Tag: tea shop

  • ಹೊಡೆದ ಮಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಯುವಕ

    ಹೊಡೆದ ಮಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಯುವಕ

    – 55 ವರ್ಷದ ಮಹಿಳೆಯ ಮೇಲೆ 24ರ ಯುವಕನಿಂದ ಅತ್ಯಾಚಾರ

    ನವದೆಹಲಿ: 55 ವರ್ಷದ ಮಹಿಳೆಯ ಮೇಲೆ 24ರ ಯುವಕನೊಬ್ಬ ಅತ್ಯಾಚಾರ ಎಸಗಿ, ಕೊಲೆಗೈದ ಅಮಾನವೀಯ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ನಿವಾಸಿ ಧರಮ್‍ರಾಜ್ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪಿ. ಕೊಲೆಯಾದ ಮಹಿಳೆಯು ಗುಲಾಬಿ ಬಾಗ್ ನಿವಾಸಿಯಾಗಿದ್ದು, ಮನೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಳು. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಮಹಿಳೆಯು ಗುಲಾಬಿ ನಗರದಲ್ಲಿ ಟೀ ಅಂಗಡಿ ನಡೆಸುತ್ತಿದ್ದಳು. ಆದರೆ ಶುಕ್ರವಾರ ಅಂಗಡಿಯ ಬಾಗಿಲು ತರೆದಿರಲಿಲ್ಲ. ಹೀಗಾಗಿ ನಿತ್ಯವೂ ಟೀ ಕುಡಿಯಲು ಬರುತ್ತಿದ್ದ ಕೆಲ ಗ್ರಾಹಕರು ಅಂಗಡಿ ಬಾಗಿಲು ಬಡಿದಾಗ ಯಾರು ಕಾಣಲಿಲ್ಲ. ಸ್ವಲ್ಪ ಬಾಗಿಲು ದೂಡುತ್ತಿದ್ದಂತೆ ಮಹಿಳೆಯ ಶವ ಕಂಡು ಗಾಬರಿಗೊಂಡ ಗ್ರಾಹಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಅತ್ಯಾಚಾರ ಎಸಗಿರುವುದು ಖಚಿತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ಆತನಿಗೆ ಬಲೆ ಬೀಸಿದ್ದರು.

    ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನಾನು ಕಳೆದ ಎರಡು ವರ್ಷಗಳಿಂದ ಮಹಿಳೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಶುಕ್ರವಾರ ಹಣಕಾಸಿನ ವಿಚಾರವಾಗಿ ಮಾಲಕಿ ನನ್ನ ಜೊತೆ ಜಗಳ ಮಾಡಿದರು. ಅಷ್ಟೇ ಅಲ್ಲದೆ ನನ್ನ ಕೆನ್ನೆಗೆ ಹೊಡೆದರು. ಇದರಿಂದ ಕೋಪಗೊಂಡ ನಾನು ಅಂದು ರಾತ್ರಿ ಮಾಲಕಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾವಾರ ಎಸಗಿ ಕೊಲೆ ಮಾಡಿದ್ದೇನೆ ಎಂದು ಧರಮ್‍ರಾಜ್ ಸತ್ಯ ಬಾಯಿಬಿಟ್ಟಿದ್ದಾನೆ.

  • ಟೀ ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಪುಡಿ ಪುಡಿ

    ಟೀ ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಪುಡಿ ಪುಡಿ

    ಮೈಸೂರು: ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಡಹಗಲೇ ಟೀ ಅಂಗಡಿಯಲ್ಲಿ ಪುಂಡನೊಬ್ಬ ಆರ್ಭಟ ಮಾಡಿದ್ದಾನೆ.

    ಮೈಸೂರಿನ ಎಂ.ಜಿ ಮುಖ್ಯ ರಸ್ತೆಯಲ್ಲಿರುವ ಬಿ.ಬಿ ಟೀ ಅಂಗಡಿಯಲ್ಲಿ ಖಲೀಮ್ (35) ದಾಂಧಲೆ ಮಾಡಿದ್ದಾನೆ. ಈ ದೃಶ್ಯವು ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಖಲೀಮ್‍ನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

    ಆರೋಪಿ ಖಲೀಮ್ ಎಂ.ಜಿ ಮುಖ್ಯ ರಸ್ತೆಯಲ್ಲಿರುವ ಜಬ್ಬರ್ ಸಿಂಗ್ ಬಿಬಿ ಟೀ ಅಂಡಿಯಲ್ಲಿ ಹಣ ನೀಡದೆ ಟೀ ಕುಡಿದಿದ್ದ. ಇಂದು ಕೂಡ ಅಂಗಡಿಗೆ ಬಂದು ಟೀ ಕುಡಿಯುತ್ತಿದ್ದಾಗ ಮಾಲೀಕ ಬಾಕಿ ಹಣ ನೀಡುವಂತೆ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಂಗಡಿಯಿಂದ ಮುಂದೆ ಹೋಗಿದ್ದ ಖಲೀಮ್ ವಾಪಸ್ ಬಂದು ಏಕಾಏಕಿ ಅಂಗಡಿಯಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ.

    ಖಲೀಮ್ ಅಂಗಡಿಯಲ್ಲಿದ್ದ ಕೋಲ್ಡ್ ಡ್ರಿಂಕ್ಸ್ ಬಾಟಲ್‍ಗಳನ್ನು ಪುಡಿ ಪುಡಿ ಮಾಡಿದ್ದಾನೆ. ಅಷ್ಟೇ ಅಲ್ಲದೆ ಬಿಸ್ಕತ್ ತುಂಬಿದ್ದ ಗಾಜಿನ ಭರಣಿಗಳನ್ನು ರಸ್ತೆಗೆ ಎಸೆದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಸ್ಥಳಕ್ಕೆ ಭೇಟಿ ನೀಡಿದ ಲಕ್ಷ್ಮೀಪುರಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಫುಟೇಜ್ ಪಡೆದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಸ್ವಲ್ಪ ಸಮಯದ ಬಳಿಕ ನಗರದಲ್ಲಿ ತಿರುಗಾಡುತ್ತಿದ್ದ ಖಲೀಮ್‍ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಆರೋಪಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವಿಚಾರಣೆ ನಡೆಸಿದ್ದಾರೆ.

  • `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    ಮಂಡ್ಯ: ಸಾಲದಿಂದ ಬೇಸತ್ತಿರುವ ಮಂಡ್ಯ ನಗರದ ವ್ಯಕ್ತಿಯೊಬ್ಬರು ನನ್ನ ಕಿಡ್ನಿ ಸೇಲ್‍ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿದ್ದಾರೆ.

    ವಿನೋದ್ ಕುಮಾರ್(26) ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಮಧುರ ಟೀ ಸ್ಟಾಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಮಂಡ್ಯ ಸಮೀಪದ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನೆ.

    ತಾನು ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಕಷ್ಟವಾಗಿದೆ. ಹಣ ಕೊಟ್ಟವರಿಗೆ ಹಣ ವಾಪಸ್ ಕೊಡುವುದು ನ್ಯಾಯ. ಹೀಗಾಗಿ ನಮ್ಮ ಜಮೀನನ್ನು ಅಡವಿಟ್ಟು ಸಾಲ ತೀರಿಸೋಣ ಅಂತಿದ್ದೇನೆ. ಆದರೆ ನಾಡ ಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನನ್ನ ಕಿಡ್ನಿ ಸೇಲ್ ಮಾಡುತ್ತೇನೆ. ಯಾರಾದ್ರು ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕಿಡ್ನಿ ಕೊಂಡುಕೊಳ್ಳಿ ಎಂದು ವಿನೋದ್ ಕುಮಾರ್ ತನ್ನ ಟೀ ಅಂಗಡಿ ಮುಂದೆ ಬರೆದು ಅಂಟಿಸಿದ್ದಾರೆ.

    ವಿನೋದ್ ಕುಮಾರ್ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದು ಅಂಟಿಸಿರುವುದನ್ನು ನೋಡಿದ ಸ್ಥಳೀಯರು, ಈ ರೀತಿ ಮಾಡುವುದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಆದರೆ ಯಾರ ಬುದ್ಧಿ ಮಾತಿಗೂ ಕಿವಿಗೊಡದ ವಿನೋದ್ ಕುಮಾರ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಅಂಧರ ಕುಟುಂಬಕ್ಕೆ ಕಂಟಕವಾದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ!

    ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಜೀವನ ಮಾಡುತ್ತಿದ್ದ ಆ ಅಂಧರ ಕುಟುಂಬಕ್ಕೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಂಟಕವಾಗಿ ಮಾರ್ಪಟ್ಟಿದೆ. ಈ ಅಂಧರ ಜೀವನೋಪಾಯಕ್ಕಿದ್ದ ಏಕೈಕ ಟೀ ಅಂಗಡಿಯನ್ನ ಅಧಿಕಾರಿಗಳು ಕುಂಟು ನೆಪವೊಡ್ಡಿ ಎತ್ತಂಗಡಿ ಮಾಡಿಸಿದ್ದಾರೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ದಾಬಸ್‍ಪೇಟೆಯಲ್ಲಿ ನಡೆದಿದೆ. ಇಲ್ಲಿನ ಲೋಕೇಶ್ ಎಂಬವರ ಕುಟುಂಬ ಸಾಕಷ್ಟು ವರ್ಷಗಳಿಂದ ಟೀ ಮಾರುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಣ್ಣು ಕಾಣದೆ ಕೇವಲ ಶೇ.20ರಷ್ಟು ಮಾತ್ರ ಕಾಣುತ್ತದೆ. ಹೀಗಿದ್ದರೂ ಸ್ವಾಭಿಮಾನದ ಬದುಕನ್ನ ಬಿಟ್ಟುಕೊಡದ ಇವರೆಲ್ಲಾ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ, ಜೀವನೋಪಾಯಕ್ಕಾಗಿ ಟೀ ಅಂಗಡಿಯೊಂದನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಆದ್ರೆ ಇದೀಗ ಕೆ.ಐ.ಎ.ಡಿ.ಬಿ ಸಂಸ್ಥೆ ಅಂಧರು ಇಟ್ಟುಕೊಂಡಿದ್ದ ಟೀ ಅಂಗಡಿಯನ್ನ ಎತ್ತಂಗಡಿ ಮಾಡಿದ್ದು, ಇವರ ಜೀವನ ಇದೀಗ ಬೀದಿಪಾಲಾಗಿದೆ. ಹೀಗಾಗಿ ನಮಗೆ ಇಲ್ಲಿನ ಅಧಿಕಾರಿಗಳು ಮತ್ತೆ ಟೀ ಅಂಗಡಿಯನ್ನ ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಅಂಧ ಲೋಕೇಶ್ ಕುಟುಂಬ ಪರಿಪರಿಯಾಗಿ ಮಾಧ್ಯಮದಗಳ ಮುಂದೆ ಬೇಡಿಕೊಳ್ಳುತ್ತಿದ್ದಾರೆ.

    ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಜನಪ್ರತಿಧಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಅಂತ ಕುಟುಂಬದ ಹನುಮಕ್ಕ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ವಿಜಯಪುರ: ಯುವಕನೊಬ್ಬ ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದಿದ್ದು, ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ವಿಜಯಪುರ ನಗರದ ರಜಪೂತ ಗಲ್ಲಿ ಬಲಕಿಯಲ್ಲಿ ಶೇಖರ್ ಎಂಬ ಯುವಕ ಜೀವಂತ ಹಾವನ್ನು ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾರೆ. ಶೇಖರ್ ಕೈಯಲ್ಲಿ ಹಾವು ಕಂಡ ಟೀ ಅಂಗಡಿಯಲ್ಲಿ ನೆರೆದಿದ್ದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿರುವ ಶೇಖರ್, ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಹಾವನ್ನು ಹಿಡಿದುಕೊಂಡೇ ಟೀ ಕುಡಿಯಲು ಅಂಗಡಿಗೆ ಬಂದಿದ್ದಾರೆ. ಈ ಮೂಲಕ ನೆರೆದವರಲ್ಲಿ ಗಾಬರಿ ಮೂಡಿಸಿದ್ದಾರೆ.

    https://www.youtube.com/watch?v=5I_erPowe4I

  • 15 ಲಕ್ಷ ರೂ. ಸಂಪಾದನೆಯ ಜಾಬ್‍ಗೆ ಗುಡ್‍ಬೈ- ಟೆಕ್ಕಿ ದಂಪತಿಯಿಂದ ಟೀ ಅಂಗಡಿ ಓಪನ್!

