Tag: teacher

  • ಸೈಟ್‍ಗಾಗಿ ನೀಡಿದ ಹಣ ವಾಪಸ್ ನೀಡದ್ದಕ್ಕೆ ಶಿಕ್ಷಕ ಆತ್ಮಹತ್ಯೆ

    ಸೈಟ್‍ಗಾಗಿ ನೀಡಿದ ಹಣ ವಾಪಸ್ ನೀಡದ್ದಕ್ಕೆ ಶಿಕ್ಷಕ ಆತ್ಮಹತ್ಯೆ

    – ಡೆತ್‍ನೋಟ್‍ನಲ್ಲಿ ಆತ್ಮಹತ್ಯೆಗೆ ಕಾರಣ ಬರೆದಿಟ್ಟ

    ಬಾಗಲಕೋಟೆ: ಸೈಟ್ ಗಾಗಿ ಮುಂಗಡ ಕೊಟ್ಟ ಹಣ ವಾಪಸ್ ಕೊಡದ ಹಿನ್ನೆಲೆ ಹೈಸ್ಕೂಲ್ ಶಿಕ್ಷಕರೊಬ್ಬರು, ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಮೂಗನೂರಲ್ಲಿ ನಡೆದಿದೆ.

    ಹನುಮಂತ ಪೂಜಾರ(42) ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಕಮತಗಿ ಪಟ್ಟಣದದ ಹೊಳೆಹುಚ್ಚೇಶ್ವರ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನ್ನ ಸಾವಿಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ಮರಳಿ ಕೊಟ್ಟಿರೋದಿಲ್ಲ, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದು ವಂಚನೆ ಮಾಡಿರುವ ವ್ಯಕ್ತಿಯ ಫೋನ್ ನಂಬರ್ ಅನ್ನು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.

    ಕಮತಗಿ ಪಟ್ಟಣದಲ್ಲಿ ಸೈಟ್ ಖರೀದಿಮಾಡಲು ಹನುಮಂತ ಮುಂದಾಗಿದ್ದರು. ತಿಮಣ್ಣ ಅವರಿಗೆ ಸೇರಿದ ಸೈಟ್ ಇದಾಗಿದ್ದು, 12 ಲಕ್ಷಕ್ಕೆ ಮಾತುಕತೆ ಮಾಡಲಾಗಿತ್ತು. ಮುಂಗಡವಾಗಿ ತಿಮ್ಮಣ್ಣ ಹಗೆದಾಳಗೆ ಮೂರು ಲಕ್ಷ ಹಣವನ್ನು ಹನುಮಂತ ನೀಡಿದ್ದರು. ತಿಮ್ಮಣ್ಣ ಹಣ ವಾಪಸ್ ಕೇಳಿದರೆ ಕೊಟ್ಟಿರಲಿಲ್ಲ. ಇದರಿಂದ ಮನನೊಂದ ಹನುಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್

    ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಶಿಕ್ಷಕನನ್ನು ಬಿ.ಟಿ.ಕೃಷ್ಣೇಗೌಡ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಫೇಲ್ ಮಾಡುತ್ತೇನೆ ಎಂದು ಸಹ ಹೆದರಿಸುತ್ತಿದ್ದ.

    ಕೊನೆಗೆ ಈತನ ಕಿರುಕುಳ ತಾಳಲಾರದೆ ವಿದ್ಯಾರ್ಥಿಯನಿಬ್ಬರು ತಮ್ಮ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪೋಷಕರು ಮರ್ಯಾದೆಗೆ ಅಂಜಿ ಶಿಕ್ಷಕ ಕೃಷ್ಣೇಗೌಡನನ್ನು ಗದರಿಸಿ ದೂರು ನೀಡದೆ ಸುಮ್ಮನಾಗಿದ್ದಾರೆ. ಇದಾದ ಬಳಿಕವು ಈ ಶಿಕ್ಷಕನ ಕಿರುಕುಳ ಮುಂದುವರಿದ ಕಾರಣ ಕೆಲ ಗ್ರಾಮಸ್ಥರು ಈತನ ಬಗ್ಗೆ ಬಿಇಓ ಬಸವರಾಜು ಅವರಿಗೆ ದೂರು ನೀಡಿದ್ದಾರೆ.

    ಬಿಇಓ ಈ ಬಗ್ಗೆ ಶಾಲೆಗೆ ಬಂದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಕೃಷ್ಣೇಗೌಡ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಖಚಿತವಾಗಿದೆ. ಬಳಿಕ ಕೃಷ್ಣೇಗೌಡನ ವಿರುದ್ಧ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರು ಪೋಕ್ಸೋ ಮತ್ತು ಎಸ್‍ಸಿ-ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಕೃಷ್ಣೇಗೌಡನನ್ನು ಬಂಧಿಸಿದ್ದಾರೆ.

