Tag: teacher

  • ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ಚಿಕ್ಕಮಗಳೂರು: ಸರ್… ಪ್ಲೀಸ್ ಹೋಗಬೇಡಿ, ನಮ್ಮನ್ನು ಬಿಟ್ಟು ಹೋಗಬೇಡಿ. ಪ್ಲೀಸ್ ಸರ್. ಬಿಇಓಗೆ ಫೋನ್ ಮಾಡಿ ನಾವೇ ಮಾತಾಡುತ್ತೇವೆ. ನೀವು ಮಾತ್ರ ಹೋಗುವುದೇ ಬೇಡ ಸರ್. ಹೀಗೆ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಣ್ಣೀರ ಧಾರೆಯನ್ನೇ ಹರಿಸಿರುವ ಅಪರೂಪದ ಘಟನೆ ಚಿಕ್ಕಮಗಳೂರಿನ ಕೈಮರದಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಗೇಶ್ ಅವರು ಸುಮಾರು 12 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಾಠಕ್ಕೆ ಮಾತ್ರ ಸೀಮಿತವಾಗದ ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಇದರಿಂದ ಇವರು ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದಾರೆ. ಆದರೆ ಶೈಕ್ಷಣಿಕ ವರ್ಷದಿಂದ ದುರ್ಗೇಶ್ ವರ್ಗಾವಣೆಯಾಗಿದ್ದಾರೆ.

    ಮಕ್ಕಳಿಗೆ ಈ ವಿಷಯ ಗೊತ್ತಾದರೆ ಬೇಜಾರಾಗುತ್ತಾರೆಂದು ಸಹೋದ್ಯೋಗಿಗಳಿಗೆ ಹೇಳಲು ಬಂದಿದ್ದರು. ನಂತರ ಮೆಲ್ಲಗೆ ಬಂದು ಬೈಕ್ ಹತ್ತುತ್ತಿದ್ದರು. ವಿಚಾರ ತಿಳಿದು ಓಡಿ ಬಂದ ಮಕ್ಕಳು ನೆಚ್ಚಿನ ಶಿಕ್ಷಕರನ್ನ ಬಿಗಿದಪ್ಪಿ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಪ್ಲೀಸ್ ಸರ್ ಹೋಗಬೇಡಿ, ಬಿಇಓ ಹತ್ರ ನಾವೇ ಮಾತಾಡುತ್ತೇವೆ ಸರ್.. ನಮ್ಮನ್ನ ಬಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರೀತಿ ಕಂಡು ಶಿಕ್ಷಕ ದುರ್ಗೇಶ್ ಅವರು ಕೂಡ ಅತ್ತಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬಾಂಧವ್ಯ ಹೇಗಿರಬೇಕೆಂದು ಈ ಭಾವನಾತ್ಮಕ ದೃಶ್ಯ ಸಾರಿ ಹೇಳಿದೆ.

    ಶಿಕ್ಷಕರ ಕೆಲಸವೆಂದರೆ ತಿಂಗಳಾಂತ್ಯಕ್ಕೆ ಸಂಬಳಕ್ಕೆ ಸೀಮಿತವಾಗಿತ್ತೆ ಎಂಬ ಮಾತಿದೆ. ಬಹುತೇಕ ಅಂತವರ ಮಧ್ಯೆ ದುರ್ಗೇಶ್ ವಿಭಿನ್ನವಾಗಿ ನಿಂತಿದ್ದಾರೆ. ಇಂತಹ ಬಾಂಧವ್ಯ ಎಲ್ಲಾ ಶಿಕ್ಷಕರು-ವಿದ್ಯಾರ್ಥಿಗಳ ನಡುವೆ ಉಂಟಾದರೆ ಮಕ್ಕಳು ಭವ್ಯ ಭಾರತದ ಪ್ರಜೆಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮದ ಜನರು ಮಾತನಾಡಿಕೊಂಡಿದ್ದಾರೆ.

  • ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ: ವಿರಾಟ್ ಕೊಹ್ಲಿ

    ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ: ವಿರಾಟ್ ಕೊಹ್ಲಿ

    – ಕ್ರಿಕೆಟ್ ಮನುಷ್ಯತ್ವವನ್ನು ಸುಧಾರಿಸುವ ಶಿಕ್ಷಕ

    ಲಂಡನ್: ಕ್ರಿಕೆಟ್ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಮತ್ತು ಒಂದು ಉತ್ತಮ ಶಿಕ್ಷಕನಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಸೌಥಾಂಪ್ಟನ್‍ನಲ್ಲಿ ಅಂತಾರಾಷ್ಟೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಕ್ರಿಕೆಟ್ ಕ್ಲಿನಿಕ್ ಎಂಬ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಕಾಲ ಕಳೆದಿದ್ದು, ಆಟೋಗ್ರಾಫ್ ನೀಡಿ ಮಕ್ಕಳೊಂದಿಗೆ ಸಂವಹನ ನಡೆಸಿದ್ದಾರೆ.

    ಈ ಕಾರ್ಯಕ್ರಮದ ನಂತರ ಮಾತನಾಡಿರುವ ಕೊಹ್ಲಿ, ಕ್ರೀಡೆಯ ಉತ್ಸಾಹವನ್ನು ಮಕ್ಕಳ ಜೊತೆ ಹಂಚಿಕೊಂಡಿದ್ದು ತುಂಬಾ ಹೆಮ್ಮೆ ಎನಿಸಿತು. ಕ್ರಿಕೆಟ್ ಒಂದು ಉತ್ತಮ ಶಿಕ್ಷಕರಂತೆ ಆದು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ಒತ್ತಿ ಹೇಳಿ, ಅವರು ಬಾಲ್ಯದಲ್ಲಿ ಕ್ರಿಕೆಟ್ ಆಡಿದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ನನ್ನ ಬಾಲ್ಯದ ದಿನಗಳಲ್ಲಿ ಈ ರೀತಿಯಲ್ಲೇ ಪಾರ್ಕಿನಲ್ಲಿ ಆಟವಾಡಿ ಮೋಜು ಮಸ್ತಿ ಮಾಡುತ್ತಿದೆ. ಕ್ರಿಕೆಟ್ ಮಕ್ಕಳ ಜೀವನವನ್ನು ಸುಧಾರಿಸುತ್ತದೆ ಮತ್ತು ಮನುಷ್ಯತ್ವವನ್ನು ಸುಧಾರಿಸುತ್ತದೆ ಎಂದು ನಾನು ನಂಬಿದ್ದೇನೆ. ಕ್ರಿಕೆಟ್ ಜೀವನದ ಏರಿಳಿತಗಳನ್ನು ಅರ್ಥ ಮಾಡಿಸುತ್ತದೆ ಮತ್ತು ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸುತ್ತದೆ. ಅದ್ದರಿಂದ ನನ್ನ ಪ್ರಕಾರ ಕ್ರಿಕೆಟ್ ಉತ್ತಮ ಶಿಕ್ಷಕ ಎಂದು ಹೇಳಿದ್ದಾರೆ.

    ಇತ್ತೀಚಿನ ಕಾಲದಲ್ಲಿ ಹುಡುಗರು ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ಹುಡುಗಿಯರು ನಿಜವಾಗಿಯೂ ತುಂಬಾ ಫೋಕಸ್ ಆಗಿ ಇದ್ದಾರೆ. ಹುಡುಗಿಯರಿಗೆ ಕ್ರಿಕೆಟ್ ಬಗ್ಗೆ ಉತ್ತಮ ಪ್ರಜ್ಞೆ ಇದೆ. ನಾನು ಈ ಮಕ್ಕಳ ಮುಖದಲ್ಲಿ ಮತ್ತು ಕಣ್ಣಿನಲ್ಲಿ ತುಂಬಾ ಖುಷಿಯನ್ನು ಕಾಣುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ವಿರುದ್ಧ ಅರ್ಧ ಶತಕ ಸಿಡಿಸಿ ವೇಗವಾಗಿ ಏಕದಿನ ಕ್ರಿಕೆಟಿನಲ್ಲಿ 11 ಸಾವಿರ ರನ್ ಸಿಡಿಸಿ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶನಿವಾರ ನಡೆಲಿರುವ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. 104 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 20 ಸಾವಿರ ರನ್ ಸಿಡಿಸಿದ ವಿಶ್ವ ದಾಖಲೆ ಬರೆಯಲಿದ್ದಾರೆ.

    ವಿರಾಟ್ ಕೊಹ್ಲಿ 415 ಇನ್ನಿಂಗ್ಸ್ ಅಂದರೆ 131 ಟೆಸ್ಟ್, 222 ಏಕದಿನ ಪಂದ್ಯ ಹಾಗೂ 62 ಟಿ20 ಪಂದ್ಯಗಳಿಂದ ಒಟ್ಟು 19,886 ರನ್ ಸಿಡಿಸಿದ್ದಾರೆ. ಸದ್ಯ ಕೊಹ್ಲಿ 20 ಸಾವಿರ ರನ್ ಸಾಧನೆ ಮಾಡಲು 104 ರನ್ ಮಾತ್ರ ಅಗತ್ಯವಿದ್ದು, ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮದ್ವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಶಿಕ್ಷಕಿ

    ಮದ್ವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಶಿಕ್ಷಕಿ

    – ಮತ್ತೆ ಕೆಲಸಕ್ಕೆ ಹಾಜರಾಗದಂತೆ ಶಾಲಾ ಮಂಡಳಿ ಸೂಚನೆ

    ತಿರುವನಂತಪುರಂ: ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿ ಮದುವೆಯಾದ 4 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದು, ಈ ಕಾರಣವನ್ನೇ ನೀಡಿ ಶಾಲಾ ಮಂಡಳಿ ಶಿಕ್ಷಕಿಯನ್ನ ಕೆಲಸಕ್ಕೆ ಹಾಜರಾಗದಂತೆ ತಿಳಿಸಿದೆ.

    ಮದುವೆಯಾದ 4 ತಿಂಗಳಿಗೆ ಹೆರಿಗೆ ರಜೆಯನ್ನು ಹೇಗೆ ನೀಡಲಾಗುತ್ತದೆ ಎಂದು ಶಾಲೆಯಿಂದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಏನಿದು ಪ್ರಕರಣ:
    ಶಾಲಾ ಶಿಕ್ಷಕಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯೊಂದಿಗೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪ್ರಕ್ರಿಯೆ ತಡವಾಗಿ ನಡೆಯುತ್ತಿದ್ದ ಕಾರಣ ಶಿಕ್ಷಕಿ ಮತ್ತೊಬ್ಬ ಪುರುಷನೊಂದಿಗೆ ಲೀವಿಂಗ್ ಟುಗೇದರ್ ನಲ್ಲಿ ಇದ್ದರು. ಆ ಬಳಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದ ಶಿಕ್ಷಕಿ ತಾನು ಲೀವಿಂಗ್ ಟುಗೇದರ್ ಸಂಬಂಧದಲ್ಲಿದ್ದ ಪುರುಷನನ್ನು ಮದುವೆಯಾಗಿದ್ದು, ಮದುವೆಯಾದ ನಾಲ್ಕು ತಿಂಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ಪೊಲೀಸರಿಗೆ ದೂರು ನೀಡಿರುವ ಶಿಕ್ಷಕಿ, ತನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಯಾವುದೇ ಹಕ್ಕಿಲ್ಲ. ಆದ್ದರಿಂದ ತಮಗೇ ಪುನಃ ಶಾಲೆಯಲ್ಲಿ ಕೆಲಸಕ್ಕೆ ಹಾಜರಾಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಶಿಕ್ಷಕಿಯ ದೂರು ಪಡೆದಿರುವ ಪೊಲೀಸರು ಸದ್ಯ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಬೆಳಗಾವಿ: ಮಗು ಜಾಸ್ತಿ ಅಳುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬಳು ಚಮಚದಿಂದ ಮೂರು ವರ್ಷದ ಮುಗುವಿಗೆ ಬರೆ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಮಲ್ದಾರ್ ಗ್ರಾಮದ ಅಂಗನವಾಡಿಯ ಶಿಕ್ಷಕಿ ರೇಣುಕಾ ಬರೆ ಹಾಕಿದ ಶಿಕ್ಷಕಿ. ಬಾಲಕ ಮೊಹಮ್ಮದ್ ಕಬೀರ್ ಅಂಗನವಾಡಿಯಲ್ಲಿ ಜೋರಾಗಿ ಅಳುತ್ತಿದ್ದ. ಈತನನ್ನು ಹೆದರಿಸುವ ಉದ್ದೇಶದಿಂದ ಚಮಚವನ್ನು ಬಿಸಿ ಮಾಡಿ ಕೈಗೆ ಬರೆ ಹಾಕಿದ್ದಾಳೆ.

    ಮಧ್ಯಾಹ್ನ ಮನೆಗೆ ಬಂದ ಮಗುವಿನ ಕೈ ಗಮನಿಸಿದ ಪೋಷಕರು ಗಾಬರಿಗೊಂಡು ಕೂಡಲೇ ಅಂಗನವಾಡಿಗೆ ಬಂದು ವಿಚಾರಿಸಿದಾಗ ಶಿಕ್ಷಕಿ ರೇಣುಕಾ ಕೃತ್ಯ ಬೆಳಕಿಗೆ ಬಂದಿದೆ. ನಂತರ ಮಗುವಿನ ಕೈಗೆ ತೀವ್ರ ಗಾಯವಾಗಿದ್ದರಿಂದ ಕೂಡಲೇ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

    ಶಿಕ್ಷಕಿ ರೇಣುಕಾಳ ಕೃತ್ಯಕ್ಕೆ ಪೋಷಕರು ಆಕ್ರೋಶಗೊಂಡಿದ್ದು ಇತ್ತ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಅಪ್ರಾಪ್ತ ವಿದ್ಯಾರ್ಥಿನಿಗೆ ಪ್ರೇಮ ಪಾಠ – ಶಿಕ್ಷಕನಿಗೆ ಬಿತ್ತು ಗೂಸಾ

    ಅಪ್ರಾಪ್ತ ವಿದ್ಯಾರ್ಥಿನಿಗೆ ಪ್ರೇಮ ಪಾಠ – ಶಿಕ್ಷಕನಿಗೆ ಬಿತ್ತು ಗೂಸಾ

    ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿದ ಕಾಮುಕ ಶಿಕ್ಷಕನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ.

    ಪರಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಬು ಗೂಸ ತಿಂದ ಶಿಕ್ಷಕ. ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಶಿಕ್ಷಕ ಬಾಬು ಪ್ರೇಮಪಾಠ ಮಾಡಿದ್ದಾನೆ. ಶಾಲೆಯಲ್ಲಿಯೇ ಆಕೆಯ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಎಂದು ಸ್ಥಳೀಯರು ದೂರಿದ್ದಾರೆ.

    ಈ ವಿಷಯ ತಿಳಿದ ಪೋಷಕರು ವಿದ್ಯಾರ್ಥಿನಿಯನ್ನು ಶಾಲೆಗೆ ಕಳಿಸದೇ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದ ಶಿಕ್ಷಕ ಬಾಬು ಮನೆಗೆ ಹೋಗಿದ್ದಾನೆ. ಈ ವೇಳೆ ವಿದ್ಯಾರ್ಥಿನಿಯ ಪೋಷಕರು ಮನಗೆ ಬಂದಿದ್ದು, ಬಾನುನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ.

    ಶಿಕ್ಷಕ ಬಾಬು ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿನಿಯ ಪೋಷಕರು ಕೋಲು ತೆಗೆದುಕೊಂಡು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರು ಕಪಾಳ ಮೋಕ್ಷ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಕ್ಷಕ ಬಾಬುನನ್ನು ಬಂಧಿಸಿದ್ದಾರೆ.

    ನಮ್ಮ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿ, ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಆರೋಪಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯ ಪೋಷಕರು ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕ ಬಾಬು ವಿರುದ್ಧ ಐಪಿಸಿ ಸೆಕ್ಷನ್ 448 ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ಲಾರಿ, ಕಾರು ಮುಖಾಮುಖಿ ಡಿಕ್ಕಿಗೆ ಶಿಕ್ಷಕ ಬಲಿ

    ಲಾರಿ, ಕಾರು ಮುಖಾಮುಖಿ ಡಿಕ್ಕಿಗೆ ಶಿಕ್ಷಕ ಬಲಿ

    ಚಿಕ್ಕಮಗಳೂರು: ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರ ಸಮೀಪದ ಎಲೆಕಲ್ ಘಾಟಿಯ ಬಳಿ ನಡೆದಿದೆ.

    45 ವರ್ಷದ ಈಶ್ವರ ಮೃತಪಟ್ಟ ದುರ್ದೈವಿ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಮಹದೇವ್‍ಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಈಶ್ವರ್ ಎನ್.ಆರ್.ಪುರ ತಾಲೂಕಿನ ಹೊಸಕೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಕಾರು ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಹೋಗುತ್ತಿತ್ತು. ಲಾರಿ ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಎಲೆಕಲ್ ಘಾಟಿಯ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಈಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತಕ್ಕೆ ಕಾರಿನ ಅತಿಯಾದ ವೇಗವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ಮಂಗಳೂರು: 12ರ ಹರೆಯದ ಬಾಲಕನಿಗೆ ಮದರಸ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಮಸೀದಿಯಲ್ಲಿ ನಡೆದಿದೆ.

    ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ. ಅನ್ವರ್ ಮದರಸಕ್ಕೆ ಹೋಗಿದ್ದಾಗ ಮೌಲ್ವಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನಂತೆ.

    ಮೌಲ್ವಿಯ ಬೆದರಿಕೆಗೆ ಹೆದರಿ ಬಾಲಕ ಮದರಸ ಮತ್ತು ನಮಾಜ್‍ಗೂ ಹೋಗದೆ ಮನೆಯಲ್ಲೇ ಉಳಿದಿದ್ದನು. ಇದನ್ನು ಕಂಡ ಬಾಲಕನ ತಾಯಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ನಡೆದ ವಿಷಯವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ.

    ಸದ್ಯ ಈ ವಿಚಾರ ತಿಳಿದ ಬಾಲಕನ ತಾಯಿ, ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಕಾಮಚೇಷ್ಟೆ!

    ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿ ಜೊತೆಗೆ ಶಿಕ್ಷಕನ ಕಾಮಚೇಷ್ಟೆ!

    ಬಾಗಲಕೋಟೆ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳ ಜೊತೆಗೆ ಶಿಕ್ಷಕನೊಬ್ಬ ಅಸಭ್ಯವಾಗಿ ವರ್ತಸಿ, ಶಾಲೆಯ ಕಾರ್ಯಾಲಯದಲ್ಲೇ ವಿದ್ಯಾರ್ಥಿನಿಗೆ ಮುತ್ತಿಕ್ಕಿದ ಕಾಮುಕ ಶಿಕ್ಷಕನ ಆಟ ತಡವಾಗಿ ಬೆಳಕಿಗೆ ಬಂದಿದೆ.

    ಫೆಬ್ರವರಿ ತಿಂಗಳಲ್ಲಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಜೊತೆ ಶಿಕ್ಷಕನ ಕಾಮಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಕ್ಷಕ ವಿದ್ಯಾರ್ಥಿನಿ ಶಾಲೆಯ ಕಾರ್ಯಾಲಯದ ಒಳಗೆ ಬಂದಾಗ ಆಕೆಯ ಜೊತೆ ಅಸಭ್ಯ ವರ್ತನೆ ತೋರಿದ್ದಾನೆ. ಕಾರ್ಯಾಲಯದಲ್ಲೇ ವಿಧ್ಯಾರ್ಥಿನಿಯನ್ನು ಅಪ್ಪಿಕೊಂಡು, ಮುತ್ತಿಟ್ಟು ಆಕೆಯನ್ನು ಸ್ಪರ್ಶಿಸಿದ್ದಾನೆ. ಈ ವೇಳೆ ಶಿಕ್ಷಕನ ಕಾಮದಾಟದ ದೃಶ್ಯಗಳು ಕಾರ್ಯಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ವಿದ್ಯಾರ್ಥಿನಿ ತೊಡೆ ಮೇಲೆ ಮಲಗಿದ ಹಾಸನ ಪ್ರಿನ್ಸಿಪಾಲ್: ಫೋಟೋ ವೈರಲ್

    ಈ ಘಟನೆ ಬೆಳಕಿಗೆ ಬಂದಂತೆ ಶಾಲೆಯ ಮುಖ್ಯೋಪಾದ್ಯಾಯರು ಶಿಕ್ಷಕನನ್ನು ಎರಡು ತಿಂಗಳ ಹಿಂದೆಯೇ ಅಮಾನತು ಮಾಡಿದ್ದಾರೆ. ಅಲ್ಲದೆ ಶಿಕ್ಷಕನ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಮೇ 5ರಂದು ಎಫ್‍ಐಆರ್ ಕೂಡ ದಾಖಲಾಗಿದೆ.

    ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಕಾಮುಕ ಶಿಕ್ಷಕನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸದ್ಯ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

  • ಫೇಲಾದ SSLC ವಿದ್ಯಾರ್ಥಿನಿಗೆ ಲವ್ ಯೂ ಎಂದ ಶಿಕ್ಷಕ ಅರೆಸ್ಟ್

    ಫೇಲಾದ SSLC ವಿದ್ಯಾರ್ಥಿನಿಗೆ ಲವ್ ಯೂ ಎಂದ ಶಿಕ್ಷಕ ಅರೆಸ್ಟ್

    ಮಂಡ್ಯ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಲವ್ ಯೂ ಎಂದು ಹೇಳಿದ ಪೋಲಿ ಶಿಕ್ಷಕನನ್ನು ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿಕ್ಷಕ ಮೇಘನಾಥ್‍ನನ್ನು ಬಂಧಿತ ಆರೋಪಿ. ಮಂಡ್ಯ ನಗರದ ಖಾಸಗಿ ಶಾಲೆಯಲ್ಲಿ ಮೇಘನಾಥ್ ಇಂಗ್ಲಿಷ್ ಶಿಕ್ಷಕನಾಗಿದ್ದನು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾಗಿದ್ದ ವಿದ್ಯಾರ್ಥಿನಿಗೆ ಮೇಘನಾಥ್ ಪ್ರೀತಿಸುವಂತೆ ಪೀಡಿಸಿ, ದೌರ್ಜನ್ಯ ಎಸಗಿದ್ದ.

    ಶಿಕ್ಷಕ ಮೇಘನಾಥ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಶಿಕ್ಷಕ ವಿದ್ಯಾರ್ಥಿನಿಯ ಜೊತೆ ದೂರವಾಣಿ ಸಂಭಾಷಣೆಯಲ್ಲಿ ಪ್ರೀತಿಸುವಂತೆ ಪೀಡಿಸಿದ ಆಡಿಯೋ ಸಾಕ್ಷಧಾರವಾಗಿ ಇಟ್ಟುಕೊಂಡು ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ವಿದ್ಯಾರ್ಥಿನಿ ಫೇಲ್ ಆಗಿರುವುದನ್ನು ತಿಳಿದ ಶಿಕ್ಷಕ ಮೇಘನಾಥ್ ಒಂದು ವಿಷಯದಲ್ಲಿ ಫೇಲ್ ಆಗಿದೆ ಎಂದು ಹೇಳು ಎಂದು ವಿದ್ಯಾರ್ಥಿನಿಗೆ ಹೇಳಿದ್ದಾನೆ. ಅಲ್ಲದೆ ನಾನು ನಿನಗೆ ನೋಟ್ಸ್ ಕೊಟ್ಟು ಎಕ್ಸಾಂ ಬರೆಸ್ತೀನಿ ಎಂದು ಹೇಳಿದ್ದಾನೆ. ಬಳಿಕ ಬೇಜಾರಾಗಬೇಡ ನಾಳೆ ಅಥವಾ ನಾಡಿದ್ದು ಫೋನ್ ಮಾಡ್ತೀನಿ. ಆಗ ನೀನು ಬರುವಂತೆ. ಈಗ ಲೌಡ್ ಸ್ಪೀಕರ್ ಆಫ್ ಮಾಡಿದ್ಯಾ?. “ಸಂಜೆ ಸಿಗು?. ಐ ಲವ್ ಯೂ ಕಣೋ” ಎಂದು ಶಿಕ್ಷಕ ಫೋನಿನಲ್ಲಿ ವಿದ್ಯಾರ್ಥಿನಿಗೆ ಹೇಳಿದ್ದಾನೆ.

  • ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಲವ್ ಯೂ ಎಂದ ಶಿಕ್ಷಕ

    ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಲವ್ ಯೂ ಎಂದ ಶಿಕ್ಷಕ

    ಮಂಡ್ಯ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಪೋಲಿ ಶಿಕ್ಷಕನೊಬ್ಬ ಲವ್ ಯೂ ಎಂದು ಹೇಳಿದ್ದಾನೆ.

    ಮೇಘನಾಥ್ ಲವ್ ಯೂ ಎಂದು ಹೇಳಿದ ಶಿಕ್ಷಕ. ಮೇಘನಾಥ್ ಮಂಡ್ಯದ ನೆಹರು ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

    ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ವಿದ್ಯಾರ್ಥಿನಿ ಫೇಲ್ ಆಗಿರುವುದನ್ನು ತಿಳಿದ ಶಿಕ್ಷಕ ಮೇಘನಾಥ್ ಒಂದು ವಿಷಯದಲ್ಲಿ ಫೇಲ್ ಆಗಿದೆ ಎಂದು ಹೇಳು ಎಂದು ವಿದ್ಯಾರ್ಥಿನಿಗೆ ಹೇಳಿದ್ದಾರೆ. ಅಲ್ಲದೆ ನಾನು ನಿನಗೆ ನೋಟ್ಸ್ ಕೊಟ್ಟು ಎಕ್ಸಾಂ ಬರೆಸ್ತೀನಿ ಎಂದು ಹೇಳಿದ್ದಾನೆ.

    ಅಷ್ಟೇ ಅಲ್ಲದೆ ಬೇಜಾರಾಗಬೇಡ ನಾಳೆ ಅಥವಾ ನಾಡಿದ್ದು ಫೋನ್ ಮಾಡ್ತೀನಿ. ಆಗ ನೀನು ಬರುವಂತೆ. ಈಗ ಲೌಡ್ ಸ್ಪೀಕರ್ ಆಫ್ ಮಾಡಿದ್ಯಾ?. “ಸಂಜೆ ಸಿಗು…. ಐ ಲವ್ ಯೂ ಕಣೋ” ಎಂದು ಶಿಕ್ಷಕ ಫೋನಿನಲ್ಲಿ ವಿದ್ಯಾರ್ಥಿನಿಗೆ ಹೇಳಿದ್ದಾನೆ.

    ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಮೇಘನಾಥ್ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದಾರೆ.