Tag: teacher

  • ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

    – ವಿಚಾರಿಸಲು ಶಾಲೆಗೆ ಹೋದಾಗ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಿಕ್ಕ ಕಾಮುಕ
    – ಶಿಕ್ಷಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.

    ಕಾಮುಕ ಶಿಕ್ಷಕನನ್ನು ಗ್ರಾಮಸ್ಥರೇ ಹಿಡಿದು ಗೂಸಾ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಶಿಕ್ಷಕನಾಗಿರುವ ಭಾಸ್ಕರ್ ನಾಡೀಗೇರ್ ಎಂಬಾತ ಶಾಲೆಯ ಮಕ್ಕಳಿಗೆ ಪ್ರತಿನಿತ್ಯ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಹೆಣ್ಣು ಮಕ್ಕಳ ಅಂಗಾಗ ಸೇರಿದಂತೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬರುತ್ತಿದೆ.

    ಈ ಕುರಿತಾಗಿ ದೌರ್ಜನ್ಯಕೊಳಗಾದ ಹೆಣ್ಣು ಮಕ್ಕಳು ತಮ್ಮ ಪೋಷಕರಿಗೆ ಶಿಕ್ಷಕನ ಕಾಮುಕ ಚೇಷ್ಟೆ ಬಗ್ಗೆ ದೂರಿದ್ದಾರೆ. ಈ ಶಿಕ್ಷಕನ ಲೈಂಗಿಕ ದೌರ್ಜನ್ಯ ಅತಿರೇಕವಾಗುತ್ತಿದ್ದಂತೆ ಮಕ್ಕಳ ಪೋಷಕರು ಇಂದು ವಿಚಾರಿಸಲು ಏಕಾಏಕಿ ಶಾಲೆ ಬಂದಾಗ ಶೌಚಾಲಯದಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈ ಕಾಮುಕ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಆತನನ್ನು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಅಲ್ಲದೆ ಈ ಶಾಲೆಯಲ್ಲಿ ಇಬ್ಬರೇ ಶಿಕ್ಷಕರಿದ್ದು, 10 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಬಡವರೇ ವಾಸಿಸುವ ಈ ಗ್ರಾಮದಲ್ಲಿ ಓದಲಿಕ್ಕೆಂದು ಬರುವ ಈ ಹೆಣ್ಣು ಮಕ್ಕಳಿಗೆ ಈ ಶಿಕ್ಷಕ ಹಿಂದೆ ಕೂಡ ಈತ ಇದೇ ರೀತಿ ಮೈಕೈ ಮುಟ್ಟಿ ಮಾತಾನಾಡಿಸ್ತಿದ್ದಾಗ ಮಕ್ಕಳು ಪೋಷಕರ ಬಳಿ ದೂರು ಹೇಳಿದ್ದರು. ಪೋಷಕರು ಶಿಕ್ಷಕರ ಬಗ್ಗೆ ಅನುಮಾನಿಸದೆ ಸುಮ್ಮನಾಗಿದ್ದರು. ಆದರೆ ಅತಿಯಾದಾಗ ಒಮ್ಮೆ ಶಾಲೆ ಬಂದು ಮುಖ್ಯ ಶಿಕ್ಷಕಿ ಬಳಿ ದೂರು ಹೇಳಿ ಹೋಗಿದ್ದಾರೆ. ಈ ಕುರಿತಾಗಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಲು ಇಂದು SDMC ಸಭೆ ಸೇರಿ ಕ್ರಮ ಕೈಗೊಳ್ಳಬೇಕೆನ್ನುಷ್ಟರಲ್ಲಿ ಪೋಷಕರೇ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ಜೈಪುರ: ವಿದ್ಯಾರ್ಥಿಗಳ ಮುಂದೆಯೇ ವೇದಿಕೆ ಮೇಲೆ ಶಿಕ್ಷಕಿಗೆ ಶಿಕ್ಷಕನೋರ್ವ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೌಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತ್ತಿದ್ದ ಶಿಕ್ಷಕನೋರ್ವ ತನ್ನ ಪಕ್ಕದಲ್ಲಿದ್ದ ಶಿಕ್ಷಕಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ವಿದ್ಯಾರ್ಥಿಗಳ ಎದುರೇ ಶಿಕ್ಷಕಿಗೆ ಶಿಕ್ಷಕ ಮುತ್ತಿಟ್ಟ ದೃಶ್ಯವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ತರಗತಿಯಲ್ಲೇ 8ನೇ ತರಗತಿ ಹುಡ್ಗ-ಹುಡ್ಗಿ ಕಿಸ್ಸಿಂಗ್

    ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ರಾಜಸ್ಥಾನದ ಶಿಕ್ಷಣ ಸಚಿವರನ್ನು ಪ್ರಶ್ನಿಸಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುರ್ವರ್ತನೆ ತೋರಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವರು ತಲೆಕೆಡಿಸಿಕೊಂಡಿಲ್ಲ. ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನವೇ ವಿದ್ಯಾರ್ಥಿಗಳಿಬ್ಬರ ಲಿಪ್ ಲಾಕ್

    ವೈರಲ್ ವಿಡಿಯೋದಲ್ಲಿ, ವೇದಿಕೆ ಮೇಲೆ ಓರ್ವ ಶಿಕ್ಷಕ, ಒಬ್ಬರು ಶಿಕ್ಷಕಿ ಕೂತಿರುವಾಗ ಏಕಾಏಕಿ ಶಿಕ್ಷಕ ಪಕ್ಕದಲ್ಲಿದ್ದ ಶಿಕ್ಷಕಿ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಈ ವೇಳೆ ವೇದಿಕೆ ಎದುರಿಗಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ, ಶಿಕ್ಷಕನಿಗೆ ರೇಗಿಸಿದ ದೃಶ್ಯಗಳು ಸೆರೆಯಾಗಿದೆ.

    ಈ ಹಿಂದೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕವಾಗಿಯೇ ಕಿಸ್ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆ ಬಳಿಕ ಗುಜರಾತಿನಲ್ಲಿ 8ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿ ತರಗತಿಯಲ್ಲೇ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.

    ಗುಜರಾತ್‍ನ ಪಂಚಮಹಲ್ ಜಿಲ್ಲೆಯ ಗೋದ್ರಾ ಸಮೀಪವಿರುವ ಮೊರ್ವಾ ಹಡಾಫ್‍ನ ಕ್ರುಶಿಕರ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡಿದ್ದರು. 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿ ಕ್ಲಾಸ್ ರೂಮಿನಲ್ಲಿಯೇ ಒಬ್ಬರಿಗೊಬ್ಬರು ಕಿಸ್ ಕೊಡುತ್ತಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡುತ್ತಿರುವ ವಿಡಿಯೋವನ್ನು ಯಾರೋ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

  • ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ದೂರು ದಾಖಲಾಗ್ತಿದ್ದಂತೆ ಶಿಕ್ಷಕ ಎಸ್ಕೇಪ್

    ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ದೂರು ದಾಖಲಾಗ್ತಿದ್ದಂತೆ ಶಿಕ್ಷಕ ಎಸ್ಕೇಪ್

    ಚಿತ್ರದುರ್ಗ: ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ತರಗತಿ ಕೊಠಡಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಗಂಭೀರ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದೀಗ ವಿದ್ಯಾರ್ಥಿನಿಯರ ಪೋಷಕರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ.

    ಸುಮಾರು 51 ವರ್ಷದ ತಿಪ್ಪೇಸ್ವಾಮಿ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ತಿಪ್ಪೇಸ್ವಾಮಿ ವಿದ್ಯಾರ್ಥಿನಿಯರ ಜೊತೆ ಅಸಹ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 6 ಹಾಗೂ 7ನೇ ತರಗತಿಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಶಾಲೆಯಲ್ಲಿ ಮೊಬೈಲ್ ಮೂಲಕ ಅಶ್ಲೀಲ ವಿಡಿಯೋಗಳನ್ನು ಹಾಕಿ ವಿದ್ಯಾರ್ಥಿನಿಯರಿಗೆ ತೋರಿಸುತ್ತಿದ್ದನು ಎನ್ನಲಾಗಿದೆ. ಶಿಕ್ಷಕನ ಕಾಮ ಚೇಷ್ಠೆಗೆ ಬೇಸತ್ತಿದ್ದ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಕಷ್ಟವನ್ನೆಲ್ಲ ಪೋಷಕರ ಬಳಿ ಹೇಳಿಕೊಂಡಿದ್ದಾರೆ.

    ಬಾಲಕಿಯರು ಹಾಗೂ ಪೋಷಕರು ಮಹಿಳಾ ಠಾಣೆಗೆ ಆಗಮಿಸುತ್ತಿದ್ದಂತೆ, ನೇರವಾಗಿ ಠಾಣೆಗೆ ಆಗಮಿಸಿದ ಎಸ್‍ಪಿ ಜಿ. ರಾಧಿಕ ಅಪ್ರಾಪ್ತ ಬಾಲಕಿಯರ ಜೊತೆ ಮಾತುಕತೆ ನಡೆಸಿದರು. ಶಾಲೆಯಲ್ಲಿ ಮಕ್ಕಳಿಗೆ ಆದ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಆರೋಪಿ ಶಿಕ್ಷಕನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಿಸಿದ್ದು, ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ. ಇನ್ನೂ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ಕಾಮಿ ಶಿಕ್ಷಕ ತಿಪ್ಪೇಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ 7 ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಪೋಷಕರು ಮಹಿಳಾ ಠಾಣೆಯಲ್ಲಿ ಕಾಮಿ ಶಿಕ್ಷಕ ತಿಪ್ಪೇಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಎಫ್‍ಐಆರ್ ಆದ ಬಳಿಕ ಪ್ರತಿಕ್ರಿಯಿಸಿದ ಪೋಷಕರು, ಈ ಪಾಪಿ ಶಿಕ್ಷಕನನ್ನು ಬಂಧಿಸಿ ಆ್ಯಸಿಡ್ ಹಾಕಿ ವಿಷ ಕೊಟ್ಟು ಸಾಯಿಸಬೇಕು. ನಮಗೆ ನ್ಯಾಯ ಬೇಕು. ನಮ್ಮ ಮಕ್ಕಳಿಗೆ ಆದ ಹಿಂಸೆ ಮತ್ತೆ ಯಾರಿಗೂ ಆಗಬಾರದು ಎಂದು ಆಗ್ರಹಿಸಿದ್ದಾರೆ.

  • ನಿವೃತ್ತರಾದ್ರೂ ಉಚಿತ ಸೇವೆ- ನಿತ್ಯ ಬೆಂಗ್ಳೂರಿಂದ ಮಳವಳ್ಳಿಗೆ ಹೋಗಿ ಮಕ್ಕಳಿಗೆ ಪಾಠ

    ನಿವೃತ್ತರಾದ್ರೂ ಉಚಿತ ಸೇವೆ- ನಿತ್ಯ ಬೆಂಗ್ಳೂರಿಂದ ಮಳವಳ್ಳಿಗೆ ಹೋಗಿ ಮಕ್ಕಳಿಗೆ ಪಾಠ

    – ರಾಮಂದೂರಿನ ಸತ್ಯನಾರಾಯಣ್ ಪಬ್ಲಿಕ್ ಹೀರೋ

    ಮಂಡ್ಯ: ನನ್ನ ಸರ್ವಿಸ್ ಮುಗಿದ್ರೆ ಸಾಕು. ನಾನು ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಇರುತ್ತೇನೆ. ಅಲ್ಲದೆ ನಂಗೆ ಕೆಲಸ ಮಾಡಲು ಆಗ್ತಾ ಇಲ್ಲ. ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹಲವು ಮಂದಿ ಸರ್ಕಾರಿ ನೌಕರರು ಅಂದುಕೊಳ್ಳುತ್ತಾರೆ. ಆದರೆ ಮಂಡ್ಯದ ಶಿಕ್ಷಕರೊಬ್ಬರು ನಿವೃತ್ತಿ ಆದರು ಸಹ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಉಚಿತವಾಗಿ ಪಾಠ ಮಾಡುತ್ತಿದ್ದು, ಈ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

    ಹೌದು. ಒಂದು ವರ್ಷದ ಹಿಂದಷ್ಟೇ ಶಿಕ್ಷಕ ವೃತ್ತಿಯಿಂದ ಪಿ.ಆರ್.ಸತ್ಯನಾರಾಯಣ್ ನಿವೃತ್ತರಾಗಿದ್ದಾರೆ. ಆದರೂ ಇವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಮಂದೂರಿನ ಪ್ರಾಥಮಿಕ ಶಾಲೆಗೆ ನಿತ್ಯ ಬಂದು ಪಾಠ ಪ್ರವಚನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ತಾರೆ. ಇವರು ರಾಮಂದೂರಿಗೆ ಬರೋದು ಅಕ್ಕಪಕ್ಕದ ಹಳ್ಳಿಯಿಂದಲ್ಲ. ಬದಲಾಗಿ ಬೆಂಗಳೂರಿನಿಂದ.

    ಮೂಲತಃ ನಂಜನಗೂಡಿನ ಸತ್ಯನಾರಾಯಣ್ ಕುಟುಂಬ ಸದ್ಯ ಬೆಂಗಳೂರಲ್ಲಿ ವಾಸವಿದೆ. ಬೆಂಗಳೂರಿನಿಂದ ಮಂಡ್ಯಗೆ ನಿತ್ಯ ರೈಲಲ್ಲಿ ಬರುವ ಸತ್ಯನಾರಾಯಣ್, ಅಲ್ಲಿಂದ ಬೈಕಲ್ಲಿ ರಾಮಂದೂರಿಗೆ ಸೇರಿಕೊಳ್ಳುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳಿಗೆ ಪಾಠ, ಆಟ ಹೇಳಿಕೊಡ್ತಾರೆ. ಅಂದ ಹಾಗೇ, ಸತ್ಯನಾರಾಯಣ್ ನಿವೃತ್ತರಾಗಿದ್ದು ಇದೇ ಶಾಲೆಯಲ್ಲಿ. 100ಕ್ಕೂ ಹೆಚ್ಚು ಮಕ್ಕಳಿರೋ ಶಾಲೆಯಲ್ಲಿ ಸದ್ಯ ನಾಲ್ವರು ಶಿಕ್ಷಕರಷ್ಟೇ ಇದ್ದಾರೆ. ಮಕ್ಕಳ ಶಿಕ್ಷಣಕ್ಕೆ ತೊಂದ್ರೆ ಆಗಬಾರದು ಅನ್ನೋ ದೃಷ್ಟಿಯಿಂದ ಸತ್ಯನಾರಾಯಣ್ ಉಚಿತವಾಗಿ ಪಾಠ ಮಾಡೋದನ್ನು ಮುಂದುವರಿಸಿದ್ದಾರೆ.

    ಕಳೆದ ಒಂದು ವರ್ಷದಿಂದ ಯಾವುದೇ ಸಂಬಳ ತೆಗೆದುಕೊಳ್ಳದೇ ಕೆಲಸ ಮಾಡ್ತಿರುವ ಸತ್ಯನಾರಾಯಣ್, ಶಾಲೆಗೆ ಟಿವಿ, ಅಡುಗೆ ಉಪಕರಣಗಳು, ಸೈನ್ಸ್ ಲ್ಯಾಬ್‍ಗೆ ಬೇಕಾದ ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸತ್ಯನಾರಾಯಣ್ ಸೇವಾ ಮನೋಭಾವಕ್ಕೆ ಸಹದ್ಯೋಗಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.

    ಒಟ್ಟಿನಲ್ಲಿ ನಿವೃತ್ತರಾದರು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಕಟಿಬದ್ಧರಾಗಿ ದುಡಿಯುತ್ತಿರುವ ಸತ್ಯನಾರಾಯಣ್ ಇತರರಿಗೆ ಮಾದರಿಯಾಗಿದ್ದಾರೆ.

  • ಅಂಗನವಾಡಿಯಲ್ಲಿ ಅವಧಿ ಮೀರಿದ ಫುಡ್ – ಏನಾಗಲ್ಲ ಮಕ್ಕಳು ತಿಂತಾರೆ ಅಂದ ಟೀಚರಮ್ಮ

    ಅಂಗನವಾಡಿಯಲ್ಲಿ ಅವಧಿ ಮೀರಿದ ಫುಡ್ – ಏನಾಗಲ್ಲ ಮಕ್ಕಳು ತಿಂತಾರೆ ಅಂದ ಟೀಚರಮ್ಮ

    ಬೆಂಗಳೂರು: ಸಿದ್ದಗಂಗಾ ಮಠಕ್ಕೆ ದಾಸೋಹ ರೇಷನ್ ನೀಡುವುದನ್ನು ಸರ್ಕಾರ ನಿಲ್ಲಿಸಿದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಇತ್ತ ಪುಟಾಣಿ ಕಂದಮ್ಮಗಳಿಗೆ ಅವಧಿ ಮೀರಿದ ಆಹಾರವನ್ನು ನೀಡಿ ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಿಗೆ ಅಂಗನವಾಡಿ ಶಿಕ್ಷಕಿಯೊಬ್ಬರು ಸಿಕ್ಕಿಬಿದ್ದಿದ್ದಾರೆ.

    ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳಿಗೆ ನೀಡುವ ಆಹಾರದ ಅವಧಿ ಮುಗಿದಿದ್ದರೂ ಮಹಾಲಕ್ಷ್ಮಿ ಲೇಔಟ್‍ನ ಅಂಗನವಾಡಿಯಲ್ಲಿ ಶಿಕ್ಷಕಿ ಅವನ್ನು ಮಕ್ಕಳಿಗೆ ಹಂಚಿದ್ದಾರೆ. ಇದು ಅವಧಿ ಮೀರಿದೆ ಅಂತಾ ಪೋಷಕರು ವಾಪಸ್ ಅಂಗನವಾಡಿಗೆ ಕೊಟ್ಟು, ಪ್ರಶ್ನಿಸಿದರೆ, “ಅಯ್ಯೋ ಇದೇ ನಮ್ಗೆ ಸರ್ಕಾರದಿಂದ ಬರೋದು, ಏನು ಆಗಲ್ಲ ತಿನ್ನಿಸಿ ಮಕ್ಕಳು ತಿಂತಾರೆ” ಅಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಸುದ್ದಿ ತಿಳಿದಾಗ ಪಬ್ಲಿಕ್ ಟಿವಿ ಅಂಗನವಾಡಿಗೆ ಹೋಗಿ ನೋಡೊದಾಗ, ಬೆಳಕೇ ಇಲ್ಲದ ಕೋಣೆಯಲ್ಲಿ ಮಕ್ಕಳು ಆಟವಾಡುತ್ತಿರುವುದು, ಸರ್ಕಾರದಿಂದ ಈ ತಿಂಗಳ ಆಹಾರ ಬಂದಿದ್ದರೂ ಅದನ್ನು ವಿತರಣೆ ಮಾಡದೇ ಇರುವುದು ಬೆಳಕಿಗೆ ಬಂದಿದೆ. ಮಕ್ಕಳು ತಿಂತರೆ ಇದನ್ನೇ ಕೊಡಿ ಎಂದು ಅವಧಿ ಮೀರಿದ ಆಹಾರ ಕೊಟ್ಟು ಮೊದಲು ಪೋಷಕರ ಜೊತೆ ವಾಗ್ವಾದ ನಡೆಸಿದ್ದ ಶಿಕ್ಷಕಿ, ಕ್ಯಾಮೆರಾ ಕಂಡೊಡನೆ ಇಲ್ಲ ಗೊತ್ತಾಗದೇ ತಪ್ಪಾಗಿದೆ, ಬೇರೆ ಕೊಡ್ತೀವಿ ಎಂದು ಡೈಲಾಗ್ ಹೇಳಿದ್ದಾರೆ.

    ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಮಾತಿಗೆ ಈ ಪ್ರಕರಣ ಒಂದು ರೀತಿ ಉದಾಹರಣೆಯಾಗಿದೆ. ಪುಟಾಣಿ ಮಕ್ಕಳು ಈ ರೀತಿ ಅವಧಿಮೀರಿದ ಆಹಾರ ಸೇವಿಸಿದರೆ ಅವರ ಆರೋಗ್ಯದ ಗತಿ ಏನು? ಹೀಗೆ ನಿರ್ಲಕ್ಷ್ಯ ಮೆರೆಯುವ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

  • ತಂದೆಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಮಗ, ಸೊಸೆಯೇ ಹೆಣವಾದ್ರು

    ತಂದೆಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಮಗ, ಸೊಸೆಯೇ ಹೆಣವಾದ್ರು

    ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ವಿರುಪಾಪುರ ಗ್ರಾಮದ ಬಳಿ ಇಂದು ಕಾರು ಹಾಗೂ ಟಿಪ್ಪರ್ ಲಾರಿಯೊಂದು ಮುಖಾ ಮುಖಿ ಡಿಕ್ಕಿ ಹೊಡೆದಿದ್ದು, ತಂದೆಯ ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಮಗ, ಸೊಸೆ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

    ವಸಂತ್ ಕುಮಾರ್(37), ಪತ್ನಿ ವಿನುತ(30) ಹಾಗೂ ಕಾರು ಚಾಲಕ ರವಿ ಮೃತ ದುಧೈರ್ವಿಗಳು. ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದವರಾದ ವಸಂತ್ ಕುಮಾರ್ ಮಡೀಕೆರಿಯ ಮೂರ್ನಾಡುನಲ್ಲಿ ಶಿಕ್ಷಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಇಳಕಲ್‍ನಲ್ಲಿ ತಮ್ಮ ತಂದೆ ನಿಧನರಾದ ಹಿನ್ನೆಲೆ ಶವಸಂಸ್ಕಾರಕ್ಕೆ ಪತ್ನಿ ವಿನುತ, ಮಗಳ ರುತ್ವಿಕಾ(2) ಜೊತೆ ವಸಂತ್ ತೆರಳುವಾಗ ಈ ಘಟನೆ ನಡೆದಿದೆ.

    ಭೀಕರ ಅಪಘಾತದಲ್ಲಿ ವಸಂತ್, ವಿನುತ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ರುತ್ವಿಕಾ ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಂದೆಯ ಅಂತ್ಯಸಂಸ್ಕಾರಕ್ಕೆ ತೆರೆಳಿದ್ದವರು ತಾವೇ ಮಸಣ ಸೇರಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

    ಮಾನವೀಯತೆ ಮೆರೆದ ಶಿಕ್ಷಕಿ:
    ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಕ್ಯಾಸನ ಕೆರೆ ಗ್ರಾಮದಿಂದ ಹೊರಟಿದ್ದ ಶಿಕ್ಷಕಿಯೊಬ್ಬರು ಮಾನವಿಯತೆ ಮೆರೆದಿದ್ದಾರೆ. ಘಟನಾ ಸ್ಥಳದಲ್ಲಿ ಅಪಘಾತದಲ್ಲಿ ಹೆತ್ತ ತಂದೆ, ತಾಯಿಯನ್ನು ಕಳೆದುಕೊಂಡು ರೋಧಿಸುತ್ತಿದ್ದ ರುತ್ವಿಕಾಳನ್ನು ಶಿಕ್ಷಕಿ ಆಸ್ಪತ್ರಗೆ ಕರೆತಂದು, ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಶಾಲೆಯಲ್ಲಿ ಮಕ್ಕಳ ಮುಂದೆ ಶಿಕ್ಷಕಿ ಮೇಲೆ ಶಿಕ್ಷಕನಿಂದ ಮಾರಣಾಂತಿಕ ಹಲ್ಲೆ

    ಶಾಲೆಯಲ್ಲಿ ಮಕ್ಕಳ ಮುಂದೆ ಶಿಕ್ಷಕಿ ಮೇಲೆ ಶಿಕ್ಷಕನಿಂದ ಮಾರಣಾಂತಿಕ ಹಲ್ಲೆ

    ಯಾದಗಿರಿ: ಶಿಕ್ಷಕನೊಬ್ಬ ಸಹ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಸರ್ಕಾರಿ ಹಿರಿಯ ಶಾಲೆಯಲ್ಲಿ ನಡೆದಿದೆ.

    ಶಿಕ್ಷಕ ಸೋಮಶೇಖರ್ ರಾಠೋಡ್ ಎಂಬಾತ ಶಿಕ್ಷಕಿ ಪುಷ್ಪಾವತಿ (36) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಶಿಕ್ಷಕಿ ಪುಷ್ಪಾವತಿ ಪ್ರಜ್ಞೆ ತಪ್ಪಿದ್ದು, ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ತರಗತಿ ಆರಂಭವಾಗಿ, ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಿ ತರಗತಿಗಳಿಗೆ ಕಳುಹಿಸಲಾಗುತಿತ್ತು. ಈ ವೇಳೆ ಶಿಕ್ಷಕ ಪುಷ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

    ಶಾಲೆಯಲ್ಲೇ ಶಿಕ್ಷಕನ ವರ್ತನೆ ಕಂಡು ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರುಗಳು ಬೆಚ್ಚಿ ಬಿದ್ದಿದ್ದಾರೆ. ಸಹ ಶಿಕ್ಷಕರು ಎಷ್ಟು ಹೇಳಿದ್ರು ಅವರ ಮಾತು ಕೇಳದ ರಾಥೋಡ್ ಶಿಕ್ಷಕಿಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಶಿಕ್ಷಕ ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಶಿಕ್ಷಕ ರಾಥೋಡ ಹಲವು ಬಾರಿ ಈ ರೀತಿಯ ವರ್ತನೆ ತೋರಿದ್ದು, ರಾಥೋಡ್ ವಿರುದ್ಧ ಯಾದಗಿರಿ ನಗರ ಮಹಿಳಾ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಶಿಕ್ಷಕ

    ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಶಿಕ್ಷಕ

    ಯಾದಗಿರಿ: ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣವನ್ನು ಶಾಲಾ ಶಿಕ್ಷಕನೊಬ್ಬ ಜೀಬಿಗೆ ಇಳಿಸಿಕೊಂಡು ಪರಾರಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗಡಿ ಗ್ರಾಮದ ಹಗರಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2019ರ ಡಿಸೆಂಬರ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ವಿದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸಲಾಗಿತ್ತು. ಹೀಗೆ ಸಂಗ್ರಹಿಸಿದ ಹಣವನ್ನು ಶಾಲಾ ದೈಹಿಕ ಶಿಕ್ಷಕ ಎಂ.ಬಿ ದೇಸಾಯಿ ಲಪಟಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಶಾಲೆಯಲ್ಲಿ ಒಟ್ಟು 168 ವಿದ್ಯಾರ್ಥಿಗಳಿದ್ದು, ಒಂದು ವಾರದ ಟೂರ್ ಗಾಗಿ 63 ವಿದ್ಯಾರ್ಥಿಗಳಿಂದ ತಲಾ 2,900ರಂತೆ ಒಟ್ಟು 1,82,700 ರೂಪಾಯಿ ಸಂಗ್ರಹಿಸಲಾಗಿತ್ತು. ಈ ಪ್ರವಾಸದ ಜವಾಬ್ದಾರಿಯನ್ನು ದೈಹಿಕ ಶಿಕ್ಷಕ ಎಂ.ಬಿ.ದೇಸಾಯಿಗೆ ವಹಿಸಲಾಗಿತ್ತು. ಬಸ್ ಬುಕ್ ಮಾಡುತ್ತೇನೆ ಎಂದು 2019 ಡಿ. 26ರಂದು ಹಣ ತೆಗೆದುಕೊಂಡು ಹೋಗಿದ್ದ ದೇಸಾಯಿ, ಒಂದು ತಿಂಗಳು ಕಳೆದರೂ ಮರಳಿ ಶಾಲೆಗೆ ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ.

    ಮಕ್ಕಳು ಮನೆಯಲ್ಲಿ ತಮ್ಮ ಪಾಲಕರ ಬಳಿ ಕಾಡಿ ಬೇಡಿ ಪ್ರವಾಸಕ್ಕೆ ಹಣ ಸಂಗ್ರಹಿಸಿಕೊಂಡು ಶಿಕ್ಷಕರಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಸಾಲ ಮಾಡಿ ತಂದು ಕೊಟ್ಟಿದ್ದಾರೆ. ದೈಹಿಕ ಶಿಕ್ಷಕ ಪ್ರವಾಸಕ್ಕೆ ಕರೆದುಕೊಂಡು ಹೋಗದೆ ನಮಗೆ ಮೋಸ ಮಾಡಿದ್ದಾರೆ ಎಂದು ಬಡ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

    ಹಣ ತೆಗೆದುಕೊಂಡು ಹೋದ ದೈಹಿಕ ಶಿಕ್ಷಕ ಒಂದು ವಾರ ಶಾಲೆಗೆ ಬಂದರೆ ಮೂರು ವಾರ ಬರುವುದಿಲ್ಲ. ಸರಿಯಾಗಿ ಶಾಲೆಗೆ ಬಾರದೆ ಕಾಲಹರಣ ಮಾಡುತ್ತಿರುವ ದೈಹಿಕ ಶಿಕ್ಷಕನ ಮೇಲೆ ಹಲವಾರು ಆರೋಪಗಳಿವೆ. ಹೀಗಿದ್ದರೂ ಇತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಶಾಲಾ ಮುಖ್ಯಶಿಕ್ಷಕನ ಮೇಲೆ ಅನುಮಾನ ಮೂಡಿದೆ.

  • ವಿದ್ಯಾರ್ಥಿನಿಯನ್ನ ಬೆತ್ತಲೆ ಕೂರಿಸಿ ಲೈಂಗಿಕ ದೌರ್ಜನ್ಯ- ಶಿಕ್ಷಕ ಅಮಾನತು

    ವಿದ್ಯಾರ್ಥಿನಿಯನ್ನ ಬೆತ್ತಲೆ ಕೂರಿಸಿ ಲೈಂಗಿಕ ದೌರ್ಜನ್ಯ- ಶಿಕ್ಷಕ ಅಮಾನತು

    ಚಿತ್ರದುರ್ಗ: ಶಿಕ್ಷಕನೊಬ್ಬ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ನರಸಿಂಹಸ್ವಾಮಿ (52) ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಚಿತ್ರದುರ್ಗದ ಖಾಸಗಿ ಶಾಲೆಯಲ್ಲಿ 28ರಂದು ನಡೆದ ಜಿಲ್ಲಾ ಮಟ್ಟದ ‘ಇನ್ಸ್ ಪೈರ್ ಅವಾರ್ಡ್’ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿನಿಯನ್ನು ನರಸಿಂಹಸ್ವಾಮಿ ಸೋಮವಾರ ಸಂಜೆಯೇ ಕರೆದುಕೊಂಡು ಹೋಗಿದ್ದನು.

    ಬೇರೆ ತಾಲೂಕುಗಳಿಂದ ಈ ಕಾರ್ಯಕ್ರಮಕ್ಕಾಗಿ ಬಂದಂತಹ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಜಿಲ್ಲಾ ಡಯಟ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಎಲ್ಲಾ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿನಿಯನ್ನು ಬಿಡದ ಶಿಕ್ಷಕ, ಆಕೆಯನ್ನು ಬೇರೆಡೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ವಿದ್ಯಾರ್ಥಿನಿಯನ್ನು ಬೆದರಿಸಿ ಆಕೆಯನ್ನು ಬೆತ್ತಲೆ ಕೂರಿಸಿ ಅಮಾನವೀಯವಾಗಿ ಈ ಕೃತ್ಯವೆಸಗಿದ್ದಾನೆಂಬ ಆರೋಪ ಕೇಳಿಬಂದಿದೆ.

    ಆರೋಪಿ ಶಿಕ್ಷಕ ನರಸಿಂಹಸ್ವಾಮಿ ಮಾಡಿರುವ ಕೃತ್ಯದಿಂದಾಗಿ ಶಿಕ್ಷಣ ಇಲಾಖೆಯು ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಈ ಪ್ರಕರಣ ಕೇಳಿ ಬಂದ ತಕ್ಷಣ ಚಿತ್ರದುರ್ಗ ಡಿಡಿಪಿಐ ರವಿಶಂಕರರೆಡ್ಡಿಯವರು ಈತನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಶಿಕ್ಷಕ ನರಸಿಂಹಸ್ವಾಮಿಯನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಬಾಲಕಿಯ ತಂದೆಯ ದೂರಿನ ಮೇರೆಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾನಸಿಕ ಖಿನ್ನತೆ- ಶಿಕ್ಷಕ ನೇಣಿಗೆ ಶರಣು

    ಮಾನಸಿಕ ಖಿನ್ನತೆ- ಶಿಕ್ಷಕ ನೇಣಿಗೆ ಶರಣು

    ಯಾದಗಿರಿ: ಮಾನಸಿಕ ಖಿನ್ನತೆಯಿಂದ ಶಿಕ್ಷಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಎಂಪಾಡ್ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

    ಮರಳುಸಿದ್ದಪ್ಪ (35) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಮೃತ ಮರಳುಸಿದ್ದಪ್ಪ ಗುರುಮಠಕಲ್ ತಾಲೂಕಿನ ಮಡೇಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಕಳೆದ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

    ತಾನು ಮಾನಸಿಕ ಖಿನ್ನತೆಗೆ ಒಳಗಾಗಿರುವ ಬಗ್ಗೆ ಮತ್ತು ಅದಕ್ಕೆ ಚಿಕಿತ್ಸೆಯ ಬಗ್ಗೆ ಮಡದಿ, ಸಹೋದರನಿಗೆ ನೇಣು ಹಾಕಿಕೊಳ್ಳುವ ಮುನ್ನ ಕರೆ ಮಾಡಿ ಹೇಳಿದ್ದರು ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.