Tag: teacher

  • ಅಶ್ಲೀಲ ವಿಡಿಯೋ ತೋರಿಸಿ ಮುತ್ತು ನೀಡುವಂತೆ ಕಿರುಕುಳ- ಶಿಕ್ಷಕ ಅರೆಸ್ಟ್

    ಅಶ್ಲೀಲ ವಿಡಿಯೋ ತೋರಿಸಿ ಮುತ್ತು ನೀಡುವಂತೆ ಕಿರುಕುಳ- ಶಿಕ್ಷಕ ಅರೆಸ್ಟ್

    ಶಿವಮೊಗ್ಗ: ಎಂಟನೇ ತರಗತಿ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅನುಚಿತವಾಗಿ ವರ್ತಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ದೂದ್ಯನಾಯ್ಕ ಅನುಚಿತವಾಗಿ ವರ್ತಿಸಿದ ಶಿಕ್ಷಕ. ದೂದ್ಯನಾಯ್ಕ ವಿಜ್ಞಾನ ವಿಷಯದ ಶಿಕ್ಷಕನಾಗಿದ್ದು, ಕಳೆದ ವಾರ ಶಾಲೆಯ ಲ್ಯಾಬ್ ಸ್ವಚ್ಚಗೊಳಿಸಲು ಮೂವರು ವಿದ್ಯಾರ್ಥಿನಿಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಇನ್ನೊಬ್ಬ ವಿದ್ಯಾರ್ಥಿನಿ ಸಹ ಈ ಮೊದಲೇ ಲ್ಯಾಬ್‍ನಲ್ಲಿದ್ದಳು.

    ಮೊದಲೇ ವಿದ್ಯಾರ್ಥಿನಿ ಇರುವುದನ್ನು ಗಮನಿಸಿದ ಶಿಕ್ಷಕ ಮೂವರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ್ದಾನೆ. ಬಳಿಕ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿನಿಯ ಹೆಗಲ ಮೇಲೆ ಕೈ ಹಾಕಿ ಅಶ್ಲೀಲ ವಿಡಿಯೋ ನೋಡುವಂತೆ ಹೇಳಿದ್ದಾನೆ. ಅಲ್ಲದೆ ಮುತ್ತು ಕೊಡುವಂತೆ ಪೀಡಿಸಿದ್ದಾನೆ.

    ಶಿಕ್ಷಕನ ವರ್ತನೆ ವಿರೋಧಿಸಿ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಹೊರಗಡೆ ಓಡಿ ಬಂದಿದ್ದಾಳೆ. ಶಿಕ್ಷಕನ ಈ ಅನುಚಿತ ವರ್ತನೆ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಪೋಕ್ಸೋ ಕಾಯ್ದೆಯಡಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

  • ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು

    ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು

    ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ನಡೆದಿದೆ.

    ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಮೃತ ಶಿಕ್ಷಕಿಯನ್ನು ಲೀಲಾವತಿ ಕಟಿಗೇರ (33) ಎಂದು ಗುರುತಿಸಲಾಗಿದೆ. ಇವರು ಮೆಡ್ಲೇರಿ ಗ್ರಾಮದಲ್ಲಿರು ಬೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಇಂದು ಬೆಳಗ್ಗೆ ಲೀಲಾವತಿ ಅವರು ತಮ್ಮ ಗಂಡ ಬಸವರಾಜು ಜೊತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಶಾಲೆಗೆ ತಡವಾಗಿತ್ತು ಎಂದು ವೇಗವಾಗಿ ಹೋಗುತ್ತಿದ್ದಾಗ ಬೈಕ್ ರಸ್ತೆಯಲ್ಲಿದ್ದ ಉಬ್ಬನ್ನು ಜಂಪ್ ಮಾಡಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿದ ಲೀಲಾವತಿಯವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾದ ಕಾರಣ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 500 ರೂ. ಕಳ್ಕೊಂಡು, ವಿದ್ಯಾರ್ಥಿಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

    500 ರೂ. ಕಳ್ಕೊಂಡು, ವಿದ್ಯಾರ್ಥಿಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ

    -ಕೊಠಡಿಯೊಳಗೆ ಕೂಡಿ ಹಾಕಿ ಥಳಿತ

    ಹಾವೇರಿ: 500 ರುಪಾಯಿ ಹಣ ಕಳೆದುಕೊಂಡ ಶಿಕ್ಷಕರೊಬ್ಬರು ಅದನ್ನು ಮಕ್ಕಳೇ ಕದ್ದಿದ್ದಾರೆ ಎಂದು ಆರೋಪಿಸಿ, ಬಾಸುಂಡೆ ಬರುವಂತೆ ವಿದ್ಯಾರ್ಥಿಗಳಿಗೆ ಥಳಿಸಿದ ಅಮಾನವೀಯ ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹನುಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಒಟ್ಟು 8 ಮಂದಿ ವಿದ್ಯಾರ್ಥಿಗಳನ್ನು ಶಾಲಾ ಕೊಠಡಿಯೊಳಗೆ ಕೂಡಿ ಹಾಕಿ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಸಿಗುವ ಹಸಿ ಕಟ್ಟಿಗೆ ತುಂಡಾಗುವಂತೆ ಮಕ್ಕಳ ಮುಖ, ಕೈ ಹಾಗೂ ಬೆನ್ನಿಗೆ ಮನಸೋಯಿಚ್ಛೆ ಶಿಕ್ಷಕ ಥಳಿಸಿದ್ದಾರೆ.

    ಈ ವಿಷಯ ತಿಳಿದ ವಿದ್ಯಾರ್ಥಿಗಳ ಪೋಷಕರು ಶಿಕ್ಷಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸಭೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

  • ನಿವೃತ್ತಿಯಾದ್ರೂ ಮಕ್ಕಳಿಗೆ ಉಚಿತ ಪಾಠ- ಶಂಕ್ರಪ್ಪ ಮೇಷ್ಟ್ರು ಇವತ್ತಿನ ಪಬ್ಲಿಕ್ ಹೀರೋ

    ನಿವೃತ್ತಿಯಾದ್ರೂ ಮಕ್ಕಳಿಗೆ ಉಚಿತ ಪಾಠ- ಶಂಕ್ರಪ್ಪ ಮೇಷ್ಟ್ರು ಇವತ್ತಿನ ಪಬ್ಲಿಕ್ ಹೀರೋ

    ಕೊಪ್ಪಳ: ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದರೆ ಸಾಕಪ್ಪ ಸಾಕು. ಮುಂದಿನ ಜೀವನವನ್ನು ಮಕ್ಕಳು, ಮೊಮ್ಮಕ್ಕಳೊಂದಿಗೆ ಆರಾಮಾಗಿ ಕಳೆಯಬಹುದೆಂದು ಬಹುತೇಕರು ಯೋಚನೆ ಮಾಡುತ್ತಾರೆ. ಕೆಲವರು ಖಾಸಗಿ ಉದ್ಯೋಗದತ್ತ ಮುಖ ಮಾಡುತ್ತಾರೆ. ಇಂದಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ 16 ವರ್ಷ ಕಳೆದರೂ ಇಂದಿಗೂ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದಾರೆ.

    ಕೊಪ್ಪಳದ ಕಿನ್ನಾಳ ಗ್ರಾಮದ ಶಂಕ್ರಪ್ಪ ಮಹೇಂದ್ರಕರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 75 ವರ್ಷದ ಶಂಕ್ರಪ್ಪ ಮೇಷ್ಟ್ರು ನಿವೃತ್ತ ಮುಖ್ಯ ಶಿಕ್ಷಕರು. ವಿಶ್ರಾಂತ ಜೀವನಕ್ಕೆ ಮೊರೆ ಹೋಗದ ಶಂಕ್ರಪ್ಪ ಮೇಷ್ಟ್ರು ಈಗಲೂ ವಾರಕ್ಕೆ ಮೂರು ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ಗಣಿತ ಮತ್ತು ಇಂಗ್ಲಿಷ್‍ನ್ನು ಪ್ರೀತಿಯಿಂದ ಕಲಿಸುತ್ತಾರೆ.

    ನಿವೃತ್ತಿಯಾಗಿ ಹದಿನಾರು ವರ್ಷ ಕಳೆದರೂ ಮನೆಯಲ್ಲಿ ಕೂರದ ಹಿರಿಜೀವ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ಕೊಪ್ಪಳ, ಕಿಡದಾಳ ಸಿಂಧೋಗಿ ಸೇರಿದಂತೆ ನಾನಾ ಕಡೆ ಸ್ವಂತ ಹಣದಲ್ಲಿ ಖರ್ಚು ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಆಟವಾಡುತ್ತಾರೆ. ಹೀಗಾಗಿ ಶಂಕ್ರಪ್ಪ ಮಾಸ್ಟರ್ ಅಂದ್ರೆ ಮಕ್ಕಳಿಗೆ ಅಚ್ಚು ಮೆಚ್ಚು.

    ಒಟ್ಟಾರೆ ನಿವೃತ್ತಿಯಾಗಿ ಮನೆಯಲ್ಲಿ ಹಾಯಾಗಿ ಇರಬೇಕಿದ್ದ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿರೋದು ನಿಜಕ್ಕೂ ಹೆಮ್ಮೆಯ ಕೆಲಸವಾಗಿದೆ. ನಿವೃತ್ತಯಾಗಿದ್ದೇವೆ, ಇನ್ನೇನು ಕೆಲಸ ಮಾಡೋದು ಅನ್ನೋರ ಮಧ್ಯೆ ಶಂಕ್ರಪ್ಪ ಮೇಷ್ಟ್ರು ತುಂಬಾನೆ ಡಿಫರೆಂಟ್.

  • ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಕ್ಲಾಸ್‍ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದು ಕ್ಷಮೆ ಕೇಳಿದ ಶಿಕ್ಷಕ

    ಬೆಂಗಳೂರು: ಕ್ಲಾಸ್‍ರೂಮಿನಲ್ಲಿ ವಿದ್ಯಾರ್ಥಿಯನ್ನ ಶಿಕ್ಷನೋರ್ವ ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದಿದೆ.

    ವಿದ್ಯಾರ್ಥಿಯೊರ್ವ ಕೋಲು ಮುರಿದು ಹಾಕಿದ್ದಾನೆ ಎಂದು ಕಾರಣಕ್ಕೆ ಶಿಕ್ಷಕ ಹರೀಶ್ ಕ್ಲಾಸ್ ರೂಮ್‍ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ್ದಾನೆ. ವಿದ್ಯಾರ್ಥಿಯ ಮೇಲೆ ಬ್ಯಾಗ್ ಎಸೆದು ಕೈಗಳಿಂದ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಾನೆ.

    ಶಿಕ್ಷಕ ಹರೀಶ್ ವಿದ್ಯಾರ್ಥಿಗಳ ಮುಂದೆಯೇ ಹಲ್ಲೆ ಮಾಡಿದ ಕಾರಣ ಕ್ಲಾಸ್ ರೂಮ್‍ನಲ್ಲಿದ್ದ ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವಾಗಿ ಹರೀಶ್ ಮೇಲೆ ಶಾಲಾ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದ್ದು, ನಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ಶಿಕ್ಷಕ ಕ್ಷಮೆಯಾಚಿಸಿದ್ದಾನೆ.

  • ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳ ಮುಂದೆ ಬಿಇಓ ಬಾಡೂಟ- ಅಮಾನತು

    ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳ ಮುಂದೆ ಬಿಇಓ ಬಾಡೂಟ- ಅಮಾನತು

    ಭುವನೇಶ್ವರ: ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳ ಮುಂದೆಯೇ ಚಿಕನ್ ಕರ್ರಿ ತಿಂದಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆ ಒಡಿಶಾದ ಸುಂದರ್‍ಘಢ ಜಿಲ್ಲೆಯಲ್ಲಿ ನಡೆದಿದ್ದು, ಮಧ್ಯಾಹ್ನದ ಬಿಸಿಯೂಟದ ಸಂದರ್ಭದಲ್ಲಿ ಮಕ್ಕಳು ಕೇವಲ ಅನ್ನ-ಸಾಂಬರ್ ಊಟ ಮಾಡುತ್ತಿದ್ದರೆ, ಈ ಅಧಿಕಾರಿ ಚಿಕನ್ ಕರ್ರಿ ಸವಿಯುತ್ತಿದ್ದ. ಹೊರಗಿನಿಂದ ಚಿಕನ್ ತರಿಸಿ ಶಾಲಾ ಮಕ್ಕಳೊಂದಿಗೆ ತಿಂದಿದ್ದಕ್ಕೆ ಸುಂದರ್‍ಘಢ ಜಿಲ್ಲೆಯ ಜಿಲ್ಲಾಧಿಕಾರಿ ನಿಖಿಲ್ ಪವನ್ ಕಲ್ಯಾಣ್ ಅವರು ಬಿಇಒ ಬಿನಾಯ್ ಪ್ರಕಾಶ್ ಸೋಯ್ ಅವರನ್ನು ಅಮಾನತುಗೊಳಿಸಿದ್ದಾರೆ. ಮಕ್ಕಳೊಂದಿಗೆ ಚಿಕನ್ ತಿನ್ನುವ ವಿಡಿಯೋ ವೈರಲ್ ಆಗಿದ್ದು ಹೀಗಾಗಿ ಡಿಸಿ ಅಮಾನುತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ತವ್ಯ ಸಂದರ್ಭದಲ್ಲಿ ಅಶಿಸ್ತು, ಸಾರ್ವಜನಿಕ ಸೇವೆಯ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ಬಿನಾಯ್ ಪ್ರಕಾಶ್ ಸೋಯ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ದಸರಾ ರಜೆಗೂ ಮುಂಚೆ ಟಿಲಿಮಲ್ ಪ್ರಾಜೆಕ್ಟ್ ಪ್ರಾಥಮಿಕ ಶಾಲೆಯಲ್ಲಿ ಅಕ್ಟೋಬರ್ 3ರಂದು ಬಿಇಒ ಶಾಲೆಗೆ ಭೇಟಿದ್ದರು. ಆಗ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಬಂದ ಬಿಇಒ ಅವರನ್ನು ಮುಖ್ಯ ಶಿಕ್ಷಕ ತುಪಿ ಚಂದನ್ ಕಿಸಾನ್ ಹಾಗೂ ಇತರೆ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ನಂತರ ಬಿಇಒ ಮಧ್ಯಾಹ್ನದ ಬಿಸಿಯೂಟದ ಅಡುಗೆ ಕೊಠಡಿಯನ್ನು ವೀಕ್ಷಿಸಿದ್ದಾರೆ. ಆಗ ವಿದ್ಯಾರ್ಥಿಗಳೊಂದಿಗೆ ಊಟ ಮಾಡುವುದಾಗಿ ತಿಳಿಸಿದ್ದಾರೆ.

    ಬಿಇಒ ನಮ್ಮ ಜೊತೆ ಊಟ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಸಂತಸ ಪಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅನ್ನ ಸಾಂಬಾರ್ ನೀಡಿ ಬಿಇಒ ಹಾಗೂ ಶಿಕ್ಷಕರು ಚಿಕನ್ ಊಟ ಸವಿದಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ.

    ಬಿಇಒ ಸೋಯಾ ಅವರು ಈ ಆರೋಪವನ್ನು ನಿರಾಕರಿಸಿದ್ದು, ನನಗೆ ಬಡಿಸಿದ ಕರ್ರಿ ಚಿಕನ್ ಅಲ್ಲ. ಬದಲಿಗೆ ಮಹಿಳಾ ಶಿಕ್ಷಕಿಯೊಬ್ಬರು ತಮ್ಮ ಮನೆಯಿಂದ ಮಾಡಿಕೊಂಡು ಬಂದಿದ್ದ ಸಸ್ಯಹಾರಿ ಆಹಾರ ಎಂದು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಕುರಿತು ಇಲಾಖಾ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

  • 2ನೇ ತರಗತಿ ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕಿ

    2ನೇ ತರಗತಿ ವಿದ್ಯಾರ್ಥಿನಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕಿ

    ಲಕ್ನೋ: ಮನೆ ಕೆಲಸ ಮಾಡಿಕೊಂಡು ಬರಲಿಲ್ಲವೆಂದು 2 ನೇ ತರಗತಿ ವಿದ್ಯಾರ್ಥಿನಿಗೆ ಹಿಗಾಮುಗ್ಗ ಥಳಿಸಿದ ಘಟನೆ ಉತ್ತರಪ್ರದೇಶದ ಜೌನ್ ಪುರ ಜಿಲ್ಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿನಿಗೆ ಮರದ ಸ್ಕೇಲಿನಲ್ಲಿ ಥಳಿಸಿದ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ. ನಾನು ಶಿಕ್ಷಕಿ ಕೊಟ್ಟ ಮನೆಕೆಲಸವನ್ನು ಮಾಡಿಕೊಂಡು ಬರಲಿಲ್ಲವೆಂದು ಹೊಡೆದಿದ್ದಾರೆ ಎಂದು 8 ವರ್ಷದ ಬಾಲಕಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಟೀಚರ್ ಹೊಡೆದಿದ್ದರಿಂದ ಬಾಲಕಿಯ ದೇಹದಲ್ಲೆಲ್ಲ ಗಂಭೀರ ಗಾಯಗಳಾಗಿವೆ.

    ಶಿಕ್ಷಕಿ ಗಣಿತದ 5 ಲೆಕ್ಕಗಳನ್ನು ಮನೆಗೆಲಸವಾಗಿ ನೀಡಿದ್ದರು. ಇದರಲ್ಲಿ ಒಂದು ಲೆಕ್ಕವನ್ನು ಮಾಡಿರಲಿಲ್ಲ. ಹೀಗಾಗಿ ಶಿಕ್ಷಕಿ ನನ್ನ ಭುಜ, ಬೆನ್ನು ಹಾಗೂ ಮೊಣಕೈಗೆ ಮರದ ಸ್ಕೇಲಿನಿಂದ ಹೊಡೆದಿದ್ದಾರೆ ಎಂದು ಬಾಲಕಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ.

    ಘಟನೆಯ ಬಗ್ಗೆ ಅರಿತಿದ್ದು, ಈ ಬಗ್ಗೆ ವಿಚಾರಣೆಗೆ ನಡೆಸಲಾಗುತ್ತಿದೆ. ಅಲ್ಲದೆ ತಪ್ಪಿತಸ್ಥ ಶಿಕ್ಷಕಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣಾಧಿಕಾರಿ ಮಹೇಶ್ ಚಂದ್ರ ಹೇಳಿದ್ದಾರೆ.

  • ಅಂಗನವಾಡಿಯಲ್ಲಿ ಆಹಾರ ಪದಾರ್ಥ ಕದಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ಅಂಗನವಾಡಿಯಲ್ಲಿ ಆಹಾರ ಪದಾರ್ಥ ಕದಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ಹಾವೇರಿ: ಅಂಗನವಾಡಿಯಲ್ಲಿನ ಮಕ್ಕಳು ಮತ್ತು ಗರ್ಭಿಣಿಯರ ಆಹಾರ ಪದಾರ್ಥಗಳಿಗೆ ಕನ್ನ ಹಾಕುತ್ತಿದ್ದಾಗ ಶಿಕ್ಷಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರಿನ ಬಸವನಗುಡಿ ನಗರದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿಯಲ್ಲಿನ ಆಹಾರ ಪದಾರ್ಥಗಳನ್ನು ಕದ್ದು ಸಾಗಿಸುತ್ತಿದ್ದಾಗ ಶಿಕ್ಷಕಿ ಸರೋಜಾ ಲಾಳಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಬ್ಬರೂ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಗ ಸ್ಥಳೀಯರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಂಗನವಾಡಿ ಕೇಂದ್ರದಲ್ಲಿನ ಎಣ್ಣೆ, ಅಕ್ಕಿ, ತೊಗರಿಬೇಳೆ, ಹೆಸರು ಕಾಳು, ಶೇಂಗಾ ಕಾಳು, ಹಾಲಿನ ಪುಡಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಕದ್ದು ಮನೆಗೆ ಸಾಗಿಸುತ್ತಿದ್ದರು. ಅಲ್ಲದೆ ಬೂಸ್ಟ್ ಹತ್ತಿದ ಮತ್ತು ಹಾಳಾಗಿರುವ ಪದಾರ್ಥಗಳನ್ನು ಅಂಗನವಾಡಿಯಲ್ಲಿಟ್ಟು ಗುಣಮಟ್ಟದ ಪದಾರ್ಥಗಳನ್ನು ತಮ್ಮ ಮನೆಗೆ ಸಾಗಿಸುತ್ತಿದ್ದರು.

    ಸ್ಥಳೀಯರು ಅಂಗನವಾಡಿ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಂತೆ ಶಿಕ್ಷಕಿ ಸರೋಜಾ ಅಲ್ಲಿಂದ ಕಾಲ್ಕಿತ್ತಿದ್ದು, ಈ ಕುರಿತು ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

  • ಮದ್ವೆಯಾಗುವಂತೆ ಶಿಕ್ಷಕನ ಹಿಂದೆ ಬಿದ್ದಾಕೆ ಚರಂಡಿಯಲ್ಲಿ ಹೆಣವಾದ್ಳು

    ಮದ್ವೆಯಾಗುವಂತೆ ಶಿಕ್ಷಕನ ಹಿಂದೆ ಬಿದ್ದಾಕೆ ಚರಂಡಿಯಲ್ಲಿ ಹೆಣವಾದ್ಳು

    -ಕೊಲೆಯ ಮರುದಿನ ಅದ್ಧೂರಿ ಬರ್ತ್ ಡೇ ಪಾರ್ಟಿ

    ನವದೆಹಲಿ: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಮಾಜಿ ಶಿಕ್ಷಕನೊಬ್ಬ ಕೊಲೆ ಮಾಡಿ ಜೀವ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿರುವ ಘಟನೆ ನಗರದಲ್ಲಿ ನಡೆದಿತ್ತು. ಘಟನೆ ನಡೆದ 10 ದಿನಗಳ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರಾವಾಲ್ ನಗರ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಶಿಕ್ಷಕ ನೌಶದ್ ಅಲಿ (33) ಮತ್ತು ಮೊಹಮ್ಮದ್ ರಜಿಕ್ (28) ಬಂಧಿತ ಆರೋಪಿಗಳು. ಇವರಿಬ್ಬರು ಸೇರಿಕೊಂಡು ಸೆಪ್ಟೆಂಬರ್ 26 ರಂದು ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ನಂತರ ಆಕೆಯನ್ನು ಜೀವಂತವಾಗಿ ಗೋಣಿಚೀಲದಲ್ಲಿ ತುಂಬಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ವಿದ್ಯಾರ್ಥಿನಿ ಆರೋಪಿ ಅಲಿಯನ್ನು ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದಳು. ಆದ್ದರಿಂದ ಆತ ವಿದ್ಯಾರ್ಥಿನಿಯನ್ನು ಕೊಲೆ ಮಾಡಲು ನಿರ್ಧರಿಸಿದನು. ಅದರಂತೆಯೇ ಸೆಪ್ಟೆಂಬರ್ 26 ರಂದು ಯುವತಿ ಅಲಿಯನ್ನು ಭೇಟಿಯಾಗಲು ಹೋಗಿದ್ದಳು. ಆಗ ಅವಳ ತಲೆಗೆ ರಾಡ್‍ನಿಂದ ಹೊಡೆದಿದ್ದಾನೆ. ತಕ್ಷಣ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ಇಬ್ಬರು ಆರೋಪಿಗಳು ಸೇರಿಕೊಂಡು ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಚರಂಡಿಗೆ ಎಸೆದಿದ್ದಾರೆ. ಯುವತಿ ಗೋಣಿಚೀಲದಲ್ಲಿದ್ದಾಗ ಜೀವಂತವಾಗಿದ್ದಳು. ಆದರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತ ಶಿಕ್ಷಕನನ್ನು ಭೇಟಿಯಾಗಿ ಬರುತ್ತೇನೆಂದು ಮನೆಯಿಂದ ಹೋಗಿದ್ದ ಮಗಳು ಸಂಜೆಯಾದರೂ ಬರಲಿಲ್ಲವೆಂದು ಪೋಷಕರು ಯುವತಿಗೆ ಫೋನ್ ಮಾಡಿದ್ದಾರೆ. ಆಗ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಈ ಕುರಿತು ನಾಪತ್ತೆ ದೂರನ್ನು ದಾಖಲಿಸಿದ್ದರು. ಕಳೆದ ಭಾನುವಾರ ಚರಂಡಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಆಕೆಯ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದೆವು. ಅವರು ಬಂದು ಯುವತಿಯ ಬಟ್ಟೆ ಮತ್ತು ಕಿವಿಯೋಲೆಯನ್ನು ನೋಡಿ ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ತನಿಖೆಯನ್ನು ಶುರು ಮಾಡಿದ್ದಾರೆ. ಮೊದಲಿಗೆ ಯುವತಿಯ ಫೋನ್ ಕಾಲ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅಲಿ ನಂಬರ್ ಗೆ ಹೆಚ್ಚಾಗಿ ಫೋನ್ ಕಾಲ್ ಹೋಗಿತ್ತು. ನಂತರ ಪೊಲೀಸರು ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿ ಅಲಿ ಎಂಟನೇ ತರಗತಿಯಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದನು. ಆಗ ಯುವತಿ ಈತನ ವಿದ್ಯಾರ್ಥಿಯಾಗಿದ್ದಳು. ನಂತರ ಯುವತಿ ಆತನನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಳು. ಆದ್ದರಿಂದ ಆರೋಪಿ ಅಲಿ ಕೊಲೆ ಮಾಡಿದ್ದಾನೆ. ಕೊಲೆಯಾದ ಮರುದಿನ ತನ್ನ ಮನೆಯಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದನು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ‘ನಮ್ಮನ್ನ ಬಿಟ್ಟು ಹೋಗ್ಬೇಡಿ’- ಶಿಕ್ಷಕಿಯನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ‘ನಮ್ಮನ್ನ ಬಿಟ್ಟು ಹೋಗ್ಬೇಡಿ’- ಶಿಕ್ಷಕಿಯನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

    ಕೊಪ್ಪಳ: ತಮ್ಮ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕಿಯ ವರ್ಗಾವಣೆಯಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಶಾಲೆ ಬಿಟ್ಟು ತೆರಳದಂತೆ ಮನವಿ ಮಾಡಿ ಕಣ್ಣೀರ ಧಾರೆ ಹರಿಸಿದ ಅಪರೂಪದ ಘಟನೆ ಗಂಗಾವತಿಯ ವಿರುಪಾಪುರ ಶಾಲೆಯಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ರಜನಿ ಅವರನ್ನು ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಸ.ಹಿ.ಪ್ರಾ. ಶಾಲೆ ಗೆ ಕಡ್ಡಾಯ ವರ್ಗಾವಣೆ ಮಾಡಲಾಗಿತ್ತು. ಇಂದು ಶಾಲೆಗೆ ಹಾಜರಾಗಿದ್ದ ವೇಳೆ ತಮ್ಮ ನೆಚ್ಚಿನ ಶಿಕ್ಷಕಿಯ ವರ್ಗಾವಣೆ ಸಂಗತಿ ವಿದ್ಯಾರ್ಥಿಗಳಿಗೆ ತಿಳಿದು ಬಂದಿದ್ದು, ಇದರಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ಅಪ್ಪಿಕೊಂಡು ಶಾಲೆ ಬಿಟ್ಟು ತೆರಳದಂತೆ ಮನವಿ ಮಾಡಿದರು.

    ಕಳೆದ 10 ವರ್ಷಗಳಿಂದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ರಜನಿ ಅವರು ಸೇವೆ ಸಲ್ಲಿಸುತ್ತಿದ್ದರು. ರಜನಿ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ವಿದ್ಯಾರ್ಥಿಗಳ ಪೋಷಕರ ಮನಸ್ಸನ್ನು ಗೆದ್ದಿದ್ದರು. ಶಿಕ್ಷಕಿಯ ವರ್ಗಾವಣೆಯಿಂದ ಪೋಷಕರು ಬೇಸರಗೊಂಡಿದ್ದರು. ಶಿಕ್ಷಕಿ ರಜನಿ ಅವರು ಮಕ್ಕಳೊಂದಿಗೆ ಹೊಂದಿದ್ದ ಬಾಂಧವ್ಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದ ವೇಳೆ ಕಂಡು ಬಂತು. ತಮ್ಮ ವರ್ಗಾವಣೆ ಕಡ್ಡಾಯವಾಗಿರುವುದರಿಂದ ಇದನ್ನು ವಿದ್ಯಾರ್ಥಿಗಳಿಗೆ ಆರ್ಥವಾಗುವಂತೆ ಹೇಳಲಾಗದೆ ಶಿಕ್ಷಕರು ಸಮಸ್ಯೆ ಎದುರಿಸಿದ್ದರು. ಅಲ್ಲದೇ ತಮ್ಮನ್ನು ಬಿಗಿದಪ್ಪಿ ಅಳುತ್ತಿದ್ದ ವಿದ್ಯಾರ್ಥಿಗಳನ್ನು ಕಂಡ ಶಿಕ್ಷಕರು ಕೂಡ ಕಣ್ಣೀರಿಟ್ಟಿದ್ದು ಕಂಡು ಬಂತು.

    ಈ ಹಿಂದೆ ಚಿಕ್ಕಮಗಳೂರಿನ ಕೈಮರದಲ್ಲಿ ಇಂತಹದೇ ಘಟನೆ ನಡೆದಿತ್ತು. ಕೈಮರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ದುರ್ಗೇಶ್ ಅವರು ಸುಮಾರು 12 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆಯೂ ಶಿಕ್ಷಕರ ವರ್ಗಾವಣೆಯಿಂದ ನೊಂದ ವಿದ್ಯಾರ್ಥಿಗಳು ಶಿಕ್ಷಕರನ್ನು ತಬ್ಬಿ ಕಣ್ಣೀರಿಟ್ಟಿದ್ದರು. ವಿಡಿಯೋ ಇಲ್ಲಿದೆ….