ಬೆಂಗಳೂರು: ಟೀ (Tea) ಚೆನ್ನಾಗಿಲ್ಲ ಎಂದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಟೀ ಶಾಪ್ ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ಮೆಜೆಸ್ಟಿಕ್ (Majestic) ಬಸ್ ನಿಲ್ದಾಣದಲ್ಲಿ ನಡೆದಿದೆ.
46ನೇ ಚಾಲಕ ಮೂಗಪ್ಪ ಅವರ ಮೇಲೆ ಟೀ ಸ್ಟಾಲ್ ಸಿಬ್ಬಂದಿ ಗುರುರಾಜ್ ಫ್ಲಾಸ್ಕ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಚಾಲಕ ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ ರೊಚ್ಚಿಗೆದ್ದ ಗುರುರಾಜ್ ರಕ್ತ ಬರುವಂತೆ ಫ್ಲಾಸ್ಕ್‌ನಿಂದ ತಲೆಗೆ ಹೊಡೆದಿದ್ದಾನೆ. ಇದನ್ನೂ ಓದಿ: ಆರೋಪಿ ನಟ ದರ್ಶನ್ ಮನೆಯಲ್ಲಿ 3 ಲಕ್ಷ ನಗದು ಕಳ್ಳತನ
ಹಲ್ಲೆಗೊಳಗಾದ ಚಾಲಕ ಉಪ್ಪಾರಪೇಟೆ ಪೊಲೀಸ್ (Upparpet Police) ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಗುರುರಾಜ್‌ನನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಜೈಪುರ: ಪತ್ನಿ ಮತ್ತು ಅತ್ತೆ ಕಿರುಕುಳಕ್ಕೆ ಬೇಸತ್ತು ರಾಜಸ್ಥಾನದ ಯುವಕ ಅತ್ತೆ ಮನೆ ಮುಂದೆ ಠಿಕಾಣಿ ಹೂಡಿದ್ದಾರೆ. ಬರೀ ಠಿಕಾಣಿ ಹೂಡಿರೋದಷ್ಟೆ ಅಲ್ಲ, ಅತ್ತೆ ಮನೆ ಮುಂದೆ ಟೀ ಸ್ಟಾಲ್ (Tea Stall) ಇಟ್ಟಿದ್ದಾರೆ. ಟೀ ಅಂಗಡಿಗೆ `498 ಎ’ ಟೀ ಕೆಫೆ ಎಂದು ಹೆಸರಿಟ್ಟಿದ್ದಾರೆ. ವಿಶೇಷವೆಂದರೆ ಇವರು ಕೈಗೆ ಕೋಳ ಧರಿಸಿ ಚಹಾ ಮಾಡುತ್ತಾರೆ. ಇದರ ಹಿಂದೆ ಬಹಳ ಸ್ವಾರಸ್ಯಕರ ಹಾಗೂ ನೋವಿನ ಕಥೆ ಇದೆ.
ಕೃಷ್ಣಕುಮಾರ್ ರಾಜಸ್ಥಾನದ ನೀಮುಚ್ ಜಿಲ್ಲೆಯ ಅಥಾನಾ ಪ್ರದೇಶದ ನಿವಾಸಿ. ನಾನು ಜುಲೈ 6, 2018 ರಂದು ಮೀನಾಕ್ಷಿ ಎಂಬವರನ್ನು ಮದುವೆಯಾದೆ. ಇಬ್ಬರೂ ಒಟ್ಟಿಗೆ ಜೇನುಸಾಕಣೆಯನ್ನು ಪ್ರಾರಂಭಿಸಿದೆವು. ಕೆಲ ದಿನಗಳ ಬಳಿಕ ಪತ್ನಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾಳೆ. ವರದಕ್ಷಿಣೆ ಕಿರುಕುಳ, ಖರ್ಚುಗಳಿಗೆ ಬೇಡಿಕೆ (ಸೆಕ್ಷನ್ 125) ಸುಳ್ಳು ಪ್ರಕರಣ ದಾಖಲಿಸಿ, 3 ವರ್ಷದಿಂದ ಕೋರ್ಟ್‌ಗೆ ಅಲೆಯುವಂತಾಗಿದೆ. ಇದರ ವಿರುದ್ಧ ಹೋರಾಟ ಮಾಡುವ ಸಲುವಾಗಿ ಈ ರೀತಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ.