  • ವಾರದ ಹಿಂದೆ ಲಸಿಕೆ ಪಡೆದ ಅಂಗನವಾಡಿ ಶಿಕ್ಷಕಿ ಸಾವು

    ವಾರದ ಹಿಂದೆ ಲಸಿಕೆ ಪಡೆದ ಅಂಗನವಾಡಿ ಶಿಕ್ಷಕಿ ಸಾವು

    – ಮರಣೋತ್ತರ ಪರೀಕ್ಷೆ ನಂತರ ನಿಖರ ಮಾಹಿತಿ

    ಹೈದರಾಬಾದ್: ಒಂದು ವಾರದ ಹಿಂದೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಅಂಗನವಾಡಿ ಶಿಕ್ಷಕಿ ಎದೆನೋವಿನಿಂದ ಸಾವನ್ನಪ್ಪಿರುವ ಘಟನೆ ತೆಲಂಗಣದ ವಾರಂಗಲ್‍ನಲ್ಲಿ ನಡೆದಿದೆ.

    ಮೃತ ಶಿಕ್ಷಕಿ 45 ವರ್ಷದವರಾಗಿದ್ದಾರೆ. ಇವರು 19ರಂದು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಶನಿವಾರ ಮತ್ತೆ ಕೆಲವು ಔಷಧಗಳನ್ನು ಸೇವಿಸಿದ್ದಾರೆ. ಬಳಿಕ ಎದೆನೋವು ಎಂದು ಮಲಗಿದ್ದವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಮೃತ ಶಿಕ್ಷಕಿಯ ದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾತ್ಮಾ ಗಾಂಧಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಈಕೆಯ ಸಾವಿಗೆ ಕಾರಣ ತಿಳಿದು ಬರಬೇಕಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ನಾಗಾರ್ಜುನ ರೆಡ್ಡಿ ಹೇಳಿದ್ದಾರೆ.

    ತೆಲಂಗಾಣದಲ್ಲಿ ಕೊರೊನಾ ಲಸಿಕೆಯನ್ನು ಪಡೆದ ನಂತರ ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವ 2ನೇ ಮಹಿಳೆಯಾಗಿದ್ದಾರೆ. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ತಿಳಿದು ಬಂದಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶಿಕ್ಷಕಿ ಸಾವಿಗೆ ಕಾರಣ ತಿಳಿದು ಬರಬೇಕಿದೆ.

  • ವಿದ್ಯಾರ್ಥಿ ಜೊತೆ ಹಾಸಿಗೆ ಹಂಚ್ಕೊಂಡ ಟೀಚರ್ – ಸೆಕ್ಸ್ ಬಳಿಕ ಕರಾಳ ಅಸಹ್ಯ ಸತ್ಯ ಬಿಚ್ಚಿಟ್ಟ ಬಾಲಕ

    ವಿದ್ಯಾರ್ಥಿ ಜೊತೆ ಹಾಸಿಗೆ ಹಂಚ್ಕೊಂಡ ಟೀಚರ್ – ಸೆಕ್ಸ್ ಬಳಿಕ ಕರಾಳ ಅಸಹ್ಯ ಸತ್ಯ ಬಿಚ್ಚಿಟ್ಟ ಬಾಲಕ

    – 15ರ ಬಾಲಕನಿಗೆ ಸೆಕ್ಸ್ ಗೆ ಅಹ್ವಾನಿಸಿದ್ದ 35ರ ಶಿಕ್ಷಕಿ

    ಲಂಡನ್: 35 ವರ್ಷದ ಶಿಕ್ಷಕಿ ತನ್ನ 15 ವರ್ಷದ ಅಪ್ರಾಪ್ತನ ಜೊತೆ ಹಾಸಿಗೆ ಹಂಚಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿದ್ಯಾರ್ಥಿ ಸೆಕ್ಸ್ ಬಳಿಕ ಭಯಾನಕ ಮತ್ತು ಅಸಹ್ಯಕರವಾದ ಸತ್ಯವನ್ನ ನ್ಯಾಯಲಯದ ಮುಂದೆ ವೀಡಿಯೋ ಸಂದರ್ಶನದಲ್ಲಿ ಹೊರ ಹಾಕಿದ್ದಾನೆ.

    2018ರಲ್ಲಿ 35 ವರ್ಷದ ಶಿಕ್ಷಕಿ ಕ್ಯಾಂಡೈಸ್ ಬಾರ್ಬರ್ ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಜೊತೆ ಲೈಂಗಿಕ ಸಂಬಂಧ ಹೊಂದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಆರೋಪಗಳನ್ನ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ಕೆಲಸದಿಂದ ವಜಾ ಮಾಡಿತ್ತು. ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಶಿಕ್ಷಕಿ ಶಿಕ್ಷೆಗೂ ಸಹ ಗುರಿಯಾಗಿದ್ದಳು. ಆದರೆ ನ್ಯಾಯಾಲಯ ವಿದ್ಯಾರ್ಥಿ ಜೊತೆ ಅಶ್ಲೀಲ ಫೋಟೋ ಹಂಚಿಕೊಂಡ ಪ್ರಕರಣದಿಂದ ಶಿಕ್ಷಕಿಯನ್ನ ಖುಲಾಸೆಗೊಳಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಕೆಯಾದ ಹಿನ್ನೆಲೆ ಎರಡನೇ ಬಾರಿ ವಿಚಾರಣೆ ನಡೆಸಲಾಗುತ್ತಿದೆ.

    ಟಾಪ್‍ಲೆಸ್ ಫೋಟೋ ಕಳುಹಿಸಿದ್ಳು: ಎರಡೂವರೆ ವರ್ಷಗಳ ಹಿಂದೆ ವಿದ್ಯಾರ್ಥಿಯ ಫೋನ್ ಪಡೆದ ಕ್ಯಾಂಡೈಸ್, ಸ್ನ್ಯಾಪ್ ಚಾಟ್ ಇನ್‍ಸ್ಟಾಲ್ ಮಾಡಿದ್ದಾಳೆ. ಆರಂಭದಲ್ಲಿ ವಿದ್ಯಾರ್ಥಿ ಜೊತೆ ಸಹಜವಾಗಿ ಚಾಟ್ ಮಾಡುತ್ತಿದ್ದಳು. ದಿನ ಕಳೆದಂತೆ ಅಶ್ಲೀಲ ಸಂದೇಶ, ಲೈಂಗಿಕತೆ ಪ್ರಚೋದಿಸುವ ಫೋಟೋಗಳನ್ನ ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಕ್ಯಾಂಡೈನ್ ತನ್ನದೇ ಟಾಪ್‍ಲೆಸ್ ಫೋಟೋಗಳನ್ನ ಕಳಿಸಿ ಸೆಕ್ಸ್ ಗೆ ಆಹ್ವಾನಿಸಿದ್ದಳು.

    ಬಾಲಕ ಹೇಳಿದ ಸತ್ಯ: ಶಿಕ್ಷಕಿಯ ಜೊತೆ ಸೆಕ್ಸ್ ನಂತರ ಶಾಲೆಯಲ್ಲಿಯೂ ಆಕೆ ನನಗೆ ಮುಜುಗರ ಉಂಟು ಮಾಡುತ್ತಿದ್ದಳು. ಶಾಲೆಯಲ್ಲಿಯೂ ಕಾಂಡೈಸ್ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಳು. ಹಾಗೆ ನಮ್ಮಿಬ್ಬರ ಸಂಬಂಧದ ಬಗ್ಗೆ ಕೆಲ ವದಂತಿಗಳು ಶಾಲೆಯಲ್ಲಿ ಹರಡಿದವು. ಈ ಬಗ್ಗೆ ಗೆಳೆಯರ ಜೊತೆ ಹೇಳಿದಾಗ ಅವರಾರು ನನ್ನ ಮಾತುಗಳನ್ನ ನಂಬಲಿಲ್ಲ. ಕಾರಣ ಅವರೆಲ್ಲರೂ ಶಿಕ್ಷಕಿ ಕ್ಯಾಂಡೈಸ್ ಳನ್ನು ಗೌರವದಿಂದ ಕಾಣುತ್ತಿದ್ದರು ಎಂದು ಹೇಳಿದ್ದಾನೆ.

    ಬೆದರಿಕೆ ಹಾಕಿದ ನೀಚ ಹೆಂಗಸು: ಇನ್ನು ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಯಾರಿಗಾದರೂ ಹೇಳಿದರೆ ಪರಿಣಾಮ ಚೆನ್ನಾಗಿರಲಿಲ್ಲ. ನಿನ್ನ ಮುಂದಿನ ಶೈಕ್ಷಣಿಕ ಭವಿಷ್ಯ ಹಾಳಾಗಲಿದೆ ಎಂದು ಕ್ಯಾಂಡೈಸ್ ಬೆದರಿಕೆ ಹಾಕಿದ್ದಳು ಎಂದು ಬಾಲಕ ತಿಳಿಸಿದ್ದಾನೆ.

    ಗೌರವಯುತವಾದ ಸ್ಥಾನದಲ್ಲಿರುವ ಶಿಕ್ಷಕಿ ಮಕ್ಕಳ ಜೊತೆ ಈ ರೀತಿ ವರ್ತಿಸುವುದು ಅಪರಾಧ. ಅಸಹ್ಯ ಫೋಟೋಗಳನ್ನ ಕಳುಹಿಸಿ ಅಪ್ರಾಪ್ತರನ್ನ ಲೈಂಗಿಕತೆಗೆ ಪ್ರಚೋಧಿಸುವುದು ತಪ್ಪು. ಶಿಕ್ಷಕಿ ವಿರುದ್ಧದ ಮೂರು ಪ್ರಕರಣ ಸಂಬಂಧ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಿಚರ್ಡ್ ಮಿಲ್ನೆ ಮಾಹಿತಿ ನೀಡಿದ್ದಾರೆ.

  • ನಾಯಿಗೆ ವಾಕ್ ಮಾಡಿಸುವಾಗ ಜಗಳ – ಶಿಕ್ಷಕಿಯ ಕತ್ತು ಕೊಯ್ದು ಕೊಂದ

    ನಾಯಿಗೆ ವಾಕ್ ಮಾಡಿಸುವಾಗ ಜಗಳ – ಶಿಕ್ಷಕಿಯ ಕತ್ತು ಕೊಯ್ದು ಕೊಂದ

    – ಮುಖದ ಮೇಲಿನ ಗಾಯದಿಂದ ಸಿಕ್ಕಬಿದ್ದ ಆರೋಪಿ

    ಜೈಪುರ: ಸಾಕು ನಾಯಿಗೆ ವಾಕ್ ಮಾಡಿಸುವ ವಿಚಾರಕ್ಕೆ ಜಗಳ ತೆಗೆದಿದ್ದ ಶಿಕ್ಷಕಿಯನ್ನ ಯುವಕನೋರ್ವ ಕೊಲೆ ಮಾಡಿರುವ ಘಟನೆ ಜೈಪುರ ಮಾನಸರೋವರದ ಮಾರ್ಕೆಟ್ ನಲ್ಲಿ ನಡೆದಿತ್ತು. ಪೊಲೀಸರು ಎಂಟು ಗಂಟೆಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.

    ವಿಜ್ಞಾದೇವಿ ಶರ್ಮಾ ಕೊಲೆಯಾದ ಶಿಕ್ಷಕಿ. ಸೋಮವಾರ ಬೆಳಗ್ಗೆ ಮನೆಯಲ್ಲಿ ವಿಜ್ಞಾದೇವಿ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಣಾರ್ಧದಲ್ಲಿಯೇ ಇದೊಂದು ಕೊಲೆ ಅನ್ನೋದು ಮನವರಿಕೆಯಾಗಿತ್ತು. ಮನೆಯ ಮೇನ್ ಗೇಟ್ ಹಾಕಲಾಗಿತ್ತು, ಆದ್ರೆ ಮೇಲ್ಛಾವಣೆಯ ಬಾಗಿಲು ತೆಗೆದಿದ್ದರಿಂದ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿತ್ತು. ಶಿಕ್ಷಕಿಯ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿರಲಿಲ್ಲ. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದಿರಲಿಲ್ಲ.

    ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಹೇಳಿಕೆ ಪಡೆಯುತ್ತಿದ್ದ ಪೊಲೀಸ್ ಪೇದೆಗೆ ಯುವಕ ಕೃಷ್ಣ ಕುಮಾರ್ ಮೇಲೆ ಅನುಮಾನ ಬಂದಿದೆ. ಯುವಕನ ಮುಖದ ಮೇಲೆ ತರಚಿದ ರೀತಿಯ ಗಾಯಗಳು ಕಂಡು ಬಂದಿತ್ತು. ಗಾಯದ ಬಗ್ಗೆ ಪ್ರಶ್ನಿಸಿದಾಗ ಸಾಕು ನಾಯಿಗೆ ತರಬೇತಿ ನೀಡುವಾಗ ಪರಚಿದೆ ಅಂತ ಹೇಳಿದ್ದನು. ಇದೇ ಸಂಬಂಧ ಕೃಷ್ಣ ಕುಮಾರ್ ಕುಟುಂಬಸ್ಥರು ಭಿನ್ನ ಹೇಳಿಕೆಗಳನ್ನ ನೀಡಿದ್ದರು. ಅನುಮಾನದ ಮೇಲೆ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೃಷ್ಣ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.

    ಮೇನ್ ಗೇಟ್ ಹಾಕಿದ್ರೂ ಒಳ ನುಗ್ಗಿದು ಹೇಗೆ?: ಸೋಮವಾರ ಬೆಳಗ್ಗೆ ವಿಜ್ಞಾದೇವಿ ಹಸುಗಳಿಗೆ ಮೇವು ಹಾಕಲು ಹೊರಗೆ ಬಂದಾಗ ಮನೆ ಒಳಗೆ ನುಗ್ಗಿ ಮೇಲ್ಛಾವಣೆ ತಲುಪಿದ್ದಾನೆ. ನಂತರ ವಿಜ್ಞಾದೇವಿ ಒಳಗೆ ಬಂದು ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಹಿಂದಿನಿಂದ ಬಂದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ಕೃಷ್ಣಕುಮಾರ್ ಮೇಲೆ ವಿಜ್ಞಾದೇವಿ ಉಗುರುಗಳಿಂದ ಪರಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೊಲೆಯ ನಂತರ ಅದೇ ಬಾಗಿಲಿನಿಂದ ಹೊರ ಹೋಗುವಲ್ಲಿ ಯಶಸ್ವಿಯಾಗಿದ್ದನು.

    ಆರೋಪಿ ಕೃಷ್ಣಕುಮಾರ್ ನಾಯಿಯನ್ನ ಆವರಣದಲ್ಲಿ ವಾಕ್ ಮಾಡಿಸುವಾಗ ವಿಜ್ಞಾದೇವಿ ಜಗಳ ಆಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದೆ ಎಂದು ಕೃಷ್ಣ ಕುಮಾರ್ ಹೇಳಿದ್ದಾನೆ.

  • ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

    ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

    ಮಂಗಳೂರು: ಸಾಧನೆ ಮಾಡಬೇಕು ಅದು ಎಲ್ಲರೂ ಗುರುತಿಸುವಂತಾಗಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಅಂತೆಯೇ ಇಲ್ಲೊಬ್ಬರು ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಅದು ಕೂಡ ಕಾಲಿಗೆ ಸರಪಳಿ ಬಿಗಿದು, ಪದ್ಮಾಸನ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಮುದ್ರದಲ್ಲಿ ಈಜುವ ಮೂಲಕ. ಇವರ ಈ ಸಾಧನೆ ಅರ್ಹವಾಗಿಯೇ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲೆಯಾಗಿದೆ.

    ಅಂದಹಾಗೆ ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಸಾಧಕನ ಹೆಸರು ನಾಗರಾಜ್ ಖಾರ್ವಿ. ಇವರು ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೇ ಈಜು ಬಲ್ಲವರಾಗಿದ್ದ ಇವರು ಅನೇಕ ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನೂ ನೀಡಿದವರು. ಇವರು ಕೆಲ ವರ್ಷಗಳ ಹಿಂದೆ ಯೋಗಾಭ್ಯಾಸವನ್ನು ಕಲಿತಿದ್ದರು. ಈಜುವುದರಲ್ಲಿ ಯೋಗವನ್ನು ಯಾಕೆ ಅಳವಡಿಕೆ ಮಾಡಿಕೊಳ್ಳಬಾರದು ಎನ್ನುವ ಯೋಚನೆಯಂತೆ ಪದ್ಮಾಸನ ಹಾಕಿ ಈಜಲು ಅಭ್ಯಾಸ ಮಾಡಲಾರಂಭಿಸಿದರು. ಅದರ ಫಲವಾಗಿಯೇ ಇದೀಗ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಈ ಸಾಧನೆ ದಾಖಲಾಗಿದೆ.

    ಪ್ರವಾಸಿಗರ ನೆಚ್ಚಿನ ಬೀಚ್ ತಣ್ಣೀರುಬಾವಿಯಲ್ಲಿ ಕುತೂಹಲದಿಂದ ನೆರೆದಿದ್ದ ಜನರ ಮಧ್ಯೆ ನಾಗರಾಜ್ ಖಾರ್ವಿ ಅವರು ಕಡಲಿನಲ್ಲಿ ಸಾಧನೆ ಮಾಡಿದ್ರು. ನೂರಾರು ಜನರ ಸಮ್ಮುಖದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಆಳ ಸಮುದ್ರಕ್ಕೆ ಇಳಿದೇ ಬಿಟ್ಟರು. ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತಾ ಒಂದು ಕಿಲೋ ಮೀಟರ್ ದೂರದ ಗುರಿಯನ್ನ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಲಗ್ಗೆ ಇಟ್ಟರು. ಸಮುದ್ರದ ಅಬ್ಬರ ಅಲೆಗಳ ಒತ್ತಡದ ಮಧ್ಯೆಯೂ ನಾಗರಾಜ್ ಖಾರ್ವಿ 25 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನ ಹುಬ್ಬೇರಿಸುವಂತೆ ಮಾಡಿದ್ರು.

    ನಾಗರಾಜ್ ಖಾರ್ವಿ ಅವರು ಈ ರೀತಿ ಸಾಧನೆಯನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಗರಾಜ್ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿಕೆ ನಾಯ್ಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಗೂ ಕಾಲಿಟ್ಟಿದ್ದಾರೆ. ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನ ಮೂಲಕ ತಣ್ಣೀರುಬಾವಿ ಬೀಚ್‍ನಲ್ಲಿ ವಿಶಿಷ್ಟ ಸಾಧನೆಗೈದರು. ಈ ವೇಳೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೆಲ್ಲಕ್ಕೂ ಮಿಕ್ಕಿ ನಾಗರಾಜ್ ಖಾರ್ವಿ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

    ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಇವರು ತೋರಿಸಿರುವ ಸಾಧನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಜಿನ ಜೊತೆಗೆ ಪದ್ಮಾಸನ ಭಂಗಿ ಮೂಲಕ ಯೋಗಾಸನವನ್ನು ಪ್ರಚುರಪಡಿಸಿದ ವಿಚಾರವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

  • ಮನೆಗೆ ನುಗ್ಗಿ 22ರ ಶಿಕ್ಷಕಿಯನ್ನು ಅಪಹರಿಸಿದ ದುಷ್ಕರ್ಮಿಗಳು

    ಮನೆಗೆ ನುಗ್ಗಿ 22ರ ಶಿಕ್ಷಕಿಯನ್ನು ಅಪಹರಿಸಿದ ದುಷ್ಕರ್ಮಿಗಳು

    ಪಾಟ್ನಾ: ಏಕಾಏಕಿ ಮನೆಯೊಳಗೆ ನುಗಿದ ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳನ್ನು ತೋರಿಸಿ 22 ವರ್ಷದ ಯುವತಿಯನ್ನು ಅಪರಿಸಿರುವ ಘಟನೆ ಪಾಟ್ನಾದ ನಡೆದಿದೆ.

    ಅಪಹರಣಕ್ಕೊಳಗಾದ ಯುವತಿ ಶಿಕ್ಷಕಿಯಾಗಿದ್ದಳು. ನೆರೆ ಮನೆಯ ಬಾಲಕಿಗೆ ಕೋಚಿಂಗ್ ಕೋಡಲು ಹೋದ ವೇಳೆ ಈ ಅಪಹರಣ ನಡೆದಿದೆ.

    ಏಕಾಏಕಿ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಎಲ್ಲರೂ ಮಾಸ್ಕ್ ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಮನೆಯಲ್ಲಿದ್ದವರು ಈ ದುಷ್ಕರ್ಮಿಗಳನ್ನು ಎದುರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ದುಷ್ಕರ್ಮಿಗಳು 5 ರಿಂದ 6 ಗುಂಡು ಹಾರಿಸಿದ್ದಾರೆ. ಈ ವೇಳೆ ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯ ಅಪಹರಣಕ್ಕೆ ನಿಖರ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ.

  • ಕಾಲುವೆಗೆ ಬಿದ್ದ 5ರ ಕಂದಮ್ಮನನ್ನು ರಕ್ಷಿಸಲು ಹೋಗಿ ತಂದೆ-ಮಗಳು ದುರ್ಮರಣ

    ಕಾಲುವೆಗೆ ಬಿದ್ದ 5ರ ಕಂದಮ್ಮನನ್ನು ರಕ್ಷಿಸಲು ಹೋಗಿ ತಂದೆ-ಮಗಳು ದುರ್ಮರಣ

    – ಪಾರ್ಕ್ ಬಳಿಯ ಕಾಲುವೆಯಲ್ಲಿ ದುರ್ಘಟನೆ

    ಲಕ್ನೋ: ಡ್ಯಾಂ ಬಳಿಯ ಕಾಲುವೆಗೆ ಬಿದ್ದ 5 ವರ್ಷದ ಮಗಳನ್ನು ರಕ್ಷಿಸಲು ಹೋದ ಶಿಕ್ಷಕಿ ಮತ್ತು ಆಕೆಯ ತಂದೆ ಇಬ್ಬರು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ನಾಜಿಯಾ ಶರೂನ್(31) ಮತ್ತು ಈಕೆಯ ತಂದೆ ಟಿ.ಪಿ ಹಸ್ಸೆಐನರ್(61) ಎಂದು ಗುರುತಿಸಲಾಗಿದೆ. ನಾಜಿಯಾ ಲಲಿತ್‍ಪುರ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದಳು. ಈಕೆ ತಂದೆ ತಿರುವನಂತಪುರನ ಕಿಲಿಮನೋರ್ ಪುಲಿಮಥ್ ನಿವಾಸಿಯಾಗಿದ್ದರು.

    ನಾಜಿಯಾ ತನ್ನ ಮಗಳು ಹಾಗೂ ತಂದೆ ಮೂವರು ಸೇರಿ ಲಲಿತ್‍ಪುರ್‍ನಲ್ಲಿರುವ ಮತಾತಿಲ ಡ್ಯಾಂ ಬಳಿಯಿರುವ ಪಾರ್ಕಿಗೆ ಹೋಗಿದ್ದಾರೆ. ಈ ವೇಳೆ ಮಗು ಕೊಳದ ಬಳಿ ಆಟವಾಡುತ್ತಿತ್ತು. ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಂದೆ- ಮಗಳು ಇಬ್ಬರು ಕಾಲುವೆಗೆ ಹಾರಿದ್ದಾರೆ. ಆದರೆ ಕಾಲುವೆಯಲ್ಲಿ ಬಿದ್ದ ಮಗುವನ್ನು ಅಲ್ಲೇ ಹತ್ತಿರದಲ್ಲಿ ಇದ್ದ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ಇನ್ನು ತಂದೆ-ಮಗಳನ್ನು ರಕ್ಷಸುವಷ್ಟರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

    ಮುಳುಗು ತಜ್ಞರ ಸಹಾಯದಿಂದ ತಂದೆ- ಮಗಳ ಮೃತದೇಹವನ್ನು ನೀರಿನಿಂದ ಹೊರತೆಗಲಾಗಿದೆ. ಇಬ್ಬರ ಮೃತದೇಹವನ್ನು ಉತ್ತರ ಪ್ರದೇಶದಿಂದ ಕೇರಳದ ಪುಲಿಮತ್‍ಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

  • ನನ್ನ ಜೊತೆ ಸೆಕ್ಸ್ ಮಾಡಿದ್ರೆ ಅಂಕ ಕೊಡ್ತೀನಿ- ವಿದ್ಯಾರ್ಥಿನಿಯರಿಗೆ ಶಿಕ್ಷಕನ ಕಿರುಕುಳ

    ನನ್ನ ಜೊತೆ ಸೆಕ್ಸ್ ಮಾಡಿದ್ರೆ ಅಂಕ ಕೊಡ್ತೀನಿ- ವಿದ್ಯಾರ್ಥಿನಿಯರಿಗೆ ಶಿಕ್ಷಕನ ಕಿರುಕುಳ

    – ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು

    ಜೈಪುರ: ನನ್ನ ಜೊತೆ ಸೆಕ್ಸ್ ಮಾಡಿದ್ರೆ ನಾನು ಮಾರ್ಕ್ಸ್ ಕೊಡುತ್ತೇನೆ ಎಂದು ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹೇಳಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

    ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್ ಯಾದವ್(45) ಆರೋಪ ಎದುರಿಸುತ್ತಿರುವ ಶಿಕ್ಷಕನಾಗಿದ್ದಾನೆ. ಮೇಲಾಧಿಕಾರಿಗೆ ವಿದ್ಯಾರ್ಥಿನಿಯರು ಶಿಕ್ಷಕನ ಕುರಿತಾಗಿ ತಿಳಿಸಿದ್ದಾರೆ. ಇದೀಗ ಆರೋಪಿ ಶಿಕ್ಷಕ ಜೈಲು ಸೇರಿದ್ದಾನೆ.

    ವಿದ್ಯಾರ್ಥಿನಿಯರ ಜೊತೆ ಅಸಭ್ಯರೀತಿಯಲ್ಲಿ ವರ್ತನೆ ಮಾಡುತ್ತಿದ್ದ. ಒಳ್ಳೆ ಅಂಕ ಬೇಕಾದರೆ ನನ್ನ ಜೊತೆ ದೈಹಿಕವಾಗಿ ಹೊಂದಿಕೊಳ್ಳಬೇಕು ಎಂದು ಹೇಳುತ್ತಿದ್ದನಂತೆ. ವಿದ್ಯಾರ್ಥಿನಿಯರು ಶಿಕ್ಷಕನ ವರ್ತನೆಯಿಂದ ಮನನೊಂದಿದ್ದರು.

    ಒಂದು ದಿನ ಮೇಲಾಧಿಕಾರಿಗಳು ಶಾಲೆಯ ಮೇಲ್ವಿಚಾರಣೆಗೆ ಬಂದಾಗ ಶಿಕ್ಷಕನ ವರ್ತನೆಯ ಬಗ್ಗೆ ತಿಳಿಸಿದ್ದಾರೆ. ಶಿಕ್ಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ದೈಹಿಕ ಸಂಪರ್ಕವನ್ನು ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಾರೆ. ನನ್ನೊಂದಿಗೆ ಸಹಕರಿಸಲಿಲ್ಲ ಎಂದರೆ ನಿಮಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ತಕ್ಷಣ ಎಚ್ಚರಿತುಕೊಂಡ ಮೇಲಾಧಿಕಾರಿ ಈ ವಿಷಯವನ್ನು ಶಿಕ್ಷಣ ಇಲಾಖೆಗೆ ತಿಳಿಸಿದ್ದಾರೆ. ಈಗ ಶಿಕ್ಷಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

  • ಶಿಕ್ಷಕಿ ಮೇಲೆ ಬಿತ್ತು ವಿದ್ಯುತ್ ತಂತಿ – 20 ನಿಮಿಷದಲ್ಲಿ ಸುಟ್ಟು ಕರಕಲಾದ ಮಹಿಳೆ

    ಶಿಕ್ಷಕಿ ಮೇಲೆ ಬಿತ್ತು ವಿದ್ಯುತ್ ತಂತಿ – 20 ನಿಮಿಷದಲ್ಲಿ ಸುಟ್ಟು ಕರಕಲಾದ ಮಹಿಳೆ

    – 11 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್

    ಜೈಪುರ: ಶಾಲೆಗೆ ಹೊರಟಿದ್ದ ಶಿಕ್ಷಕಿ ಮೇಲೆ 11 ಕೆವಿ ವಿದ್ಯುತ್ ತಂತಿ ಬದ್ದ ಘಟನೆ ರಾಜಸ್ಥಾನದ ಬಾಂಸ್ವಾಡ ಜಿಲ್ಲೆಯ ನೊಗ್ಮಾದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿ ಸಂಪೂರ್ಣ ಸುಟ್ಟ ಕರಕಲಾಗಿ ಸಾವನ್ನಪ್ಪಿದ್ದಾರೆ.

    25 ವರ್ಷದ ನೀಲಂ ಸಾವನ್ನಪ್ಪಿದ ಶಿಕ್ಷಕಿ. ಗುರುವಾರ ಬೆಳಗ್ಗೆ ತಮ್ಮ ಸ್ಕೂಟಿಯಲ್ಲಿ ನೀಲಂ ಶಾಲೆಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 10 ಗಂಟೆಗೆ ಪಾಟಿದಾರ್ ಸೇತುವೆ ದಾಟಿ ಹೋಗ್ತಿರುವಾಗ ವಿದ್ಯುತ್ ತಂತಿ ತುಂಡಾಗಿ ಶಿಕ್ಷಕಿ ಮೇಲೆ ಬಿದ್ದಿದೆ. ಘಟನೆಗೂ ಮುನ್ನ ಮಳೆಯಾಗಿತ್ತು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ಭಯಗೊಂಡ ಸ್ಥಳೀಯರು ರಕ್ಷಣೆಗೆ ಹಿಂದೇಟು ಹಾಕಿದ್ದಾರೆ. ಆದ್ರೆ ವಿದ್ಯುತ್ ಇಲಾಖೆ ಸಹಾಯವಾಣಿ, ಸ್ಥಳೀಯ ಸಿಬ್ಬಂದಿ, ಪೊಲೀಸರು, ಅಂಬುಲೆನ್ಸ್ ಸಿಬ್ಬಂದಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

    ಸ್ಥಳೀಯರು ಫೋನ್ ಮಾಡಿ ವಿಷಯ ತಿಳಿಸಿದ್ರೂ ಸಿಬ್ಬಂದಿ 20 ನಿಮಿಷದ ಬಳಿಕ ವಿದ್ಯುತ್ ಕಡಿತಗೊಳಿಸಿದ್ದಾರೆ. ಫೋನ್ ಮಾಡಿದಾಗ ವಿದ್ಯುತ್ ಕಡಿತಗೊಳಿಸಿದ್ರೆ ಶಿಕ್ಷಕಿ ಬದುಕುತ್ತಿದ್ದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಿದೋರ ನಿವಾಸಿಯಾಗಿದ್ದು ನೀಲಂ, ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಉದಯಪುದಲ್ಲಿ ಸರ್ಕಾರಿ ನೌಕರರಾಗಿದ್ದು, ದಂಪತಿಗೆ ಐದು ವರ್ಷದ ಮಗನಿದ್ದಾನೆ.

    ಅರ್ಧಗಂಟೆಯ ಬಳಿಕ ಸ್ಥಳಕ್ಕಾಗಮಿಸಿದ ಅಂಬುಲೆನ್ಸ್ ಸಿಬ್ಬಂದಿ ಮಹಿಳೆ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಆರು ತಿಂಗಳ ಹಿಂದೆ ಇದೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿವೆ. ಈ ಘಟನೆಗೆ ವಿದ್ಯುತ್ ಇಲಾಖೆಯ ಬೇಜಾವಾಬ್ದಾರಿಯೇ ಕಾರಣ ಎಂದು ಶಿಕ್ಷಕಿ ಕುಟುಂಬಸ್ಥರು ಆರೋಪಿಸಿದ್ದಾರೆ.