    15 ಲಕ್ಷ ರೂ. ಸಂಪಾದನೆಯ ಜಾಬ್‍ಗೆ ಗುಡ್‍ಬೈ- ಟೆಕ್ಕಿ ದಂಪತಿಯಿಂದ ಟೀ ಅಂಗಡಿ ಓಪನ್!

    ಮುಂಬೈ: ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಆದರೆ ಪ್ರೀತಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ನಾಗ್ಪುರದಲ್ಲಿ ದಂಪತಿ ಸಾಬೀತು ಮಾಡಿದ್ದಾರೆ.

    ನಿತಿನ್ ಬಿಯಾನಿ ಹಾಗೂ ಪತ್ನಿ ಪೂಜಾ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ ಗಳು. ಆದರೆ ಈಗ ಎಂಜಿನಿಯರ್ ಕೆಲಸ ಬಿಟ್ಟು ಟೀ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.

    ಪುಣೆಯಲ್ಲಿ ಉದ್ಯೋಗದಲ್ಲಿದ್ದಾಗ ಈ ದಂಪತಿ ಪ್ರತಿ ತಿಂಗಳು 15 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದರು. ಆದರೆ ಈಗ ಎಂಜಿನಿಯರ್ ಕೆಲಸ ಬಿಟ್ಟು ಇಬ್ಬರೂ ಸೇರಿ ನಾಗ್ಪುರದ ಸಿಎ ರೋಡ್ ನಲ್ಲಿ “ಚಾಯ್ ವಿಲ್ಲಾ, ರಿಫ್ರೆಶ್ ಯುವರ್ ಸೆಲ್ಫ್” ಎಂಬ ಟೀ ಶಾಪ್ ತೆರೆದಿದ್ದಾರೆ. ಚಾಯ್ ವಿಲ್ಲಾದಲ್ಲಿ ಸುಮಾರು 15 ಕ್ಕೂ ಹೆಚ್ಚು ವಿಧದ ಟೀ ಹಾಗೂ ಕಾಫಿ ಸಿಗುತ್ತದೆ. ಅಷ್ಟೇ ಅಲ್ಲದೇ ಈ ಶಾಪ್ ನಲ್ಲಿ ಬೇರೆ ಬೇರೆ ರೀತಿಯ ಸ್ನ್ಯಾಕ್ಸ್ ಕೂಡ ಸಿಗುತ್ತದೆ.

    ಸ್ನ್ಯಾಕ್ಸ್ ಗೆ ವ್ಯಾಟ್ಸಪ್ ಮತ್ತು ಝೊಮಾಟೊ ಮೂಲಕ ಆರ್ಡರ್ ಕೂಡ ತೆಗೆದುಕೊಳ್ಳುತ್ತೇವೆ. ಈ ಅಂಗಡಿಯು ಕಚೇರಿ, ಬ್ಯಾಂಕ್ ಮತ್ತು ಆಸ್ಪತ್ರೆಗಳಿಗೆ ಟೀಯನ್ನು ವಿತರಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದೇವೆ. ಬಹಳಷ್ಟು ಜನರನ್ನು ನೇಮಕ ಮಾಡಿಕೊಂಡು ನಮ್ಮ ಅಂಗಡಿಯನ್ನು ವಿಸ್ತರಿಸಲು ಬಯಸುತ್ತೇವೆ ಎಂದು ನಿತಿನ್ ಬಿಯಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಪಕೋಡಾ, ಬೋಂಡ-ಬಜ್ಜಿ ಮಾರಿ ಬದುಕು ಕಟ್ಟಿಕೊಂಡ ಮಂಡ್ಯದ ಯುವ ಎಂಜಿನಿಯರ್

    ನಾನು ಐಬಿಎಂ ಮತ್ತು ಕಾಗ್ನಿಜೆಂಟ್ ಮುಂತಾದ ಕಂಪೆನಿಗಳಲ್ಲಿ 10 ವರ್ಷಗಳ ಕಾಲ ಎಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ. ಪತ್ನಿ ಮತ್ತು ನಾನು ಕಂಪೆನಿಯಲ್ಲಿ ಅದೇ ವೃತ್ತಿ ಮಾಡುವುದು ಸರಿ ಕಾಣಲಿಲ್ಲ. ಜೀವನದಲ್ಲಿ ಹೊಸದಾಗಿ ಬೇರೆ ರೀತಿಯಲ್ಲಿ ಕೆಲಸ ಮಾಡಿ ಬದುಕಬೇಕೆಂದು ಕನಸು ಕಂಡಿದ್ದೆವು. ಈ ಕಾರಣಕ್ಕೆ ನಾವು ಈ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ಈಗ ಪ್ರತಿ ತಿಂಗಳು 5 ಲಕ್ಷ ರೂ. ಸಂಪಾದನೆ ಮಾಡುತ್ತೇವೆ ಎಂದು ನಿತಿನ್ ಹೇಳಿದ್ದಾರೆ.

    ಈ ಜಾಗ ನನಗೆ ಇಷ್ಟವಾಯಿತು. ಜೊತೆಗೆ ಇಲ್ಲಿ ವಿವಿಧ ವಿಧದ ಟೀ ಸಿಗುತ್ತದೆ ಹಾಗೂ ಒಳ್ಳೆ ದರದಲ್ಲಿ ಪಡೆಯುತ್ತೇವೆ. ಇದು ತುಂಬಾ ಆರೋಗ್ಯಕರವಾಗಿದೆ ಬಂದು ಗ್ರಾಹಕರಾದ ಹೃತಿಶ್ ಹೇಳಿದ್ದಾರೆ. ಈ ಜೋಡಿ ಸ್ವಂತ ಬಿಸಿನೆಸ್ ಶುರುಮಾಡಿ ಕೇವಲ 5 ತಿಂಗಳಾಗಿದ್ದು, ಸದ್ಯಕ್ಕೆ ತಿಂಗಳಿಗೆ 5 ಲಕ್ಷ ರೂ. ಗಳಿಸುತ್ತಿದ್ದಾರೆ.

  • ರಸ್ತೆ ಬದಿಯ ಟೀ ಅಂಗಡಿಯೊಳಗೆ ಲಾರಿ ನುಗ್ಗಿ 8 ಜನರ ಸಾವು- ಪೊಲೀಸ್ ವಾಹನಕ್ಕೆ ಬೆಂಕಿಯಿಟ್ಟ ಸ್ಥಳೀಯರು

    ರಸ್ತೆ ಬದಿಯ ಟೀ ಅಂಗಡಿಯೊಳಗೆ ಲಾರಿ ನುಗ್ಗಿ 8 ಜನರ ಸಾವು- ಪೊಲೀಸ್ ವಾಹನಕ್ಕೆ ಬೆಂಕಿಯಿಟ್ಟ ಸ್ಥಳೀಯರು

    ಭೋಪಾಲ್: ಕಬ್ಬಿಣದ ರಾಡ್‍ಗಳನ್ನ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ರಸ್ತೆ ಬದಿಯ ಟೀ ಅಂಗಡಿ ಹಾಗೂ ಅದರ ಸಮೀಪದ ಮನೆಯೊಳಗೆ ನುಗ್ಗಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 4 ಜನ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಜಬಲ್‍ಪುರ್‍ನ ಬರೇಲಾದಲ್ಲಿ ಈ ಘಟನೆ ನಡೆದಿದೆ. ಬಸ್‍ನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋದಾಗ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅತೀ ವೇಗವಾಗಿ ಬಂದಿದ್ದು, ನಿಯಂತ್ರಣ ತಪ್ಪಿ ಟೀ ಅಂಗಡಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಲ್ಲಿ ಕುಳಿತಿದ್ದವರಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಂದು ಆಟೋರಿಕ್ಷಾ ಜಖಂಗೊಂಡಿದೆ.

    ಘಟನೆ ಬಳಿಕ ಆಕ್ರೋಶಗೊಂಡ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಘಟನೆ ನಡೆದ ವೇಳೆ ಖಾಸಗಿ ಬಸ್ ಮಂಡ್ಲದಿಂದ ಜಬಲ್‍ಪುರ್ ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಗಾಯಾಳುಗಳನ್ನ ಜಬಲ್‍ಪುರ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.

  • ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

    ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

    ಮಂಡ್ಯ: ಬೈಕಿನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

    ಸಂತೋಷ್ ಎಂಬುವವರ ಟೀ ಶಾಪ್ ಮುಂಭಾಗ ಕೋದಂಡರಾಮು ಎಂಬುವವರು ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ವಾಪಸ್ ಹೋಗುವಾಗ ಬೈಕ್‍ನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಇರುವುದು ಕಂಡಿದೆ.

    ಇದರಿಂದ ಬೈಕ್ ಓಡಿಸಲು ಹೆದರಿದ ಕೋದಂಡರಾಮು, ಗೆಳೆಯರ ಸಹಾಯದಿಂದ ಹಾವನ್ನು ಬೈಕ್ ನಿಂದ ಹೊರ ತೆಗೆದಿದ್ದಾರೆ. ಬೈಕ್‍ನಿಂದ ಹೊರ ಬಂದ ಹಾವು ಯಾವ ಕಡೆ ಹೋಗಬೇಕೆಂದು ತಿಳಿಯದೇ ಮನಸ್ಸೋ ಇಚ್ಚೆ ಓಡಾಡಿದೆ.

    ಈ ವೇಳೆ ಮಾನವೀಯತೆ ಮೆರೆದ ಸಾರ್ವಜನಿಕರು ಅದನ್ನು ಕೊಲ್ಲದೇ ತನ್ನ ಪಾಡಿಗೆ ತಾನು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.

  • ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಟೀ ವ್ಯಾಪಾರಿಗೆ ಥಳಿಸಿದ್ದ ಪಿಎಸ್‍ಐ ಅಮಾನತು

    ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಟೀ ವ್ಯಾಪಾರಿಗೆ ಥಳಿಸಿದ್ದ ಪಿಎಸ್‍ಐ ಅಮಾನತು

    ತುಮಕೂರು: ಮಾಮೂಲಿ ನೀಡದ್ದಕ್ಕೆ ಟೀ ಅಂಗಡಿ ಮಾಲೀಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ನನ್ನು ಅಮಾನತು ಮಾಡಲಾಗಿದೆ.

    ದರ್ಪ ತೋರಿದ ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಎಸ್‍ಪಿ ದಿವ್ಯಾ ಗೋಪಿನಾಥ್ ಆದೇಶಿಸಿದ್ದಾರೆ. ಬಿದರೆಗುಡಿ ಗ್ರಾಮದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ನಾರಾಯಣ ಕುಮಾರ್ ಎಂಬವರ ಬಳಿ ಪಿಎಸ್‍ಐ ಶ್ರೀಕಾಂತ ಲಂಚ ಕೇಳಿದ್ದರು. ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್‍ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದರು.

    ಮಾಮೂಲಿ ನೀಡಲು ನಿರಾಕರಿಸಿದ್ದಕ್ಕೆ ಅಂಗಡಿಗೆ ನುಗ್ಗಿ ನಾರಾಯಣ ಅವರನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದರು. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರ ಅಗುತ್ತಿದ್ದಂತೆಯೇ ಎಸ್‍ಪಿ ದಿವ್ಯಾ ಗೋಪಿನಾಥ್ ಅವರು ಪಿಎಸ್‍ಐ ಶ್ರೀಕಾಂತ್‍ರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

    https://www.youtube.com/watch?v=MZF1PSuVnDA