Tag: Tea Sales

  • ಚಹಾ ಮಾರಾಟ ಮಾಡ್ತಿದ್ದವ ಒಂದೇ ಪ್ರಯತ್ನಕ್ಕೆ NEET ಪಾಸ್ – ದೆಹಲಿಯಲ್ಲಿ AIIMS ಪ್ರವೇಶಕ್ಕೆ ಸಿದ್ಧ

    ಚಹಾ ಮಾರಾಟ ಮಾಡ್ತಿದ್ದವ ಒಂದೇ ಪ್ರಯತ್ನಕ್ಕೆ NEET ಪಾಸ್ – ದೆಹಲಿಯಲ್ಲಿ AIIMS ಪ್ರವೇಶಕ್ಕೆ ಸಿದ್ಧ

    ಡಿಸ್ಪುರ: ಅಸ್ಸಾಂನಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ NEET ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದು, ದೆಹಲಿಯ ಏಮ್ಸ್ ನಲ್ಲಿ ಪ್ರವೇಶ ಪಡೆಯಲು ಸಿದ್ಧನಾಗಿದ್ದಾನೆ.

    ಎನ್‍ಇಇಟಿ ಪಾಸ್ ಆದ ವಿದ್ಯಾರ್ಥಿ 24 ವರ್ಷದ ರಾಹುಲ್ ದಾಸ್. ಈತ ತನ್ನ ತಾಯಿ ನಡೆಸುತ್ತಿದ್ದ ಅಂಗಡಿಯಲ್ಲಿ ಗ್ರಾಹಕರಿಗೆ ಚಹ ಕೊಡುತ್ತಿದ್ದನು. ರಾಹುಲ್ ದಾಸ್ ಹಲವು ಸವಾಲುಗಳನ್ನು ಎದುರಿಸಿದ್ದು, ಕೆಲಸ ಮತ್ತು ಓದು ಎರಡನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾನೆ. ಪ್ರಸ್ತುತ ರಾಹುಲ್ ಚಹಾ ಮಾರಾಟ ಮಾಡುತ್ತಿದ್ದು, ಓದಿಕೊಂಡು ಎನ್‍ಇಇಟಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾನೆ. ಕೊನೆಗೂ ರಾಹುಲ್ ಶ್ರಮಕ್ಕೆ ಅಂತಿಮವಾಗಿ ಫಲ ಸಿಕ್ಕಿದೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

    ಛಲ ಬಿಡಲಿಲ್ಲ!
    ರಾಹುಲ್ ಅವರ ಜೀವನ ಸುಲಭವಾಗಿರಲಿಲ್ಲ. ರಾಹುಲ್ ಅವರ ತಾಯಿ 11 ವರ್ಷಗಳ ಹಿಂದೆಯೇ ತನ್ನ ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ಇಬ್ಬರು ಮಕ್ಕಳನ್ನು ಸಾಕಿದರು. ರಾಹುಲ್ 12ನೇ ತರಗತಿ ನಂತರ ಮುಂದೆ ಓದಲು ಆಗಲಿಲ್ಲ. ಆದರೆ ತನ್ನ ಛಲವನ್ನು ಮಾತ್ರ ಆತ ಬಿಟ್ಟಿರಲಿಲ್ಲ.

    ರಾಹುಲ್‍ಗೆ ವೈದ್ಯನಾಗುವ ಕನಸು ಬೆಟ್ಟದಷ್ಟು ಇತ್ತು. ಆದರೆ ಅಸ್ಸಾಂ ಪಟಾಚಾರ್ಕುಚಿ ಚೌಕ್ ಪ್ರದೇಶದಲ್ಲಿನ ತನ್ನ ತಾಯಿಯ ಅಂಗಡಿಯಲ್ಲಿ ಗ್ರಾಹಕರಿಗೆ ಚಾಹ ಕೊಟ್ಟು ಜೀವನ ಸಾಗಿಸುತ್ತಿದ್ದನು. ಆದರೆ ಸಮಯ ಸಿಕ್ಕಾಗೆಲ್ಲ ಓದಿಕೊಳ್ಳುತ್ತಿದ್ದ. ಕೊನೆಗೂ ರಾಹುಲ್ ಪ್ರಯತ್ನಕ್ಕೆ ಫಲ ಸಿಕ್ಕಿದೆ.

    ಈ ಕುರಿತು ಮಾತನಾಡಿದ ರಾಹುಲ್, ನನ್ನ ತಾಯಿ ನಮಗಾಗಿ ಕಷ್ಟಪಡುವುದನ್ನು ನಾನು ನೋಡಿದ್ದೇನೆ. ನಾವು ಅಂಗಡಿಯಲ್ಲಿ ಬೇರೆ ಸಹಾಯಕರನ್ನು ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಬಂದ ತಕ್ಷಣ ನಾನು ಅವಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದೆ. ನಾನು ಚಹಾವನ್ನು ತಯಾರಿಸಿ ಮಾರುತ್ತಿದೆ. ಸಮಯ ಸಿಕ್ಕಾಗೆಲ್ಲ ಅಧ್ಯಯನ ಮಾಡುತ್ತಿದೆ ಎಂದು ವಿವರಿಸಿದರು.

    Assam tea seller clears NEET in first attempt, set to take admission in  AIIMS-Delhi

    2015 ರಲ್ಲಿ ಅವರು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಹಣದ ಕೊರತೆಯಿಂದ ತಮ್ಮ ಅಧ್ಯಯನವನ್ನು ನಿಲ್ಲಿಸಿಬೇಕಾಯಿತು. ಆದರೂ ಉನ್ನತ ಶಿಕ್ಷಣಕ್ಕಾಗಿ ರಾಹುಲ್ ಎರಡು ವರ್ಷಗಳ ನಂತರ ಪ್ಲಾಸ್ಟಿಕ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಮಾಡಲು ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (CIPET) ಗೆ ಸೇರಿದ್ದು, ಮೂರು ವರ್ಷಗಳ ನಂತರ ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣನಾದೆ. ಕೋವಿಡ್-19 ಮಧ್ಯೆಯೂ 2020ರ ಅಕ್ಟೋಬರ್‍ನಲ್ಲಿ ಗುವಾಹಟಿಯ ಬಹು-ರಾಷ್ಟ್ರೀಯ ಕಂಪನಿಯಲ್ಲಿ ‘ಎಂಜಿನಿಯರ್’ ಆಗಿ ಕೆಲಸವನ್ನು ಪ್ರಾರಂಭಿಸಿದೆ ಎಂದು ತಿಳಿಸಿದರು.

    From next year, NEET compulsory for admissions into AIIMS and JIPMER too-  Edexlive

    ನಾನು ಏನೇ ಮಾಡಿದರೂ ನನಗೆ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ನಾನು ಯಾವಾಗಲೂ ವೈದ್ಯನಾಗಲು ಬಯಸುತ್ತಿದೆ. ನನ್ನ ಸೋದರ ಸಂಬಂಧಿಯೊಬ್ಬರು ದಂತ ಶಸ್ತ್ರಚಿಕಿತ್ಸಕರಾಗಿದ್ದಾರೆ. ಅವರು ನನಗೆ ಸ್ಫೂರ್ತಿಯಾಗಿದ್ದರು. ನನ್ನ ಓದಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಅದಕ್ಕೆ ನಾನು ನನ್ನ ಕೆಲಸವನ್ನು ಬಿಟ್ಟು ಆನ್‍ಲೈನ್‍ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಎನ್‍ಇಇಟಿ ಪರೀಕ್ಷೆ ಬರೆಯಲು ಸಿದ್ಧತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಮಾತಾಡಲ್ಲವೆಂದ ಬ್ಯಾಂಕ್ ಸಿಬ್ಬಂದಿ – ಮುತ್ತಿಗೆ ಹಾಕಿದ ರಕ್ಷಣಾ ವೇದಿಕೆ ಸದಸ್ಯರು

    ರಾಹುಲ್ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಏಕೆಂದರೆ ಅವರು ಬಜಾಲಿ ಜಿಲ್ಲೆಯಿಂದ ನವದೆಹಲಿಯ ಏಮ್ಸ್‍ನಲ್ಲಿ ಸೀಟು ಪಡೆದ ಮೊದಲಿಗರಾಗಿದ್ದಾರೆ ಎಂದು ಡೆಪ್ಯೂಟಿ ಕಮಿಷನರ್ ಸಂತೋಷ ವ್ಯಕ್ತಪಡಿಸಿದರು. ರಾಹುಲ್ ಅವರ ಎಲ್ಲ ಶಿಕ್ಷಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಘೋಷಿಸಿದ್ದಾರೆ ಎಂದು ದೇವಚೌಧರಿ ಹೇಳಿದರು.

  • ತಂದೆ ಇಲ್ಲ, ಕೊರೊನಾದಿಂದಾಗಿ ತಾಯಿಗೂ ಕೆಲಸವಿಲ್ಲ- ಟೀ ಮಾರಾಟಕ್ಕಿಳಿದ ಬಾಲಕ

    ತಂದೆ ಇಲ್ಲ, ಕೊರೊನಾದಿಂದಾಗಿ ತಾಯಿಗೂ ಕೆಲಸವಿಲ್ಲ- ಟೀ ಮಾರಾಟಕ್ಕಿಳಿದ ಬಾಲಕ

    – ಸಹೋದರಿಯರ ಶಿಕ್ಷಣಕ್ಕೆ ನೆರವು

    ಮುಂಬೈ: ಕೊರೊನಾ ಲಾಕ್‍ಡೌನ್ ಕಾರಣದಿಂದ ಕೆಲಸ ಕಳೆದುಕೊಂಡ ತಾಯಿಯ ನೆರವಿಗೆ ಬಂದ 14 ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ. ಆ ಮೂಲಕ ತನ್ನ ಇಬ್ಬರೂ ಸಹೋದರಿಯರ ಶಿಕ್ಷಣಕ್ಕೆ ನೆರವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ಭೆಂಡಿ ಬಜಾರ್ ಪ್ರದೇಶದ ಅಂಗಡಿಯಲ್ಲಿ ಚಹಾ ತಯಾರಿಸುವ ಬಾಲಕ ಸುಭಾನ್, ಹತ್ತಿರದ ಪ್ರದೇಶಗಳಲ್ಲಿ ಟೀ ಮಾರಾಟ ಮಾಡುತ್ತಾನೆ. ಬಾಲಕನಿಗೆ ಯಾವುದೇ ಟೀ ಅಂಗಡಿ ಇಲ್ಲದ ಕಾರಣ ಆತ ಜನರ ಬಳಿಯೇ ತೆರಳಿ ಟೀ ಮಾರಾಟ ಮಾಡುತ್ತಿದ್ದಾನೆ.

    ತನ್ನ ಕುಟುಂಬದ ಕುರಿತು ಮಾತನಾಡಿರುವ ಬಾಲಕ, ನನ್ನ ತಾಯಿ ಶಾಲಾ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಶಾಲೆಗಳು ಮುಚ್ಚಿರುವುದರಿಂದ ಕೆಲಸವಿಲ್ಲ. ಇದರಿಂದ ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಭೆಂಡಿ ಬಜಾರ್ ಅಂಗಡಿಯಲ್ಲಿ ಚಹಾ ಮಾಡಿ, ನಾಗಪಾಡ, ಭೆಂಡಿ ಬಜಾರ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400 ರೂ. ಗಳಿಸುತ್ತೇನೆ. ಇದು ನನ್ನ ತಾಯಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ.

    ನನ್ನ ಸಹೋದರಿಯರು ಆನ್‍ಲೈನ್ ಮೂಲಕ ಶಿಕ್ಷಣ ಮುಂದುವರಿಸಿದ್ದಾರೆ. ನಾನು ಶಾಲೆಗಳು ಪುನರ್ ಆರಂಭವಾದ ಬಳಿಕ ಶಿಕ್ಷಣವನ್ನು ಮುಂದುವರಿಸುತ್ತೇನೆ ಎಂದು ಸುಭಾನ್ ಹೇಳಿದ್ದಾನೆ. ಸುಭಾನ್ ತಂದೆ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಂದಿನಿಂದಲೇ ತಾಯಿಯವರು ಕುಟುಂಬವನ್ನು ನಡೆಸಿಕೊಂಡು ಬರುತ್ತಿದ್ದರು. ಸದ್ಯ ಶಾಲೆಗಳು ಮುಚ್ಚಿರುವ ಕಾರಣ ಕೆಲಸವನ್ನು ಕಳೆದುಕೊಂಡಿದ್ದಾರೆ.

  • ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ಪುಣೆ: ದುಡಿಯುವ ಮನಸ್ಸಿದ್ದರೆ ಯಾವುದೇ ಕೆಲಸವಾದ್ರೂ ಕೀಳಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ನಗರದ ಟೀ ವ್ಯಾಪಾರಿಯೊಬ್ಬರು ತಿಂಗಳಿಗೆ ಬರೋಬ್ಬರಿ 10-12 ಲಕ್ಷ ರೂ. ವರೆಗೆ ಸಂಪಾದನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪುಣೆ ಮೂಲದ ಯೆವ್ಲೆ ಟೀ ಹೌಸ್ ಈಗ ನಗರದಲ್ಲಿ ಪ್ರತಿಷ್ಠಿತ ಅಂಗಡಿಯಾಗಿ ಹೊರಹೊಮ್ಮಿದೆ. ಯೆವ್ಲೆ ಟೀ ಕಂಪನಿಯ ಸಹ ಸಂಸ್ಥಾಪಕ ನವನಾಥ್ ಯೆವ್ಲೆ ತಮ್ಮ ಈ ಉದ್ಯಮ ಹೇಗೆ ಬೆಳೆಯಿತೆಂಬ ಬಗ್ಗೆ ಮಾತನಾಡಿ, ಭಾರತೀಯರಿಗೆ ಟೀ ಮಾರಾಟ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದೆ. ಈ ಟೀ ವ್ಯಾಪಾರವೂ ಅತೀ ವೇಗವಾಗಿ ಬೆಳೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

    ನಮ್ಮ ಈ ಟೀ ಬ್ರಾಂಡ್ ಅತೀ ವೇಗವಾಗಿ ಬೆಳೆಯುತ್ತಿರುವುದನ್ನ ನೋಡಿ ನನಗೆ ತುಂಬಾ ಖುಷಿಯಾಗಿದೆ. ಈ ಟೀ ಮಾರಾಟವನ್ನ ಅಂತಾರಾಷ್ಟೀಯ ಮಟ್ಟದ ಬ್ರಾಂಡ್ ಆಗಿ ಪರಿವರ್ತಿಸಬೇಕೆಂಬುದು ನನ್ನ ಕನಸಾಗಿದೆ ಎಂದು ಹೇಳಿದರು.

    2011 ರಲ್ಲಿ ನವನಾಥ್ ಮತ್ತು ಅವರ ಪಾಲುದಾರರು ಈ ಟೀ ಅಂಗಡಿ ಪ್ರಾರಂಭ ಮಾಡಲು ಯೋಚಿಸಿದರು. ನಾಲ್ಕು ವರ್ಷಗಳ ಸತತ ಅಧ್ಯಯನದ ನಂತರ ಉತ್ಪನ್ನದ ಗುಣಮಟ್ಟವನ್ನ ಅಂತಿಮಗೊಳಿಸಲಾಯ್ತು.

    ನಗರದಲ್ಲಿ ಈಗ 2 ಅಂಗಡಿಗಳಿದ್ದು ಪ್ರತಿ ಅಂಗಡಿಯಲ್ಲಿ ಸುಮಾರು 12 ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರದ ವರೆಗೂ ಟೀ ಮಾರಾಟವಾಗುತ್ತಿದೆ. ಪ್ರತಿ ತಿಂಗಳಿಗೆ 10-12 ಲಕ್ಷದ ವರೆಗೂ ಸಂಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ 100 ಅಂಗಡಿಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ನವನಾಥ್ ತಿಳಿಸಿದ್ದಾರೆ.