ನಾನು ನ್ಯಾಯಾಲಯಕ್ಕೆ ಹೋದಾಗಲೆಲ್ಲಾ, ನನಗೆ ದಿನಾಂಕದ ನಂತರ ದಿನಾಂಕ ಸಿಗುತ್ತದೆ. ನನ್ನ ವೃದ್ಧ ತಾಯಿ ನನ್ನೊಂದಿಗಿದ್ದಾರೆ. ಹೀಗಾಗಿ ನನ್ನ ಅತ್ತೆ ಮನೆ ಮುಂದೆ ಅಂದ್ರೆ ಬರಾನ್ ಜಿಲ್ಲೆಯ ಅಂತಾ ಪಟ್ಟಣದಲ್ಲಿ, ಕೆಕೆ ಧಕಾಡ್ ಎಂಬ ಅಂಗಡಿ ಇದೆ. ಆ ಅಂಗಡಿಯಲ್ಲಿ `498 ಎ’ ಟೀ ಕೆಫೆ ಬ್ಯಾನರ್ ಹಾಕಿದ್ದೇನೆ. ವರದಕ್ಷಿಣೆ ಕಿರುಕುಳಕ್ಕೆ ಹಾಕಿರುವ ಸೆಕ್ಷನ್ ‘498 ಎ’ ಅನ್ನೇ ನನ್ನ ಟೀ ಅಂಗಡಿಗೆ ಹೆಸರಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಚೆನ್ನೈ: ಚಾಲಕನೊಬ್ಬ ನಿದ್ದೆ ಮಂಪರಿನಲ್ಲಿ ಟೀ ಅಂಗಡಿಯೊಳಗೆ ಟ್ರಕ್ ನುಗ್ಗಿಸಿದ ಪರಿಣಾಮ ಐವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.
ಇಂದು ಮುಂಜಾನೆ ನಡೆದ ಅವಘಡದಲ್ಲಿ 19 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಮೆಂಟ್ ತುಂಬಿದ ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿತ್ತು. ಹೀಗೆ ಹೋಗುತ್ತಿದ್ದ ಸಂದರ್ಭದಲಿ ಚಾಲಕನಿಗೆ ನಿದ್ದೆ ಬಂದಿದ್ದು, ಪರಿಣಾಮ ಟ್ರಕ್ ಚಾಲಕನಿಂದ ನಿಯಂತ್ರಣ ಕಳೆದುಕೊಂಡು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಟೀ ಅಂಗಡಿಗೆ ನುಗ್ಗಿದೆ.
ಇತ್ತ ಟೀ ಅಂಗಡಿಯಲ್ಲಿ ಶಬರಿಮಲೆ ಯಾತ್ರಾರ್ಥಿಗಳು ಟೀ ಕುಡಿಯುತ್ತಿದ್ದರು. ಈ ವೇಳೆ ಟ್ರಕ್ ಏಕಾಏಕಿ ನುಗ್ಗಿದೆ. ಅಪಘಾತದಿಂದ ಟೀ ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ದುರ್ಮರಣ
#WATCH | Pudukkottai, Tamil Nadu: Five people including a woman died and 19 were injured in a road accident near Pudukkottai district earlier today. A truck lost control and rammed inside a tea shop on the Trichy – Rameswaram Highway. The injured people were taken to Pudukkottai… pic.twitter.com/9D0RyuQDpN
ಪ್ರಾಥಮಿಕ ತನಿಖೆಯ ಪ್ರಕಾರ, ಸಿಮೆಂಟ್ ಟ್ರಕ್ ಚಾಲನೆ ಮಾಡುವಾಗ ನಿದ್ರಿಸಿದ ಕಾರಣ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.
ಚೆನ್ನಾಗಿ ಓದಿ ಕೆಲಸಕ್ಕೆ ವಿದೇಶಕ್ಕೆ ಹೋಗಬೇಕು ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿದೇಶದಲ್ಲಿದ್ದ ಉತ್ತಮ ಸಂಪಾದನೆಯ ಉದ್ಯೋಗವನ್ನೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ಟೀ ವ್ಯಾಪಾರ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು. ವ್ಯಾಪಾರ ಕುಟುಂಬದಿಂದ ಬಂದಿರುವ ನಿತಿನ್ ಸಲೂಜಾ (Nitin Saluja) ಅವರ ಕಥೆಯನ್ನು ಕೇಳಿದರೆ ನೀವೂ ಒಂದು ಬಾರಿ ಅಚ್ಚರಿಗೊಳಗಾಗುತ್ತೀರಿ. ಐಐಟಿ ಬಾಂಬೆ (IIT Bombay) ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರುವ ಹರಿಯಾಣ ಮೂಲದ ನಿತಿನ್ ಪದವಿ ಮುಗಿದ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು.
ಸುಮಾರು 5 ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ ಅವರು, ತಮ್ಮದೇ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದರು. ಇದೇ ಗುರಿಯನ್ನು ಇಟ್ಟುಕೊಂಡ ನಿತಿನ್ ಅಮೆರಿಕಾ ನೆಲಕ್ಕೆ ಗುಡ್ ಬೈ ಹೇಳಿ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಇಲ್ಲಿ ಬಂದು ತಾನು ಸ್ಟಾರ್ಟಪ್ ಪ್ರಾರಂಭಿಸುವ ಕನಸನ್ನು ತಂದೆಯ ಮುಂದೆ ಬಿಚ್ಚಿಟ್ಟರು. ಆದರೆ ಇದಕ್ಕೆ ತಂದೆ ಬೆಂಬಲ ನೀಡಿಲ್ಲ. ಇದರಿಂದ ಬೇಸರಗೊಂಡರೂ ನಿತಿನ್ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡರು. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ
ಒಂದು ಕಪ್ ಟೀಗೂ ಕಷ್ಟ: ಅಮೆರಿಕದಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೆ ಪರದಾಡುವಂತಹ ಸ್ಥಿತಿಯನ್ನು ನಿತಿನ್ ತಮ್ಮ ಕಣ್ಣಾರೆ ಕಂಡಿದ್ದರು. ಹೀಗಾಗಿ ಭಾರತದಲ್ಲಿ ಟೀ ಮಾರಾಟ ಮಾಡುವ ಮೂಲಕ ಸಂಪಾದನೆ ಮಾಡಬಹುದೆಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಇಲ್ಲಿ ಈಗಾಗಲೇ ಸಾಕಷ್ಟು ಕೆಫೆಗಳು ತಲೆಯೆತ್ತಿವೆ. ಆದರೆ ಕೆಲವೆಡೆ ಕಾಫಿ ಮಾತ್ರ ಸಿಗುತ್ತವೆ ಎಂಬುದನ್ನು ಕೂಡ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡುವತ್ತ ದಾಪುಗಾಲಿಟ್ಟರು. ಇದು ಅವರ ಜೀವನವನ್ನೇ ಬದಲಿಸಿದ್ದು, ಸದ್ಯ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ.
ಅಂತೆಯೇ ಸಹೋದ್ಯೋಗಿ ಹಾಗೂ ಸ್ನೇಹಿತ ರಾಘವ್ ವರ್ಮಾ ಜೊತೆಗೆ ಅವರು ಗುರ್ಗಾಂವ್ನ ಸೈಬರ್ ಸಿಟಿಯಲ್ಲಿ ಮೊದಲ ಚಾಯೋಸ್ ಅಂಗಡಿಯನ್ನು ತೆರೆದರು. ಅಲ್ಲದೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆದರು. ಸದ್ಯ ಇದು ಅವರಿಗೆ ಟೀ ಕೆಫೆಗಳ ಶಾಖೆಗಳನ್ನು ತೆರೆಯಲು ದಾರಿ ಮಾಡಿ ಕೊಟ್ಟಿತು. ಬೆಂಗಳೂರಿನಲ್ಲಿಯೂ ಒಂದು ಶಾಖೆ ಇದೆ. ಒಟ್ಟಿನಲ್ಲಿ ಇಂದು ಚಾಯೋಸ್ (Chaayos) ದೇಶಾದ್ಯಂತ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಸುಮಾರು 2051 ಕೋಟಿ ರೂ. ಆದಾಯ ಗಳಿಸುತ್ತಿದೆ.
ಓದುತ್ತಿದ್ದ ಸಂದರ್ಭದಲ್ಲಿ ಕಾಫಿ ಕುಡಿಯಲು 20 ರೂ. ಕೂಡ ಇರಲಿಲ್ಲ. ಆಗ ಗೆಳೆಯರ ಬಳಿಯಿಂದ ತಲಾ ಒಂದೊಂದು ರೂ. ಕಲೆಕ್ಟ್ ಮಾಡಿ ಕಾಫಿ ಕುಡಿದಿರುವ ಬಗ್ಗೆ ನಿತಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಅರ್ಥಶಾಸ್ತ್ರ ಪದವೀಧರೆಯಾಗಿದ್ದ ಪ್ರಿಯಾಂಕಾ ಗುಪ್ತಾ (Priyanka Gupta) 2 ವರ್ಷಗಳಿಂದ ಅಲೆದಾಡಿ ಕೆಲಸ ಸಿಗದೇ ಚಹಾದ ಅಂಗಡಿ ತೆರೆದಿದ್ದರು. ಟೀ ಸ್ಟಾಲ್ (Tea Stall) ತೆರೆಯಲು ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಪ್ರಿಯಾಂಕ `ಗ್ರಾಜುವೇಟ್ ಚಾಯಿವಾಲಿ’ (Graduate Chaiwali) ಎಂದು ಹೆಸರಿಟ್ಟಿದ್ದರು. ಚಾಯ್ ಸ್ಪೆಷಲಿಸ್ಟ್ ಆಗಿದ್ದ ಇವರ ಕೈ ರುಚಿ ಯುವಜನರನ್ನು ಬೇಗನೆ ಸೆಳೆಯುತ್ತಿದ್ದರು. ಉತ್ತಮವಾಗಿ ವ್ಯಾಪಾರ ನಡೆಯುತ್ತಿದ್ದ ಟೀಸ್ಟಾಲ್ ಅನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡಿಬಿಟ್ಟಿದ್ದರು. ಇದಾದ ಬಳಿಕ ಪ್ರಿಯಾಂಕ ಅವರ ಟೀಸ್ಟಾಲ್ ಗೆ ನಾನಾ ತೊಂದರೆಗಳು ಶುರುವಾಯಿತು. ಇದರಿಂದ ಬೇಸತ್ತು ಹೋದ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ (Political Leader) ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟಿದ್ದರು.
