Tag: TDR

  • ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ – ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ

    ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ – ಸಿಜೆಐ ಪೀಠಕ್ಕೆ ಪ್ರಕರಣ ವರ್ಗಾವಣೆ

    – ತ್ರಿಸದಸ್ಯ ಪೀಠದಲ್ಲಿ ವಿಚಾರಣೆ?

    ನವದೆಹಲಿ: ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ (TDR) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸಲು ತಿರ್ಮಾನ ಕೈಗೊಳ್ಳಲು ಸಿಜೆಐ ಬಿ.ಆರ್ ಗವಾಯಿ ಪೀಠಕ್ಕೆ ವರ್ಗಾಯಿಸಿದೆ.

    ಬೆಂಗಳೂರು ಅರಮನೆ ಮೈದಾನದ (Bengaluru Palace Ground) 15 ಎಕರೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜಮನೆತನದ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ನೀಡಿದ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ : ಪರಮೇಶ್ವರ್‌ ಅಧಿಕೃತ ಘೋಷಣೆ

    ಇಂದು ಈ ಅರ್ಜಿಯನ್ನು ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಈಗಾಗಲೇ ದ್ವಿಸದಸ್ಯ ಪೀಠದಿಂದ ಆದೇಶ ನೀಡಿರುವ ಹಿನ್ನೆಲೆ ಮತ್ತೆ ಇದನ್ನು ದ್ವಿಸದಸ್ಯ ಪೀಠದಲ್ಲೇ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿತು. ಹೀಗಾಗೀ ಇದನ್ನು ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸುವ ಬಗ್ಗೆ ಸಿಜೆಐ ಬಿ.ಆರ್ ಗವಾಯಿ ಪೀಠ ತಿರ್ಮಾನ ಕೈಗೊಳ್ಳಬೇಕಿರುವ ಹಿನ್ನೆಲೆ ಅವರ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿತು. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಹೆಚ್ಚಳ, ಸದ್ಯಕ್ಕೆ ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ

     

    ಸೋಮವಾರ ಇದೇ ಪ್ರಕರಣ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತ್ತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿದ ಪೀಠ, ಮತ್ತೊಂದು ಪೀಠವು ನೀಡಿದ ಆದೇಶವನ್ನು ನಾವು ಹೇಗೆ ಪರಿಶೀಲಿಸಬಹುದು ಎಂದು ಕೇಳಿತು. ಇದನ್ನೂ ಓದಿ: ಮಾಜಿ ಸಚಿವ ವೀರಕುಮಾರ ಪಾಟೀಲ ಪುತ್ರ ಪ್ರೀತಮ್ ಅರೆಸ್ಟ್

    ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಸಿಬಲ್, ಕರ್ನಾಟಕ ಪಟ್ಟಣ ಮತ್ತು ದೇಶ ಯೋಜನಾ ಕಾಯ್ದೆಗೆ 2004ರ ತಿದ್ದುಪಡಿಯ ಮೂಲಕ ಪರಿಚಯಿಸಲಾದ ಟಿಡಿಆರ್ ನಿಬಂಧನೆಯನ್ನು 1996ರಲ್ಲಿ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪೂರ್ವಾನ್ವಯವಾಗಿ ಅನ್ವಯಿಸಲಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಉಚ್ಚಾಟನೆಯನ್ನು ನಿರೀಕ್ಷಿಸಿದ್ದೆವು, ಒಳ್ಳೆಯದಾಯ್ತು: ಎಸ್‌ಟಿ ಸೋಮಶೇಖರ್

    ಟಿಡಿಆರ್ ನಿಬಂಧನೆ ಇರುವ ಮೊದಲೇ 15 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಯಾವುದೇ ಪರಿಹಾರವನ್ನು ಈಗಾಗಲೇ ಮೂಲ ಕಾಯ್ದೆಯಡಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    ಈ ಸ್ವಾಧೀನವು 1996ರ ಕಾನೂನಿನ ಅಡಿಯಲ್ಲಿ ನಡೆದಿದ್ದು, 11 ಕೋಟಿ ರೂ.ಗಳ ಪರಿಹಾರವನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಟಿಡಿಆರ್ ಪರಿಕಲ್ಪನೆ ಅಸ್ತಿತ್ವದಲ್ಲಿರಲಿಲ್ಲ. ಟಿಡಿಆರ್‌ಗೆ ಅವಕಾಶ ನೀಡುವ ಸೆಕ್ಷನ್ 14 ಬಿ ಅನ್ನು 2004ರಲ್ಲಿ ಮಾತ್ರ ಪರಿಚಯಿಸಲಾಯಿತು ಮತ್ತು ಭೂಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಭೂಮಿಯನ್ನು ಬಿಟ್ಟುಕೊಡುವಲ್ಲಿ ಮಾತ್ರ ಅನ್ವಯಿಸುತ್ತದೆ ಮತ್ತು ರಾಜ್ಯವು ಅದನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಅಲ್ಲ, ಎಂದು ಹೇಳಿದರು. ಇದನ್ನೂ ಓದಿ: ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಈ ವಿವಾದವು 1997ರ ಹಿಂದಿನದು. ರಾಜಮನೆತನವು 1996ರ ಕಾಯ್ದೆಯ ಸಿಂಧುತ್ವವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಮತ್ತು ಅರ್ಜಿ ಇನ್ನೂ ಬಾಕಿ ಇದೆ ಎಂದ ಸಿಬಲ್, ನ್ಯಾಯಾಂಗ ನಿಂದನೆಯ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸೆಕ್ಷನ್ 14 ಬಿ ಅಡಿಯಲ್ಲಿ ಅವರ ಕಾನೂನು ಆಕ್ಷೇಪಣೆಗಳನ್ನು ಪರಿಹರಿಸಲು ಪೀಠ ವಿಫಲವಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಅಪಘಾತವಾಗಿದ್ದ ಕಾರು ತೆರವು ಮಾಡ್ತಿದ್ದವರ ಮೇಲೆ ಹರಿದ ಟ್ರಕ್ – ಆರು ಮಂದಿ ಸಾವು

    ಪ್ರಸ್ತುತ ಪೀಠವು ಸಮನ್ವಯ ಪೀಠವು ನೀಡಿದ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಬಹುದೇ ಎಂದು ಪೀಠ ಪ್ರಶ್ನಿಸಿತು. ರಾಜ್ಯ ಸರ್ಕಾರವು ಹಿಂದಿನ ಆದೇಶವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿಲ್ಲ, ಆದರೆ ಅದನ್ನು ಖಚಿತಪಡಿಸಿಕೊಳ್ಳಲು ಮಾತ್ರ ಪ್ರಯತ್ನಿಸುತ್ತಿದೆ ಎಂದು ಸಿಬಲ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಮೇ 22ರಂದು ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಮತ್ತೊಂದು ಪೀಠವು ನ್ಯಾಯಾಂಗ ನಿಂದನೆ ವಿಚಾರಣೆಯಲ್ಲಿ ರಾಜಮನೆತನದ ಉತ್ತರಾಧಿಕಾರಿಗಳಿಗೆ 3,011 ಕೋಟಿ ರೂ. ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

  • ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ

    ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ

    ನವದೆಹಲಿ: ಮೈಸೂರು ರಾಜ ಮನೆತನಕ್ಕೆ 3,400 ಕೋಟಿ ರೂ. ಟಿಡಿಆರ್ (TDR) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ (Supreme Court) ಮತ್ತೊಂದು ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ (State Government) ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಕೋರ್ಟ್‌ನಲ್ಲಿ ಠೇವಣಿ ಇಟ್ಟಿರುವ ಟಿಡಿಆರ್ ಅನ್ನು ರಾಜಮನೆತನಕ್ಕೆ ವರ್ಗಾಯಿಸದಂತೆ ಮನವಿ ಮಾಡುವ ಸಾಧ್ಯತೆಯಿದೆ.

    ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15 ಎಕರೆಗಳಿಗೂ ಅಧಿಕ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 3,400 ಕೋಟಿ ರೂ.ಗಳ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ತನ್ನಲ್ಲಿ ಠೇವಣಿ ಇಡುವಂತೆ ಕೋರ್ಟ್ ಸೂಚನೆ ನೀಡಿತ್ತು.ಇದನ್ನೂ ಓದಿ: ಮಾರಿಷಸ್‌ನಲ್ಲಿ ಹೊಸ ಸಂಸತ್ ನಿರ್ಮಾಣಕ್ಕೆ ಭಾರತದ ಸಹಕಾರ: ಪ್ರಧಾನಿ ಮೋದಿ

    ಕಳೆದ ವಿಚಾರಣೆಯಲ್ಲಿ ರಿಜಿಸ್ಟಾರ್ ಬಳಿ ಟಿಡಿಆರ್ ಠೇವಣಿ ಇಡಲು ಪೀಠ ಸೂಚಿಸಿತ್ತು. ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಕಪಿಲ್ ಸಿಬಲ್, ಇದನ್ನು ರಾಜಮನೆತನಕ್ಕೆ ನೀಡುವುದಿಲ್ಲ ಎನ್ನುವ ಬಗ್ಗೆ ಖಾತ್ರಿ ಕೇಳಿದ್ದರು. ಆದರೆ ಇದಕ್ಕೆ ನಿರಾಕರಿಸಿದ್ದ ಕೋರ್ಟ್ ಇದನ್ನು ನೀವು ನಮಗೆ ಹೇಳಿವಂತಿಲ್ಲ ಎಂದು ಹೇಳಿತ್ತು.

    ಸದ್ಯ ನ್ಯಾಯಾಂಗ ನಿಂದನೆಯಿಂದ ಪಾರಾಗಲು ಮಾ.7 ರಂದು ಟಿಡಿಆರ್ ಅನ್ನು ಠೇವಣಿ ಇಟ್ಟಿರುವ ಸರ್ಕಾರ ಅದನ್ನು ಕೋರ್ಟ್ ಮೂಲಕವೇ ರಾಜಮನೆತನ ಪಡೆಯಬಹುದು ಎನ್ನುವ ಭೀತಿಯಲ್ಲಿದೆ. ಹೀಗಾಗಿ ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಮನವಿ ಮಾಡಿ, ಪ್ರತ್ಯೇಕ ಅರ್ಜಿಯೊಂದನ್ನು ಸೋಮವಾರ ಸಲ್ಲಿಕೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.ಇದನ್ನೂ ಓದಿ: ನಾರಿಮಣಿಯರ ಮನಗೆದ್ದ ಬ್ಯೂಟಿಫುಲ್ ಫ್ರಾಕ್‌ಗಳಿವು

     

  • ಅರಮನೆ ಮೈದಾನ | ಹತ್ತು ದಿನಗಳಲ್ಲಿ ಎರಡು ಟಿಡಿಆರ್ ಕೋರ್ಟ್‌ಗೆ ಸಲ್ಲಿಸಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ಅರಮನೆ ಮೈದಾನ | ಹತ್ತು ದಿನಗಳಲ್ಲಿ ಎರಡು ಟಿಡಿಆರ್ ಕೋರ್ಟ್‌ಗೆ ಸಲ್ಲಿಸಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಬೆಂಗಳೂರಿನ ಅರಮನೆ ಮೈದಾನದ (Palace Ground) ಜಮೀನಿಗೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (TDR) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ತಾತ್ಕಾಲಿಕ ರಿಲೀಫ್ ಸಿಕ್ಕಿದೆ. 3,400 ಕೋಟಿ ಮೌಲ್ಯದ ಟಿಡಿಆರ್ ಅನ್ನು ರಾಜವಂಶಸ್ಥರಿಗೆ ನೀಡುವ ಬದಲು ಸುಪ್ರೀಂ ಕೋರ್ಟ್ ರಿಜಿಸ್ಟಾರ್‌ನಲ್ಲಿ ಜಮೆ ಮಾಡುವಂತೆ ಸೂಚಿಸಿದೆ.

    ನ್ಯಾ. ಅರವಿಂದ್ ಕುಮಾರ್, ನ್ಯಾ. ಸುಂದರೇಶ್ ನೇತೃತ್ವದ ಪೀಠ ಪ್ರಕರಣದ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ಕಪಿಲ್ ಸಿಬಲ್ (Kapil Sibal) 3400 ಕೋಟಿ ರೂ. ಟಿಡಿಆರ್ ಅನ್ನು ನೀಡಲು ಸಾಧ್ಯವಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಲಿದೆ, ಸಾರ್ವಜನಿಕ ಹಿತಾಸಕ್ತಿ ಕಾರಣದಿಂದ ಜನರ ತೆರಿಗೆ ಹಣ ಹೀಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂದರು.

    15 ಎಕರೆಯಷ್ಟು ಜಮೀನಿಗೆ ಈ ಪ್ರಮಾಣದ ಹಣ ನೀಡಿದರೆ 460 ಎಕರೆ ಭೂಮಿಗೆ ಒಂದೂವರೆ ಕೋಟಿ ಮೌಲ್ಯದ ಟಿಡಿಆರ್ ನೀಡಬೇಕಾಗುತ್ತದೆ. ನಾವು 1,270 ಚದರ ಮೀಟರ್ ಭೂಮಿಯನ್ನು ಅಂಡರ್ ಪಾಸ್‌ಗೆ ಬಳಕೆ ಮಾಡಿದರೆ ಇದಕ್ಕಾಗಿ 49 ಕೋಟಿ ರೂ. ಟಿಡಿಆರ್ ನೀಡಬಹುದು. ಆದರೆ ಅರಮನೆಯ ಭೂಮಿಯನ್ನು ನಾವು ಬಳಕೆಯೇ ಮಾಡಿಲ್ಲ. ಹೀಗಾಗಿ ಟಿಡಿಆರ್ ನೀಡುವ ಪ್ರಮೇಯ ಬರುವುದಿಲ್ಲ ಎಂದು ವಾದಿಸಿದರು.

    ಇದರ ಜೊತೆಗೆ 1996 ರಲ್ಲಿ ಆದ ಭೂ ಸ್ವಾಧೀನದ ಆಧಾರದ ಮೇಲೆ ಭೂಮಿಯ ದರ ನಿಗದಿಯಾಗಬೇಕು. ಆದರೆ ಈಗ 2024 ರ ಆಧಾರದ ಮೇಲೆ ಟಿಡಿಆರ್ ಕೇಳಲಾಗುತ್ತಿದೆ. ಬಳಕೆಯಾಗದ ಭೂಮಿಗೆ ಸರ್ಕಾರ ಜನರ ತೆರಿಗೆಯನ್ನು ಯಾಕೆ ನೀಡಬೇಕು ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ‘ದೇಶೀಯ ಕಾರ್ಗೋ ಟರ್ಮಿನಲ್’ ಪ್ರಾರಂಭ

    ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ. ಸುಂದರೇಶ್, ನೀವೂ ಭೂಮಿಯನ್ನು ಬಳಕೆ ಮಾಡಿಲ್ಲ. ಆದರೆ ಬಿಟ್ಟುಕೊಡುತ್ತಿಲ್ಲ ಎಂದು ಅರ್ಜಿದಾರರು ವಾದಿಸುತ್ತಿದ್ದಾರಲ್ಲ ಎಂದು ಪ್ರಶ್ನಿಸಿದರು.

    ಇದಕ್ಕೆ ಉತ್ತರಿಸಿದ ಸಿಬಲ್, ಈಗಾಗಲೇ ಅಫಿಡವಿಟ್ ನಲ್ಲಿ ನಾವು ಭೂಮಿಯನ್ನು ಬಳಕೆ ಮಾಡಿಲ್ಲ ಎನ್ನುವುದಕ್ಕೆ ಸಾಕ್ಷ್ಯಗಳನ್ನು ನೀಡಿದ್ದೇವೆ, ಈ ಪ್ರಮಾಣದ ಟಿಡಿಆರ್ ನೀಡಿದರೆ ಯೋಜನಾ ವೆಚ್ಚ ಹೆಚ್ಚಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಯೋಜನೆ ಸರ್ಕಾರಕ್ಕೆ ಹೊರೆಯಾಗಲಿದೆ. ಭೂಮಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಇತರೇ ಅರ್ಜಿಗಳು ವಿಚಾರಣೆ ಹಂತದಲ್ಲಿದೆ. ಈ ನಡುವೆ ನಾವು ಭೂಮಿ ಬಳಕೆ ಮಾಡಿಲ್ಲ ಹೀಗಾಗಿ ಈ ಭೂಮಿ ಅವರದೇ ಎಂದು ಉತ್ತರಿಸಿದರು.

    ವಾದ ಮತ್ತು ಪ್ರತಿವಾದ ಆಲಿಸಿದ ಪೀಠ, ಎರಡು ಟಿಡಿಆರ್‌ಗಳನ್ನು ನ್ಯಾಯಾಲಯದ ನೋಂದಣಿಯೊಂದಿಗೆ ಹತ್ತು ದಿನಗಳ ಒಳಗೆ ಕೋರ್ಟ್ ಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು. ಮಾರ್ಚ್ 20 ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಕಪಿಲ್ ಸಿಬಲ್, ನಾವು ನ್ಯಾಯಾಲಯಕ್ಕೆ ಟಿಡಿಆರ್ ನೀಡುತ್ತೇವೆ. ಅದನ್ನು ಬಳಕೆ ಮಾಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಬೇಕು ಎಂದರು. ಇದಕ್ಕೆ ಉತ್ತರಿದ ಪೀಠ ಈ ರೀತಿಯ ಒತ್ತಡ ನೀವು ಹಾಕುವಂತಿಲ್ಲ ಎಂದು ಉತ್ತರಿಸಿತು.