಯ ಮಾತುಗಳು ನೆನಪು ಬರುತ್ತೆ ಹೊರತು ಆತ ಆಡುವ ಮಾತು ಈಗ ನೆನಪಿಗೆ ಬರುವುದಿಲ್ಲ. ಅನಂತ ರಾಜಕೀಯಕ್ಕೆ ಹೋಗುತ್ತಾನೆ ಎಂದು ಅಂದುಕೊಂಡಿರಲಿಲ್ಲ. ಆರಂಭದಲ್ಲಿ ನಾನು ಇವನಿಗೆ ರಾಜಕೀಯ ಯಾಕೆ ಬೇಕು? ಸುಮ್ಮನೆ ಒಂದು ಉದ್ಯೋಗ ಮಾಡಿ ಆರಾಮಾಗಿ ಇರಬೇಕಿತ್ತು ಎಂದು ಯೋಚಿಸುತ್ತಿದ್ದೆ.

    ಅವನು ರಾಜಕೀಯಕ್ಕೆ ಹೋದಾಗ ನಾನು ಒಂದು ಸಂದೇಶ ಕಳುಹಿಸಿದೆ. ಅಪ್ಪಾ ನೀನು ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಚಿಂತೆ ಇಲ್ಲ ನ್ಯಾಯವಾಗಿ ನಡೆದುಕೋ ಮತ್ತು ಬಡವರ ಬಗ್ಗೆ ದಯೆಯಿರಲಿ ಎಂದು ಹೇಳಿ ಇದೇ ಆಶೀರ್ವಾದ ಎಂಬ ಸಂದೇಶ ನೀಡಿದ್ದೆ. ನಾನು ರಾಜಕೀಯದ ಬಗ್ಗೆ ಅವನ ಜೊತೆ ಏನೂ ಮಾತನಾಡಿರಲಿಲ್ಲ. ಹೇಗಿದ್ದೀಯಾ, ಟೆನ್ಷನ್ ಕಡಿಮೆ ಮಾಡಿಕೋ ಎಂದು ಹೇಳುತ್ತಿದ್ದೆ. ಮುಂದೊಂದು ದಿನ ಆತ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗುತ್ತಾನೆ ಎಂದು ನಾನು ಕನಸು ಕಂಡಿದ್ದೆ.

    https://www.youtube.com/watch?v=xxwg0hAKlXU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅತ್ತಿತ್ತ ನೋಡಿ ಕ್ಲಾಸ್‍ರೂಮ್‍ನಲ್ಲಿ ಶಿಕ್ಷಕ, ಶಿಕ್ಷಕಿ ಲಿಪ್‍ಲಾಕ್-ವಿಡಿಯೋ ವೈರಲ್

    ಅತ್ತಿತ್ತ ನೋಡಿ ಕ್ಲಾಸ್‍ರೂಮ್‍ನಲ್ಲಿ ಶಿಕ್ಷಕ, ಶಿಕ್ಷಕಿ ಲಿಪ್‍ಲಾಕ್-ವಿಡಿಯೋ ವೈರಲ್

    ಗಾಂಧಿನಗರ: ಶಿಕ್ಷಕ ಮತ್ತು ಶಿಕ್ಷಕಿ ಇಬ್ಬರು ಶಾಲೆಯ ಕೊಠಡಿಯೊಳಗೆ ಕಿಸ್ ಮಾಡಿ ಅಶ್ಲೀಲವಾಗಿ ವರ್ತಿಸಿರುವ ಘಟನೆ ಗುಜರಾತ್ ವಡೋದರಾದಲ್ಲಿ ನಡೆದಿದೆ.

