Tag: Tavarekere

  • ನಡುರಸ್ತೆಯಲ್ಲೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್

    ನಡುರಸ್ತೆಯಲ್ಲೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್

    -ಹಗ್ಗ, ದೊಣ್ಣೆ, ಕಬ್ಬಿಣದ ಪೈಪ್‌ಗಳಿಂದ ಮಹಿಳೆ ಸೇರಿ ಸಂಬಂಧಿಕರ ಮೇಲೆಯೂ ಹಲ್ಲೆ

    ದಾವಣಗೆರೆ: ಮಹಿಳೆಯೊಬ್ಬರು ಪರಪುರುಷನ ಜೊತೆ ಇದ್ದರು ಎಂಬ ಕಾರಣಕ್ಕಾಗಿ ಕೆಲ ಧರ್ಮಾಂಧರು ನಡುರಸ್ತೆಯಲ್ಲಿಯೇ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ತಾವರೆಕೆರೆಯಲ್ಲಿ (Tavarekere) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತೆ ಸೇರಿ ಫಯಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಮಹ್ಮದ್ ನಯಾಜ್ (32), ಮಹ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ ರಸೂಲ್ ಟಿಆರ್ (42) ಆರೋಪಿಗಳನ್ನು ಬಂಧಿಸಲಾಗಿದೆ.ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರೋಧಿಸಿ ಹಿಂಸಾಚಾರ – ಹಿಂದೂಗಳು ಮನೆಬಿಟ್ಟು ಓಡಿಹೋಗುತ್ತಿದ್ದಾರೆಂದು ಬಿಜೆಪಿ ಆರೋಪ

    ಸಂತ್ರಸ್ತೆ ಸೇರಿ ಆಕೆಯ ಸಂಬಂಧಿಕರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಏ.09 ರಂದು ಸಂತ್ರಸ್ತೆ ತಮ್ಮ ಸಂಬಂಧಿಕರ ಮನೆಗೆ ಫಯಾಜ್ ಎಂಬಾತನನ್ನು ಕರೆತಂದಿದ್ದರು. ಅದೇ ಸಮಯಕ್ಕೆ ಸಂತ್ರಸ್ತೆಯ ಸಂಬAಧಿಕರ ಗಂಡ ಮನೆಗೆ ಬಂದಿದ್ದು, ಸಂತ್ರಸ್ತೆ ಹಾಗೂ ಫಯಾಜ್ ಒಂದೇ ಕೋಣೆಯಲ್ಲಿರುವುದನ್ನು ನೋಡಿದ್ದಾರೆ. ಈ ಕುರಿತು ಮಸೀದಿಯ ಮುಖಂಡರಿಗೆ ದೂರು ನೀಡಿದ್ದಾರೆ. ಬಳಿಕ ತಾವರೆಕೆರೆ ಗ್ರಾಮದ ಮಸೀದಿ ಬಳಿ ಆರು ಜನರು ಸೇರಿ ಹಗ್ಗ, ದೊಣ್ಣೆ, ಕಬ್ಬಿಣದ ಪೈಪ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಜೊತೆಗೆ ಓರ್ವ ವ್ಯಕ್ತಿ ಕಲ್ಲನ್ನು ಎತ್ತಿ ಹಾಕಲು ಎತ್ತಿ ನೋಡಿದ್ದಾನೆ.

    ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ವರದಿ ಬಂದ ನಂತರ ಎಚ್ಚೆತ್ತ ಚನ್ನಗಿರಿ ಪೊಲೀಸರು (Channagiri Police) ಪ್ರಕರಣ ದಾಖಲಿಸಿಕೊಂಡು ಆರು ಹಲ್ಲೆಕೋರರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ ಕೇಸ್‌ – ಪೊಲೀಸರ ಗುಂಡೇಟಿಗೆ ಆರೋಪಿ ಬಲಿ

  • ಟೋಲ್ ವಿಚಾರಕ್ಕೆ ಗಲಾಟೆ – ಯುವಕನ ಕೊಲೆಯಲ್ಲಿ ಅಂತ್ಯ

    ಟೋಲ್ ವಿಚಾರಕ್ಕೆ ಗಲಾಟೆ – ಯುವಕನ ಕೊಲೆಯಲ್ಲಿ ಅಂತ್ಯ

    ರಾಮನಗರ: ಟೋಲ್ (Toll) ವಿಚಾರಕ್ಕೆ ಸಿಬ್ಬಂದಿ ಹಾಗೂ ಯುವಕರ ಮಧ್ಯೆ ಗಲಾಟೆ ನಡೆದು ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಹೆಜ್ಜಾಲ ಸಮೀಪ ನಡೆದಿದೆ.

