Tag: teacher

  • ವಿದ್ಯಾರ್ಥಿಗಳಿಗೆ ಥಳಿಸಿದ್ದಕ್ಕೆ ಶಿಕ್ಷಕ ಅಮಾನತು

    ವಿದ್ಯಾರ್ಥಿಗಳಿಗೆ ಥಳಿಸಿದ್ದಕ್ಕೆ ಶಿಕ್ಷಕ ಅಮಾನತು

    ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಚಿತ್ತಾಪುರದ ಮೊರಾರ್ಜಿ ಶಾಲೆಯ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.

    ಮಂಜುನಾಥ್ ಅಮಾನತುಗೊಂಡ ಶಿಕ್ಷಕ. ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳು ಕುಡಿದ ಎಂಜಲು ನೀರನ್ನು ವಾಪಸ್ ಫಿಲ್ಟರ್‍ಗೆ ಹಾಕಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ್ ಮಕ್ಕಳನ್ನು ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಿಕ್ಷಕರು ಈರೀತಿ ಮಕ್ಕಳಿಗೆ ಮನಬಂದತೆ ಹೊಡೆಯುವುದು ಸರಿಯಲ್ಲ ಎಂದು ಮಂಜುನಾಥ್ ವಿರುದ್ಧ ಗಾಯಗೊಂಡ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೇಜವಾಬ್ದಾರಿ ವರ್ತನೆ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 50ಕ್ಕೂ ಹೆಚ್ಚು ಮಕ್ಕಳಿದ್ದಲ್ಲಿ ಈಗ 3 ವಿದ್ಯಾರ್ಥಿಗಳು- ಇದು ಬಂಡೆಮ್ಮ ಸರ್ಕಾರಿ ಶಾಲೆಯ ಕಥೆ

    50ಕ್ಕೂ ಹೆಚ್ಚು ಮಕ್ಕಳಿದ್ದಲ್ಲಿ ಈಗ 3 ವಿದ್ಯಾರ್ಥಿಗಳು- ಇದು ಬಂಡೆಮ್ಮ ಸರ್ಕಾರಿ ಶಾಲೆಯ ಕಥೆ

    ಗದಗ: ಜಿಲ್ಲೆಯ ನರಗುಂದ ತಾಲೂಕಿನ ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹೇಳೋಕೆ ಸರ್ಕಾರಿ ಶಾಲೆಯಾದ್ರು ಇಲ್ಲಿ ಇರೋದು ಮಾತ್ರ ಕೇವಲ 3 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ.

    ಹೌದು, ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓರ್ವ ಶಿಕ್ಷಕನಿದ್ದು ಕೇವಲ 3 ಜನ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕ ಎಚ್.ಎಸ್ ಸುಂಕದ ಈ ಮೂರು ಮಕ್ಕಳ ಪೋಷಕರನ್ನು ಕಾಡಿ, ಬೇಡಿ, ಕರೆತರುತ್ತಾರೆ. ನರಗುಂದ ಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿರುವ ಬಂಡೆಮ್ಮ ನಗರದಲ್ಲಿ 50 ಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಈಗ ಶಾಲೆಗೆ ಬರೋ ಮಕ್ಕಳಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದು, ಅಕ್ಷರಶಃ ಬಂಡೆಮ್ಮನಗರದ ಪ್ರಾಥಮಿಕ ಶಾಲೆ ಅನಾಥವಾಗಿದೆ.

    ನಾನೊಬ್ಬ ಪದವಿಧರನಾಗಿ ನನ್ನಲ್ಲಿರುವ ಜ್ಞಾನವನ್ನ ಮಕ್ಕಳಿಗೆ ಹೇಳಬೇಕೆಂಬ ಆಸೆ, ಆದ್ರೆ ಈ ಶಾಲೆಗೆ ಮಕ್ಕಳೇ ಬರೋದಿಲ್ಲ. ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರು ಪ್ರಯೋಜವಾಗ್ತಿಲ್ಲ. ಸುಖಾ ಸುಮ್ಮನೇ ತಿಂಗಳ ಸಂಬಳ ಪಡೆಯೋಕೆ ಮನಸ್ಸು ಒಪ್ಪುತ್ತಿಲ್ಲ ಅಂತ ಶಾಲೆಯ ಶಿಕ್ಷಕ ಎಚ್.ಎಸ್ ಸುಂಕದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

    ಇನ್ನು ಗದಗ ಜಿಲ್ಲೆಯ ಬಂಡೆಮ್ಮ ನಗರದಲ್ಲಿ 2000 ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ತೆರೆಯಲಾಯಿತು. ಮೊದ ಮೊದಲು 50 ಕ್ಕೂ ಹೆಚ್ಚು ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಗ 3+1 ಅನ್ನೊ ಹಾಗೆ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಶಾಲೆಯಲ್ಲಿ 1 ರಿಂದ 5 ತರಗತಿ ಇದ್ದು, 1ನೇ ಕ್ಲಾಸ್ ಅಪ್ಸಾನಾ, 2ನೇ ಕ್ಲಾಸ್ ಸುಭಾಷ್ ಕುಳಗೇರಿ, 5 ನೇ ಕ್ಲಾಸ್ ಕೌಸರ್ ಬಾನು ಎಂಬ ಮೂವರು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ.

    ಶಾಲೆಯಲ್ಲಿ ಇರೋ ಮೂರು ಮಕ್ಕಳಲ್ಲಿ ಕೆಲವೊಮ್ಮೆ ಯಾವೊಂದು ಮಗುವೂ ತರಗತಿಗೆ ಹಾಜರಾಗಲ್ಲ. ಆ ವೇಳೆ ಶಿಕ್ಷಕ ಒಬ್ಬನೆ ಕಾಲ ಕಳೆಯಬೇಕು. ಬಿಸಿಯೂಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇಲ್ಲಿ ಮರಿಚಿಕೆಯಾಗಿವೆ. ಈಗ ಬಂಡೆಮ್ಮ ನಗರದ ಸರ್ಕಾರಿ ಶಾಲೆಗೆ ಮುಚ್ಚುವ ಭೀತಿ ಎದುರಾಗಿದೆ. ಇನ್ನು ಏನ್ ಸರ್ ಈ ಶಾಲೆಯ ಕಥೆ. ಸಮಸ್ಯೆ ಪರಿಹರಿಸೋಕೆ ಏನ್ ಮಾಡ್ತೀರಾ ಅಂತ ಡಿಡಿಪಿಐ ಅವರನ್ನು ಕೇಳಿದ್ರೆ, ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ನೋಡೋಣ ಅಧಿಕಾರಿಗಳೊಂದಿಗೆ ಮಾತನಾಡುತ್ತೀನಿ ಅಂತ ಶಿಕ್ಷಣ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ.

    ಶಾಲೆಯಲ್ಲಿ ನಿತ್ಯ ಕೇಳಿಬರಬೇಕಿದ್ದ ಚಿಣ್ಣರ ಕಲರವ ಇಲ್ಲಿ ಮಾಯವಾಗಿದೆ. ಇಲ್ಲಿ ಶಿಕ್ಷಕರ ಪಾಠ ನಿಂತು ಹೋಗಿವೆ. ಶಾಲಾ ಕಟ್ಟಡವೀಗ ವಿಷಾದ ತುಂಬಿದ ಸೌಧದಂತಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲೇ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಚಪ್ಪಲಿ ಏಟು ಕೊಡಲು ಮುಂದಾದ ವಿದ್ಯಾರ್ಥಿನಿ

    ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕನಿಗೆ ಚಪ್ಪಲಿ ಏಟು ಕೊಡಲು ಮುಂದಾದ ವಿದ್ಯಾರ್ಥಿನಿ

    -ಕಾಮುಕ ಶಿಕ್ಷಕನ ಕಾಟವನ್ನ ಗ್ರಾಮಸ್ಥರ ಮುಂದೆ ತೆರೆದಿಟ್ಲು

    ಕೋಲಾರ: ಅಸಭ್ಯವಾಗಿ ತರಗತಿಯಲ್ಲಿ ವರ್ತಿಸಿದ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಚಪ್ಪಲಿಯಿಂದ ಹೊಡೆಯಲು ಮುಂದಾದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟದಲ್ಲಿ ನಡೆದಿದೆ.

    ಆಲವಾಟ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣಪ್ಪ ಅಸಭ್ಯವಾಗಿ ವಿದ್ಯಾರ್ಥಿನಿಯರ ಜೊತೆಗೆ ವರ್ತಿಸಿದ ಇಂಗ್ಲೀಷ್ ಶಿಕ್ಷಕ. ಕೃಷ್ಣಪ್ಪ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಕುರಿತು ವಿದ್ಯಾರ್ಥಿನಿಯರ ಪೋಷಕರಿಗೆ ಇಂದು ದೂರಿದ್ದಾರೆ. ಶಾಲೆಗೆ ಬಂದ ಪೋಷಕರು ಕಾಮುಕ ಶಿಕ್ಷಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಯಾವ ರೀತಿಯ ಒಳ ಉಡುಪು ಹಾಕಿಕೊಂಡು ಬಂದಿರುವೆ. ನನ್ನ ಪಕ್ಕದಲ್ಲಿ ಬಂದು ಮಲಗುತ್ತೀಯಾ? ಅವರ ಮಕ್ಕಳಿಗೆ ಹೀಗೆ ಕೇಳುತ್ತಾರಾ? ವಿದ್ಯಾರ್ಥಿನಿಯರನ್ನು ಆಫೀಸ್ ರೂಮ್‍ಗೆ ಕರೆದು, ಲೈಂಗಿಕ ದೌರ್ಜನ್ಯ ಮಾಡುತ್ತಾನೆ. ಎಲ್ಲಂದರಲ್ಲಿ ಮುಟ್ಟಿ, ನೀನು ನನ್ನ ಡಾರ್ಲಿಂಗ್ ಅಂತಾ ಹೇಳಿ ಮುತ್ತಿಕ್ಕುತ್ತಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸುತ್ತಾನೆ ಎಂದು ವಿದ್ಯಾರ್ಥಿನಿಯೊಬ್ಬಳು ಗ್ರಾಮಸ್ಥರ ಎದುರೇ ಆಕ್ರೋಶ ಹೊರ ಹಾಕಿದ್ದಾಳೆ.

    ವಿದ್ಯಾರ್ಥಿಯ ಹೇಳಿಕೆ ಹೇಳಿದ ವ್ಯಕ್ತಿಯೊಬ್ಬರು ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸು ಅಂದಿದ್ದೇ ತಡ, ವಿದ್ಯಾರ್ಥಿನಿ ಚಪ್ಪಲಿಯಿಂದ ಬಾರಿಸಲು ಮುಂದಾಗಿದ್ದಳು. ಆದರೆ ಶಿಕ್ಷಕರಿಗೆ ಹೊಡೆಯುವುದು ಯೋಗ್ಯವಲ್ಲವೆಂದು ಹಿರಿಯರು ಹೇಳಿದ್ದಕ್ಕೆ ವಿದ್ಯಾರ್ಥಿನಿ ಹಿಂದಕ್ಕೆ ಸರಿದಿದ್ದಾಳೆ.

    ಹಾಲವಾಟ ಹಾಗೂ ಬಂಡಪಲ್ಲಿ ಸುಮಾರು ವಿದ್ಯಾರ್ಥಿನಿಯರು ಪೋಷಕರನ್ನು ಇಂದು ಶಾಲೆಗೆ ಕರೆ ತಂದಿದ್ದರು. ಬಳಿಕ ಶಾಲಾ ಮುಖ್ಯಶಿಕ್ಷಕ ಕೆ.ಎಸ್.ಲಕ್ಷ್ಮಣ ಅವರ ಜೊತೆಗೆ ಮಾತನಾಡಿದ ಪೋಷಕರು ಶಿಕ್ಷಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಕ್ಷಕನ ವಿರುದ್ಧ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಘಟನೆಯ ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಷಂಶುನ್ನಿಸ್ ಅವರ ಮಾಹಿತಿ ಗಮನಕ್ಕೆ ಬಂದಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ರತ್ನಯ್ಯ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದ ವ್ಯಕ್ತಿ ಅರೆಸ್ಟ್

    ಮದ್ವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದ ವ್ಯಕ್ತಿ ಅರೆಸ್ಟ್

    ಚಿಕ್ಕಮಗಳೂರು: ಮದುವೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಇದೀಗ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು 52 ವರ್ಷದ ರಾಮಕೃಷ್ಣ ಎಂದು ಗುರುತಿಸಲಾಗಿದ್ದು, ಈತ ಮಂಡ್ಯದ ಮೂಲದವನು ಎಂಬುದಾಗಿ ತಿಳಿದುಬಂದಿದೆ. ರಾಮಕೃಷ್ಣ ಜಾಹಿರಾತು ಮೂಲಕ ಮಹಿಳೆಯರನ್ನ ವಂಚಿಸುತ್ತಿದ್ದನು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶಿಕ್ಷಕಿಯೊಬ್ಬರಿಗೆ ಇದೇ ರೀತಿ ಮೋಸ ಮಾಡಿ ಮೋಸ ಮಾಡಿದ್ದು, ಇದೀಗ ರಾಮಕೃಷ್ಣ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಮದುವೆಯ ನೆಪದಲ್ಲಿ ವರನನ್ನ ಹುಡುಕಿಕೊಂಡು ಬಂದವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೇ ಮಹಿಳೆಯರಿಂದ ಹಣ, ಬಂಗಾರ ದೋಚುತ್ತಿದ್ದನು. ರಾಮಕೃಷ್ಣ ಸರ್ಕಾರಿ ನೌಕರಿಯ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಎರಡನೇ ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು.

    ಸದ್ಯ ರಾಮಕೃಷ್ಣ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಶಾಲೆಯಲ್ಲಿ ಮಕ್ಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ

    ಬಿಬಿಎಂಪಿ ಶಾಲೆಯಲ್ಲಿ ಮಕ್ಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ

    ಬೆಂಗಳೂರು: ಬಿಬಿಎಂಪಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ. ನಿಮ್ಮ ಮಕ್ಕಳಿಗೆ ಪಾಠ ಹೇಳಲ್ಲ ಎಂದು ಟೀಚರ್ಸ್ ಪ್ರತಿಭಟನೆ ಮಾಡಿದ್ದಾರೆ.

    ಹೌದು. ಕಳೆದ 3 ತಿಂಗಳಿಂದ ಈ ಬಡ ಶಿಕ್ಷಕರಿಗೆ ಸಂಬಳ ಬಂದಿಲ್ಲ. ಈವರೆಗೂ ಮಕ್ಕಳಿಗಾಗಿ ಪಾಠ ಮಾಡಿ ಸುಸ್ತಾಗಿ ನಮ್ಮ ಮಕ್ಕಳ ಹೊಟ್ಟೆಗೆ ಊಟ ಕೊಡಲು ಸಂಬಳ ಬೇಕೇ ಬೇಕು ಅಂತ ಧರಣಿಗೆ ಧುಮುಕಿದ್ದಾರೆ.

    ಮೂರು ತಿಂಗಳಿನಿಂದ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ಏಜೆನ್ಸಿ ಅವರನ್ನು ಕೇಳಿದ್ರೆ, ಬಿಲ್ ಪಾಸ್ ಮಾಡಿಲ್ಲ ನಾವೇನು ಮಾಡೋದು. ನಮ್ಮ ಕೈಯಿಂದ ಕೊಡೋದಕ್ಕೆ ಸಾಧ್ಯವಾಗಲ್ಲ. ಹೀಗಾಗಿ ನೀವು ಅಲ್ಲಿ ಹೋಗಿ ಕೇಳಿ ಅಂತ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೇ ಇವರನ್ನು ಕೇಳಿದ್ರೆ ಏಜೆನ್ಸಿ ಅವರನ್ನು ಕೇಳಿ. ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳುತ್ತಾರೆ. ನಮ್ಮ ಕಷ್ಟವನ್ನು ಯಾರ ಜೊತೆ ಹೇಳಿಕೊಳ್ಳುವುದು ಅಂತ ಶಿಕ್ಷಕ ನಟೇಶ್ ಅವರು ತಮ್ಮ ಅಲಳುತೋಡಿಕೊಂಡಿದ್ದಾರೆ.

    ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋ ಈ 650 ಕ್ಕೂ ಹೆಚ್ಚು ಶಿಕ್ಷಕರೇ ಬಿಬಿಎಂಪಿ ಶಾಲೆಗಳ ಕಳಪೆ ಫಲಿತಾಂಶಕ್ಕೆ ಕಾರಣ ಅಂತೆ. ಹೀಗಾಗಿ ಪೌರಕಾರ್ಮಿಕರಿಗಿಂತ ಕಡಿಮೆ ಸಂಬಳ ತಗೋ ಟೀಚರ್ಸ್ ಗೆ ಸಂಬಳ ಕೊಡದೇ ಅಲೆದಾಡುವಂತೆ ಮಾಡ್ತಿದೆ ಪಾಲಿಕೆ. ಕ್ರಿಸ್ಟಲ್ ಎಂಬ ಕಂಪನಿಗೆ ಗುತ್ತಿಗೆ ನೀಡಿ ಸರ್ಕಾರ ಕೈ ಕಟ್ಟಿ ಕುಳಿತಿದೆ. ಈಗ ಟೀಚರ್ಸ್ ಸಹ ಪಾಲಿಕೆ ಆವರಣಕ್ಕೆ ಬಂದು ಧರಣಿ ಮಾಡಿದ್ದಾರೆ.

    ಈ ತಿಂಗಳು ಸೇರಿದ್ರೆ ಸಂಬಳ ಸಿಗದೇ ಮೂರು ತಿಂಗಳಾಗುತ್ತೆ. ಅವರ ಟೆಂಡರ್ ಅವರು ಎಷ್ಟು ತಗೋತ್ತಿದ್ದಾರೆ ಅಂತ ಗೊತ್ತಿಲ್ಲ. ಟೀಚರ್ಸ್ ಅವರಿಗೂ ಬಿಬಿಎಂಪಿ ಕಡೆಯಿಂದ ಕೊಟ್ರೆ ಒಳ್ಳೆಯದು. ಮಕ್ಕಳನ್ನು ನೆನೆದುಕೊಂಡೇ 2 ತಿಂಗಳಿನಿಂದ ಸಂಬಳ ಇಲ್ಲದೇ ಕೆಲಸ ಮಾಡಿದ್ದೇವೆ. ಆದ್ರೆ ಇದೀಗ ನಮ್ಮ ಮಕ್ಕಳು, ನಮ್ಮ ಮನೆ ನಡೆಯಲು ನಾವು ಏನ್ ಮಾಡಬೇಕು ಅಂತ ಶಿಕ್ಷಕಿ ವೀಣಾ ತಮ್ಮ ಕಷ್ಟ ಹಂಚಿಕೊಂಡಿದ್ದಾರೆ.

    ಕನಿಷ್ಟವೆಂದರೆ 6 ಸಾವಿರ, ಗರಿಷ್ಠವೆಂದರೆ 15 ಸಾವಿರ ಕೋಟಿ ಕೋಟಿ ವ್ಯವಹಾರ ಮಾಡೋ ಪಾಲಿಕೆ ಹೀಗೆ ಪಾಠ ಹೇಳೋರಿಗೆ ಅನ್ಯಾಯ ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎದುರಾಗಿದೆ. ಅಲ್ಲದೇ ಶಿಕ್ಷಕರು ಸ್ಟ್ರೈಕ್ ಹೋದ ಪರಿಣಾಮ ಇಡೀ ಶಾಲೆ ಖಾಲಿ ಖಾಲಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೈಹಿಕ ಶಿಕ್ಷಣ ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿಯ ಕೈ ಮುರಿತ

    ದೈಹಿಕ ಶಿಕ್ಷಣ ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿಯ ಕೈ ಮುರಿತ

    ಬಳ್ಳಾರಿ: ಶಾಲಾ ಮಕ್ಕಳಿಗೆ ಡ್ರಿಲ್ ಮಾಡಿಸುವ ವೇಳೆ ತಪ್ಪು ಮಾಡಿದ ವಿದ್ಯಾರ್ಥಿಗೆ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಶಿಕ್ಷಕನ ಹೊಡೆತಕ್ಕೆ ವಿದ್ಯಾರ್ಥಿಯ ಕೈ ಮುರಿದಿದ್ದು, ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮೊರಾರ್ಜಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶನಿವಾರ ಡ್ರಿಲ್ ಮಾಡಿಸುವ ವೇಳೆ ತಪ್ಪು ಮಾಡಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಶಿಕ್ಷಕ ಸಂಗಜ್ಜ, ವಿದ್ಯಾರ್ಥಿಗೆ ಕಟ್ಟಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪರಿಣಾಮ ವಿದ್ಯಾರ್ಥಿಯ ಕೈ ಮುರಿದಿದೆ.

    ಸದ್ಯ ಬಾಲಕನ ಪೋಷಕರು ಗ್ರಾಮಸ್ಥರು ಹಾಗೂ ಸ್ಥಳೀಯರು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂದು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಈ ಮೊರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರುವ ಸೌಲಭ್ಯಗಳನ್ನು ಸಹ ಶಿಕ್ಷಕರು ಮಕ್ಕಳಿಗೆ ನೀಡದೇ ಅನ್ಯಾಯ ಮಾಡುತ್ತಾರೆ ಎಂದು ಪೋಷಕರು ಪ್ರತಿಭಟನೆ ವೇಳೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ಬಾಲಕನ ಪೋಷಕರು ಪ್ರಕರಣದ ಬಗ್ಗೆ ದೂರು ನೀಡಲು ಚಿಂತಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಶಿಕ್ಷಕನಿಗೆ ಬೆವರಿಳಿಸಿದ ಗ್ರಾಮಸ್ಥರು – ನೂರಾರು ಜನರ ಎದ್ರೂ ಕೈಮುಗಿದು ಕಣ್ಣೀರಿಟ್ಟ ಟೀಚರ್

    ಗದಗ: ಶಿಕ್ಷಕನ ಅನುಚಿತ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಭೋಪಳಾಪೂರ ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಂ ಹೋನಕೇರಿ ಎಂಬ ಶಿಕ್ಷಕ ಶಾಲೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು. ಕೆಲವೊಮ್ಮೆ ಅಸಭ್ಯದಿಂದ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಜಡಿದು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಷಯ ತಿಳಿದು ಆರೋಪಿತ ಶಿಕ್ಷಕ ಶಾಲೆಗೆ ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಥಳಕ್ಕೆ ರೋಣ ಬಿಇಓ ನಂಜುಂಡಯ್ಯ ಹಾಗೂ ಸಿಆರ್ ಪಿ ಅಧಿಕಾರಿಗಳು ಆಗಮಿಸಿದ್ದು, ಸಮಸ್ಯೆ ಆಲಿಸಲು ಬಂದ ಬಿಇಓಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

    ಶಿಕ್ಷಕನ ಅನುಚಿತ ವರ್ತನೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಿಮಗೆ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಶಿಕ್ಷಕನ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ ಅಂತ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕ ವಿ.ಎಂ ಹೊನಕೇರಿ ಅಮಾನತ್ತುಗೊಳಿಸುವಂತೆ ರೋಣ ಬಿಇಓ ನಂಜುಂಡಯ್ಯಗೆ ಕೆಲಕಾಲ ದಿಗ್ಭಂದನ ಹಾಕಿದ್ದರು. ಕೊನೆಗೆ ಶಿಕ್ಷಕ ಹೊನಕೇರಿ ಗ್ರಾಮಸ್ಥರ ಎದುರು ಕೈಮುಗಿದು ಕ್ಷಮೆ ಕೇಳಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

    ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

    ರಾಂಚಿ: ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಶಿಕ್ಷಕರು ತೊಡಗಿದ್ದರಿಂದ ಜಾರ್ಖಂಡ್ ರಾಜ್ಯದ ರಾಮಘಡ ಜಿಲ್ಲೆಯ ಶಾಲೆಯಲ್ಲಿ ಯೋಧರು ಶಸ್ತ್ರಾಸ್ತ್ರವನ್ನು ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ.

    ಹೌದು, ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನೈಪುಣ್ಯತೆಯನ್ನು ಹೊಂದಿರುತ್ತಾರೆನ್ನುವುದು ಮತ್ತೊಮ್ಮೆ ಸಾಭೀತಾಗಿದೆ.

    ಜಾರ್ಖಂಡ್‍ನ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾದ ರಾಮಘಡ ಜಿಲ್ಲೆಯಲ್ಲಿ ಶಿಕ್ಷಕರು ರಾಜ್ಯವ್ಯಾಪಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶಿಕ್ಷಕರ ಅಭಾವವನ್ನು ತಪ್ಪಿಸಲು ಸ್ವತಃ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಯೋಧರು ತಮ್ಮ ಗನ್‍ಗಳನ್ನು ಬಿಟ್ಟು, ಮಕ್ಕಳಿಗಾಗಿ ಚಾಕ್ ಪೀಸ್ ಹಿಡಿದಿದ್ದಾರೆ. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನು ಮಾಡಿದ್ದಾರೆ. ಈ ಮೂಲಕ ದೇಶವನ್ನು ನಿರ್ಮಿಸುವ ಎಲ್ಲಾ ಕೆಲಸಗಳಲ್ಲಿ ಸಮರ್ಥರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಕೀಯಾ ಕೃತ್ ಮಧ್ಯ ವಿದ್ಯಾಲಯದ ಪ್ರಾಂಶುಪಾಲ ರಾಮ್ ಸರಣ್ ಯಾದವ್, ಶಿಕ್ಷಕರ ಪ್ರತಿಭಟನೆಯ ಸಮಯದಲ್ಲಿ ನಮಗೆ ನಿರಂತರವಾಗಿ ತರಗತಿಗಳನ್ನು ನಡೆಸಲು ನಾವು ತುಂಬಾ ಕಷ್ಟಪಟ್ಟಿದ್ದೇವು. ಈ ವೇಳೆ ಸಿಆರ್‍ಪಿಎಫ್‍ನ 26ನೇ ಬೆಟಾಲಿಯನ್ ಯೋಧರು ಈ ಕಾರ್ಯಕ್ಕೆ ತೊಡಗಿಕೊಂಡು, ತರಗತಿಗಳು ಮೊದಲಿನಂತೆ ನಡೆಯಲು ಸಹಕರಿಸಿದ್ದಾರೆಂದು ಹೇಳಿದ್ದಾರೆ.

    ಸಿಆರ್‌ಪಿಎಫ್ ಯೋಧರು ಜಾರ್ಖಂಡ್ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಕಣ್ಗಾವಲನ್ನು ಇಟ್ಟಿದ್ದರೂ, ಇದರ ಮಧ್ಯೆಯೇ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ಯಾವುದೇ ಕಠಿಣ ಪರಿಸ್ಥಿತಿಗಳಲ್ಲಿ ಮೊದಲು ನೆನಪಿಗೆ ಬರುವುದೇ ನಮ್ಮ ಯೋಧರು. ಪ್ರವಾಹ, ಚಂಡಮಾರುತ, ಭೂಕಂಪ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪಗಳಲ್ಲಿ ಸದಾ ಮುನ್ನುಗ್ಗಿ ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಜ್ಞಾನ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯ – ಬಾಲಕಿ ಕಾಲಿನ ಮೇಲೆ ಬಿದ್ದ ಆಸಿಡ್

    ವಿಜ್ಞಾನ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯ – ಬಾಲಕಿ ಕಾಲಿನ ಮೇಲೆ ಬಿದ್ದ ಆಸಿಡ್

    ಶಿವಮೊಗ್ಗ: ವಿಜ್ಞಾನದ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯದಿಂದ ಆರನೇ ತರಗತಿ ಬಾಲಕಿ ಕಾಲಿನ ಮೇಲೆ ಆಸಿಡ್ ಬಿದ್ದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಸೇಂಟ್ ಜೋನ್ಸ್ ಅಕ್ಷರಧಾಮ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿಯ ತೊಡೆ ಹಾಗೂ ಕಾಲಿನ ಭಾಗದ ಚರ್ಮ ಸುಟ್ಟು ಹೋಗಿದೆ.

    ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ವೇಳೆ ವಿಜ್ಞಾನದ ಪ್ರಯೋಗಕ್ಕೆ ಆಸಿಡ್ ಬಳಸಲಾಗಿದೆ. ಇಂತಹ ಪ್ರಯೋಗದ ವೇಳೆ ಮಕ್ಕಳ ಕೈಗೆ ಆಸಿಡ್ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಕ್ಕಳಿಂದಲೇ ಈ ಪ್ರಯೋಗ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ.

    ಕಾಲು ಸುಟ್ಟುಕೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆ ಸೇರಿಸಿಲ್ಲ. ಅಲ್ಲದೇ ಪೋಷಕರಿಗೂ ಸಂರ್ಪಕಿಸಿ ಈ ಘಟನೆ ಬಗ್ಗೆ ಮಾಹಿತಿ ನೀಡಿಲ್ಲ. ನಂತರ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ತಪ್ಪೋಪ್ಪಿಕೊಂಡಿದ್ದಾರೆ.

    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸೋಮಶೇಖರ್ ಬಾದಾಮಿ ಹಾಗೂ ಬಿಇಓ ಲೋಕೇಶ್ ಅವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಘಟನೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗೆ ಎಫ್‍ಐಆರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಮಾಪ್ತಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯಗಳಲ್ಲಿ ಮಕ್ಕಳ ಕೈಗೆ ಆಸಿಡ್ ನಂತಹ ಮಾರಕ ವಸ್ತುಗಳನ್ನು ಪ್ರಯೋಗಗಳಿಗೆ ಕೊಡುವಂತಿಲ್ಲ. ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಗೆಂದು ಇಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನ, 2.50 ಲಕ್ಷ ರೂ. ಕಳ್ಳತನ ಮಾಡಿದ್ದ ಶಿಕ್ಷಕ ಅರೆಸ್ಟ್

    ಮದ್ವೆಗೆಂದು ಇಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನ, 2.50 ಲಕ್ಷ ರೂ. ಕಳ್ಳತನ ಮಾಡಿದ್ದ ಶಿಕ್ಷಕ ಅರೆಸ್ಟ್

    ಮೈಸೂರು: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಶಿಕ್ಷಕನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

    ತಜಮುಲ್ ಬಂಧಿತ ಆರೋಪಿ. ತಜಮುಲ್ ವೃತ್ತಿಯಲ್ಲಿ ಶಾಲಾ ಶಿಕ್ಷಕ ಎಂದು ತಿಳಿದು ಬಂದಿದೆ. ಮೈಸೂರಿನ ರಾಜೀವ್ ನಗರದಲ್ಲಿ ಇಲಿಯಾಸ್ ಕಾವೇರಿ ಎಂಪೋರಿಯಮ್ ಮಾಲೀಕರಾದ ಇಲಿಯಾಸ್ ಬೇಗ್ ಮನೆಯಲ್ಲಿ ಮದುವೆಗೆ ಇಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಶಿಕ್ಷಕ ಕಳ್ಳತನ ಮಾಡಿದ್ದಾನೆ.

    ಆರೋಪಿ ತಜಮುಲ್, ಇಲಿಯಾಸ್ ಬೇಗ್ ಮನೆಯ ಬಳಿ ವಾಸವಾಗಿದ್ದನು. ತಜಮುಲ್ ಮನೆಯ ಕೀ ಮೊದಲೇ ಕಳ್ಳತನ ಮಾಡಿದ್ದನು. ನಂತರ ಮನೆಯವರೆಲ್ಲಾ ಹೊರಗೆ ಹೋದಾಗ ಕೀ ಬಳಸಿ ಕಳ್ಳತನ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಮಗಳ ಮದುವೆಗೆಂದು ಇಲಿಯಾಸ್ ಬೇಗ್ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ಇರಿಸಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹೊರಗೆ ಹೋಗಿದ್ದಾಗ ತಜಮುಲ್ ತನ್ನ ಕೈಚಳಕ ತೋರಿಸಿದ್ದನು. ಮನೆಯ ನಕಲಿ ಕೀ ಬಳಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.50 ಲಕ್ಷ ರೂ. ನಗದನ್ನು ಕಳ್ಳ ಕದ್ದಿದ್ದನು.

    ಮುಖಕ್ಕೆ ಮಾಸ್ಕ್, ಶಲ್ಯ ಧರಿಸಿ ಮನೆಗೆ ನುಗ್ಗಿ ತಜಮುಲ್ ಈ ಕಳ್ಳತನ ಮಾಡಿದ್ದಾನೆ. ತಜಮುಲ್ ಮನೆಗೆ ಬಂದು ಕಳ್ಳತನ ಮಾಡಿ ಹೋದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv