Tag: tea flask

  • ಟೀ ಫ್ಲಾಸ್ಕ್ ನಲ್ಲಿ ಪತ್ತೆಯಾಯ್ತು ನಾಗರಹಾವಿನ ಮರಿ !

    ಟೀ ಫ್ಲಾಸ್ಕ್ ನಲ್ಲಿ ಪತ್ತೆಯಾಯ್ತು ನಾಗರಹಾವಿನ ಮರಿ !

    ಬೆಂಗಳೂರು: ಟೀ ಫ್ಲಾಸ್ಕ್ ನಲ್ಲಿ ನಾಗರಹಾವು ಪತ್ತೆಯಾದ ಘಟನೆ ಬೆಂಗಳೂರಿನ ಹೇರೋಹಳ್ಳಿ ವಾರ್ಡ್ ಅಂದ್ರಹಳ್ಳಿಯ ಅಪಾರ್ಟ್‍ಮೆಂಟ್ ನಲ್ಲಿ ನಡೆದಿದೆ.

    ಮನೆ ಮುಂದೆ ಫ್ಲಾಸ್ಕ್ ತೊಳೆದಿಟ್ಟಿದ್ದಾಗ ನಾಗರಹಾವಿನ ಮರಿ ಫ್ಲಾಸ್ಕ್ ಒಳಗೆ ಸಿಕ್ಕಿಹಾಕಿಕೊಂಡಿದೆ. ಹರೀಶ್ ಎಂಬುವರ ಮನೆಯಲ್ಲಿಟ್ಟಿದ್ದ ಫ್ಲಾಸ್ಕ್ ತೆಗೆಯಲು ಹೋದಾಗ ಎರಡೂವರೆ ಅಡಿ ಉದ್ದದ ಹಾವು ಪತ್ತೆಯಾಗಿದೆ.

    ವನ್ಯಜೀವಿ ಸಂರಕ್ಷಕರೊಬ್ಬರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ.