Tag: teacher

  • ಪ್ರೇಯಸಿಗೆ ಹೇಳದೆ ಬೇರೆ ಹುಡುಗಿ ಜೊತೆ ಪ್ರಿಯಕರ ಮದ್ವೆ- ಶಿಕ್ಷಕಿ ಆತ್ಮಹತ್ಯೆ

    ಪ್ರೇಯಸಿಗೆ ಹೇಳದೆ ಬೇರೆ ಹುಡುಗಿ ಜೊತೆ ಪ್ರಿಯಕರ ಮದ್ವೆ- ಶಿಕ್ಷಕಿ ಆತ್ಮಹತ್ಯೆ

    – ಸೋಶಿಯಲ್ ಮೀಡಿಯಾದಲ್ಲಿ ವಿವಾಹ ಫೋಟೋ ನೋಡಿ ಶಾಕ್
    – ಡೆತ್‍ನೋಟ್ ಬರೆದು ಯುವತಿ ಸೂಸೈಡ್

    ಬೆಂಗಳೂರು: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಮನನೊಂದು ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ನಡೆದಿದೆ.

    ಪವಿತ್ರ (27) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಪವಿತ್ರ, ನಾಗೇಶ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ ಪ್ರಿಯಕರ ನಾಗೇಶ್ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದು, ಮೋಸ ಮಾಡಿದ್ದನು. ಹೀಗಾಗಿ ಡೆತ್‍ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಆತ್ಮಹತ್ಯೆಗೆ ಶರಣಾದ ಪ್ರವಿತ್ರ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದಾಸರಹಳ್ಳಿಯಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಾಗೇಶ್ ಮತ್ತು ಪವಿತ್ರ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ನಾಗೇಶ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಾಗೇಶ್ ಅನೇಕ ಬಾರಿ ಪೋಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದನು. ಆದರೂ ಪೋಷಕರು ಒಪ್ಪಿಗೆ ಸೂಚಿಸಿಲ್ಲ.

    ಕೊನೆಗೆ ಒಂದು ತಿಂಗಳ ಹಿಂದೆ ನಾಗೇಶ್ ಪೋಷಕರು ತೋರಿಸಿದ್ದ ಯುವತಿಯನ್ನು ಮದುವೆಯಾಗಿದ್ದನು. ನಂತರ ತನ್ನ ಮದುವೆ ಫೋಟೋವನ್ನು ನಾಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ನೋಡಿದ ಪವಿತ್ರ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ನಾಗೇಶ್‍ನ ಮಾತನಾಡಿಸಿದಾಗ ಆತ ಯಾವುದೇ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾನೆ. ಇದರಿಂದ ಪವಿತ್ರಾ ಮತ್ತಷ್ಟು ನೊಂದಿದ್ದಳು. ಈ ವೇಳೆ ತಾಯಿ ಸಮಾಧಾನ ಕೂಡ ಮಾಡಿದ್ದರು.

    ಈ ಎಲ್ಲ ಕಾರಣಗಳಿಂದ ನೊಂದಿದ್ದ ಪವಿತ್ರ ಶನಿವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮನೆಗೆ ವಾಪಸ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡೆತ್‍ನೋಟ್‍ನಲ್ಲಿ ತನ್ನ ಸಾವಿಗೆ ನಾಗೇಶ್ ಕಾರಣ ಎಂದು ಪವಿತ್ರ ಬರೆದಿದ್ದಾಳೆ.

    ಈ ಕುರಿತು ಮಾಗಡಿ ರೋಡ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಿಯಕರ ನಾಗೇಶ್‍ನನ್ನ ಮಾಗಡಿರೋಡ್ ಪೊಲೀಸರು ಬಂಧಿಸಿದ್ದಾರೆ.

  • ಕೊರೊನಾಗೆ ಪ್ರಾಥಮಿಕ ಶಾಲಾ ಶಿಕ್ಷಕ ಬಲಿ

    ಕೊರೊನಾಗೆ ಪ್ರಾಥಮಿಕ ಶಾಲಾ ಶಿಕ್ಷಕ ಬಲಿ

    – ಶಿವಮೊಗ್ಗದಲ್ಲಿ 3ಕ್ಕೇರಿದ ಸಾವಿನ ಸಂಖ್ಯೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 3ಕ್ಕೇರಿದೆ.

    ಕೊರೊನಾ ವೈರಸ್‍ನಿಂದ ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಜಿಲ್ಲೆಯವರು ಆಗದಿದ್ದರೂ ಸಹ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದರಿಂದ ಇದು ಜಿಲ್ಲೆಯಲ್ಲಿ ಸಂಭವಿಸಿದ 3ನೇ ಸಾವು ಎಂದು ಪರಿಗಣಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೃತ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಪರಿಣಾಮ ಕಳೆದ 4 ದಿನಗಳಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.

    ಮೃತರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಕೊರೊನಾ ಲಕ್ಷಣಗಳಿದ್ದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದರು ಎನ್ನಲಾಗಿದೆ. ಆದರೆ ಕೊರೊನಾಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸೋಂಕಿತ ಶಿಕ್ಷಕ ಸಾವನ್ನಪ್ಪಿದ್ದಾರೆ. ಮೃತ ಶಿಕ್ಷಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ.

  • ಪರೀಕ್ಷಾ ಕೇಂದ್ರಕ್ಕೆ ಮಗನನ್ನ ಬಿಡಲು ಹೊರಟಿದ್ದ ಶಿಕ್ಷಕ ಅಪಘಾತದಲ್ಲಿ ಸಾವು

    ಪರೀಕ್ಷಾ ಕೇಂದ್ರಕ್ಕೆ ಮಗನನ್ನ ಬಿಡಲು ಹೊರಟಿದ್ದ ಶಿಕ್ಷಕ ಅಪಘಾತದಲ್ಲಿ ಸಾವು

    ರಾಯಚೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ದೇವದುರ್ಗದ ಮೀಯಾಪುರ ಕ್ರಾಸ್ ಬಳಿ ನಡೆದಿದೆ.

    ನಾಗಿರೆಡ್ಡಿ (57) ಮೃತ ಶಿಕ್ಷಕಕನಾಗಿದ್ದು, ಇವರ ಜೊತೆಗೆ ಪರೀಕ್ಷೆ ಬರೆಯಲು ತೆರಳುತ್ತಿದ್ದ ಅವರ ಮಗನಿಗೂ ಗಂಭೀರ ಗಾಯಗಳಾಗಿವೆ. ಬೈಕ್ ಗೆ ಆಕಳು ಅಡ್ಡ ಬಂದಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಗಾಯಾಳು ಮಗನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ತಾಲೂಕಿನ ಸುಂಕೇಶ್ವರಾಳದಲ್ಲಿ ಶಿಕ್ಷಕರಾಗಿರುವ ನಾಗಿರೆಡ್ಡಿಯನ್ನ ಮಸರಕಲ್ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಮಗನನ್ನ ಗಬ್ಬೂರಿನ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಕರ್ತವ್ಯಕ್ಕೆ ತೆರಳಲು ಹೊರಟಿದ್ದ ಶಿಕ್ಷಕ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಪರೀಕ್ಷೆಗೆ ತಂದೆಯ ಜೊತೆ ತೆರಳುತ್ತಿದ್ದ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿರುವುದರಿಂದ ರಾಯಚೂರಿಗೆ ಕರೆತರಲಾಗುತ್ತಿದೆ.

    ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ- ಶಿಕ್ಷಕ ಅಮಾನತು

    ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ- ಶಿಕ್ಷಕ ಅಮಾನತು

    ಚಿಕ್ಕೋಡಿ: ಏಳನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದ್ದು, ಶಿಕ್ಷಕನನ್ನು ಅಮಾನತು ಮಾಡಿ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

    ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನಿಡುತ್ತಿದ್ದ ಎಂದು ಶಾಲಾ ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ದೂರು ಪರಿಶಿಲಿಸಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ನಿಯಮ 3 (1) ಉಲ್ಲಂಘನೆ ಅಡಿಯಲ್ಲಿ ಶಿಕ್ಷಕನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

