Tag: teacher

  • Microfinance |  ಮನೆ, ಶಾಲೆಗೆ ಬಂದು ಟಾರ್ಚರ್‌ – ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆ

    Microfinance | ಮನೆ, ಶಾಲೆಗೆ ಬಂದು ಟಾರ್ಚರ್‌ – ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆ

    ದಾವಣಗೆರೆ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ತಾಳಲಾರದೇ ತುಂಗಭದ್ರಾ ನದಿಗೆ (Tungabhadra River) ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆಯಾಗಿದೆ.

    ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ (Teacher) ಪುಷ್ಪಲತಾ ಮೃತದೇಹ ಇಂದು ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ.

    ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಇಬ್ಬರು ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರು.‌ ಒಂದು ಕಂತು ಬಾಕಿ ಇಟ್ಟುಕೊಂಡಿದ್ದಕ್ಕೆ ಫೈನಾನ್ಸ್‌ನವರ ಟಾರ್ಚರ್ ಹೆಚ್ಚಾಗಿತ್ತು.

     

    ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದರು. ಅಷ್ಟೇ ಅಲ್ಲದೇ ಶಾಲೆಯ ಬಳಿಗೂ ಬಂದು ಪೀಡಿಸುತ್ತಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಫೈನಾನ್ಸ್‌ನವರು ಪೊಲೀಸ್ ಸ್ಟೇಷನ್‌ನಲ್ಲಿ ಶಿಕ್ಷಕ ದಂಪತಿ ವಿರುದ್ದ ಕೇಸ್ ಕೂಡ ಹಾಕಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆಸಿದ್ದರು.

    ಪೊಲೀಸ್‌ ಠಾಣೆಗೆ ಕರೆಸಿದ್ದಕ್ಕೆ ಪುಷ್ಪಲತಾ ಮನ ನೊಂದಿದ್ದರು. ಡಿ. 26 ರಂದು ಗಣರಾಜ್ಯೋತ್ಸವ ದಿನದಂದು ಶಾಲೆಯ ಕಾರ್ಯಕ್ರಮ ಮುಗಿಸಿ ನದಿಗೆ ಹಾರಿದ್ದರು. ತುಂಗಭದ್ರಾ ನದಿಯ ಬಳಿಯ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಶವ ಪತ್ತೆಯಾಗಿದೆ.

    ಸೋಮವಾರದಿಂದ ಈಜು ಪರಿಣಿತರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸುತ್ತಿದ್ದರು. ರಾಘವೇಂದ್ರ ಮಠದಿಂದ 1 ಕಿಲೋ ಮೀಟರ್ ದೂರದಲ್ಲಿ ಜಾಕ್‌ವೆಲ್ ಬಳಿ ತೆಲುತ್ತಿದ್ದ ಶವ‌ವನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಇದನ್ನೂ ಓದಿ: Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    ತುಂಗಭದ್ರಾ ನದಿಗೆ ಪುಷ್ಪಲತಾ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿತ್ತು. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ನಿಲ್ಲದ ಫೈನಾನ್ಸ್‌ ಕಿರುಕುಳ – ದಾವಣಗೆರೆಯಲ್ಲಿ ಶಿಕ್ಷಕಿ ಆತ್ಮಹತ್ಯೆ

    ನಿಲ್ಲದ ಫೈನಾನ್ಸ್‌ ಕಿರುಕುಳ – ದಾವಣಗೆರೆಯಲ್ಲಿ ಶಿಕ್ಷಕಿ ಆತ್ಮಹತ್ಯೆ

    ದಾವಣಗೆರೆ: ಖಾಸಗಿ ಫೈನಾನ್ಸ್‌ (Finance) ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು (Teacher) ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ (Honnali) ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನಿವಾಸಿ ಪುಷ್ಪಲತ (46) ಅತ್ಮಹತ್ಯೆಗೆ ಶರಣಾದ ಶಿಕ್ಷಕಿ ಎಂದು ತಿಳಿದು ಬಂದಿದೆ. ಅವರು ತುಂಗಾಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿಯಲ್ಲಿ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್ ಹಾಗೂ ಕೈಗಡವಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದರು.

    ಸರಿಯಾಗಿ ಪಾವತಿ ಮಾಡದ ಹಿನ್ನೆಲೆ 20 ದಿನಗಳ ಹಿಂದೆ ಪುಷ್ಪಲತ ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್‌ ಸಿಬ್ಬಂದಿ ದೂರು ನೀಡಿದ್ದರು. ದೂರು ದಾಖಲಾದ ಬಳಿಕ ಹೊನ್ನಾಳಿ ಠಾಣೆ ಪೊಲೀಸರು ಫೈನಾನ್ಸ್ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ ತುಂಗಾಭದ್ರ ನದಿಗೆ ಹಾರಿ ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತುಂಗಭದ್ರಾ ನದಿಗೆ ಪುಷ್ಪಲತ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶಿಕ್ಷಕಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಹೊನ್ನಾಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • 25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    ಬಾಗಲಕೋಟೆ: ಒಂದು ಕಡೆ 25 ವರ್ಷಗಳ ಬಳಿಕ ಪ್ರೌಢಶಾಲೆಯಲ್ಲಿ (High School) ಹಳೆ ವಿದ್ಯಾರ್ಥಿಗಳು (Old Students) ಸಮಾಗಮ. ಇನ್ನೊಂದೆಡೆ ಶಿಕ್ಷಕರು (Teacher) ಪಾಠ ಬೋಧನೆ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬಾದಾಮಿ ತಾಲೂಕಿನ ಕೆರೂರು (Kerur) ಪಟ್ಟಣದ ಅ.ರಾ ಹಿರೇಮಠ ಹಾಗೂ ಅ.ಚ ಘಟ್ಟದ ಪ್ರೌಢಶಾಲೆಯಲ್ಲಿ.

    2000-2001ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು (SSLC Students) ವಿಶಿಷ್ಟ ರೀತಿಯಲ್ಲಿ ಗುರುವಂದನಾ (Guru Vadndana) ಕಾರ್ಯಕ್ರಮ ಆಯೋಜಿಸಿದ್ದರು. ಇದೇ ವೇಳೆ 1997-98 ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆದಿದ್ದು ಮತ್ತೊಂದು ವಿಶೇಷ.

    25ನೇ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸೇರಿ ಅಕ್ಷರ ಕಲಿಸಿದ ಗುರುಗಳಿಗೆ ಗೌರವಿಸುವ ಮೂಲಕ ಸಾರ್ಥಕ ಕ್ಷಣವನ್ನು ಸಂಭ್ರಮಿಸಿದರು. ಬೆಳಗ್ಗೆ ಪ್ರೌಢ ಶಾಲಾ ಆವರಣದಲ್ಲಿ ಪ್ರಾರ್ಥನೆ ಬಳಿಕ ಕೊಠಡಿಗೆ ತೆರಳಿ ಪಾಠ ಕೇಳುವ ದೃಶ್ಯ ಮರುಸೃಷ್ಟಿ ಮಾಡಲಾಗಿತ್ತು. ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವಕ್ಕೆ ಲಕ್ಕುಂಡಿಯ ಬ್ರಹ್ಮ ಜಿನಾಲಯ ಆಯ್ಕೆ – ವಿಶೇಷತೆ ಏನು?

    ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ಸಿ ಎಸ್ ನಾಗನೂರು ಅವರು ವಿದ್ಯಾರ್ಥಿಗಳು ಹಾಜರಾತಿ ತೆಗೆದುಕೊಂಡು ಎಂದಿನಂತೆ ಪಾಠ ಬೋಧನೆ ಮಾಡಿದರು. ಹಳೆ ವಿದ್ಯಾರ್ಥಿಗಳು ಬಿಳಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್, ಹಳೆ ವಿದ್ಯಾರ್ಥಿನಿಯರು ಕೆಂಪು ಬಣ್ಣದ ಸೀರೆ ಧರಿಸಿ ತರಗತಿಗೆ ಹಾಜರಾಗಿದ್ದರು. ಅದೇ ಪಾಠ, ಅದೇ ಹಳೆಯ ನೆನಪಿನಲ್ಲಿ ಸ್ನೇಹಿತರು ತಮ್ಮ ಶೈಕ್ಷಣಿಕ ಜೀವನ ಸದ್ಯ ವೃತ್ತಿ ಜೀವನದ ಬಗ್ಗೆ ಪರಸ್ಪರ ವಿಚಾರವನ್ನು ಹಂಚಿಕೊಂಡರು.

    ಬಿಬಿ ನಿಲುಗಲ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಲಿಸಿದ ಗುರುಗಳನ್ನು ಪುಷ್ಪ ವೃಷ್ಟಿಯ ಮೂಲಕ ಬರಮಾಡಿಕೊಂಡರು. ವೇದಿಕೆ ಮೇಲೆ ಗುರುಗಳಿಗೆ ಶಿಷ್ಯರು ಸನ್ಮಾನಿಸಿ ಸಾರ್ಥಕತೆ ಮೆರೆದರು. 25 ವರ್ಷಗಳ ಬಳಿಕ ಶಿಕ್ಷಕರು ವಿದ್ಯಾರ್ಥಿಗಳು ಸಮಾಗಮದಲ್ಲಿ ಅಗಲಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ಈ ವೇಳೆ ಹಲವು ಹಳೆ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲೆಯಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ನಿವೃತ್ತಿಯಾದ ಶಿಕ್ಷಕರಾದ ಡಿಪಿ ಅಮಲಝರಿ, ಆರ್ ಆರ್ ಶೆಟ್ಟರ್, ವೈ ಡಿ ರಡ್ಡೇರ್, ಸಿ ಎಸ್ ನಾಗನೂರು ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಹಾಂತೇಶ ಮೆಣಸಗಿ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

     

  • 10 ಕೋಟಿ ಮೌಲ್ಯದ ಜಮೀನನ್ನು 10 ಲಕ್ಷಕ್ಕೆ ಕೊಟ್ಟು ಅಗ್ರಿಮೆಂಟ್‌ – ಮೋಸ ಹೋದೆನೆಂದು ಸರ್ಕಾರಿ ಶಾಲಾ ಶಿಕ್ಷಕ ಆತ್ಮಹತ್ಯೆ

    10 ಕೋಟಿ ಮೌಲ್ಯದ ಜಮೀನನ್ನು 10 ಲಕ್ಷಕ್ಕೆ ಕೊಟ್ಟು ಅಗ್ರಿಮೆಂಟ್‌ – ಮೋಸ ಹೋದೆನೆಂದು ಸರ್ಕಾರಿ ಶಾಲಾ ಶಿಕ್ಷಕ ಆತ್ಮಹತ್ಯೆ

    ಬೆಂಗಳೂರು: ಡೆತ್‌ನೋಟ್‌ ಬರೆದಿಟ್ಟು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ನರಸಿಂಹ ಮೂರ್ತಿ (59) ಆತ್ಮಹತ್ಯೆ ಮಾಡಿಕೊಂಡ ಮುಖ್ಯ ಶಿಕ್ಷಕ. ಹೊಸಕೋಟೆ ಜಡಗನಹಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜನವರಿ‌ 15 ಕ್ಕೆ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು.

    10 ಕೋಟಿ ಜಾಗದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಂಗನಗರದಲ್ಲಿ‌ 25 ಗುಂಟೆ ಜಮೀನು ಹೊಂದಿದ್ದರು.

    ಕಾಂಗ್ರೆಸ್ ಮುಖಂಡ ಸತೀಶ್ ಎಂಬವರು ಜಮೀನು ಖರೀದಿಸೋದಾಗಿ ಅಗ್ರಿಮೆಂಟ್ ಹಾಕಿಸಿಕೊಂಡಿದ್ದರು. 10 ಕೋಟಿ ಜಮೀನಿಗೆ 10 ಲಕ್ಷ ಕೊಟ್ಟು ಅಗ್ರಿಮೆಂಟ್ ಆಗಿತ್ತು. ಉಳಿದ ಹಣ ಕೊಡದೆ ಜಮೀನು ಲಪಟಾಯಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

    ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದರು. ಇದರಿಂದ ಮನನೊಂದು ನರಸಿಂಹ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • Tumakuru| ಬಡ ವಿದ್ಯಾರ್ಥಿಗಳ ವಿಮಾನಯಾನ ಕನಸು ನನಸಾಗಿಸಿದ ಶಿಕ್ಷಕ

    Tumakuru| ಬಡ ವಿದ್ಯಾರ್ಥಿಗಳ ವಿಮಾನಯಾನ ಕನಸು ನನಸಾಗಿಸಿದ ಶಿಕ್ಷಕ

    – 51 ಮಕ್ಕಳ ವಿಮಾನಯಾನದ ಭತ್ಯೆ ಭರಿಸಿದ ಶಿಕ್ಷಕ

    ತುಮಕೂರು: ವಿಮಾನದಲ್ಲಿ (Aeroplane) ಹಕ್ಕಿಯಂತೆ ಹಾರಾಡುವ ಕನಸು ಕಂಡಿದ್ದ ಶಾಲಾ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪಕ್ಕದ ಮಹಾರಾಷ್ಟ್ರ (Maharashtra) ಪ್ರವಾಸಕ್ಕೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ಹಳ್ಳಿಯ ಬಡ ಮಕ್ಕಳ ಕನಸನ್ನು ಶಿಕ್ಷಕರೊಬ್ಬರು (Teacher) ನನಸಾಗಿಸಿದ್ದಾರೆ. ಈ ಮೂಲಕ ಮಕ್ಕಳ ಪ್ರವಾಸವನ್ನು ಸ್ಮರಣೀಯವಾಗಿಸಿದ್ದಾರೆ.

    ಹಳ್ಳಿಯೊಂದರ ಬಡ ಕುಟುಂಬದಲ್ಲಿನ ಶಾಲಾ ಮಕ್ಕಳನ್ನು ಮುಖ್ಯ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಅದು ಬಸ್‌ನಲ್ಲಿ ಅಲ್ಲ, ರೈಲಿನಲ್ಲಿಯೂ ಅಲ್ಲ, ಬಡವರಿಗೆ, ಬಹುತೇಕ ಮಧ್ಯಮ ವರ್ಗದವರಿಗೆ ಕೈಗೆಟುಕದಂಥ ತೀರಾ ದುಬಾರಿ ಎನ್ನಬಹುದಾದ ವಿಮಾನದಲ್ಲಿ. ಒಟ್ಟು ಐದು ದಿನಗಳ ಶಾಲೆಯ ಶೈಕ್ಷಣಿಕ ಪ್ರವಾಸವನ್ನು ಅವಿಸ್ಮರಣೀಯಗೊಳಿಸಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಹ ಪ್ರವಾಸವನ್ನಾಗಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷ ನಾಯಕ ಅಶೋಕ್‌ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!

    ತುಮಕೂರು ತಾಲೂಕಿನ ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ, ತಮ್ಮ ಶಾಲೆಯ ಮಕ್ಕಳಿಗೆ ಉಚಿತ ವಿಮಾನ ಪ್ರಯಾಣ ಮಾಡಿಸಿದ ಮಾದರಿಯ ಶಿಕ್ಷಕ. ಅವರ ಈ ಅಮೋಘ ಸೇವೆಗೆ ಗ್ರಾಮೀಣ ಶಾಲಾ ಮಕ್ಕಳು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ

    ತಾನು ಕೆಲಸ ನಿರ್ವಹಿಸುವ ಶಾಲೆಯ 51 ಮಕ್ಕಳನ್ನು ಮತ್ತು 7 ಶಾಲಾ ಸಿಬ್ಬಂದಿಯನ್ನು ಶಿಕ್ಷಕ ರಾಜಣ್ಣ ತಮ್ಮ ಸ್ವಂತ ಹಣದಲ್ಲಿ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ಮೂಲಕ ಅನೇಕ ಶಿಕ್ಷಕರಿಗೆ ಮಾದರಿ ಶಿಕ್ಷಕರೆನಿಸಿದ್ದಾರೆ. ಈ ಐದು ದಿನಗಳ ಪ್ರವಾಸದಲ್ಲಿ ಶಾಲೆಯ 51 ಮಕ್ಕಳು, ಐವರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ ಸೇರಿ ಒಟ್ಟು 58 ಮಂದಿಗೆ ಶಿಕ್ಷಕ ರಾಜಣ್ಣ ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆಗೆ ವಿಮಾನದಲ್ಲಿ ಪ್ರವಾಸಕ್ಕಾಗಿ ಕರೆದೊಯ್ದಿದ್ದಾರೆ. ಪ್ರಯಾಣದ ವೆಚ್ಚ ಒಬ್ಬರಿಗೆ 4,675 ರೂ. ಗಳಂತೆ ಒಟ್ಟು 2,71,150 ರೂ. ವೆಚ್ಚ ಮಾಡಿದ್ದಾರೆ. ಇದನ್ನೂ ಓದಿ: ಶಿವನಸಮುದ್ರಕ್ಕೆ ಶಿವಣ್ಣ ದಂಪತಿ ಭೇಟಿ – ಕಾವೇರಿ ನದಿಗೆ ಬಾಗಿನ ಅರ್ಪಣೆ

    ಒಟ್ಟಾರೆ ತಾವು ಚಿಕ್ಕಂದಿನಲ್ಲಿ ಆಗಸದಲ್ಲಿ ಹಾರುವ ವಿಮಾನವನ್ನು ಕಂಡ ಕನಸನ್ನು ಮಕ್ಕಳಿಗೆ ನನಸು ಮಾಡಲು, ತಮ್ಮ ಸಂಬಳದ ಉಳಿತಾಯದ ಹಣದಲ್ಲಿ ಕನ್ನಡ ಮಾಧ್ಯಮದ 8, 9, 10ನೇ ತರಗತಿಯ ಮಕ್ಕಳನ್ನು ಸದಾ ಸ್ಮರಣೆಯಲ್ಲಿ ಉಳಿಯುವ ವಿಮಾನಯಾನ ಪ್ರವಾಸಕ್ಕೆ ಕರೆದೊಯ್ದಿದ್ದು ಮಕ್ಕಳ ಪಾಲಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ಸಿಂಗ್‌ ಬದಲು ಪ್ರಣಬ್‌ರನ್ನು ಪ್ರಧಾನಿ ಮಾಡುತ್ತಿದ್ದರೆ ಯುಪಿಎ-3 ಅಧಿಕಾರಕ್ಕೆ ಬರುತ್ತಿತ್ತು: ಮಣಿಶಂಕರ್‌ ಅಯ್ಯರ್‌

  • ಮದುವೆಗೆ ನಿರಾಕರಣೆ – ಶಾಲೆಯಲ್ಲೇ ಶಿಕ್ಷಕಿಯ ಹತ್ಯೆಗೈದ ದುಷ್ಕರ್ಮಿ

    ಮದುವೆಗೆ ನಿರಾಕರಣೆ – ಶಾಲೆಯಲ್ಲೇ ಶಿಕ್ಷಕಿಯ ಹತ್ಯೆಗೈದ ದುಷ್ಕರ್ಮಿ

    ಚೆನ್ನೈ: ಮದುವೆಗೆ ನಿರಾಕರಿಸಿದ್ದಕ್ಕಾಗಿ ದುಷ್ಕರ್ಮಿಯೊಬ್ಬ ಶಾಲೆಯಲ್ಲೇ (School) ಶಿಕ್ಷಕಿಯ (Teacher) ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ (Thanjavur) ನಡೆದಿದೆ.

    ಕೊಲೆಯಾದ ಶಿಕ್ಷಕಿಯನ್ನು ರಮಣಿ (26) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮದನ್ (30) ಎಂದು ಗುರುತಿಸಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್‌ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

    ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ (Students) ಕೌನ್ಸೆಲಿಂಗ್‌ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

    ಶಿಕ್ಷಕರ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಹಲ್ಲೆಕೋರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

  • Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ

    Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ

    ತುಮಕೂರು: ಕನಕದಾಸರ ಜಯಂತಿ ಮುಗಿಸಿ ವಾಪಸ್ ಆಗುತ್ತಿದ್ದ ಶಿಕ್ಷಕಿಯ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ಸರಗಳ್ಳತನ ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ಮರಿಸಿದ್ದಯ್ಯನ ಪಾಳ್ಯದ ಬಳಿ ನಡೆದಿದೆ.

    ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ ಶಾಲೆ ಶಿಕ್ಷಕಿ (Teacher) ರೇಖಾ ಶಾಲೆಯಲ್ಲಿ ಕನಕದಾಸರ ಜಯಂತಿ ಮುಗಿಸಿ ಹಿಂದಿರುಗುವ ವೇಳೆ ಆಕೆಯ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಸರ (Chain) ಎಗರಿಸಿದ್ದಾರೆ. ಬುಲೆಟ್‌ನಲ್ಲಿ ಬಂದ ಕಳ್ಳರು 40 ಹಾಗೂ 20 ಗ್ರಾಂ ತೂಕದ ಎರಡು ಸರ ಕಸಿದು ಪರಾರಿಯಾಗಿದ್ದಾರೆ. ಈ ವೇಳೆ ಬುಲೆಟ್ ವಿಡಿಯೋ ಮಾಡಿಕೊಳ್ಳಲು ಶಿಕ್ಷಕಿ ಮುಂದಾಗಿದ್ದಾರೆ. ಇದನ್ನು ಅರಿತ ಕಳ್ಳರು ಆಕೆಯ ಮೊಬೈಲ್ ಕೂಡ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.9 ರಿಂದ ಚಳಿಗಾಲದ ಅಧಿವೇಶನ

    ಗಾಯಗೊಂಡಿದ್ದ ಶಿಕ್ಷಕಿ ರೇಖಾಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನಾನೇನು ಡ್ಯಾನ್ಸ್‌ ಮಾಡ್ತೀದ್ದೀನಾ? – ಮಾಧ್ಯಮಗಳ ಮುಂದೆ ಮುಡಾ ಮಾಜಿ ಆಯುಕ್ತನ ಪೌರುಷ

  • ಕೆನ್ನೆಗೆ ಬಲವಾಗಿ ಹೊಡೆದ ಶಿಕ್ಷಕಿ – ಸಾವು ಬದುಕಿನ ನಡುವೆ ಬಾಲಕಿ ಹೋರಾಟ

    ಕೆನ್ನೆಗೆ ಬಲವಾಗಿ ಹೊಡೆದ ಶಿಕ್ಷಕಿ – ಸಾವು ಬದುಕಿನ ನಡುವೆ ಬಾಲಕಿ ಹೋರಾಟ

    ಮುಂಬೈ: ಶಿಕ್ಷಕಿಯೊಬ್ಬಳು (Teacher) 9 ವರ್ಷದ ವಿದ್ಯಾರ್ಥಿನಿಯ (Student) ಕೆನ್ನಗೆ ಹೊಡೆದ ಪರಿಣಾಮ ಬಾಲಕಿಯ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮುಂಬೈನಿಂದ (Mumbai) ಸುಮಾರು 58 ಕಿಲೋಮೀಟರ್ ದೂರದಲ್ಲಿರುವ ನಲ್ಲಸೋಪಾರ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಟ್ಯೂಷನ್ ಶಿಕ್ಷಕಿ ಅ.5 ರಂದು ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದಿದ್ದಳು. ಇದಾದ ಒಂದು ವಾರದ ಬಳಿಕ ವಿದ್ಯಾರ್ಥಿನಿಗೆ ತೀವ್ರ ಆರೋಗ್ಯ ಸಮಸ್ಯೆ ಉಂಟಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೆದುಳಿಗೆ ಹಾನಿಯಾಗಿರುವುದು ತಿಳಿದು ಬಂದಿದೆ.

    ಶಿಕ್ಷಕಿ ರತ್ನಾ ಸಿಂಗ್ (20), ವಿದ್ಯಾರ್ಥಿನಿ ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದಳು ಎಂದು ಕಪಾಳಮೋಕ್ಷ ಮಾಡಿದ್ದಳು. ಹೊಡೆತ ಎಷ್ಟು ತೀವ್ರವಾಗಿತ್ತು ಎಂದರೆ ವಿದ್ಯಾರ್ಥಿನಿಯ ಕಿವಿಯೋಲೆ ಕೆನ್ನೆಯೊಳಗೆ ಸಿಲುಕಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ತೀವ್ರತರವಾದ ಮಿದುಳಿನ ಗಾಯ, ದವಡೆಯ ಬಿಗಿತ, ಶ್ವಾಸನಾಳಕ್ಕೆ ತೀವ್ರವಾದ ಗಾಯದಿಂದ ಬಳಲುತ್ತಿದ್ದಾಳೆ. ಆಕೆ ಕಳೆದ 9 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಕೆಯ ವಿಚಾರಣೆಗಾಗಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

    ತನಿಖೆ ನಡೆಸಿ, ವೈದ್ಯರ ಅಭಿಪ್ರಾಯದ ನಂತರ ಆರೋಪಪಟ್ಟಿ ಮಾಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಾಲಿಬಾಲ್ ತರಬೇತಿ ವೇಳೆ ಶಾಲೆ ಆವರಣದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು

    ವಾಲಿಬಾಲ್ ತರಬೇತಿ ವೇಳೆ ಶಾಲೆ ಆವರಣದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು

    ಶಿವಮೊಗ್ಗ: ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರದಲ್ಲಿ ನಡೆದಿದೆ.

    ಗಜಾನನ ಹಿರೇಮಠ್ (46)ಮೃತ ಶಿಕ್ಷಕ. ಇವರು ಸಾಗರ ಪಟ್ಟಣದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಬುಧವಾರ) ಮಧ್ಯಾಹ್ನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಈ ವೇಳೆ ಶಿಕ್ಷಕ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಸಾಗರ (Sagara) ಉಪ ವಿಭಾಗೀಯ ಆಸ್ಪತ್ರೆಗೆ ಅವರನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಜಾಮೀನು ಅರ್ಜಿಯನ್ನು ತುರ್ತು ವಿಚಾರಣೆ ಮಾಡಿ – ಹೈಕೋರ್ಟ್‌ಗೆ ದರ್ಶನ್‌ ಮನವಿ

    ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪದಾಧಿಕಾರಿಗಳು, ಶಿಕ್ಷಕರು ಸೇರಿದಂತೆ ಹಲವರು ಭೇಟಿ ನೀಡಿದ್ದರು. ಇದನ್ನೂ ಓದಿ: BMW i7 ಇವಿ ಕಾರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ ಸಲ್ಲಿಸಿದ ಜರ್ಮನ್ ರಾಯಭಾರಿ

  • ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ – ಕಾಮುಕ ಶಿಕ್ಷಕ ಅರೆಸ್ಟ್‌

    ಜೈಪುರ್: ಐದನೇ ತರಗತಿಯ ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜಸ್ಥಾನದ (Rajasthan) ಸರ್ಕಾರಿ‌ ಶಾಲೆ ಶಿಕ್ಷಕನನ್ನು (Teacher) ಟೋಂಕ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲಾಯಿಕ್ ಅಹ್ಮದ್ ಖುರೇಷಿ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 10 ರಂದು ಖುರೇಷಿ ಬಾಲಕಿಯರಿಗೆ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ತೋರಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಗೋಪಾಲಪುರ ಗ್ರಾಮದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ತಂದೆ, ಮೂವರು ಮಕ್ಕಳು ಸಾವು

    5ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಬಾಲಕಿಯರ ಕುಟುಂಬದವರು ಖುರೇಷಿ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಆರೋಪಿ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ತನಿಖೆ ನಿಲ್ಲಲ್ಲ, ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು; ಭಾವನಾತ್ಮಕ ಪತ್ರ ಕೊನೆಯ ಅಸ್ತ್ರ ಅಷ್ಟೆ – ಸ್ನೇಹಮಯಿ ಕೃಷ್ಣ