Tag: Tax Fraud

  • ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    ತೆರಿಗೆ ವಂಚನೆ ಪ್ರಕರಣದಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

    ವಾಷಿಂಗ್ಟನ್: ಅಮೆರಿಕದ (America)  ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ (Tax) ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ದಂಡ ವಿಧಿಸಿದೆ.

    ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್‍ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್‍ನಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್‍ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದೆ.

    ಮ್ಯಾನ್‍ಹ್ಯಾಟನ್ ಅಪಾರ್ಟ್‍ಮೆಂಟ್‍ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ ಕೆಲ ಕಂಪನಿಗಳ ಮೇಲಿನ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್‍ರ ಕಂಪನಿ ತೆರಿಗೆ ವಂಚನೆ ಶಿಕ್ಷೆಗೊಳಗಾಗಿದೆ. ದಾಖಲೆಗಳನ್ನು ನಕಲು ಮಾಡಿರುವ ಆರೋಪಗಳನ್ನು ಒಳಗೊಂಡಂತೆ ಹಲವು ಆರೋಪಗಳು ಸಾಭೀತಾಗಿದ್ದು, ಟ್ರಂಪ್ ಸಂಸ್ಥೆಯಲ್ಲಿನ ಎರಡು ಕಾರ್ಪೋರೆಟ್‌ ಘಟಕಗಳು ತೆರಿಗೆ ವಂಚಿಸಿರುವುದಕ್ಕಾಗಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ, ಆಪ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌- ರೇಸ್‌ನಿಂದಲೇ ಕಾಂಗ್ರೆಸ್‌ ಔಟ್‌

    ಡೊನಾಲ್ಡ್ ಟ್ರಂಪ್ ಮತ್ತು ಅವರ ವ್ಯವಹಾರಗಳ ಬಗ್ಗೆ ಮೂರು ವರ್ಷಗಳಿಂದ ತನಿಖೆ ಮುಂದುವರೆದಿದೆ. ಈ ನಡುವೆ ಇದೀಗ ಟ್ರಂಪ್ ಮೇಲೆ ವೈಯಕ್ತಿಕವಾಗಿ ಆರೋಪ ಹೊರಿಸಿಲ್ಲ. ಆದರೆ ಅವರ ಹೆಸರನ್ನು ಒಳಗೊಂಡಿರುವ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಗಾಲ್ಫ್ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಿಗೆ ದಂಡ ವಿಧಿಸಿ ಶಿಕ್ಷೆ ನೀಡಲಾಗಿದೆ. ಇದು 2024ರ ಚುನಾವಣೆಗೆ ಸ್ಫರ್ದಿಸಲು ಬಯಸಿ ರಿಪಬ್ಲಿಕ್ ಪಕ್ಷದ ನಾಮನಿದೇರ್ಶನಕ್ಕಾಗಿ ಸಿದ್ಧತೆ ಆರಂಭಿಸಿರುವ ಟ್ರಂಪ್‍ಗೆ ಹಿನ್ನಡೆ ತಂದಿದೆ. ತೆರಿಗೆ ವಂಚನೆ ಪ್ರಕರಣ ಟ್ರಂಪ್‍ಗೆ ಇರಿಸುಮುರಿಸು ಉಂಟು ಮಾಡಿದೆ. ಇದನ್ನೂ ಓದಿ: ಕುಡುಕನಿಗೆ ಸಿಕ್ಕಿದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ? – 10 ಲಕ್ಷ, ಹತ್ತೇ ನಿಮಿಷದಲ್ಲಿ ಮಂಗಮಾಯ

    Live Tv
    [brid partner=56869869 player=32851 video=960834 autoplay=true]

  • ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

    ಮೈಂಡ್ ಟ್ರೀ ಷೇರು ವಶಕ್ಕೆ ಪಡೆದಿದ್ದು ಯಾಕೆ? – ಸಹಿ ಸಿದ್ದಾರ್ಥ್ ಅವರದ್ದಲ್ಲ ಎಂದ ಐಟಿ

    ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ವಿದಾಯ ಪತ್ರದಲ್ಲಿ ಸಹಿಗೂ, ವಾರ್ಷಿಕ ದಾಖಲೆ ಸಲ್ಲಿಕೆ ವೇಳೆ ಸಲ್ಲಿಸಿದ್ದ ಸಹಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಆದಾಯ ಇಲಾಖೆ ಇಲಾಖೆ ಸ್ಪಷ್ಟನೆ ನೀಡಿದೆ.

    ಐಟಿ ಕಿರುಕುಳದಿಂದಲೇ ಸಿದ್ಧಾರ್ಥ್ ಅವರು ಮನನೊಂದಿದ್ದರು ಎನ್ನುವ ವಿಚಾರಕ್ಕೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಐಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಐಟಿಯಿಂದ ಕಿರುಕುಳ ಎಂದು ಹೇಳಿಕೊಂಡಿದ್ದ ಸಿದ್ಧಾರ್ಥ್ ಅವರದ್ದೇ ಎನ್ನಲಾದ ಪತ್ರದ ಬಗ್ಗೆ ಹಾಗೂ ದಾಳಿ ನಡೆಸಿದಾಗ ಬೆಳಕಿಗೆ ಬಂದ ವಿಚಾರದ ಬಗ್ಗೆ ಮಾಹಿತಿ ನೀಡಿದೆ.

    ಹೇಳಿಕೆಯಲ್ಲಿ ಏನಿದೆ?
    ಐಟಿ ದಾಳಿಯ ವೇಳೆ ಕರ್ನಾಟಕದಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿ ಇರುವ ವ್ಯಕ್ತಿಯ ಜೊತೆ ಕೆಫೆ ಕಾಫಿ ಡೇ(ಸಿಸಿಡಿ) ಆರ್ಥಿಕ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಜೊತೆ ಸಿಂಗಾಪುರ ಪೌರತ್ವವನ್ನು ಹೊಂದಿರುವ ವ್ಯಕ್ತಿ ಬಳಿ 1.2 ಕೋಟಿ ರೂ. ಪತ್ತೆಯಾಗಿತ್ತು. ಆ ವ್ಯಕ್ತಿ ಈ ಹಣ ಸಿದ್ಧಾರ್ಥ್ ಅವರಿಗೆ ಸೇರಿದ್ದಾಗಿ ಒಪ್ಪಿಕೊಂಡಿದ್ದರು. ದಾಳಿ ವೇಳೆ ದಾಖಲೆ ಇಲ್ಲದ 362.11 ಕೋಟಿ ರೂ. ಮತ್ತು 118.02 ಕೋಟಿ ರೂ. ಹಣ ಸಿಕ್ಕಿತ್ತು. ವಿಚಾರಣೆ ವೇಳೆ ಈ ಹಣ ಕ್ರಮವಾಗಿ ತನಗೆ ಮತ್ತು ಸಿಸಿಡಿಗೆ ಸೇರಿದ ಹಣ ಎಂದು ಒಪ್ಪಿಕೊಂಡಿದ್ದರು. ಇದನ್ನು ಓದಿ: ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಸಿದ್ಧಾರ್ಥ್ ಅವರು ವಾರ್ಷಿಕ ತೆರಿಗೆಯನ್ನು ಪಾವತಿ ಮಾಡಿದ್ದರೂ ದಾಖಲೆ ಇಲ್ಲದ ಹಣಕ್ಕೆ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಈ ಎರಡು ಪ್ರಕರಣ ಹೊರತು ಪಡಿಸಿ 35 ಕೋಟಿ ರೂ. ತೆರಿಗೆ ಹಣವನ್ನು ಪಾವತಿಸಿದ್ದರು. ಉಳಿದಂತೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಂಪನಿ ಸ್ವಯಂ ಮೌಲ್ಯ ಮಾಪನ ತೆರಿಗೆಯಾದ 14.5 ಕೋಟಿ ರೂ. ಪಾವತಿಸಿರಲಿಲ್ಲ.

    2019ರ ಜನವರಿ 21 ರಂದು ಮಾಧ್ಯಮಗಳಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಕಾಫಿ ಡೇ ಎಂಟರ್‌ಪ್ರೈಸಸ್, ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಮತ್ತು ಸಿದ್ಧಾರ್ಥ್ ಹೆಸರಿನಲ್ಲಿದ್ದ ಹತ್ತಿರ ಹತ್ತಿರ ಶೇ.21 ಷೇರನ್ನು ಜನವರಿಯಲ್ಲೇ ಮಾರಾಟಕ್ಕೆ ಸಿದ್ಧತೆ ನಡೆದಿತ್ತು. ಇದನ್ನು ಓದಿ: ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ

    ದಾಳಿ ಸಂದರ್ಭದಲ್ಲಿ ದಾಖಲೆ ಇಲ್ಲದ ಹಣ, ತೆರಿಗೆ ವಂಚನೆ, ತೆರಿಗೆ ವಂಚಿಸಿದ್ದಕ್ಕೆ ದಂಡ ಎಲ್ಲವೂ ಸೇರಿದಾಗ ಈ ಮೊತ್ತ 100 ಕೋಟಿ ಆಗಿತ್ತು. ಇದರ ಜೊತೆಯಲ್ಲೇ ಆದಾಯ ತೆರಿಗೆ ಪ್ರಕ್ರಿಯೆ ನಡೆಯುತ್ತಿದ್ದಾಗ ತನ್ನ ಬಳಿಯಿದ್ದ ಆಸ್ತಿಯನ್ನು ಬೇರೆ ಕಂಪನಿಗೆ ಮಾರಾಟ ಮಾಡಬೇಕಾದರೆ ಕೆಲ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಸಿದ್ಧಾರ್ಥ್ ಅವರು ಯಾವುದೇ ಅನುಮತಿಯನ್ನು ಪಡೆಯದೇ ಮಾರಾಟ ಮಾಡಲು ಮುಂದಾಗಿದ್ದರು. ಈ ಕಾರಣಕ್ಕೆ ಮೈಂಡ್ ಟ್ರೀಯಲ್ಲಿದ್ದ 74,90,000 ಶೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿತ್ತು. ಷೇರು ವಶಕ್ಕೆ ಪಡೆದ ಬಳಿಕ ಸಿದ್ಧಾರ್ಥ್ ಅವರು ಷೇರು ಮಾರಾಟಕ್ಕೆ ಅನುಮತಿ ಕೇಳಿದ್ದರು. ಈ ಪ್ರಕ್ರಿಯೆಯಾದ ಬಳಿಕ ಅನುಮತಿ ನೀಡಲಾಯಿತು. 2019ರ ಏಪ್ರಿಲ್ 24 ರಂದು 3200 ಕೋಟಿ ರೂ.ಗೆ ಸಿದ್ಧಾರ್ಥ್ ಅವರಲ್ಲಿದ್ದ ಷೇರು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮೈಂಡ್ ಟ್ರೀ ಕಂಪನಿಯ ವರ್ಗಾವಣೆ ಆಯಿತು.

    https://www.youtube.com/watch?v=f5o2MLo1zXM