– ಶಾಲೆ ಬಿಟ್ಟ ಬಳಿಕವೂ ವಿದ್ಯಾರ್ಥಿಯ ಜೊತೆ ಸಂಪರ್ಕಕ್ಕೆ ಯತ್ನ – ಆರೋಪಿ ಶಿಕ್ಷಕಿಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ
ಮುಂಬೈ: 11ನೇ ತರಗತಿ ವಿದ್ಯಾರ್ಥಿಯ (Student) ಜೊತೆ ಸೆಕ್ಸ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈಯ ಶಿಕ್ಷಕಿಯನ್ನು (Mumbai Teacher) ಪೋಕ್ಸೋ ಕಾಯ್ದೆಯ ಅಡಿ ಬಂಧಿಸಲಾಗಿದೆ.
ಮುಂಬೈನ ಪ್ರಖ್ಯಾತ ಶಾಲೆಯ 40 ವರ್ಷದ ಇಂಗ್ಲಿಷ್ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ 16 ವರ್ಷದ ವಿದ್ಯಾರ್ಥಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ (Sexually Assault) ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಿಕ್ಷಕಿಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಈಗ ಪೋಕ್ಸೋ (POCSO), ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ. ಇದನ್ನೂಓದಿ: ಶೌಚಾಲಯದಲ್ಲಿಮಹಿಳಾಸಹೋದ್ಯೋಗಿವೀಡಿಯೋರೆಕಾರ್ಡ್–ಟೆಕ್ಕಿಅರೆಸ್ಟ್
ವಿದ್ಯಾರ್ಥಿ 11ನೇ ತರಗತಿಯಲ್ಲಿ ಓದುತ್ತಿದ್ದಾಗ ಆತನಿಗೆ ಶಿಕ್ಷಕಿ ಪಾಠ ಕಲಿಸಿದ್ದಳು. ಡಿಸೆಂಬರ್ 2023 ರಲ್ಲಿ ವಾರ್ಷಿಕ ಶಾಲೆಯ ನೃತ್ಯ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಗುಂಪನ್ನು ಮಾಡಲಾಗಿತ್ತು. ಈ ವೇಳೆ ಶಿಕ್ಷಕಿ ಅಪ್ರಾಪ್ತರತ್ತ ಆಕರ್ಷಿತಳಾಗಿದ್ದಳು. ಜನವರಿ 2024 ರಲ್ಲಿ ಅವಳು ವಿದ್ಯಾರ್ಥಿಗೆ ಲೈಂಗಿಕ ಸನ್ನೆ ಮಾಡಲು ಆರಂಭಿಸಿದ್ದಳು.
ಶಿಕ್ಷಕಿಯ ಈ ವರ್ತನೆ ನೋಡಿ ಆರಂಭದಲ್ಲಿ ವಿದ್ಯಾರ್ಥಿ ಆಕೆಯಿಂದ ದೂರ ಸರಿಯಲು ಆರಂಭಿಸಿದ್ದ. ಈ ವೇಳೆ ಶಿಕ್ಷಕಿ ಸ್ನೇಹಿತೆಯ ಮೂಲಕ ಆಕೆ ಆತನ ಜೊತೆ ಸಂಬಂಧ ಬೆಳೆಸಿದಳು. ಆಕೆಯ ಸ್ನೇಹಿತೆ ವಿದ್ಯಾರ್ಥಿಯ ಜೊತೆ ಮಾತನಾಡಿ ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ಈಗ ಸಾಮಾನ್ಯ, ನಿಮ್ಮ ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎಂದು ಹೇಳಿ ಮನವೊಲಿಸಿದ್ದಳು. ಕೃತ್ಯಕ್ಕೆ ಸಾಥ್ ನೀಡಿದ್ದಕ್ಕೆ ಶಿಕ್ಷಕಿಯ ಸ್ನೇಹಿತೆಯ ವಿರುದ್ಧವೂ ಆರೋಪ ಹೊರಿಸಲಾಗಿದೆ.
ಶಿಕ್ಷಕಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಫೈವ್ ಸ್ಟಾರ್ ಹೋಟೆಲಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿ ಲೌಂಗಿಕ ದೌರ್ಜನ್ಯ ಎಸಗುತ್ತಿದ್ದಳು. ಕೃತ್ಯ ಎಸಗಿದ ಕೆಲ ದಿನಗಳ ಬಳಿಕ ವಿದ್ಯಾರ್ಥಿ ಭಯಗೊಂಡಿದ್ದ. ಈ ವೇಳೆ ಶಿಕ್ಷಕಿ ಭಯ ನಿವಾರಕ ಮಾತ್ರೆಗಳನ್ನು ನೀಡಿದ್ದಳು. ಇದನ್ನೂ ಓದಿ: I Stand By My Words, ಡಿಕೆಶಿಗೂ ಅವಕಾಶ ಸಿಗಲಿ – ಇಕ್ಬಾಲ್ ಹುಸೇನ್
ಶಿಕ್ಷಕಿಯ ಕಾಮ ತೃಷೆ ಎಷ್ಟಿತ್ತು ಅಂದರೆ ಕೆಲವೊಮ್ಮೆ ವಿದ್ಯಾರ್ಥಿಗೆ ಬಲವಂತವಾಗಿ ಮದ್ಯ ಕುಡಿಸಿ ದಕ್ಷಿಣ ಮುಂಬೈ ಮತ್ತು ವಿಮಾನ ನಿಲ್ದಾಣದ ಬಳಿಯ ಪಂಚತಾರಾ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಳು.
ಬೆಳಕಿಗೆ ಬಂದಿದ್ದು ಹೇಗೆ?
ಪೋಷಕರು ಪುತ್ರನ ನಡವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸಿ ಅವನನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ತನ್ನ ಕಷ್ಟವನ್ನು ಹೇಳುತ್ತಿದ್ದಂತೆ ಶೀಘ್ರವೇ ಆತ 12ನೇ ತರಗತಿ ತೇರ್ಗಡೆಯಾಗುತ್ತಾನೆ ಎಂಬ ಕಾರಣಕ್ಕೆ ಕುಟುಂಬ ಈ ವಿಚಾರವನ್ನು ರಹಸ್ಯವಾಗಿ ಇಡಲು ಮುಂದಾಗಿತ್ತು. ಆದರೆ 12ನೇ ತರಗತಿ ತೇರ್ಗಡೆಯಾಗಿ ಶಾಲೆ ತೊರೆದ ಬಳಿಕವೂ ಶಿಕ್ಷಕಿ ಮತ್ತೆ ವಿದ್ಯಾರ್ಥಿಯನ್ನು ಸಂಪರ್ಕಿಸಲು ಮುಂದಾಗಿದ್ದಾಳೆ.
ಶಿಕ್ಷಕಿ ತನ್ನ ಮನೆಕೆಲಸದ ಸಿಬ್ಬಂದಿ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿ ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. ಈ ವಿಚಾರ ಪೋಷಕರಿಗೆ ತಿಳಿದ ಬಳಿಕ ಈಗ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಗದಗ: ಲವ್ವರ್ (Lover) ಬ್ಲ್ಯಾಕ್‌ಮೇಲ್‌ನಿಂದ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅಸುಂಡಿ (Asundi) ಗ್ರಾಮದಲ್ಲಿ ನಡೆದಿದೆ.
ಕಳೆದ 5 ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪೋಷಕರ ಒತ್ತಾಯದ ಮೇರೆಗೆ ಸೈರಾಬಾನು ಬೇರೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಸೈರಾಬಾನು ಮದುವೆ ತಯಾರಿ ನೋಡಿ ಲವರ್ ಮೈಲಾರಿ ಟಾರ್ಚರ್ ಶುರುವಾಗಿತ್ತು. ಬೇರೆ ಮದುವೆ ಆದರೆ ಇಬ್ಬರ ಫೋಟೋ ಹಾಗೂ ವೀಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಆತ ಬೆದರಿಕೆ ಹಾಕ್ತಿದ್ದ ಎಂಬ ಆರೋಪವಿದೆ. ಸೈರಾಬಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಶಂಕ ವ್ಯಕ್ತವಾಗಿದೆ. ಇದನ್ನೂ ಓದಿ: 2 ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ಕೊನೆಯ ಮಗಳು ಎಂದು ಹೆತ್ತವರು ಭರ್ಜರಿಯಾಗಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಮನೆಗೆ ಈಗ ಸೂತಕದ ಛಾಯೆ ಆವರಿಸಿದೆ.
ಸೈರಾಬಾನು, ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು ಆಗಿ ಸಾಕಷ್ಟು ಹೆಸರು ಮಾಡಿದ್ದ ಇವರು ಹತ್ತಾರು ಮೆಡಲ್, ಕಪ್ ಗೆದ್ದುಕೊಂಡಿದ್ದರು. ಗಂಡು ಮಕ್ಕಳಿಲ್ಲದ ಕಾರಣ ಸೈರಾಬಾನು ಇಡೀ ಮನೆ ಜವಾಬ್ದಾರಿಯನ್ನು ಹೊತ್ತಿದ್ದರು. ಇದನ್ನೂ ಓದಿ: PBKS vs RCB – ಕೊಹ್ಲಿ ರನೌಟ್ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಯ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Gadag Rural Police Station) ಪ್ರಕರಣ ದಾಖಲಾಗಿದೆ.
ತುಮಕೂರು: ಬೀದಿ ದೀಪ (Street Light) ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ (Teacher) ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಗುಬ್ಬಿ ತಾಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಟ್ಟೂರು ಗ್ರಾಮದ ಲೋಕೇಶ್ ರಾವ್ (35) ವಿದ್ಯುತ್ ಸ್ಪರ್ಶಿಸಿ ಸೋಮವಾರ ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆ ಸಮೀಪದ ಬೀದಿ ದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: Chamarajanagar | ಕೌಟುಂಬಿಕ ಕಲಹ – 2 ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಅಕ್ರಮವಾಗಿ ನೇಮಕ ಮಾಡಲಾಗಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 25,753 ಶಿಕ್ಷಕರು (Teacher) ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಮಾನ್ಯಗೊಳಿಸಿದ್ದ ಕೋಲ್ಕತ್ತಾ ಹೈಕೋರ್ಟ್ (Calcutta High Court) ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು, ನೇಮಕಾತಿ ಪ್ರಕ್ರಿಯೆಯು ಗಂಭೀರ ಅಕ್ರಮಗಳಿಂದ ಕೂಡಿದೆ. ಅಭ್ಯರ್ಥಿಗಳನ್ನು ಹುದ್ದೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇಡೀ ಆಯ್ಕೆ ಪ್ರಕ್ರಿಯೆಯೇ ಕಳಂಕಿತವಾಗಿದ್ದು, ನೇಮಕಾತಿ ಅಮಾನ್ಯಗೊಳಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: West Bengal: 2016ರ ನೇಮಕಾತಿ ರದ್ದುಗೊಳಿಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ
ಏಪ್ರಿಲ್ 2024ರಲ್ಲಿ ವಿವಿಧ ಶಾಲೆಗಳ 25,000 ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇನ್ನೂ ಅಭ್ಯರ್ಥಿಗಳು ಪರಿಹಾರವಾಗಿ, ಈಗಾಗಲೇ ಪಡೆದ ಯಾವುದೇ ಸಂಬಳ ಅಥವಾ ಪ್ರಯೋಜನಗಳನ್ನು ಮರುಪಾವತಿಸಬೇಕಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಏನಿದು ಪ್ರಕರಣ?
ಈ ಅಕ್ರಮ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) 2016 ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದೆ. ಒಟ್ಟು 24,640 ಖಾಲಿ ಹುದ್ದೆಗಳಿಗೆ ಒಟ್ಟು 23 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿ ಪರೀಕ್ಷೆ ಬರೆದಿದ್ದರು. ಇದರ ಹೊರತಾಗಿಯೂ, 25,753 ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳು, ಒಎಂಆರ್ ಶೀಟ್‌ಗಳನ್ನು ತಿರುಚುವುದು ಮತ್ತು ರ‍್ಯಾಂಕ್-ಜಂಪಿಂಗ್ ವಿಚಾರಣೆ ವೇಳೆ ಬಯಲಾಗಿತ್ತು. ಇದು ನೇಮಕಾತಿ ರದ್ದಿಗೆ ಕಾರಣವಾಗಿತ್ತು.
ಪಶ್ಚಿಮ ಬಂಗಾಳ ಸರ್ಕಾರ ಸೇರಿದಂತೆ ಹಲವಾರು ಪಕ್ಷಗಳು ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದವು. ಡಿಸೆಂಬರ್ 19, 2024 ರಂದು, ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ವಿಚಾರಣೆಯನ್ನು ಪ್ರಾರಂಭಿಸಿತ್ತು. 2025ರ ಫೆಬ್ರವರಿ 10 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ನೀಡಲಾಗಿದೆ.
ಬೆಂಗಳೂರು: ಟೀಚರಮ್ಮನ ಹನಿಟ್ರ್ಯಾಪ್ ಪ್ರಕರಣಕ್ಕೆ (Honey Trap) ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಒಂದು ಕಿಸ್‌ಗೆ 50 ಸಾವಿರ ರೂ. ಕೇಳಿದರೆ, ಅದರ ಜೊತೆಗೆ ಫುಲ್ ಕೋ ಆಪರೇಷನ್‌ಗೆ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
2023ರಲ್ಲಿ ಪ್ಲೇ ಹೋಮ್‌ಗೆ ಬರುತ್ತಿದ್ದ ಮಗುವಿನ ಪೋಷಕರಾದ ಉದ್ಯಮಿಯನ್ನು ಆರೋಪಿತೆ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಅವರ ಬಳಿಯಿಂದ ಶಾಲೆ ನಿರ್ವಹಣೆ ಸಲುವಾಗಿ 2 ಲಕ್ಷ ರೂ.ಯನ್ನು ಸಾಲ ಪಡೆದು 2024ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು. ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಾಟ ಆರಂಭವಾಗಿತ್ತು. ಆರೋಪಿತೆ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಪೋನ್ ಅನ್ನು ಖರೀದಿಸಿದ್ದರು.
ಜನವರಿ ಮೊದಲ ವಾರದಲ್ಲಿ ಉದ್ಯಮಿ ಆರೋಪಿತೆ ಬಳಿ ಹಣ ವಾಪಸ್ ಕೇಳಿದ್ದಕ್ಕೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಒಂದು ದಿನ ಉದ್ಯಮಿ ಮನೆಗೆ ತೆರಳಿದ ಆರೋಪಿತೆ ಒಂದು ಮುತ್ತು ಕೊಟ್ಟು 50 ಸಾವಿರ ರೂ.ಯನ್ನು ಪಡೆದಿದ್ದಳು. ಜೊತೆಗೆ ನಿನ್ನ ಜೊತೆ ರಿಲೇಷನ್ ಶಿಪ್‌ನಲ್ಲಿ ಇರುತ್ತೇನೆ ಎಂದು ಆಫರ್ ನೀಡಿ, 15 ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿದ್ದಳು. ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರಿಂದ ರೋಸಿ ಹೋಗಿದ್ದ ಉದ್ಯಮಿ ಸಿಮ್ ಮುರಿದು ಆರೋಪಿತೆಯಿಂದ ಅಂತರ ಕಾಯ್ದುಕೊಂಡಿದ್ದರು.
ಮಾ.12 ರಂದು ಉದ್ಯಮಿ ಪತ್ನಿಗೆ ಆರೋಪಿತೆ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಹಾಜರಿದ್ದರು. ಸಾಗರ್‌ನನ್ನು ಉದ್ಯಮಿಗೆ ತೋರಿಸಿ ಆರೋಪಿತೆ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆರೋಪಿತೆ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು.
ಆರೋಪಿತೆಗೆ ಬಾಯ್‌ಫ್ರೆಂಡ್ ಇರುವ ವಿಚಾರ ತಿಳಿದಿಲ್ಲ. ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಉದ್ಯಮಿ ಹೇಳಿದ್ದರು. ಮೊಬೈಲ್‌ನಲ್ಲಿ ಮುರಳಿ ಎಂಬಾತನ ಫೋಟೋ ತೋರಿಸಿದ್ದ ಗಣೇಶ್ ಹಾಗೂ ಸಾಗರ್, ಪೊಲೀಸ್ ಠಾಣೆಗೆ ಹೋಗೋಣ ಎಂದು ಎಕ್ಸ್‌ಯುವಿ ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವೆಂದು ಬೆದರಿಕೆ ಹಾಕಿದ್ದರು. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೈನಲ್ ಸೆಟಲ್ಮೆಂಟ್ ಆಗಿ ಇಪ್ಪತ್ತು ಲಕ್ಷ ಕೊಡು ಎಂದಿದ್ದರು.
ಕಡೆಗೆ 1.90 ಲಕ್ಷ ಹಣವನ್ನ ಪಡೆದು ಗ್ಯಾಂಗ್ ಬಿಟ್ಟು ಕಳಿಸಿತ್ತು. ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ (Rowdy Sheeter) ಅನ್ನೋದು ಗೊತ್ತಾಗಿದೆ. ಈತನ ಮೇಲೆ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
– ಉದ್ಯಮಿಯಿಂದ ಹಣ ಪಡೆದು ಹನಿಟ್ರ್ಯಾಪ್ ಬೆದರಿಕೆ ಒಡ್ಡಿದ್ದ ಗ್ಯಾಂಗ್ ಅರೆಸ್ಟ್
ಬೆಂಗಳೂರು: ಸಚಿವ ರಾಜಣ್ಣ ಹನಿಟ್ರ್ಯಾಪ್ ಸದ್ದು ಹೊತ್ತಲ್ಲೇ ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ ಇದು.
ಶಿಕ್ಷಕಿ ಜೊತೆ ರೌಡಿ ಸೇರಿ ಮೂವರನ್ನ ಸಿಸಿಬಿ ಬಂಧಿಸಿದೆ. ಖಾಸಗಿ ಪ್ರೀಸ್ಕೂಲ್ ನಡೆಸ್ತಿದ್ದ ಆರೋಪಿತೆಗೆ 2023 ರಲ್ಲಿ ಉದ್ಯಮಿ ಪರಿಚಯ ವಾಗಿತ್ತು. ತನ್ನ ಮಕ್ಕಳನ್ನು ಈಕೆಯ ಪ್ಲೇಹೋಮ್‌ಗೆ ಉದ್ಯಮಿ ಕಳುಹಿಸುತ್ತಿದ್ದರು. ಉದ್ಯಮಿಯಿಂದ ಶಾಲೆ ನಿರ್ವಹಣೆ ಸಲುವಾಗಿ ಆರೋಪಿತೆ 2 ಲಕ್ಷ ಸಾಲ ಪಡೆದಿದ್ದಳು. 2024 ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದು, ಸುತ್ತಾಟ ನಡೆಸಿದ್ದರು.
ಆರೋಪಿತೆ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಖರೀದಿಸಿದ್ದರು. ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಈ ವೇಳೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಉದ್ಯಮಿ ಮನೆಗೆ ತೆರಳಿದ್ದ ಆರೋಪಿತೆ, ಮುತ್ತಿಟ್ಟು ಐವತ್ತು ಸಾವಿರ ಪಡೆದಿದ್ದಳು. ಬಳಿಕ ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆಂದು ಆಫರ್ ನೀಡಿದ್ದಳು. ಈ ವೇಳೆ ಮತ್ತೆ ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದರಿಂದ ಉದ್ಯಮಿ ಸಿಮ್ ಮುರಿದು ಬಿಸಾಕಿದ್ದರು.
ಮಾ.12 ರಂದು ಉದ್ಯಮಿ ಪತ್ನಿಗೆ ಆರೋಪಿತೆ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಆರೋಪಿಗಳು ಹಾಜರಿದ್ದರು. ಸಾಗರ್‌ನನ್ನು ಉದ್ಯಮಿಗೆ ತೋರಿಸಿ ಆರೋಪಿತೆ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆರೋಪಿತೆ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು.
ಆರೋಪಿತೆಗೆ ಬಾಯ್‌ಫ್ರೆಂಡ್ ಇರುವ ವಿಚಾರ ತಿಳಿದಿಲ್ಲ. ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಉದ್ಯಮಿ ಹೇಳಿದ್ದರು. ಮೊಬೈಲ್‌ನಲ್ಲಿ ಮುರಳಿ ಎಂಬಾತನ ಫೋಟೋ ತೋರಿಸಿದ್ದ ಗಣೇಶ್ ಹಾಗೂ ಸಾಗರ್, ಪೊಲೀಸ್ ಠಾಣೆಗೆ ಹೋಗೋಣ ಎಂದು ಎಕ್ಸ್ ಯುವಿ ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವೆಂದು ಬೆದರಿಕೆ ಹಾಕಿದ್ದರು. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೈನಲ್ ಸೆಟಲ್ಮೆಂಟ್ ಆಗಿ ಇಪ್ಪತ್ತು ಲಕ್ಷ ಕೊಡು ಎಂದಿದ್ದರು.
ಕಡೆಗೆ 1.90 ಲಕ್ಷ ಹಣವನ್ನ ಪಡೆದು ಗ್ಯಾಂಗ್ ಬಿಟ್ಟು ಕಳಿಸಿತ್ತು. ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ ಅನ್ನೋದು ಗೊತ್ತಾಗಿದೆ. ಈತನ ಮೇಲೆ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ (Government School) ಮಾಹಿತಿ ನೀಡದೇ ಮುಖ್ಯ ಶಿಕ್ಷಕರು ಬೇಕಾಬಿಟ್ಟಿ ಸಭೆ-ಸಮಾರಂಭಗಳಿಗೆ ಹೋಗುವುದಕ್ಕೆ ಶಿಕ್ಷಣ ಇಲಾಖೆ (Education Department) ಬ್ರೇಕ್ ಹಾಕಿದೆ.
ಶಾಲಾ ಸಮಯದಲ್ಲಿ ಇನ್ನು ಮುಂದೆ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುವಂತಿಲ್ಲ ಎಂದು ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಇಲಾಖೆ ಆದೇಶ ಯಾಕೆ?
ಶಾಲಾ ಸಮಯದಲ್ಲಿ ಬಹುತೇಕ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರು. ಯಾವುದೇ ಮಾಹಿತಿ ಇಲ್ಲದೇ ನುಮತಿ ಪಡೆಯದೇ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದರಿಂದ ಶಾಲಾ ದಿನಚರಿ ಮೇಲೆ ಪರಿಣಾಮ ಬೀರುತ್ತಿತ್ತು.
ಮುಖ್ಯ ಶಿಕ್ಷಕರು ಇಲ್ಲದೇ ಇರುವುದರಿಂದ ಬೋಧನೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಇನ್ನು ಮುಂದೆ ಸಭೆ, ಸಮಾರಂಭಗಳಿಗೆ ಹೋಗುವಾಗ ಮಾಹಿತಿ ನೀಡುವುದು ಕಡ್ಡಾಯ. ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಚೆನೈ: ತಮಿಳುನಾಡಿನಲ್ಲೊಂದು (Tamil Nadu) ಅಮಾನವೀಕ ಕೃತ್ಯ ನಡೆದಿದೆ. 13 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಸರ್ಕಾರಿ ಶಾಲೆಯ ಮೂವರು ಶಿಕ್ಷಕರನ್ನು (Teachers) ಬಂಧಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
ಚಿನ್ನಸ್ವಾಮಿ, ಆರುಮುಗಂ ಹಾಗೂ ಪ್ರಕಾಶ್ ಬಂಧಿತ ಶಿಕ್ಷಕರು. ಕೆಲ ದಿನಗಳಿಂದ ವಿದ್ಯಾರ್ಥಿನಿ ಶಾಲೆಗೆ ಬಾರದೇ ಇರುವುದನ್ನು ಗಮನಿಸಿದ ಮುಖ್ಯಶಿಕ್ಷಕಿ ಆಕೆ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯ ಪೋಷಕರು, ಆಕೆ ಮೇಲೆ ಶಾಲೆಯಲ್ಲಿ ಮೂವರು ಶಿಕ್ಷಕರು ಅತ್ಯಾಚಾರವೆಸಗಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು – ಬ್ಯಾಂಕ್ ವಂಚನೆ ಕೇಸ್‌ನಲ್ಲಿ ದೋಷಿ ಎಂದು ಕೋರ್ಟ್ ತೀರ್ಪು
ವಿಷಯ ತಿಳಿದ ಮುಖ್ಯಶಿಕ್ಷಕಿ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಬಳಿಕ ಕೃಷ್ಣಗಿರಿ ಜಿಲ್ಲೆಯ ಬಾರ್ಕೂರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಕಾಮುಕ ಮೂವರು ಶಿಕ್ಷಕರನ್ನ ಬಂಧಿಸಿದ್ದಾರೆ.
ಮೊದಲು ಒಬ್ಬ ಶಿಕ್ಷಕ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ವಿಷಯದ ತಿಳಿದ ಇನ್ನುಳಿದ ಇಬ್ಬರು ಶಿಕ್ಷಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್ ಪಾಸ್
ಸಂತ್ರಸ್ತೆಯನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ದಿನೇಶ್ ಕುಮಾರ್ ತಿಳಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸುತ್ತಿದ್ದಂತೆ ಕೃಷ್ಣಗಿರಿ ಜಿಲ್ಲಾ ಪ್ರಧಾನ ಶಿಕ್ಷಣಾಧಿಕಾರಿಗಳು ಮೂವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್ ಸಹಿ
ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಶಿಕ್ಷಕನೊಬ್ಬ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಧಾರ್ಮಿಕ ದಾರವನ್ನು ಕತ್ತರಿಸಿರುವ ಘಟನೆ ನಡೆದಿದೆ.
ಈ ಘಟನೆ ಕಳೆದ ವಾರ ಕ್ವಾಜುಲು-ನಟಾಲ್ ಪ್ರಾಂತ್ಯದ ಡ್ರೇಕೆನ್ಸ್‌ಬರ್ಗ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಶಾಲೆಯು ಸಾಂಸ್ಕೃತಿಕ ಅಥವಾ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿ, ಶಿಕ್ಷಕಿ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಪವಿತ್ರ ದಾರವನ್ನು ಕತ್ತರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ (SAHMS) ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಅಧಿಕಾರಿಗಳಿಗೆ ಒತ್ತಾಯಿಸಿದೆ. ಹಿಂದೂ ವಿದ್ಯಾರ್ಥಿಯ ಧಾರ್ಮಿಕ ದಾರವನ್ನು ಕತ್ತರಿಸಿದ ಶಿಕ್ಷಕನ ಅಸಂವೇದನಾಶೀಲ ಮತ್ತು ಬೇಜವಾಬ್ದಾರಿ ಕ್ರಮವನ್ನು SAHMS ಬಲವಾಗಿ ಖಂಡಿಸುತ್ತದೆ ಎಂದು ಸಂಘಟನೆ ತಿಳಿಸಿದೆ.
ಶಾಲೆಯಲ್ಲಿ ನಡೆದ ಧಾರ್ಮಿಕ ಅಸಹಿಷ್ಣುತೆ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.
ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವಾದ ಸಾಂವಿಧಾನಿಕ ನ್ಯಾಯಾಲಯವು ಶಾಲೆಯಿಂದ ಹಿಂದೂ ವಿದ್ಯಾರ್ಥಿನಿಯೊಬ್ಬಳು ಮೂಗುತಿಯನ್ನು ಧರಿಸುವುದನ್ನು ನಿಷೇಧಿಸಿತ್ತು. ಈ ಪ್ರಕರಣವನ್ನು ತ್ರಿಕಾಮ್ಜಿ ನೆನಪಿಸಿಕೊಂಡಿದ್ದಾರೆ.