Tag: Taxes

  • Budget 2022: 39.54 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನ `ರೂಪಾಯಿ’ ಲೆಕ್ಕಾಚಾರ ಹೇಗಿದೆ ಗೊತ್ತಾ?

    Budget 2022: 39.54 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನ `ರೂಪಾಯಿ’ ಲೆಕ್ಕಾಚಾರ ಹೇಗಿದೆ ಗೊತ್ತಾ?

    ನವದೆಹಲಿ: ಪಂಚರಾಜ್ಯಗಳ ಚುನಾವಣೆ, ಕೋವಿಡ್ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ಇವತ್ತು ದೂರಗಾಮಿ ಬಜೆಟ್ ಮಂಡಿಸಿದೆ. ಜನಪ್ರಿಯ ಯೋಜನೆಗಳ ಘೋಷಣೆ ಇಲ್ಲದಿದ್ದರೂ ಇದೊಂದು ನೀರಸ ಬಜೆಟ್ ಎನಿಸಿದ್ದರೂ, ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬಜೆಟ್ ಮಂಡಿಸಿದೆ.

    ಅಗತ್ಯ ವಸ್ತುಗಳು, ದೂರಸಂಪರ್ಕ, ಮೂಲಭೂತ ಸೌಕರ್ಯಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈ ಬಾರಿಯ ಬಜೆಟ್ ನಾಲ್ಕು ಸೂತ್ರಗಳನ್ನು ಆಧರಿಸಿದೆ. ಏಳು ವಲಯಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬಜೆಟ್ ರೂಪಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್ 12:30ಕ್ಕೆ ಅಂದ್ರೆ 90 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ್ರು. ಬಜೆಟ್ ಪೇಪರ್ ಲೆಸ್ ಆಗಿತ್ತು. ಮೋದಿ ಸರ್ಕಾರವೂ ಡಿಜಿಟಲೈಸೇಷನ್‍ಗೆ ಬಜೆಟ್‍ನಲ್ಲಿ ಒತ್ತು ನೀಡಿತ್ತು. ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಟೆಲಿ-ಮೆಂಟಲ್‌ ಆರೋಗ್ಯ ಕಾರ್ಯಕ್ರಮ – ಬೆಂಗಳೂರಿನ IIITB ತಾಂತ್ರಿಕ ಬೆಂಬಲ

    ಬಜೆಟ್ `ರೂಪಾಯಿ’ ಲೆಕ್ಕಾಚಾರ:
    ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂ. ಕಳೆದ ವರ್ಷದ ಬಜೆಟ್ ಗಾತ್ರ 34.83 ಲಕ್ಷ ಕೋಟಿ ರೂ. ಅಂದ್ರೆ 5.71 ಲಕ್ಷ ಕೋಟಿ ರೂ.ನಷ್ಟು ಹೆಚ್ಚು. ಇದು ಕೂಡ ವಿತ್ತೀಯ ಕೊರತೆ ಬಜೆಟ್ ಆಗಿದೆ. 6.9 ಕೋಟಿ ರೂ.ರಷ್ಟು ಕೊರತೆ ಬಜೆಟ್ ಆಗಿದೆ.

    ಆದಾಯ ಹೇಗೆ?:
    58 ಪೈಸೆ – ತೆರಿಗೆ ಆದಾಯ -(ನೇರ & ಪರೋಕ್ಷ ತೆರಿಗೆ) (ಜಿಎಸ್‍ಟಿಯಿಂದ 16 ಪೈಸೆ, ಕಾರ್ಪೋರೇಟ್ ತೆರಿಗೆಯಿಂದ 15 ಪೈಸೆ, ಕೇಂದ್ರ ಅಬಕಾರಿ ಸುಂಕದಿಂದ 5 ಪೈಸೆ, ಕಸ್ಟಮ್ಸ್ ಸುಂಕದಿಂದ 5 ಪೈಸೆ, ಆದಾಯ ತೆರಿಗೆಯಿಂದ 15 ಪೈಸೆ ಆದಾಯ). 35 ಪೈಸೆ – ಸಾಲ & ಇತರೆ, 5 ಪೈಸೆ – ಬಂಡವಾಳ ಹಿಂತೆಗೆದಿಂದ, 2 ಪೈಸೆ – ತೆರಿಗೆಯೇತರ ಆದಾಯವಾಗಿದೆ. ಇದನ್ನೂ ಓದಿ: Budget 2022: ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    ಖರ್ಚು ಹೇಗೆ?:
    20 ಪೈಸೆ – ಬಡ್ಡಿ, 17 ಪೈಸೆ – ರಾಜ್ಯಗಳ ತೆರಿಗೆ, ಸುಂಕ ಪಾಲು, 8 ಪೈಸೆ – ರಕ್ಷಣೆ, 15 ಪೈಸೆ – ಕೇಂದ್ರ ವಲಯ ಯೋಜನೆಗಳು. 9 ಪೈಸೆ – ಕೇಂದ್ರ ಪ್ರಾಯೋಜಿತ ಯೋಜನೆ. 10 ಪೈಸೆ – ಹಣಕಾಸು ಆಯೋಗ. 8 ಪೈಸೆ – ಸಬ್ಸಿಡಿ. 4 ಪೈಸೆ – ಪಿಂಚಣಿ. 9 ಪೈಸೆ – ಇತರೆ ಖರ್ಚುನಿಂದ ಕೂಡಿದ ಬಜೆಟ್ ಆಗಿದೆ. ಇದನ್ನೂ ಓದಿ: Budget: 2 ಲಕ್ಷ ಅಂಗನವಾಡಿಗಳನ್ನು ‘ಸಕ್ಷಮ್ ಅಂಗನವಾಡಿ’ಗಳಾಗಿ ಮಾರ್ಪಾಡು – ಮಹಿಳಾ ಸಬಲೀಕರಣಕ್ಕೆ ಒತ್ತು

  • 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತದಿಂದ ಕೈತಪ್ಪುತ್ತಾ?

    2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತದಿಂದ ಕೈತಪ್ಪುತ್ತಾ?

    ನವದೆಹಲಿ: ಐಸಿಸಿ ಪೂರ್ವ ನಿಗದಿತ ನಿಯಮಗಳಂತೆ 2021 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಟೂರ್ನಿಗೆ ತೆರಿಗೆ ವಿನಾಯಿತಿ ನಿರಾಕರಿಸಿದ ಕಾರಣ ಟೂರ್ನಿಯನ್ನು ಬೇರೆಡೆ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಈ ಕುರಿತು ಐಸಿಸಿ, ಬಿಸಿಸಿಐ ಭಾರತ ಸರ್ಕಾರದ ಜೊತೆ ತೆರಿಗೆ ವಿನಾಯಿತಿ ಪಡೆಯುವ ಕುರಿತು ಮಾತುಕತೆ ನಡೆಸುವಂತೆ ಸೂಚಿಸಿದೆ. ಒಂದು ವೇಳೆ ಸರ್ಕಾರದೊಂದಿಗೆ ಮಾತುಕತೆ ವಿಫಲವಾದರೆ ಅನಿರ್ವಾಯವಾಗಿ ಬೇರೆಡೆ ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

    ಇದೇ ಮೊದಲಲ್ಲ: 2002 ರಲ್ಲಿ ಭಾರತದಲ್ಲಿ ಆಯೋಜನೆ ಮಾಡಬೇಕಾಗಿದ್ದ ಐಸಿಸಿ ಚಾಂಪಿಯನ್ಸ್ ಟೂರ್ನಿ ವೇಳೆಯೂ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು. ಈ ವೇಳೆ ಐಸಿಸಿ ಟೂರ್ನಿಯನ್ನು ಶ್ರೀಲಂಕಾ ಕ್ಕೆ ವರ್ಗಾವಣೆ ಮಾಡಿತ್ತು. ಈ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶ ಪಡೆದಿದ್ದವು. ಶ್ರೀಲಂಕಾ 7 ವಿಕೆಟಿಗೆ 222 ರನ್ ಮಾಡಿದರೆ, ಗುರಿ ಬೆನ್ನತ್ತಿದ್ದ ಭಾರತಕ್ಕೆ 9ನೇ ಓವರ್ ವೇಳೆ ಮಳೆ ಅಡ್ಡಿ ಪಡಿಸಿತ್ತು. ಭಾರತ ಈ ವೇಳೆ ಒಂದು ವಿಕೆಟ್ ಗೆ 38 ರನ್ ಗಳಿಸಿತ್ತು. ಕೊನೆಗೆ ಫೈನಲ್ ಪಂದ್ಯ ಸಂಪೂರ್ಣ ಮಳೆಯಿಂದ ರದ್ದಾಗಿ ಇತ್ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡಿತ್ತು.

    ಐಸಿಸಿ ತನ್ನ ಪರಿಷ್ಕೃತ ಆರ್ಥಿಕ ವರ್ಷದ ಮೊತ್ತದಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳಿಗೆ ಹೆಚ್ಚಿನ ಅನುದಾನ ನೀಡಿದೆ. 2017 ಜೂನ್ ನಿಂದ ಇತ್ತಂಡಗಳಿಗೂ ಶಾಶ್ವತ ಸದಸ್ಯತ್ವ ನೀಡಿರುವ ಕುರಿತ ಮಾಹಿತಿ ನೀಡಿದೆ. ವಾರ್ಷಿಕವಾಗಿ ಐಸಿಸಿ ಸುಮಾರು 40 ಸಾವಿರ ಅಮೆರಿಕನ್ ಡಾಲರ್( ಅಂದಾಜು 256 ಕೋಟಿ ರೂ.) ಪಡೆಯುವ ಸಾಧ್ಯತೆ ಇದೆ.

  • ನಿಮಗಿದು ತಿಳಿದಿರಲಿ: ಈ ಬಾರಿ ಬಜೆಟ್‍ನ 9 ಪ್ರಮುಖ ಘೋಷಣೆಗಳು ಹೀಗಿವೆ

    ನಿಮಗಿದು ತಿಳಿದಿರಲಿ: ಈ ಬಾರಿ ಬಜೆಟ್‍ನ 9 ಪ್ರಮುಖ ಘೋಷಣೆಗಳು ಹೀಗಿವೆ

    ಬೆಂಗಳೂರು: ಎನ್‍ಡಿಎ ಸರ್ಕಾರ ಪೂರ್ಣ ಪ್ರಮಾಣದ ಕೊನೆಯ ಬಜೆಟ್‍ನ್ನು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಮಂಡನೆ ಮಾಡಿದ್ದಾರೆ. ಈ ಬಾರಿ ಬಜೆಟ್‍ನಲ್ಲಿ ಕೃಷಿ, ಕಾರ್ಮಿಕ ಮತ್ತು ಬಡವರ ಪರವಾಗಿ ಎಂದು ಆಡಳಿತ ಸರ್ಕಾರ ಹೇಳಿಕೊಂಡಿದೆ. ಅರುಣ್ ಜೇಟ್ಲಿ ಬಜೆಟ್‍ನಲ್ಲಿ ಹಲವು ಯೋಜನೆ ಮತ್ತು ಮುಂದಿನ ಹಣಕಾಸು ವರ್ಷದ ಗುರಿಗಳನ್ನು ತಿಳಿಸಿದ್ದಾರೆ. 2018ರ ಬಜೆಟ್‍ನ ಪ್ರಮುಖ 09 ಘೋಷಣೆಗಳು ಹೀಗಿವೆ.

    01. ಕಡಿಮೆಯಾಗಿಲ್ಲ ತೆರಿಗೆ: ಈ ಬಾರಿ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಿಲ್ಲ. ತೆರಿಗೆಗಳಲ್ಲಿ ಯಾವುದೇ ಇಳಿಕೆಯಾಗದೇ ಹೆಚ್ಚಾಗಿದೆ. ಉದ್ಯೋಗಿಗಳಿಗೆ 40 ಸಾವಿರದವರೆಗೂ ತೆರಿಗೆ ವಿನಾಯ್ತಿ ಸಿಕ್ಕಿದೆ. 40 ಸಾವಿರ ರೂ. ನಂತರದಲ್ಲಿ ಪಡೆಯುವ ಸಂಬಳ ತೆರಿಗೆಗೆ ಒಳಪಡುತ್ತದೆ. ಟ್ಯಾಕ್ಸ್ ಬೆಲ್ ಇನ್‍ಕಮ್ ಮೇಲೆ 01 ಪ್ರತಿಶತ ಹೆಚ್ಚಿಸಲಾಗಿದೆ. ವೈಯಕ್ತಿಕ ತೆರಿಗೆಯ ಮೇಲೆ ಟ್ಯಾಕ್ಸ್ ಪ್ರಮಾಣ ಹೆಚ್ಚಳವಾಗಿದ್ದರಿಂದ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವರು ಹೆಚ್ಚಿನ ತೆರಿಗೆ ಪಾವತಿಸ ಬೇಕಾಗುತ್ತದೆ.

    02. ತುಟ್ಟಿಯಾಯ್ತು ಮೊಬೈಲ್: ಮೊಬೈಲ್ ಫೋನ್, ಟಿವಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಟಿವಿ ಮತ್ತು ಮೊಬೈಲ್ ಫೋನ್‍ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.15 ರಿಂದ ಶೇ.20ಕ್ಕೆ ಹೆಚ್ಚಳ ಮಾಡಲಾಗಿದೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

    03. ಕಾರ್ಪೋರೇಟರ್ ತೆರಿಗೆ ಕಡಿತ: ದೀರ್ಘಾವಧಿ ಬಂಡವಾಳ ಹೂಡಿಕೆ ಮೇಲಿನ ತೆರಿಗೆ 10% ಏರಿಕೆ ಕಂಡಿದೆ. 250 ಕೋಟಿಗೂ ಅಧಿಕ ವ್ಯವಹಾರ ನಡೆಸುವ ಕಂಪೆನಿಗಳಿಗೆ ಶೇ.25 ತೆರಿಗೆ ಕಡಿತ.

    04. ಅಧಿಕ ಹೂಡಿಕೆಯ ಗುರಿ: ಮುಂದಿನ ಹಣಕಾಸಿನ ವರ್ಷದಲ್ಲಿ ಸುಮಾರು 80 ಸಾವಿರ ಕೋಟಿ ಬಂಡವಾಳವನ್ನು ಮಾರುಕಟ್ಟೆಯಲ್ಲಿ ವಿನಿಯೋಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

    05. ಸಂಬಳದಲ್ಲಿ ಏರಿಕೆ: ರಾಷ್ಟ್ರಪತಿಗಳ ವೇತನವನ್ನು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ, ಉಪರಾಷ್ಟ್ರಪತಿಗಳ ವೇತನವನ್ನು 4.5 ಲಕ್ಷ ರೂಪಾಯಿ ಮತ್ತು ರಾಜ್ಯಪಾಲರುಗಳ ವೇತನವನ್ನು 3.5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈವರೆಗೆ ರಾಷ್ಟ್ರಪತಿ ತಿಂಗಳಿಗೆ 1.5 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಈಗ 1.5 ಲಕ್ಷ ರೂ. ಯಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಉಪರಾಷ್ಟ್ರ ಪತಿಯ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ. ನಿಂದ 4.5 ಲಕ್ಷ ರೂ. ಗೆ ಏರಿಸಲಾಗಿದೆ.

    06.  ಉಜ್ವಲ: ಕೇಂದ್ರ ಸರ್ಕಾರದ ಮಹತ್ವಾಂಕ್ಷೆಯ ಯೋಜನೆ ಉಜ್ವಲ ಕಳೆದ ಬಾರಿ ಜಾರಿಯಾಗಿತ್ತು. ಉಜ್ವಲ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗುತ್ತಿತ್ತು. ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

    07. ಇಫಿಎಫ್: ಮಹಿಳಾ ಉದ್ಯೋಗಿಗಳ ಸಂಬಳದಲ್ಲಿ ಕಡಿತಗೊಳ್ಳುತ್ತಿದ್ದ ಇಪಿಎಫ್ ಪ್ರಮಾಣವನ್ನು 9% ನಿಂದ 8%ಕ್ಕೆ ಇಳಿಸಲಾಗಿದೆ. ಇಪಿಎಫ್ ಕಡಿತದ ಪ್ರಮಾಣ ಕಡಿಮೆ ಆಗುವುದರಿಂದ ಮಹಿಳೆ ಉದ್ಯೋಗಿಗಳ ಕೈಗೆ ಹೆಚ್ಚು ನಗದು ಬರಲಿದೆ. ಹೊಸ ಉದ್ಯೋಗಸ್ಥರಿಗೆ ಸಂಬಳದಲ್ಲಿ ಕಡಿತಗೊಳ್ಳುವ ಇಪಿಎಫ್ ಪ್ರಮಾಣವನ್ನು 12%ಕ್ಕೆ ಹೆಚ್ಚಿಸಲಾಗಿದೆ.

    08. ರೈಲ್ವೆ: ರೈಲ್ವೆ ಸಾರಿಗೆಯನ್ನು ಮೀಟರ್ ಗೇಜ್‍ನ್ನು ಬ್ರಾಡ್ ಗೇಜ್ ಗೆ ಬದಲಾಯಿಸುವ ಗುರಿಯನ್ನು ಹೊಂದಿದೆ. 25 ಸಾವಿರ ರೈಲ್ವೇ ನಿಲ್ದಾಣಗಳಲ್ಲಿ ಎಕ್ಸಲೇಟರ್ ಅಳವಡಿಕೆ, 600 ರೈಲ್ವೇ ನಿಲ್ದಾಣಗಳ ಆಧುನೀಕರಣ, 90ಕಿಮೀ ವೇಗದಲ್ಲಿ ಚಲಿಸುವ ರೈಲು ಮಾರ್ಗದಲ್ಲಿ ಡಬಲ್ ಲೈನ್ ನಿರ್ಮಾಣ ಮಾಡಲಾಗುವುದು. ಮುಂಬೈನ ಲೋಕಲ್ ರೈಲುಗಳ ಸಂಖ್ಯೆಯಲ್ಲಿ ಏರಿಕೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ

    09. ಗ್ರಾಮ ಪಂಚಾಯ್ತಿ: ದೇಶದ 1 ಲಕ್ಷ ಗ್ರಾಮ ಪಂಚಾಯ್ತಿಗಳಿಗೆ ಇಂಟರ್ ನೆಟ್ ಸಂಪರ್ಕ. ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾದಲ್ಲಿ ಇ-ಪೇಮೆಂಟ್ ಅಳವಡಿಕೆ. ದೇಶದ ಗಡಿ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.

  • ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು: ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ಕೊಟ್ಟಿದ್ದು, ನಗರದಲ್ಲಿ ಇನ್ಮುಂದೆ ಕಸ ವಿಲೇವಾರಿಗಾಗಿ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದೆ.

    ಹೌದು, ಮಹಾನಗರ ಜನರು ಮೇಲೆ ಬಿಬಿಎಂಪಿ ಕೌಸ್ಸಿಲ್ ಆಸ್ತಿಯ ವಿಸ್ತೀರ್ಣ ಆಧರಿಸಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಕಳೆದ 7 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ. ಲೆಕ್ಕ ಪರಿಶೋಧಕರ ಆಕ್ಷೇಪವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸ್ಥಾಯಿ ಸಮಿತಿ ಸಲಹೆ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳಲಿದೆ ಅಂತಾ ಪಾಲಿಕೆಯ ಅರೋಗ್ಯ ಮತ್ತು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ.

    ಇದುವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ತೆರಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಆಸ್ತಿ ವಿಸ್ತೀರ್ಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಈ ಕುರಿತು ಕೌನ್ಸಿಲ್ ನಲ್ಲಿ ಚರ್ಚೆ ನಡೆದು ಒಪ್ಪಿಗೆ ಪಡೆದರೆ ಸಾರ್ವಜನಿಕರು ಶೇ.15ರಷ್ಟು ಹೆಚ್ಚಿನ ಕಸದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ತೆರಿಗೆ ಹೆಚ್ಚಳಕ್ಕೆ ವಿರೋಧ: ಬಿಬಿಎಂಪಿ ತೆರಿಗೆ ಹೆಚ್ಚಳ ಪ್ರಸ್ತಾವನೆಗೆ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಶಾಲಾ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳು, ಟೆಕ್‍ಪಾರ್ಕ್‍ಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಿಬಿಎಂಪಿ ಈ ನಿರ್ಧಾರ ವಾಪಸ್ ಪಡೆಯದೆ ಹೋದರೆ ಅಹೋರಾತ್ರಿ ಧರಣಿಯ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಿಬಿಎಂಪಿ ಕಸ ವಿಲೇವಾರಿ ಮಾಡಲು ಅಧಿಕ ವೆಚ್ಚ ಮಾಡುತ್ತಿದ್ದು, ಪ್ರಸ್ತುತ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಸ ನಿರ್ವಹಣೆ ಸಮಸ್ಯೆ ನಗರದಲ್ಲಿ ಪ್ರಮುಖ ಸಮಸ್ಯೆ ಆಗಿರುವುದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೇ ಇದುವರೆಗೆ ಬಿಬಿಎಂಪಿ ಬಾಡಿಗೆ ನೀಡಿದ ಕಟ್ಟಡಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹೊಸ ಪ್ರಸ್ತಾವನೆಯಲ್ಲಿ ರದ್ದು ಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಬಿಬಿಎಂಪಿ ತೆರಿಗೆ ಹೆಚ್ಚಳ ನಿರ್ಧಾರದಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಹೆಚ್ಚಳವಾಗಲಿದೆ. ಅಲ್ಲದೇ ನಗರದಲ್ಲಿ ವಾಸಿಸುತ್ತಿರುವ ಗಣ್ಯರಿಗೂ ತೆರಿಗೆ ಹೆಚ್ಚಳ ಬಿಸಿ ತಟ್ಟಲಿದೆ.

  • ಅಂದು ನೋಟು ನಿಷೇಧ, ಈಗ ಜಿಎಸ್‍ಟಿ – ಒಂದೇ ತೆರಿಗೆಯಿಂದ ಮದುವೆ ಆಯ್ತು ದುಬಾರಿ!

    ಅಂದು ನೋಟು ನಿಷೇಧ, ಈಗ ಜಿಎಸ್‍ಟಿ – ಒಂದೇ ತೆರಿಗೆಯಿಂದ ಮದುವೆ ಆಯ್ತು ದುಬಾರಿ!

    ನವದೆಹಲಿ: ಕಳೆದ ವರ್ಷ ಮದುವೆ ಸಮಾರಂಭಕ್ಕೆ ನೋಟು ನಿಷೇಧ ಮಾಡಿ ಪ್ರಧಾನಿ ಮೋದಿ ಸರ್ಕಾರ ಶಾಕ್ ಕೊಟ್ಟಿತ್ತು. ಈ ಬಾರಿ ದೇಶದಲ್ಲಿ ಒಂದೇ ತೆರಿಗೆ ನೀತಿಯಿಂದ ಮತ್ತೊಂದು ಶಾಕ್ ಕೊಟ್ಟಿದೆ. ಜಿಎಸ್‍ಟಿ ಜಾರಿಯಿಂದ ಮದುವೆ ಸಮಾರಂಭ ದುಬಾರಿಯಾಗಿದೆ.

    ಮುಂದಿನ ನವೆಂಬರ್ ತಿಂಗಳಲ್ಲಿ ಮದುವೆಗಳು ಪ್ರಾರಂಭವಾಗುವುದರಿಂದ ಜಿಎಸ್‍ಟಿಯಿಂದಾಗಿ ಬಂಗಾರ, ಮದುವೆ ಹಾಲ್ ಬುಕ್ಕಿಂಗ್, ಬಟ್ಟೆ, ಶಾಪಿಂಗ್, ಶಾಮಿಯಾನ, ಊಟ-ತಿಂಡಿ, ಬ್ಯೂಟಿ ಪಾರ್ಲರ್ ಮತ್ತು ವಿವಾಹದ ಇನ್ನಿರ ಸೇವೆಗಳ ಮೇಲೆ ಶೇಕಡಾ 10 ರಿಂದ 15 ರಷ್ಟು ಪರಿಣಾಮ ಬೀರಬಹುದು ಎಂದು ಎಂದು ಉದ್ಯಮ ಚೇಂಬರ್ ಅಸೋಚಾಮ್ ಹೇಳಿದೆ.

    ಮದುವೆ ಸೇವೆಗಳಾದ ಶಾಪಿಂಗ್, ಟೆಂಟ್ ಬುಕ್ಕಿಂಗ್, ಊಟದ ಸೇವೆ ಮುಂತಾದವುಗಳು ಜಿಎಸ್‍ಟಿಯಿಂದ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಜಿಎಸ್‍ಟಿ ದರ ಸುಮಾರು 18 ರಿಂದ 28ರವರೆಗೆ ಇರುತ್ತದೆ. ಜಿಎಸ್‍ಟಿ ಜಾರಿಗೆ ಬರುವ ಮುಂಚೆ ಇಂತಂಹ ವಿವಾಹದ ವ್ಯವಹಾರಗಳಿಗೆ ಯಾವುದೇ ರೀತಿಯ ಬಿಲ್‍ಗಳನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಯಾವುದೇ ತೆರೆಯನ್ನು ಪಾವತಿಸಬೇಕಿರಲಿಲ್ಲ. ಅವುಗಳನ್ನು ಒಂದು ಕಾಗದಲ್ಲಿ ಮಾತ್ರ ಬರೆದುಕೊಳ್ಳುತ್ತಿದ್ದರು.

    ಹಾಗಾದ್ರೆ ಜಿಎಸ್‍ಟಿಯಿಂದ ಮದುವೆ ಮೇಲೆ ಹೇಗೆ ಹೊರೆ ಬಿದ್ದಿದೆ ಅಂತಾ ನೋಡೋದಾದ್ರೆ:

    •  500 ರೂ. ಗಿಂತ ಮೇಲ್ಪಟ್ಟ ಪಾದರಕ್ಷೆಗೆ ಶೇಕಡಾ 18 ರಷ್ಟು ತೆರಿಗೆ.
    •  ಬಂಗಾರ ಸೇರಿದಂತೆ ಆಭರಣಗಳ ಮೇಲಿನ ತೆರಿಗೆ ಶೇ. 1.6 ರಿಂದ ಶೇ. 3ಕ್ಕೆ ಹೆಚ್ಚಳ.
    •  ಮದುವೆ ಛತ್ರ, ಗಾರ್ಡನ್ ಬುಕ್ಕಿಂಗ್‍ಗೆ ಶೇಕಡಾ 18 ರಷ್ಟು ತೆರಿಗೆ.
    •  ಸ್ಟಾರ್ ಹೋಟೆಲ್‍ಗಳಲ್ಲಿ ಮದುವೆ ಬುಕ್ಕಿಂಗ್‍ಗೆ ಶೇ.28 ರಷ್ಟು ತೆರಿಗೆ.
    •  ಜಿಎಸ್‍ಟಿಗೂ ಮೊದಲು ಇದಕ್ಕೆಲ್ಲಾ ಬಿಲ್ ನೀಡುವ ಅಗತ್ಯವಿರಲಿಲ್ಲ.
    •  ಜಿಎಸ್‍ಟಿ ಜಾರಿ ಬಳಿಕ ಬಿಲ್ ನೀಡೋದು ಕಡ್ಡಾಯ.