    ಪವನ್ (30) ಕೊಲೆಯಾದ ಯುವಕ. ಈತ ಬಿಡದಿ (Bidadi) ಬಳಿಯ ಶೇಷಗಿರಿ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಟೋಲ್ ಕಟ್ಟುವ ವಿಚಾರಕ್ಕೆ ಬೆಂಗಳೂರು (Bengaluru) ಮೂಲದ ಯುವಕರು ಗಲಾಟೆ ಮಾಡಿ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಹಾಕಿ ಸ್ಟಿಕ್‌ನಿಂದ ಆತನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಇದು ನಮ್ಮ ಸರ್ಕಾರ, ಹಿಂದೂಗಳು ಏನೂ ಮಾಡಲು ಸಾಧ್ಯವಿಲ್ಲ- ಬರ್ತ್ ಡೇ ಆಚರಿಸಿದ್ದಕ್ಕೆ ಚಾಕು ಇರಿತ

    ಮೃತ ಪವನ್ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ (Tavarekere) ಸಿಕ್ಕೆಪಾಳ್ಯ ನಿವಾಸಿಯಾಗಿದ್ದ. ಹತ್ಯೆಗೂ ಮುನ್ನ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಟೋಲ್ ಹಣ ಕಟ್ಟಲ್ಲ ಎಂದು ಬೆಂಗಳೂರು ಮೂಲದ ಯುವಕರು ಪವನ್ ಜೊತೆ ಗಲಾಟೆ ನಡೆಸಿದ್ದರು. ಗಲಾಟೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ ಪವನ್‌ನನ್ನು ಟೋಲ್‌ನಿಂದ ಫಾಲೋ ಮಾಡಿಕೊಂಡು ಹೋಗಿದ್ದಾರೆ. ಬಳಿಕ ಹೆಜ್ಜಾಲ ಸಮೀಪ ಹಾಕಿ ಸ್ಟಿಕ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಯುವತಿಯ ಶವ ಕೆರೆಯಲ್ಲಿ ಪತ್ತೆ- ಆತ್ಮಹತ್ಯೆ ಶಂಕೆ

    ಘಟನೆ ನಡೆದ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ಹತ್ಯೆ ಮಾಡಿ ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

  • ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ

    ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆ

    ಬೆಂಗಳೂರು: ನಗರದ ವಿಶಾಲ್ ಮಾರ್ಟ್ ಬಳಿ ಇಂದು ಬೆಳಗ್ಗೆ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿ ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಯುವತಿ ನಿತ್ಯಶ್ರೀ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಿರೀಶ್ ತಾವರೆಕೆರೆ ವ್ಯಾಪ್ತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭಿಸಿದೆ. ಮದುವೆ ನಿರಾಕರಿಸಿದ್ದ ಕಾರಣಕ್ಕೆ ಆರೋಪಿ ಗಿರೀಶ್ ಯುವತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಕೂಡಲೇ ಪ್ರಕರಣ ತನಿಖೆ ಮುಂದಾದ ಪೊಲೀಸರಿಗೆ ಆರೋಪಿ ಕೂಡ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಕುರಿತು ಅನುಮಾನ ಮೂಡಿತ್ತು. ಆದ್ದರಿಂದ ಪೊಲೀಸರು ಆರೋಪಿಯ ಪತ್ತೆಗೆ ತ್ವರಿತ ಕಾರ್ಯಾಚರಣೆ ನಡೆಸಿದ್ದರು.

    ತಾವರೆಕರೆ ಬಳಿಯ ತೋಪಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಮೃತ ಯುವಕ ಗಿರೀಶ್ ಎಂದು ಖಚಿತ ಪಡಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ಘಟನೆಯಲ್ಲಿ ಆಕೆ ಸಾವನ್ನಪ್ಪಿರುತ್ತಾಳೆ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು, ಈ ಅನುಮಾನ ಸದ್ಯ ನಿಜವಾಗಿದೆ.

    ಏನಿದು ಘಟನೆ?
    ಗಿರೀಶ್ ಮತ್ತು ನಿತ್ಯಶ್ರೀ ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಪ್ರೀತಿ ಮಾಡುತ್ತಿದ್ದರು. ನಂತರ ಓದು ಮಗಿದ ಮೇಲೆ ನಿತ್ಯಶ್ರೀ ಮಂಡ್ಯದಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ವಾಸವಿದ್ದ ನಿತ್ಯಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಿರೀಶ್ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿದ್ದು, ಕಳೆದ ಕೆಲವು ತಿಂಗಳಿಂದ ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿತ್ತು.

    ಈ ಹಿಂದೆ ಇಬ್ಬರ ಪ್ರೀತಿಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ರಾಜಿ ಮಾಡಿಕೊಂಡು ಸುಮ್ಮನಾಗಿರುವುದಾಗಿ ಇಬ್ಬರು ಹೇಳಿದ್ದರು. ಆದರೆ ಈ ನಡುವೆ ಮತ್ತೆ ಗಿರೀಶ್ ನಿತ್ಯಶ್ರೀಗೆ ಕಾಟಕೊಡುತ್ತಿದ್ದ. ಈ ಕಾರಣದಿಂದಲೇ ನಿತ್ಯಶ್ರೀಗೆ ಆಕೆಯ ಮನೆಯವರು ಮುಂದಿನ ಜೂನ್ ತಿಂಗಳಲ್ಲಿ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದನ್ನು ತಿಳಿದ ಗಿರೀಶ್ ಇಂದು ಯುವತಿ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಕೆಲಸಕ್ಕೆ ರಾಜೀನಾಮೆ ನೀಡಲು ತೆರಳಿದ್ದ ವೇಳೆ ಮಂಡ್ಯದಿಂದ ಬಂದು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ನಿತ್ಯಶ್ರೀ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.