ಇತ್ತೀಚೆಗೆ ಮತ್ತೊಮ್ಮೆ `ಗ್ರಾಜುವೇಟ್ ಚಾಯಿವಾಲಿ’ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದು, ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕಾ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ
ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು. ಹೆಣ್ಣಿಗೆ ಮುಂದುವರೆಸಲು ಅವಕಾಶವಿಲ್ಲ. ಬಿಹಾರದ ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಅಕ್ರಮ ಕೆಲಸಗಳು ನಡೆಯುತ್ತವೆ. ಇಲ್ಲಿ ವ್ಯವಸ್ಥೆ ಜೀವಂತವಾಗಿಲ್ಲ. ಇಲ್ಲಿ ಹೆಣ್ಣೊಬ್ಬಳು ವ್ಯಾಪಾರ ಆರಂಭಿಸಿದರೆ ಅವಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಾರೆ. ನನ್ನ ಜೀವನವು ಅಡುಗೆ ಮನೆಗೆ, ನೆಲ ಗುಡಿಸೋದಕ್ಕೆ, ಮದುವೆಯಾಗೋಕೆ ಇದೆಯೇ ಹೊರತು ಮನೆಯಿಂದ ಹೊರಬಂದು ಸ್ವಂತ ವ್ಯವಹಾರ ಮಾಡೋದಕ್ಕೆ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’
ಕೆಲವರು ಇದಕ್ಕೆ ಋಣಾತ್ಮಕ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ, ಧನ್ಯವಾದಗಳು, ನೀವು ಮಹಿಳೆಯಾಗಿದ್ದೀರಿ, ಮನೆಯಲ್ಲಿದ್ದೀರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಅದು ಬಿಹಾರ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.
ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.
ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆನೇಕಲ್: ಶಾರ್ಟ್ ಸರ್ಕ್ಯೂಟ್ ನಿಂದ ಟೀ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಂಗಡಿಯ ಒಳಗಿದ್ದ ಪುಟ್ಟ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿಯಲ್ಲಿ ನಡೆದಿದೆ.
ಹೆಬ್ಬಗೋಡಿಯ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕವಾಗಿ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಂಗಡಿ ಮಾಲೀಕನ ಪುತ್ರಿ ಪಂಕಜ(11) ತಂದೆಯ ಜೊತೆಯಲ್ಲಿ ಅಂಗಡಿಯ ಒಳಗೆ ಇದ್ದಳು. ಈ ಸಂದರ್ಭದಲ್ಲಿ ಹೊತ್ತಿಕೊಂಡ ಬೆಂಕಿ ಅಂಗಡಿಯನ್ನು ಸಂಪೂರ್ಣವಾಗಿ ಆವರಿಸಿದ್ದು, ಶೇ.50ರಷ್ಟು ಭಾಗ ಮಗುವಿನ ದೇಹ ಸುಟ್ಟುಹೋಗಿದೆ.
ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ ಅಂಗಡಿಯಲ್ಲಿ ಬೆಂಕಿ ಹಾರಿಸಿದ್ದಾರೆ. ಶಾರ್ಟ್ ಸಕ್ರ್ಯೂಟ್ ಆದ ಸಂದರ್ಭದಲ್ಲಿ ಮತ್ತು ಸಿಲಿಂಡರ್ ಬ್ಲಾಸ್ಟ್ ಆಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪುಟ್ಟ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮೊಬೈಲ್ ಫೋನಿಗಾಗಿ ಜನ್ಮಕೊಟ್ಟ ತಾಯಿಯನ್ನೇ ಕೊಂದ ಮಗ!
ಸ್ಥಳಕ್ಕೆ ಆಗಮಿಸಿದ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾಟ್ನಾ: ಉನ್ನತ ಶಿಕ್ಷಣ ಪಡೆದರೂ ಹಲವು ಮಂದಿಗೆ ಕೆಲಸ ಸಿಗದೆ ಮನೆಯಲ್ಲಿಯೇ ಇರುವ ಅನೇಕ ಉದಾಹರಣೆಗಳು ಮನಮ್ಮ ಕಣ್ಣ ಮುಂದಿವೆ. ಆದರೆ ಇಲ್ಲೊಬ್ಬ ಯುವತಿ ಮಾತ್ರ ತನಗೆ ಕೆಲಸ ಸಿಕ್ಕಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಪರ್ಯಾಯ ಉಪಾಯ ಕಂಡುಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು. ಪ್ರಿಯಾಂಕಾ ಗುಪ್ತಾ ಪರ್ಯಾಯ ಮಾರ್ಗ ಕಂಡುಕೊಂಡು ಯಶಸ್ಸು ಕಂಡ ಯುವತಿ. ಪಾಟ್ನಾ ಮೂಲದವರಾಗಿರುವ ಈಕೆ 2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಇವರು ಸಾಕಷ್ಟು ಕಡೆಗಳಲ್ಲಿ ಪ್ರಯತ್ನಿಸಿದರೂ ಎಲ್ಲಿಯೂ ಉದ್ಯೋಗ ದೊರಕಲಿಲ್ಲ. ಬರೋಬ್ಬರಿ 2 ವರ್ಷಗಳಿಂದ ಹುಡುಕಿದರೂ ಕೆಲಸ ಸಿಗದ ಪರಿಣಾಮ 24 ವರ್ಷದ ಪ್ರಿಯಾಂಕಾ, ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಅಂತೆಯೇ ಚಹಾ ಅಂಗಡಿಯೊಂದನ್ನು ಓಪನ್ ಮಾಡಿದ್ದಾರೆ.
ಪಾಟ್ನಾದ ಮಹಿಳಾ ಕಾಲೇಜು ಮುಂದೆ ಚಹಾ ಅಂಗಡಿ ತೆರೆದು, ಇದೀಗ ಇದರಲ್ಲಿ ಯಶಸ್ಸು ಕಂಡಿದ್ದಾರೆ. ತಮ್ಮ ಅಂಗಡಿಯಲ್ಲಿ ಅತೀ ಕಡಿಮೆ ಬೆಲೆಗೆ ಕುಲ್ಹಾದ್ ಟೀ, ಮಸಾಲಾ ಟೀ, ಪಾನ್ ಚಹಾ ಮತ್ತು ಚಾಕ್ಲೇಟ್ ಟೀ ಮಾರಾಟ ಮಾಡುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಟೀ ಸ್ಟಾಲ್ ಹೆಚ್ಚು ಜನಪ್ರಿಯವಾಗಿದ್ದು, ಕೇವಲ 15ರಿಂದ 20ರೂ.ಗೆ ಚಹಾ ಮಾರಾಟ ಮಾಡುತ್ತಿರುವುದರಿಂದ ಇದೀಗ ಪ್ರಿಯಾಂಕಾ ಹೆಚ್ಚಿನ ಆದಾಯ ಸಹ ಗಳಿಸುತ್ತಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬ್ಯಾಂಕ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದ ಬಳಿಕ ಚಹಾ ಅಂಗಡಿ ಓಪನ್ ಮಾಡುವ ನಿರ್ಧಾರ ಮಾಡಿದ್ದೇನೆ. ಇದೀಗ ಸ್ವಂತ ಚಹಾ ಅಂಗಡಿ ನಡೆಸುತ್ತಿದ್ದು, ಆರಂಭದಲ್ಲಿ ನನ್ನ ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇದೀಗ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತದಿಂದ ವೈದ್ಯಕೀಯ ಉಪಕರಣ ಬಯಸಿದ ರಷ್ಯಾ
Bihar: Priyanka Gupta, an economics graduate sets up a tea stall near Women's College in Patna
I did my UG in 2019 but was unable to get a job in the last 2 yrs. I took inspiration from Prafull Billore. There are many chaiwallas, why can't there be a chaiwali?, she says pic.twitter.com/8jfgwX4vSK
