Tag: Tayige Takka Maga

  • ತಾಯಿಗೆ ತಕ್ಕ ಮಗ – ಅಮ್ಮನ ಜೊತೆ ಸೆಲ್ಫಿ ಕಳಿಸಿ 50,000 ರೂ. ಗೆಲ್ಲಿ!

    ತಾಯಿಗೆ ತಕ್ಕ ಮಗ – ಅಮ್ಮನ ಜೊತೆ ಸೆಲ್ಫಿ ಕಳಿಸಿ 50,000 ರೂ. ಗೆಲ್ಲಿ!

    ಬೆಂಗಳೂರು: ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ವಾರವಷ್ಟೇ ಬಾಕಿ ಉಳಿದಿದೆ. ಇದೀಗ ಪ್ರೇಕ್ಷಕರಿಗಾಗಿಯೇ ಚಿತ್ರತಂಡ ವಿನೂತನವಾದೊಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಇದಕ್ಕೆ ತಾಯಿಗೆ ತಕ್ಕ ಮಗ ಸೆಲ್ಫಿ ಕಂಟೆಸ್ಟ್ ಎಂದೂ ಹೆಸರಿಟ್ಟಿದೆ.

    ಇದು ಅಮ್ಮ ಮಗನ ಪ್ರೀತಿಗೆ ಪೂರಕವಾದ ಸ್ಪರ್ಧೆ. ಯಾರೇ ಯಾದರೂ ತಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದುಕೊಂಡು 7338259619ಗೆ ವಾಟ್ಸಪ್ ಮಾಡಬಹುದು. ನಿಮ್ಮ ಫೋಟೋ ಮೊದಲ ಬಹುಮಾನಕ್ಕೆ ಪಾತ್ರವಾದರೆ ಐವತ್ತು ಸಾವಿರ ರೂಪಾಯಿಗಳನ್ನು ಗೆಲ್ಲ ಬಹುದು!

    ಮೊದಲನೆ ಬಹುಮಾನ 50 ಸಾವಿರ, ಎರಡನೆಯ ಬಹುಮಾನ 25 ಸಾವಿರ, ಮೂರನೇ ಬಹುಮಾನ 15 ಸಾವಿರ ಮತ್ತು ನಾಲಕ್ಕನೇ ಬಹುಮಾನ 10 ಸಾವಿರವೆಂದು ಚಿತ್ರ ತಂಡ ನಿಗದಿ ಮಾಡಿದೆ. ಅಂದಹಾಗೆ ಈ ಸ್ಪರ್ಧೆಗೆ ಫೋಟೋ ಕಳಿಸಲು ನವೆಂಬರ್ 2 ಕಡೆಯ ದಿನಾಂಕ. ನವೆಂಬರ್ 3ರಂದು ಲಕ್ಕಿ ಡ್ರಾ ನಡೆಯಲಿದೆ. ಆ ಬಳಿಕ ಫೇಸ್ ಬುಕ್ ಲೈವ್ ಮೂಲಕ ವಿಜೇತರನ್ನು ಆರಿಸಲಾಗುತ್ತದೆ. ಚಿತ್ರತಂಡಕ್ಕೆ ಸಂಬಂಧಪಟ್ಟವರಿಗೆ ಯಾವ ಕಾರಣಕ್ಕೂ ಈ ಸ್ಪರ್ಧೆಯಲ್ಲಿ ಪ್ರವೇಶವಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ಜೇಯ್ ರಾವ್ ಅಂದ್ರೆ ಲವರ್ ಬಾಯ್ ಲುಕ್ಕೇ ಕಣ್ಮುಂದೆ ಬರುತ್ತದಲ್ಲಾ? ಅದನ್ನು ಸಂಪೂರ್ಣವಾಗಿ ಅದಲು ಬದಲು ಮಾಡೋ ಸಕಾರಾತ್ಮಕ ಸೂಚನೆಗಳಿರೋ ಚಿತ್ರ ತಾಯಿಗೆ ತಕ್ಕ ಮಗ. ಶಶಾಂಕ್ ತಮ್ಮದೇ ಬ್ಯಾನರಿನಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ಅಜೇಯ್ ರಾವ್ ಅವರ 25ನೇ ಚಿತ್ರವೂ ಹೌದು. ಈ ಚಿತ್ರವೀಗ ಬಿಡುಗಡೆಯಾಗೋ ಮುಹೂರ್ತ ನಿಗದಿಯಾಗಿದೆ.

    ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಕುತೂಹಲದ ಜ್ವರ ಏರಿಸಿರುವ ಈ ಚಿತ್ರ ನವೆಂಬರ್ 16ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಸುಮಲತಾ ಅಂಬರೀಶ್ ಅವರು ಬಹು ಕಾಲದ ನಂತರ ಈ ಚಿತ್ರದ ಮೂಲಕ ಅಜೇಯ್ ರಾವ್ ಅಮ್ಮನಾಗಿ, ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಜೇಯ್ ರಾವ್ ಅಭಿನಯಿಸಿದ್ದ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಅಮ್ಮನಾಗಿ ನಟಿಸಿದ್ದರು. ಆ ಪಾತ್ರ ಮನ ಮಿಡಿಯುವಂತಿತ್ತು. ಈ ಚಿತ್ರದಲ್ಲಿಯೂ ಕೂಡಾ ಈ ಅಮ್ಮ ಮಗನ ಜೋಡಿ ಸಖತ್ತಾಗಿಯೇ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಇವೆ.

    ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಟ್ರೈಲರ್ ಸೂಪರಾಗಿದೆ. ಇದರಲ್ಲಿ ಅಜೇಯ್ ರಾವ್ ಅವರ ಮಾಸ್ ಲುಕ್ಕಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಚಿತ್ರ ತೆರೆ ಕಾಣೋದ್ಯಾವಾಇಉಗ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕೊರೆಯುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಸುಮಲತಾಗೆ ಸರ್ಪ್ರೈಸ್ ಕೊಟ್ಟ ರೆಬೆಲ್ ಅಂಬಿ

    ಪತ್ನಿ ಸುಮಲತಾಗೆ ಸರ್ಪ್ರೈಸ್ ಕೊಟ್ಟ ರೆಬೆಲ್ ಅಂಬಿ

    ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿರುವ ರೆಬಲ್ ಸ್ಟಾರ್ ಅಂಬರೀಶ್ ಆಪ್ತ ಗೆಳೆಯ, ಬಂಧುಗಳನ್ನೆಲ್ಲಾ ಭೇಟಿ ಆಗ್ತಿದ್ದಾರೆ. ರಾಜಕೀಯದಿಂದ ದೂರ ಉಳಿದು ಸದ್ಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಮಡದಿ ಸುಮಲಾತಾ ಅವರಿಗೆ ಅಂಬರೀಶ್ ಸರ್ಪ್ರೈಸ್ ನೀಡಿದ್ದಾರೆ.

    ಸುಮಲತಾ ಅಂಬರೀಶ್ ಸಹ ‘ತಾಯಿಗೆ ತಕ್ಕ ಮಗ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಂಬರೀಶ್ ದಿಡೀರ್ ಅಂತಾ ‘ತಾಯಿಗೆ ತಕ್ಕ ಮಗ’ ಸಿನಿಮಾ ಸೆಟ್ ಗೆ ತೆರಳಿ ಪತ್ನಿ ಹಾಗು ಚಿತ್ರತಂಡಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಟ ಅಜಯ್ ರಾವ್ ತಾಯಿಯ ಪಾತ್ರದಲ್ಲಿ ಸುಮಲತಾ ಬಣ್ಣ ಹಚ್ಚಿದ್ದಾರೆ.

    ಅಂಬರೀಶ್ ಭೇಟಿ ನೀಡಿರುವ ಫೋಟೋಗಳನ್ನು ಅಜಯ್ ರಾವ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಿಡೀರ್ ಅಂತ ನಮ್ಮ “ತಾಯಿಗೆ ತಕ್ಕ ಮಗ” ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ ರೆಬೆಲ್ ಸ್ಟಾರ್ !!! ತಂದೆ ತಾಯಿ ತರಹ ಇರುವ ಸುಮಾ ಅಮ್ಮ ಹಾಗೂ ಅಂಬರೀಶ್ ಅಣ್ಣನ ಪ್ರೀತಿ ಪಡೆದ ನಾನು ಧನ್ಯ ಅಂತಾ ಅಜಯ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ಇತ್ತೀಚೆಗೆ ಅಂಬರೀಶ್ ಬಿಡುವಿನ ವೇಳೆಯಲ್ಲಿ ತಮ್ಮ ಕುಚುಕು ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿ ಭಾರತೀ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ರು. 2003ರಲ್ಲಿ ತೆರೆಕಂಡಿದ್ದ ಕನ್ನಡದ ಸೂಪರ್ ಹಿಟ್ `ಎಕ್ಸ್ ಕ್ಯೂಸ್ ಮಿ’ ಸಿನಿಮಾದ ಬಳಿಕ ಸುಮಲತಾ ಮತ್ತು ಅಜಯ್ ತಾಯಿ ಮಗನಾಗಿ ನಟಿಸುತ್ತಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ವೇದಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದಿನ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳೆರೆಡು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜಯ್‍ ರಾವ್ ಗೆ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ.