Tag: teacher

  • ಬುದ್ಧಿಮಾಂದ್ಯ ಮಕ್ಕಳಿಗೆ ದಾರಿದೀಪವಾದ್ರು ಚಿಂತಾಮಣಿಯ ಅಮೃತವಲ್ಲಿ

    ಬುದ್ಧಿಮಾಂದ್ಯ ಮಕ್ಕಳಿಗೆ ದಾರಿದೀಪವಾದ್ರು ಚಿಂತಾಮಣಿಯ ಅಮೃತವಲ್ಲಿ

    ಚಿಕ್ಕಬಳ್ಳಾಪುರ: ವಿಶೇಷಚೇತನ ಹಾಗೂ ಬುದ್ಧಿಮಾಂದ್ಯರನ್ನ ಮಕ್ಕಳಿಗಾಗಿಯೇ ಚಿಕ್ಕಬಳ್ಳಾಪುರದ ಅಮೃತವಲ್ಲಿ ಟೀಚರ್ `ಆಧಾರ’ ಅನ್ನೋ ಶಾಲೆ ತೆರೆದು ಶಿಕ್ಷಣ ನೀಡ್ತಿದ್ದಾರೆ.

    ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ನಿವಾಸಿಯಾಗಿರೋ ಅಮೃತವಲ್ಲಿ 65 ವರ್ಷದ ಇಳಿವಯಸ್ಸಲ್ಲೂ ಬುದ್ಧಿಮಾಂದ್ಯ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದಿ ಸಂಶೋಧನೆ ವೇಳೆ ಅವಘಡ ಸಂಭವಿಸಿ ದೃಷ್ಟಿದೋಷಕ್ಕೀಡಾಗಿದರು. ಇದಾದ ನಂತರ ಮದುವೆ ಮುಂದೂಡಿ ಖಾಸಗಿ ಶಾಲೆಯಲ್ಲಿ 2 ದಶಕಗಳ ಕಾಲ ವಿಜ್ಞಾನ, ಇಂಗ್ಲೀಷ್ ಬೋಧಿಸಿದರು.

    ದೃಷ್ಟಿದೋಷ 45ನೇ ವಯಸ್ಸಿನಲ್ಲಿ ಅಧಿಕವಾಗಿ ಕಾಡಿತು. ಶಿಕ್ಷಕ ವೃತ್ತಿ ಬಿಟ್ಟು ಮನೆಯಲ್ಲೇ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಆರಂಭಿಸಿದ್ರು. ಬಿಡುವಿನ ವೇಳೆ ಆತ್ಮವಿಕಸನ ಅನ್ನೋ ಯೋಗ ತರಬೇತಿಗೆ ಸೇರಿದ್ರು. ಆಚಾರ್ಯ ವಿನಯ್ ಗೂರೂಜಿಗಳ ಮಾತಿನಿಂದ ಪ್ರೇರಣೆಯಾಗಿ ಬುದ್ಧಿಮಾಂದ್ಯ ಮಕ್ಕಳ ಸೇವೆಗೆ ಮುಂದಾದರು.

    2006ರಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಶಾಲೆ ಆರಂಭಿಸುವ ಯೋಚನೆ ಬಂದಾಗ ಯೋಗ ತರಬೇತಿಗೆ ಮದ್ದಿರೆಡ್ಡಿ, ಬಾಬುರೆಡ್ಡಿ, ರಾಜಶೇಖರರೆಡ್ಡಿ ಸಾಥ್ ನೀಡಿದ್ರು. `ವಿ ಫೀಲ್’ ಅನ್ನೋ ಟ್ರಸ್ಟ್ ಸ್ಥಾಪಿಸಿ, ಟ್ರಸ್ಟ್ ಸದಸ್ಯರೊಬ್ಬರ ರೇಷ್ಮೆ ನೂಲು ಕಾರ್ಖಾನೆಯಲ್ಲಿ `ಆಧಾರ’ ಶಾಲೆ ಆರಂಭಿಸಿದ್ರು. ವಿದ್ಯಾರ್ಥಿಗಳು, ಸಾರ್ವಜನಿಕರಿಂದ ದೇಣಿಗೆ ಪಡೆದು ಸದ್ಯ ಸ್ವಂತ ಕಟ್ಟಡ ತಲೆ ಎತ್ತಿದೆ. ಶಾಲೆಯಲ್ಲಿ 35 ರಿಂದ 40 ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ, ನೃತ್ಯ, ಹಾಡು, ಕ್ರೀಡೆ ಸೇರಿದಂತೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹೊಸ ಪ್ರಪಂಚವನ್ನ ಪರಿಚಯಿಸುತ್ತಿದ್ದಾರೆ ಎಂದು ವಿ ಫೀಲ್ ಸಂಸ್ಥೆ ಸದಸ್ಯ ಮದ್ದಿರೆಡ್ಡಿ ತಿಳಿಸಿದ್ದಾರೆ.