ಪ್ರಿಯಾಂಕಾ ತಮ್ಮ ಟೀ ಸ್ಟಾಲ್‍ಗೆ ‘ಚಾಯ್ ವಾಲಿ’ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಬೆಂಗಳೂರಿನ ಎಂಬಿಎ ಚಾಯ್ ವಾಲಾ ಎಂದೇ ಖ್ಯಾತಿ ಪಡೆದಿರುವ ಪ್ರಫುಲ್ ಬಿಲೋರ್ ಅವರು ಮಾದರಿಯಂತೆ. ಅಲ್ಲದೆ ಅವರ ಅಂಗಡಿಯ ಕೆಲವೊಂದು ಪಂಚ್ ಲೈನ್ ಅನ್ನು ತಮ್ಮ ಅಂಗಡಿಯಲ್ಲಿ ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ದಾವಣಗೆರೆ: ಲಾಕ್‍ಡೌನ್‍ನಿಂದಾಗಿ ಎಲ್ಲ ವಲಯದ ಮೇಲೂ ಪರಿಣಾಮ ಬೀರಿದ್ದು, ದೇಶದ ಆರ್ಥಿಕತೆಯೇ ಏರುಪೇರಾಗಿದೆ. ಅದೇ ರೀತಿ ಸಣ್ಣ ವ್ಯಾಪಾರಿಗಳಿಗೂ ನಷ್ಟ ಉಂಟಾಗಿದ್ದು, ಚಹಾ ಅಂಗಡಿ ಮಾಲೀಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಚುಗಾರನಹಳ್ಳಿಯ ಪ್ರಕಾಶ್(45) ಸಾವನ್ನಪ್ಪಿದ ದುರ್ದೈವಿ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ವ್ಯಕ್ತಿ ಕೆರೆಗೆ ಹಾರಿದ್ದು, 3 ಗಂಟೆ ವೇಳೆಗೆ ವಿಷಯ ತಿಳಿದಿದೆ. ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.
ಈತ ದಾವಣಗೆರೆಯ ಆರ್ ಟಿಓ ಕಚೇರಿ ಮುಂಭಾಗ ಟೀ ಶಾಪ್ ನಡೆಸುತ್ತಿದ್ದ. ಲಾಕ್‍ಡೌನ್ ನಿಂದಾಗಿ ಮೂರು ತಿಂಗಳಿನಿಂದ ಚಹಾ ಅಂಗಡಿಯನ್ನು ಮುಚ್ಚಿದ್ದು, ಇದರಿಂದ ತೀವ್ರ ನಷ್ಟ ಉಂಟಾಗಿದೆ. ದುಡಿಮೆ ಇಲ್ಲದ್ದಕ್ಕೆ ಪ್ರಕಾಶ್ ಸಾಲ ಮಾಡಿಕೊಂಡಿದ್ದ. ಹೀಗಾಗಿ ಬೇಸತ್ತು ಕೆರೆಗೆ ಹಾರಿದ್ದಾನೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‍ನಲ್ಲಿ ಟೀ ಅಂಗಡಿಯನ್ನು ಇಟ್ಟಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಉಡುಪಿಗೆ ಹೋಗಿದ್ದ ವ್ಯಕ್ತಿಗೆ ಕೋವಿಡ್ 19 ಬಂದಿದೆ. ಕೊರೊನಾ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕ್ವಾರಂಟೈನ್ ಮಾಡಲು ಸಾಲು ಸಾಲು ಅಂಬುಲೆನ್ಸ್ ಗಳು ನಾಲ್ಕನೇ ಕ್ರಾಸ್‍ಗೆ ಬಂದಿದೆ.
ಒಟ್ಟು 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಅಂಗಡಿಯಿಂದ ಟೀ ಸೇವಿಸಿದ ವ್ಯಕ್ತಿಗಳನ್ನ ಸಂಪರ್ಕಿಸುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ.
ಕೊಮ್ಮಘಟ್ಟದಲ್ಲಿ 56 ವರ್ಷದ ಮಹಿಳೆಗೆ ಸೊಂಕು ಬಂದಿದೆ. ಕೊಮ್ಮಘಟ್ಟದ ಬಿಡಿಎ ಅಪಾಟ್ರ್ಮೆಂಟ್ ನಲ್ಲಿ ವಾಸವಿದ್ದ ಮಹಿಳೆ ಕೆಲ ದಿನಗಳಿಂದ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕೊವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ.