Tag: Taxpayers

  • ತೆರಿಗೆದಾರರೇ ಗಮನಿಸಿ: IT Returns ಸಲ್ಲಿಕೆಗೆ ಜುಲೈ 31 ಅಲ್ಲ, ಸೆ.15 ಕೊನೆ ದಿ‌ನ..!

    ತೆರಿಗೆದಾರರೇ ಗಮನಿಸಿ: IT Returns ಸಲ್ಲಿಕೆಗೆ ಜುಲೈ 31 ಅಲ್ಲ, ಸೆ.15 ಕೊನೆ ದಿ‌ನ..!

    – ಜುಲೈ 31ರವರೆಗೆ ಇದ್ದ ಗಡುವು ವಿಸ್ತರಣೆ

    ನವದೆಹಲಿ: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ (Income Tax Returns) ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್‌ 15ರ ವರೆಗೆ ವಿಸ್ತರಿಸಲಾಗಿದೆ.

    ಜುಲೈ 31ಕ್ಕೆ ಇದ್ದ ಅವಧಿಯನ್ನು ಸೆಪ್ಟೆಂಬರ್‌ 15ಕ್ಕೆ ವಿಸ್ತರಿಸಲಾಗಿದೆ. ಅಧಿಸೂಚಿತ ITR ಫಾರ್ಮ್‌ಗಳಲ್ಲಿನ ವ್ಯಾಪಕವಾದ ರಚನಾತ್ಮಕ ಮತ್ತು ವಿಷಯ ಪರಿಷ್ಕರಣೆಗಳೇ ಈ ವಿಸ್ತರಣೆಗೆ ಕಾರಣವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ. ಈ ಪರಿಷ್ಕರಣೆಗಳು ಅನುಸರಣೆ ಸರಳಗೊಳಿಸುವ, ಪಾರದರ್ಶಕತೆ ಹೆಚ್ಚಿಸುವ ಮತ್ತು ವರದಿ ಮಾಡುವ ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಇ-ಫೈಲಿಂಗ್ ಉಪಯುಕ್ತತೆಗಳ ವ್ಯವಸ್ಥೆಯ ಅಭಿವೃದ್ಧಿ, ಏಕೀಕರಣ ಮತ್ತು ಪರೀಕ್ಷೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಮೇ 31 ರೊಳಗೆ ಬಾಕಿ ಇರುವ ಟಿಡಿಎಸ್ ಕ್ರೆಡಿಟ್‌ಗಳು ಜೂನ್ ಆರಂಭದಲ್ಲಿ ಪ್ರತಿಫಲಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ.

    ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ಸಾಧ್ಯವಾಗಲೆಂದು ಕ್ರಮವಹಿಸಲಾಗಿದೆ ಎಂದು CBDT ಹೇಳಿದೆ. ವಿಸ್ತರಣೆಯು ಪಾಲುದಾರರಿಗೆ ನವೀಕರಿಸಿದ ಫಾರ್ಮ್‌ಗಳು ಮತ್ತು ಉಪಯುಕ್ತತೆಗಳನ್ನು ಅನುಸರಿಸಲು ಸಾಕಷ್ಟು ಸಮಯಾವಕಾಶ ನೀಡುತ್ತದೆ.

    ಔಪಚಾರಿಕ ಅಧಿಸೂಚನೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ವಿಸ್ತರಣೆಯು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

  • 2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳು ಇವರೇ – ಕಿಂಗ್‌ ಕೊಹ್ಲಿ, ಬಾದ್‌ ಶಾಗೆ ಅಗ್ರಸ್ಥಾನ

    2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳು ಇವರೇ – ಕಿಂಗ್‌ ಕೊಹ್ಲಿ, ಬಾದ್‌ ಶಾಗೆ ಅಗ್ರಸ್ಥಾನ

    – ಟಾಪ್‌-5 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಳಪತಿ, ಸಲ್ಮಾನ್‌ ಖಾನ್‌, ಬಿಗ್‌ ಬಿ

    ನವದೆಹಲಿ: ಸದ್ಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತೆ ಸುದ್ದಿಯಲ್ಲಿದ್ದಾರೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಫಾರ್ಚೂನ್‌ ಇಂಡಿಯಾ (Fortune India) ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, 2023-24ರ ಆರ್ಥಿಕ ವರ್ಷದಲ್ಲಿ ವಿರಾಟ್‌ ಕೊಹ್ಲಿ 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ಒಟ್ಟಾರೆ ಸೆಲೆಬ್ರಿಟಿಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಹೇಮಾ ಸಮಿತಿ ಕ್ರಾಂತಿ ಎಬ್ಬಿಸಿದೆ: ಸ್ಯಾಂಡಲ್‌ವುಡ್‌ನಲ್ಲೂ ಕಮಿಟಿಯಾಗಬೇಕು ಎಂದ ನೀತು

    ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌ ಧೋನಿ (MS Dhoni), 38 ಕೋಟಿ ರೂ. ಪಾವತಿಸಿದ್ದಾರೆ. ಲೆಜೆಂಡರಿ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ 28 ಕೋಟಿ ರೂ., ಸೌರವ್ ಗಂಗೂಲಿ 23 ಕೋಟಿ ರೂ. ಹಾರ್ದಿಕ್‌ ಪಾಂಡ್ಯ 13 ಕೋಟಿ ರೂ., ರಿಷಬ್‌ ಪಂತ್‌ 10 ಕೋಟಿ ರೂ. ಟ್ಯಾಕ್ಸ್‌ ಪಾವತಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

    ಫಾರ್ಚೂನ್‌ ಇಂಡಿಯಾ ವರದಿ ಪ್ರಕಾರ, ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟ ಶಾರೂಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. ಬಾಲಿವುಡ್‌ನ ಬಾದ್‌ಶಾ 92 ಕೋಟಿ ರೂ. ಪಾವತಿಸಿದ್ದಾರೆ. ತಮಿಳಿನ ದಳಪತಿ ವಿಜಯ್‌ 80 ಕೋಟಿ ರೂ. ಪಾವತಿಸಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ 75 ಪಾವತಿಸಿರುವ ಸಲ್ಮಾನ್‌ ಖಾನ್‌, 71 ಕೋಟಿ ಪಾವತಿಸಿರುವ ಅಮಿತಾಬ್ ಬಚ್ಚನ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಾವು ಕೆಲಸ ಮಾಡುವ ಜಾಗದಲ್ಲಿ ಆತಂಕ ಇರಬಾರದು: ಕಾಸ್ಟಿಂಗ್ ಕೌಚ್ ಬಗ್ಗೆ ಹಿತಾ ಮಾತು

    2023-24ರ ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳ ವಿವರ
    ಶಾರೂಖ್ ಖಾನ್ – 92 ಕೋಟಿ ರೂ.
    ದಳಪತಿ ವಿಜಯ್ – 80 ಕೋಟಿ ರೂ.
    ಸಲ್ಮಾನ್ ಖಾನ್ – 75 ಕೋಟಿ ರೂ.
    ಅಮಿತಾಬ್ ಬಚ್ಚನ್ – 71 ಕೋಟಿ ರೂ.
    ವಿರಾಟ್ ಕೊಹ್ಲಿ – 66 ಕೋಟಿ ರೂ.
    ಅಜಯ್ ದೇವಗನ್ – 42 ಕೋಟಿ ರೂ.

    ಎಂ.ಎಸ್ ಧೋನಿ – 38 ಕೋಟಿ ರೂ.
    ರಣಬೀರ್ ಕಪೂರ್ – 36 ಕೋಟಿ ರೂ.
    ಸಚಿನ್ ತೆಂಡೂಲ್ಕರ್ – 28 ಕೋಟಿ ರೂ.
    ಹೃತಿಕ್ ರೋಷನ್ – 28 ಕೋಟಿ ರೂ.
    ಕಪಿಲ್ ಶರ್ಮಾ – 26 ಕೋಟಿ ರೂ.
    ಸೌರವ್ ಗಂಗೂಲಿ- 23 ಕೋಟಿ ರೂ.

    ಕರೀನಾ ಕಪೂರ್ – 20 ಕೋಟಿ ರೂ.
    ಶಾಹಿದ್ ಕಪೂರ್ – 14 ಕೋಟಿ ರೂ.
    ಮೋಹನ್ ಲಾಲ್ – 14 ಕೋಟಿ ರೂ.
    ಅಲ್ಲು ಅರ್ಜುನ್ – 14 ಕೋಟಿ ರೂ.
    ಹಾರ್ದಿಕ್ ಪಾಂಡ್ಯ – 13 ಕೋಟಿ ರೂ.
    ರಿಷಭ್‌ ಪಂತ್‌ 10 ಕೋಟಿ ರೂ.