Tag: tax

  • ಯಾವ್ಯಾವ ತೆರಿಗೆ ಹೆಚ್ಚಿಸಬೇಕು ಅನ್ನೋದನ್ನ ಪರಿಶೀಲನೆ ಮಾಡ್ತೀವಿ – ಡಿಸಿಎಂ ಡಿಕೆಶಿ

    ಯಾವ್ಯಾವ ತೆರಿಗೆ ಹೆಚ್ಚಿಸಬೇಕು ಅನ್ನೋದನ್ನ ಪರಿಶೀಲನೆ ಮಾಡ್ತೀವಿ – ಡಿಸಿಎಂ ಡಿಕೆಶಿ

    ಬೆಂಗಳೂರು: ನಗರದಲ್ಲಿ ಎಲ್ಲೆಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿದೆ? ಎಲ್ಲೆಲ್ಲಿ ತೆರಿಗೆ ವಂಚನೆಯಾಗುತ್ತಿದೆ? ಯಾವ-ಯಾವ ತೆರಿಗೆಗಳನ್ನ (Tax) ಹೆಚ್ಚಿಸಬೇಕು? ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಡಿಸಿಎಂ ಆಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು (Bengaluru Waste Disposal Unit) ಹಾಗೂ ಇಂದಿರಾ ಕ್ಯಾಂಟಿನ್ ಗಳ ಕಾರ್ಯವೈಖರಿ ಪರಿಶೀಲನೆಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಲು 500 ರೂ. ಕಂತೆಯನ್ನೇ ಹೊರತೆಗೆದ ಡಿಕೆಶಿ

    ಇಂದು ಅಧಿಕಾರಿಗಳಿಗೆ ಮಾಹಿತಿ ನೀಡದೇ ಇಂದಿರಾ ಕ್ಯಾಂಟೀನ್ (Indira Canteen), ಘನತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿದ್ದೇನೆ. ಇಂದಿರಾ ಕ್ಯಾಂಟೀನ್ ನಲ್ಲಿ ಕೆಲವು ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಜೊತೆಗೆ ಘನತ್ಯಾಜ್ಯ ಘಟಕಗಳಲ್ಲಿ ಪರಿಶೀಲನೆ ಮಾಡಿದ್ದು, ಅಲ್ಲಿನ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಮೊದಲು ಸರ್ಕಾರದ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ನಂತರ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈ ಎಲ್ಲ ಸಂಸ್ಥೆಗಳ ಕಾರ್ಯವೈಖರಿ ಸರಿಯಾದ ರೀತಿಗೆ ತರುವ ಕೆಲಸವನ್ನು ಮೊದಲು ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ

    ಕಸದಿಂದ ಇಂಧನ ಉತ್ಪಾದನೆ ಮಾಡುವುದಾಗಿ ಹೇಳಿ ಜವಾಬ್ದಾರಿ ವಹಿಸಿಕೊಂಡವರು ಇಂಧನ ಉತ್ಪಾದನೆ ಮಾಡುತ್ತಿಲ್ಲ. ಈ ಘಟಕಗಳ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳೂ ಪರಿಶೀಲನೆ ಮಾಡ್ತಿಲ್ಲ. ಬೆಂಗಳೂರು ನಗರ ಸ್ವಚ್ಛವಾಗಿಡಬೇಕು. ಆದ್ರೆ ರಸ್ತೆ ಮಧ್ಯದಲ್ಲಿ ಕಸದ ರಾಶಿ ಇರುವ ಬಗ್ಗೆ ಪರಿಶೀಲನೆ ಮಾಡಿ ಅಧಿಕಾರಿಗಳನ್ನ ಪ್ರಶ್ನಿಸಿದ್ದೇನೆ. ಈ ಮಧ್ಯೆ ಲಾರಿ ಮಾಲೀಕರ ಸಂಘದ ಜೊತೆ ಚರ್ಚೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

    ಕಸ ತಂದು ರಸ್ತೆಗೆ ಸುರಿಯುತ್ತಿರುವ ವಾಹನಗಳ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ಸಂಸ್ಕರಣ ಘಟಕಗಳ ಲೆಕ್ಕಾಚಾರದಲ್ಲಿ ಏರುಪೇರುಗಳಿದ್ದು, ಅದೆಲ್ಲವನ್ನೂ ಸರಿಪಡಿಸುತ್ತೇವೆ. ಘಟಕಕ್ಕೆ ಬರುವ ಪ್ರತಿ ಕಸದ ವಾಹನಗಳ ವಿಡಿಯೋ ದಾಖಲೆ ಮಾಡಿಸಿದ್ದೇನೆ. ಎಲ್ಲವೂ ಲೆಕ್ಕ ಸರಿಯಾಗಿ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ನೋಡಬೇಕು. ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ್ದೆ. ಒಂದು ಕಡೆ 9 ಗಂಟೆಗೆ 200ಕ್ಕೂ ಹೆಚ್ಚು ಪ್ಲೇಟ್ ತಿಂಡಿ ಖಾಲಿ ಆಗಿತ್ತು. ಅಲ್ಲಿ 5 ರೂ. ಬದಲು 10 ರೂ. ಪಡೆಯಲಾಗಿದೆ. ಅಲ್ಲಿದ್ದ ಸಹಾಯವಾಣಿ ಸಂಖ್ಯೆ ದುರಸ್ತಿಯಲ್ಲಿತ್ತು. ಆದಷ್ಟು ಬೇಗ ಈ ಲೋಪದೋಷ ಸರಿಪಡಿಸಲಾಗುವುದು, ಎಲ್ಲಾ ಹಂತದಲ್ಲೂ ರಿಪೇರಿ ಮಾಡಲಾಗುವುದು ಎಂದು ಎಚ್ಚರಿಸಿದರು.

    ಈ ಮಧ್ಯೆ ದಾರಿ ಮಧ್ಯದಲ್ಲಿ ಸೀಗೆಹಳ್ಳಿ ರಸ್ತೆಯಲ್ಲಿ ಸಾಗುವಾಗ ಮಾಗಡಿ ರಸ್ತೆ ಬದಿಯಲ್ಲಿ ಕಸದ ರಾಶಿ ಕಂಡ ಡಿಸಿಎಂ ಪರಿಶೀಲನೆಗೆ ಮುಂದಾದರು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದ ಕಸದ ರಾಶಿ ಕಂಡು, ಬೆಂಗಳೂರು ನಗರದ ರಸ್ತೆಯಲ್ಲೇ ಈ ರೀತಿ ಕಸ ಎಸೆದು ಹೋದ್ರೆ ಅದಕ್ಕೆ ಹೊಣೆ ಯಾರು? ಎಂದು ಪಾಲಿಕೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ : ಹೆಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನೆ

    ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ : ಹೆಚ್‌ಡಿಕೆಗೆ ಕಾಂಗ್ರೆಸ್‌ ಪ್ರಶ್ನೆ

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ (Siddaramaiah Government) ವಿರುದ್ಧ ವೈಎಸ್‌ಟಿ ಟ್ಯಾಕ್ಸ್‌ (YST Tax) ಕುಮಾರಸ್ವಾಮಿ (HD Kumaraswamy) ವಿರುದ್ಧ ಕಾಂಗ್ರೆಸ್‌ ಕೆಎಸ್‌ಟಿ ಟ್ಯಾಕ್ಸ್‌ (KST Tax) ಆರೋಪ ಮಾಡಿದೆ.

    ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು? ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದೆ.

    ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ “KST” ಸಂಗ್ರಹದ ಹಣ ಬಳಸುತ್ತಿದ್ದೀರಾ ಎಂದು ಪ್ರಶ್ನಿಸಿ #KSTkumara ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದೆ.   ಇದನ್ನೂ ಓದಿ: ಕಾಲೇಜು ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು


    ಎರಡು ದಿನದ ಹಿಂದೆ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಟ್ಯಾಕ್ಸ್ ಜಾರಿಯಾಗಿದೆ. ದೇಶದಲ್ಲಿ ಜಿಎಸ್‍ಟಿ ಟ್ಯಾಕ್ಸ್ ಇರುವ ಹಾಗೆ ಈ ಸರ್ಕಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಮಾರಸ್ವಾಮಿ ಇಷ್ಟು ಬೇಗ ಮೈ ಪರಚಿಕೊಳ್ಳುವ ಅಗತ್ಯವಿಲ್ಲ : ಗುಂಡೂರಾವ್

    ಕುಮಾರಸ್ವಾಮಿ ಇಷ್ಟು ಬೇಗ ಮೈ ಪರಚಿಕೊಳ್ಳುವ ಅಗತ್ಯವಿಲ್ಲ : ಗುಂಡೂರಾವ್

    ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರಿಗೆ ನೆರವಾಗುತ್ತಿದೆ. ಕುಮಾರಸ್ವಾಮಿ (Kumraswamy) ಅವರು ಸ್ವಲ್ಪ ಇನ್ನೂ ಕಾದು ನೋಡಬೇಕು. ಈಗಲೇ ಕಾಂಗ್ರೆಸ್ ಸರ್ಕಾರವನ್ನು (Congress Government) ಟೀಕಿಸುವ ಅಗತ್ಯತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರ ವೈಎಸ್‌ಟಿ ಆರೋಪವನ್ನ ತಳ್ಳಿಹಾಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟ ಮುಕ್ತ ಆಡಳಿತವನ್ನು ನೀಡಲು ಹೆಚ್ಚು ಗಮನ ಹರಿಸಿದೆ. ಕುಮಾರಸ್ವಾಮಿ ಹೇಳಿದಂತೆ ಯಾವ ವೈಎಸ್‌ಟಿ ತೆರಿಗೆ (YST Tax) ಕೂಡ ಇಲ್ಲ. ಸರ್ಕಾರದ ಕಾರ್ಯಗಳಿಂದ ಲಾಭ ಪಡೆಯುತ್ತಿರುವ ಜನಸಾಮಾನ್ಯರ ಮನಸ್ಸಿನಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿದೆ ಎಂದರು.

    ಪಾರದರ್ಶಕವಾಗಿ ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ನೇರವಾಗಿ ದೊಡ್ಡ ಪ್ರಮಾಣದಲ್ಲಿ ಜನರ ಖಾತೆಗೆ ಹಣ ಹಾಕುತ್ತಿದ್ದೇವೆ. ಅದರಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕುಮಾರಸ್ವಾಮಿ ಅವರಿಗೆ ಸರ್ಕರದ ಮೇಲೆ ಟೀಕೆ ಮಾಡಲು ಬೇರೆ ವಿಷಯಗಳಿಲ್ಲ. ಹೇಗಾದರೂ ಮಾಡಿ ಟೀಕೆ ಮಾಡಬೇಕು ಎಂದು ಟೀಕೆ ಮಾಡುತ್ತಿದ್ದಾರೆ. ಇದು ಆಧಾರರಹಿತ ಆರೋಪ ಎಂದು ಗುಂಡೂರಾವ್ ಟೀಕಿಸಿದರು. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್

    ನಾವು ಸ್ಪಷ್ಟವಾದ ಹೆಜ್ಜೆ ಇಡುತ್ತಿದ್ದೇವೆ.‌ ಒಳ್ಳೆಯ ಆಡಳಿತ ಕೊಡುತ್ತೇವೆ. ಜನರಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಧಾರಣೆ ಆಗುತ್ತಿದೆ. ಉತ್ತಮ ವ್ಯವಸ್ಥೆ ನಿರ್ಮಾಣ ಆಗಿದೆ. ಜನಪರ ಆಡಳಿತ ಕೊಡಲು ಆದ್ಯತೆ ನೀಡುತ್ತಿದ್ದೇವೆ. ಕುಮಾರಸ್ವಾಮಿ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ನಾವು ಯಾವ ರೀತಿ ಕೆಲಸ ಮಾಡಬೇಕು ಎಂದು ಸ್ವಲ್ಪ ದಿನ ಕಾದು ನೋಡಬೇಕು. ಇಷ್ಟು ಬೇಗ ಅವರು ಎಲ್ಲೋ ಒಂದು ಕಡೆ ಮೈ ಪರಚುವ ಕೆಲಸ ಮಾಡಬಾರದು ಎಂದು ಟೀಕಿಸಿದರು.

     

    ಕೊರೊನಾ ವೇಳೆ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರದ ತನಿಖೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಆ ಸಂಬಂಧ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಯಾವ ರೀತಿ ತನಿಖೆ ಮಾಡಬೇಕು ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ.‌ ಸಮಿತಿ ಮಾಡಿ ತನಿಖೆ ಮಾಡಬೇಕೇ ಎಂಬ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ

    ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ

    ಬೆಂಗಳೂರು: ಕಾಂಗ್ರೆಸ್ (Congress) ಪಾಲಿಗೆ ಕರ್ನಾಟಕ ಸರ್ಕಾರ (Karnataka Government) ಖಜಾನೆಯಾಗಿದೆ. ರಾಜ್ಯದಲ್ಲಿ ಬರೀ ವೈಎಸ್‍ಟಿ (YST) ಅಲ್ಲ, ವಿಎಸ್‍ಟಿಯೂ (VST) ಇದೆ ಎಂದು ಪರಿಷತ್‌ ಬಿಜೆಪಿ (BJP) ಸದಸ್ಯ ರವಿಕುಮಾರ್‌ (Ravikumar) ಸರ್ಕಾರದ ವಿರುದ್ಧ ಕಿಡಿಕಾರಿದರು.

    ರಾಜ್ಯದಲ್ಲಿ ವೇಣುಗೋಪಾಲ್-ಸಿದ್ದರಾಮಯ್ಯ ಟ್ಯಾಕ್ಸ್ (Venugopal-Siddaramaiah Tax) ಇದೆ. ವಿಎಸ್‍ಟಿಯನ್ನು ವೇಣುಗೋಪಾಲ್ ಸಂಗ್ರಹಿಸುತ್ತಾರೆ. ಇದು ವಿಎಸ್‍ಟಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ – ಹೆಚ್‌ಡಿಕೆ

    ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ವಸೂಲಿ ಮಾಡುವ ತೆರಿಗೆ ಕುರಿತು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ದೇವೇಗೌಡರ, ಕುಮಾರಸ್ವಾಮಿಯವರ ಜೊತೆಗೆ ಇದ್ದವರು. ಜೆಡಿಎಸ್‍ನಲ್ಲಿ (JDS) ಹಿಂದೆ ಇದ್ದವರು. ಹಾಗಾಗಿ ಸಿದ್ದರಾಮಯ್ಯ ಏನೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ವೈಎಸ್‍ಟಿ ವಿಷಯ ತಿಳಿಸಿದ ಕುಮಾರಸ್ವಾಮಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

    ಸಿದ್ದರಾಮಯ್ಯರು ಹಾಕಿದ ತೆರಿಗೆಯನ್ನು ಯತೀಂದ್ರರು (Yathindra Siddaramaiah) ವಸೂಲಿ ಮಾಡುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿಧೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ವೈಎಸ್‍ಟಿ, ವಿಎಸ್‍ಟಿ ಬಗ್ಗೆ ಜನರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದರು.

     
    ಇಲ್ಲಿ ಸಿದ್ದರಾಮಯ್ಯರು ವಿಧಿಸಿದ ತೆರಿಗೆಯನ್ನು ವೇಣುಗೋಪಾಲ್ ಡ್ರಾ ಮಾಡುತ್ತಾರೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರಕಾರ ಖಜಾನೆ ಇದ್ದಂತೆ ಎಂದು ಟೀಕಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    ತಿರುವನಂತಪುರಂ: ಟ್ಯಾಕ್ಸ್ (Tax) ಕಟ್ಟದ ಹಿನ್ನೆಲೆ ಕೇರಳದ ಹಲವು ಯೂಟ್ಯೂಬರ್‌ಗಳ (YouTubers) ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (IT) ಇಲಾಖೆ ದಾಳಿ ನಡೆಸಿದೆ.

    ಕೇರಳ (Kerala) ರಾಜ್ಯದ ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್, ಅಲಪ್ಪುಳ, ಕೊಟ್ಟಾಯಂ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 13 ಪ್ರಮುಖ ಯೂಟ್ಯೂಬರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಈ ಯೂಟ್ಯೂಬರ್‌ಗಳು ವಾರ್ಷಿಕವಾಗಿ ಅಂದಾಜು 1 ಕೋಟಿ ರೂ. ಹಣ ಗಳಿಸುತ್ತಾರೆ. ಆದರೆ ಅವರ ತೆರಿಗೆ ಕಡತಗಳಲ್ಲಿ ಆದಾಯವನ್ನು ನಿಖರವಾಗಿ ತೋರಿಸಲಾಗಿಲ್ಲ. ತೆರಿಗೆಯನ್ನು ಅವರ ಆದಾಯದ ಮೂಲದಿಂದಲೇ ಕಡಿತಗೊಳಿಸುವುದು ಸೂಕ್ತವಲ್ಲದ ಕಾರಣ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

    ಈ ಯೂಟ್ಯೂಬರ್‌ಗಳು ತಮಗೆ ಯಾವುದೇ ಸ್ಥಿರವಾದ ಪಾವತಿಗಳು ಬರುವುದಿಲ್ಲ, ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಪಡೆಯುವ ಮಾಸಿಕ ಪಾವತಿಗಳು ಅವರ ಕಂಟೆಂಟ್‌ಗಳ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಕೆಲ ಯೂಟ್ಯೂಬರ್‌ಗಳು ಕಂಪನಿಗಳಿಂದ ಹಣವನ್ನು ಪಡೆದು ಕಂಟೆಂಟ್ ಸೃಷ್ಟಿಮಾಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ. ಇದರಿಂದಾಗಿ ತೆರಿಗೆ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆ ಕೊಚ್ಚಿ ಮೂಲದ ಐಟಿ ಎನ್‌ಫೋರ್ಸ್ಮೆಂಟ್ ವಿಂಗ್ ಈ ದಾಳಿಯನ್ನು ನಡೆಸಿದೆ. ಇದನ್ನೂ ಓದಿ: ನಟಿಯೂ ಸೇರಿದಂತೆ ಯೂಟ್ಯೂಬರ್ಸ್ ಮನೆ ಮೇಲೆ ಐಟಿ ದಾಳಿ

    ಇದೀಗ ದಾಳಿ ನಡೆಸಿರುವ ಐಟಿ ತಂಡ ಯೂಟ್ಯೂಬರ್‌ಗಳಿಂದ ಹೇಳಿಕೆಗಳನ್ನು ದಾಖಲಿಸುತ್ತಿದೆ. ಯೂಟ್ಯೂಬರ್‌ಗಳು ಗಳಿಸಿರುವ ಆದಾಯಕ್ಕೆ ಸಂಬಂಧಿಸಿದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಹಾಗೂ ಇತರ ವಹಿವಾಟಿನ ವಿವರಗಳನ್ನೂ ಪರಿಶೀಲಿಸುತ್ತಿದೆ. ಐಟಿ ಇಲಾಖೆ ದಾಳಿ ಪ್ರಾರಂಭಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆಯನ್ನೂ ನಡೆಸಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಯೂಟ್ಯೂಬರ್‌ಗಳನ್ನು ಗುರಿಯಾಗಿಸಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚುವರಿ ದಾಳಿಗಳು ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11% ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಯೂಟ್ಯೂಬರ್ಸ್ ಹೆಸರು ಮತ್ತು ಎಷ್ಟು ಸಬ್‌ಸ್ಕ್ರೈಬರ್ಸ್ ಇದ್ದಾರೆ?
    M4Tech: 1.12 ಕೋಟಿ
    Unboxing Dude: 37.5 ಲಕ್ಷ
    Arjyou: 36.1 ಲಕ್ಷ
    Fishing Freaks: 33.5 ಲಕ್ಷ
    Akhil NRD: 28.3 ಲಕ್ಷ
    Pearle Maaney: 26 ಲಕ್ಷ
    Jayaraj G Nath: 17.2 ಲಕ್ಷ

  • ಪಂಜಾಬ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

    ಪಂಜಾಬ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

    ಚಂಡೀಗಢ: ಪಂಜಾಬ್‌ನಲ್ಲಿ (Punjab) 300 ಯೂನಿಟ್‌ ಉಚಿತ ವಿದ್ಯುತ್‌ ನೀಡುತ್ತಿರುವ ಆಪ್‌ ಸರ್ಕಾರ (AAP Government) ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ (VAT) ಹೆಚ್ಚಿಸಿ ಸವಾರರಿಗೆ ಶಾಕ್ ನೀಡಿದೆ.

    ಪ್ರತಿ ಲೀಟರ್ ಪೆಟ್ರೋಲ್ (Petrol) ಬೆಲೆಯಲ್ಲಿ 96 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ (Diesel) ಬೆಲೆಯಲ್ಲಿ 88 ಪೈಸೆ ಹೆಚ್ಚಾಗಿದೆ. ಈ ದರದೊಂದಿಗೆ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 98.65 ರೂ. ಆಗಿದ್ದರೆ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 88.95 ರೂ. ಗೆ ಏರಿಕೆಯಾಗಿದೆ.  ಇದನ್ನೂ ಓದಿ: ಕಾಂಗ್ರೆಸ್‌ ಷರತ್ತುಗಳಿಗೆ ಅಪಸ್ವರ ಎತ್ತಿದ ಶಾಮನೂರು

    ಈ ವ್ಯಾಟ್‌ ಏರಿಕೆಯಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 600 ಕೋಟಿ ರೂ. ಆದಾಯ ಸಂಗ್ರಹವಾಗುವ ಸಾಧ್ಯತೆಯಿದೆ.

    ಆಪ್‌ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಎರಡನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿದೆ. ಈ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌  ಮೇಲೆ 90 ಪೈಸೆ ದರವನ್ನು ಏರಿಕೆ ಮಾಡಿತ್ತು.

  • ಮಗ ತೆರಿಗೆ ಪಾವತಿಸಿದ್ದರೂ ತಾಯಿಗೆ ಸಿಗುತ್ತೆ 2 ಸಾವಿರ ರೂ.

    ಮಗ ತೆರಿಗೆ ಪಾವತಿಸಿದ್ದರೂ ತಾಯಿಗೆ ಸಿಗುತ್ತೆ 2 ಸಾವಿರ ರೂ.

    ಬೆಂಗಳೂರು: ಮಗ ತೆರಿಗೆ (Tax) ಪಾವತಿಸುತ್ತಿದ್ದರೂ ತಾಯಿಯೂ ಗೃಹಲಕ್ಷ್ಮಿ (Gruhalakshmi) ಯೋಜನೆಯ ಫಲಾನುಭವಿ ಆಗುತ್ತಾಳೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ತಿಳಿಸಿದ್ದಾರೆ.

    ಪತಿ ಮಾತ್ರವಲ್ಲ, ಮಗ ತೆರಿಗೆ ಪಾವತಿಸುತ್ತಿದ್ದರೂ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುರುವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾರ್ವಜನಿಕವಾಗಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿ ಜನಾಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡಿದ್ದಾರೆ.

     

    ಗಂಡ ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಆದರೆ ಮಗ ಟ್ಯಾಕ್ಸ್ ಪಾವತಿಸುತ್ತಿದ್ದರೂ, ಜಿಎಸ್‍ಟಿ ಪಾವತಿ ಮಾಡುತ್ತಿದ್ದರೂ ತಾಯಿಗೆ ಮಾಸಿಕ 2000 ರೂಪಾಯಿ ಕೊಡುತ್ತೇವೆ ಎಂದು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟೀಕರಣ ನೀಡುವ ಮೂಲಕ ಅನಗತ್ಯ ಗೊಂದಲಕ್ಕೆ ತೆರೆ ಎಳೆಯಲು ನೋಡಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ – ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರಿಗೆ?

     

    ಇದೇ ವೇಳೆ, ಟಿವಿ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಗೃಹಲಕ್ಷ್ಮಿ ಅರ್ಜಿಯ ನಮೂನೆ ನಕಲಿಯಲ್ಲ ಅದು ಅಸಲಿ ಎನ್ನುವುದು ಸ್ಪಷ್ಟವಾಗಿದೆ. ಇದರಲ್ಲಿನ ಜಾತಿ ಎಂಬ ಪದದ ಬದಲು ವರ್ಗ ಎನ್ನುವ ಪದವನ್ನು ಬಳಸುತ್ತೇವೆ. ಈ ಅರ್ಜಿಯಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸುತ್ತೇವೆ ಎಂದು ತಿಳಿಸಿದರು.

  • ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

    ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

    ಬೆಂಗಳೂರು: ಗ್ಯಾರಂಟಿ (Congress Guarantee) ಗೊಂದಲಗಳ ಬಗ್ಗೆ ಜನಾಕ್ರೋಶ ಹೆಚ್ಚಾಗುತ್ತಿದ್ದರೂ ಸರ್ಕಾರ ಮಾತ್ರ ಹೊಸ ಹೊಸ ಷರತ್ತುಗಳನ್ನು ಹಾಕುತ್ತಲೇ ಇದೆ. ಇವತ್ತು ಗೃಹಲಕ್ಷ್ಮಿ (Grahalakshmi) ಯೋಜನೆಗೆ ಇನ್ನೊಂದು ಷರತ್ತು ಸೇರ್ಪಡೆಯಾಗಿದೆ. ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2000 ರೂಪಾಯಿ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೊಸ ಬಾಂಬ್ ಸಿಡಿಸಿದ್ದಾರೆ.

    ಸರ್ಕಾರ ವಿಧಿಸುತ್ತಿರುವ ಷರತ್ತುಗಳ ಬಗ್ಗೆ ವಿಪಕ್ಷಗಳು ಮಾತ್ರವಲ್ಲ ಹಲವು ಸಚಿವರು ಕೂಡ ಆಂತರಿಕವಾಗಿ ಆಕ್ಷೇಪ ಎತ್ತುತ್ತಿದ್ದಾರೆ. ಜನಾಕ್ರೋಶ, ವಿಪಕ್ಷಗಳ ಟೀಕೆ ಲಘುವಾಗಿ ಪರಿಗಣಿಸಬೇಡಿ. ನಿರೀಕ್ಷೆ ಇಟ್ಟು ಜಾರಿ ಮಾಡಿರೋ ಗ್ಯಾರಂಟಿಗಳ ಲಾಭ ಪಕ್ಷಕ್ಕೆ ಸಿಗಬೇಕು. ಗ್ಯಾರಂಟಿಗಳೇ ನಮಗೆ ಮುಳುವಾಗಬಾರದು ಎಂದು ಸಲಹೆ ನೀಡಿದ್ದಾರೆ.  ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

    ಜನ ಸುಮ್ಮನಾಗದಿದ್ದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಾನಿ ಖಚಿತ. ಬಿಜೆಪಿ ಕೈಗೆ ಯಾವ ಕಾರಣಕ್ಕೂ ಗ್ಯಾರಂಟಿ ಅಸ್ತ್ರ ಸಿಗಬಾರದು. ಮುಂದೆ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌, ಬಿಬಿಎಂಪಿ, ಲೋಕಸಭೆ ಚುನಾವಣೆ ಬರುತ್ತಿದೆ. ದುಡುಕದೇ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ ಎಂದು ಕೆಲವರು ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಕಾಂಗ್ರೆಸ್‌ ನಾಯಕರ ಸಲಹೆಗೆ ಸರ್ಕಾರ ಡೋಂಟ್‌ಕೇರ್‌ ಎಂದಿದೆ. ಈಗ ವಿಧಿಸಲಾಗಿರುವ ಷರತ್ತುಗಳನ್ನು ಸಡಿಲಿಸದಿರಲು  ಸಿಎಂ ತೀರ್ಮಾನಿಸಿದ್ದಾರೆ. ಅಂದ ಹಾಗೇ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಜಾರಿಗೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

     

    ಗೃಹಲಕ್ಷ್ಮಿ ಷರತ್ತುಗಳೇನು?
    ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮಕ್ಕಳು ತೆರಿಗೆದಾರರಾಗಿದ್ದರೆ ಅವರ ತಾಯಂದಿರಿಗೆ 2000 ರೂ. ಇಲ್ಲ. ಜಿಎಸ್‌ಟಿ ಪಾವತಿದಾರರ ಕುಟುಂಬಗಳಿಗೂ ಈ ಯೋಜನೆ ಅನ್ವಯವಾಗುವುದಿಲ್ಲ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂದ ಯಜಮಾನಿಗೆ ಮಾತ್ರ ಹಣ ನೀಡಲಾಗುತ್ತದೆ. ಸರ್ಕಾರಿ ಉದ್ಯೋಗಿಗಳಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುವುದಿಲ್ಲ. ಗಂಡ, ಹೆಂಡತಿ ಪೈಕಿ ಒಬ್ಬರು ತೆರಿಗೆ ಪಾವತಿ ಮಾಡಿದರೂ ಈ ಸೌಲಭ್ಯ ಸಿಗುವುದಿಲ್ಲ.

  • ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ನವದೆಹಲಿ: ಮೇ ತಿಂಗಳಿನಲ್ಲಿ 1,57,090 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಸತತ 14 ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ರೂ. ದಾಟುತ್ತಿರುವುದು ವಿಶೇಷ.

    ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 12% ರಷ್ಟು ಏರಿಕೆಯಾಗಿದೆ. ಕಳೆದ ಮೇ ತಿಂಗಳಿನಲ್ಲಿ 1,40,885 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ 1,87,035 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

    ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ (CGST) ಪಾಲು 28,411 ಕೋಟಿ ರೂ. ಆಗಿದ್ದರೆ ರಾಜ್ಯ ಜಿಎಸ್‌ಟಿ (SGST) 35,828 ಕೋಟಿ ರೂ. ಆಗಿದೆ. ಇಂಟಿಗ್ರೇಟೆಡ್ ಜಿಎಸ್‌ಟಿ (ಭಾರತಕ್ಕೆ ಆಮದು ಮಾಡಿಕೊಳ್ಳುವ ಮತ್ತು ಭಾರತದಿಂದ ರಫ್ತು ಮಾಡುವ ಸಂದರ್ಭಗಳಲ್ಲಿ ಸರಕು ಮೇಲೆ ಹಾಕುವ ತೆರಿಗೆ) 81,363 ಕೋಟಿ ರೂ.ಗಳಾಗಿವೆ. ಇದರಲ್ಲಿ 11,489 ಕೋಟಿ ರೂ.(ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ 1,057 ಕೋಟಿ ರೂ. ಸಂಗ್ರಹ ಸೇರಿ) ಸೆಸ್‌ ಕೂಡ ಸೇರಿದೆ.  ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

    ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ 35,369 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 29,769 ಕೋಟಿ ರೂ. ವರ್ಗಾಯಿಸಲಾಗಿದೆ. ಈ ಹಂಚಿಕೆಯ ಬಳಿಕ ಮೇ ತಿಂಗಳಿನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಕ್ರಮವಾಗಿ 63,780 ಕೋಟಿ ರೂ. ಮತ್ತು 65,597 ಕೋಟಿ ರೂ.ಗಳಾಗಿವೆ.

    ಕರ್ನಾಟಕದಲ್ಲಿ(Karnataka) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 12% ರಷ್ಟು ಏರಿಕೆಯಾಗಿದ್ದು, 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಎರಡನೇ ಸ್ಥಾನ ಪಡೆದಿದೆ. ಕಳೆದ ಮೇ ತಿಂಗಳಿನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು.

     

    ಮಹಾರಾಷ್ಟ್ರದಲ್ಲಿ 23,536 ಕೋಟಿ ರೂ. ಸಂಗ್ರಹವಾಗಿದ್ದು ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಗುಜರಾತ್‌ 9,800 ಕೋಟಿ ರೂ., ತಮಿಳುನಾಡು 8,953 ಕೋಟಿ ರೂ., ಉತ್ತರ ಪ್ರದೇಶದಲ್ಲಿ 7,468 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

  • ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ಬಿಬಿಸಿ ತೆರಿಗೆ ಪಾವತಿಯಲ್ಲಿ ಅಕ್ರಮ,  ಸಾಕ್ಷ್ಯ ಲಭ್ಯ: CBDT

    ನವದೆಹಲಿ: ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆ ಪರಿಶೀಲನೆ ವೇಳೆ ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಶುಕ್ರವಾರ ಹೇಳಿದೆ.

    ಬಿಬಿಸಿ (BBC) ಹೆಸರನ್ನು ಉಲ್ಲೇಖಿಸದೆ ಹೇಳಿಕೆ ಬಿಡುಗಡೆ ಮಾಡಿದ ಸಿಬಿಡಿಟಿ, ಇಲಾಖೆ ಹಲವಾರು ಸಾಕ್ಷ್ಯಗಳನ್ನು ಕಲೆಹಾಕಿದೆ. ಡಿಜಿಟಲ್ ದಾಖಲೆಗಳು ಹಾಗೂ ಉದ್ಯೋಗಿಗಳ ಹೇಳಿಕೆಗಳನ್ನು ಪಡೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ವಿದೇಶಿ ಸಂಸ್ಥೆಗಳಿಂದ ಭಾರತದ ಶಾಖೆಗೆ ಬಂದಿರುವ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಯಾಗಿಲ್ಲ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?

    ಬಿಬಿಸಿ ಸಿಬ್ಬಂದಿ ತನಿಖೆಗೆ ಸಹಕರಿಸುತ್ತಿಲ್ಲ. ಹಲವು ತಂತ್ರಗಳನ್ನು ಬಳಸಿ ತನಿಖೆ ವಿಳಂಬವಾಗುವಂತೆ ಮಾಡುತ್ತಿದ್ದಾರೆ. ಮಾಧ್ಯಮದ ಪ್ರಸಾರಕ್ಕೆ ಯಾವುದೇ ತೊಂದರೆಯಾಗದಂತೆ ಸಿಬ್ಬಂದಿ ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದೆ.

    2002ರಲ್ಲಿ ನಡೆದ ಗುಜರಾತ್ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ  ಬಿಬಿಸಿ ಮೇಲೆ ಐಟಿ ಸಮೀಕ್ಷೆ (IT Survey) ನಡೆಸಿತ್ತು. ಅಧಿಕಾರಿಗಳು ಮೂರು ದಿನಗಳ ಕಾಲ ನಿರಂತರ ಸಮೀಕ್ಷೆ ಕಾರ್ಯ ನಡೆಸಿದ್ದರು.

    ಬಿಬಿಸಿ ಮೇಲಿನ ಐಟಿ ದಾಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಮುಜುಗರ ತರುವಂತಹ ಸಾಕ್ಷ್ಯಾಚಿತ್ರ ಬಿಡುಗಡೆಗೊಳಿಸಿದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ವಿಪಕ್ಷಗಳು ದೂರಿದ್ದವು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k