Tag: TB Dam Water

  • ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

    ತುಂಗಭದ್ರಾ ಡ್ಯಾಂನ ಸರ್ಕಾರ ಕಂಟ್ರೋಲ್‌ ಮಾಡಲ್ಲ – ಡಿಕೆಶಿ ಸ್ಪಷ್ಟನೆ

    – 2 ದಿನಗಳಲ್ಲಿ ತಜ್ಞರ ಸಮಿತಿ, 4-5 ದಿನಗಳಲ್ಲಿ ಗೇಟ್‌ ರಿಪೇರಿ; ಡಿಸಿಎಂ ಗ್ಯಾರಂಟಿ

    ಬೆಂಗಳೂರು: ತುಂಗಭದ್ರಾ ಜಲಾಶಯವನ್ನ (Tungabhadra Dam) ರಾಜ್ಯ ಸರ್ಕಾರ ಕಂಟ್ರೋಲ್‌ ಮಾಡಲ್ಲ. ಅದಕ್ಕೇ ಆದ ಪ್ರತ್ಯೇಕ ಸಮಿತಿಯಿದೆ. ನಾವು ಸದಸ್ಯರು ಅಷ್ಟೇ. ಆದರೂ ಅದು ನಮ್ಮದೇ. ಇನ್ನೂ 4-5 ದಿನಗಳಲ್ಲಿ ಗೇಟ್‌ ರಿಪೇರಿ ಮಾಡುವ ಕೆಲಸ ಆಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅಭಯ ನೀಡಿದರು.

    ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಮ್‌ಗೆ ಹೋಗಿ ವೀಕ್ಷಣೆ ಮಾಡಿ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಡಿಸೈನ್‌ಗಳನ್ನ ಕಳಿಸಿಕೊಟ್ಟಿದ್ದೇವೆ. ಇನ್ನೂ 4-5 ದಿನಗಳಲ್ಲಿ ರಿಪೇರಿ ಕೆಲಸ ಆಗುತ್ತೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ (ಆ.13) ನಮ್ಮ ಸಿಎಂ ಹೋಗ್ತಾರೆ. ನಾನು ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಿಲ್ಲ ಎಂದು ಅಭಯ ನೀಡಿದರು. ಇದನ್ನೂ ಓದಿ: ಸುಳ್ಳು ವರದಿ ಪ್ರಕಟಿಸಿದ್ರೆ ಮಾಧ್ಯಮಗಳನ್ನು ಮುಚ್ಚುತ್ತೇವೆ: ಬಾಂಗ್ಲಾ ಸರ್ಕಾರ ಬೆದರಿಕೆ

    ಎರಡು ದಿನಗಳಲ್ಲಿ ತಜ್ಞರ ಸಮಿತಿ ರಚನೆ:
    ಡ್ಯಾಂ ಸ್ಥಿತಿ ಬಹಳ ಡೇಂಜರ್ ಇತ್ತು. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ಸುರಕ್ಷತೆಗಾಗಿ ಟೀಮ್ ಮಾಡಿ ಎಲ್ಲಾ ಡ್ಯಾಮ್‌ಗಳಿಗೂ ಕಳಿಸಿಕೊಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ತಜ್ಞರ ಸಮಿತಿ ರಚನೆ ಮಾಡ್ತೇವೆ. ಆ ಸಮಿತಿ ಎಲ್ಲಾ ಡ್ಯಾಮ್‌ಗಳಿಗೂ ವಿಸಿಟ್ ಮಾಡಿ ಪರಿಶೀಲಿಸುತ್ತದೆ. ಬೇರೆ ಕಡೆ ಡಬಲ್ ಆಪ್ಷನ್ಸ್ ಇದೆ, ಒಂದು ಗೇಟ್‌ಗೆ ಎರಡು ಲಿಂಕ್ ಇದ್ದಾವೆ. ಇಲ್ಲಿ ಒಂದೇ ಒಂದು ಚೈನ್ ಇತ್ತು, ಅದು ಕಟ್ ಆಗಿದೆ. ನೀರು, ನೋಡಿದ್ರೆ ಸ್ವಲ್ಪ ಸಮಸ್ಯೆಯಿತ್ತು. ನೀರು ಉಳಿಸಬಹುದು, 55-60 ಟಿಎಂಸಿ ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.

    ಇನ್ನೂ ಆಲಮಟ್ಟಿ ಡ್ಯಾಂಗೆ ಮಾನ್ಯತೆ ಕೊಟ್ಟಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಡಿಕೆಶಿ, ಆರೋಪ ಮಾಡುವವರು, ರಾಜಕೀಯ ಮಾತನಾಡುವವರು ಏನು ಬೇಕಾದರೂ ಮಾತಾಡಲಿ. ತುಂಗಭದ್ರಾ ಡ್ಯಾಂ ಸರ್ಕಾರ ಕಂಟ್ರೋಲ್ ಮಾಡಲ್ಲ. ಅದಕ್ಕೆ ಆದ ಕಮಿಟಿಯಿದೆ. ನಾವು ಸದಸ್ಯರು ಅಷ್ಟೇ. ಆದರೂ ಅದು ನಮ್ಮದೇ. ಏಕೆಂದರೆ ಹೆಚ್ಚಿನ ಬಳಕೆ ನಮ್ಮದು, ಹಾಗಾಗಿ ಜವಬ್ದಾರಿ ಹೆಚ್ಚಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: KRS ಡ್ಯಾಂನಲ್ಲೂ ಸ್ಟಾಪ್‌ ಲಾಕ್ ಗೇಟ್ ಇಲ್ಲ – ಈಗಲೇ ಎಚ್ಚೆತ್ತುಕೊಳ್ಳೋದು ಒಳ್ಳೆಯದು: ಹೆಚ್‌ಡಿಕೆ

    ಇದೇ ವೇಳೆ ವಾಲ್ಮೀಕಿ ಹಗರಣ ಸಂಬಂಧ ಬಿಜೆಪಿ ರೆಬೆಲ್‌ ನಾಯಕರಿಂದ ಮತ್ತೊಂದು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಮಾಡಲಿ, ಅವ್ರ ಪಾದಯಾತ್ರೆ ಯಶಸ್ವಿಯಾಗಲಿ ಎಂದು ವ್ಯಂಗ್ಯವಾಡಿದರು.

    ಬೆಂಗಳೂರಿಗೆ ಮಳೆ ಬೀಳಬೇಕು:
    ಅಲ್ಲದೇ ಬೆಂಗಳೂರಿನಲ್ಲಿ ಹಲವೆಡೆ ಮಳೆಯ ಸುರಕ್ಷತಾ ಕ್ರಮಗಳ ಕುರಿತು ಮಾತನಾಡಿ, ಬೆಂಗಳೂರಿಗೆ ಮಳೆ ಬೀಳಬೇಕು. ಅಂತರ್ಜಲ ಹೆಚ್ಚಬೇಕು, ಕನಕಪುರ, ಮಾಗಡಿ, ಚನ್ನಪಟ್ಟಣ, ತುಮಕೂರು, ಕುಣಿಗಲ್, ಕೋಲಾರ ಸುತ್ತಮುತ್ತ ಮಳೆ ಬಂದಿಲ್ಲ. ನಗರದಲ್ಲಿ ಇನ್ನೂ ಕೆರೆಗಳು ತುಂಬಿಲ್ಲ. ಆ ಕಡೆ ಮಳೆ ಬಂದಿದೆ ಡ್ಯಾಮ್‌ಗಳು ಫುಲ್ ಆಗಿವೆ. ಬೆಂಗ್ಳೂರಿಗೆ ಮಳೆ ಬೀಳಲಿ, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ್ರೆ ಸರಿಪಡಿಸೋಣ ಎಂದು ಹೇಳಿದರು. ಇದನ್ನೂ ಓದಿ: ಸುಳ್ಳು ವರದಿ ಪ್ರಕಟಿಸಿದ್ರೆ ಮಾಧ್ಯಮಗಳನ್ನು ಮುಚ್ಚುತ್ತೇವೆ: ಬಾಂಗ್ಲಾ ಸರ್ಕಾರ ಬೆದರಿಕೆ

  • ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ

    ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ

    – ವಿಶ್ವದಲ್ಲಿರುವ ಎಲ್ಲಾ ಟೆಕ್ನಾಲಜಿ ಬಳಸಿ, ಡ್ಯಾಂ ಸರಿಪಡಿಸುವಂತೆ ಆಗ್ರಹ

    ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra Dam) ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಬಹಿರಂಗ ಪಡಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ತುಂಗಭದ್ರಾ ಜಲಾಶಯದಲ್ಲಿ ಕಳಚಿಕೊಂಡ 19ನೇ ಕ್ರಸ್ಟ್‌ಗೇಟ್‌ (TB Dam crest gate collapse) ವೀಕ್ಷಣೆ ಮಾಡಿದ ಶಾಸಕ ಜನಾರ್ದನ ರೆಡ್ಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತುಂಗಭದ್ರಾ ಜಲಾಶಯದ ನಿರ್ವಹಣೆಗೆ ಯಾರಿಗೆ ಕೊಟ್ಟಿದ್ದಾರೆ? ಇದಕ್ಕೆ ಎಲ್ಲಾ ಸರ್ಕರವೇ ಹೊಣೆ. ಡಿಕೆಶಿ ಅಚಾನಕ್ ಆಗಿದೆ ಅಂತ ಹೇಳ್ತಾರೆ, ಇದನ್ನ ಒಪ್ಪುವ ಪ್ರಶ್ನೆಯೇ ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್‌ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ

    ಸಿಬಿಐ ತನಿಖೆ ಆಗಲಿ:
    ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಾನು ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲ್ಲ. ಆದ್ರೆ ಈ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ವಿರುದ್ಧ ಸಿಬಿಐ ತನಿಖೆಯಾಗಬೇಕು. ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

    ಅಲ್ಲದೇ ಗೇಟ್‌ ಅನ್ನು ನೀವು ಸರಿ ಮಾಡದಿದ್ದರೇ ಯಾರಾದ್ರೂ ಒಬ್ಬರು ಸರಿಪಡಿಸ್ತಾರೆ. ಆದ್ರೆ ಇದು ನಮ್ಮ ಭಾಗದ ರೈತರಿಗೆ (Farmers) ಆದ ದೊಡ್ಡ ಅನ್ಯಾಯ. ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕು, ನಿರ್ಲಕ್ಷತನ ತೋರಿದವರ ವಿರುದ್ಧ ಕ್ರಮ ಆಗಬೇಕು ಒತ್ತಾಯಿಸಿದ್ದಾರೆ.

    ಬೇಸಿಗೆ ಕಾಲದಲ್ಲಿ ಡ್ಯಾಂ ಗೇಟ್‌ ಪರಿಶೀಲಿಸಿ, ನಿರ್ವಹಣೆ ಮಾಡಬೇಕು. ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಹಳೇ ಡ್ಯಾಂಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ತಂಡ ರಚನೆ ಮಾಡಿದೆ. ಅದನ್ನ ಇವರು ಸಂಪರ್ಕ ಮಾಡಿದ್ದಾರಾ? ಇದೆಲ್ಲವೂ ಮುಖ್ಯವಾಗುತ್ತೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತೆ? ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಇದ್ಯಾವುದೇ ನಿಯಮಗಳನ್ನ ಅನುಸರಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರಿಂದ ಹೋರಾಟ – ಸರ್ಕಾರಿ ಶಾಲೆಗಳಲ್ಲಿ ತರಗತಿ ವ್ಯತ್ಯಯ?

    ವಿಶ್ವದಲ್ಲಿರುವ ಎಲ್ಲಾ ಟೆಕ್ನಾಲಜಿ ಬಳಸಿ:
    ಸರಿಯಾಗಿ ನಿರ್ವಹಣೆ ಮಾಡಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತೆ. ಇದು ಮೂರು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾದ್ರೂ ಡ್ಯಾಂ ನಮ್ಮ ಸುಪರ್ದಿಯಲ್ಲಿದೆ. ನಾನು ಯಾವುದೇ ರಾಜಕೀಯ ಉದ್ದೇಶದಿಂದ ಮಾತನಾಡುತ್ತಿಲ್ಲ. ವಿಶ್ವದಲ್ಲಿ ಇರುವ ಎಲ್ಲಾ ರೀತಿಯ ಟೆಕ್ನಾಲಜಿ ಬಳಸಿ ಇದನ್ನ ಕೂಡಲೇ ನಿರ್ವಹಣೆ ಮಾಡಿ ಡ್ಯಾಂ ಉಳಿಸುವ ಕೆಲಸ ಮಾಡಬೇಕು. ಡಿಕೆಶಿ ಹೇಳಿದಂತೆ ಅಚಾನಕ್ ಆಗಿ ಕಟ್ ಆಗಿದೆ ಅಂದ್ರೆ ಸಣ್ಣ ಮಕ್ಕಳು ಕೂಡಾ ನಗ್ತಾರೆ. ಈ ವೈಪಲ್ಯಕ್ಕೆ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತಗೊಬೇಕು. ಇದು ಡಿಬಿ ಡ್ಯಾಂ ಬೋರ್ಡ್‌ ಹಾಗೂ ಸರ್ಕಾರ ಎರಡರ ವೈಫಲ್ಯವೂ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

     

  • Tungabhadra Dam | ಹೈದರಾಬಾದ್‌ನಿಂದ ಹೊಸ ಗೇಟ್ ತರಿಸಲು ಪ್ಲ್ಯಾನ್‌ – ಆಂಧ್ರ, ತೆಲಂಗಾಣದ ಕೆಲ ಜಿಲ್ಲೆಗಳಿಗೂ ಆತಂಕ!

    Tungabhadra Dam | ಹೈದರಾಬಾದ್‌ನಿಂದ ಹೊಸ ಗೇಟ್ ತರಿಸಲು ಪ್ಲ್ಯಾನ್‌ – ಆಂಧ್ರ, ತೆಲಂಗಾಣದ ಕೆಲ ಜಿಲ್ಲೆಗಳಿಗೂ ಆತಂಕ!

    ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ನೀರಿನ ರಭಸಕ್ಕೆ ಕೊಚ್ಚಿ (TB Dam Gate Broken) ಹೋಗಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ. ಸ್ಥಳಕ್ಕೆ ಬೆಂಗಳೂರು, ಹೈದರಾಬಾದ್ ಮೂಲದ ತಾಂತ್ರಿಕ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಲು ಮುಂದಾಗಿದೆ. ಕ್ರಸ್ಟ್ ಗೇಟ್ ಕಳಚಿಕೊಂಡ ಹಿನ್ನೆಲೆ 19ನೇ ಗೇಟ್‌ನಿಂದ ನೀರು ಮುಗಿಲೆತ್ತರಕ್ಕೆ ಪುಟಿಯುತ್ತಿದೆ. ಒಂದೇ ಗೇಟ್ ನಿಂದ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಜಲಾಶಯದ 32 ಗೇಟ್‌ಗಳ ಪೈಕಿ 28 ಗೇಟ್‌ಗಳನ್ನ ತೆರೆಯಲಾಗಿದೆ. ಇದರಿಂದ 30 ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, 4 ಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಸದ್ಯದ ಬೆಳವಣಿಗೆಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿ..

    ಹೈದರಾಬಾದ್‌ನಿಂದ ಹೊಸ ಗೇಟ್:
    ತುಂಗಭದ್ರಾ ಜಲಾಶಯದ (Tungabhadra Reservoir) 19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಹೈದರಾಬಾದ್ (Hyderabad) ಮೂಲದ ಕಂಪನಿಯಿಂದ ಹೊಸ ಗೇಟ್ ತಂದು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಹೊಸಗೇಟ್ ಸಿದ್ಧವಾಗಿ, ಅಳವಡಿಸಬೇಕಾದ್ರೆ ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಅಲ್ಲದೇ ದುರಸ್ತಿ ಕಾರ್ಯ ವಿಳಂಭವಾದರೂ ಡ್ಯಾಂನಲ್ಲಿ ನೀರು ಖಾಲಿಯಾಗುವ ಸಾಧ್ಯತೆಯಿದೆ ಅಂತ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಆಂಧ್ರ, ತೆಲಂಗಾಣದ ಜಿಲ್ಲೆಗಳಿಗೂ ಸಂಕಷ್ಟ:
    ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿಹೋಗಿರುವುದಿಂದ ಗೇಟ್ ರಿಪೇರಿ ಮಾಡಬೇಕಾದ್ರೆ 60 ಟಿಎಂಸಿ ನಷ್ಟು ನೀರನ್ನು ಹೊರಹರಿಸಬೇಕಾಗಿದೆ ಎಂದು ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇದರಿಂದ ಸುಮಾರು 30 ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಲಕ್ಷಾಂತರ ರೈತರಿಗೂ ಸಂಕಷ್ಟ ತಂದೊಡ್ಡಿದೆ. ಅಲ್ಲದೇ ಈ ಬೆಳವಣಿಗೆಯಿಂದ ಕರ್ನಾಟಕ ಮಾತ್ರವಲ್ಲ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೂ ಸಂಕಷ್ಟ ಉಂಟಾಗಿದೆ.

    ಆಂಧ್ರ ಮತ್ತು ತೆಲಂಗಾಣದ ಆದೋನಿ, ಕರ್ನೂಲ, ಕಡಪ, ಮಹೆಬೂಬ ನಗರ ಜಿಲ್ಲೆಗಳಿಗೂ ಇಲ್ಲಿನ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ. ನದಿ, ಕಾಲುವೆ ಮೂಲಕ ಈ ಎರಡು ರಾಜ್ಯಗಳಿಗೆ ನೀರು ಸರಬರಾಜಾಗುತ್ತದೆ. ನದಿ ನೀರು ಖಾಲಿಯಾದರೇ ಕೃಷಿ ಜಮೀನುಗಳಿಗೂ ನೀರು ಸಿಗದ ಪರಿಸ್ಥಿತಿ ಅಲ್ಲಿನ ಜಿಲ್ಲೆಗಳಿಗೂ ಕಾಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಕುರಿತು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಿಗಳು ಕರ್ನಾಟಕದ ಉನ್ನತ ಅಧಿಕಾರಿಗಳು ಮತ್ತು ಟಿಬಿ ಡ್ಯಾಂ ಬೋರ್ಡ್ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಬೆಳೆಗೆ ನೀರಿನ ಕೊರೆತೆ ಸಾಧ್ಯತೆ:
    ಕಲ್ಯಾಣ ಕರ್ನಾಟಕದ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಈ ಡ್ಯಾಂ ಆಧಾರವಾಗಿದ್ದು, 6 ಲಕ್ಷ ಹೆಕ್ಟೇರ್ ಬೆಳೆಗೆ ನೀರಿನ ಸಂಪರ್ಕ ಕಲ್ಪಿಸುತ್ತದೆ. ಆದ್ರೆ 105 ಟಿಎಂಸಿ ಸಾರ್ಮಥ್ಯದ ತುಂಗಭದ್ರಾ ಜಲಾಶಯದಲ್ಲೀಗ 60 ಟಿಎಂಸಿ ನೀರು ಹೊರಹರಿಸಬೇಕಿರುವುದರಿಂದ ಒಂದು ಬೆಳೆಗೆ ನೀರಿನ ಕೊರೆತೆ ಉಂಟಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.

  • Tungabhadra Dam | 3 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಹರಿಸಿದ್ರೆ 4 ಜಿಲ್ಲೆಗಳಿಗೆ ಅಪಾಯ!

    Tungabhadra Dam | 3 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಹರಿಸಿದ್ರೆ 4 ಜಿಲ್ಲೆಗಳಿಗೆ ಅಪಾಯ!

    ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ (TB Dam Gate Broken) ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದ ಜನಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಈಗಾಗಲೇ 90 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರು ಹೊರಹರಿಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಸುಮಾರು 3 ಲಕ್ಷ ಕ್ಯುಸೆಕ್‌ ನೀರನ್ನು ಹೊರಹರಿಸುವ ಸಾಧ್ಯತೆಯಿದೆ ಎಂದು ಟಿಬಿ ಡ್ಯಾಂ ಮಂಡಳಿ (Tungabhadra Reservoir Board)  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಈಗಾಗಲೇ ಬಳ್ಳಾರಿ, ಕೊಪ್ಪಳ (Koppala), ರಾಯಚೂರು ಹಾಗೂ ವಿಜಯನಗರ ನಾಲ್ಕು ಜಿಲ್ಲೆಗಳ ಜಿಲ್ಲಾಡಳಿತ ಹೈ ಅಲರ್ಟ್‌ ಘೋಷಣೆ ಮಾಡಿವೆ. ಸ್ಥಳದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

    ಹೆಚ್ಚಿನ ನೀರು ಹರಿಸಿದ್ರೆ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಉಂಟಾಗಿದೆ. ಅಲ್ಲದೇ ಸಮಸ್ಯೆ ಪರಿಹರಿಸಬೇಕಾದ್ರೆ 65 ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದು, ಇದರಿಂದ 6 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳಗೆ ನೀರಿನ ಕೊರತೆಯಾಗುವ ಸಾಧ್ಯತೆಯಿದೆ. 65 ಟಿಎಂಸಿ ನೀರು ಖಾಲಿಯಾದ್ರೆ ಒಂದು ಬೆಳೆಗೂ ಡ್ಯಾಂ ನೀರು ಸಾಕಾಗಲ್ಲ. ಬೇಸಿಗೆಯಲ್ಲಿ ಜನರಿಗೆ ಕುಡಿಯೋದಕ್ಕೂ ನೀರು ಸಿಗಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    4 ಜಿಲ್ಲೆಗಳಿಗೆ ಆತಂಕ:
    ಅಲ್ಲದೇ 65 ಟಿಎಂಸಿ ನೀರು ಖಾಲಿ ಮಾಡುವುದರಿಂದ 4 ಜಿಲ್ಲೆಯ ಜನರಿಗೆ ಮತ್ತೆ ಜಲಕ್ಷಾಮ ಕಾಡುತ್ತೆ. ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಿಗೆ ಸಮಸ್ಯೆಯಾಗುತ್ತದೆ ಅಧಿಕಾರಿ ಮೂಲಗಳು ತಿಳಿಸಿವೆ.

    ಟಿಬಿ ಡ್ಯಾಂನಲ್ಲಿ ಏನಾಗಿದೆ?
    ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ ಸಂಖ್ಯೆ 19ರ ಚೈನ್‌ಲಿಂಕ್ ಶನಿವಾರ (ಆ.10) ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • Koppala | ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ನ ಚೈನ್ ಲಿಂಕ್ ಕಟ್ – ಜನರಲ್ಲಿ ಆತಂಕ!

    Koppala | ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ನ ಚೈನ್ ಲಿಂಕ್ ಕಟ್ – ಜನರಲ್ಲಿ ಆತಂಕ!

    – ನದಿಗೆ ಹರಿದ ಅಪಾರ ನೀರು; ಸ್ಥಳಕ್ಕೆ ಶಾಸಕ ಹಿಟ್ನಾಳ್ ಭೇಟಿ, ಪರಿಶೀಲನೆ

    ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಸಂಖ್ಯೆ 19ರಲ್ಲಿ ಚೈನ್‌ ಲಿಂಕ್‌ ತುಂಡಾಗಿರುವ ( TB Dam Gate Broken) ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ (Tungabhadra Reservoir) ಕ್ರಸ್ಟ್‌ ಗೇಟ್‌ನ ಚೈನ್‌ಲಿಂಕ್ ಶನಿವಾರ (ಆ.10) ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ 105 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗೇಟ್ ಸಂಖ್ಯೆ 19 ರಿಂದ 35 ರಿಂದ 45 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಉಳಿದ ಗೇಟ್‌ಗಳಿಂದ ಸುಮಾರು 75 ಸಾವಿರ ಕ್ಯುಸೆಕ್‌ ನೀರನ್ನ ಹೊರಬಿಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ರೆ ಮಾತ್ರವೇ ಗೇಟ್‌ಗೆ ಏನಾಗಿದೆ ಎಂಬುದನ್ನ ನೋಡೋದಕ್ಕೆ ಸಾಧ್ಯ. ಆದ್ದರಿಂದ ನದಿ ಪಾತ್ರದ ಜನರು ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ನೀರಿನ ಹೊರಹರಿವಿನ ಪ್ರಮಾಣವನ್ನ 1 ರಿಂದ 2 ಲಕ್ಷ ಕ್ಯುಸೆಕ್‌ಗೆ ಏರಿಸಬೇಕು. ನೀರು ಕಡಿಮೆಯಾದ್ರೆ ಬಳಿಕ ತುಂಡಾದ ಚೈನ್‌ಲಿಂಕ್‌ ಸರಿಪಡಿಸಲು ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆ ಮಾಡಲು ಕನಿಷ್ಠ 3-4 ದಿನವಾದ್ರೂ ಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.