Tag: tax

  • ಐಟಿ ರಿಟರ್ನ್ಸ್ ಸಲ್ಲಿಸಲು ನಾಳೆ ಕೊನೆಯ ದಿನ: ತಪ್ಪಿದರೆ ದಂಡ

    ಐಟಿ ರಿಟರ್ನ್ಸ್ ಸಲ್ಲಿಸಲು ನಾಳೆ ಕೊನೆಯ ದಿನ: ತಪ್ಪಿದರೆ ದಂಡ

    ನವದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು, ಸಲ್ಲಿಸದೇ ಇದ್ದರೆ ದಂಡ ಪಾವತಿಸಬೇಕಾಗುತ್ತದೆ.

    ಈ ಹಿಂದಿನ 2 ವರ್ಷಗಳಲ್ಲಿ ವೆಬ್‌ಸೈಟ್‌ ಸಮಸ್ಯೆ, ಕೋವಿಡ್‌ ಅಲೆ ಇತ್ಯಾದಿ ಕಾರಣಗಳಿಂದ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು. ಕಳೆದ ವರ್ಷ ಡಿ.31 ಅಂತಿಮ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಈ ವರ್ಷ ಗಡುವು ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಹಣ ವಸೂಲಿ: ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ

    ಕಳೆದ ವರ್ಷ ಒಟ್ಟು 5.89 ಕೋಟಿ ಜನ ರಿಟರ್ನ್‌ ಫೈಲ್ ಮಾಡಿದ್ದರು. ಈ ವರ್ಷ ಗುರುವಾರ ಸಂಜೆಯವರೆಗೆ 4 ಕೋಟಿ ಜನ ರಿಟರ್ನ್ಸ್ ಸಲ್ಲಿಕೆ ಮಾಡಿದ್ದು, ನಂತರ ನಿತ್ಯ 30 ಲಕ್ಷ ಜನರು ಸಲ್ಲಿಕೆ ಮಾಡುತ್ತಿದ್ದಾರೆ. ಜು.31ರ ಬಳಿಕವೂ ಸಲ್ಲಿಕೆ ಮಾಡಲು ಅವಕಾಶ ಇದೆಯಾದರೂ ದಂಡ ಪಾವತಿಸಬೇಕಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಟ್ಯಾಕ್ಸ್ ಕಟ್ಟುವುದರಲ್ಲೂ ಅಕ್ಷಯ್ ಕುಮಾರ್ ಮುಂದು: ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ

    ಟ್ಯಾಕ್ಸ್ ಕಟ್ಟುವುದರಲ್ಲೂ ಅಕ್ಷಯ್ ಕುಮಾರ್ ಮುಂದು: ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ

    ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿ ಸಿನಿಮಾದಲ್ಲೂ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಾರೆ ನಟ ಅಕ್ಷಯ್, ಅದರಂತೆಯೇ ಆದಾಯ ತೆರಿಗೆ ವಿಚಾರದಲ್ಲೂ ಎಲ್ಲೂ ರಾಜಿಯಾಗದೇ ಅತೀ ಹೆಚ್ಚು ಟ್ಯಾಕ್ಸ್ ಪಾವತಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ ಕೊಡಲಾಗಿದೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಬಾಲಿವುಡ್‌ನ ಟಾಪ್ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು ಪ್ರತಿ ಸಿನಿಮಾಗೆ ಅವರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತು, ಅನೇಕ ಪ್ರತಿಷ್ಠಿತ ಬ್ರ‍್ಯಾಂಡ್‌ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ದೇಶದ ಅನೇಕ ಕಡೆಗಳಲ್ಲಿ ಅಕ್ಷಯ್ ಕುಮಾರ್ ಆಸ್ತಿ ಹೊಂದಿದ್ದಾರೆ. ಹಲವು ಉದ್ಯಮದ ಮೇಲೆ ಅವರು ಹೂಡಿಕೆ ಮಾಡಿದ್ದಾರೆ. ಇದನ್ನೂ ಓದಿ:ಧನುಷ್- ಐಶ್ವರ್ಯ ರಜನಿಕಾಂತ್ ಡಿವೋರ್ಸ್‌ಗೆ ಬಾಲಿವುಡ್‌ನ ಈ ನಟಿ ಕಾರಣವಂತೆ!

    ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್ ಅವರು ತೆರಿಗೆ ಕಟ್ಟುವ ವಿಚಾರದಲ್ಲಿ ಹೆಚ್ಚು ನಿಷ್ಠೆ ತೋರಿಸಿದ್ದಾರೆ. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ್ ಕುಮಾರ್ ಪರವಾಗಿ ಅವರ ತಂಡದವರು ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರವನ್ನು ಸ್ವೀಕರಿಸಿದ್ದಾರೆ. ಅಕ್ಷಯ್ ಅಭಿಮಾನಿಗಳು ಈ ಸುದ್ದಿ ಕೇಳಿ ದಿಲ್ ಖುಷ್ ಆಗಿದ್ದಾರೆ. ಈ ಮೂಲಕ ಅಕ್ಷಯ್ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

    ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

    ನವದೆಹಲಿ: ನಿತ್ಯ ಅಗತ್ಯದ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆಯಿಂದ ದೇಶದಲ್ಲಿ ಹಣದುಬ್ಬರ ಇನ್ನಷ್ಟು ಹೆಚ್ಚುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದನ್ನು ಕೂಡ್ಲೇ ಹಿಂಪಡೆಯುವಂತೆ ಆಗ್ರಹಿಸಿ ಸಂಸತ್‍ನ ಒಳಗೆ-ಹೊರಗೆ ಭಾರೀ ಪ್ರತಿಭಟನೆ ನಡೆಸುತ್ತಿದೆ. ಇದು ಕ್ರೂರ ತೆರಿಗೆ ಎಂದಿದೆ. ಹೀಗಾಗಿ ಇಂದಿನ ಕಲಾಪವೂ ಯಾವುದೇ ಚರ್ಚೆ ಇಲ್ಲದೇ ಮುಂದೂಡಲ್ಪಟ್ಟಿದೆ.

    ಸಂಸತ್ ಆವರಣದಲ್ಲಿ, ಬೆಂಗಳೂರು ಸೇರಿ ದೇಶದ ಹಲವೆಡೆ ವಿಪಕ್ಷಗಳು ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿವೆ. ಇನ್ನು, ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳು ಸರ್ವಾನುಮತದ ನಿರ್ಧಾರದ ಮೇಲೆ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆಗೆ ಕೇಂದ್ರ ಒಪ್ಪಿಗೆ ಸೂಚಿಸಿತ್ತು ಎಂಬ ವಿತ್ತ ಸಚಿವೆ ಮಾತಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿದೆ. ಅಲ್ಲದೇ ಸ್ಮಶಾನಗಳಿಗೆ ಶೇಕಡಾ 18ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನ್ನಿಸಿ ಈಶ್ವರಪ್ಪ ಸಂಭ್ರಮ

    ಡಿಕೆಶಿ ಅವರಂತೂ ಹೆಣ ಹೂಳೋಕೂ ಜಿಎಸ್‍ಟಿ ಕಟ್ಬೇಕಂತೆ. ಏನ್ರೀ ಇದು ಎಂದು ಪ್ರಶ್ನೆ ಮಾಡಿದ್ರು. ಆದರೆ ಇದು ಸುಳ್ಳು ಸುದ್ದಿ.. ಹೆಣ ಹೂಳೋದಕ್ಕೆ, ಹೆಣ ಸುಡೋದಕ್ಕೆ ಯಾವುದೇ ಜಿಎಸ್‍ಟಿ ವಿಧಿಸಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸ್ಮಶಾನಗಳಲ್ಲಿ ನಡೆಯುವ ಗುತ್ತಿಗೆ ಕಾಮಗಾರಿಗಳಿಗೆ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗ್ತಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದೆ.

    ಈ ಮಧ್ಯೆ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಮಾರಲ್ಪಡುವ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸದಿರುವ ತೀರ್ಮಾನಕ್ಕೆ ಕೇರಳ ಸರ್ಕಾರ ಬಂದಿದೆ. ಇನ್ನು, ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆ ಅರ್ಥವಾಗುತ್ತದೆ. ಅವರು ಜಿಎಸ್‍ಟಿಯನ್ನು ಕಡಿಮೆ ಮಾಡಬಹುದು. ಈ ಶಕ್ತಿ ಪ್ರಧಾನಿ ಅವ್ರಲ್ಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇತ್ತ ಜಿಎಸ್‍ಟಿಯಿಂದ ರಾಜ್ಯಗಳಿಗೆ ನೀಡ್ತಿದ್ದ ನಷ್ಟ ಪರಿಹಾರದ ಅವಧಿ ವಿಸ್ತರಣೆಗೆ ಒಪ್ಪದ ಕೇಂದ್ರದ ಕ್ರಮವನ್ನು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ನವದೆಹಲಿ: ಜನಾಕ್ರೋಶಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಅಕ್ಕಿ, ಗೋಧಿ ಸೇರಿದಂತೆ 14 ವಸ್ತುಗಳಿಗೆ ಜಿಎಸ್‍ಟಿ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್‌, ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್‍ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕಲವೊಂದು ಷರತ್‍ನ್ನು ವಿಧಿಸಲಾಗದೆ. ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್‍ಟಿ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು ಮುಂತಾದ ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದ್ದು, ಜೂನ್ 28ರಂದು ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಈ ವಿಷಯವನ್ನು ಮಂಡಿಸುವಾಗ ಎಲ್ಲಾ ರಾಜ್ಯಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆದ ಕೆಪಿಸಿ ಅಧಿಕಾರಿಗಳು

    nirmala sithraman

    ಈ ನಿರ್ಧಾರದಲ್ಲಿ ಸಭೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳಾದ ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳು ಈ ನಿರ್ಧಾರವನ್ನು ಒಪ್ಪಿಕೊಂಡಿವೆ. ಜಿಎಸ್‌ಟಿ ಕೌನ್ಸಿಲ್‌ನ ಈ ನಿರ್ಧಾರವು ಮತ್ತೊಮ್ಮೆ ಒಮ್ಮತದಿಂದ ಬಂದಿದೆ ಎಂದು ಜಿಎಸ್‌ಟಿ ದರ ಏರಿಕೆಯ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಡಿಕೆಶಿ ಶಾಲೆಗೆ ಬಾಂಬ್ ಬೆದರಿಕೆ!

    Live Tv
    [brid partner=56869869 player=32851 video=960834 autoplay=true]

  • ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?

    ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?

    ನವದೆಹಲಿ: ಉಪ್ಪಿನಿಂದ ಹಿಡಿದು ಬೇಳೆಯವರೆಗೂ, ತರಕಾರಿಯಿಂದ ಹಿಡಿದು ಹಾಲಿನ ಪ್ಯಾಕೆಟ್‌ವರೆಗೂ ಆನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇದು ಸಾಲದು ಎಂದು ಸೋಮವಾರದಿಂದ ನಿತ್ಯದ ಅಗತ್ಯ ವಸ್ತುಗಳ ಮೇಲೆ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಹೇರಿ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.

    ಕಳೆದ ತಿಂಗಳು ನಡೆದ ಜಿಎಸ್‌ಟಿಯ 47ನೇ ಸಮಾವೇಶದಲ್ಲಿ ಹಲವು ರೀತಿಯ ದೈನಂದಿನ ಬಳಕೆಯ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸಿ ತೀರ್ಮಾನ ತೆಗೆದುಕೊಂಡಿದೆ. ಇದು ನಾಳೆಯಿಂದ ಜಾರಿಗೆ ಬರಲಿದ್ದು, ನೇರವಾಗಿ ಮತ್ತು ಪರೋಕ್ಷವಾಗಿ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರಿಗೆ ಇನ್ನಷ್ಟು ಕರಭಾರ ಹೇರಲಿದೆ.

    ಜಿಎಸ್‌ಟಿಯಿಂದಾಗಿ ಜನಸಾಮಾನ್ಯರು, ಹೋಟೆಲ್ ಉದ್ಯಮದವರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ. ಯಾವ್ಯಾವ ವಸ್ತುಗಳು ನಾಳೆಯಿಂದ ದುಬಾರಿ ಆಗಲಿವೆ ಎನ್ನುವ ಮಾಹಿತಿ ಇಲ್ಲಿದೆ.

    ಯಾವುದಕ್ಕೆ ಎಷ್ಟೆಷ್ಟು ಜಿಎಸ್‌ಟಿ?
    ಪ್ಯಾಕೆಟ್ ಹಾಲು, ಮೊಸರು, ಪ್ಯಾಕೆಟ್ ಲಸ್ಸಿ, ಮಜ್ಜಿಗೆ, ಉಪ್ಪಿನಕಾಯಿ, ತರಕಾರಿ, ಪ್ಯಾಕ್ ಮಾಡಿದ ಹಪ್ಪಳ, ಪ್ಯಾಕ್ ಮಾಡಿದ ಜೇನುತುಪ್ಪ, ಪ್ಯಾಕ್ ಮಾಡಿದ ಬೆಲ್ಲ, ಪ್ಯಾಕ್ ಮಾಡಿದ ಗೋಧಿ ಹಿಟ್ಟು, ಪ್ಯಾಕ್ ಮಾಡಿದ ಅಕ್ಕಿ, ಸಾವಯವ ಆಹಾರ, ಕಾಂಪೋಸ್ಟ್ ಗೊಬ್ಬರ, ಮೀನು ಇವಿಷ್ಟಕ್ಕೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನೂ ಓದಿ: ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜೂನ್ 21ಕ್ಕೆ ಮತ ಎಣಿಕೆ

    ಹೋಟೆಲ್ ರೂಮ್ಸ್(1,000 ರೂ. ಒಳಗಿನ ಬಾಡಿಗೆ) – ಶೇ.12, ಹಾಸ್ಪಿಟಲ್ ರೂಮ್ಸ್(5,000 ರೂ. ಮೇಲ್ಪಟ್ಟ ಬಾಡಿಗೆ) – ಶೇ.5, ಸೋಲಾರ್ ವಾಟರ್ ಹೀಟರ್ – ಶೇ.5 ರಿಂದ ಶೇ.12ಕ್ಕೆ ಹೆಚ್ಚಳವಾಗಿದೆ. ಚರ್ಮದ ಉತ್ಪನ್ನಗಳು – ಶೇ.5 ರಿಂದ ಶೇ.12ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.

    ಭೂಪಟ, ಅಟ್ಲಾಸ್ – ಶೇ.12, ಪ್ರಿಂಟಿಂಗ್, ಇಂಕ್, ಪೆನ್ಸಿಲ್, ಮೆಂಡರ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಡ್ರಾಯಿಂಗ್‌ಗೆ ಬಳಸುವ ಉಪಕರಣಗಳು – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಬ್ಲೇಡ್, ಸ್ಪೂನ್, ಫೋರ್ಕ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 944 ಪಾಸಿಟಿವ್ ಕೇಸ್ – 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಎಲ್‌ಇಡಿ ಬಲ್ಬ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಮೋಟಾರ್ ಪಂಪ್, ಸೈಕಲ್ ಪಂಪ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ರುಬ್ಬವ ಯಂತ್ರ, ಡೈರಿ ಮೆಷಿನ್ – ಶೇ.12 ರಿಂದ ಶೇ.18ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.

    ಜಿಎಸ್‌ಟಿ ಇಳಿಕೆ:
    ಆರ್ಥೋಪೆಡಿಕ್ ಉಪಕರಣ – ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಟ್ರಾನ್ಸ್‌ಪೋರ್ಟ್ ಗೂಡ್ಸ್ – ಶೇ.18 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಬಾಡಿಗೆ ಟ್ರಕ್, ಇತರೆ ವಾಹನಗಳ ಬಾಡಿಗೆ ಮೇಲಿನ ಸುಂಕ ಇಳಿಕೆಯಾಗಿದೆ.

    ಜಿಎಸ್‌ಟಿ ಹೇರಿಕೆ ಬೆನ್ನಲ್ಲೇ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ತನ್ನ ಉತ್ಪನ್ನಗಳ ಬೆಲೆಯನ್ನು ಸಹಜವಾಗಿಯೇ ಏರಿಕೆ ಮಾಡಿದೆ. ಸದ್ಯ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಉಳಿದಂತೆ ಯಾವ ಯಾವ ಉತ್ಪನ್ನಗಳ ಬೆಲೆ ಎಷ್ಟೆಷ್ಟು ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

    ನಂದಿನಿ ಹಾಲಿನ ಬೆಲೆ ಸದ್ಯಕ್ಕೆ ಏರಿಕೆಯಾಗಿಲ್ಲ. ಲೀಟರ್ ಮೊಸರಿನ ಬೆಲೆ 43 ರೂ.ನಿಂದ 46 ರೂ.ಗೆ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು – 22 ರೂ.ನಿಂದ 24 ರೂ.ಗೆ ಏರಿಕೆಯಾಗಿದೆ. ಮಜ್ಜಿಗೆ 200 ಎಂಎಲ್ – 7 ರೂ.ನಿಂದ 8 ರೂ.ಗೆ ಏರಿಕೆಯಾಗಿದೆ. ಪ್ಯಾಕೆಟ್ ಲಸ್ಸಿ – 10 ರೂ.ನಿಂದ 11ರೂ.ಗೆ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ನವದೆಹಲಿ: ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಿದೆ.

    ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ (CBIC) ತಿಳಿಸಿದೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

    ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ 8 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡಿದಂತಾಗಿದೆ. ನಿನ್ನೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪ್ರತಿ ಲೀಟರ್‌ಗೆ 2.48 ರೂ. ಮತ್ತು ಡೀಸೆಲ್‌ಗೆ 1.16 ರಷ್ಟು ಕಡಿಮೆ ಮಾಡಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿತಗೊಳಿಸಿರುವುದರಿಂದ ರಾಜ್ಯ ಸರ್ಕಾರವೂ ದರ ಇಳಿಕೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ 10.48 ರೂ. ಮತ್ತು ಡೀಸೆಲ್ 7.16 ರೂ.ಗಳಷ್ಟು ಕಡಿತವಾಗಲಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳನ್ನು ನೋಡಬಹುದು.

    PETROL

    ಎಲ್ಲಿ – ಎಷ್ಟು ದರ?
    * ಮುಂಬೈ: ಪೆಟ್ರೋಲ್ 113.33 ರೂ., ಡೀಸೆಲ್ 97.26 ರೂ.
    * ಕೋಲ್ಕತ್ತಾ: ಪೆಟ್ರೋಲ್ 106.01 ರೂ., ಡೀಸೆಲ್ 92 ರೂ.
    * ಚೆನ್ನೈ: ಪೆಟ್ರೋಲ್ 102.62 ರೂ., ಡೀಸೆಲ್ 94.22 ರೂ.
    * ಬೆಂಗಳೂರು: ಪೆಟ್ರೋಲ್ 101.92 ರೂ., ಡೀಸೆಲ್ 87 ರೂ.
    * ಗುರುಗ್ರಾಮ್: ಪೆಟ್ರೋಲ್ 97.17 ರೂ., ಡೀಸೆಲ್ 90 ರೂ..
    * ಒಡಿಶಾ: ಪೆಟ್ರೋಲ್ 102 ರೂ., ಡೀಸೆಲ್ 94.86 ರೂ.
    * ದಕ್ಷಿಣ ಕನ್ನಡ: ಪೆಟ್ರೋಲ್ 101.13 ರೂ., ಡೀಸೆಲ್ 87.13 ರೂ.

  • ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ನವದೆಹಲಿ: ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ ಶೇ. 28ರಷ್ಟು ತೆರಿಗೆ ವಿಧಿಸಲು ಸಚಿವರ ಸಮಿತಿಯು ಶಿಫಾರಸು ಮಾಡಿದೆ.

    ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

    ಮೇ 2 ರಂದು ಸಮಿತಿ ಸಭೆ ನಡೆಸಿತ್ತು. ಈಗ ಸಮಿತಿ ಶಿಫಾರಸು ಮಾಡಿದ್ದು ಈ ವರದಿಯನ್ನು ಜಿಎಸ್‌ಟಿ ಮಂಡಳಿಯ ಮುಂಬರುವ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿದೆ. ಇದನ್ನೂ ಓದಿ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಂದೆರಡು ದಿನಗಳಲ್ಲಿ ಸಮಿತಿಯ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಸಂಗ್ಮಾ ಅವರು ಟ್ವೀಟ್ ಮಾಡಿದ್ದಾರೆ.

    ಪ್ರಸ್ತುತ ಈಗ ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇರುವ ಆನ್‌ಲೈನ್‌ ಆಟಗಳಿಗೆ ಶೇ.28 ರಷ್ಟು ತೆರಿಗೆ, ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇಲ್ಲದ ಆನ್‌ಲೈನ್‌ ಆಟಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕುದುರೆ ರೇಸ್‌ಗಳ ಒಟ್ಟು ಬೆಟ್‌ ಮೌಲ್ಯದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

  • ತೆರಿಗೆ ಹಣ ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸುವುದು ಹೇಗೆಂದು ಕೇಜ್ರಿವಾಲ್ ತೋರಿಸಿಕೊಟ್ಟಿದ್ದಾರೆ: ಪೃಥ್ವಿ ರೆಡ್ಡಿ

    ತೆರಿಗೆ ಹಣ ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸುವುದು ಹೇಗೆಂದು ಕೇಜ್ರಿವಾಲ್ ತೋರಿಸಿಕೊಟ್ಟಿದ್ದಾರೆ: ಪೃಥ್ವಿ ರೆಡ್ಡಿ

    ಬೆಂಗಳೂರು: ಭ್ರಷ್ಟಾಚಾರವಿಲ್ಲದ ಆಡಳಿತ ನೀಡಬಹುದು ಎಂಬುದನ್ನು ದೆಹಲಿಯ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ತೋರಿಸಿಕೊಟ್ಟಿದೆ. ತೆರಿಗೆ ಹಣವು ಕಳ್ಳ ರಾಜಕಾರಣಿಗಳ ಜೇಬು ಸೇರುವುದನ್ನು ತಪ್ಪಿಸಿ, ಅಲ್ಲಿನ ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ನೀಡುವುದಕ್ಕೆ ಬಳಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೃಥ್ವಿ ರೆಡ್ಡಿ, ಕೇಜ್ರಿವಾಲ್‍ರವರು ಏಪ್ರಿಲ್ 21ರಂದು ಬೆಂಗಳೂರಿಗೆ ಆಗಮಿಸಲಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಕೇಜ್ರಿವಾಲ್‍ರವರಿಗೆ ವಿಶೇಷ ಆಹ್ವಾನ ನೀಡಿದ್ದು, ಅವರು ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು 50 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

    ಜನಸಾಮಾನ್ಯರ ಕುಂದುಕೊರತೆಗಳನ್ನು ಅರಿತುಕೊಂಡು ಬದಲಾವಣೆ ತರುತ್ತಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಪ್ರಾಮಾಣಿಕ ವ್ಯಕ್ತಿಗಳು ರಾಜಕಾರಣಕ್ಕೆ ಬಂದರೆ ಜನಪರ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು. ಕಳೆದ 75 ವರ್ಷಗಳಲ್ಲಿ ಕರ್ನಾಟಕದ ರೈತರು ಮೂರೂ ಪಕ್ಷಗಳಿಗೆ ಮತ ನೀಡಿ ಗೆಲ್ಲಿಸಿ ಕಳುಹಿಸಿದರು. ಮೂರೂ ಪಕ್ಷಗಳಲ್ಲಿ ಯಾರೂ ರೈತನ ಬವಣೆ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರಿಂದ ಅನ್ಯಾಯ ಎದುರಿಸಿ ತಾವೇ ರಾಜಕಾರಣಕ್ಕಿಳಿಯಲು ರೈತರು ತೀರ್ಮಾನಿಸಿದ್ದಾರೆ. ಅವರ ಮುಂದಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ, ಆಮ್ ಆದ್ಮಿ ಪಾರ್ಟಿಯೊಂದೇ ತಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    ಇತ್ತೀಚೆಗೆ ನಡೆದ ಪಂಜಾಬ್ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಎಎಪಿ ಗೆದ್ದಿದೆ. ಇದರಲ್ಲಿ 82 ಜನರು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದವರು. ಬೇರೆ ಪಕ್ಷದವರ ರೀತಿ ಎಎಪಿ ವ್ಯಕ್ತಿಯ ಬ್ಯಾಂಕ್ ಬ್ಯಾಲೆನ್ಸ್ ನೋಡುವುದಿಲ್ಲ. ಬದಲಾಗಿ, ಆತನ ಸಾಮಾಜಿಕ ಕಾಳಜಿ ಹಾಗೂ ಮತದಾರರ ಬಗ್ಗೆ ಇರುವ ಕಳಕಳಿಯನ್ನು ನೋಡುತ್ತದೆ. ಸಾಮಾನ್ಯರನ್ನು ನಾಯಕರನ್ನಾಗಿ ಮಾಡುವ ಎಎಪಿಯನ್ನು ಜನಸಾಮಾನ್ಯರು ಬಳಸಿಕೊಳ್ಳಬೇಕು ಎಂದು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಭಾಸ್ಕರ್ ರಾವ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಸಂಚಿತ್ ಸೆಹ್ವಾನಿ, ಜಗದೀಶ್ ವಿ ಸದಂ, ಬಿ.ಟಿ ನಾಗಣ್ಣ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ವಿಜಯ್ ಶಾಸ್ತ್ರಿಮಠ ಕುಶಲ ಸ್ವಾಮಿ, ಉಷಾ ಮೋಹನ್ ಸೇರಿದಂತೆ ಹಲವಾರು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ.. : ಪ್ರಮೋದ್ ಮುತಾಲಿಕ್

  • ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್

    ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್

    ಲಕ್ನೋ: ಅಯೋಧ್ಯೆ ದೇವಾಲಯಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ತೆರಿಗೆ ವಿನಾಯಿತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

    ಅಯೋಧ್ಯೆಯ ದೇವಾಲಯಗಳು ಮತ್ತು ಇತರ ದೇವಾಲಯಗಳ ಮೇಲೆ ವಾಣಿಜ್ಯ ತೆರಿಗೆಯನ್ನು ವಿಧಿಸದಂತೆ ನಗರದ ಮುನ್ಸಿಪಲ್ ಕಾರ್ಪೊರೇಶನ್‍ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅದೇಶಿಸಿದ್ದಾರೆ. ನಗರದ ದೇವಸ್ಥಾನಗಳು, ಧರ್ಮಶಾಲೆಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ ನಡೆಯುವ ಜಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ, ಆದಿತ್ಯನಾಥ್ ಅವರು ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಭಗವಾನ್ ರಾಮ ಮಂದಿರದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ರಾಜ್ಯದ ಉಸ್ತುವಾರಿ ವಹಿಸಿಕೊಂಡ ನಂತರ ಅಯೋಧ್ಯೆಗೆ ಮೊದಲ ಭೇಟಿ ನೀಡಿದ ಆದಿತ್ಯನಾಥ್ ಅವರು ದೇವಾಲಯದ ಪಟ್ಟಣದಲ್ಲಿ ಮುಂಬರುವ ರಾಮ ನವಮಿ ಮೇಳದ ಸಿದ್ಧತೆಯನ್ನು ಪರಿಶೀಲಿಸಿದರು.

  • ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಬಳಿ ಚರ್ಚೆ ಮಾಡ್ತೇನೆ: ಆರ್.ಅಶೋಕ್

    ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಬಳಿ ಚರ್ಚೆ ಮಾಡ್ತೇನೆ: ಆರ್.ಅಶೋಕ್

    ಬೆಂಗಳೂರು: ಜೇಮ್ಸ್ ಚಿತ್ರದ ತೆರಿಗೆ ವಿನಾಯಿತಿ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಮನದಾಳದ ಶುಭಾಶಯ ಹೇಳುತ್ತೇನೆ. ಅವರು ಇಂದು ಇಲ್ಲ. ವ್ಯಕ್ತಿ ಮೃತಪಟ್ಟ ಬಳಿಕ ನೆನಪು ಮಾಡಿಕೊಳ್ಳಲ್ಲ. ಆದರೆ ಪುನೀತ್ ಮೃತರಾದ ಬಳಿಕವೂ ಅವರ ಹುಟ್ಟುಹಬ್ಬದ ಆಚರಣೆ ಮಾಡಲಾಗುತ್ತಿದೆ. ಇದರಲ್ಲೇ ಅವರ ಅಭಿಮಾನ ಎಷ್ಟು ಅಂತ ತಿಳಿಯುತ್ತದೆ. ಅವರಿಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಹೇಳಿದ್ದಾರೆ. ಕುಟುಂಬದ ಜೊತೆ ಮಾತನಾಡಿ ತೀರ್ಮಾನ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಹಾಗೂ ಜೇಮ್ಸ್ ನಡುವೆ ಹೋಲಿಕೆ ಮಾಡಿ ತಂದು ಹಾಕ್ಬೇಡಿ: ಸಿ.ಟಿ.ರವಿ

    ನಾನು ಕಾವೇರಿ ಥಿಯೇಟರ್ ಮೂಲಕ ಬಂದೆ. ಅಲ್ಲಿನ ಸಂಭ್ರಮಾಚರಣೆ ನೋಡಿಕೊಂಡು ಬಂದಿದ್ದೇನೆ. ರಾತ್ರಿ ಹನ್ನೆರಡು ಗಂಟೆಯಲ್ಲೂ ಹುಟ್ಟುಹಬ್ಬದ ಸಂಭ್ರಮ ನೋಡಿದೆ. ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬುರ್ಕಾ ಮಾನಸಿಕ ಗುಲಾಮಗಿರಿ ಸಂಕೇತ ಅಂತ ಅಂಬೇಡ್ಕರ್ ಹೇಳಿದ್ದಾರೆ: ಸಿ.ಟಿ.ರವಿ