Tag: teacher

  • ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಮುಖ್ಯ ಶಿಕ್ಷಕ ಮೃತಪಟ್ಟಿದ್ದಾರೆ.

    48 ವರ್ಷದ ಸುಭಾಷ್ ತಲಘಟ್ಟ ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಭಾಷ್, ಆನಂದ ನಗರದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯ ಕಡ್ಡಾಯ ವರ್ಗಾವಣೆ ನೀತಿಯನ್ನ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಅವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗಿರಿಗೆ ವರ್ಗಾವಣೆಗೊಂಡಿದ್ದರು. ಇದರಿಂದ ಮನನೊಂದು ಶಿಕ್ಷಕ ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂದು ಅವರ ಪತ್ನಿ ಹಾಗೂ ಸಂಬಂಧಿಕರು ಆರೋಪ ಮಾಡಿದ್ದರು.

    ಅಲ್ಲದೆ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಮುಂದೆ ಶಿಕ್ಷಕರು, ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಜಮಾಯಿಸಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪ ಮಾಡಲಾಗಿತ್ತು.

  • ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    ಶಿಷ್ಯೆ ಜೊತೆ ಪತಿಯ ಸೆಕ್ಸ್- ಪತಿ, ಪತ್ನಿಗೆ ಪಾಠ ಹೇಳದಂತೆ ಬ್ಯಾನ್

    – ಮನೆಯಲ್ಲಿ ಪತಿ ಜೊತೆ ಒಳಉಡುಪಿನಲ್ಲಿ ಸಿಕ್ಕ ಶಿಷ್ಯೆ

    ಲಂಡನ್: ಅಪ್ರಾಪ್ತೆ ಶಿಷ್ಯೆ ಜೊತೆ ಅಕ್ರಮ ಸಂಬಂಧ ಹೊಂದಿದ ಅಪರಾಧದ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಆತನ ಪತ್ನಿಗೆ ಭವಿಷ್ಯದಲ್ಲಿ ಪಾಠ ಹೇಳದಂತೆ ಬ್ಯಾನ್ ಮಾಡಲಾಗಿದೆ. ಅಪ್ರಾಪ್ತೆ ಶಿಷ್ಯೆ ಜೊತೆ ಪತಿ ಅಕ್ರಮ ಸಂಬಂಧವನ್ನ ಬಚ್ಚಿಟ್ಟದ್ದರಿಂದ ಪತ್ನಿಯೂ ಶಿಕ್ಷೆಗೆ ಗುರಿಯಾಗಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಇಬ್ಬರನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.

    ಜೇನ್ ಮತ್ತು ಬ್ರಿಯಾನಾ ಇಂಗ್ಲೆಂಡಿನ ವಾರ್‍ವಿಕ್ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮಕ್ಕಳಿಗೆ ಮನೆ ಪಾಠ ಸಹ ಮಾಡುತ್ತಿದ್ದರು. ಮನೆ ಪಾಠಕ್ಕೆ ಬರುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಕ್ರಮ ಸಂಬಂಧ ಹೊಂದಿದ್ದನು.

    ಮೊದಲ ಬಾರಿಗೆ ಸೂಪರ್ ಮಾರ್ಕೆಟ್ ನಲ್ಲಿ ವಿದ್ಯಾರ್ಥಿನಿಯನ್ನ ಭೇಟಿಯಾಗಿದ್ದ ಶಿಕ್ಷಕ ಕಾರ್ ಪಾರ್ಕಿಂಗ್ ನಲ್ಲಿ ಆಕೆಗೆ ಕಿಸ್ ಮಾಡಿದ್ದನು. ತದನಂತರ ತನ್ನ ಮನೆಗೆ ಆಹ್ವಾನಿಸಿ ವಿದ್ಯಾರ್ಥಿನಿ ಜೊತೆ ಮೂರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನು.

    ಒಂದು ಸಾರಿ ಮನೆಯ ಗೆಸ್ಟ್ ರೂಮಿನಲ್ಲಿ ವಿದ್ಯಾರ್ಥಿನಿ ಒಳಉಡುಪಿನಲ್ಲಿ ಪತಿ ಜೊತೆ ಸಿಕ್ಕಿದ್ದಾಳೆ. ಆದ್ರೆ ಶಿಕ್ಷಕಿ ವಿಷಯವನ್ನು ಬಾಲಕಿಯ ಕುಟುಂಬಕ್ಕೂ ಮತ್ತು ಶಿಕ್ಷಣ ಮಂಡಳಿಗೆ ತಿಳಿಸಿದೇ ಮರೆ ಮಾಚಿದ್ದಳು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭೋಧನಾ ನಿಯಂತ್ರಣ ಏಜೆನ್ಸಿಗೆ ಕೇಸ್ ವರ್ಗಾವಣೆ ಆಗಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿರುವ ಏಜೆನ್ಸಿ ಇಬ್ಬರ ಮೇಲೆ ನಿಷೇಧ ಹೇರಿದೆ. 2015 ಸೆಪ್ಟೆಂಬರ್ ನಲ್ಲಿ ಪ್ರಕರಣ ನಡೆದಿದ್ದು, ಇದೀಗ ಶಿಕ್ಷಕನಿಗೆ 42 ವರ್ಷ. ಈತ ಖಾಸಗಿ ಬೋರ್ಡಿಂಗ್ ಶಾಲೆಯ ಮಾಲೀಕ ಮತ್ತು ಶಿಕ್ಷಕನಾಗಿದ್ದು, ಇಲ್ಲಿ ಓರ್ವ ವಿದ್ಯಾರ್ಥಿ ವಾರ್ಷಿಕ ಅಂದಾಜು 69 ಲಕ್ಷ ರೂ. ಪಾವತಿಸಬೇಕು.

    ಸೆಪ್ಟೆಂಬರ್ ನಲ್ಲಿ ವಿದ್ಯಾರ್ಥಿನಿ ಜೊತೆಗಿನ ಪತಿಯ ಸಂಬಂಧ ಪತ್ನಿಗೆ ನವೆಂಬರ್ ನಲ್ಲಿ ತಿಳಿದಿದೆ. ಪತ್ನಿಗೆ ವಿಷಯ ತಿಳಿದಿದ್ದರೂ ಇಬ್ಬರ ಅಕ್ರಮ ಸಂಬಂಧ ಮಾರ್ಚ್ 2016ರವರೆಗೆ ನಡೆದಿದೆ. ವಿದ್ಯಾರ್ಥಿನಿಯ ಸಹಪಾಠಿ ಸುಳಿವು ನೀಡಿದ್ದರಿಂದ ಇಬ್ಬರ ಕಳ್ಳ ಸಂಬಂಧ ಬಯಲಿಗೆ ಬಂದಿದೆ. ಸುದ್ದಿ ಹರಡುತ್ತಿದ್ದಂತೆ ಇಬ್ಬರ ಸಂಬಂಧಕ್ಕೆ ಬೇಸತ್ತ ಪತ್ನಿ ಮನೆ ತೊರೆಯಲು ಮುಂದಾಗ ಶಿಕ್ಷಕ ಇಬ್ಬರ ಸಂಬಂಧಕ್ಕೆ ಪೂರ್ಣ ವಿರಾಮ ಹಾಕಿದ್ದಾನೆ.

    ಇದೊಂದು ಅನೈತಿಕ ಸಂಬಂಧವಾಗಿದ್ದು, ಕ್ರಿಮಿನಲ್ ಪ್ರಕರಣವಲ್ಲ. ವಿದ್ಯಾರ್ಥಿನಿ ಬೇರೊಂದು ಶಾಲೆಯವಳಾಗಿದ್ದಾಳೆ. ಇಬ್ಬರ ಮೇಲೆ ನಿಷೇಧ ಹೇರಲಾಗಿದೆ ಎಂದು ಏಜೆನ್ಸಿ ಹೇಳಿದೆ. ವಿಚಾರಣೆಯಲ್ಲಿ ಶಿಕ್ಷಕಿ, ನನ್ನ ಪತಿ ಆಕೆಯೊಂದಿಗೆ ಸಂಬಂಧ ಹೊಂದಿರುವ ವಿಚಾರ ನನಗೆ ಗೊತ್ತಿತ್ತು. ಬೆಡ್ ರೂಮಿನಲ್ಲಿ ಸಿಕ್ಕಾಗ ತನ್ನ ವಯಸ್ಸು 18 ಎಂದು ಹೇಳಿದ್ದರಿಂದ ನಾನು ಯಾರೊಂದಿಗೂ ಈ ವಿಚಾರ ಹಂಚಿಕೊಳ್ಳಲಿಲ್ಲ ಎಂದಿದ್ದಾರೆ.

  • ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಒಳ ಉಡುಪು ನೇತುಹಾಕಿದ್ದಕ್ಕೆ ಶಿಕ್ಷಕನ ಮೇಲೆ ಬಿತ್ತು ಕೇಸ್

    ಲಕ್ನೋ: ಪ್ರತಿಭಟನಾ ನಿರತ ಶಿಕ್ಷಕರೊಬ್ಬರು ತಮ್ಮ ಒಳಉಡುಪನ್ನು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಒಣಗಿಸಲು ನೇತುಹಾಕಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಮಾಜಿ ಶಾಸಕರೊಬ್ಬರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಬಳಿ 23ಕ್ಕೂ ಹೆಚ್ಚು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆಯೇ ತಮ್ಮ ಒಳ ಉಡುಪನ್ನು ನೇತುಹಾಕಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 509(ಮಹಿಳೆಯ ಗೌರವಕ್ಕೆ ಧಕ್ಕೆ) ಅಡಿ ಶಿಕ್ಷಕ ವಿಜಯ್ ಸಿಂಗ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಉಸ್ತುವಾರಿ ನಜರತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಸಮೀಪಾಲ್ ಅತ್ರಿ ತಿಳಿಸಿದ್ದಾರೆ.

    ಪ್ರತಿಭಟನೆಯನ್ನು ಹಿಂಪಡೆಯುವಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ದೂರ ಹೋಗುವಂತೆ ಅಧಿಕಾರಿಗಳು ಹೇಳಿದ ನಂತರ ಸಿಂಗ್ ತಮ್ಮ ಧರಣಿಯ ಸ್ಥಳವನ್ನು ಬದಲಾಯಿಸಿದ್ದಾರೆ ಎಂದು ಸಹ ವರದಿಯಾಗಿದೆ. ಮಾಜಿ ಶಾಸಕರು ಭೂ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಇವರು ಫೆಬ್ರವರಿ 26, 1996ರಂದು ಈ ಸ್ಥಳದಲ್ಲಿ ಧರಣಿ ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

  • ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ವಿವಿಧ ಬಗೆಯ ಹಣ್ಣುಗಳನ್ನು ಬೆಳೆದು ವರ್ಷಕ್ಕೆ 6 ಲಕ್ಷ ಸಂಪಾದಿಸಿ ಇತರರಿಗೆ ಮಾದರಿಯಾದ ಶಿಕ್ಷಕ

    ಬೀದರ್: ಬರಡು ಭೂಮಿಯಲ್ಲಿ ಮಿಶ್ರ ಬಂಪರ್ ಹಣ್ಣು ಗಿಡಗಳನ್ನು ಬೆಳೆದು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇತರ ರೈತರಿಗೆ ಶಿಕ್ಷಕ ಕಮ್ ರೈತ ಮಾದರಿಯಾಗಿದ್ದಾರೆ. ನಾಲ್ಕು ಎಕರೆ ಭೂಮಿಯಲ್ಲಿ ಹತ್ತಾರು ವಿವಿಧ ಹಣ್ಣುಗಳನ್ನು ಬೆಳೆದು ಪ್ರತಿ ವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

    ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಾಂಗವಿ ಗ್ರಾಮದ ಬಳಿಯ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಿ ಶಿಕ್ಷಕ ಕಮ್ ಮಾದರಿ ರೈತ ಸಾಧನೆ ಮಾಡಿದ್ದಾರೆ. ಭಾಲ್ಕಿ ಪಟ್ಟಣ್ಣದ ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿರುವ ಗಣಪತಿ ಬೋಚ್ರೆ ಸತತ ಪರಿಶ್ರಮದಿಂದ ಇಂದು ಮಾದರಿ ರೈತರಾಗಿದ್ದಾರೆ. ನಾಲ್ಕು ಎಕರೆ ಬರಡು ಭೂಮಿಯನ್ನು 5 ವರ್ಷಗಳಲ್ಲಿ ಸತತ ಪರಿಶ್ರಮ ಹಾಕಿ ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಇಂದು ಪ್ರತಿವರ್ಷ 5 ರಿಂದ 6 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಪರಿಶ್ರಮ ನೋಡಿದ ಜಿಲ್ಲೆಯ ರೈತರು ಅವರನ್ನೇ ಅನುಸರಿಸುತ್ತಿದ್ದಾರೆ. ರೈತರು ಸರಿಯಾಗಿ ಪ್ಲಾನ್ ಮಾಡಿ ಕೃಷಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಮಾದರಿ ರೈತ ತಿಳಿಸಿದ್ದಾರೆ.

    ಮಾವು, ನೇರಳೆ, ದಾಳಿಂಬೆ, ಮೊಂಸಬಿ, ಕಿತ್ತಳೆ, ಜಾಪಳ್, ಸಪೋಟಾ ಗಿಡಗಳು ಸೇರಿದಂತೆ ಹಲವಾರು ಹಣ್ಣಿನ ಗಡಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಾವಿನ ಹಣ್ಣನಲ್ಲಿ ನಾಲ್ಕು ವಿಧಗಳ ಗಿಡಗಳನ್ನು ವಿದೇಶದಿಂದ ತಂದು ಹಾಕಿದ್ದಾರೆ. ಸಂರ್ಪೂಣವಾಗಿ ಸಾವಯವ ಗೊಬ್ಬರವನ್ನು ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರದಲ್ಲೂ ಇವುಗಳಿಗೆ ಬೇಡಿಕೆ ಇದೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದು ಈ ರೀತಿ ಮಾದರಿ ರೈತನ ಸಾಧನೆ ನೋಡಿ ಸ್ಫೂರ್ತಿಯಾಗಿದ್ದಾರೆ. ಸರ್ಕಾರಗಳು ರೈತರಿಗೆ ಯಾವುದೇ ಸಹಕಾರ ನೀಡದೆ ರೈತರಿಗೆ ಶಾಪವಾಗಿದ್ದು, ಈ ರೀತಿಯ ಸಾಧನೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.

  • 13 ವರ್ಷದ ಬಾಲಕನಿಂದ ಶಿಕ್ಷಕಿಯ ಕೊಲೆ

    13 ವರ್ಷದ ಬಾಲಕನಿಂದ ಶಿಕ್ಷಕಿಯ ಕೊಲೆ

    ಮುಂಬೈ: 13 ವರ್ಷದ ಬಾಲಕನೊಬ್ಬ ತನ್ನ ಟ್ಯೂಷನ್ ಶಿಕ್ಷಕಿಯನ್ನೇ ಕೊಲೆಗೈದಿರುವ ಘಟನೆ ಮುಂಬೈನ ಗೊವಂಡಿ ಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿ ಶಿಕ್ಷಕಿಯನ್ನು 30 ವರ್ಷದ ಆಯಿಷಾ ಅಸ್ಲಾಂ ಎಂದು ಗುರುತಿಸಲಾಗಿದೆ. ಈಕೆಯನ್ನು ಚಾಕುವಿನಿಂದ ಇರಿದು ಕೊಲೆಗೈದ 13 ವರ್ಷದ ಬಾಲಕನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಘಟನೆ ಸೋಮವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಈ ಹಿಂದೆ ಬಾಲಕನ ತಾಯಿ ಮತ್ತು ಶಿಕ್ಷಕಿಯ ನಡುವೆ ವಾಗ್ವಾದ ನಡೆದಿತ್ತು. ಇದೇ ಸಿಟ್ಟಿನಿಂದ ಬಾಲಕ ಶಿಕ್ಷಕಿಯನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

    7 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಆಯಿಷಾ ಅವರ ಟ್ಯೂಷನ್ ಕ್ಲಾಸಿಗ್ ಬಂದಿದ್ದಾನೆ. ಬಾಲಕ ಹೋಂವರ್ಕ್ ಮಾಡಿಲ್ಲವೆಂದು ಶಿಕ್ಷಕಿ ಆತನನ್ನು ಕ್ಲಾಸಿನಿಂದ ಹೊರಗೆ ಹಾಕಿದ್ದಾರೆ. ಇದರಿಂದ ಬೇಸರಗೊಂಡ ಬಾಲಕ ನೇರವಾಗಿ ಮನೆಗೆ ತೆರಳಿದ್ದಾನೆ. ಅಲ್ಲದೆ ಮನೆಯ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಮತ್ತೆ ಕ್ಲಾಸಿಗೆ ಬಂದಿದ್ದಾನೆ. ಹೀಗೆ ಬಂದವನ್ನು ಶಾಲೆಯ ಬಾತ್ ರೂಮಿನಿಲ್ಲಿ ಮುಖ ತೊಳೆಯುತ್ತಿದ್ದ ಶಿಕ್ಷಕಿಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದಾನೆ. ಹಲವು ಬಾರಿ ಹೊಟ್ಟೆಗೆ ಇರಿದಿದ್ದು, ಚಾಕುವೇ ಶಿಕ್ಷಕಿಯ ಹೊಟ್ಟೆಯಲ್ಲೇ ಸಿಲುಕಿಕೊಂಡಿದೆ ಎಂದು ಆಯಿಷಾ ಸಹೋದ್ಯೋಗಿ ಸ್ಟೆಲ್ಲ ಡಿ ಸೋಜಾ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಶಾಲೆಯ ಹತ್ತಿರವೇ ಶಿಕ್ಷಕಿ ಆಯಿಷಾ ಮನೆಯಿದ್ದು ಆಕೆ ಒಬ್ಬರೇ ನೆಲೆಸಿದ್ದರು. ಘಟನೆ ಸಂಬಂಧ ಆಯಿಷಾ ತಾಯಿ ಪ್ರತಿಕ್ರಿಯಿಸಿ ಇದೊಂದು ದುರಂತ ಸಂಗತಿ ಎಂದು ತಿಳಿಸಿದ್ದಾರೆ.

    ಚಾಕುವಿನಿಂದ ಇರಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಯಿಷಾಗೆ ಮಾತನಾಡಲು ಕಷ್ಟವಾಗುತ್ತಿತ್ತು. ಕೂಡಲೇ ಆಯಿಷಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಸಿಯೋನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಕೂಡಲೇ ಅಂಬುಲೆನ್ಸ್ ನಲ್ಲಿ ಸಿಯೋನ್ ಆಸ್ಪತ್ರೆಗೆ ಕರೆತಂದು ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಮರುದಿನ ನಸುಕಿನ ಜಾವ 3.30ರ ಸುಮಾರಿಗೆ ಆಕೆ ಮೃತಪಟ್ಟಿದ್ದಾರೆ ಎಂದು ಡಿಸೋಜಾ ತಿಳಿಸಿದ್ದಾರೆ.

    ಇದಕ್ಕೂ ಕೆಲ ಗಂಟೆಗಳ ಮೊದಲು ಶಿವಾಜಿ ನಗರ ಪೊಲೀಸರು ಘಟನೆ ಕುರಿತು ಬಾಲಕನನ್ನು ವಶಕ್ಕೆ ಪಡೆದರು. ಅಲ್ಲದೆ ಹೆತ್ತವರನ್ನು ವಿಚಾರಣೆ ನಡೆಸಬೇಕೆಂದು ಸಮನ್ಸ್ ನೀಡುವ ಮುನ್ನವೇ ಘಟನೆಯ ಮಾಹಿತಿ ತಿಳಿದು ಬಾಲಕನ ತಾಯಿ ಕುಸಿದು ಬಿದ್ದು, ಸಿಯೋನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಚೆನ್ನೈ: ಶಾಲೆಯ ಆವರಣದಲ್ಲಿ ಶಿಕ್ಷಕನೊಬ್ಬ ತನ್ನ ಅಂಗನವಾಡಿ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

    ನಾಮಕ್ಕಲ್ ಉದುಪ್ಪಂ ಸರ್ಕಾರಿ ಶಾಲೆಯ ಶಿಕ್ಷಕ ಶಾಲೆ ಸಮಯ ಮುಗಿದ ನಂತರ ಅಂಗನವಾಡಿ ಮಹಿಳಾ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಮಹಿಳೆಯೂ ಗ್ರಾಮೀಣ ಮಕ್ಕಳ ಆರೋಗ್ಯ ಅಭಿವೃದ್ಧಿ ವಿಭಾಗದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾಳೆ. ಅಲ್ಲದೆ ಆಕೆ ಈ ಶಾಲೆಯೊಂದಿಗೆ ಸಂಬಂಧ ಹೊಂದಿದ್ದಾಳೆ. ಶಾಲೆಯ ಸಮಯ ಮುಗಿದ ನಂತರ ಇಬ್ಬರು ಒಟ್ಟಿಗೆ ಭೇಟಿ ಆಗುತ್ತಿದ್ದರು.

    ಇಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ಶಾಲೆಯ ಮಕ್ಕಳು ನೋಡಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಪೋಷಕರಿಗೂ ದೂರು ನೀಡಿದ್ದಾರೆ. ಮಂಗಳವಾರ ಪೋಷಕರ ಗುಂಪು ಶಾಲೆಗೆ ಭೇಟಿ ನೀಡಿದ್ದಾಗ ಇಬ್ಬರೂ ದೈಹಿಕ ಸಂಬಂಧ ಬೆಳೆಸುತ್ತಿದ್ದರು.

    ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ಥಳಿಸಿದ್ದಾರೆ. ನಂತರ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಹೇಳಿ ನಿಂದಿಸಿದ್ದಾರೆ. ಬಳಿಕ ಪುಡನ್‍ಸಂಡೈ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಆರೋಪಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಅಂಗನವಾಡಿ ಸಿಬ್ಬಂದಿ ಬಗ್ಗೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಹೇಳುವುದಾಗಿ ಹೇಳಿದ್ದಾರೆ.

  • 15ರ ಬಾಲಕನೊಂದಿಗೆ ಶಿಕ್ಷಕಿ ಸೆಕ್ಸ್ – ನಗ್ನ ಫೋಟೋ, ವಿಡಿಯೋ ಕಳಿಸಿ ಪ್ರಚೋದನೆ

    15ರ ಬಾಲಕನೊಂದಿಗೆ ಶಿಕ್ಷಕಿ ಸೆಕ್ಸ್ – ನಗ್ನ ಫೋಟೋ, ವಿಡಿಯೋ ಕಳಿಸಿ ಪ್ರಚೋದನೆ

    ವಾಷಿಂಗ್ಟನ್: ಮಾಜಿ ಶಾಲಾ ಶಿಕ್ಷಕಿಯೊಬ್ಬಳು 15 ವರ್ಷದ ಬಾಲಕನೊಂದಿಗೆ ಸಂಬಂಧ ಹೊಂದಿದ್ದಲ್ಲದೇ ಆತನಿಗೆ ಬೆತ್ತಲೆ ಫೋಟೋ ಮತ್ತು ವಿಡಿಯೋ ಕಳುಹಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಅಮೆರಿಕದ ವಿಸ್ಕಾನ್ಸಿನ್‍ನ ಆರೋಗ್ಯ ಶಿಕ್ಷಕಿ ತಾಲಿಯಾ ವಾರ್ನರ್ (23) ಎಂದು ಗುರುತಿಸಲಾಗಿದೆ. ಈಕೆ ಸೋಮರ್‌ ಸೆಟ್ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು, ಆದರೆ ಕೆಲವು ತಿಂಗಳ ಹಿಂದೆ ರಾಜೀನಾಮೆ ನೀಡಿ ಹೋಗಿದ್ದಾಳೆ.  ಶಿಕ್ಷಕಿ ವಾರ್ನರ್ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಮತ್ತೊಬ್ಬ ಶಿಕ್ಷಕಿ ಮತ್ತು ಶಾಲೆಯ ಹಲವಾರು ವಿದ್ಯಾರ್ಥಿಗಳು ಶಿಕ್ಷಕಿ ಬಾಲಕನೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದನ್ನು ಪತ್ತೆ ಮಾಡಿದ್ದಾರೆ. ನಂತರ ಅವರು 15 ವರ್ಷದ ಬಾಲಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಅಧಿಕಾರಿಗಳು ಬಾಲಕನನ್ನು ಪ್ರಶ್ನೆ ಮಾಡಿದ್ದಾರೆ.

    ಬಾಲಕ ಮೊದಲಿಗೆ ಅವರಿಗೆ ತನಗೂ ಯಾವ ಸಂಬಂಧವೂ ಇಲ್ಲ ಎಂದು ಆರೋಪವನ್ನು ನಿರಾಕರಿಸಿದ್ದನು. ನಂತರ ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ನಲ್ಲಿ ಸ್ನ್ಯಾಪ್‍ಚಾಟ್‍ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಇಬ್ಬರು ಪರಸ್ಪರ ಕಳುಹಿಸಿರುವುದಾಗಿ ಒಪ್ಪಿಕೊಂಡನು. ಅನೇಕ ತಿಂಗಳು ಹೀಗೆ ಸುಮಾರು ಫೋಟೋ ಮತ್ತು ವಿಡಿಯೋಗಳನ್ನು ಹುಡುಗನಿಗೆ ಕಳುಹಿಸಿದ್ದಳು. ಒಂದು ವಿಡಿಯೋದಲ್ಲಿ ಶಿಕ್ಷಕಿ ಬಾಲಕನೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ಕಾಣಹುದಾಗಿದೆ ಎಂದು ಬೇರೆ ವಿದ್ಯಾರ್ಥಿ ಅಧಿಕಾರಿಗಳಿಗೆ ತಿಳಿಸಿದ್ದಾನೆ.

    ನಂತರ ಬಾಲಕ ನಾನು ಮತ್ತು ವಾರ್ನರ್ ಕೆಲವು ಬಾರಿ ಕಾರಿನಲ್ಲಿ ಕಿಸ್ ಮಾಡಿದ್ದೇವೆ. ಮತ್ತೆ ಅವರ ಮನೆಯಲ್ಲಿಯೇ ಸೆಕ್ಸ್ ಮಾಡಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಶಿಕ್ಷಕಿ ಸೆಪ್ಟೆಂಬರ್ 2018ರಲ್ಲಿ ಸೋಮರ್‌ಸೆಟ್ ಪ್ರೌಢ ಶಾಲೆಗೆ ಶಿಕ್ಷಕಿಯಾಗಿ ಸೇರಿಕೊಂಡಿದ್ದಳು. ಆದರೆ ಫೆಬ್ರವರಿಯಲ್ಲಿ ಆಕೆ ರಾಜೀನಾಮೆ ನೀಡಿದ್ದಾಳೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯಕ್ಕೆ ವಾರ್ನರ್ ವಿರುದ್ಧ ಏಳು ಅಪರಾಧಗಳ ಆರೋಪವಿದೆ. ಅದರಲ್ಲೂ ಮುಖ್ಯವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳಿಗೆ ಅಶ್ಲೀಲ ಫೋಟೋ ಹಾಗೂ ವಿಡಿಯೋ ಕಳುಹಿಸಿರುವುದಾಗಿದೆ. ಒಂದು ವೇಳೆ ಎಲ್ಲಾ ಆರೋಪಗಳು ಸಾಬೀತಾದರೆ, ವಾರ್ನರ್ ಅಧಿಕ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬಹುದು.

    ಆಕೆಯ ಅಪರಾಧಕ್ಕಾಗಿ ಗರಿಷ್ಠ 40 ವರ್ಷಗಳ ಜೈಲು ಶಿಕ್ಷೆ ಮತ್ತು, $100,000 (71 ಲಕ್ಷ ರೂ.) ದಂಡ ವಿಧಿಸಲಾಗುತ್ತದೆ ಅಥವಾ 25 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು, $100,000 ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಇಸ್ಲಾಮಾಬಾದ್: ಪಾಠ ನೆನಪಿಲ್ಲ ಎಂದ 10ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದಿದ್ದು, ಇದರಿಂದ ಬಾಲಕ ಮೃತಪಟ್ಟ ಘಟನೆ ಪಾಕಿಸ್ತಾನದ ಲಾಹೋರ್ ನ ಶಾಲೆಯೊಂದರಲ್ಲಿ ನಡೆದಿದೆ.

    ಶಿಕ್ಷಕ ಕ್ಲಾಸ್‍ನಲ್ಲಿ ವಿದ್ಯಾರ್ಥಿಗೆ ಪ್ರಶ್ನೆ ಕೇಳಿದ್ದಾನೆ. ಆದರೆ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ ಪಾಠ ನೆನಪಿರಲಿಲ್ಲ. ಇದರಿಂದ ಕೋಪಗೊಂಡ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

    ತನ್ನ ಮಗನ ಸಾವನ್ನು ಕಂಡ ತಂದೆ ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೆ ನನ್ನ ಮಗನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಫೀಸ್ ಕಟ್ಟದ ಕಾರಣ ಶಾಲೆ ಸಿಬ್ಬಂದಿ ನನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.

  • ಸಚಿವರ ಕಾಲಿಗೆ ಬಿದ್ದ ಶಿಕ್ಷಕಿ- ತಪ್ಪೆಂದು ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದ ಸುರೇಶ್ ಕುಮಾರ್

    ಸಚಿವರ ಕಾಲಿಗೆ ಬಿದ್ದ ಶಿಕ್ಷಕಿ- ತಪ್ಪೆಂದು ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದ ಸುರೇಶ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಪ್ರತಿಭಟನೆ ವೇಳೆ ಶಿಕ್ಷಕಿಯೊಬ್ಬರು ಸಚಿವರ ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ದಾರೆ. ಕೂಡಲೇ ಸಚಿವರು ಹೀಗೆಲ್ಲ ಮಾಡೋದು ತಪ್ಪು ಎಂದು ಹೇಳಿ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದರು.

    ಬಸವೇಶ್ವರ ನಗರದಲ್ಲಿರುವ ಸುರೇಶ್ ಕುಮಾರ್ ನಿವಾಸಕ್ಕೆ ಆಗಮಿಸಿದ ನೂರಾರು ಶಿಕ್ಷಕರು ಪ್ರತಿಭಟನೆಗೆ ಮುಂದಾದರು. ಕೂಡಲೇ ಸಚಿವರು ಬಂದು ಶಿಕ್ಷಕರ ಬಳಿ ಮಾತನಾಡಿ ಅಹವಾಲು ಸ್ವೀಕರಿಸಿದರು. ಶಿಕ್ಷಕರೊಂದಿಗೆ ಚರ್ಚಿಸಿ ಕೂಡಲೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಯಾವ ಶಿಕ್ಷಕರು ಪ್ರತಿಭಟನೆ ಮಾಡಿಲ್ಲ. ನನ್ನನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕೆಲವು ಶಿಕ್ಷಕ ವರ್ಗ ವರ್ಗಾವಣೆ ಮಾಡಬೇಕು, ಮತ್ತೆ ಕೆಲವರು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಬಂದು ಮನವಿ ಮಾಡಿಕೊಂಡಾಗ ಕಡ್ಡಾಯ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕೆಲವು ಶಿಕ್ಷಕರೊಂದಿಗೆ ಬಂದು ಕಷ್ಟ ಹೇಳಿಕೊಂಡಿದ್ದಾರೆ. ಕಡ್ಡಾಯ ವರ್ಗಾವಣೆಯ ವಿಚಾರವನ್ನೇ ಕೈ ಬಿಡಬೇಕೆಂದು ಎಂದು ಹೇಳುತ್ತಿದ್ದಾರೆ.

    ಗ್ರಾಮೀಣ ಮತ್ತು ನಗರ ಭಾಗದ ಶಿಕ್ಷಕರ ಮನವಿಗಳು ತುಂಬಾ ವಿಭಿನ್ನವಾಗಿವೆ. ಇಬ್ಬರಿಗೂ ಅವರದ್ದೇ ಆದ ಕಷ್ಟಗಳಿವೆ. 2017ರಲ್ಲಿ ತನ್ವೀರ್ ಸೇಠ್ ಅವರಿದ್ದಾಗ ಕಡ್ಡಾಯ ವರ್ಗಾವಣೆ ಜಾರಿಗೆ ಬಂದಿತ್ತು. ಕೆಲ ಲೋಪ ದೋಷಗಳಿಂದಾಗಿ ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ಲೋಪ ದೋಷಗಳನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಧ್ಯವಾದಷ್ಟು ಎಲ್ಲರಿಗೂ ನ್ಯಾಯ ನೀಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

  • ಹೆಲಿಕಾಪ್ಟರ್ ಜರ್ನಿ – ನಿವೃತ್ತಿ ದಿನ ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

    ಹೆಲಿಕಾಪ್ಟರ್ ಜರ್ನಿ – ನಿವೃತ್ತಿ ದಿನ ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

    ಜೈಪುರ: ರಾಜಸ್ಥಾನದ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ದಿನ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ. ಒಂದು ದಿನ ಪತ್ನಿ ಹೆಲಿಕಾಪ್ಟರ್ ಬಾಡಿಗೆಗೆ ಎಷ್ಟಾಗುತ್ತೆ ಎಂದು ಕೇಳಿದ್ದರು. ಒಮ್ಮೆ ಹೆಲಿಕಾಪ್ಟರ್ ನಲ್ಲಿ ಕುಳಿತಕೊಳ್ಳಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದೀಗ ಶಿಕ್ಷಕ ತಮ್ಮ ನಿವೃತ್ತಿಯ ಹಣದಿಂದ ಪತ್ನಿಯ ಆಸೆಯನ್ನು ಪೂರ್ಣ ಮಾಡಿದ್ದಾರೆ.

    ರಮೇಶ್ ಚಾಂದ್ ಮೀನಾ ಪತ್ನಿಗಾಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಶಿಕ್ಷಕ. ಕಾಪರ್ ನಲ್ಲಿ ಸಾಂಪ್ರದಾಯಿಕ ಉಡುಗೆ, ಸನ್ ಗ್ಲಾಸ್ ತೊಟ್ಟ ಪತ್ನಿ ಮತ್ತು ಮೊಮ್ಮಗನೊಂದಿಗೆ ತಮ್ಮ ಮೊದಲು ವಾಯುಯಾನ ಮಾಡಿದ್ದಾರೆ. ತಮ್ಮ ಶಾಲೆಯ ಬಳಿಯಿಂದ ಸ್ವಗ್ರಾಮ ಮಲವಾಲಿಗೆ ಪ್ರಯಾಣಿಸಿದ್ದಾರೆ.

    ರಮೇಶ್ ಮೀನಾ ಪತ್ನಿಯ ಖುಷಿಗಾಗಿ ನವದೆಹಲಿಯ ಕಾಪರ್ ಸರ್ವಿಸ್ ನಲ್ಲಿ 3.70 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದರು. 18 ನಿಮಿಷದ ನಮ್ಮ ಪ್ರಯಾಣ ಅದ್ಭುತವಾದ ಅನುಭವವನ್ನು ನೀಡಿದೆ ಎಂದು ರಮೇಶ್ ಮೀನಾ ಹೇಳುತ್ತಾರೆ.

    ಒಂದು ದಿನ ಮನೆಯ ಮೇಲೆ ಕುಳಿತಾಗ ಪತ್ನಿ ಹೆಲಿಕಾಪ್ಟರ್ ನೋಡಿ, ಇದರ ಪ್ರಯಾಣಕ್ಕೆ ಎಷ್ಟು ಹಣ ಬೇಕು. ಬಾಡಿಗೆ ಪಡೆಯಲು ತುಂಬಾ ಹಣ ಬೇಕಲ್ವಾ ಎಂದು ಪ್ರಶ್ನೆ ಮಾಡಿದ್ದಳು. ಅಂದೇ ನಿವೃತ್ತಿಯ ದಿನದಂದು ಪತ್ನಿಯ ಆಸೆಯನ್ನು ಪೂರ್ಣ ಮಾಡಬೇಕೆಂದು ನಿರ್ಧರಿಸಿದ್ದೆ. ಇದು ನಮ್ಮ ಮೊದಲ ವಾಯು ಪಯಣವಾಗಿದ್ದು, ಖುಷಿಯಾಗಿತ್ತು ಎಂದು ರಮೇಶ್ ಮೀನಾ ಸಂತೋಷ ಹಂಚಿಕೊಂಡಿದ್ದಾರೆ.

    ಸ್ವಗ್ರಾಮದಲ್ಲಿ ಕಾಪರ್ ಇಳಿಸಲು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ತಮ್ಮ ಧನ್ಯವಾದಗಳನ್ನು ರಮೇಶ್ ಮೀನಾ ತಿಳಿಸಿದರು.