    ಆಧುನಿಕ ಯುಗದ ಮದರ್ ಥೇರೆಸಾರಂತೆ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳು ಹಾಗೂ ಮನೆಯಲ್ಲಿ 90 ವರ್ಷದ ತಾಯಿ ಸೇವೆಯನ್ನೂ ಮಾಡ್ತಿರೋ ಅಮೃತವಲ್ಲಿಯವರು ಪಿಎಚ್‍ಡಿಯನ್ನೂ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆ

    ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆ

    ತಿರುವನಂತಪುರಂ: ಯೂನಿಫಾರಂ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳಾದ ಕಟ್ಟಪ್ಪನದಲ್ಲಿ ನಡೆದಿದೆ.

    ಅಭಿನ್ ಸುರೇಶ್(19) ಶಿಕ್ಷಕನ ಮೇಲೆ ಹಲ್ಲೆ ಮಾಡಿ ಅರೆಸ್ಟ್ ಆದ ವಿದ್ಯಾರ್ಥಿ. ಮಂಗಳವಾರ ಅಭಿನ್ ಹಾಲ್ ಟಿಕೆಟ್ ಪಡೆಯಲು ಯೂನಿಫಾರಂ ಧರಿಸದೇ ಶಾಲೆಗೆ ಹೋಗಿದ್ದನು. ಅಲ್ಲದೇ ಶಿಕ್ಷಕನ ಅನುಮತಿ ಪಡೆಯದೇ ಕ್ಲಾಸ್‍ರೂಂ ಒಳಗೆ ಹೋಗಿದ್ದನು.

    ಈ ವೇಳೆ ಅಭಿನ್‍ನ ಭೂಗೋಳ ಶಿಕ್ಷಕ ಎಸ್. ಜಯದೇವ್ ಯೂನಿಫಾರಂ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಶಿಸ್ತಿನಿಂದ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಅಭಿನ್ ತನ್ನ ಶಿಕ್ಷಕ ಜಯದೇವ್‍ಗೆ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಪರಿಣಾಮ ಶಿಕ್ಷಕನ ಕೆನ್ನೆ ಹಾಗೂ ಕಿವಿಗೆ ಗಾಯಗಳಾಗಿದೆ.

    ಅಭಿನ್ ತನ್ನ ಕಬ್ಬಿಣದ ಕಡುಗದಿಂದ ನನ್ನ ಹೊಟ್ಟೆಗೆ ಪಂಚ್ ಮಾಡಿದ್ದಾನೆ ಎಂದು ಶಿಕ್ಷಕ ಜಯದೇವ್ ಆರೋಪಿಸಿದ್ದಾರೆ. ಸದ್ಯ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಜಯದೇವ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜಯದೇವ್ ಕಿರುಚಾಟ ಕೇಳುತ್ತಿದ್ದಂತೆ ಅಕ್ಕಪಕ್ಕದ ಕ್ಲಾಸ್‍ರೂಮಿನಲ್ಲಿದ್ದ ಬೇರೆ ಶಿಕ್ಷಕರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಭಿನ್ ವಿರುದ್ಧ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿನ್‍ನನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    ಡ್ರಾಪ್ ಕೊಡೋದಾಗಿ ಹೇಳಿ ಕಾಡಿಗೆ ಕರ್ಕೊಂಡು ಹೋಗಿ ಶಿಕ್ಷಕನಿಂದ ರೇಪ್

    -ಸಾಮಾಜಿಕ ಜಾಲತಾಣಕ್ಕೆ ಫೋಟೋ ಅಪ್ಲೋಡ್

    ಭುವನೇಶ್ವರ: ಶಾಲಾ ಶಿಕ್ಷಕನೋರ್ವ ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಮುರಿಬಾಹಲ್ ಪ್ರದೇಶದಲ್ಲಿ ನಡೆದಿದೆ.

