ಅದಾ ಶರ್ಮಾ (The Kerala Story) ಮುಖ್ಯಭೂಮಿಕೆಯ ‘ದಿ ಕೇರಳ ಸ್ಟೋರಿ’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಂತೆಯೇ ಚಿತ್ರಕ್ಕೆ ಜೀವ ಬಂದಂತಾಗಿದೆ. ಹಲವರು ಚಿತ್ರದ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ.
ದಿ ಕಾಶ್ಮೀರ ಫೈಲ್ಸ್ ಸಿನಿಮಾದ ರೀತಿಯಲ್ಲೇ ದಿ ಕೇರಳ ಸ್ಟೋರಿ ಸಿನಿಮಾವನ್ನು ಜನರು ಸ್ವೀಕರಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ಅಷ್ಟೊಂದು ಪ್ರತಿಕ್ರಿಯೆ ಬಂದಂತೆ ಕಾಣುತ್ತಿಲ್ಲ. ದೇಶದಾದ್ಯಂತ ದಿನದ ಗಳಿಕೆ 7-8 ಕೋಟಿ ಎಂದು ಅಂದಾಜಿಸಲಾಗಿದೆ. ಆದರೂ, ಈ ಸಿನಿಮಾವನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಕಾರಣಕ್ಕಾಗಿ ಮಧ್ಯಪ್ರದೇಶ ಸರಕಾರವು ತೆರಿಗೆ ವಿನಾಯತಿ (Tax Exemption) ಘೋಷಣೆ ಮಾಡಿದೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ
ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.
ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.
ಮುಂಬೈ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ (2023 ODI World Cup Cricket) ಬಿಸಿಸಿಐ 12 ಕ್ರೀಡಾಂಗಣವನ್ನು ಅಂತಿಮಗೊಳಿಸಿದ್ದು, ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿ ದೊಡ್ಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
2023ರ ವಿಶ್ವಕಪ್ ಕ್ರಿಕೆಟ್ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಆಯೋಜಿಸಿಲು ಬಿಸಿಸಿಐ (BCCI) ಸಿದ್ಧತೆ ಮಾಡಿಕೊಂಡಿದೆ. ನಾಕೌಟ್ ಸೇರಿದಂತೆ ಒಟ್ಟು 48 ಪಂದ್ಯಗಳು 46 ದಿನಗಳಲ್ಲಿ ನಡೆಯಲಿದೆ. ಬಿಸಿಸಿಐ ಇನ್ನೂ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ಅವಧಿಯಲ್ಲಿ ಕೆಲ ಭಾಗಗಳಲ್ಲಿ ಮಳೆ ಬರುವ ಸಾಧ್ಯತೆ ಇರುವ ಕಾರಣ ಬಿಸಿಸಿಐ ಸ್ಥಳ ನಿಗದಿ ಮಾಡುವ ಸಂಬಂಧ ಚರ್ಚೆ ನಡೆಸುತ್ತಿದೆ.
ಸಾಮಾನ್ಯವಾಗಿ ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುತ್ತದೆ. ಆದರೆ ಈ ಬಾರಿ ಪಂದ್ಯಾವಳಿಗೆ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್ ಪಡೆಯುವ ಸಂಬಂಧ ಭಾರತ ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಬಿಸಿಸಿಐ ಕಾಯುತ್ತಿರುವುದರಿಂದ ಅಂತಿಮ ವೇಳಾಪಟ್ಟಿ ಪ್ರಕಟಿಸಲು ತಡವಾಗುತ್ತಿದೆ.
ಯಾವ ಸ್ಥಳದಲ್ಲಿ ಆಯೋಜನೆ?
ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಪಂದ್ಯ ನಡೆಯಲಿದೆ.
ಏನಿದು ತೆರಿಗೆ ಕಿತ್ತಾಟ?
ಐಸಿಸಿಯು (ICC) ತೆರಿಗೆ ವಿನಾಯಿತಿ (Tax Exemption) ಒಪ್ಪಂದಕ್ಕೆ ಬಿಸಿಸಿಐ 2014ರಲ್ಲಿ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ಟೂರ್ನಿಗಳ ಆತಿಥ್ಯ ವಹಿಸಿಕೊಳ್ಳುವ ದೇಶದ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕಾಗುತ್ತದೆ. ಈ ತೆರಿಗೆ ವಿನಾಯಿತಿಯಲ್ಲಿ ನೇರ ಪ್ರಸಾರದ ಹಕ್ಕು ಸೇರಿದಂತೆ ಟೂರ್ನಿಯ ಆದಾಯಕ್ಕೆ ತೆರಿಗೆ ಹಾಕಬಾರದೆಂಬ ಒಪ್ಪಂದವಿದೆ. ಬಿಸಿಸಿಐ ಸಹಿ ಹಾಕಿದ ಬಳಿಕ 2016 ಟಿ20 ವಿಶ್ವಕಪ್, 2018ರ ಚಾಂಪಿಯನ್ಸ್ ಟ್ರೋಫಿ( 2021ರಲ್ಲಿ ಇದನ್ನು ಟಿ20 ವಿಶ್ವಕಪ್‌ಗೆ ಬದಲಾಯಿಸಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ಟೂರ್ನಿ ನಡೆದಿತ್ತು), 2023ರ ಏಕದಿನ ವಿಶ್ವಕಪ್ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿತ್ತು. ಇದನ್ನೂ ಓದಿ: ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು : ಮೋದಿ ಬಳಿ ಅಫ್ರಿದಿ ಮನವಿ
ಬಿಸಿಸಿಐಗೆ ಭಾರೀ ನಷ್ಟ:
ಭಾರತದಲ್ಲಿ ನೇರ ಪ್ರಸಾರ ಮತ್ತು ಟೂರ್ನಿಯ ಆದಾಯದ ಮೂಲಗಳಿಗೆ ತೆರಿಗೆ ಹಾಕುವ ಹಕ್ಕು ಸರ್ಕಾರಕ್ಕಿದೆ. 2023ರ ವಿಶ್ವಕಪ್‌ನ ಪ್ರಸಾರ ಆದಾಯದ ಮೇಲೆ ಶೇ.20 ರಷ್ಟು ತೆರಿಗೆ(ಹೆಚ್ಚುವರಿ ಶುಲ್ಕ ಹೊರತುಪಡಿಸಿ) ವಿಧಿಸಲಾಗುವುದು ಎಂದು ಕಳೆದ ವರ್ಷ ಐಸಿಸಿಗೆ ಭಾರತದ ತೆರಿಗೆ ಅಧಿಕಾರಿಗಳು ತಿಳಿಸಿದ್ದರು. ಈ ವಿಷಯದ ಬಗ್ಗೆ ಐಸಿಸಿ ಮತ್ತು ಬಿಸಿಸಿಐ ಜೊತೆ ಮಾತುಕತೆ ನಡೆಯುತ್ತಿದೆ. ಸರ್ಕಾರಗಳು ತೆರಿಗೆ ವಿನಾಯಿತಿ ನೀಡದೇ ಇದ್ದರೆ ಟೂರ್ನಿಯಿಂದ ಬರುವ ಆದಾಯದಲ್ಲಿ ಬೋರ್ಡ್‌ಗಳಿಗೆ ನೀಡುವ ಆದಾಯವನ್ನು ಕಡಿತಗೊಳಿಸಲಾಗುವುದು ಎಂದು ಐಸಿಸಿ ಈ ಹಿಂದೆ ತಿಳಿಸಿತ್ತು.
ಬಿಸಿಸಿಐ 2023ರ ವಿಶ್ವಕಪ್ ಪ್ರಸಾರ ಹಕ್ಕಿನಿಂದ 533.29 ದಶಲಕ್ಷ ಡಾಲರ್ (ಅಂದಾಜು 4,400 ಕೋಟಿ ರೂ.) ಆದಾಯ ಬರಬಹುದು ಎಂದು ಅಂದಾಜಿಸಿದೆ. ಈ ಆದಾಯಕ್ಕೆ ಶೇ.20 ರಷ್ಟು ತೆರಿಗೆ ವಿಧಿಸಿದರೆ 116 ದಶಲಕ್ಷ ಡಾಲರ್( ಅಂದಾಜು 955 ಕೋಟಿ ರೂ.) ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡದೇ ಇದ್ದರೆ ಬಿಸಿಸಿಐ 955 ಕೋಟಿ ರೂ. ಆದಾಯವನ್ನು ಕಳೆದುಕೊಳ್ಳಲಿದೆ.
ಭಾರತದ ತೆರಿಗೆ ನಿಯಮಗಳಲ್ಲಿ ಅಂತಹ ವಿನಾಯಿತಿಗಳಿಗೆ ಅವಕಾಶ ಇಲ್ಲದಿರುವುದರಿಂದ 2016ರ ಟಿ–20ವಿಶ್ವಕಪ್ ಆಯೋಜಿಸಿದ ಬಳಿಕ ಬಿಸಿಸಿಐ 193 ಕೋಟಿ ರೂ. ಕಳೆದುಕೊಂಡಿತ್ತು. ಈ ಸಂಬಂಧ ಬಿಸಿಸಿಐ ಈಗಲೂ ಐಸಿಸಿ ಟ್ರಿಬ್ಯೂನಲ್‌ನಲ್ಲಿ ಹೋರಾಡುತ್ತಿದೆ.
ಮುಂಬೈ: 2023ರ ಏಕದಿನ ವಿಶ್ವಕಪ್ (World Cup) ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐಗೆ (BCCI) ದೇಶದಲ್ಲಿ ಜಾರಿಯಲ್ಲಿರುವ ತೆರಿಗೆ (Tax) ಪದ್ಧತಿಯಿಂದಾಗಿ 955 ಕೋಟಿ ರೂ. (116 ಮಿಲಿಯನ್ ಡಾಲರ್) ನಷ್ಟವಾಗುವ ಭೀತಿ ಎದುರಾಗಿದೆ.
ಭಾರತದಲ್ಲಿ 2023ರ ಏಕದಿನ ವಿಶ್ವಕಪ್ ನಡೆಸಲು ಬಿಸಿಸಿಐ ಈಗಾಗಲೇ ಐಸಿಸಿಯಿಂದ ಅನುಮತಿ ಪಡೆದಿದೆ. ಈ ವೇಳೆ ಐಸಿಸಿಯು (ICC) ತೆರಿಗೆ ವಿನಾಯಿತಿ (Tax Exemption) ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕೆ ಬಿಸಿಸಿಐ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ಟೂರ್ನಿಗಳ ಆತಿಥ್ಯ ವಹಿಸಿಕೊಳ್ಳುವ ದೇಶದ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕು. ಈ ತೆರಿಗೆ ವಿನಾಯಿತಿ ನೇರ ಪ್ರಸಾರದ ಹಕ್ಕು ಸೇರಿದಂತೆ ಟೂರ್ನಿಯ ಆದಾಯಕ್ಕೆ ತೆರಿಗೆ ಹಾಕಬಾರದೆಂಬ ಒಪ್ಪಂದವಿದೆ. ಆದರೆ ಭಾರತದಲ್ಲಿ ಜಾರಿಯಲ್ಲಿರುವ ಜಿಎಸ್‍ಟಿ (GST) ತೆರಿಗೆ ಪ್ರಕಾರ ನೇರ ಪ್ರಸಾರ ಮತ್ತು ಟೂರ್ನಿಯ ಆದಾಯದ ಮೂಲಗಳಿಗೆ ಶೇ.21.84 ರಷ್ಟು ತೆರಿಗೆ ಹಾಕುವ ಹಕ್ಕು ಸರ್ಕಾರಕ್ಕಿದೆ. ಈ ತೆರಿಗೆ ವಿನಾಯಿತಿಯನ್ನು ಐಸಿಸಿ, ಬಿಸಿಸಿಐ ನೋಡಿಕೊಳ್ಳುವಂತೆ ಈ ಹಿಂದೆಯೇ ತಿಳಿಸಿತ್ತು. ಇದನ್ನೂ ಓದಿ: ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್ ಬೀಸಲಿದ್ದಾರೆ ಕಿಚ್ಚ ಸುದೀಪ್
ಐಸಿಸಿಯ ಒಪ್ಪಂದದಂತೆ ಸರ್ಕಾರದೊಂದಿಗೆ ತೆರಿಗೆ ವಿನಾಯಿತಿ ಕುರಿತಾಗಿ ಪತ್ರದ ಮೂಲಕ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದ್ದು, ತೆರಿಗೆ ಕಟ್ಟುವಂತೆ ಸೂಚಿಸಿದೆ. ಟೂರ್ನಿಯಲ್ಲಿ ಸಂಗ್ರಹವಾಗುವ ಆದಾಯಕ್ಕೆ ಸಮನಾದ ತೆರಿಗೆ ಪಾವತಿಸಬೇಕೆಂದು ಸ್ಪಷ್ಟಪಡಿಸಿದೆ.
ಸರ್ಕಾರದ ಈ ಬಿಗಿನಿಯಮದಿಂದಾಗಿ ಇದೀಗ ಬಿಸಿಸಿಐಗೆ ನಷ್ಟದ ಭೀತಿ ಎದುರಾಗಿದೆ. ಏಕೆಂದರೆ ಸರಿಸುಮಾರು 116 ಮಿಲಿಯನ್ ಡಾಲರ್ ಎಂದರೆ 955 ಕೋಟಿ ತೆರಿಗೆ ಬರುವ ಸಾಧ್ಯತೆ ಇದ್ದು, ಈ ತೆರಿಗೆಯನ್ನು ಐಸಿಸಿ ಕೊಡಲು ಒಪ್ಪಲ್ಲ. ಈಗಾಗಲೇ ಒಪ್ಪಂದದ ಪ್ರಕಾರ ಸರ್ಕಾರ ತೆರಿಗೆ ಕಟ್ಟಲೇಬೇಕೆಂದರೆ ಈ ತೆರಿಗೆಯನ್ನು ಬಿಸಿಸಿಐ ಕಟ್ಟಬೇಕಾಗಿದೆ. ಹಾಗಾದಲ್ಲಿ ಬಿಸಿಸಿಐಗೆ ಟೂರ್ನಿಯಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 2023ರ ಏಕದಿನ AisaCup ಟೂರ್ನಿಗೆ ಪಾಕಿಸ್ತಾನಕ್ಕೆ ಲಗ್ಗೆ ಇಡಲಿದೆ ಭಾರತ
ಈ ಹಿಂದೆ 2016ರ ವಿಶ್ವಕಪ್‍ಗೂ ಮುನ್ನ ಬಿಸಿಸಿಐ ಇದೇ ಸಮಸ್ಯೆಯನ್ನು ಎದುರಿಸಿತ್ತು. ಈ ವೇಳೆ ಕೂಡ ಸರ್ಕಾರ ತೆರಿಗೆ ವಿನಾಯಿತಿಗೆ ಒಪ್ಪಿರಲಿಲ್ಲ. ಹಾಗಾಗಿ ಬಿಸಿಸಿಐ 193 ಕೋಟಿ ರೂ. ತೆರಿಗೆ ಕಟ್ಟಿತ್ತು.
Live Tv
[brid partner=56869869 player=32851 video=960834 autoplay=true]
ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾಗೆ ಕರ್ನಾಟಕ ಸರಕಾರವು ತೆರಿಗೆ ವಿನಾಯತಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಿನಿಮಾವನ್ನು ವೀಕ್ಷಿಸಿ ಎರಡ್ಮೂರು ದಿನಗಳು ಕಳೆದ ನಂತರ ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಈ ಬೆನ್ನೆಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಮಂಸೋರೆ ಅವರ ಅಸಮಾಧಾನ ಯಾರ ಮೇಲೆ? ಅವರ ಪತ್ರವನ್ನೇ ಓದಿ..
ಕರ್ನಾಟಕದ ಮುಖ್ಯಮಂತ್ರಿಗಳಾದ Chief Minister of Karnataka ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ.
ನನ್ ಹೆಸರು,
ಮಂಸೋರೆ, ಕನ್ನಡ ಸಿನೆಮಾ ನಿರ್ದೇಶಕ.
ತಾವು ಕನ್ನಡ ಸಿನೆಮಾ, ಚಾರ್ಲಿ 777ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ , ಸದರಿ ಸಿನೆಮಾಗೆ 100% ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಗು ತಾವು 100% ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ. ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲಾ ಕನ್ನಡ ಸಿನೆಮಾಗಳಿಗೆ 100% ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ?
ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ? ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಆಗ ಮುಖ್ಯಮಂತ್ರಿಗಳೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಮತೆ ಒಪ್ಪಿಸುತ್ತಾರೆ ಹಾಗು ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ) ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ 100% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್‌ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿದೆಯೇ?
ಈಗ ವಾಪಸ್ಸು ನಿಮ್ಮ ಆಡಳಿತದ ಸರ್ಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ 100% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಗಳಾಗಿ ಕೇಳಿತ್ತಿದ್ದೇನೆ, ದಯವಿಟ್ಟು ತಿಳಿಸಿ.
ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ : ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ, ಅದು ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಚಿಸುತ್ತೇನೆ. ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ. ರಾಜ್ಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಗೆ ಸರ್ಕಾರ 6 ತಿಂಗಳ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದೆ.
ಶ್ವಾನ ಸ್ವಾಸ್ಥ್ಯದ ಕುರಿತು ಜಾಗೃತಿ ಮೂಡಿಸುವ, ಪ್ರಾಣಿ ಹಿಂಸೆಯ ಸೂಕ್ಷ್ಮತೆಯನ್ನು ಎತ್ತಿ ಹಿಡಿದಿರುವ ಹಾಗೂ ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವಿರುವ ಹಿನ್ನೆಲೆ 777 ಚಾರ್ಲಿ ಸಿನಿಮಾಗೆ ಶೇ.100 ರಷ್ಟು ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗಾಗಿ ಒಂದಾದ ಸ್ಯಾಂಡಲ್ ವುಡ್ ಸ್ಟಾರ್ಸ್
ಕನ್ನಡದಲ್ಲಿ ನಿರ್ಮಾಣವಾದ ಸಿನಿಮಾ ಮಳಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಡಬ್ ಆಗಿದ್ದು, ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ವಿಭಿನ್ನ ಸಂದೇಶವಿರುವ ಸಿನಿಮಾವನ್ನು ಎಲ್ಲರೂ ವೀಕ್ಷಿಸಬೇಕೆಂಬ ಕಾರಣಕ್ಕೆ ಇದೀಗ ಸರ್ಕಾರ ಜೂನ್ 19ರಿಂದ ಟಿಕೆಟ್‌ಗೆ ತೆರಿಗೆ ವಿನಾಯಿತಿ ನೀಡಿದೆ. ಈಗಾಗಲೇ ಸಂಗ್ರಹವಾಗಿರುವ ಜಿಎಸ್‌ಟಿ ಪ್ರದರ್ಶಕರಿಗೆ ಮರುಪಾವತಿ ಮಾಡಲು ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಸೈನ್ ಲಾಂಗ್ವೇಜ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ರಿಲೀಸ್
ನಾಳೆ ವಿಶ್ವದಾದ್ಯಂತ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಒಂದು ಕಡೆ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಈ ಸಿನಿಮಾಗೆ ಕೆಲ ಕಡೆ ತೆರಿಗೆ ವಿನಾಯತಿ ಘೋಷಿಸಲಾಗುತ್ತಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು
ನಿನ್ನೆಯಷ್ಟೇ ಗಣ್ಯರಿಗಾಗಿ ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಿದ್ದರು ನಟ ಅಕ್ಷಯ್ ಕುಮಾರ್. ಈ ಪ್ರದರ್ಶನದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತಾ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಿನಿಮಾ ವೀಕ್ಷಿಸಿದ ನಂತರ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್
ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಎಲ್ಲರೂ ನೋಡಬೇಕಿದೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ಯೋಗಿ ಆದಿತ್ಯನಾಥ್. ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿಯೂ ಇವರು ತೆರಿಗೆ ವಿನಾಯತಿ ಘೋಷಿಸಿದ್ದರು. ಆನಂತರ ಅನೇಕ ರಾಜ್ಯಗಳು ದಿ ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯತಿ ಘೋಷಿಸಿದ್ದವು.
ನವದೆಹಲಿ: ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಭಾರೀ ಕಡಿತ ನೀಡಿದ್ದಾರೆ. 5 ಲಕ್ಷದವರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಬದಲಾಗ ತೆರಿಗೆ ಅನ್ವಯ 15ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ ತೆರಿಗೆ ಪಾವತಿದಾರನಿಗೆ 78 ಸಾವಿರ ರೂ. ಉಳಿತಾಯವಾಗಲಿದೆ.
ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
*2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
* 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
* 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
* 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
* 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ
* 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
* ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
* ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
* ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ ‘ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ
* ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.
* ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.
ನವದೆಹಲಿ: ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನಗಳನ್ನು ಬಳಸಿ ಚಾಲನೆಯಾಗುವ ವಾಹನಗಳು ಯಾವುದೇ ಪರ್ಮಿಟ್ ಇಲ್ಲದೇ ರಸ್ತೆಗಿಳಿಯಬಹುದೆಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನ ಬಳಸಿ ಚಲಿಸುವ ವಾಹನಗಳಿಗೆ ಪ್ರೋತ್ಸಾಹ ನೀಡಲು ಎಲೆಕ್ಟ್ರಿಕಲ್ ವಾಹನ ಸೇರಿದಂತೆ, ಎಥೆನಾಲ್, ಬಯೋ ಡೀಸೆಲ್, ಸಿಎನ್‍ಜಿ ಹಾಗೂ ಬಯೋ ಇಂಧನಗಳ ಮೂಲಕ ಸಾಗುವ ವಾಹನಗಳಿಗೆ ರಸ್ತೆ ರಹದಾರಿಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ. ಇಂತಹ ವಾಹನಗಳಿಗೆ ಉಚಿತ ಪರ್ಮಿಟ್ ನೀಡುವ ಮೂಲಕ, ಸುಲಭವಾಗಿ ರಸ್ತೆಗಿಳಿಯುವಂತೆ ಮಾಡಲಾಗಿದೆ ಎಂದರು.
ವಾಹನ ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಮುಂದೆ ಬರುವುದಕ್ಕಾಗಿ ಈ ನಿರ್ಧಾರನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ಮೇಲೆ 12% ಜಿಎಸ್‍ಟಿ ಇದೆ. ಹೀಗಾಗಿ ಮತ್ತೆ ಯಾವುದೇ ಸಬ್ಸಿಡಿ ಅವಶ್ಯಕತೆ ಇರುವುದಿಲ್ಲ ಎಂದು ಯೋಚಿಸಿದ್ದೇನೆ. ಉತ್ತಮ ವಾತಾವರಣವನ್ನು ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ನಮ್ಮ ಇಲಾಖೆಯು ಈ ಬಗ್ಗೆ ವರದಿ ಸಿದ್ದಪಡಿಸಿದ್ದು, ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಜಾಸ್ತಿಯಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!
ಕೇಂದ್ರ ಸರ್ಕಾರವು 2015ರಲ್ಲಿ ಜಾರಿಗೆ ತಂದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಯೋಜನೆಗೆ ಈ ನಿರ್ಧಾರವು ಸಹಾಯಕವಾಗುತ್ತದೆ. ವಾಹನಗಳ ಮೇಲಿನ ಪರ್ಮಿಟ್ ತೆಗೆದು ಹಾಕಿರುವುದರಿಂದ ವಾಹನ ತಯಾರಿಕಾ ಸಂಸ್ಥೆಗಳ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಒತ್ತು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.
मैन आज घोषणा की है की ग्रीन फ्यूल इथेनॉल,मिथेनॉल, बायो सीएनजी और इलेक्ट्रिक से चलने वाली गाड़ियों को परमिट की जरूरत नहीं होगी। मुझे उम्मीद है कि इस निर्णय से परिवहन क्षेत्र में व्यापक परिवर्तन आएगा। pic.twitter.com/4Yv4MN2n7f