    ಈ ಹಿಂದೆಯೂ ಶಿಕ್ಷಕನ ವಿರುದ್ಧ ಈ ರೀತಿಯ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ ಯಾರೂ ಬಹಿರಂಗವಾಗಿ ಹೇಳಿರಲಿಲ್ಲ. ಇದೀಗ ವಿದ್ಯಾರ್ಥಿನಿಯರು ಶಿಕ್ಷಕನ ನಡವಳಿಕೆ ಬಗ್ಗೆ ಲಿಖಿತ ದೂರು ನೀಡಿ ಶಿಕ್ಷಕನ ಮುಖವಾಡ ಕಳಚಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಆದರೆ ಈತ ಅವರ ಜೊತೆಗೇ ಅನುಚಿತವಾಗಿ ವರ್ತಿಸಿದ್ದಾನೆ. ಇಂತಹ ಶಿಕ್ಷಕರಿಂದಲೇ ಶಿಕ್ಷಕ ಸಮುದಾಯ ತಲೆ ತಗ್ಗಿಸುವ ಹಾಗಾಗಿದೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

    ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲಾ ಶಿಕ್ಷಕಿಯಾಗಿದ್ದ ಜ್ಯೋತಿ (33) ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಕ್ಷಕಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಹುಶಃ ಅನಾರೋಗ್ಯ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಆತ್ಮಹತ್ಯಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗೌರಿಬಿದನೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ಹಾಗೂ ಮನೆಮಂದಿಯಿಂದ ಶಿಕ್ಷಕಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ತನಗೆ ಕೊರೊನಾ ಇದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ – ಡೆತ್‍ನೋಟ್ ವೈರಲ್

    ತನಗೆ ಕೊರೊನಾ ಇದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ಶಿಕ್ಷಕ – ಡೆತ್‍ನೋಟ್ ವೈರಲ್

    – ಉಸಿರಾಟದ ತೊಂದರೆ, ಕೆಮ್ಮು ಬಂದಿದ್ದಕ್ಕೆ ಕೊರೊನಾವೆಂದು ಭಾವಿಸಿದ
    – ವೈರಲ್ ಪೋಸ್ಟ್ ಬಗ್ಗೆ ಪೊಲೀಸರ ಸ್ಪಷ್ಟನೆ

    ರಾಂಚಿ: ತನಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಭಾವಿಸಿ, ಖಿನ್ನತೆಗೊಳಗಾಗಿ ಸಾಮಾಜಿಕ ಜಾಲತಾಣದಲ್ಲಿ ಡೆತ್‍ನೋಟ್ ಬರೆದು ಪೋಸ್ಟ್ ಮಾಡಿ ಶಿಕ್ಷಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‍ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.

    ಗಿರಿದಿಹ್‍ನ ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈದಪಹ್ರಿ ಗ್ರಾಮದ ನಿವಾಸಿ ಸುರೇಶ್ ಪಂಡಿತ್(28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಾಲೆಯೊಂದರಲ್ಲಿ ಇಂಗ್ಲಿಷ್ ಶಿಕ್ಷಕನಾಗಿದ್ದ ಈತ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಹೀಗಾಗಿ ತಾನು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಭಾವಿಸಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನಾ ನನಗೆ ಕೊರೊನಾ ಇದೆ ಎಂದು ಡೆತ್‍ನೋಟ್ ಬರೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್ ಪೋಸ್ಟ್ ಮಾಡಿದ್ದಾನೆ.

    ಮೃತನ ಕುಟುಂಬ ಸದಸ್ಯರು ಸೋಮವಾರವೇ ಸುರೇಶ್‍ನ ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ ಆತ ಬರೆದು ಪೋಸ್ಟ್ ಮಾಡಿದ್ದ ಡೆತ್‍ನೋಟ್ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡೆತ್‍ನೋಟ್‍ನಲ್ಲಿ ಸುರೇಶ್ ತಾನು ಕೊರೊನಾ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಮೂರು ಪುಟಗಳ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನಗೆ ಸೋಂಕು ತಗುಲಿದೆ ಎಂದು ಸೆಲ್ಫ್ ಕ್ವಾರಂಟೈನ್ ಆಗಿದ್ದೆ. ಯಾರನ್ನೂ ನನ್ನ ಹತ್ತಿರ ಬರಲು ಬಿಡುತ್ತಿರಲಿಲ್ಲ. ನನಗೆ ಕೊರೊನಾ ಇದೆ ಎಂದು ತಿಳಿಯಲು ತಡವಾಗಿತ್ತು. ಬೇರೆ ದಾರಿಯಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‍ನೋಟ್‍ನಲ್ಲಿ ಸುರೇಶ್ ಬರೆದುಕೊಂಡಿದ್ದಾನೆ.

    ಈ ಡೆತ್‍ನೋಟ್ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಸುರೇಶ್‍ಗೆ ಯಾವುದೇ ಸೋಂಕು ತಗುಲಿಲ್ಲ. ಆತ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಟಷ್ಟಪಡೆಸಿದ್ದಾರೆ. ಸುರೇಶ್ ಕೆಲವು ದಿನಗಳ ಹಿಂದೆ ವಿವಾಹ ಸಮಾರಂಭವೊಂದಕ್ಕೆ ತೆರೆಳಿದ್ದ. ಅಲ್ಲಿ ಯಾರಿಂದಲೋ ತನಗೆ ಸೋಂಕು ತಗುಲಿದೆ ಎಂದು ಆತ ಭಾವಿಸಿದ್ದನು. ತಪಾಸಣೆಗಾಗಿ ಏಪ್ರಿಲ್ 18ರಂದು ಬಿರ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರೆಳಿದ್ದನು, ವರದಿ ನೆಗೆಟೀವ್ ಬಂದ ಕಾರಣಕ್ಕೆ ಆತನನ್ನು ಮನೆಗೆ ಕಳುಹಿಸಿದ್ದರು. ಆದರೆ ಸುರೇಶ್ ಮಾತ್ರ ತನಗೆ ಸೋಂಕು ತಗುಲಿದೆ ಎಂದು ಖಿನ್ನತೆಗೆ ಒಳಗಾಗಿದ್ದ. ಖಿನ್ನತೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

  • ಕೊರೊನಾ ಎಫೆಕ್ಟ್ – ಮಕ್ಕಳಿಗೆ ರಜೆ, ಶಿಕ್ಷಕರಿಗೆ ಕೆಲಸದ ಹೊರೆ

    ಕೊರೊನಾ ಎಫೆಕ್ಟ್ – ಮಕ್ಕಳಿಗೆ ರಜೆ, ಶಿಕ್ಷಕರಿಗೆ ಕೆಲಸದ ಹೊರೆ

    ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಮಾರ್ಚ್ 31 ರವರೆಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 1-6 ನೇ ತರಗತಿವರೆಗೆ ಪರೀಕ್ಷೆ ರದ್ದು ಮಾಡಲಾಗಿದ್ದು, ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. 7-9 ನೇ ತರಗತಿವರೆಗೆ ಪರೀಕ್ಷೆ ಮುಂದೂಡಲಾಗಿದೆ. ಮಾರ್ಚ್ 31ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳಿಗೆ ರಜೆ ಘೋಷಣೆ ಮಾಡಿರೋ ಸರ್ಕಾರ ಶಿಕ್ಷಕರಿಗೆ ಮಾತ್ರ ರಜೆ ಕೊಟ್ಟಿರಲಿಲ್ಲ. ಈಗ ಮಾರ್ಚ್ 31ವರೆಗೆ ಕಾಲ ಕಳೆಯಲು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆಗಳ ಸಿದ್ಧತೆ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 31ರ ಒಳಗೆ ಎಲ್ಲಾ ಸಿದ್ಧತೆ ಮುಗಿಸಿ ಅಂತ ಸೂಚನೆ ನೀಡಿದೆ.

    ಮಾರ್ಚ್ 16ರಿಂದ ಮಾರ್ಚ್ 31ರವರೆಗೆ ಶಿಕ್ಷಕರು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನ ಪೂರ್ಣಗೊಳಿಸಬೇಕು ಅಂತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಮತ್ತೆ ಶಾಲೆಗೆ ವಾಪಸ್ ಬರುವ ವೇಳೆ ಶಾಲೆಯನ್ನು ಸಿದ್ಧಪಡಿಸಿ ಅಂತ ಸೂಚನೆ ನೀಡಿದೆ.

    ಶಿಕ್ಷಕರಿಗೆ ನೀಡಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಮುಖ ಅಂಶಗಳು ಹೀಗಿವೆ:
    * 2020-21ನೇ ಸಾಲಿನ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು.
    * ಮಕ್ಕಳ ಕಲಿಕಾ ಫಲಗಳ ಆಧಾರದ ಮೇಲಿನ ಬೋಧನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು
    * SDMC ಅವ್ರ ಜೊತೆ ಸೇರಿ ಶಾಲಾ ಮುಖ್ಯೋಪಾಧ್ಯಾಯರು ಶೈಕ್ಷಣಿಕ ಯೋಜನೆ ಸಿದ್ಧಪಡಿಸುವುದು
    * ಸೇತು ಬಂಧ ಪರೀಕ್ಷೆಗೆ ಪ್ರಶ್ನೆಗೆ ಪತ್ರಿಕೆ ತಯಾರು ಮಾಡುವುದು
    * ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ತಯಾರಿಸುವುದು

    * ಶಾಲಾ ಗ್ರಂಥಾಲಯ, ಭೂಪಟ, ಕ್ರೀಡಾ ಸಾಮಾಗ್ರಿ ಸಿದ್ಧ ಮಾಡುವುದು
    * ಸಂಭ್ರಮದ ಶನಿವಾರ(ನೋ ಬ್ಯಾಗ್ ಡೇಗೆ) ರೂಪುರೇಷೆ ಸಿದ್ಧ ಮಾಡಬೇಕು
    * ಪಠ್ಯಕ್ರಮ, ಸಹಪಠ್ಯ ಚಟುವಟಿಕೆಗಳನ್ನ ಒಳಗೊಂಡ ವಾರ್ಷಿಕ ಶಾಲಾ ಪಂಚಾಂಗ ರೆಡಿ ಮಾಡುವುದು
    * ದೀಕ್ಷಾ ಪೊರ್ಟಲ್ ಗೆ ಅಗತ್ಯ ಮಾಹಿತಿಯನ್ನ ಅಪಲೋಡ್ ಮಾಡುವುದು
    * ಸಂಪೂರ್ಣ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುವುದು
    * ಕ್ರೀಡಾ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು

  • ಸಾಬೂನಿನಿಂದ ಕೈ ತೊಳೆದ್ರೆ ಆಗುವ ಲಾಭ ಮಕ್ಕಳಿಗೆ ತಿಳಿಸಿದ ಶಿಕ್ಷಕಿ-ವಿಡಿಯೋ ವೈರಲ್

    ಸಾಬೂನಿನಿಂದ ಕೈ ತೊಳೆದ್ರೆ ಆಗುವ ಲಾಭ ಮಕ್ಕಳಿಗೆ ತಿಳಿಸಿದ ಶಿಕ್ಷಕಿ-ವಿಡಿಯೋ ವೈರಲ್

    ಬೆಂಗಳೂರು: ಸಾಬೂನಿನಿಂದ ಕೈ ತೊಳೆದರೆ ಆಗುವ ಲಾಭವನ್ನ ಶಿಕ್ಷಕಿ ಮಕ್ಕಳಿಗೆ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶುಚಿಯಾಗಿರಬೇಕು ಎಂಬ ಮಾತುಗಳಿ ಕೇಳಿ ಬರುತ್ತಿವೆ. ಕೈಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂಬ ಸಲಹೆ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಮಾರ್ಚ್ 13ರಂದು ಈ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದು, 61 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಕಾಳು ಮೆಣಸಿನ ಪೌಡರ್ ಬಳಸಿ ಮಕ್ಕಳಿಗೆ ಶಿಕ್ಷಕಿ ಸರಳವಾಗಿ ಪಾಠ ಮಾಡಿದ್ದಾರೆ. ಸರಳ ವಿಧಾನ ನೋಡಿದ ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ವಿಡಿಯೋದಲ್ಲಿ ಎರಡು ತಟ್ಟೆಗಳು ಇರೋದನ್ನು ಕಾಣಬಹುದು. ಒಂದರಲ್ಲಿ ನೀರು ಹಾಕಿ ಮೇಲ್ಗಡೆ ಕಾಳು ಮೆಣಸಿನ ಪುಡಿ ಹಾಕಲಾಗಿದೆ. ಮತ್ತೊಂದರಲ್ಲಿ ಸಾಬೂನು (ದ್ರವ ರೂಪದಲ್ಲಿರುವ) ಇರಿಸಲಾಗಿದೆ. ನೀರಿನ ಮೇಲೆ ತೇಲುತ್ತಿರುವ ಮೆಣಸಿನ ಪುಡಿಯನ್ನು ವೈರಸ್ ಗೆ ಹೋಲಿಸುತ್ತಾರೆ. ನಂತರ ತಮ್ಮ ಬೆರಳನ್ನು ನೀರಿನಲ್ಲಿ ಅದ್ದಿದಾಗ ಮೆಣಸಿನ ಪುಡಿ ಅಂಟಿಕೊಳ್ಳುತ್ತದೆ. ಆವಾಗ ನೋಡಿ ಹೇಗೆ ವೈರಸ್ ನನ್ನ ಬೆರಳಿಗೆ ಅಂಟಿಕೊಳ್ತು. ಅದೇ ಬೆರಳನ್ನು ಸಾಬೂನು ಇರಿಸಲಾಗಿದ್ದ ತಟ್ಟೆಯಲ್ಲಿ ಅದ್ದಿದಾಗ ಕೈ ಶುಚಿಯಾಗುತ್ತೆ. ಕೊನೆಗೆ ಶುಚಿಯಾದ ಬೆರಳನ್ನು ಮೆಣಸಿನ ಪುಡಿ ಹಾಕಲಾಗಿರುವ ತಟ್ಟೆಯಲ್ಲಿ ಇರಿಸುತ್ತಾರೆ. ಶುಚಿಯಾದ ಬೆರಳು ತಟ್ಟೆಯಲ್ಲಿಡುತ್ತಿದ್ದಂತೆ ಮೆಣಸಿನ ಪುಡಿ ದೂರ ಹೋಗುತ್ತೆ.

    ಮೆಣಸಿನ ಪುಡಿ ದೂರ ಹೋಗುತ್ತಿದ್ದಂತೆ ಮಕ್ಕಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಗೆ ಶಿಕ್ಷಕಿ ಸಾಬೂನಿನಿಂದ ಕೈ ತೊಳೆದ್ರೆ ಯಾವ ವೈರಾಣುಗಳು ನಿಮ್ಮ ಬಳಿ ಸುಳಿಯಲ್ಲ ಎಂಬುದನ್ನ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

  • ನಿಶ್ಚಿತಾರ್ಥ ಆಗಿಲ್ಲವೆಂದು ಮಹಿಳಾ ದಿನಾಚರಣೆಯಂದೇ ಶಿಕ್ಷಕಿ ಆತ್ಮಹತ್ಯೆ

    ನಿಶ್ಚಿತಾರ್ಥ ಆಗಿಲ್ಲವೆಂದು ಮಹಿಳಾ ದಿನಾಚರಣೆಯಂದೇ ಶಿಕ್ಷಕಿ ಆತ್ಮಹತ್ಯೆ

    ಬೀದರ್: ಮಹಿಳಾ ದಿನಾಚರಣೆಯ ದಿನವೇ ಶಿಕ್ಷಕಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.

    ಪೂಜಾ (24) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಯಲ್ಲಿ ಈ ಘಟನೆ ನಡೆದಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟು ಬರೆದಿಟ್ಟು ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ವರನ ಕಡೆಯವರು ಹಲವು ಬಾರಿ ನೋಡಿ ಹೋದರೂ ನಿಶ್ಚಿತಾರ್ಥವಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೋಷಕರ ಜೊತೆ ಪೂಜಾ ಚರ್ಚೆ ಮಾಡಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಹೇಳಿದ್ದಳಂತೆ. ಆಗ ಪೋಷಕರು ಹಲವಾರು ಬಾರಿ ಸಮಾಧಾನ ಮಾಡಿದ್ದರು. ಆದರೂ ಇಂದು ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪೂಜಾ ಭಾಲ್ಕಿಯ ಖಾಸಗಿ ಚನ್ನಬಸವ ಪದವಿ ಕಾಲೇಜಿನಲ್ಲಿ ರಾಸಾಯನಿಕ ಶಾಸ್ತ್ರದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಕುರಿತು ಭಾಲ್ಕಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ವರ್ಷದಲ್ಲಿ 11 ಅಪ್ರಾಪ್ತೆಯರ ಮೇಲೆ ಕಾಮುಕ ಶಿಕ್ಷಕನಿಂದ ಅತ್ಯಾಚಾರ

    2 ವರ್ಷದಲ್ಲಿ 11 ಅಪ್ರಾಪ್ತೆಯರ ಮೇಲೆ ಕಾಮುಕ ಶಿಕ್ಷಕನಿಂದ ಅತ್ಯಾಚಾರ

    – ರಕ್ತದ ಕಲೆಗಳಿಂದ ಕೃತ್ಯ ಬೆಳಕಿಗೆ
    – ವಿದ್ಯಾರ್ಥಿನಿಯರ ಹೆಸರು ಸಹ ನೆನಪಿಲ್ಲ ಎಂದ ಶಿಕ್ಷಕ

    ಹೈದರಾಬಾದ್: 27 ವರ್ಷದ ಶಿಕ್ಷಕನೊಬ್ಬ ಎರಡು ವರ್ಷದ ಅವಧಿಯಲ್ಲಿ 11 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತೆಲಂಗಾಣದ ವನಪರ್ತಿ  ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಇದೀಗ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಆರೋಪಿ 9 ಮತ್ತು 10 ವರ್ಷದೊಳಗಿನ 11 ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎಲ್ಲಾ ಸಂತ್ರಸ್ತೆಯರು 4ನೇ ತರಗತಿಯ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದೆ. ಅಲ್ಲದೇ ಅವರಲ್ಲಿ ಕೆಲವರು ಅಧಿಕ ಬಾರಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಆರೋಪಿ ಶಿಕ್ಷಕ ಟ್ಯೂಷನ್ ಕೂಡ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯೊಬ್ಬಳ ಪೋಷಕರು ಮಗಳ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಗಮನಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಪೋಷಕರು ಈ ಬಗ್ಗೆ ಮಗಳ ಬಳಿ ಕೇಳಿದ್ದಾರೆ. ಆಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಶಿಕ್ಷಕ ಬೇರೆ ಹುಡುಗಿಯ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣ ಪೋಷಕ ಮತ್ತು ಸ್ಥಳೀಯರು ಶಾಲೆಗೆ ಬಂದು ಆರೋಪಿ ಶಿಕ್ಷಕನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    11 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಶಾಲೆ ಮತ್ತು ಟ್ಯೂಷನ್‍ಗೆ ಬರುವ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿರುವ ವಿದ್ಯಾರ್ಥಿನಿಯರ ಹೆಸರು ಸಹ ನೆನಪಿಲ್ಲ ಎಂದು ಹೇಳಿದ್ದಾನೆ. ವರದಿಯ ಪ್ರಕಾರ ಆರೋಪಿ 2018ರಿಂದ ಈ ಕೃತ್ಯವನ್ನು ಮಾಡುತ್ತಿದ್ದಾನೆ. ಆದರೆ ಸಂತ್ರಸ್ತೆಯರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಇಬ್ಬರು ಬಾಲಕಿಯರು ಮಾತ್ರ ಆರೋಪಿಗೆ ತಿಳಿದಿದೆ ಎಂದು ಪೊಲೀಸ್ ಅಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

    ಆರೋಪಿ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.