    ಈ ಕುರಿತು ಸಂತ್ರಸ್ತೆಯ ಕುಟುಂಬ ಸದಸ್ಯರು ಮುರಿಬಾಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿದ್ದಲ್ಲದೆ ಅತ್ಯಾಚಾರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡಿದ್ದಾನೆ. ಆರೋಪಿಯನ್ನು ಗಾನೋ ಸೆಲಾಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಫೆಬ್ರವರಿ 6 ರಂದು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ಆಗ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗಾನೋ ಸೆಲಾಮಾ ಬಂದು ತಾನು ಕಾಲೇಜಿಗೆ ಡ್ರಾಪ್ ಮಾಡುತ್ತೇನೆಂದು ಹೇಳಿ ಕೂರಿಸಿಕೊಂಡಿದ್ದಾನೆ. ನಂತರ ಕಾಲೇಜಿಗೆ ಡ್ರಾಪ್ ಮಾಡುವ ಬದಲು ಆಕೆಯನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಜೊತೆಗೆ ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸ್ವಲ್ಪ ದಿನದ ನಂತರ ಆರೋಪಿ ಅತ್ಯಾಚಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾನೆ. ಆ ಫೋಟೋ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಕುಟುಂಬಸ್ಥರು ಈ ಕುರಿತು ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇನೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಕೊಪ್ಪಳ: ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ಪಾಕ್ ವಿರುದ್ಧ ಶಿಕ್ಷಕರೊಬ್ಬರು ಬರೆದ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಕೊಪ್ಪಳದ ಶಿಕ್ಷಕ ಹನುಮಂತಪ್ಪ ಕುರಿ ಪಾಕಿಸ್ತಾನದ ವಿರುದ್ಧ ಸ್ವತಃ ತಾವೇ ಹಾಡು ಬರೆದು ಹಾಡಿದ್ದಾರೆ. ಕೆಣಕಬೇಡಿ, ಕೆಣಕಬೇಡಿ ಪಾಕಿಗಳೆ. ಕೆಣಕಿ, ತಿಣುಕಬೇಡಿ ತಿರುಬೋಕಿಗಳೆ ಎಚ್ಚರ ಎಂದು ಶಿಕ್ಷಕ ಹಾಡಿದ್ದಾರೆ. ಈ ಹಾಡಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮನ ಗೆದ್ದಿದೆ.

    ಒಟ್ಟು 3 ನಿಮಿಷ 42 ಸೆಕೆಂಡ್ ಇರುವ ಈ ಹಾಡಿನಲ್ಲಿ ಪಾಕಿಸ್ತಾನವನ್ನ ಶಿಕ್ಷಕ ಹನುಮಂತಪ್ಪ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಈ ಹಾಡಿನಲ್ಲಿ ನಮ್ಮ ಭಾರತದ ಸರ್ವಧರ್ಮದ ಸೌಹಾರ್ದತೆಯನ್ನು ಹಾಗೂ ಕೆಚ್ಚೆದೆಯ ವೀರರನ್ನು ಹನುಮಂತಪ್ಪ ಅಭಿಮಾನದಿಂದ ಹೊಗಳಿದ್ದಾರೆ. ಜವಾನರಿಗೆ ಜೈಕಾರ ಪಾಕಿ ದಿವಾನರಿಗೆ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹಾಡಿನಿಂದಲೇ ಶಿಕ್ಷಕ ಪಾಕ್‍ಗೆ ಚಾಟಿ ಏಟು ನೀಡಿ ಫುಲ್ ವೈರಲ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆ ಮುಂದೆ ನಿಂತಿದ್ದ ಶಿಕ್ಷಕಿ ಕುತ್ತಿಗೆಗೆ ಚಾಕು ಹಾಕಿದ ಪಾಗಲ್ ಪ್ರೇಮಿ

    ಶಾಲೆ ಮುಂದೆ ನಿಂತಿದ್ದ ಶಿಕ್ಷಕಿ ಕುತ್ತಿಗೆಗೆ ಚಾಕು ಹಾಕಿದ ಪಾಗಲ್ ಪ್ರೇಮಿ

    ಚೆನ್ನೈ: ಪ್ರೀತಿ ನಿರಾಕರಿಸಿದಕ್ಕೆ ಪ್ರಿಯಕರನೇ ಶಾಲೆಯ ಆವರಣದ ಮುಂದೆ ನಿಂತಿದ್ದ 23 ವರ್ಷದ ಶಿಕ್ಷಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

    ಎಸ್.ರಮ್ಯಾ(23) ಕೊಲೆಯಾದ ಶಿಕ್ಷಕಿ. ರಮ್ಯಾ ಕುರಿಂಜಿಪಾಡಿನಲ್ಲಿರುವ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಮೃತ ರಮ್ಯಾ ಕಡಲೂರಿನ ಪೆರಿಯಾರ್ ಆರ್ಟ್ಸ್ ಕಾಲೇಜಿನಿಂದ ಪದವಿ ಪಡೆದ ನಂತರ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


    ಶುಕ್ರವಾರ ಮುಂಜಾನೆ ಗ್ರಾಮದ ಶಾಲೆಯ ಗೇಟ್ ತೆರೆದಿರಲಿಲ್ಲ. ಹೀಗಾಗಿ ಮೃತ ಶಿಕ್ಷಕಿ ಶಾಲೆಯ ಮುಂದೆಯೇ ನಿಂತು ಕಾಯುತ್ತಿದ್ದರು. ಈ ವೇಳೆ ಆರೋಪಿ ರಾಜಾಶೇಖರ್ ಮೋಟಾರು ಬೈಕಿನಲ್ಲಿ ಬಂದು ಶಿಕ್ಷಕಿಯ ಸಮೀಪಕ್ಕೆ ಹೋಗಿದ್ದಾನೆ. ನಂತರ ಏಕಾಏಕಿ ಚಾಕುವಿನಿಂದ ಶಿಕ್ಷಕಿಯ ಕುತ್ತಿಗೆ ಇರಿದು ಪರಾರಿಯಾಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವವಾಗಿದ್ದರಿಂದ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ರಾಜಶೇಖರ್ ಊಮಂಗಲಂ ನಿವಾಸಿಯಾಗಿದ್ದು, ಕೆಲವು ತಿಂಗಳಿನಿಂದ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ರಮ್ಯಾರನ್ನು ಹಿಂಬಾಲಿಸುತ್ತಿದ್ದನು. ಇತ್ತೀಚೆಗೆ ಮದುವೆಯಾಗುವಂತೆ ಕೂಡ ಕೇಳಿದ್ದಾನೆ. ಆದರೆ ರಮ್ಯಾ ಆತನ ಪ್ರೀತಿಯನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಾವು ಕೊಲೆ ಮಾಡಿದ್ದ ಆರೋಪಿಯನ್ನು ಗುರುತಿಸಿದ್ದೇವೆ. ಈ ಕುರಿತು ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಆರೋಪಿಯ ಹುಡುಕಾಟ ನಡೆಸುತ್ತಿದ್ದು, ಶೀಘ್ರವೇ ಬಂಧಿಸುತ್ತೇವೆ. ರಾಜಶೇಖರ್ ವಿರುದ್ಧ ಈ ಹಿಂದೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧೀಕ್ಷಕ ಪಿ. ಸರವಣನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾತ್‍ರೂಂನಲ್ಲಿ ಅಡಗಿಸಿಟ್ಟು ಶಿಕ್ಷಕನಿಂದ 14ರ ಬಾಲಕನಿಗೆ ಲೈಂಗಿಕ ದೌರ್ಜನ್ಯ

    ಬಾತ್‍ರೂಂನಲ್ಲಿ ಅಡಗಿಸಿಟ್ಟು ಶಿಕ್ಷಕನಿಂದ 14ರ ಬಾಲಕನಿಗೆ ಲೈಂಗಿಕ ದೌರ್ಜನ್ಯ

    ವದೆಹಲಿ: ಶಿಕ್ಷಕನೊಬ್ಬ 14 ವರ್ಷದ ಅಪ್ರಾಪ್ತ ವಿದ್ಯಾರ್ಥಿಗೆ ಆತನ ಮನೆಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ನಡೆದಿದ್ದು, ಆರೋಪಿ ಶಿಕ್ಷಕ ಎರಡು ತಿಂಗಳಿನಿಂದ ವಿದ್ಯಾರ್ಥಿಗೆ ಭೋದನೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    35 ವರ್ಷ ವಯಸ್ಸಿನ ಆರೋಪಿ ಶಿಕ್ಷಕ ಹೈಡ್ ಆ್ಯಂಡ್ ಸೀಕ್ ಆಟವನ್ನು ಆಡೋಣ ಎಂದು ಹೇಳಿ ಹುಡುಗನನ್ನು ಬಾತ್‍ರೂಮ್ ಒಳಗೆ ಕರೆದುಕೊಂಡು ಹೋಗಿ ಅಡಗಿಸಿಟ್ಟಿದ್ದಾನೆ. ಅಲ್ಲಿ ಹುಡುಗನನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಈ ಘಟನೆ ನಡೆದ ವೇಳೆಯಲ್ಲಿ ಹುಡುಗನ ಪೋಷಕರು ಮನೆಯಲ್ಲಿ ಇರಲಿಲ್ಲ. ವಿದ್ಯಾರ್ಥಿಯ ಪೋಷಕರು ಮನೆಗೆ ಬಂದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಬಳಿಕ ಪೋಷಕರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್ ಹೇಳಿದ್ದಾರೆ.

    ಪೊಲೀಸರು ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಠ ಮಾಡು ಅಂದ್ರೆ ಲವ್ ಮಾಡು ಅಂತಾನೆ – ಕೊಪ್ಪಳದಲ್ಲಿದ್ದಾನೆ ಕಾಮುಕ ಶಿಕ್ಷಕ

    ಪಾಠ ಮಾಡು ಅಂದ್ರೆ ಲವ್ ಮಾಡು ಅಂತಾನೆ – ಕೊಪ್ಪಳದಲ್ಲಿದ್ದಾನೆ ಕಾಮುಕ ಶಿಕ್ಷಕ

    ಕೊಪ್ಪಳ: ಇತ್ತೀಚೆಗೆ ವಿದ್ಯಾದೇಗುಲಗಳಲ್ಲಿ ಲೈಂಗಿಕ ಪ್ರಕರಣಗಳು ಹೆಚ್ಚಾಗ್ತಿವೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿನಿಗೆ ಪೀಡಿಸಿರುವ ಆರೋಪವೊಂದು ಕೇಳಿಬಂದಿದೆ.

    ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕ ಇಬ್ರಾಹಿಂಗೆ ಗ್ರಾಮಸ್ಥರೇ ಪಾಠ ಮಾಡಿದ್ದಾರೆ.

    ಶಿಕ್ಷಕನ ವಿರುದ್ಧ ಆರೋಪವೇನು?
    ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ಟಾಫ್ ರೂಮಿಗೆ ಕರೆದು ಪಪ್ಪಿ ಕೊಡು ನನ್ನ ಲವ್ ಮಾಡು ಎಂದು ಪೀಡಿಸಿದ್ದಾನೆ. ವಿದ್ಯಾರ್ಥಿನಿಯೊಬ್ಬಳು ಶಿಕ್ಷಕನ ಕಿರುಕುಳದಿಂದ ಬೇಸತ್ತು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ಈ ಬಗ್ಗೆ ಮನೆಯಲ್ಲಿ ಪೋಷಕರು ವಿಚಾರಿಸಿದಾಗ ವಿದ್ಯಾರ್ಥಿನಿ ಶಿಕ್ಷಕ ತನ್ನ ಜೊತೆ ತೋರಿದ ಅನುಚಿತ ವರ್ತನೆಯ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಗೆ ಆಗಮಿಸಿ ಇಂತಹ ಶಿಕ್ಷಕ ನಮ್ಮ ಶಾಲೆಗೆ ಬೇಡ ಕೂಡಲೇ ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಈ ಬಗ್ಗೆ ಶಿಕ್ಷಕನನ್ನು ಕೇಳಿದ್ರೆ ನಾನೇನೂ ತಪ್ಪು ಮಾಡಿಲ್ಲ ಸಾರ್. ಬೇಕಿದ್ರೆ ಮಕ್ಕಳನ್ನೇ ಕೇಳಿ ಎಂದು ಹೇಳಿಕೊಳ್ಳುತ್ತಾನೆ. ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಿಕ್ಷಕ ಇಬ್ರಾಹಿಂ ಕಣ್ಣೀರು ಹಾಕಿದ್ದಾನೆ.

    ಗ್ರಾಮಸ್ಥರ ಒತ್ತಾಯದ ಮೆರೆಗೆ ಶಾಲೆಗೆ ಆಗಮಿಸಿದ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಗ್ರಾಮಸ್ಥರ ದೂರನ್ನು ಕೇಳಿ, ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರ ಮತ್ತು ವಿದ್ಯಾರ್ಥಿನಿಯ ಹೇಳಿಕೆಯನ್ನ ಸ್ವೀಕರಿಸಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಶಿಕ್ಷಕ ಇಬ್ರಾಹಿಂ ಇಂತಹ ಕೃತ್ಯವೆಸಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಕೂಡ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    6ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ!

    ಕೊಪ್ಪಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ.

    ಶಾಲೆಯಲ್ಲಿ ಶಿಕ್ಷಕನಾಗಿರುವ ಇಬ್ರಾಹಿಂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಶಿಕ್ಷಕನ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ವಿಷಯ ತಿಳಿದ ಬಳಿಕ ಕೋಪಗೊಂಡ ಬಾಲಕಿಯ ಪೋಷಕರು ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ಈ ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿದ್ದಾರೆ. ಹಾಗೆಯೇ ಮೊದಲು ಪ್ರಕರಣದ ತನಿಖೆ ನಡೆಸಲಾಗುತ್ತದೆ. ಬಳಿಕ ಶಿಕ್ಷಕನ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ

    ಶಾಲೆಯ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ

    ರಾಂಚಿ: ಶಿಕ್ಷಕನೋರ್ವ ಶಾಲೆಯ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಾರ್ಖಂಡ್ ರಾಜ್ಯದ ಕೊಡ್ರಮಾ ಜಿಲ್ಲೆಯ ಜಿ.ಎಸ್.ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದಿದೆ.

    ವಿಶಾಲ್ ಶರ್ಮಾ ಆತ್ಮಹತ್ಯೆಗೆ ಶರಣಾದ ಶಿಕ್ಷಕ. ವಿಶಾಲ್ ಶರ್ಮಾ ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮಂಗಳವಾರ ಎಂದಿನಂತೆ ಬೆಳಗ್ಗೆ ಪ್ರಾರ್ಥನೆಗೆ ಶಿಕ್ಷಕ ವಿಶಾಲ್ ಗೈರಾಗಿದ್ದರು. ಮಕ್ಕಳು ಶಿಕ್ಷಕರನ್ನು ಕರೆ ತರುವುದಾಗಿ ಅವರ ಕೋಣೆಯತ್ತ ತೆರಳಿದ್ದರು. ಬಾಗಿಲು ಹಾಕಿದ್ದರಿಂದ ಮಕ್ಕಳು ಕಿಟಕಿಯಲ್ಲಿ ನೋಡಿದಾಗ ವಿಶಾಲ್ ಶವ ನೇತಾಡುವ ಸ್ಥಿತಿಯಲ್ಲಿತ್ತು. ಇದನ್ನ ಕಂಡ ಮಕ್ಕಳು ಜೋರಾಗಿ ಕಿರುಚುತ್ತಾ ಮೈದಾನದತ್ತ ಓಡಿ ಬಂದರು ಎಂದು ಶಾಲೆಯ ನಿರ್ದೇಶಕ ನಿತೇಶ್ ಕುಮಾರ್ ತಿಳಿಸಿದ್ದಾರೆ.

    ಸದ್ಯ ಶಾಲೆಗೆ ರಜೆ ನೀಡಲಾಗಿದ್ದು, ಪೊಲೀಸರು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ವಿಶಾಲ್ ಮೂಲತಃ ಗಿರಿಡಿಹ ಜಿಲ್ಲೆಯ ಲೆದಾ ಬರ್ಕಟ್ಟಾ ನಿವಾಸಿಯಾಗಿದ್ದು, ಆತನ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ. ಸೋಮವಾರ ರಾತ್ರಿ 9 ಗಂಟೆಯವರೆಗೂ ವಿಶಾಲ್ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಶಾಲೆಯಲ್ಲಿ ಆಯೋಜಿಸಿರುವ ಸರಸ್ವತಿ ಪೂಜೆಗೆ ಯಾರನ್ನು ಆಹ್ವಾನಿಸಬೇಕು ಎಂಬುದರ ಕುರಿತಾಗಿ ನಮ್ಮ ಜೊತೆ ಚರ್ಚೆ ನಡೆಸಿದ್ದರು. ತಾವೇ ಎಲ್ಲ ಆಹ್ವಾನ ಪತ್ರಿಕೆಗಳ ಮೇಲೆ ಅತಿಥಿಗಳ ಹೆಸರು ಬರೆದು ತಮ್ಮ ಕೋಣೆಯತ್ತ ಹೋಗಿದ್ದರು. ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿಶಾಲ್ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ನಿತೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಹೋದ್ಯೋಗಿಯೊಂದಿಗೆ ಲವ್, ಸೆಕ್ಸ್, ದೋಖಾ – ಶಿಕ್ಷಕ ಅರೆಸ್ಟ್

    ಸಹೋದ್ಯೋಗಿಯೊಂದಿಗೆ ಲವ್, ಸೆಕ್ಸ್, ದೋಖಾ – ಶಿಕ್ಷಕ ಅರೆಸ್ಟ್

    ಭುವನೇಶ್ವರ: ಒಡಿಶಾದ ಜಾಜ್ಪುರ್ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತನ್ನ ಸಹೋದ್ಯೋಗಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮೋಸ ಮಾಡಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಬಿನೋದ್ ಬಿಹಾರಿ ಸೇಥಿ ಎಂದು ಗುರುತಿಸಲಾಗಿದೆ. ಧರ್ಮಶಾಲಾದಲ್ಲಿರುವ ಸರ್ಕಾರಿ ಸ್ವಾಮ್ಯದ ಹೈಸ್ಕೂಲ್ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಸೇಥಿ ತನ್ನ ಸಹೋದ್ಯೋಗಿಯನ್ನು ಮದುವೆಯಾಗುತ್ತೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಬಳಿಕ ಆಕೆಯ ಜೊತೆ ದೈಹಿಕವಾಗಿ ಸಂಬಂಧ ಹೊಂದಿದ್ದನು. ದಿನಕಳೆದಂತೆ ಸಂತ್ರಸ್ತೆ ಮದುವೆಯ ಪ್ರಸ್ತಾಪವನ್ನು ಆತನ ಮುಂದೆ ಇಟ್ಟಿದ್ದಾರೆ.

    ಈ ವೇಳೆ ಆರೋಪಿ ಸೇಥಿ ಮದುವೆಯಾಗುವುದನ್ನು ತಿರಸ್ಕರಿಸಿದ್ದಾನೆ. ಇದರಿಂದ ನೊಂದ ಮಹಿಳಾ ಶಿಕ್ಷಕಿ ದೂರು ದಾಖಲಿಸಿದ್ದಾರೆ. ಆರೋಪಿ ಸೇಥಿ ವಿರುದ್ಧ ಐಪಿಸಿ ಸೆಕ್ಷನ್ 341, 323, 325, 506 ಮತ್ತು 493 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಪ್ರಧಾನ್ ಹೇಳಿದ್ದಾರೆ.

    ಸದ್ಯಕ್ಕೆ ಸಂತ್ರಸ್ತೆಗೆ ಸ್ಥಳೀಯ ಆಸ್ಪತೆಯಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv