Tag: teacher transfer

  • ಅಚ್ಚುಮೆಚ್ಚಿನ ಶಿಕ್ಷಕರ ವರ್ಗಾವಣೆ- ಮಕ್ಕಳ ಕಣ್ಣೀರು

    ಅಚ್ಚುಮೆಚ್ಚಿನ ಶಿಕ್ಷಕರ ವರ್ಗಾವಣೆ- ಮಕ್ಕಳ ಕಣ್ಣೀರು

    ಕಲಬುರಗಿ: ಅಚ್ಚುಮೆಚ್ಚಿನ ಶಿಕ್ಷಕರು ತಮ್ಮ ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿರುವಾಗ ವಿದ್ಯಾರ್ಥಿಗಳು ಹಾಗೂ ಇತರ ಸಹೋದ್ಯೋಗಿ ಶಿಕ್ಷಕರು ಗಳಗಳನೆ ಕಣ್ಣೀರಿಟ್ಟ ಪ್ರಸಂಗ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ನಡೆಯಿತು.

    ಲಿಂಗಂಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ರಾಘವೇಂದ್ರ ಕುಲಕರ್ಣಿ ಅವರು ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ  ಸಹೋದ್ಯೋಗಿಯಾಗಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ಹೇಳಿದ್ದಾರೆ. ಇದನ್ನೂ ಓದಿ:   ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು

    ಮಕ್ಕಳು ಹಾಗೂ ಸಹೋದ್ಯೋಗಿಗಳು ಕಣ್ಣೀರಿಡುತ್ತ ಕಾಲಿಗೆ ಬಿದ್ದು, ನಮಸ್ಕರಿಸುತ್ತಿರುವುದನ್ನು ಕಂಡ ಶಿಕ್ಷಕ ರಾಘವೇಂದ್ರ ಕುಲಕರ್ಣಿ ಅವರೂ ಕೂಡ ಭಾವುಕರಾದರು. ಸಹೋದ್ಯೋಗಿಗಳನ್ನು ತಬ್ಬಿಕೊಂಡು ಅವರೂ ಕೂಡ ಅಳುತ್ತಿರುವ ವೀಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.  ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

  • ಮೆಚ್ಚಿನ ಮೇಷ್ಟ್ರು ವರ್ಗವಾಗಿದ್ದಕ್ಕೆ ಕಣ್ಣೀರಿಟ್ಟ ಮಕ್ಕಳು- ಶಿಕ್ಷಕ ಭಾವುಕ

    ಮೆಚ್ಚಿನ ಮೇಷ್ಟ್ರು ವರ್ಗವಾಗಿದ್ದಕ್ಕೆ ಕಣ್ಣೀರಿಟ್ಟ ಮಕ್ಕಳು- ಶಿಕ್ಷಕ ಭಾವುಕ

    ನೆಲಮಂಗಲ: ಮೆಚ್ಚಿನ ಶಿಕ್ಷಕ ವರ್ಗವಾಗಿದ್ದಕ್ಕೆ ಮಕ್ಕಳು ಕಣ್ಣೀರಿಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ. ಮಕ್ಕಳ ಪ್ರೀತಿಯನ್ನು ಕಂಡು ಶಿಕ್ಷಕ ಭಾವುಕರಾಗಿದ್ದಾರೆ.

    ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ಶಿಕ್ಷಕ ಗಂಗಮಲ್ಲಯ್ಯ ಅವರು ಬೇರೊಂದು ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಶಿಕ್ಷಕರು ವರ್ಗಾವಣೆಯಾಗಿರುವ ಸುದ್ದಿ ಕೇಳಿ ಮಕ್ಕಳು ಕಣ್ಣೀರು ಹಾಕಿದರು. ತಮ್ಮ ಮೆಚ್ಚಿನ ಶಿಕ್ಷಕ ವರ್ಗಾವಣೆ ಸುದ್ದಿ ಕೇಳಿ ಶಾಲೆಯ 125 ಮಕ್ಕಳು ಕಣ್ಣೀರಿಟ್ಟು, ಶಿಕ್ಷಕರ ಕಾಲಿಗೆರಗಿ ಆಶೀರ್ವಾದ ಪಡೆದ ಘಟನೆಗೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಲಕ್ಕೂರು ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ಲಕ್ಕೂರು ಸರ್ಕಾರಿ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಗಂಗಮಲ್ಲಯ್ಯ, ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳುವ ಕಾರಣಕ್ಕೆ ತಮ್ಮ ಸ್ವಗ್ರಾಮದ ಬಳಿಯ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ವರ್ಗಾವಣೆಯ ವಿಷಯ ಶಾಲಾ ಮಕ್ಕಳಿಗೆ ಗೊತ್ತಿರಲಿಲ್ಲ. ಮಕ್ಕಳಿಗೆ ಗೊತ್ತಾಗದಂತೆ ಶಾಲೆಯ ಶಿಕ್ಷಕರೇ ಗಂಗಮಲ್ಲಯ್ಯ ಅವರಿಗೆ ಬೀಳ್ಕೊಡುಗೆ ನೀಡಿದ್ದರು. ಇದನ್ನೂ ಓದಿ: 1 ಟನ್ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು 14 ರೂಪಾಯಿ ಮಾತ್ರ

    TEACHERS TRANSFER

    ತಮ್ಮ ಮೆಚ್ಚಿನ ಶಿಕ್ಷಕರ ವರ್ಗಾವಣೆ ಸುದ್ದಿ ತಿಳಿದ ಮಕ್ಕಳು ಭಾವುಕರಾದರು. ಶಿಕ್ಷಕರು ನೋಡದ ಹೊರತು ಊಟ ಮಾಡುವುದಿಲ್ಲವೆಂದು ಹಠ ಮಾಡಿದರು. ಮಕ್ಕಳ ಹಠಕ್ಕೆ ಮಣಿದ ಪೋಷಕರು ವರ್ಗಾವಣೆಯಾದ ಶಿಕ್ಷಕರಿಗೆ ಮನವಿ ಮಾಡಿ ಮಕ್ಕಳನ್ನು ಭೇಟಿ ಮಾಡುವಂತೆ ವಿನಂತಿಸಿಕೊಂಡರು. ನಂತರ ಶಾಲೆಗೆ ಭೇಟಿ ನೀಡಿದ ಗಂಗಮಲ್ಲಯ್ಯ ಅವರನ್ನು ಸುತ್ತುವರಿದ ಮಕ್ಕಳು, ಸರ್‌… ನಮ್ಮ ಶಾಲೆ ಬಿಟ್ಟು ಹೋಗ್ಬೇಡಿ ಎಂದು ಕಣ್ಣೀರು ಹಾಕಿದರು. ಮಕ್ಕಳ ಮುಗ್ಧ ಪ್ರೀತಿಗೆ ಶಿಕ್ಷಕ ಗಂಗಮಲ್ಲಯ್ಯ ಸಹ ಭಾವುಕರಾದರು.