Tag: Taxi drivers

  • ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ – ಪ್ರತಿ ಕಿಮೀಗೆ 24 ರಿಂದ 28 ರೂ.ವರೆಗೆ ಏರಿಕೆಗೆ ಅವಕಾಶ

    ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪದ ದರ ನಿಗದಿ – ಪ್ರತಿ ಕಿಮೀಗೆ 24 ರಿಂದ 28 ರೂ.ವರೆಗೆ ಏರಿಕೆಗೆ ಅವಕಾಶ

    ಬೆಂಗಳೂರು: ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟ್ಯಾಕ್ಸಿ (Taxi), ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕ ದರಗಳನ್ನು ಏಕರೂಪಗೊಳಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

    ಸಿಟಿ ಟ್ಯಾಕ್ಸಿ (City Taxi) ಸೇವೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ, ಮನಸೋ ಇಚ್ಚೆ ದರ ವಿಧಿಲಾಗುತ್ತಿದೆ ಅನ್ನೋ ಬಗ್ಗೆ ವ್ಯಾಪಕ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿಗಳ ಆಟಟೋಪಕ್ಕೆ ಬ್ರೇಕ್‌ ಹಾಕಲು ಇಲಾಖೆ ಸಾರಿಗೆ ಇಲಾಖೆ (Transport Department) ಮುಂದಾಗಿದೆ. ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಗೋಲ್ಮಾಲ್ – ಹಣಕ್ಕೆ ದಂಪತಿಯಾದ ಜೋಡಿಗಳು, 15 ಮಂದಿ ಸೇರಿ ಇಬ್ಬರು ಅಧಿಕಾರಿಗಳ ಬಂಧನ

    2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆಯನ್ನು ಎಬಿಸಿಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ದರ ನಿಗದಿ ಮಾಡಿತ್ತು. ಆದ್ರೆ ಫೆಬ್ರವರಿಯಿಂದಲೇ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

    ಸಾರಿಗೆ ಸಚಿವರ ಸೂಚನೆ ಮೇರೆಗೆ ಏಕರೂಪ ಪ್ರಯಾಣ ದರ ನಿಗದಿಪಡಿಸಿ ಸರ್ಕಾರ ಆದೇಶ
    * 10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 100 ರೂ. ನಿಗದಿ
    * 4 ಕಿಮೀ ನಂತರ ಪ್ರತಿ ಕಿಮೀಗೆ ಹೆಚ್ಚುವರಿ 24 ರೂ.ನಿಗದಿ
    * 10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 115 ರೂ. ನಿಗದಿ
    * 4 ಕಿಮೀ ನಂತರ ಪ್ರತಿ 1 ಕಿಮೀಗೆ ಹೆಚ್ಚುವರಿ 28 ರೂ. ನಿಗದಿ
    * 15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 130 ರೂ. ನಿಗದಿ
    * 4 ಕಿಮೀ ನಂತರ ಪ್ರತಿ ಕಿಲೋ ಮೀಟರ್‌ಗೆ ಹೆಚ್ಚುವರಿ 32 ರೂ. ನಿಗದಿ

    ಹೊಸ ನಿಯಮಗಳೇನು?
    * ವೈಯಕ್ತಿಕ ಲಗೇಜುಗಳಿಗೆ 120 ಕೆಜಿ ವರೆಗೆ ವಿನಾಯಿತಿ
    * ಮೊದಲ 5 ನಿಮಿಷ ಕಾಯುವಿಕೆಗೆ ಶುಲ್ಕ ಇಲ್ಲ
    * ಪ್ರಯಾಣಿಕರಿಂದ ಜಿಎಸ್‌ಟಿ, ಟೋಲ್‌ ವಸೂಲಿಗೆ ಅವಕಾಶ
    * ಬೆಳಗ್ಗಿನ ಜಾವ 6 ಗಂಟೆ ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ

  • ಶಕ್ತಿ ಯೋಜನೆ ಎಫೆಕ್ಟ್ – ಓಲಾ, ಊಬರ್‌ಗೂ ತಟ್ಟಿದ ಬಿಸಿ

    ಶಕ್ತಿ ಯೋಜನೆ ಎಫೆಕ್ಟ್ – ಓಲಾ, ಊಬರ್‌ಗೂ ತಟ್ಟಿದ ಬಿಸಿ

    – ಬುಕ್ಕಿಂಗ್ ಸಂಖ್ಯೆಯಲ್ಲಿ ಕೊಂಚ ಇಳಿಕೆ
    – ಎರಡೇ ದಿನಕ್ಕೆ ಕಂಗಲಾದ ಓಲಾ-ಊಬರ್, ಟ್ಯಾಕ್ಸಿ ಚಾಲಕರು

    ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ (Shakti Scheme) ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೆಲವೆಡೆ ಜನರಿಂದ ವಿರೋಧವೂ ವ್ಯಕ್ತವಾಗ್ತಿದೆ. ಈ ನಡುವೆ ಶಕ್ತಿ ಯೋಜನೆಯ ಎಫೆಕ್ಟ್ ಓಲಾ, ಊಬರ್‌ಗೂ (Ola, Uber) ತಟ್ಟಿದ್ದು, ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆಯಾಗಿದೆ .

    ಹೌದು. ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹಿಳೆಯರು BMTC ಬಸ್‌ನತ್ತ ಮುಖ ಮಾಡಿದ್ದಾರೆ. ಆಸ್ಪತ್ರೆ, ಆಫೀಸ್, ಶಾಪಿಂಗ್, ಹೀಗೆ ವಿವಿಧ ಕೆಲಸಗಳಿಗೆ ನಗರದಲ್ಲಿ ಬಿಎಂಟಿಸಿಯನ್ನೇ ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಫ್ರೀ ಬಸ್ ಪ್ರಯಾಣದ ಎಫೆಕ್ಟ್ ಓಲಾ, ಊಬರ್‌ಗೂ ತಟ್ಟಿದೆ. ಇದನ್ನೂ ಓದಿ: ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5.71 ಲಕ್ಷ ಮಹಿಳೆಯರ ಸಂಚಾರ

    ಶಕ್ತಿ ಯೋಜನೆ ಜಾರಿಯಾದ ಎರಡು ದಿನಗಳಿಂದ, ಓಲಾ-ಊಬರ್ ಚಾಲಕರಿಗೆ ಬುಕ್ಕಿಂಗ್‌ನಲ್ಲಿ ವಿಳಂಬವಾಗ್ತಿದೆ. ಗಂಟೆಗೆ ಒಂದೋ ಎರಡೋ ಬುಕ್ಕಿಂಗ್ ಬರುತ್ತಿದೆ. ಹೀಗಾಗಿ ಓಲಾ- ಊಬರ್, ಟ್ಯಾಕ್ಸಿ ಚಾಲಕರು ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಹೊಟ್ಟೆ ಮೇಲೂ ಸರ್ಕಾರ ಹೊಡೆದಂತಾಗುತ್ತೆ. ಕನಿಷ್ಟ ಪಕ್ಷ ಸರ್ಕಾರ ನಮ್ಮ ವಾಹನಗಳ ಮೇಲಿರುವ ಪರ್ಮಿಟ್ ಟ್ಯಾಕ್ಸ್ ಆದ್ರೂ ಕಡಿಮೆ ಮಾಡಲಿ ಅಂತಾ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಟಿಕೆಟ್ ಪಡೆಯುವ ಮಹಿಳೆಯರಿಗೆ ಗುಡ್‍ನ್ಯೂಸ್

    ಕೇವಲ ಟ್ಯಾಕ್ಸಿಗಳಿಗೆ ಮಾತ್ರವಲ್ಲ, ಆಟೋಗಳಿಗೂ ಬಾಡಿಗೆ ಸಿಗ್ತಿಲ್ಲ. ಬಡವರ್ಗ, ಮಧ್ಯಮ ವರ್ಗದವ್ರೆಲ್ಲಾ, ಬಿಎಂಟಿಸಿಯತ್ತ ಮುಖ ಮಾಡಿದ್ರೆ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡೋರು, ಉನ್ನತ ಹುದ್ದೆಯಲ್ಲಿರುವವರು, ಹಣ ಇದ್ದವ್ರು ಮಾತ್ರ ಓಲಾ-ಊಬರ್‌ನಲ್ಲಿ ಪ್ರಯಾಣ ಮಾಡ್ತಿದ್ದಾರೆ ಅನ್ನೋದು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಮಾತು.

  • ಕುಮಾರಪರ್ವತ ಟ್ರೆಕ್ಕಿಂಗ್ ವೇಳೆ ಕಾಲು ಮುರಿದುಕೊಂಡ ಮಹಿಳಾ ಟೆಕ್ಕಿ

    ಕುಮಾರಪರ್ವತ ಟ್ರೆಕ್ಕಿಂಗ್ ವೇಳೆ ಕಾಲು ಮುರಿದುಕೊಂಡ ಮಹಿಳಾ ಟೆಕ್ಕಿ

    –  ಸ್ಟ್ರೆಚರ್‌ನಲ್ಲಿ  ಕೂರಿಸಿ 7 ಕಿ.ಮೀ ನಡೆದ ಟ್ಯಾಕ್ಸಿ ಚಾಲಕರು

    ಮಂಗಳೂರು: ಕುಮಾರಪರ್ವತಕ್ಕೆ ಚಾರಣ ತೆರಳಿದ್ದ ಬೆಂಗಳೂರಿನ ಟೆಕ್ಕಿಗಳ ಪೈಕಿ ಜಾರಿ ಬಿದ್ದು ಕಾಲು ಮುರಿದುಕೊಂಡ ಯುವತಿಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಏಳು ಕಿ.ಮೀ ಹೊತ್ತು ತಂದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಬಂದ ಯುವಕ-ಯುವತಿಯರಿದ್ದ 23 ಮಂದಿಯ ತಂಡ ಮಂಗಳವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಪರ್ವತಕ್ಕೆ ಚಾರಣ ಹೊರಟಿತ್ತು. ಪರ್ವತದ ಹಾದಿಯಲ್ಲಿ ಗಿರಿಗದ್ದೆ ಎಂಬಲ್ಲಿ ಯುವತಿಯೊಬ್ಬಳು ಜಾರಿ ಬಿದ್ದಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದಾಳೆ. ಜೊತೆಗಿದ್ದ ಯುವಕರು ಅಲ್ಲಿದ್ದ ಅರಣ್ಯ ಸಿಬ್ಬಂದಿ ಬಳಿ ನೆರವುಯಾಚಿಸಿದ್ದರು.

    ಅರಣ್ಯ ಸಿಬ್ಬಂದಿ ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರಿಗೆ ಮಾಹಿತಿ ನೀಡಿದ್ದರು. ಬಳಿಕ ಟ್ಯಾಕ್ಸಿ ಚಾಲಕರು ಕುಕ್ಕೆ ಸುಬ್ರಹ್ಮಣ್ಯದ ಸರ್ಕಾರಿ ಆಸ್ಪತ್ರೆಯಿಂದ ಸ್ಟ್ರೆಚರ್ ಪಡೆದು ಬೆಳಗ್ಗೆ 11 ಗಂಟೆಗೆ ಕುಮಾರ ಪರ್ವತದತ್ತ ತೆರಳಿದ್ದರು. ಗಿರಿಗದ್ದೆಯಿಂದ ರಸ್ತೆ ಸಂಪರ್ಕಿಸುವ ಏಳು ಕಿಮೀ ದೂರದವರೆಗೆ ಯುವತಿಯನ್ನು ಸ್ಟ್ರೆಚರ್ ನಲ್ಲಿ ಮಲಗಿಸಿ ಹೊತ್ತುಕೊಂಡು ಸಂಜೆ ವೇಳೆಗೆ ಮರಳಿ ಬಂದಿದ್ದಾರೆ.

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಬಂದ ವಾಹನದಲ್ಲಿಯೇ ಯುವತಿಯನ್ನು ಬೆಂಗಳೂರಿಗೆ ಒಯ್ಯಲಾಗಿದೆ. ಯುವತಿಗಾದ ಅವಘಡದಿಂದಾಗಿ ಬೆಂಗಳೂರಿನ ಟೆಕ್ಕಿಗಳ ತಂಡ ಚಾರಣಕ್ಕೆ ಬಂದು ಅರ್ಧ ದಾರಿಯಲ್ಲಿ ಹಿಂತಿರುಗಿ ಹೋಗಿದ್ದಾರೆ. ಮಳೆಗಾಲದ ಅವಧಿಯಲ್ಲಿ ಚಾರಣ ಸೂಕ್ತವಲ್ಲ ಎಂಬ ಸೂಚನೆ ನೀಡಿದ್ದರೂ ಬೆಂಗಳೂರಿನ ಮಂದಿ ಚಾರಣಕ್ಕೆ ಬಂದು ಅರ್ಧ ಸಿಲುಕುತ್ತಿರುವುದು ಪದೇ ಪದೇ ಮರುಕಳಿಸುತ್ತಿದೆ.