Tag: tax

  • ಆಸ್ತಿ ತೆರಿಗೆ ಕಟ್ಟಲು KSRTC  ಡಿಸಿಗೆ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ

    ಆಸ್ತಿ ತೆರಿಗೆ ಕಟ್ಟಲು KSRTC ಡಿಸಿಗೆ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ

    ಚಿಕ್ಕಬಳ್ಳಾಪುರ: ಆಸ್ತಿ ತೆರಿಗೆ ಪಾವತಿಸುವಂತೆ ಕೆ.ಎಸ್‍.ಆರ್.ಟಿ.ಸಿ ಡಿಸಿ ಆಂಥೋನಿ ಜಾರ್ಜ್‍ಗೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ತೆರಿಗೆ ಪಾವತಿಸಿ ಇಲ್ಲದಿದರೆ ಕೆ.ಎಸ್‍.ಆರ್.ಟಿ.ಸಿ ಸಾರಿಗೆ ಸೇವೆ, ವಹಿವಾಟಿಗೆ ಬ್ರೇಕ್ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿ ನಗರಸಭೆ ಕಮಿಷನರ್ ಕೋರ್ಟ್ ಮೆಟ್ಟಿಲೇರಿದ್ದಾರೆ. 1984ರಿಂದ ಇಲ್ಲಿಯವರೆಗೆ ಕೆ.ಎಸ್‍.ಆರ್.ಟಿ.ಸಿ ಸಂಸ್ಥೆ ಆಸ್ತಿ ತೆರಿಗೆ ಪಾವತಿ ಮಾಡದೇ 95 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ.

    ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೆ.ಎಸ್‍.ಆರ್.ಟಿ.ಸಿ ಬಸ್ ನಿಲ್ದಾಣ ಇರಲಿಲ್ಲವಾದ ಕಾರಣ ನಗರಸಭೆ ಖಾಸಗಿ ಬಸ್ ನಿಲ್ದಾಣ ಬಳಸಿಕೊಳ್ಳುತಿತ್ತು. ಪ್ರತಿ ಟ್ರಿಪ್ ಗೂ ಇಂತಿಷ್ಟು ಎಂದು ಶುಲ್ಕ ಕಟ್ಟಬೇಕಿತ್ತು. ಅದನ್ನೂ ಕೂಡ ಕಟ್ಟಿಲ್ಲ. ಹಾಗಾಗಿ ಕೆ.ಎಸ್‍.ಆರ್.ಟಿ.ಸಿ ಸಂಸ್ಥೆ ಒಟ್ಟಾರೆ ಆಸ್ತಿ ಮೇಲೆ ಬಡ್ಡಿ ಸಮೇತ ವಸೂಲಿ ಮಾಡಲು ನಗರಸಭೆ ಮುಂದಾಗಿದೆ.

     

    ಆದರೆ ಈ ಬಗ್ಗೆ ಕೆ.ಎಸ್‍.ಆರ್.ಟಿ.ಸಿ ಡಿಸಿ ಆಂಥೋನಿ ಹೇಳೋದೇ ಬೇರೆ. ನಿಗದಿತ ಕಾಲಕ್ಕೆ 5 ಲಕ್ಷ ರೂ. ಟ್ಯಾಕ್ಸ್ ಪಾವತಿಸಿದ್ದೇವೆ. ಬಸ್ ಗಳ ಟ್ರಿಪ್ ಬಗ್ಗೆಯಾಗಲಿ ಅಥವಾ ನಗರಸಭೆ ಬಸ್ ನಿಲ್ದಾಣ ಪ್ರವೇಶ ಮಾಡಿದ್ದರ ಬಗ್ಗೆಯಾಗಲಿ ನಗರಸಭೆ ಯಾವುದೇ ದಾಖಲೆ ನೀಡದೇ ಮನಸ್ಸೋ ಇಚ್ಛೆ 80 ಲಕ್ಷ, 90 ಲಕ್ಷ ರೂ. ಟ್ಯಾಕ್ಸ್ ಕಟ್ಟಿ ಎಂದರೆ ಹೇಗೆ ಕಟ್ಟೋಕಾಗುತ್ತೆ ಸ್ವಾಮಿ? ಎಂದು ಆಂಥೋನಿ ಹೇಳಿದ್ದಾರೆ.

  • ಗ್ರಾಮ ಸ್ವರಾಜ್ಯದ ಕನಸು-ಸರ್ಕಾರಕ್ಕಿಲ್ಲ ಪಂಚಾಯ್ತಿಗಳ ಹಿಡಿತ-ಕೋಟ್ಯಾಂತರ ರೂಪಾಯಿ ತೆರಿಗೆ ಬಂದೇಯಿಲ್ಲ

    ಗ್ರಾಮ ಸ್ವರಾಜ್ಯದ ಕನಸು-ಸರ್ಕಾರಕ್ಕಿಲ್ಲ ಪಂಚಾಯ್ತಿಗಳ ಹಿಡಿತ-ಕೋಟ್ಯಾಂತರ ರೂಪಾಯಿ ತೆರಿಗೆ ಬಂದೇಯಿಲ್ಲ

    ಬೆಂಗಳೂರು: ಗ್ರಾಮ ಸ್ವರಾಜ್ಯದ ಕನಸು ಕಾಣುತ್ತಿರುವ ಸರ್ಕಾರ ಸ್ವರಾಜ್ಯದ ಬದಲು ದಿವಾಳಿ ಆಗೋಕೆ ಹೊರಟಿದೆ. ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದೆ ಬಿದ್ದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

    ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಅಗತ್ಯವಾದ ಹಣ ಸಂಗ್ರಹ ಮಾಡೋದ್ರಲ್ಲಿ ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶದ ಪ್ರಕಾರ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 2 ಸಾವಿರ ಕೋಟಿಗಳಷ್ಟು ಸರ್ಕಾರ ಟ್ಯಾಕ್ಸ್ ಸಂಗ್ರಹ ಮಾಡಬೇಕು.

    2014-15ನೇ ಸಾಲಿನಲ್ಲಿ 837 ಕೋಟಿ ರೂ. ಟ್ಯಾಕ್ಸ್ ಬೇಡಿಕೆ ಇತ್ತು. ಆದರೆ 228 ಕೋಟಿ ರೂ. ಮಾತ ಸಂಗ್ರಹವಾಗಿದೆ. 608 ಕೋಟಿ ರೂ. ಗಳಷ್ಟು ತೆರಿಗೆ ಹಣ ಇನ್ನೂ ಬಾಕಿಯಿದೆ. 2015-16ನೇ ಸಾಲಿನಲ್ಲಿ 877 ಕೋಟಿ ಸಂಗ್ರಹ ಮಾಡಬೇಕಿತ್ತು. ಆದ್ರೆ ಸಂಗ್ರಹ ಮಾಡಿದ್ದು ಕೇವಲ 216 ಕೋಟಿ. ಬಾಕಿ 660 ಕೋಟಿ ಉಳಿಸಿಕೊಂಡಿದೆ. 2016-17ನೇ ಸಾಲಿನಲ್ಲಿ ಟ್ಯಾಕ್ಸ್ ಬೇಡಿಕೆ 957 ಕೋಟಿ ಇತ್ತು ಆದ್ರೆ ವಸೂಲಿ ಮಾಡಿರೋದು 151 ಕೋಟಿ. ಬಾಕಿ ಇರೋದು 805 ಕೋಟಿ. ಒಟ್ಟಾರೆ 2671 ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡಬೇಕಿದ್ದ ಸರ್ಕಾರ ಮಾಡಿದ್ದು ಮಾತ್ರ 595 ಕೋಟಿ. 3 ವರ್ಷಗಳಿಂದ 2073 ಕೋಟಿ ಟ್ಯಾಕ್ಸ್ ಸಂಗ್ರಹ ಬಾಕಿ ಇದೆ.

    ಕರ್ನಾಟಕ ಗ್ರಾಮ ಸ್ವರಾಜ್ & ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ವಾಸದ ಕಟ್ಟಡ, ವಾಣಿಜ್ಯ ಕಟ್ಟಡಗಳು, ಕಾರ್ಖಾನೆ, ಐಟಿ ಪಾರ್ಕ್, ವಿಂಡ್ ಮಿಲ್, ಮನರಂಜನಾ ತೆರಿಗೆ, ಮೊಬೈಲ್ ಟವರ್ ಇದೆಲ್ಲದಕ್ಕೂ ಟ್ಯಾಕ್ಸ್ ವಿಧಿಸಬೇಕು. ಆದ್ರೆ ಸರ್ಕಾರ ಇವರಿಂದ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಸಂಗ್ರಹ ಮಾಡಿಲ್ಲ. ಇನ್ನು ಗ್ರಾಮ ಪಂಚಾಯ್ತಿಗಳು ಸಂಗ್ರಹ ಮಾಡಿರೋ 595 ಕೋಟಿ ಹಣವನ್ನು ಇಲಾಖೆಯ ಬೊಕ್ಕಸಕ್ಕೆ ನೀಡಿಲ್ಲ. ಇನ್ನೂ ತೆರಿಗೆ ಸಂಗ್ರಹ ಮಾಡಿಲ್ಲದನ್ನು ಒಪ್ಪಿಕೊಂಡ ಗ್ರಾಮೀಣಾಭಿವೃದ್ಧಿ ಸಚಿವರು ಬರದ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಟಾಕ್ಸ್ ಸಂಗ್ರಹ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

  • ಕೋಟಿ ಕೋಟಿ ವ್ಯವಹಾರ ಮಾಡೋ ಮಂದಿಗೆ ರಾಜ್ಯದಲ್ಲಿ ಜಿಎಸ್‍ಟಿ ಇಲ್ಲ!

    ಕೋಟಿ ಕೋಟಿ ವ್ಯವಹಾರ ಮಾಡೋ ಮಂದಿಗೆ ರಾಜ್ಯದಲ್ಲಿ ಜಿಎಸ್‍ಟಿ ಇಲ್ಲ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎನ್ನುವುದು ಮತ್ತೆ ಸಾಬೀತಾಗಿದೆ. ಕೋಟಿ ಕೋಟಿ ವ್ಯವಹಾರ ಮಾಡುವ ರಾಜ್ಯದ ಸರ್ಕಾರಿ ಯೋಜನೆಗಳ ಗುತ್ತಿಗೆದಾರರಿಗೆ ಜಿಎಸ್‍ಟಿ ಹೇರದಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

    ಈ ಮೊದಲು ಶೇ.10ರಷ್ಟು ಮಾತ್ರ ತೆರಿಗೆ ಇತ್ತು. ಜಿಎಸ್‍ಟಿ ಹೇರಿದ್ರೆ ಶೇ.18ರಷ್ಟು ಕಟ್ಟಬೇಕು, ಹಾಗಾಗಿ ನಮಗೆ ನಷ್ಟವಾಗುತ್ತದೆ. ಗುತ್ತಿಗೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಎಂದು ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.

    ಪಿಡಬ್ಲೂಡಿ, ಬಿಬಿಎಂಪಿ, ಗುತ್ತಿಗೆದಾರ ಮನವಿಗೆ ತಲೆಬಾಗಿದ ಸಿಎಂ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್‍ಟಿ ತೆಗೆಯುವಂತೆ ಆದೇಶಿಸಿದ್ದಾರೆ. ಸಿಎಂ ಆಣತಿಯಂತೆ ಮುಂದಿನ ಆದೇಶ ಬರುವ ತನಕ ಗುತ್ತಿಗೆದಾರರಿಗೆ ಜಿಎಸ್‍ಟಿ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ವಾಣಿಜ್ಯ ಇಲಾಖೆ ಕೂಡ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

     

     

  • ಐಟಿ  ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ನವದೆಹಲಿ: ಕೊನೆಯ ಕ್ಷಣದಲ್ಲಿ ಆದಾಯ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್)  ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್.

    ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಐ.ಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.

    ಐ.ಟಿ ರಿಟರ್ನ್ಸ್  ಸಲ್ಲಿಕೆ ವೇಳೆ ಕೊನೆ ಕ್ಷಣದಲ್ಲಿ ಹಲವು ಮಂದಿಗೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಡೆಡ್‍ಲೈನ್ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಆಗಸ್ಟ್ 31ರ ಒಳಗಡೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಯಾಗಬೇಕು ಎಂದು ತಿಳಿಸಿದೆ.

  • ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನವದೆಹಲಿ: ನೀವು ಹೊಸ ಕಾರು ಖರೀದಿಸಿ ಫೇಸ್ ಬುಕ್‍ಗೆ ಫೋಟೋ ಹಾಕ್ತೀರಾ. ಹಾಗಾದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದರೆ ಅಚ್ಚರಿಯಿಲ್ಲ.

    ಹೌದು. ಕಪ್ಪು ಕುಳಗಳನ್ನು ಮಣಿಸಲು ನೋಟ್ ನಿಷೇಧ ಕೈಗೊಂಡ ಮೋದಿ ಸರ್ಕಾರ ಈಗ ಆದಾಯ ತೆರಿಗೆಯನ್ನು ಕಟ್ಟದೇ ಶೋಕಿ ಮಾಡೋ ಕುಳಗಳನ್ನು ಹಿಡಿಯಲು ಪ್ಲಾನ್ ಮಾಡಿದೆ.

    ಇಲ್ಲಿಯವರೆಗೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಮೂಲಗಳನ್ನು ಮಾತ್ರ ಪರಿಶೀಲನೆ ನಡೆಸಿ ತೆರಿಗೆ ವಂಚಿಸುತ್ತಿದ್ದ ಕುಳಗಳನ್ನು ಪತ್ತೆ ಹಚ್ಚುತಿತ್ತು. ಈಗ ಇವುಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಶೋಕಿ ಮಾಡು ಮಂದಿಯನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹೇಗೆ?
    ನೀವು ಎಲ್ಲಿ ಹೋಗಿದ್ದೀರಿ..? ಎಷ್ಟು ಖರ್ಚು ಮಾಡಿದ್ದೀರಿ..? ಏನು ಖರೀದಿ ಮಾಡಿದ್ದೀರಿ ಎನ್ನುವ ಮಾಹಿತಿ ಸಂಗ್ರಹಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ರೂಪಿಸಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಂದು ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಫೇಸ್‍ಬುಕ್, ಇನ್‍ಸ್ಟಾ ಗ್ರಾಮ್‍ನಿಂದ ಫೋಟೋ, ವಿಡಿಯೋಗಳ ಮಾಹಿತಿಯನ್ನು ಮಾಹಿತಿಯನ್ನು ಸಂಗ್ರಹಿಸಲಿದೆ.

    ಕಾರ್ಯಾಚರಣೆ ಹೀಗೆ ಇರುತ್ತೆ:
    ಮೊದಲ ಹಂತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ, ಆಸ್ತಿ ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ, ಹಣವನ್ನು ಖರ್ಚು ಮಾಡಿದ್ದು ಮತ್ತು ಠೇವಣಿ ಇಟ್ಟ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತ ಡಿಸೆಂಬರ್ ನಿಂದ ಆರಂಭವಾಗಲಿದ್ದು, ತೆರಿಗೆಯನ್ನು ವಂಚಿಸಿ ವ್ಯವಹಾರ ನಡೆಸುತ್ತಾರೋ ಅವರ ಮಾಹಿತಿಯನ್ನು ಸಂಗ್ರಹಿಸಲು ವೈಯಕ್ತಿಕ ಪ್ರೊಫೈಲ್ ಕ್ರಿಯೆಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಕಾರುಗಳು, ವಿದೇಶ ಪ್ರವಾಸದ ಫೋಟೋ, ಶಾಪಿಂಗ್ ಫೋಟೋ ಇತ್ಯಾದಿ. ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ 2018ರ ಮೇ ತಿಂಗಳಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೇರವಾಗಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

    ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿದ ಬಳಿಕ ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿ ಕಳೆದ ವರ್ಷ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರೆ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ಬಳಿಕ 10 ಲಕ್ಷಕ್ಕೂ ಹೆಚ್ಚು ಅಧಿಕ ಆದಾಯವಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ತೆರಿಗೆ ವಂಚಿಸುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮೋದಿ ಎಚ್ಚರಿಕೆ ನೀಡಿದ್ದರು.

  • ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಗೆ ಬಂದ ನಂತರ ಉತ್ಪನ್ನಗಳ ಮೇಲೆ ಪರಿಷ್ಕೃತ ಎಂಆರ್‍ಪಿ ಮುದ್ರಿಸದೇ ಇದ್ದರೆ ತಯಾರಕರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಮೊದಲ ತಪ್ಪಿಗೆ 25 ಸಾವಿರ ರೂ., ಎರಡನೇ ಬಾರಿ ಸಿಕ್ಕಿಬಿದ್ದರೆ 50 ಸಾವಿರ ರೂ., ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ತಯಾರಕರಿಗೆ ವಾರ್ನಿಂಗ್ ನೀಡಿದೆ.

    ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌, ಜಿಎಸ್‍ಟಿ ಬಂದ ಮೇಲೆ ಕೆಲ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರೆ, ಕೆಲ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಈಗಾಗಲೇ ನಾವು ತಯಾರಕರಿಗೆ ಹೊಸ ಎಂಆರ್‍ಪಿ ಹಾಕುವಂತೆ ಸೂಚಿಸಿದ್ದೇವೆ. ಒಂದು ವೇಳೆ ಹೊಸ ಎಂಆರ್‍ಪಿ ಹಾಕದೇ ಹಳೇ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

    ತಯಾರಕರು ಎಂಆರ್‍ಪಿ ಹಾಕದೇ ವಂಚಿಸಿದ್ದು ಕಂಡು ಬಂದಲ್ಲಿ ಮೊದಲ ತಪ್ಪಿಗೆ 25 ಸಾವಿರ ರೂ. ಎರಡನೇ ಬಾರಿ ಸಿಕ್ಕಿಬಿದ್ದರೆ 25 ಸಾವಿರ ರೂ., ಎರಡನೇ ಬಾರಿ 50 ಸಾವಿರ ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆ ಇಲ್ಲ ಎಂದು ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.

    ಜಿಎಸ್‍ಟಿ ಬಂದ ನಂತರ ಆರಂಭದಲ್ಲಿ ಕೆಲ ಸಮಸ್ಯೆಗಳು ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳು ನಿವಾರಣೆಯಾಗಲಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದೇ ಇರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

    ಈಗಾಗಲೇ ಸ್ಟಾಕ್ ಇರುವ ಉತ್ಪನ್ನಗಳಿಗೆ ಹೊಸ ಎಂಆರ್‍ಪಿ ಹಾಕಿ ಸೆಪ್ಟೆಂಬರ್ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜುಲೈ 1ರ ಬಳಿಕ ತಯಾರಕರು ಉತ್ಪನ್ನಗಳ ಮೇಲೆ ಮೂಲ ಎಂಆರ್‍ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್‍ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು ಎಂದು ಪಾಸ್ವಾನ್  ತಿಳಿಸಿದರು.

    ಇದನ್ನೂ ಓದಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

  • ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ನವದೆಹಲಿ: ಜೂನ್ 30ರಂದು ದೇಶದ ಆರ್ಥಿಕ ಕ್ರಾಂತಿ ಎಂದೇ ಹೇಳಲಾಗುತ್ತಿರುವ ಜಿಎಸ್‍ಟಿ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾಗಾಂದಿ ಕ್ರೀಡಾಂಗಣದಲ್ಲಿ ದೇಶದ ಜನರು ಹಾಗು ಲೆಕ್ಕ ಪರಿಶೋಧಕರು (ಚಾರ್ಟೆಡ್ ಅಕೌಂಟೆಂಟ್)ಗಳನ್ನು ಉದ್ದೇಶಿಸಿ ಮಾತನಾಡಿದ್ರು.

    ಇಂದು ನವದೆಹಲಿಯ ಐಸಿಎಐ ಸಂಸ್ಥೆಯ ಸಂಸ್ಥಾಪನಾ ದಿನದಲ್ಲಿ ಮೋದಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ನಿನ್ನೆ ಜಾರಿಯಾದ ಜಿಎಸ್‍ಟಿ ಕುರಿತು ಸುರ್ದೀರ್ಘವಾಗಿ ಹಲವಾರು ವಿಷಯಗಳನ್ನು ಕುರಿತು ವಿಶ್ಲೇಷಿಸಿದ್ದಾರೆ. ತಮ್ಮ ಭಾಷಣದ ವೇಳೆ ಜಿಎಸ್‍ಟಿ ಅಂದರೆ ಎನು? ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಪಾತ್ರವೇನು? ಎಂಬುವುದಾಗಿ ವಿಶ್ಲೇಷಿಸಿದರು.

    ಮೊದಲ ಬಾಂಬ್: 2014ರಿಂದ ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಜಮೆ ಮಾಡುವ ಭಾರತೀಯರ ಸಂಖ್ಯೆ ಮತ್ತು ಹಣ ಕಡಿಮೆಯಾಗಿದೆ. 2016 ನವೆಂಬರ್ 8ರ ನಂತರ ದೀಪಾವಳಿ ರಜೆಗೆಂದು ವಿದೇಶಗಳಿಗೆ ತೆರಳಿದ್ದ ಜನರು ಮರಳಿ ದೇಶಕ್ಕೆ ಬಂದಿದ್ದಾರೆ. ಇನ್ನು 2 ವರ್ಷಗಳಲ್ಲಿ ಕಾಳಧನಿಕರ ಮಾಹಿತಿ ಸಿಗಲಿದೆ. ಈಗಾಗಲೇ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕಾಳಧನಿಕರಿಗೆ ಮುಂದಿನ ದಿನಗಳಲ್ಲಿ ಆಘಾತ ಕಾದಿದೆ ಎಂದು ಸೂಚನೆಯನ್ನು ನೀಡಿದ್ದಾರೆ.

    ಸಿಎಗಳು ದೇಶದ ಆರ್ಥವ್ಯವಸ್ಥೆಯ ಆಧಾರ ಸ್ಥಂಭಗಳು. ನಿಮ್ಮ ಮೇಲೆ ಅರ್ಥ ವ್ಯವಸ್ಥೆ ನಂಬಿಕೆಯನ್ನು ಇಟ್ಟಿದೆ. ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡುವ ಜವಬ್ದಾರಿಗಳು ಸಿಎಗಳ ಮೇಲಿದೆ. ನಮ್ಮ ಶಾಸ್ತ್ರಗಳಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರಾಷರ್ಥಗಳಿವೆ. ಹೀಗಾಗಿ ಅರ್ಥವ್ಯವಸ್ಥೆ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವೇಳೆ ನಿಮ್ಮಲ್ಲಿರುವ ದೇಶ ಭಕ್ತಿ ಹಾಗು ನನ್ನಲ್ಲಿರುವ ದೇಶ¨ಭಕ್ತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮನೆಗೆ ಬೆಂಕಿ ಬಿದ್ರೆ ಬೇರೆ ಕಟ್ಟುಬಹುದು, ಮನೆಯಲ್ಲಿಯೇ ಕಳ್ಳಯಿದ್ದೆರೆ ಏನು ಮಾಡಕಾಗಲ್ಲ. ದೇಶದಲ್ಲಿ ಕೆಲವರಿಗೆ ಕಳ್ಳತನ ಮಾಡುವ ಅಭ್ಯಾಸವಾಗಿದೆ. ಇದ್ರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಸಿಎಗಳ ಪಾತ್ರವಿದೆ.

    ಎರಡನೇ ಬಾಂಬ್: ಮೋದಿ ಅವರು ತಮ್ಮ ಭಾಷಣದಲ್ಲಿ ಡೈರಿ ಬಗ್ಗೆ ಉಲ್ಲೇಖಿಸಿದರು. ದೇಶದಲ್ಲಿ ಡೈರಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಸುಮಾರು 40 ಸಾವಿರ ಕಂಪನಿಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 11 ವರ್ಷಗಳಲ್ಲಿ ಕೇವಲ 25 ಚಾರ್ಟೆಡ್ ಅಕೌಂಟ್‍ಗಳ ವಿಚಾರಣೆ ನೆಡೆದಿದ್ದೇವೆ. ಇದು ಅನುಮಾನ ಮೂಡಿಸುತ್ತದೆ ಎಂದು ಅಪ್ರಾಮಣಿಕ ಸಿಎಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

    ಸಿಎಗಳಿಗೆ ಕಿವಿಮಾತು: ನೀವುಗಳು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ತೀರಾ ಎಂದು ತಿಳಿಯುತ್ತೇನೆ. ದೇಶದ ಅಭಿವೃದ್ದಿ ನಿಮ್ಮ ಕೈಯಲ್ಲಿದೆ, ಇದು ನಿಮ್ಮ ದೇಶವಾಗಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿನೀಯರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಇಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಹಿ ದೇಶದ ಒಬ್ಬ ಪಿಎಂ ಸಹಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ನಿಮ್ಮ ಸಹಿ ನಂಬಿಕೆಗೆ ಸೂಚಕವಾಗಿರುತ್ತದೆ. ನಿಮ್ಮ ಒಂದು ಸಹಿಯನ್ನು ಸಹ ಸರ್ಕಾರ ನಂಬುತ್ತದೆ.

    ಕಂಪನಿಯ ಬ್ಯಾಲೆನ್ಸ್ ಶೀಟ್ ನಲ್ಲಿ ನಿಮ್ಮ ಸಹಿ ನೋಡಿ ಬಡ ವಿಧವೆ, ಅಂಗವಿಕಲರು, ವೃದ್ಧರು ಸೇರಿದಂತೆ ತಮ್ಮ ಹಣವನ್ನು ಮಾರ್ಕೆಟ್‍ನಲ್ಲಿ ಹೂಡಿಕೆ ಮಾಡಿರ್ತಾರೆ. ಒಂದು ವೇಳೆ ಕಂಪನಿ ದಿವಾಳಿಯಾದ್ರೆ ಅದರ ನೈತಿಕ ಹೊಣೆ ನಿಮ್ಮ ಮೇಲಿರುತ್ತದೆ. ಹಾಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರ ಜೊತೆಗೆ ನಿಮ್ಮ ಬಳಿ ಬರುವ ಜನರಿಗೆ ನ್ಯಾಯಯುತವಾಗಿ ಟ್ಯಾಕ್ಸ್ ತುಂಬುವಂತೆ ತಿಳಿಸುವ ಪ್ರಯತ್ನ ಮಾಡಿ. ಈ ಟ್ಯಾಕ್ಸ್ ಹಣದಿಂದ ಕೆಲವರು ಒಂದು ಹೊತ್ತಿನ ಊಟ, ಔಷಧಿ, ವೃದ್ಯಾಪ ವೇತನ, ಮನೆ ಸಿಗುತ್ತದೆ ಎಂದು ಹೇಳಿದರು.

    ಇಂದು ನಾನು ನಿಮ್ಮ ಸಂಸ್ಥೆಯ ಸಂಸ್ಥಾಪನಾ ದಿನಕ್ಕೆ ಆಗಮಿಸಿದ್ದೇನೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಆಗುತ್ತದೆ. ನಾವು ಈಗಾಗಲೇ ಅಂದು ನಾವು ಏನು ಮಾಡಬೇಕು ಎಂದು ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಅದೇ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದೆ. 2024ಕ್ಕೆ ನಿಮ್ಮ ಐಸಿಎಐ ಸಂಸ್ಥೆಯ ಸ್ಥಾಪನೆಗೊಂಡು 75 ವರ್ಷವಾಗುತ್ತದೆ. ಈ ಸುದೀರ್ಘ ಕಾಲದಲ್ಲಿ ನಾವು ದೇಶಕ್ಕೆ ಏನ್ನನ್ನು ನೀಡಿದ್ದೇವೆ? ಮುಂದೆ ಎನ್ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಎಂದು ಮೋದಿ ತಿಳಿಸಿದರು.

     

  • ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜುಲೈ 1ರಿಂದ ಜಾರಿಗೆ ಬರಲಿದೆ. ಜಿಎಸ್‍ಟಿ ಜೊತೆ ಜುಲೈ 1ರಿಂದ ಇತರೇ ಕ್ಷೇತ್ರಗಳಲ್ಲೂ ಕೆಲ ಬದಲಾವಣೆಯಾಗಲಿದೆ. ಹೀಗಾಗಿ ಜುಲೈ 1ರಿಂದ ದೇಶದಲ್ಲಿ ಮತ್ತು ವಿಶ್ವದಲ್ಲಿ ಏನು ಬದಲಾವಣೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    1. ಐಟಿ ರಿಟರ್ನ್: ಜುಲೈ 1ರಿಂದ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್) ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿದೆ. ಆಧಾರ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

    2. ಪಾನ್ ಕಾರ್ಡ್: ಬೇರೆ ಬೇರೆ ಪಾನ್ ಕಾರ್ಡ್ ಬಳಸಿಕೊಂಡು ಜನರು ತೆರಿಗೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಈ ವಂಚನೆಯನ್ನು ತಡೆಗಟ್ಟಲು ಪಾನ್ ಕಾರ್ಡ್ ಗೂ ಆಧಾರ್ ಕಡ್ಡಾಯ ಮಾಡಲಾಗಿದೆ.

    3. ಪಾನ್ ಸಿಗಲ್ಲ: ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಆಧಾರ್ ನಂಬರ್ ನೀಡಲೇಬೇಕು. ಜುಲೈ 1ರಿಂದ ಆಧಾರ್ ನೀಡದೇ ಇದ್ದರೆ ನಿಮಗೆ ಪಾನ್ ಸಿಗಲ್ಲ.

    4. ಪಾಸ್ ಪೋರ್ಟ್ ಸಿಗಲ್ಲ: ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ ಮಾಡಿದೆ. ಆಧಾರ್ ನಂಬರ್ ನೀಡದೇ ಇದ್ದರೆ ನಿಮಗೆ ಪಾಸ್ ಪೋರ್ಟ್ ಸಿಗಲ್ಲ

     

    5. ಪಿಎಫ್: ಉದ್ಯೋಗಿಗಳ ಭವಿಷ್ಯ ನಿಧಿ ಸಂಘ(ಇಪಿಎಫ್‍ಓ) ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಮಾಡಿದೆ. ಆಧಾರ್ ಲಿಂಕ್ ಮಾಡಿದ ಬಳಿಕ ಪಿಎಫ್ ಹಣವನ್ನು ತೆಗೆಯುವ ಸಮಯ 20 ದಿನಗಳಿಂದ 10 ದಿನಕ್ಕೆ ಇಳಿಕೆಯಾಗಿದೆ.

    6. ರೈಲ್ವೇ ಟಿಕೆಟ್: ರೈಲ್ವೇ ಆನ್‍ಲೈನ್ ಮುಂಗಡ ಟಿಕೆಟ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹೆಚ್ಚು ಟಿಕೆಟ್‍ಗಳನ್ನು ಒಟ್ಟಿಗೆ ಕಾಯ್ದಿರಿಸುವ ವೇಳೆ ನಡೆಯುವ ಮೋಸ, ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸುವುದು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಕೇಂದ್ರ ಆಧಾರ್ ಕಡ್ಡಾಯ ಮಾಡಿದೆ.

    7. ವಿದ್ಯಾರ್ಥಿವೇತನ: ಸರ್ಕಾರದಿಂದ ವಿತರಣೆಯಾಗುವ ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿ ಕಡ್ಡಾಯವಾಗಿ ಆಧಾರ್ ಹೊಂದಿರಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಹಿಂದೆಯೇ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಜೂನ್ 30ರ ನಂತರ ಆಧಾರ್ ಇಲ್ಲದೇ ಇದ್ದರೆ ಯಾವೊಬ್ಬ ವಿದ್ಯಾರ್ಥಿಗೂ ಸ್ಕಾಲರ್‍ಶಿಪ್ ನೀಡದಂತೆ ಸೂಚಿಸಿದೆ.

    8. ಪಿಡಿಎಸ್ ಸಿಗಲ್ಲ: ಸಾರ್ವಜನಿಕ ವಿತರಣಾ ವ್ಯವಸ್ಥೆಗೆ(ಪಿಡಿಎಸ್) ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಜುಲೈ 1ರ ಒಳಗಡೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕೆಂದು ಈಗಾಗಲೇ ಸೂಚಿಸಲಾಗಿದೆ.

    9. ಸಿಎಗೆ ಹೊಸ ಪಠ್ಯ: ಚಾರ್ಟರ್ಡ್ ಅಕೌಂಟೆಂಟ್ ಓದುವ ಮಂದಿಗೆ ಹೊಸ ಪಠ್ಯ ಜುಲೈ 1 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹೊಸ ಪಠ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಹೊಸ ಪಠ್ಯವು ಇಂಟರ್‍ನ್ಯಷನಲ್ ಫೆಡರೇಷನ್ ಆಫ್ ಅಕೌಂಟೆಂಟ್ಸ್ ಮಾನದಂಡಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಹೊಸ ತೆರಿಗೆಯಾದ ಜಿಎಸ್‍ಟಿಯೂ ಬಗ್ಗೆ ಇರಲಿದೆ.

    10. ಆನ್‍ಲೈನ್ ವೀಸಾ: ಭಾರತ ಪ್ರವಾಸಿಗರು ಜುಲೈ 1 ರಿಂದ ಆನ್‍ಲೈನ್ ಮೂಲಕ ಸಂದರ್ಶಕರ ವೀಸಾಗೆ(ವಿಸಿಟರ್ಸ್ ವೀಸಾ)ಅರ್ಜಿ ಸಲ್ಲಿಸಬಹುದು ಎಂದು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಘೋಷಿಸಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ವೀಸಾ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ.

    11. ಸೌದಿ ಕುಟುಂಬ ತೆರಿಗೆ: ವಲಸಿಗರನ್ನು ನಿಯಂತ್ರಿಸುವ ಸಲುವಾಗಿ ಸೌದಿ ಸರ್ಕಾರ ದೇಶದಲ್ಲಿ ಕೆಲಸ ಮಾಡುತ್ತಿರುವ ಕುಟುಂಬಗಳ ಮೇಲೆ ವಿಶೇಷ ಕುಟುಂಬ ತೆರಿಗೆ ಹೇರಲು ಮುಂದಾಗಿದೆ. ಕುಟುಂಬ ತೆರಿಗೆಯಾಗಿ ಒಬ್ಬ ಸದಸ್ಯನ ಮೇಲೆ ಪ್ರತಿ ತಿಂಗಳು 100 ರಿಯಾಲ್(ಅಂದಾಜು 1700 ರೂ.) ವಿಧಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.

     

  • ವೃತ್ತಿ ತೆರಿಗೆ ಕಟ್ಟಿಲ್ಲ ಎಐಸಿಸಿ ಸೋಷಿಯಲ್ ಮೀಡಿಯಾ ಚೀಫ್ ರಮ್ಯಾ!

    ವೃತ್ತಿ ತೆರಿಗೆ ಕಟ್ಟಿಲ್ಲ ಎಐಸಿಸಿ ಸೋಷಿಯಲ್ ಮೀಡಿಯಾ ಚೀಫ್ ರಮ್ಯಾ!

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಈಗ ಎಐಸಿಸಿಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ನೇಮಕವಾಗಿರುವ ರಮ್ಯಾ ಅವರು ತಮ್ಮ ವೃತ್ತಿ ತೆರಿಗೆಯನ್ನೇ ಪಾವತಿಸಿಲ್ಲ. ಅಷ್ಟೇ ಯಾಕೆ ಇನ್ನೂ ಹಲವು ನಟಿ ಮತ್ತು ನಟರು ವೃತ್ತಿ ತೆರಿಗೆ ಪಾವತಿಸಿಲ್ಲ. ಮೂರು ಬಾರಿ ನೋಟಿಸ್ ನೀಡಿರುವ ತೆರಿಗೆ ಅಧಿಕಾರಿಗಳು ಈಗ ನ್ಯಾಯಾಲಯದಲ್ಲಿ ಕೇಸ್ ಹಾಕಲು ಮುಂದಾಗಿದ್ದಾರೆ.

    ಕನ್ನಡದ ಸಿನಿಮಾ ತಾರೆಯರು ವರ್ಷಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಇಷ್ಟೆಲ್ಲ ಸಂಪಾದಿಸಿದರೂ ವಾರ್ಷಿಕ 2500 ರೂಪಾಯಿ ವೃತ್ತಿ ತೆರಿಗೆ ಮಾತ್ರ ಪಾವತಿಸಿಲ್ಲ. ಈ ಹಿಂದೆ ಪಬ್ಲಿಕ್ ಟಿವಿ ತೆರಿಗೆ ಕಟ್ಟದೇ ಇರುವ ಸ್ಯಾಂಡಲ್‍ವುಡ್ ತಾರೆಯರ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಕೆಲವರು ವೃತ್ತಿ ತೆರಿಗೆ ಪಾವತಿ ಮಾಡಿದ್ದರು.

    ನಟ ಜಗ್ಗೇಶ್ ವೃತ್ತಿ ತೆರಿಗೆಯನ್ನ ದಂಡದ ಸಮೇತ ಪಾವತಿಸಿ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಕಟ್ಟಿ ಅಂತ ಟ್ವಿಟರ್‍ನಲ್ಲಿ ಜಾಗೃತಿ ಮೂಡಿಸಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಸುಮಾರು 10 ಲಕ್ಷ ರೂ. ತೆರಿಗೆ ಸಂಗ್ರಹವಾಗಿದೆ ಎಂದು ವೃತ್ತಿ ತೆರಿಗೆಯ ಜಂಟಿ ಆಯುಕ್ತರಾದ ರಾಮನ್ ಕೆ ತಿಳಿಸಿದ್ದಾರೆ.

    ನಟಿಯರ ಪಟ್ಟಿ:
    ರಮ್ಯಾ, ರಾಧಿಕಾ ಪಂಡಿತ್, ಪ್ರಿಯಾಂಕ ಉಪೇಂದ್ರ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನಾ, ಪೂಜಾ ಗಾಂಧಿ, ಅನು ಪ್ರಭಾಕರ್.

    ನಟರ ಪಟ್ಟಿ:
    ಉಪೇಂದ್ರ, ಗಣೇಶ್, ಯಶ್, ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ದೇವರಾಜ್, ಪ್ರಜ್ವಲ್ ದೇವರಾಜ್, ದಿಗಂತ್, ಪ್ರೇಮ್, ವಿನೋದ್ ಪ್ರಭಾಕರ್, ಚಿರು ಸರ್ಜಾ

    ನಟಿ, ನಟರ ಜೊತೆ ಕಾಮಿಡಿ ಸ್ಟಾರ್‍ಗಳಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಇವರೂ ವೃತ್ತಿ ತೆರಿಗೆ ಕಟ್ಟಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕೇಸ್ ಹಾಕುವ ಮುನ್ನ ಸ್ಯಾಂಡಲ್‍ವುಡ್ ತಾರೆಗಳು ಎಚ್ಚೆತ್ತುಕೊಂಡು ತೆರಿಗೆ ಪಾವತಿಸಿದರೆ ಒಳ್ಳೆಯದು. ಇಲ್ಲದಿದ್ದರೆ, 2500 ರೂಪಾಯಿಗಾಗಿ ಮುಜುಗರ ಅನುಭವಿಸಬೇಕಾದಿತು.

    ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನು ಪ್ರತ ವರ್ಷ ತಪ್ಪದೇ ಪಾವತಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: 2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

  • ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಇಲ್ಲಿದೆ ಪೂರ್ಣಮಾಹಿತಿ

    ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಇಲ್ಲಿದೆ ಪೂರ್ಣಮಾಹಿತಿ

    ಶ್ರೀನಗರ: ಏಕರೂಪದ ತೆರಿಗೆ ಜಿಎಸ್‍ಟಿಯನ್ನು ಜುಲೈ 1ರಿಂದಲೇ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಗುರುವಾರ ಬಹುತೇಕ ಸರಕುಗಳ ತೆರಿಗೆ ದರವನ್ನು ನಿಗದಿಪಡಿಸಿದೆ.

    ಶ್ರೀನಗರದಲ್ಲಿ ಕೇಂದ್ರ ಹಣಕಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಜನ ಸಮಾನ್ಯರ ದಿನ ಬಳಕೆಯ ವಸ್ತುಗಳಿಗೆ ಜಿಎಸ್‍ಟಿಯನ್ನು ಎಷ್ಟು ತೆರಿಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ತೆರಿಗೆ ಇಲ್ಲ ವಸ್ತುಗಳು:


    ತಾಜಾ ಮಾಂಸ, ಮೀನು ಕೋಳಿ, ಮೊಟ್ಟೆ, ಹಾಲು, ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಹಿಟ್ಟು, ಬ್ರೆಡ್, ಪ್ರಸಾದ, ಉಪ್ಪು, ಬಿಂದಿ ಮುಂತಾದ ವಸ್ತುಗಳನ್ನು ತೆರಿಗೆಗೆ ವಿಧಿಸಲಾಗುವುದಿಲ್ಲ. ಸಿಂಧೂರ, ಅಂಚೆಚೀಟಿಗಳು, ನ್ಯಾಯಾಂಗ ಪೇಪರ್ ಗಳು, ಮುದ್ರಿತ ಪುಸ್ತಕಗಳು, ಪತ್ರಿಕೆಗಳು, ಬಳೆಗಳು, ಕೈಮಗ್ಗ ಇತ್ಯಾದಿ.

    5% ತೆರಿಗೆ:


    ಮೀನು ಫಿಲೆಟ್, ಕ್ರೀಮ್, ಕೆನೆ ತೆಗೆದ ಹಾಲಿನ ಪುಡಿ, ಬ್ರಾಂಡ್ ಪನೀರ್, ಫ್ರೀಜ್ ತರಕಾರಿಗಳು, ಕಾಫಿ, ಚಹಾ, ಮಸಾಲೆಗಳು, ಪಿಜ್ಜಾ ಬ್ರೆಡ್, ರಸ್ಕ್, ಸೀಮೆ ಎಣ್ಣೆ, ಕಲ್ಲಿದ್ದಲು, ಔಷಧಿ, ಸ್ಟೆಂಟ್, ಲೈಫ್ ಬೋಟ್ ಇತ್ಯಾದಿ.

    12% ತೆರಿಗೆ:


    ಘನೀಕೃತ ಮಾಂಸ ಉತ್ಪನ್ನಗಳು, ಬೆಣ್ಣೆ, ಚೀಸ್, ತುಪ್ಪ, ಪ್ಯಾಕ್ ಮಾಡಲಾಗಿರುವ ಒಣಗಿದ ಹಣ್ಣುಗಳು, ಪ್ರಾಣಿಗಳ ಕೊಬ್ಬು, ಹಣ್ಣಿನ ರಸಗಳು, ಆಯುರ್ವೇದಿಕ್ ಔಷಧಿ, ಹಲ್ಲಿನ ಪುಡಿ, ಅಗರಬತ್ತಿ, ಬಣ್ಣದ ಪುಸ್ತಕಗಳು, ಚಿತ್ರ ಪುಸ್ತಕಗಳು, ಛತ್ರಿ, ಹೊಲಿಗೆ ಯಂತ್ರ ಮತ್ತು ಸೆಲ್‍ಫೋನ್ ಗಳು ಇತ್ಯಾದಿ

    18% ತೆರಿಗೆ:


    ಸಂಸ್ಕರಿತ ಫ್ಲೇವರ್ ಸಕ್ಕರೆ, ಪಾಸ್ಟಾ, ಕಾರ್ನ್ ಫ್ಲೇಕ್ಸ್, ಪ್ಯಾಸ್ಟ್ರಿ ಮತ್ತು ಕೇಕ್ ಗಳು, ಸಂರಕ್ಷಿತ ತರಕಾರಿಗಳು, ಜಾಮ್ ಗಳು, ಸಾಸ್ ಗಳು, ಸೂಪ್ ಗಳು, ಐಸ್ ಕ್ರೀಮ್, ಮಿನರಲ್ ನೀರು, ಅಂಗಾಂಶಗಳು, ಎನ್ವಿಲಪ್, ಟಿಪ್ಪಣಿ ಪುಸ್ತಕಗಳು, ಉಕ್ಕು ಉತ್ಪನ್ನಗಳು, ಕ್ಯಾಮೆರಾ, ಸ್ಪೀಕರ್ ಗಳು, ಮಾನಿಟರ್ ಇತ್ಯಾದಿ.

    28% ತೆರಿಗೆ:


    ಚ್ಯೂಯಿಂಗ್ ಗಮ್, ಮೊಲಾಸಿಸ್, ಕೋಕಾ ಇಲ್ಲದ ಚಾಕ್ಲೇಟ್, ಪಾನ್ ಮಸಾಲಾ, ಡಿಯೋಡ್ರೆಂಟ್, ಆಫ್ಟರ್ ಶೇವ್, ಶೇವಿಂಗ್ ಕ್ರೀಮ್ ಗಳು, ಕೂದಲ ಶಾಂಪೂ, ಡೈ, ಸನ್ ಸ್ಕ್ರೀನ್, ವಾಲ್ ಪೇಪರ್, ಸೆರಾಮಿಕ್ ಟೈಲ್ಸ್, ವಾಟರ್ ಹೀಟರ್, ಡಿಶ್ ವಾಷರ್, ತೂಕದ ಯಂತ್ರ, ವಾಷಿಂಗ್ ಮೆಷಿನ್, ಎಟಿಎಂ, ವಿತರಣಾ ಯಂತ್ರಗಳು, ವ್ಯಾಕ್ಯೂಮ್ ಕ್ಲೀನರ್, ಷೇವರ್ಸ್, ಕೂದಲ ಕ್ಲಿಪ್ ಗಳು, ಆಟೋಮೊಬೈಲ್ಸ್, ಮೋಟರ್ ಸೈಕಲ್ ಗಳು, ವೈಯಕ್ತಿಕ ಬಳಕೆಯ ವಿಮಾನ, ಯಾಚ್ ಸವಾರಿ ಇತ್ಯಾದಿ.