    ಈ ಘಟನೆ ವಡೋದರಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯರು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ವ್ಯಾಸ್ ಅವರಿಗೆ ದೂರು ನೀಡಿದ್ದಾರೆ. ದೂರಿನ ಜೊತೆ ಸ್ಥಳೀಯರು ವಿಡಿಯೋವನ್ನು ಅಧಿಕಾರಿಗೆ ನೀಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಶಾಲಾ ಕೊಠಡಿಯಲ್ಲಿ ಯಾರು ಇಲ್ಲದ ವೇಳೆ ಶಿಕ್ಷಕ ಮತ್ತು ಶಿಕ್ಷಕಿಯೊಬ್ಬರು ಪರಸ್ಪರ ಕಿಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕ ಅಶ್ಲೀಲವಾಗಿ ವರ್ತಿಸಿ ಶಿಕ್ಷಕಿಯನ್ನು ಅಪ್ಪಿಕೊಂಡಿದ್ದಾನೆ. ಇದನ್ನು ಯಾರೋ ಒಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಈಗ ಆ ವಿಡಿಯೋ ವೈರಲ್ ಆಗಿದೆ.

    ಸ್ಥಳೀಯರು ಶಿಕ್ಷಕರು ಹೆಸರನ್ನು ತಿಳಿಸಿದ್ದಾರೆ. ಆದರೆ ವಿಡಿಯೋದಲ್ಲಿ ಅವರ ಮುಖಗಳನ್ನು ಸ್ಪಷ್ಟವಾಗಿ ಕಾಣದ ಪರಿಣಾಮ ಶಿಕ್ಷಕರನ್ನು ಯಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ರೂಮಿನಲ್ಲಿ ಮೊಬೈಲ್ ಫೋನನ್ನು ರಹಸ್ಯವಾಗಿ ಇಟ್ಟು ರೆಕಾರ್ಡ್ ಮಾಡಿರಬಹುದು ಎಂದು ವ್ಯಾಸ್ ಹೇಳಿದ್ದಾರೆ.

    ಸದ್ಯಕ್ಕೆ ಈ ವಿಡಿಯೋವನ್ನು ಆಧರಿಸಿ ತಾಲೂಕು ಪ್ರಾಥಮಿಕ ಶಿಕ್ಷಣ ಅಧಿಕಾರಿ ವಿಚಾರಣೆ ನಡೆಸಿ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವುದಾಗಿ ವ್ಯಾಸ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿನಿಯ ಮೈ-ಕೈ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    ವಿದ್ಯಾರ್ಥಿನಿಯ ಮೈ-ಕೈ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಬಂದಕುಂಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈಗ ಶಾಲೆಯಿಂದ ಅಮಾನತುಗೊಂಡಿದ್ದಾನೆ.

    ದಾಧಾಫೀರ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಅಮಾನತಾದ ಶಿಕ್ಷಕ. ಈತ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ತರಗತಿ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಹೋಗಿ ಆಕೆಯ ಮೈ-ಕೈ ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೇ ಮಾತನಾಡಬೇಕು ಹೊರಗಡೆ ಹೋಗೋಣ ಬಾ ಎಂದು ಕರೆಯುತ್ತಿದ್ದನು ಎಂದು ತಿಳಿದು ಬಂದಿದೆ.

    ಶಿಕ್ಷಕನ ಕಿರುಕುಳ ತಾಳಲಾಗದೆ ವಿದ್ಯಾರ್ಥಿನಿ ಕಳೆದ 15 ದಿನಗಳಿಂದ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಮನೆಯಲ್ಲಿ ಮಂಕಾಗಿ ಕುಳಿತ್ತಿದ್ದ ಮಗಳನ್ನು ನೋಡಿ ಪೋಷಕರು ಅನುಮಾನಗೊಂಡು ವಿಚಾರಣೆ ಮಾಡಿದಾಗ ಶಿಕ್ಷಕನ ಕಿರುಕುಳ ಬೆಳಕಿಗೆ ಬಂದಿದೆ.

    ಶಿಕ್ಷಕನ ಬಗ್ಗೆ ತಿಳಿದ ಪೋಷಕರು ಬಿಇಓಗೆ ದೂರು ಸಲ್ಲಿಸಿದ್ದಾರೆ. ಪೋಷಕರು ದೂರು ನೀಡಿದ ಬಳಿಕ ಬಿಇಓ ವಿಜಯಕುಮಾರ್ ಅವರು ಶಾಲೆಗೆ ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಬಳಿಕ ಆರೋಪಿ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದಾರೆ.

    ಈ ಘಟನೆ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೀತಿ ತಿರಸ್ಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಬ್ಲೇಡ್‍ನಿಂದ ಹಲ್ಲೆಗೈದ ಶಿಕ್ಷಕ!

    ಪ್ರೀತಿ ತಿರಸ್ಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಬ್ಲೇಡ್‍ನಿಂದ ಹಲ್ಲೆಗೈದ ಶಿಕ್ಷಕ!

    ಹೈದರಾಬಾದ್: 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಹಿಂದಿ ಶಿಕ್ಷಕನೊಬ್ಬ ಬ್ಲೇಡ್‍ನಿಂದ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆಯ ಬಂಗರುಪೇಟಾ ಪ್ರದೇಶದಲ್ಲಿರುವ ರಾಕ್ವೆಲ್ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಂಕರ್ ಈ ಕೃತ್ಯವನ್ನು ಎಸಗಿದ್ದಾನೆ. ವಿದ್ಯಾರ್ಥಿನಿ ತನ್ನನ್ನು ತಿರಸ್ಕರಿಸಿದ್ದಕ್ಕಾಗಿ ಶಂಕರ್ ಆಕೆಯ ಮನೆಯಲ್ಲೇ ಹಲ್ಲೆ ಮಾಡಿದ್ದಲ್ಲದೇ ಅವಳ ಗಂಟಲನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ. ಈ ಸಮಯದಲ್ಲಿ ಆಕೆ ಜೋರಾಗಿ ಕಿರುಚುಕೊಂಡಿದ್ದಾಳೆ.

    ವಿದ್ಯಾರ್ಥಿನಿಯ ಕಿರುಚಾಟವನ್ನು ಆಲಿಸಿದ ಸ್ಥಳೀಯರು ಬಂದು ವಿದ್ಯಾರ್ಥಿಯನ್ನು ಕಾಮುಕ ಶಿಕ್ಷಕನಿಂದ ರಕ್ಷಣೆ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಮರಕ್ಕೆ ಕಟ್ಟಿ ಸ್ಥಳೀಯರೇ ಥಳಿಸಿದ್ದಾರೆ. ಘಟನೆಯ ನಂತರ ಸ್ಥಳೀಯರೇ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿ ಆರೋಪಿ ಶಂಕರ್ ನನ್ನು ಒಪ್ಪಿಸಿದ್ದಾರೆ.

    ಆರೋಪಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ಈಗ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಥಳಿತದಿಂದ ಗಾಯಗೊಂಡಿದ್ದ ಆರೋಪಿ ಶಂಕರ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯ ಬಳಿಕ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಗಾಂತ ಶ್ರೀನಿವಾಸರಾವ್ ಶಂಕರ್ ನನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ: ಪೊಲೀಸರಿಂದ ಬಾಲಕಿ ರಕ್ಷಣೆ

    ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ: ಪೊಲೀಸರಿಂದ ಬಾಲಕಿ ರಕ್ಷಣೆ

    ಚಿಕ್ಕೋಡಿ: ಪ್ರೌಢಶಾಲಾ ಅತಿಥಿ ಶಿಕ್ಷಕ ಅಪಹರಿಸಿದ್ದ ವಿದ್ಯಾರ್ಥಿನಿಯನ್ನು ಯಮಕನಮರಡಿ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಗುಟಗುದ್ದಿ ಗ್ರಾಮದ ಹೈಸ್ಕೂಲ್ ವಿದ್ಯಾರ್ಥಿನಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿ ಅಪಹರಣಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿ ಆರತಿ(ಹೆಸರು ಬದಲಾಯಿಸಲಾಗಿದೆ)ಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಅಪಹರಣ ಮಾಡಿದ್ದ ಅತಿಥಿ ಶಿಕ್ಷಕ ಸಿದ್ರಾಯ ಲಕ್ಷ್ಮಣ ನಿಂಗರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಗುಟಗುದ್ದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಸಿದ್ರಾಯ ಲಕ್ಷ್ಮಣ ನಿಂಗರಾಯಿ (34), ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರತಿಯನ್ನು ಅಕ್ಟೋಬರ್ 30 ರಂದು ಕಿಡ್ನಾಪ್ ಮಾಡಿದ್ದ. ಈ ಸಂಬಂಧ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದರು.

    ದೂರಿನಲ್ಲಿ ಏನಿತ್ತು?
    ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದರು. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೆ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ವಿದ್ಯಾರ್ಥಿನಿಯ ತಂದೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದರು.

    ಪತ್ತೆಯಾಗಿದ್ದು ಹೇಗೆ?
    ಪೊಲೀಸರು ವಿದ್ಯಾರ್ಥಿನಿ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿನಿ ತಂದೆಯ ದೂರಿನ ಹಿನ್ನೆಲೆಯಲ್ಲಿ, ಅತಿಥಿ ಶಿಕ್ಷಕ ಸಿದ್ರಾಯಿ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಿದ್ರಾಯಿಯ ಫೋನ್ ನಂಬರ್ ಚೆಕ್ ಮಾಡಿದ್ದಾರೆ. ಟವರ್ ಪರಿಶೀಲನೆ ವೇಳೆ ಲೋಕೇಶನ್ ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿರುವುದು ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಕಾಟಹಳ್ಳಿ ಗ್ರಾಮಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೌಢ ಶಾಲಾ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ

    ಪ್ರೌಢ ಶಾಲಾ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ

    ಬೆಳಗಾವಿ: ಪ್ರೌಢಶಾಲಾ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

    ಸಿದ್ರಾಮ ಲಕ್ಷ್ಮಣ ನಿಂಗರಾಯ(28) ವಿದ್ಯಾರ್ಥಿನಿಯನ್ನು ಅಪಹರಿಸಿದ ಶಿಕ್ಷಕ. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಶಿಕ್ಷಕ ಪರಾರಿಯಾಗಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಅವರ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ.

    ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೂ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಕೊನೆಗೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ವಿದ್ಯಾರ್ಥಿನಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.

    ಈ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘Good Touch, Bad Touch’ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಕಿರುಕುಳ

    ‘Good Touch, Bad Touch’ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಕಿರುಕುಳ

    ಮುಂಬೈ: ಇಂಗ್ಲಿಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಹೇಳಿಕೊಡುವುದಾಗಿ ನಾಲ್ವರು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಹದಾಪ್ಸರ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಶಿಕ್ಷಕನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಕಳೆದ 5 ತಿಂಗಳಿನಿಂದ 9ನೇ ತರಗತಿಯ ನಾಲ್ವರು ಬಾಲಕರನ್ನು ವಿವಿಧ ಸಂದರ್ಭದಲ್ಲಿ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಶಾಲೆಯಲ್ಲಿ ‘ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ ಎಂಬ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿತ್ತು, ಈ ಕಾರ್ಯಕ್ರಮದಲ್ಲಿ ಆರೋಪಿಯೂ ಕೂಡ ಭಾಗಿಯಾಗಿದ್ದನು. ಶಿಕ್ಷಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಬಂಧಿತ ಶಿಕ್ಷಕ ಕಳೆದ ಏಳು ವರ್ಷಗಳಿಂದ ಈ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳಿಂದ ಹೇಳಿಕೆಯನ್ನು ಪಡೆಯಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ನೀಡಿದ ದೂರನ್ನು ಆಧಾರಿಸಿ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಶೀಘ್ರವೇ ಆತನನ್ನು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸುನಿಲ್ ತಂಬೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಡ್‍ನಿಂದ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ಕ್ಲಾಸ್ ವಿದ್ಯಾರ್ಥಿ

    ರಾಡ್‍ನಿಂದ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ಕ್ಲಾಸ್ ವಿದ್ಯಾರ್ಥಿ

    ನವದೆಹಲಿ: 8ನೇ ತರಗತಿ ವಿದ್ಯಾರ್ಥಿ ಕಬ್ಬಿಣದ ರಾಡ್‍ನಿಂದ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಸಾಕೇತ್ ಎಂಬಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಪ್ರಕರಣದ ಬಳಿಕ ಭಯಭೀತನಾದ ವಿದ್ಯಾರ್ಥಿ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದನು. ಸದ್ಯ ಹಲ್ಲೆಗೊಳಗಾಗಿರುವ ಶಿಕ್ಷಕರನ್ನು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸುಂದರ್, ವಿದ್ಯಾರ್ಥಿಯಿಂದ ಹಲ್ಲೆಗೊಳಾಗದ ಶಿಕ್ಷಕ. ಇಂದು ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿ ಮೇಲೆ ಹಾಜರಾತಿ ವಿಷಯದಲ್ಲಿ ಗರಂ ಆಗಿದ್ದರು. ಶಾಲೆಗೆ ಪದೇ ಪದೇ ಗೈರಾಗುತ್ತಿರೋದ್ರಿಂದ ವಿದ್ಯಾರ್ಥಿ ಮೇಲೆ ಶಿಕ್ಷಕರು ಸಹಜವಾಗಿಯೇ ಕೋಪಗೊಂಡಿದ್ದರು.

    ಇದೇ ವೇಳೆ ವಿದ್ಯಾರ್ಥಿಯ ಬ್ಯಾಗ್ ಚೆಕ್ ಮಾಡುವಾಗ ಪುಸ್ತಕಗಳ ಮಧ್ಯೆ ಕಬ್ಬಿಣದ ರಾಡ್ ಸಿಕ್ಕಿದೆ. ಅನುಮಾನಗೊಂಡ ಶಿಕ್ಷಕರು ನಿನ್ನ ಬಳಿ ರಾಡ್ ಎಲ್ಲಿಂದ ಬಂತು ಪ್ರಶ್ನಿಸಿ ರಾಡ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೇಬಲ್ ಮೇಲೆ ಇಟ್ಟ ರಾಡ್ ತೆಗೆದುಕೊಳ್ಳುವಾಗ ಶಿಕ್ಷಕರು ಆತನನ್ನು ತಡೆದಿದ್ದ ಸಂದರ್ಭದಲ್ಲಿ ಅದರಿಂದಲೇ ಹಲ್ಲೆ ಮಾಡಿ ವಿದ್ಯಾರ್ಥಿ ಪರಾರಿಯಾಗಿದ್ದಾನೆ.

    ಇಂದು ಬೆಳಗ್ಗೆ ಸುಮಾರು 9.30ಕ್ಕೆ ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡುವಾಗ ರಾಡ್ ದೊರೆತಿದೆ. ಕೂಡಲೇ ಶಿಕ್ಷಕ ಸುಂದರ್ ರಾಡ್ ವಶಕ್ಕೆ ಪಡೆದು ಟೇಬಲ್ ಮೇಲಿಟ್ಟು ಪಾಠ ಆರಂಭಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಶಿಕ್ಷಕರಿಗೆ ಗೊತ್ತಾಗದಂತೆ ಮತ್ತೆ ರಾಡ್ ತೆಗೆದುಕೊಂಡು ಬ್ಯಾಗ್‍ನಲ್ಲಿ ಇಟ್ಟುಕೊಂಡಿದ್ದಾನೆ. ಶಿಕ್ಷಕ ಸುಂದರ್ ವಿದ್ಯಾರ್ಥಿಯ ಬ್ಯಾಗ್ ಪಡೆಯಲು ಮುಂದಾದಾಗ ಅದೇ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಸುಂದರ್ ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸುಂದರ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv