Tag: TC

  • ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

    ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

    ಮಡಿಕೇರಿ: ಕೊಡಗಿನ ಶಾಲೆಯಲ್ಲಿ ಭಜರಂಗದಳ ವಿಶ್ವ ಹಿಂದೂ ಪರಿಷತ್‍ನ ಶೌರ್ಯ ಪ್ರಶಿಕ್ಷಣ ತರಬೇತಿ ವಿವಾದದ ವಿಚಾರದಲ್ಲಿ ಕಡೆಗೂ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದೆ. ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲ ಎಂದು ಶಾಲಾಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದರ ನಡುವೆ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆ ಬಿಟ್ಟಿರೋದು ಹೊಸ ವಿವಾದಕ್ಕೆ ಮುನ್ನುಡಿ ಬರೆದಿದೆ.

    MDK

    ಕೊಡಗು ಜಿಲ್ಲೆಯ ಪೊನ್ನಂಪೇಟೆ  ತಾಲೂಕಿನ ಶ್ರೀ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನಡೆಸಿದ್ದ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದ್ದು, ಶಾಲಾ ವ್ಯಾಪ್ತಿಯಲ್ಲಿ ಬಂದೂಕು ತರಬೇತಿ ನಡೆದಿಲ್ಲ ಎಂದು ಸ್ಪಷ್ಪಡಿಸಿದೆ. ಅಲ್ಲದೆ ರಾಜಕೀಯ ವಿಚಾರಕ್ಕೆ ಶಾಲೆಯ ಹೆಸರನ್ನು ಎಳೆದು ತರದಂತೆ ಮನವಿ ಮಾಡಿದೆ. ಇದೇ ವೇಳೆ ಮಹತ್ವದ ಮಾಹಿತಿ ನೀಡಿರುವ ಶಾಲಾ ಆಡಳಿತ ಮಂಡಳಿ, ದುಬೈ ಕರೆಯ ಬಗ್ಗೆ ಹೊಸ ಬಾಂಬ್ ಸಿಡಿಸಿದೆ. ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಕರೆಯ ಪರಿಣಾಮ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆ ಎಂದಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಇದು ಸದ್ಯ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಮೂವರು ವಿದ್ಯಾರ್ಥಿಗಳ ಪೋಷಕರಿಗೆ ವಿದೇಶದಿಂದ ದೂರವಾಣಿ ಕರೆ ಮಾಡಿ ತಮ್ಮ ಮಕ್ಕಳನ್ನು ಆ ಶಾಲೆಯಲ್ಲಿ ಓದಿಸಬೇಡಿ ಆ ಶಾಲೆಗೆ ನೀವು ಕಟ್ಟಿರುವ ಶಾಲಾ ಶುಲ್ಕವನ್ನು ನಾವು ಪಾವತಿ ಮಾಡುತ್ತೇವೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಓದುವ ಶಾಲೆಗೆ ಸೇರಿಸುವಂತೆ ಕರೆ ಬಂದಿರುವ ಮಾಹಿತಿ ಇದೆ. ಹಾಗಾಗಿ ಹೊರ ದೇಶದಿಂದ ಕರೆ ಮಾಡಿದವರ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ವಿದೇಶದಿಂದ ಕರೆ ಬಂದಿದ್ದು ಯಾರಿಂದ ಅದನ್ನು ಸಂಬಂಧಿಸಿದಂತೆ ಇಲಾಖೆ ತನಿಖೆ ನಡೆಸಬೇಕು ಎಂದು ವಿಎಚ್‍ಪಿ ಅಧ್ಯಕ್ಷ ಕೃಷ್ಣಮೂರ್ತಿ ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ ಮಂದಣ್ಣ

    ಪ್ರಕರಣದ ಕೇಂದ್ರ ಬಿಂದುವಾಗಿದ್ದ ಶ್ರೀ ಸಾಯಿ ವಿದ್ಯಾಸಂಸ್ಥೆ ಕಡೆಗೂ ಮೌನ ಮುರಿದು ಹೊಸ ಬಾಂಬ್ ಸಿಡಿಸಿದೆ. ತರಬೇತಿ ಶಾಲಾ ವ್ಯಾಪ್ತಿಯಲ್ಲಿ ನಡೆದಿಲ್ಲ ಅನ್ನೋದಕ್ಕಿಂತ ಸದ್ಯ ಪ್ರಕರಣದ ಬಳಿಕ ಹೊರ ದೇಶದಿಂದ ಬಂದ ಕರೆ ಹಾಗೂ ಶಾಲೆಯಿಂದ ಮೂವರು ಮುಸ್ಲಿಂ ಮಕ್ಕಳು ಟಿಸಿ ಪಡೆದು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ಸಾರಿಗೆ ಮುಷ್ಕರ- ಮಡಿಕೇರಿಯಲ್ಲಿ ನಿರ್ವಾಹಕರಾದ ಟಿಸಿ

    ಸಾರಿಗೆ ಮುಷ್ಕರ- ಮಡಿಕೇರಿಯಲ್ಲಿ ನಿರ್ವಾಹಕರಾದ ಟಿಸಿ

    ಮಡಿಕೇರಿ: ಆರನೆ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಕೊಡಗಿನಲ್ಲೂ ಮುಷ್ಕರ ಮುಂದುವರಿದಿದೆ. ಇದರ ನಡುವೆ ತರಬೇತಿ ಪಡೆಯುತ್ತಿರುವ ಚಾಲಕರನ್ನು ಉಪಯೋಗಿಸಿಕೊಂಡು ಮಡಿಕೇರಿ ಘಟಕದ ಮೂರು ಬಸ್‍ಗಳನ್ನು ಭಾನುವಾರ ಚಾಲನೆ ಮಾಡಿದ್ದು, ಸಂಚಾರಿ ನಿಯಂತ್ರಣಾಧಿಕಾರಿಗಳೇ ಬಸ್‍ಗಳಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.

    ಮಡಿಕೇರಿಯಿಂದ ಕುಶಾಲನಗರ ಮತ್ತು ಪುತ್ತೂರು ಮಾರ್ಗಗಳಲ್ಲಿ ಮೂರು ಬಸ್ಸುಗಳು ಕೇವಲ ಒಂದು ಟ್ರಿಪ್ ಮಾತ್ರವೇ ಸಂಚರಿಸಿದ್ದು, ಈ ವೇಳೆ ನಿಯಂತ್ರಣಾಧಿಕಾರಿಗಳೇ ನಿರ್ವಾಹಕರ ಕೆಲಸ ಮಾಡಿದ್ದಾರೆ. ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಆಗಮಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು, ಸಫಲವಾಗಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ಟ್ರೈನಿ ಚಾಲಕರಿಂದ ಬಸ್‍ಗಳನ್ನು ಓಡಿಸಲಾಗಿದ್ದು, ನಿಯಂತ್ರಣಾಧಿಕಾರಿಗಳೇ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

    ಮೂರು ಬಸ್‍ಗಳು ಮಡಿಕೇರಿ ನಿಲ್ದಾಣದಿಂದ ಸಂಚರಿಸಿದ್ದರೆ, ಮೈಸೂರು ಮತ್ತು ಬೆಂಗಳೂರಿನಿಂದ ವಿರಾಜಪೇಟೆಗೆ ಹತ್ತು ಬಸ್‍ಗಳು ಸಂಚರಿಸಿವೆ. ಆದರೆ ಎಲ್ಲ ಬಸ್‍ಗಳಿಗೂ ಪ್ರಯಾಣಿಕರ ಕೊರತೆ ಕಾಡಿದೆ.

  • ಬಸ್ ಸ್ಟ್ಯಾಂಡ್ ರೋಮಿಯೋಗಳನ್ನು ಕಾಲೇಜಿಗೆ ಕಳುಹಿಸಿಲು ಟಿಸಿ ಮಾಸ್ಟರ್ ಪ್ಲಾನ್

    ಬಸ್ ಸ್ಟ್ಯಾಂಡ್ ರೋಮಿಯೋಗಳನ್ನು ಕಾಲೇಜಿಗೆ ಕಳುಹಿಸಿಲು ಟಿಸಿ ಮಾಸ್ಟರ್ ಪ್ಲಾನ್

    ಹಾಸನ: ಕಾಲೇಜಿಗೆ ತೆರಳದೆ ಬಸ್ ನಿಲ್ದಾಣದಲ್ಲೇ ಕುಳಿತು ಮೊಬೈಲ್‍ನಲ್ಲಿ ಗೇಮ್ ಆಡುವುದು, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತ ಕಾಲ ಕಳೆಯುತ್ತಿದ್ದ ಹುಡುಗರಿಗೆ ಟಿಸಿ ಬುದ್ಧಿ ಹೇಳಿ ಕಾಲೇಜಿಗೆ ಕಳುಹಿಸುತ್ತಿದ್ದಾರೆ.

    ಹಾಸನದ ಅರಸೀಕೆರೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದಾಗಿ ಊರಿನಿಂದ ಬಂದು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದರು. ಇವರಲ್ಲಿ ಕೆಲವರು ಬಸ್ ಸ್ಟ್ಯಾಂಡ್ ರೋಮಿಯೋಗಳ ರೀತಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯರು ಟಿಸಿ ಬಳಿ ಅಳಲು ತೋಡಿಕೊಂಡಿದ್ದರು.

    ಕಾಲೇಜಿಗೆ ಹೋಗಿ ಎಂದು ಟಿಸಿ ಬಾಯಿ ಮಾತಲ್ಲಿ ಹುಡುಗರಿಗೆ ಹೇಳಿದರೆ ಕ್ಯಾರೆ ಅನ್ನುತ್ತಿರಲಿಲ್ಲ. ಇದರಿಂದ ಹೊಸ ಉಪಾಯ ಮಾಡಿದ ಟಿಸಿ, ಮೊಬೈಲ್ ಕ್ಯಮೆರಾ ಆನ್ ಮಾಡಿ, ಯಾಕೆ ಇಲ್ಲಿ ಕುಳಿತಿದ್ದೀರಾ. ನಿಮಗೆ ಕಾಲೇಜ್ ಇಲ್ಲವೇ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಯಾವಾಗ ತಮ್ಮನ್ನು ವಿಡಿಯೋ ಮಾಡುತ್ತಿದ್ದಾರೆ ಎಂದು ತಿಳಿಯಿತೋ ಆಗ ಸಹಜವಾಗೇ ಹುಡುಗರು ಬಸ್ ಸ್ಟ್ಯಾಂಡ್‍ನಿಂದ ಕಾಲ್ಕಿತ್ತಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ಟಿಸಿ ಹೊತ್ತು ನೀರಿನಲ್ಲಿ ಈಜಿದ ಎತ್ತುಗಳು

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ಬಂಡಿ ಜೋಡಿಸಿದ ಎತ್ತುಗಳೊಂದಿಗೆ ರೈತರು ಸಾಹಸ ಮೆರೆದಿದ್ದಾರೆ. ಎತ್ತಿನ ಬಂಡಿಯಲ್ಲಿ ಟಿಸಿಯನ್ನು ಕೃಷ್ಣ ನದಿಯ ದಡ ಸೇರಿಸಿದ್ದಾರೆ.

    ಪ್ರಾಣ ಒತ್ತೆ ಇಟ್ಟು ಎತ್ತುಗಳಿಂದ ವಿದ್ಯುತ್ ಪರಿವರ್ತಕ (ಟಿ.ಸಿ)ಯನ್ನು ಸ್ಥಳಾಂತರ ಮಾಡಲಾಗಿದೆ. ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟುಹೋಗಿದ್ದ ಟಿಸಿಯನ್ನು ಇದೀಗ ಪ್ರವಾಹ ಕಡಿಮೆ ಆಗಿದ್ದರಿಂದ ಟಿಸಿ ದುರಸ್ತಿಗೆ ರೈತರು ತೆಗೆದುಕೊಂಡು ಹೋಗಿದ್ದಾರೆ.

    ಟಿಸಿ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸಾಹಸ ಮಾಡಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ಯುದಿದ್ದಾರೆ. ನೀರಲ್ಲಿ ಪೂರ್ತಿ ಮುಳುಗಿದ್ದರೂ ಎತ್ತುಗಳು ಬಂಡಿಯನ್ನು ಈಜಿಕೊಂಡು ದಡ ಸೇರಿಸಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.