Tag: teacher

  • ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರ್ಯಕ್ರಮಕ್ಕೆ ಕರೆದೊಯ್ದು ವಿದ್ಯಾರ್ಥಿಗಳನ್ನ ಮರೆತ ಶಿಕ್ಷಕ- 10 ಕಿ.ಮೀ ನಡ್ಕೊಂಡು ಬಂದ ಮಕ್ಕಳು..!

    ಕಾರವಾರ: ಸೇವಾದಳದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ದೈಹಿಕ ಶಿಕ್ಷಕರೊಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಸುಮಾರು 10 ಕಿ.ಮೀ ದೂರ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಮನೆ ಸೇರಿರುವ ಘಟನೆ ಜಿಲ್ಲೆಯ ಮುಂಡಗೋಡು ಪಟ್ಟಣದ ಕಾತೂರು ತಾಲೂಕಿನಲ್ಲಿ ನಡೆದಿದೆ.

    ಕಾತೂರಿನಲ್ಲಿ ತಾಲೂಕು ಮಟ್ಟದ ಸೇವಾದಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜಿನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂದು ಹೋಗಿದ್ದರು. ಹೋಗುವಾಗ ಮಕ್ಕಳನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕ, ವಾಪಾಸ್ ಬರುವಾಗ ಮಕ್ಕಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾರೆ.

    ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಮಕ್ಕಳ ಶಿಕ್ಷಕರ ಬಳಿ ಊಟದ ಚೀಟಿಯನ್ನು ನೀಡಲಾಗಿತ್ತು. ಆದ್ರೆ ದೀಪಕ್ ಅವರು ಮಕ್ಕಳ ಊಟದ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾರ್ಯಕ್ರಮದಿಂದ ಹಾಗೆಯೇ ಮುಂಡಗೋಡಿಗೆ ತೆರೆಳಿದ್ದಾರೆ. ಇತ್ತ ಮಕ್ಕಳು ಊಟವನ್ನೂ ಮಾಡದೆ ಶಿಕ್ಷಕರು ಬರುತ್ತಾರೆ ಎಂದು ಕಾದು ಕೂತಿದ್ದಾರೆ. ಆದ್ರೆ ಸಂಜೆಯಾದರೂ ಶಿಕ್ಷಕ ಬರದಿದ್ದಾಗ ಮಕ್ಕಳು ಆತಂಕಗೊಂಡಿದ್ದಾರೆ.

    ಬಳಿಕ ಮನೆ ಸೇರಲು ಬಸ್ಸಿಗೆ ಹೋಗಲು ಕೈಯಲ್ಲಿ ಹಣವಿಲ್ಲದೆ ನಡೆದುಕೊಂಡೇ ಸುಮಾರು 10 ಕಿ.ಮೀ ದೂರ ಬಂದಿದ್ದಾರೆ. ಬಳಿಕ ಮಕ್ಕಳನ್ನು ನೋಡಿದ ಗ್ರಾಮಸ್ಥರೊಬ್ಬರು ಹಣ ನೀಡಿ ಎಲ್ಲರನ್ನೂ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದಂತೆ ಶಿಕ್ಷಕರ ಮೇಲೆ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮರುದಿನ ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಲಾ ಪ್ರವಾಸಕ್ಕೆಂದು ಟಾಟಾ ಏಸ್‍ನಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿದ ಶಿಕ್ಷಕರು

    ಶಾಲಾ ಪ್ರವಾಸಕ್ಕೆಂದು ಟಾಟಾ ಏಸ್‍ನಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿದ ಶಿಕ್ಷಕರು

    ದಾವಣಗೆರೆ: ಶಾಲಾ ಪ್ರವಾಸಕ್ಕೆಂದು 2 ಟಾಟಾ ಏಸ್‍ನಲ್ಲಿ ಶಿಕ್ಷಕರು ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಿದ ಅಮಾನವೀಯ ಘಟನೆ ದಾವಣಗೆರೆಯ ಶ್ರೀ ಸತ್ಯ ಸಾಯಿ ಶಾಲೆಯಲ್ಲಿ ನಡೆದಿದೆ.

    ಶಾಲಾ ಆಡಳಿತ ಮಂಡಳಿ ಶಾಲಾ ಪ್ರವಾಸಕ್ಕೆ 2 ಟಾಟಾಏಸ್ ತರಿಸಿಕೊಂಡಿದ್ದರು. ಶಾಲಾ ಶಿಕ್ಷಕರು ಟಾಟಾ ಏಸ್‍ನಲ್ಲಿ 30 ರಿಂದ 40 ಮಕ್ಕಳನ್ನು ತುಂಬಿದ್ದಾರೆ. ಟಾಟಾ ಏಸ್‍ನಲ್ಲಿ ಮಕ್ಕಳು ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣ ಮಾಡುತ್ತಿದ್ದಾರೆ.

    ದಾವಣಗೆರೆಯ ಅನಗೋಡು ಪಾರ್ಕ್‍ಗೆ ಶಿಕ್ಷಕರು ಪ್ರವಾಸ ಕರೆ ತಂದಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ. ಅಪಘಾತ ವಾದರೆ ಯಾರು ಹೊಣೆ ಎಂದು ಸಾರ್ವಜನರಿಕರು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಶಾಲೆಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ!

    ಶಿಕ್ಷಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ!

    ಬೆಂಗಳೂರು: ಶಾಲೆಯಲ್ಲಿ ಶಿಕ್ಷಕರು ಎಲ್ಲರ ಮುಂದೆ ನಿಂದಿಸಿ, ತನಗೆ ಹೊಡೆದರು ಎಂದು ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿಯ ಉತ್ತರಹಳ್ಳಿಯಲ್ಲಿ ನಡೆದಿದೆ.

    ಉತ್ತರಹಳ್ಳಿಯ ನಿವಾಸಿ ಧನುಷ್ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಧನುಷ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಧನುಷ್ ಓದುತ್ತಿದ್ದ ಶಾಲೆಯ ಶಿಕ್ಷಕ ಬಾಲಕೃಷ್ಣ ಎಂಬವರು ಎಲ್ಲರ ಮುಂದೆ ನಿಂದಿಸಿ, ತನ್ನನ್ನು ಹೊಡೆದರು ಎಂಬ ಕಾರಣಕ್ಕೆ ವಿದ್ಯಾರ್ಥಿ ಮನನೊಂದಿದ್ದನು. ಅಲ್ಲದೇ ಶಿಕ್ಷಕನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿ ಡೇತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಡೆತ್‍ನೋಟ್‍ನಲ್ಲಿ ಶಿಕ್ಷಕ ಶಾಲೆಯಲ್ಲಿ ತನಗೆ ಕೊಡುತ್ತಿದ್ದ ಹಿಂಸೆಯ ಬಗ್ಗೆ ಬರೆದು ಮನೆಯಲ್ಲಿ ಯಾರು ಇಲ್ಲದ ವೇಳೆ ಧನುಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವಿನಿಂದ ಮನನೊಂದಿರುವ ಪೋಷಕರು ಕಣ್ಣೀರಿಡುತ್ತಿದ್ದಾರೆ. ಹಾಗೆಯೇ ತಮ್ಮ ಮಗನ ಸಾವಿಗೆ ಕಾರಣರಾದ ಶಿಕ್ಷಕನನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ.

    ಸದ್ಯ ಈ ಘಟನೆ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

    ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

    ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    8 ವರ್ಷದ ಮಗ ಶಮಂತ್ ಹಾಗೂ 2 ವರ್ಷದ ಶಾನವಿ ಮೃತ ದುರ್ದೈವಿ ಮಕ್ಕಳು. ಉಷಾ(30) ತನ್ನಿಬ್ಬರು ಮಕ್ಕಳನ್ನ ಕೊಂದು ಆತಹತ್ಯೆಗೆ ಶರಣಾದ ತಾಯಿ.

    ಉಷಾ ಪತಿ ಅಶ್ವತ್ಥನಾರಾಯಣ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಈ ಕುಟುಂಬ ನಗರದ ಮುನಿಸಿಪಾಲ್ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಆತ್ಮಹತ್ಯೆಗೂ ಮುನ್ನ ಉಷಾ ಡೆತ್ ನೋಟ್ ಬರೆದಿದ್ದು ತನ್ನ ಸಾವಿಗೆ ಯಾರೂ ಕಾರಣ ಅಲ್ಲ ಅಂತ ಬರೆದಿದ್ದಾಳೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.

    ಕಾರಣವೇನು..?
    ಜ್ಯೋತಿಷಿ ನಿನ್ನ ಮಕ್ಕಳ ಭವಿಷ್ಯ ಸರಿ ಇಲ್ಲ ಎಂದು ಹೇಳಿದ್ದಕ್ಕೆ ಕಳೆದ 15 ದಿನಗಳಿಂದ ತಾಯಿ ಉಷಾ ಖಿನ್ನತೆಗೆ ಓಳಗಾಗಿದ್ದಳಂತೆ. ಪತಿ ಈ ಬಗ್ಗೆ ಬುದ್ಧಿವಾದ ಹೇಳಿದ್ದರೂ ಇಂದು ಅಶ್ವತ್ಥ ನಾರಾಯಣ ಅವರು ಮನೆಯಲ್ಲಿ ಇಲ್ಲದ ವೇಳೆ ಮಕ್ಕಳಿಗೆ ಮೊದಲು ನಿದ್ರೆ ಮಾತ್ರೆ ಹಾಕಿ ತದನಂತರ ಕತ್ತುಹಿಸುಕಿ ಕೊಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಪತಿ ಅಶ್ವಥ್ ನಾರಾಯಣರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲಾ ಕೆಲಸವನ್ನು ಮಾಡ್ತಾರೆ ಮಕ್ಕಳು..!

    ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲಾ ಕೆಲಸವನ್ನು ಮಾಡ್ತಾರೆ ಮಕ್ಕಳು..!

    ಚಿಕ್ಕಮಗಳೂರು: ಅಂದು ಮಹಾಭಾರತದ ಗಾಂಧಾರಿ ಗಂಡನಿಗೆ ಕಣ್ಣಿಲ್ಲ ಎಂದು ಕಣ್ಣಿದ್ದು ತಾನೂ ಕುರುಡಳಾಗಿದ್ಲು. ಇಂದು ಕಾಫಿನಾಡ ಮಕ್ಕಳು ಕೂಡ ಕಣ್ಣಿದ್ದು ಕುರುಡರಾಗೇ ಓದೋದು, ಬರೆಯೋದು, ಟಿವಿ ನೋಡೋದು, ಸೈಕಲ್-ಬೈಕ್ ಓಡ್ಸೋದು ಮಾಡ್ತಿದ್ದಾರೆ.

    ಹೌದು, ಜಿಲ್ಲೆಯ ಆಲ್ದೂರಿನ ಶಾಲೆಯಲ್ಲಿ ಕಣ್ಣಿದ್ದರೂ ಸಹ ಥೇಟ್ ಗಾಂಧಾರಿಯ ರೀತಿ ಕಣ್ಣಿಗೆ ಬಟ್ಟೆ ಕಟ್ಕೊಂಡಿರೋ ಮಕ್ಕಳು ತಮ್ಮ ಮುಂದೆ ಏನಿದೇ ಅನ್ನೋದನ್ನ ಹೇಳುತ್ತಾರೆ. ಪುಸ್ತಕಗಳನ್ನ ಓದ್ತಾರೆ, ಬರೀತಾರೆ ಹಾಗೂ ತೋರಿಸಿದ ಬಣ್ಣವನ್ನ ಸರಿಯಾಗಿ ಹೇಳ್ತಾರೆ. ಆಲ್ದೂರಿ ಶಾಲೆಯ ಶಿಕ್ಷಕ ಪದ್ಮನಾಭ್ ಭಟ್ ಅವರ ಮಾರ್ಗದರ್ಶನದಲ್ಲಿ ಈ ಗಾಂಧಾರಿ ವಿದ್ಯೆಯನ್ನ ಕರಗತ ಮಾಡ್ಕೊಂಡಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ ವಿದ್ಯಾರ್ಥಿಗಳು ಸಲೀಸಾಗಿ ಬೈಕ್ ಓಡಿಸ್ತಾರೆ, ಟಿವಿ ನೋಡ್ತಾರೆ. ಇದನ್ನೆಲ್ಲ ನೋಡಿದವರು ಅಚ್ಚರಿ ಪಡುವುದು ಸಾಮಾನ್ಯ. ಕಣ್ಣು ಬಿಟ್ಟುಕೊಂಡೆ ಕೆಲವೊಮ್ಮೆ ಸರಿಯಾಗಿ ಓದೋಕೆ ಬರಿಯೋಕೆ ಆಗಲ್ಲ ಅಂತದ್ರಲ್ಲಿ ಕಣ್ಣು ಮುಚ್ಚಿಕೊಂಡು ಹೇಗೆ ಈ ಕೆಲಸವನ್ನು ಮಾಡ್ತಾರೆ ಮಕ್ಕಳು ಅಂತ ಎಲ್ಲರಲ್ಲಿ ಸಾಲು ಸಾಲು ಪ್ರಶ್ನೆ ಹುಟ್ಟುತ್ತಲೇ ಇರುತ್ತೆ.

    ಕಣ್ಣು ಮುಚ್ಚಿಕೊಂಡು ಮಕ್ಕಳು ಎಲ್ಲವನ್ನು ಲೀಲಾಜಾಲವಾಗಿ ಮಾಡುತ್ತಾರೆ ಅಂದರೆ ಅದಕ್ಕೆ ಕಾರಣ ಗಾಂಧಾರಿ ವಿದ್ಯೆ. ಈ ವಿದ್ಯೆ ಕಲಿತೋರ ಕೈಗೆ ಏನೇ ಕೊಟ್ರು ಅದರಲ್ಲಿ ಏನ್ ಬರೆದಿದೆ ಅಂತ ಕೇಳಿದರೆ ಕ್ಷಣಾರ್ಧದಲ್ಲೆ ಸರಿಯಾಗಿ ಉತ್ತರಿಸುತ್ತಾರೆ. ಶಿಕ್ಷಕ ಪದ್ಮನಾಭ್ ಭಟ್ ಅವರ ತಮ್ಮ ವಿದ್ಯಾರ್ಥಿಗಳಿಗೆ ಗಾಂಧಾರಿ ವಿದ್ಯೆಯನ್ನು ಕಲಿಸಿದ್ದಾರೆ. ಅದು ಕೇವಲ ಹತ್ತೇ ದಿನದಲ್ಲಿ ಈ ವಿದ್ಯೆ ಕಲಿತ ಮಕ್ಕಳು ಆಟ-ಪಾಠಗಳಲ್ಲಿ ಮುಂದಿದ್ದಾರೆ.

    ಏನಿದು ಗಾಂಧಾರಿ ವಿದ್ಯೆ?
    ಕಣ್ಣಿಗೆ ಬಟ್ಟೆ ಕಟ್ಕೊಂಡ್ ಮೂರನೇ ಕಣ್ಣಿನಿಂದ ನೋಡೋ ವಿದ್ಯೆಗೆ ಗಾಂಧಾರಿ ವಿದ್ಯೆ ಅಂತಾರೆ. ಶಿವನಿಗೆ ಮೂರನೇ ಕಣ್ಣಿದೆ ಅಂತ ಕೇಳಿರುತ್ತೇವೆ. ಅದೇ ಕಣ್ಣು ಮನುಷ್ಯ, ಪ್ರಾಣಿ-ಪಕ್ಷಿಗಳಿಗೂ ಇರುತ್ತೆ ಅನ್ನೋದು ಈ ವಿದ್ಯೆಯ ಸಾರಾಂಶ. ಶರೀರದಲ್ಲಿನ 72 ಸಾವಿರ ನಾಡಿಗಳಲ್ಲಿನ ಹಿಡನಾಡಿ, ಪಿಂಗಳನಾಡಿ ಹಾಗೂ ಶುಷಮ್ನನಾಡಿ ಸಹಾಯದಿಂದ ಈ ವಿದ್ಯೆ ಕರಗತವಾಗುತ್ತೆ. ಇವುಗಳ ಜೊತೆ, ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರಕ, ಅನಾಥ, ವಿಶುದ್ಧಿ, ಆಜ್ಞಾ, ಸಹಸ್ರರ ಎಂಬ ಏಳು ಸುಪ್ತ ಚಕ್ರಗಳು ಕೆಲಸ ಮಾಡುತ್ತವೆ. ಇದರಲ್ಲಿ ಆಜ್ಞಾ ಚಕ್ರಕ್ಕೆ ಸೂಕ್ಷ್ಮ ವಿಚಾರವನ್ನ ಗ್ರಹಿಸುವ ಶಕ್ತಿ ಇದೆ. ಇದನ್ನ ಬಳಸಿ ಮಕ್ಕಳು ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಬೇಗ ಜಾಗೃತಿಯಾಗ್ತಾರೆ.

    ಈ ಗಾಂಧಾರಿ ವಿದ್ಯೆಯನ್ನ ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲೇ ಹೇಳಿಕೊಡಬಹುದು. ಮಕ್ಕಳಲ್ಲಿ ಏಕಾಗ್ರತೆ ಇಲ್ಲಾ ಎಂದು ಕೊರಗೋ ಪೋಷಕರು ಪ್ರತಿ ದಿನ ಅರ್ಧ ಗಂಟೆ ಮಕ್ಕಳಿಗೆ ಟೈಂ ಕೊಟ್ಟು, ಅವರ ಎರಡು ಹುಬ್ಬುಗಳ ಮಧ್ಯೆ ಬೆರಳಿಟ್ಟು ಧ್ಯಾನ ಹಾಗೂ ಪ್ರಾಣಾಯಾಮ ಮಾಡಿಸುವುದರಿಂದ ನಿಮ್ಮ ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ ಎಂದು ಶಿಕ್ಷಕ ಪದ್ಮನಾಭ್ ಭಟ್ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣರಾಜ್ಯೋತ್ಸವಕ್ಕೆ ತೆರಳ್ತಿದ್ದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹರಿದ ಕಾರ್..!

    ಗಣರಾಜ್ಯೋತ್ಸವಕ್ಕೆ ತೆರಳ್ತಿದ್ದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹರಿದ ಕಾರ್..!

    ಧಾರವಾಡ: ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕಾರ್ ಹರಿದ ಘಟನೆ ಧಾರವಾಡದ ವಾಟರ್ ಬೋರ್ಡ್ ಬಳಿ ಇಂದು ನಡೆದಿದೆ.

    ಪ್ರೀನಿಪಾಲ್ ಸುನಿತಾ ಕಡಪಟ್ಟಿ, ವಿದ್ಯಾರ್ಥಿಗಳಾದ ಪೂಜಾ ನಿಡಗುಂದಿ, ಚೈತ್ರಾ ಕೊಪ್ಪದ, ಅನ್ನಪೂರ್ಣ ಚಲವಾದಿ ಗಾಯಗೊಂಡವರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳ ಮೇಲೆ ಕಾರ್ ಹರಿದಿದ್ದು, ಇದರಲ್ಲಿ ನಾಲ್ವರಿಗೆ ಗಂಭಿರ ಗಾಯ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾಗಿದೆ. ಗಾಯಗೊಂಡ ವಿದ್ಯಾರ್ಥಿಗಳೆಲ್ಲರೂ ಧಾರವಾಡದ ಕೆಇಬೊರ್ಡ್ ಕಾಲೇಜಿನವರಾಗಿದ್ದಾರೆ.

    ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್ ಡಿ ಎಮ್ ಗೆ ಗಾಯಾಳುಗಳ ಸ್ಥಳಾಂತರ ಮಾಡಲಾಗಿದೆ. ಅರವಿಂದ ಎಸ್. ಹೆಬ್ಸೂರು ಅವರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಈ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಂತ ಖರ್ಚಿನಲ್ಲಿ ಶಾಲೆಗೆ, ಗ್ರಾಮಕ್ಕೆ ಬೆಳಕು ತಂದ್ರು ಶಿಕ್ಷಕ ಮೋಹನ್ ಕುಮಾರ್

    ಸ್ವಂತ ಖರ್ಚಿನಲ್ಲಿ ಶಾಲೆಗೆ, ಗ್ರಾಮಕ್ಕೆ ಬೆಳಕು ತಂದ್ರು ಶಿಕ್ಷಕ ಮೋಹನ್ ಕುಮಾರ್

    ರಾಯಚೂರು: ಏನೂ ಇಲ್ಲದ ಜಾಗದಲ್ಲಿ ಸುಂದರ ಶಾಲೆಯನ್ನ ಕಟ್ಟಿ “ಮಕ್ಕಳ ಕಾಡು” ಅಂತ ಹೆಸರಿಟ್ಟು ಮಾದರಿ ಶಾಲೆಯನ್ನಾಗಿ ಮಾಡುವ ಮೂಲಕ ಶಿಕ್ಷಕ ಮೋಹನ್ ಕುಮಾರ್ ಪಬ್ಲಿಕ್ ಹೀರೋ ಆಗಿದ್ದಾರೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಮೋಹನ್ ಕುಮಾರ್ ಸ್ವಂತ ಖರ್ಚಿನಲ್ಲಿ ಶಾಲೆಗೆ ವಿದ್ಯುತ್ ಅಳವಡಿಸಿ ಗ್ರಾಮಕ್ಕೆ ಬೆಳಕಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದ ಇವರು ಮೂಲತಃ ಮಂಡ್ಯದವರು. ಮೋಹನ್ ಕುಮಾರ್ ಅವಿರತ ಶ್ರಮದಿಂದ ಇಂದು ಈ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಸರ್ಕಾರಿ ಶಾಲೆಯನ್ನು ತಿದ್ದಿ ತೀಡಿದ್ದಾರೆ. ಮೋಹನ್ ಕುಮಾರ್ ಅವರ ಕೆಲಸವನ್ನು ಮೆಚ್ಚಿದ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ದಾನ ಮಾಡಲು ಮುಂದಾಗಿದ್ದಾರೆ.

    ಶಾಲೆಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿರೋ ಮೋಹನ್ ಕುಮಾರ್ ಈಗ ಗ್ರಾಮಕ್ಕೂ ಬೆಳಕಾಗಿದ್ದಾರೆ. ಸತತ ಆರು ಕಡೆ ಬೋರ್‍ವೆಲ್ ಕೊರೆಸಿ ವಿಫಲರಾದರೂ ಛಲ ಬಿಡದೆ, ಶಾಲೆಯಿಂದ ಒಂದು ಕಿ.ಮೀ ದೂರದಲ್ಲಿ ಬೋರ್‍ವೆಲ್ ಕೊರೆಸಿ ಕುಡಿಯುವ ನೀರಿನ ಬವಣೆ ನೀಗಿಸಲು ಶ್ರಮಿಸಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳಿಂದಲೇ ಬೆಳೆಸುತ್ತಿರುವ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗ್ತಿದೆ. ಮೊದಲೆಲ್ಲಾ ಖಾಸಗಿ ಶಾಲೆಗಳತ್ತ ಮುಖ ಮಾಡಿದವರು ಈಗ ಸರ್ಕಾರಿ ಶಾಲೆಗೆ ಜೈ ಎನ್ನುತ್ತಿದ್ದಾರೆ. ಈಗ 234 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, ಇದಕ್ಕೆ ಶಿಕ್ಷಕ ಮೋಹನ್ ಅವರೇ ಕಾರಣ ಎಂದು ಗ್ರಾಮಸ್ಥರು ಶಿಕ್ಷಕರು ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.

    ಶಾಲೆಯಲ್ಲಿ ಕೇವಲ 5 ಕೊಠಡಿ ಇರುವುದರಿಂದ ದಾನಿಗಳ ನೆರವಿನಿಂದ ಮೋಹನ್ ಕುಮಾರ್ ಸದ್ಯ ಗುಡಿಸಲು ಮಾದರಿಯ ಕೆಲ ಶಾಲಾ ಕೊಠಡಿ ನಿರ್ಮಿಸಿದ್ದಾರೆ. ಜನಪ್ರತಿನಿಧಿಗಳ ಬೆನ್ನುಬಿದ್ದು 300 ಮೀಟರ್ ಕಾಂಪೌಂಡ್, ಗೇಟ್ ವ್ಯವಸ್ಥೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ಫೋಸಿಸ್‍ನವರು ಈ ಶಾಲೆಗೆ 5 ಕಂಪ್ಯೂಟರ್ ನೀಡಿದ್ದಾರೆ, ಸೆಲ್ಕೋಸೋಲಾರ್ ಕಂಪನಿ ಸ್ಮಾರ್ಟ್ ಕ್ಲಾಸ್ ಅಳವಡಿಸಿದ್ದಾರೆ. ಈ ಶಾಲೆಗೆ ಬರುತ್ತಿರುವ ಪ್ರತಿ ಮಕ್ಕಳಿಗೂ ಐಡಿ ಕಾರ್ಡ್ ನೀಡಿ ಶಿಸ್ತುಪಾಲನೆ ಮಾಡಲಾಗುತ್ತಿದೆ.

    ಶಾಲೆಯ ಏಳಿಗೆಗಾಗಿ ಹಾಗೂ ಮಕ್ಕಳನ್ನ ಶಾಲೆಗೆ ಕರೆತರಬೇಕು ಅನ್ನೋ ಕಾರಣಕ್ಕೆ ಶಾಲಾ ಅಭಿವೃದ್ದಿಗೆ ಮುಂದಾದ ಶಿಕ್ಷಕ ಮೋಹನ್ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.

    https://www.youtube.com/watch?v=Gvhdclsw3GU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನಾಮಧೇಯ ಪ್ರೇಮ ಪತ್ರದಿಂದಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

    ಅನಾಮಧೇಯ ಪ್ರೇಮ ಪತ್ರದಿಂದಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

    ಮುಂಬೈ: ಅನಾಮಧೇಯ ಪ್ರೇಮ ಪತ್ರದಿಂದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ವಾಖ್ರಿ ಗ್ರಾಮದವಳಾಗಿದ್ದು, ಪಂಡರಾಪುರದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

    ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಹಿಂದೆ ಇದ್ದ ಸಹಪಾಠಿಯೊಬ್ಬರು ಅನಾಮಧೇಯ ಪ್ರೇಮ ಪತ್ರ ನೀಡಿದ್ದಾರೆ. ಈ ವೇಳೆ ಅದನ್ನು ನೋಡಿದ ತರಗತಿಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಮನಬಂದಂತೆ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಘಟನೆಯಿಂದ ಮನನೊಂದು ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ವಿದ್ಯಾರ್ಥಿಯ ತಂದೆ, ನನಗೆ ಶಾಲೆಯಿಂದ ಫೋನ್ ಬಂದಿತ್ತು. ತಕ್ಷಣವೇ ನಾನು ಶಾಲೆಗೆ ಭೇಟಿ ನೀಡುತ್ತಿದ್ದಂತೆ ಮಗಳು ಅಳುತ್ತಾ ನನ್ನ ಬಳಿಗೆ ಬಂದಳು. ಬಳಿಕ ಶಿಕ್ಷಕಿ ಬಂದು ನಿಮ್ಮ ಮಗಳ ಕೈಯಲ್ಲಿ ಪ್ರೇಮ ಪತ್ರ ಸಿಕ್ಕಿದೆ ಅಂತ ದೂರಿದರು. ನನ್ನ ಮಗಳು ಯಾರನ್ನೂ ಪ್ರೀತಿಸುತ್ತಿಲ್ಲ. ಈ ಪತ್ರವನ್ನು ಆಕೆಗೆ ಯಾರೋ ಬರೆದಿದ್ದಾರೆ ಎಂದು ತಿಳಿಸಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ ಎಂದರು.

    ತರಗತಿ ಹಾಗೂ ಶಾಲೆಯಲ್ಲಿ ಆದ ಘಟನೆಯಿಂದ ಮಗಳು ಮುಜುಗುರಕ್ಕೆ ಒಳಗಾಗಿದ್ದಳು. ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿದ್ದಾರೆ.

    ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತ ವಿದ್ಯಾರ್ಥಿನಿ ಪೋಷಕರು ಹಾಗೂ ವಾಖ್ರಿ ಗ್ರಾಮಸ್ಥರು ಪಂಡರಾಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಯ್ ಬಾಯಿ ಮುಚ್ಚಿ ಕೂತ್ಕೋ 40 ನಿಮಿಷ ವ್ಯಾ ವ್ಯಾ ಎಂದು ಕಿರುಚೋದು ಸಾಕು- ಟೀಚರ್​ಗೆ ವಿದ್ಯಾರ್ಥಿ ಅವಾಜ್

    ಏಯ್ ಬಾಯಿ ಮುಚ್ಚಿ ಕೂತ್ಕೋ 40 ನಿಮಿಷ ವ್ಯಾ ವ್ಯಾ ಎಂದು ಕಿರುಚೋದು ಸಾಕು- ಟೀಚರ್​ಗೆ ವಿದ್ಯಾರ್ಥಿ ಅವಾಜ್

    ಬೆಂಗಳೂರು: ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಗೆ ಅವಾಜ್ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಉತ್ತರ ಕರ್ನಾಟಕ ಭಾಗದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿ ಎಲ್ಲರ ಮುಂದೆ ತನ್ನ ಟೀಚರ್ ಮೇಲೆ ಗೂಂಡಾಗಿರಿ ತೋರಿದ ವಿಡಿಯೋವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಕ್ಲಾಸ್ ರೂಮಿನಲ್ಲಿ ಶಿಕ್ಷಕಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿ ಏಯ್ ಬಾಯಿ ಮುಚ್ಚಿ ಕೂತ್ಕೋ ನಲವತ್ತು ನಿಮಿಷ ವ್ಯಾ ವ್ಯಾ ಅಂತಾ ಕಿರುಚೋದು ಸಾಕು ಎಂದು ಅವಾಜ್ ಹಾಕಿದ್ದಾನೆ. ಅಲ್ಲದೇ ಸೌಂಡ್ ಜಾಸ್ತಿ ಮಾಡಬೇಡ, ಸೈಲೆಂಟ್ ಆಗಿರು ಎಂದು ಗೂಂಡಾಗಿರಿ ಮಾಡಿದ್ದಾನೆ.

    ವಿದ್ಯಾರ್ಥಿ ತನ್ನ ಶಿಕ್ಷಕಿಗೆ ಅವಾಜ್ ಹಾಕುತ್ತಿದ್ದ ವೇಳೆ ಆತನ ಸಹಪಾಠಿಗಳು ಜೋರಾಗಿ ನಗುತ್ತಿದ್ದರು. ವಿದ್ಯಾರ್ಥಿ ತನ್ನ ಶಿಕ್ಷಕಿಯ ಜೊತೆ ನಡೆದುಕೊಂಡ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೂ ವಿಡಿಯೋ ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಠ್ಯಪುಸ್ತಕದಲ್ಲಿ ನೋಟ್ ಮಾಡ್ಕೊಂಡಿದ್ದಕ್ಕೆ ಥಳಿತ- ವಿದ್ಯಾರ್ಥಿ ಭುಜ ಮುರಿತ..!

    ಪಠ್ಯಪುಸ್ತಕದಲ್ಲಿ ನೋಟ್ ಮಾಡ್ಕೊಂಡಿದ್ದಕ್ಕೆ ಥಳಿತ- ವಿದ್ಯಾರ್ಥಿ ಭುಜ ಮುರಿತ..!

    ಶಿವಮೊಗ್ಗ: ಇಲ್ಲಿನ ದುರ್ಗಿಗುಡಿ ಶಾಲೆಯ ಶಿಕ್ಷಕನೋರ್ವ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದ ಕಾರಣಕ್ಕೆ ವಿದ್ಯಾರ್ಥಿಗೆ ಥಳಿಸಿದ್ದು, ಇದರಿಂದಾಗಿ ವಿದ್ಯಾರ್ಥಿಯ ಭುಜ ಮುರಿತಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಶಾಲಾ ಶಿಕ್ಷಕನ ಹೊಡೆತಕ್ಕೆ ನಲುಗಿ ವಿದ್ಯಾರ್ಥಿ ಗೌತಮ್ ಭುಜದ ಮೂಳೆ ಮುರಿದಿದೆ. ಗೌತಮ್ ನಗರದ ದುರ್ಗಿಗುಡಿ ಶಾಲೆಯ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜ. 9 ರಂದು ಶಾಲೆಯಲ್ಲಿ ಕನ್ನಡ ವಿಷಯ ಪಾಠದ ವೇಳೆ ಗೌತಮ್ ಕನ್ನಡ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದನಂತೆ, ಇದನ್ನ ಗಮನಿಸಿದ ಶಾಲೆಯ ಮೇಷ್ಟ್ರು ಪರಮೇಶ್ವರ್ ರಫ್ ನೋಟ್ ಬುಕ್ ಎಲ್ಲಿ ಎಂದು ವಿಚಾರಿಸಿ ಕೆನ್ನೆಗೆ ಭಾರಿಸಿದ್ದಾರಂತೆ. ತಂದಿಲ್ಲ ಎಂದು ಉತ್ತರ ನೀಡಿರುವ ವಿದ್ಯಾರ್ಥಿಗೆ ಬೆನ್ನಿನ ಮೇಲೆ ಭಾರಿಸಿದ್ದಾರೆ. ಇದರಿಂದಾಗಿ ತರಗತಿಯ ಟೇಬಲ್ ಗೆ ವಿದ್ಯಾರ್ಥಿಯ ಎಡಭುಜ ತಗುಲಿ ಫ್ರಾಕ್ಚರ್ ಆಗಿದೆ.

    ಗಾಯಗೊಂಡು ನಲುಗಿದ್ದ ವಿದ್ಯಾರ್ಥಿಗೆ ಪುನಃ ಆ ಕನ್ನಡ ಮೇಷ್ಟ್ರು, ನಾಟಕ ಮಾಡುತ್ತಿಯಾ ಎಂದು ಮತ್ತೆ ಥಳಿಸಿದ್ದಲ್ಲದೇ, ನಿಂದಿಸಿದ್ದಾರೆ. ನಂತರ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕವೂ ಗೌತಮ್‍ಗೆ ಎರಡು ದಿನ ತೀವ್ರವಾಗಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತನನ್ನ ಪುನಃ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಭುಜ ಮುರಿದಿದೆ ಎಂದು ತಿಳಿದುಬಂದಿರುವುದಾಗಿ ವಿದ್ಯಾರ್ಥಿಯ ಪಾಲಕರಾದ ಸುಮತಿ ತಿಳಿಸಿದ್ದಾರೆ.

    ಒಬ್ಬ ಶಾಲಾ ಶಿಕ್ಷಕನಾದವನಿಗೆ ವಿದ್ಯಾರ್ಥಿಗಳ ಸೂಕ್ಷ್ಮತೆ ಮತ್ತು ಪರಿಸ್ಥಿತಿಯ ಅರಿವಿರಬೇಕು. ಆದರೆ ಈ ಸೂಕ್ಷ್ಮತೆಯ ಅರಿವಿಲ್ಲದ ಕಾರಣ ಮೇಷ್ಟ್ರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv