Tag: teacher

  • ಇಳಿವಯಸ್ಸಲ್ಲೂ ಕುಂದದ ಶಿಕ್ಷಣ ಪ್ರೇಮ- 90ರ ಹರೆಯದಲ್ಲೂ ಮಕ್ಕಳಿಗೆ ಪಾಠ

    ಇಳಿವಯಸ್ಸಲ್ಲೂ ಕುಂದದ ಶಿಕ್ಷಣ ಪ್ರೇಮ- 90ರ ಹರೆಯದಲ್ಲೂ ಮಕ್ಕಳಿಗೆ ಪಾಠ

    – ಹಾವೇರಿಯ ಪುಟ್ಟಮ್ಮಜ್ಜಿ ಪಬ್ಲಿಕ್ ಹೀರೋ

    ಹಾವೇರಿ: ಸಾಮಾನ್ಯವಾಗಿ ನಿವೃತ್ತಿಯಾದ ನಂತರ ಜಮೀನು, ಗದ್ದೆ, ಮನೆ, ಮಕ್ಕಳು, ಮೊಮ್ಮಕ್ಕಳಿಗೆ ಸೀಮಿತ ಆಗುತ್ತಾರೆ. ಆದರೆ ಹಾವೇರಿಯ ಪುಟ್ಟಮ್ಮಜ್ಜಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ನಂತರ ಅಲ್ಪ ಹಣ ಹಾಗೂ ಸಾಲ ಮಾಡಿಕೊಂಡು ಪ್ರಾಥಮಿಕ ಸ್ಥಾಪನೆ ಮಾಡಿದ್ದಾರೆ. ಸಾವಿರಾರು ಬಡಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಈಗ ವಯಸ್ಸು 90 ವರ್ಷ ಆದರೂ 2 ಮತ್ತು 3ನೇ ತರಗತಿಗಳಿಗೆ ಪಾಠ ಮಾಡುತ್ತಾರೆ.

    ಹೌದು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆಯ ನಿವಾಸಿಯಾಗಿರುವ ಪುಟ್ಟಮ್ಮಜ್ಜಿಗೆ ವಯಸ್ಸು 90. 30 ವರ್ಷಗಳಲ್ಲಿ ವಿವಿಧೆಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪುಟ್ಟಮ್ಮಜ್ಜಿ, ನಂತರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡೋ ಸಲುವಾಗಿಯೇ 1990ರಲ್ಲಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿದ್ರು. ಅದೀಗ ಹೆಮ್ಮರವಾಗಿ ಬೆಳೆದಿದೆ. ಪುಟ್ಟಮ್ಮಜ್ಜಿ ವಯಸ್ಸಿನ ಹಂಗಿಲ್ಲದೇ ನಿತ್ಯ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ.

    ಕೊಡಿಯಾಲ ಹೊಸಪೇಟೆಯಲ್ಲಿರೋ ಕೂಲಿ ಕಾರ್ಮಿಕರು, ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ರು. ಇದನ್ನು ಗಮನಿಸಿದ ಪುಟ್ಟಮ್ಮಜ್ಜಿ, ತಮಗೆ ಬರ್ತಿದ್ದ 2000ರೂ. ಪಿಂಚಣಿ ಹಣದಿಂದ ಶಾಲೆ ಶುರು ಮಾಡಿದ್ರು. ಸದ್ಯ 1-7ನೇ ತರಗತಿಗಳು ನಡೆಯುತ್ತಿದ್ದು 150ಕ್ಕೂ ಹೆಚ್ಚು ಮಕ್ಕಳು ಓದುತ್ತಿವೆ. ನಿತ್ಯ ಶಾಲೆಗೆ ಬರೋ ಪುಟ್ಟಮ್ಮಜ್ಜಿ, 2 ಮತ್ತು 3ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಹಾಡು, ನೃತ್ಯ ಹೇಳಿ ಕೊಡುತ್ತಾರೆ. ಪುಟ್ಟಮ್ಮಜ್ಜಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಭಾವಿಕಟ್ಟಿ ಹೇಳುತ್ತಾರೆ.

    ಪುಟ್ಟಮ್ಮಜ್ಜಿ ಮೊದಲ 10 ವರ್ಷ ತಮಗೆ ಬರೋ ಪಿಂಚಣಿ ಹಣದಲ್ಲಿ ಸಿಬ್ಬಂದಿಗೆ ವೇತನ ನೀಡುತ್ತಿದ್ದರು. ನಂತರ ಈ ಶಾಲೆಗೆ ಸರ್ಕಾರದ ಅನುದಾನ ಸಿಕ್ಕಿತು. ಒಟ್ಟಿನಲ್ಲಿ ಪುಟ್ಟಮ್ಮಜ್ಜಿಯ ಶಿಕ್ಷಣ ಪ್ರೇಮ ಆದರ್ಶಪ್ರಾಯವಾಗಿದೆ.

  • ಪ್ರೀತ್ಸೆ, ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ – ಶಿಕ್ಷಕಿ ಆತ್ಮಹತ್ಯೆ

    ಪ್ರೀತ್ಸೆ, ಪ್ರೀತ್ಸೆ ಎಂದು ಹಿಂದೆ ಬಿದ್ದ ಪಾಗಲ್ ಪ್ರೇಮಿ – ಶಿಕ್ಷಕಿ ಆತ್ಮಹತ್ಯೆ

    – ಯುವಕನ ಪ್ರೀತಿಯ ಹುಚ್ಚಾಟಕ್ಕೆ ಯುವತಿ ಸೂಸೈಡ್

    ಹೈದರಾಬಾದ್: ಯುವಕನ ಕಿರುಕುಳಕ್ಕೆ ಬೇಸತ್ತು ತರಬೇತಿ ಶಿಕ್ಷಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಅಕ್ಕಲರೆಡ್ಡಿ ಪಲ್ಲೆ ಗ್ರಾಮದ ನಿವಾಸಿ ಶಾಂತಿಪ್ರಿಯ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಕೃಷ್ಣಸಾರದ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಯುವಕನ ಕಿರುಕುಳದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಅದೇ ಗ್ರಾಮದ ಯುವಕನೊಬ್ಬ ಶಾಂತಿಪ್ರಿಯ ಶಿಕ್ಷಕಿಯಾಗಿದ್ದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಯುವಕ ಶಾಂತಿಪ್ರಿಯಳನ್ನು ಪ್ರೀತಿ ಮಾಡಿದ್ದಾನೆ. ಪ್ರತಿದಿನ ಆಕೆಯನ್ನು ಪ್ರೀತಿಸು ಎಂದು ಕಾಡಿಸುತ್ತಿದ್ದನು. ಶಿಕ್ಷಕಿ ತನಗೆ ಇಷ್ಟವಿಲ್ಲ ಎಂದು ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೂ ಯುವಕ ಪದೇ ಪದೇ  ಆಕೆಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನು.

    ಕೊನೆಗೆ ಆತನ ಕಿರುಕುಳವನ್ನು ಸಹಿಸಲಾಗದೆ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಶಾಂತಿಯ ತಾಯಿ ನೀಡಿದ ದೂರಿನ ಮೇರೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್‍ಐ ಮೋಹನ್ ಹೇಳಿದ್ದಾರೆ.

    ಯುವಕ ನಮ್ಮ ಮಗಳನ್ನು ಪ್ರೀತಿ ಮಾಡುವಂತೆ ಕಾಡಿಸುತ್ತಿದ್ದನು. ಅಲ್ಲದೇ ಮನೆಗೆ ಬಂದು ಕತ್ತಿಯಿಂದ ಬೆದರಿಕೆ ಕೂಡ ಹಾಕಿದ್ದನು. ಆತನ ಬೆದರಿಕೆಗಳಿಗೆ ಹೆದರಿ ಶಾಂತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತನನ್ನೂ ಗಲ್ಲಿಗೇರಿಸಿ ಎಂದು ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ.

  • ವಿದ್ಯಾರ್ಥಿನಿ ಜೊತೆ ಕಾಮದಾಟ ನಡೆಸಿದ್ದ ಶಿಕ್ಷಕ ಅಮಾನತು

    ವಿದ್ಯಾರ್ಥಿನಿ ಜೊತೆ ಕಾಮದಾಟ ನಡೆಸಿದ್ದ ಶಿಕ್ಷಕ ಅಮಾನತು

    ಮೈಸೂರು: ಹಳೆಯ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಕಾಮದಾಟ ಬಯಲಾದ ಹಿನ್ನೆಲೆಯಲ್ಲಿ ಶಿಕ್ಷಕ ಸಿದ್ದರಾಜುನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಿದ್ದರಾಜು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ಶಿಕ್ಷಕ ಯುವತಿಯೊಂದಿಗಿದ್ದ ಖಾಸಗಿ ಕ್ಷಣದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅಲ್ಲದೇ ಶಿಕ್ಷಕ ಸಿದ್ದರಾಜು ಶಾಲಾವಧಿಯಲ್ಲಿ ಮೊಬೈಲ್ ಬಳಕೆ ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಂದ ತನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 20ರ ವಿದ್ಯಾರ್ಥಿನಿ ಜೊತೆ 58ರ ಶಿಕ್ಷಕನ ರಾಸಲೀಲೆ – 2 ಕಾಲುಗಳ ಸ್ವಾಧೀನ ಕಳೆದುಕೊಂಡಿದ್ರೂ ಕಾಮದಾಟ

    ಮಹಿಳಾ ಶಿಕ್ಷಕರಿಗೆ ಮಾನಸಿಕ ಕಿರುಕುಳ ಸೇರಿದಂತೆ ಹಲವಾರು ವಿಚಾರಗಳ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜುನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

    ಏನಿದು ಪ್ರಕರಣ?
    ಕಾಮುಕ ಶಿಕ್ಷಕನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಅಲ್ಲದೇ ವಿದ್ಯಾರ್ಥಿನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ. ವಿದ್ಯಾರ್ಥಿನಿ ಜೊತೆ ಕಾಮದಾಟ ಮಾಡುವಾಗ ಆತನೇ ಫೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ ಸಂಬಂಧ ಹೊಂದಿದ್ದ ವಿದ್ಯಾರ್ಥಿನಿಗೆ ಫೋಟೋ ಕಳುಹಿಸುತ್ತಿದ್ದನು. ಆದರೆ ಆಕಸ್ಮಿಕವಾಗಿ ಬೇರೆ ವಾಟ್ಸಪ್ ಗ್ರೂಪ್‍ಗೆ ಫೋಟೋ ಅಪ್ಲೋಡ್ ಮಾಡಿದ್ದಾನೆ. ಆಗ ಕಾಮುಕ ಶಿಕ್ಷಕನ ಅಸಲಿ ಬಣ್ಣ ಬಯಲಾಗಿತ್ತು.

    ಧನುರ್ವಾಯು ರೋಗದಿಂದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಯುವತಿಯೊಂದಿಗೆ ಕಾಮದಾಟ ನಡೆಸಿದ್ದನು. ಅಲ್ಲದೇ ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಆಪ್ತ ಸಹಾಯಕನಾಗಿದ್ದನು. ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ಕಾಮುಕ ಸಿದ್ದರಾಜು ವರ್ತನೆಯಿಂದ ಗ್ರಾಮಸ್ಥರು ಬೇಸತ್ತಿದ್ದರು. ಹೀಗಾಗಿ ಕಾಮುಕ ಶಿಕ್ಷಕ ಸಿದ್ದರಾಜುನನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ನಂಜನಗೂಡು ತಾಲೂಕಿನ ರಾಂಪುರದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

  • 20ರ ವಿದ್ಯಾರ್ಥಿನಿ ಜೊತೆ 58ರ ಶಿಕ್ಷಕನ ರಾಸಲೀಲೆ – 2 ಕಾಲುಗಳ ಸ್ವಾಧೀನ ಕಳೆದುಕೊಂಡಿದ್ರೂ ಕಾಮದಾಟ

    20ರ ವಿದ್ಯಾರ್ಥಿನಿ ಜೊತೆ 58ರ ಶಿಕ್ಷಕನ ರಾಸಲೀಲೆ – 2 ಕಾಲುಗಳ ಸ್ವಾಧೀನ ಕಳೆದುಕೊಂಡಿದ್ರೂ ಕಾಮದಾಟ

    – ಬೇರೆ ಗ್ರೂಪ್‍ಗೆ ಫೋಟೋ ಅಪ್ಲೋಡ್ ಮಾಡಿ ಸಿಕ್ಕಿಬಿದ್ದ

    ಮೈಸೂರು: ಹಳೇ ವಿದ್ಯಾರ್ಥಿನಿ ಜೊತೆ ಸರ್ಕಾರಿ ಶಾಲಾ ಶಿಕ್ಷಕ ಸರಸ ಸಲ್ಲಾಪ ಮಾಡಿದ್ದು, ಶಿಕ್ಷಕನ ರಾಸಲೀಲೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವಂತಹ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

    ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜುವಿನ ಕಾಮದಾಟ ಬಯಲಾಗಿದೆ. ಈತ 20 ವರ್ಷದ ಹಳೇ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಅಲ್ಲದೇ ವಿದ್ಯಾರ್ಥಿಯನ್ನ ಮಂಚಕ್ಕೆ ಕರೆದಿದ್ದು, ಇದೀಗ ಅವರಿಬ್ಬರ ಕಾಮದಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ಕಾಮುಕ ಸಿದ್ದರಾಜು ನಾಪತ್ತೆಯಾಗಿದ್ದಾನೆ.


    ಧನುರ್ವಾಯು ರೋಗದಿಂದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಯುವತಿಯೊಂದಿಗೆ ಕಾಮದಾಟ ನಡೆಸಿದ್ದಾನೆ. ಅಲ್ಲದೇ ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಆಪ್ತ ಸಹಾಯಕನಾಗಿದ್ದನು. ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದಾನೆ. ಕಾಮುಕ ಸಿದ್ದರಾಜು ವರ್ತನೆಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.

    ಹೀಗಾಗಿ ಕಾಮುಕ ಶಿಕ್ಷಕ ಸಿದ್ದರಾಜುನನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ನಂಜನಗೂಡು ತಾಲೂಕಿನ ರಾಂಪುರದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕನನ್ನು ಅಮಾನತುಗೊಳಿಸಬೇಕು ಅಥವಾ ಸೇವೆಯಿಂದ ವಜಾಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

    ಕಾಮುಕ ಶಾಲಾ ಶಿಕ್ಷಕನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಇಒ ರಾಜು ಅವರು, ಮೀಡಿಯಾದ ಮೂಲಕ ಈ ವಿಚಾರ ಗೊತ್ತಾಗಿದೆ. ಇಲಾಖೆಯಿಂದ ಕ್ರಮ ತೆಗೆದುಕೊಳ್ಳುತ್ತೇನೆ. ಇದುವರೆಗೂ ಆತನ ಮೇಲೆ ದೂರು ಬಂದಿಲ್ಲ. ಈಗಲೂ ಯಾವುದೇ ದೂರು ಬಂದಿಲ್ಲ. ನಾವು ಮೀಡಿಯಾದಲ್ಲಿ ಸುದ್ದಿ ನೋಡಿ ನಮ್ಮ ಕಚೇರಿಯ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಅವರು ನೀಡಿದ ರಿಪೋರ್ಟ್ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಕಾಮುಕ ಶಿಕ್ಷಕನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಅಲ್ಲದೇ ವಿದ್ಯಾರ್ಥಿನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ. ವಿದ್ಯಾರ್ಥಿನಿ ಜೊತೆ ಕಾಮದಾಟ ಮಾಡುವಾಗ ಆತನೇ ಫೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ ಸಂಬಂಧ ಹೊಂದಿದ್ದ ವಿದ್ಯಾರ್ಥಿನಿಗೆ ಫೋಟೋ ಕಳುಹಿಸುತ್ತಿದ್ದನು. ಆದರೆ ಆಕಸ್ಮಿಕವಾಗಿ ಬೇರೆ ವಾಟ್ಸಪ್ ಗ್ರೂಪ್‍ಗೆ ಫೋಟೋ ಅಪ್ಲೋಡ್ ಮಾಡಿದ್ದಾನೆ. ಆಗ ಕಾಮುಕ ಶಿಕ್ಷಕನ ಅಸಲಿ ಬಣ್ಣ ಬಯಲಾಗಿದೆ.

  • ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

    ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಆದರೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ವೇಷ ಹಾಕಿ ರಕ್ಕಸನ ವೇಷದಲ್ಲಿ ಅಬ್ಬರಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸಿದ್ದಾರೆ.

    ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ವೇಷ ಹಾಕಿಕೊಂಡು ಕುಣಿಯುವುದು ಮಾಮೂಲಿ ವಿಚಾರವಲ್ಲ. ಆದರೆ ದಕ್ಷಿಣ ಕನ್ನಡದ ಬಂಟ್ವಾಳದ ವಿಟ್ಲ ನಿವಾಸಿ ಮುಸ್ಲಿಂ ಹುಡುಗಿ ಅರ್ಷಿಯಾ ಅವರು ಇತ್ತೀಚೆಗೆ ಯಕ್ಷಗಾನಕ್ಕೆ ಸೇರಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದು, ಜನಪ್ರಿಯ ಕಲಾವಿದರು ಎಂದೇ ಹೆಸರುವಾಸಿಯಾಗಿದ್ದಾರೆ.

    ಪ್ರಸ್ತುತ ಇವರು ಆಟೋಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅರ್ಷಿಯಾ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೂರಿನಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದಿಂದ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದಾರೆ. ಅಂದಿನಿಂದ ಅರ್ಷಿಯಾ ಅವರು ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿದ್ದು, ಈ ಮೂಲಕ ಕಲಾಪ್ರಕಾರವನ್ನು ಕಲಿಯಲು ಇಚ್ಚಿಸಿದ್ದರು.

    10ನೇ ವಯಸ್ಸಿನಲ್ಲಿ ತನ್ನೂರಾದ ವಿಟ್ಲದಲ್ಲಿ ಯಕ್ಷಗಾನವನ್ನು ಪ್ರಾರಂಭಿಸಿದ್ದು, ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಶಾಲಾ ಶಿಕ್ಷಕಿಯೊಬ್ಬರು ತನಗೆ ಯಕ್ಷಗಾನವನ್ನು ಕಲಿಸಿದ್ದರು ಎಂದು ಅರ್ಷಿಯಾ ನೆನಪಿಸಿಕೊಳ್ಳುತ್ತಾರೆ. ಅರ್ಷಿಯಾ ಶ್ರೀದೇವಿ ಮಹಾತ್ಮೆ ಪ್ರಸಂಗ, ನಿಶಂಭಾಸುರ, ರಕ್ತಬೀಜಾಸುರ ಹಾಗೂ ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯದ ಯುವತಿ ಹಿಂದೂ ಧಾರ್ಮಿಕ ಪುರಾಣಗಳನ್ನು ಕರಗತ ಮಾಡಿಕೊಂಡು ಯಕ್ಷಗಾನ ಪಾತ್ರ ಮಾಡಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ದಾರಿಯಲ್ಲಿ ಸಿಕ್ಕ 10 ಸಾವಿರ ಹಣವನ್ನು ಪೊಲೀಸ್ ಠಾಣೆಗೆ ನೀಡಿದ ಶಿಕ್ಷಕ

    ದಾರಿಯಲ್ಲಿ ಸಿಕ್ಕ 10 ಸಾವಿರ ಹಣವನ್ನು ಪೊಲೀಸ್ ಠಾಣೆಗೆ ನೀಡಿದ ಶಿಕ್ಷಕ

    ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಏನಾದರು ಹಣ ಸಿಕ್ಕಿದರೆ ಬಹುತೇಕ ಮಂದಿ ಆ ಕಡೆ, ಈ ಕಡೆ ಕಣ್ಣು ಹಾಯಿಸಿ ಅದನ್ನು ಜೇಬಿಗೆ ಹಾಕಿಕೊಂಡು ಹೋಗಿಬಿಡುತ್ತಾರೆ. ಇನ್ನು ಕೆಲವರು ತನ್ನದಲ್ಲದ ಹಣ ನನಗೆ ಏಕೆ ಎಂದು ಸುಮ್ಮನೆ ಹೋಗುತ್ತಾರೆ. ಆದರೆ ಶಿವಮೊಗ್ಗದ ಶಿಕ್ಷಕರೊಬ್ಬರು ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಹಣವನ್ನು ಪೊಲೀಸ್ ಠಾಣೆಗೆ ನೀಡಿ ಉದಾರತೆ ತೋರಿದ್ದಾರೆ.

    ಶಿವಮೊಗ್ಗದ ಮಿಳ್ಳಘಟ್ಟ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶರಣಪ್ಪ(50) ಅವರು ಈ ಮಾದರಿ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮನವಿ ಸಲ್ಲಿಸಲು ಶರಣಪ್ಪ ಅವರು ಸಂಸದರ ಕಚೇರಿಗೆ ತರೆಳುತ್ತಿದ್ದರು. ಈ ವೇಳೆ ನಗರದ ತಹಶೀಲ್ದಾರ್ ಕಚೇರಿಯ ಕಟ್ಟಡದಲ್ಲಿರುವ ಸಂಸದರ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಮ್ಯಾಕ್ಸ್ ಆಸ್ಪತ್ರೆ ಬಳಿ ರಸ್ತೆ ಮೇಲೆ ಹಣ ಬಿದ್ದಿರುವುದನ್ನು ಶರಣಪ್ಪ ಗಮನಿಸಿದರು.

    ತಕ್ಷಣ ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ ಹಣದ ಬಳಿ ಹೋದಾಗ ಐನೂರು ರೂಪಾಯಿಯ 20 ನೋಟುಗಳು ಅಂದರೆ 10 ಸಾವಿರ ರೂ. ಹಣ ಸಿಕ್ಕಿದೆ. ಅಲ್ಲಿದ್ದ ಆಟೋದವರು ಶರಣಪ್ಪ ಅವರಿಗೆ ಸಿಕ್ಕಿದ ಹಣವನ್ನು ಎಣೆಸಿದರು. ನಂತರ ಶರಣಪ್ಪ ಅವರು ಈ ಹಣಕ್ಕೆ ವಾರಸುದಾರರಿಲ್ಲ. ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ ಎಂದು ಜಯನಗರ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದರು.

    ಸ್ಥಳಕ್ಕೆ ಧಾವಿಸಿದ ಪೇದೆ ಚಂದನ್ ಅವರಿಗೆ ಶರಣಪ್ಪ ಈ ಹಣವನ್ನು ನೀಡಿ, ನಡೆದ ಘಟನೆ ಬಗ್ಗೆ ವಿವರಿಸಿದರು. ಬಳಿಕ ಪೇದೆ ಹಣವನ್ನು ಪಡೆದು ಠಾಣೆಗೆ ವಾಪಸ್ಸಾದರು. 10 ರೂಪಾಯಿ ದಾರಿಯಲ್ಲಿ ಕಂಡರೆ ಜೇಬಿಗೆ ಹಾಕಿಕೊಂಡು ಹೋಗುವ ಜನರ ಮಧ್ಯೆ ಈ ಶಿಕ್ಷಕ ತಮಗೆ ಸಿಕ್ಕ 10 ಸಾವಿರ ರೂಪಾಯಿಯನ್ನು ಠಾಣೆಗೆ ಹಿಂತಿರುಗಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.

  • ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ – 10 ವರ್ಷ ಜೈಲು, 40 ಸಾವಿರ ದಂಡ ವಿಧಿಸಿದ ಕೋರ್ಟ್

    ಶಿಕ್ಷಕನಿಂದ ಬಾಲಕಿ ಮೇಲೆ ಅತ್ಯಾಚಾರ – 10 ವರ್ಷ ಜೈಲು, 40 ಸಾವಿರ ದಂಡ ವಿಧಿಸಿದ ಕೋರ್ಟ್

    – ದರ್ಗಾದಲ್ಲೇ ಅತ್ಯಾಚಾರ ಎಸಗಿದ್ದ ದಾದಾಪೀರ್

    ದಾವಣಗೆರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ದಾವಣಗೆರೆಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ಹತ್ತು ವರ್ಷ ಜೈಲು ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗಶ್ರೀ ಅವರು ಪ್ರಕರಣದ ಕುರಿತು ಮಂಗಳವಾರ ವಿಚಾರಣೆ ನಡೆಸಿ, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ, 40 ಸಾವಿರ ರೂ.ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣ ಕುರಿತು ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.

    2018ರ ಸೆಪ್ಟೆಂಬರ್ 3ರಂದು ಉಪನ್ಯಾಸಕ ದಾದಾಪೀರ್ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದ. ಅತ್ಯಾಚಾರ ಎಸಗಲೆಂದೇ ಬಾಲಕಿಯನ್ನು ಅಪಹರಿಸಿ ಆಂಧ್ರಪ್ರದೇಶದ ಎಮ್ಮಿಗನೂರು ಆಲಿಪೀರ ದರ್ಗಾಕ್ಕೆ ಕರೆದುಕೊಂಡು ಹೋಗಿದ್ದ. ದರ್ಗಾದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬಾಲಕಿ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ.

    ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ಥೆಯ ತಂದೆ ದೂರು ನೀಡಿದ್ದರು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆಯ ಪೋಲಿಸರು, ತನಿಖೆ ಪ್ರಾರಂಭಿಸಿದ್ದರು. ನಂತರ ಆರೋಪಿ ವಿರುದ್ಧ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಮಂಗಳವಾರ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

  • ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ಬೀದರ್ : ಪಶು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಡಗೀತೆ ಹಾಡುವಾಗ ಮೂತ್ರ ವಿಸರ್ಜನೆ ಮಾಡಿ ಅಸಭ್ಯ ವರ್ತನೆ ಮಾಡಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಔರಾದ್ ತಾಲೂಕಿನ ಹಿಪ್ಪಳಗಾಂವ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ್ ಹಾಗೂ ಗಂಗಾರಾಮ ತಾಂಡ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ್ ರಾಠೋರ್ ಅಮಾನತುಗೊಂಡವರು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರು ಅದೇ ಪ್ರಾಂಗಣದಲ್ಲಿ ಮೂತ್ರ ವಿಸರ್ಜನೆ ಮಾಡಿ ನಾಡಗೀತೆ ಹಾಗೂ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಗೆ ಅವಮಾನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದರು.

    ಈ ಹಿನ್ನೆಲೆಯಲ್ಲಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

  • ಜಿಂಕೆ ಪ್ರಾಣ ಉಳಿಸಲು ಹೋಗಿ ಪ್ರಾಣ ತೆತ್ತ ಶಿಕ್ಷಕ

    ಜಿಂಕೆ ಪ್ರಾಣ ಉಳಿಸಲು ಹೋಗಿ ಪ್ರಾಣ ತೆತ್ತ ಶಿಕ್ಷಕ

    ತುಮಕೂರು: ಚಲಿಸುತ್ತಿದ್ದ ಬೈಕ್‍ಗೆ ಅಡ್ಡ ಬರುತ್ತಿದ್ದ ಜಿಂಕೆಯನ್ನು ರಕ್ಷಿಸಲು ಹೋಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದಿದೆ.

    ಬರಗೂರು ರಂಗಾಪುರ ಗ್ರಾಮದ ಶಿಕ್ಷಕ ರಾಜಣ್ಣ (54) ಮೃತ ದುರ್ದೈವಿ. ರಾಜಣ್ಣ ಅವರು ಭಾನುವಾರ ತಡರಾತ್ರಿ ಶಿರಾ ಪಟ್ಟಣದಿಂದ ಊರಿಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ದುರ್ಘಟನೆ ಸಂಭವಿಸಿದೆ. ರಾಜಣ್ಣ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ಹಿತೈಷಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

    ಘಟನೆ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾದಿಗುಂಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಹೆಚ್ಚಾಗಿದ್ದು, ರಾತ್ರಿ ವೇಳೆ ರಸ್ತೆ ಗಿಳಿಯುತ್ತವೆ. ಹಾಗಾಗಿ ಇಂಥಹ ಅಪಘಾತಗಳು ನಡೆಯುತ್ತಿವೆ. ಅರಣ್ಯ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • 15ರ ವಿದ್ಯಾರ್ಥಿಯನ್ನು ಮನೆಗೆ ಕರ್ಕೊಂಡೋಗಿ ಸೈನ್ಸ್ ಟೀಚರ್ ಸೆಕ್ಸ್

    15ರ ವಿದ್ಯಾರ್ಥಿಯನ್ನು ಮನೆಗೆ ಕರ್ಕೊಂಡೋಗಿ ಸೈನ್ಸ್ ಟೀಚರ್ ಸೆಕ್ಸ್

    – ಮಕ್ಕಳು ಮನೆ ಹೊರಗಡೆ ಆಟವಾಡ್ತಿದ್ದಾಗ ಸೆಕ್ಸ್
    – ವಿದ್ಯಾರ್ಥಿ ಜೊತೆ ಟೀಚರ್ ಮನವಿ

    ಜಕಾರಿ: 15 ವರ್ಷದ ಬಾಲಕನ ಮೇಲೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ವ್ಯಕ್ತವಾಗುತ್ತಿದ್ದಂತೆಯೇ ಶಿಕ್ಷಕಿಯೊಬ್ಬಳು ತಾನೇ ಪೊಲೀಸರಿಗೆ ಶರಣಾದ ಘಟನೆ ವಿದೇಶದಲ್ಲಿ ನಡೆದಿದೆ.

    34 ವರ್ಷದ ಶಿಕ್ಷಕಿ ಯುನೈಟೆಡ್ ಸ್ಟೇಟ್ಸ್ ನ ಲೂಸಿಯಾನ ನಗರದ ಜಕಾರಿ ಶಾಲೆಯಲ್ಲಿ ವಿಜ್ಞಾನ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಳು. ತನ್ನ ಮೇಲೆ ಆರೋಪ ಕೇಳಿ ಬಂದ ಬಳಿಕ ಶಿಕ್ಷಕಿ ರಜೆಯ ಮೇಲೆ ಮನೆಗೆ ತೆರಳಿದ್ದಾಳೆ. ಈಕೆ ತನ್ನ ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದಳು.

    ಶಿಕ್ಷಕಿ ಮೊದಲು ತನ್ನ ನಗ್ನ ಫೋಟೋ ಹಾಗೂ ವಿಡಿಯೋಗಳನ್ನು ಅಪ್ರಾಪ್ತನಿಗೆ ಕಳುಹಿಸಿ ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ಅಲ್ಲದೆ ಚಾಲಾಕಿ ಶಿಕ್ಷಕಿ, ಆ ವಿಡಿಯೋದಲ್ಲಿ ತನ್ನ ಗುರುತು ಸಿಗಬಾರದೆಂದು ಮುಖ ಮುಚ್ಚಿಕೊಂಡಿದ್ದಾಳೆ. ಈ ಮೂಲಕ ಒಂದು ವೇಳೆ ವಿಡಿಯೋ ವೈರಲ್ ಆದರೂ ತಾನು ಅಂತ ಯಾರಿಗೂ ತಿಳಿಯಬಾರದೆಂದು ಈ ರೀತಿ ಪ್ಲಾನ್ ಮಾಡಿಕೊಂಡಿದ್ದಳು.

    ಸಂಬಂಧ ಶುರುವಾಗಿದ್ದು ಹೇಗೆ..?
    ವರದಿಗಳ ಪ್ರಕಾರ, ಶಿಕ್ಷಕಿ ಅಕ್ರಮ ಸಂಬಂಧ ಬೆಳೆಸಲು ತನ್ನದೇ ಶಾಲೆಯ ಬಾಲಕನನ್ನು ಬಳಸಿಕೊಂಡಿದ್ದಾಳೆ. ಅಲ್ಲದೆ ಆತನೊಂದಿಗೆ ಚಾಟ್ ಮಾಡುವ ಮೂಲಕ ಬಾಲಕನನ್ನು ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿದ್ದಾಳೆ. ಈ ವಿಚಾರ ತಿಳಿದು ಅನುಮಾನಗೊಂಡ ಶಾಲೆಯ ಆಡಳಿತ ಮಂಡಳಿಯವರು ಶಿಕ್ಷಕಿಯ ಇ-ಮೇಲ್ ಪರಿಶೀಲಿಸಲು ನಿರ್ಧರಿಸಿದ್ದರು. ಆದರೆ ಅದಾಗಲೇ ಆಕೆ ತನ್ನ ಇ-ಮೇಲ್ ಅನ್ನು ಡಿಲೀಟ್ ಮಾಡಿದ್ದಾಳೆ.

    ಆ ನಂತರ ಆಕೆ ನೇರವಾಗಿ ಬಾಲಕನಲ್ಲಿ ತನಗೆ, ನಿನ್ನ ಜೊತೆ ಸೆಕ್ಸ್ ಮಾಡಬೇಕು ಎಂದು ಹೇಳಿಕೊಂಡಿದ್ದಾಳೆ. ಹಾಗೆಯೇ ಸಂಜೆ ಶಾಲೆ ಮುಗಿಸಿ ಬರುವಾಗ ಬಾಲಕನನ್ನು ಕೂಡ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಂತರ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.

    ಶಿಕ್ಷಕಿಗೆ ಈಗಾಗಲೇ ಮಕ್ಕಳಿದ್ದು, ಅವರು ಮನೆಯ ಹೊರಗಡೆ ಆಟವಾಡುತ್ತಿದ್ದಾಗಲೇ ಬಾಲಕನ ಜೊತೆ ಹಲವಾರು ಬಾರಿ ಸೆಕ್ಸ್ ಮಾಡಿದ್ದಾಳೆ. ಈ ವೇಳೆ ಬಾಲಕ, ನಮ್ಮಿಬ್ಬರ ನಡುವಿನ ಸಂಬಂಧದ ವಿಚಾರವನ್ನು ನಾನು ಎಲ್ಲರಲ್ಲೂ ಹೇಳುವುದಾಗಿ ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡ ಶಿಕ್ಷಕಿ, ಒಂದು ವೇಳೆ ನೀನು ಹೇಳಿದರೆ ನನಗೆ ಹಾಗೂ ನನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ದಯವಿಟ್ಟು ಆ ರೀತಿ ಮಾಡಲು ಹೋಗಬೇಡ ಎಂದು ಮನವಿ ಮಾಡಿಕೊಂಡಿದ್ದಾಳೆ.

    ಈ ಸಂಬಂಧ ಶಾಲೆ ಅಧಿಕಾರಿಗಳು ಮಾತನಾಡಿ, ಇದೊಂದು ದಂಧೆಯಾಗಿದೆ. ಈ ಬಗ್ಗೆ ಶಿಕ್ಷಕಿ ವಿರುದ್ಧ ಶಾಲೆ ಕ್ರಮ ಕೈಗೊಳ್ಳುತ್ತದೆ. ಅಲ್ಲದೆ ಈ ವಿಚಾರವನ್ನು ಯಾರೊಬ್ಬರು ಮುಚ್ಚಿಡಬಾರದು. ಅಲ್ಲದೆ ಪೊಲೀಸರು ಕೂಡ ಈ ಬಗ್ಗೆ ಶೀಘ್ರ ತನಿಖೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.